Friday, June 8, 2018

ಸಮಸ್ಯೆಗಳು - ಅವುಗಳ ಸ್ವರೂಪ ಮತ್ತು ಕಾರಣ

                           ನೀವು ಮತ್ತು ನಿಮ್ಮ ಸಮಸ್ಯೆಗಳು

              ಲೇಖಕರು: ಪರಮ ಪೂಜ್ಯ ಡಾ|| ಕೆ. ಶ್ರೀ ಧಮ್ಮಾನಂದರವರು

                                                                                           ಅನುವಾದ : ಅನೀಶ್ ಬೋಧ್


ಅಧ್ಯಾಯ-1

ಸಮಸ್ಯೆಗಳು - ಅವುಗಳ ಸ್ವರೂಪ ಮತ್ತು ಕಾರಣ


1.1 ನಮ್ಮ ಸಮಸ್ಯೆಗಳಿಗೆ ಕಾರಣವೇನು ?

ಈ ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸದೆ ಇರುವಂತಹ ಮಾನವನಿರುವುದು ಅಸಾಧ್ಯವಾಗಿದೆ. ಅಜ್ಞಾನವೇ ನಮ್ಮ ಸಮಸ್ಯೆಗಳಿಗೆ ಕಾರಣವಾಗಿರುವುದರಿಂದ, ನಾವು ಹುಟ್ಟಿನಿಂದ ಹಿಡಿದು ಕೊನೆ ಉಸಿರಿನ ತನಕ ನಾನಾರೀತಿಯ ಕ್ಷೊಭೆಗಳಿಗೆ ಸಿಕ್ಕಿಬಿದ್ದಿದ್ದೇವೆ. ಬುದ್ಧ ಭಗವಾನರು ನಮಗೆ ನೀಡಿರುವ ಬುದ್ಧಿವಾದವೇನೆಂದರೆ ನಾವು ಸಮಸ್ಯೆಗಳಿಂದ ಹೊರಬರಬೇಕಾದರೆ ಮೊದಲು ನಾವು ಅವುಗಳ ಸ್ವರೂಪವನ್ನು ಮತ್ತು ಅವುಗಳ ಮೂಲ ಉದಯವನ್ನು (ಕಾರಣವನ್ನು) ಅರ್ಥ ಮಾಡಿಕೊಳ್ಳಬೇಕು.
ಬುದ್ಧ ಭಗವಾನರು ಮಾನವನ ಜೀವಿತದ (ಅಸ್ತಿತ್ವದ) ಉದ್ದೇಶವನ್ನು ಚಿಂತಿಸಲು ಸಹಾ ಬುದ್ಧಿವಾದವನ್ನು ನುಡಿದಿದ್ದಾರೆ. ಹಾಗು ನಾವೇಕೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತೇವೆ ಎಂಬುದಕ್ಕೆ ಉತ್ತರವನ್ನು ಅನ್ವೇಷಿಸಲು ಪ್ರೋತ್ಸಾಹಿಸುತ್ತಾರೆ. ವಾಸ್ತವವಾಗಿ ಈ ಲೋಕದಲ್ಲಿ ಸಮಸ್ಯೆಗಳಿಲ್ಲ, ಆದರೆ ಸತ್ಯವನ್ನೇ ಮಿಥ್ಯವೆಂದು ಬಗೆದಾಗ ಅಥವಾ ಸ್ವಾಭಾವಿಕ ಆಗು-ಹೋಗುಗಳನ್ನು ಗಂಭೀರವಾಗಿ ಮನಸ್ಸಿಗೆ ತೆಗೆದುಕೊಂಡಾಗ ನಾವು ಪ್ರತಿಯೊಬ್ಬರಲ್ಲೂ ಸಮಸ್ಯೆಗಳನ್ನು ಸೃಷ್ಟಿಸುತ್ತೇವೆ ಮತ್ತು ನಮ್ಮನ್ನು ನೋಯಿಸಿಕೊಳ್ಳುತ್ತೇವೆ. ಇವೆಲ್ಲಾ ಏಕೆಂದರೆ ನಾವು ಇವನ್ನೆಲ್ಲಾ ಸ್ವಾಭಾವಿಕ ಎಂದೂ ಹಾಗು ಸ್ವಾಭಾವಿಕ ಆಗು-ಹೋಗುಗಳು ನಮ್ಮ ಇಷ್ಟದಂತೆ ಸಂಭವಿಸುವುದಿಲ್ಲ ಎಂದು ನಾವೆಂದೂ ಚಿಂತಿಸುವುದೇ ಇಲ್ಲ.
ನಾವು ನಮ್ಮ ಸಮಸ್ಯೆಗಳ ಕಾರಣಗಳನ್ನು ಅರ್ಥಮಾಡಿಕೊಂಡರೆ, ನಾವು ಅನಗತ್ಯ ಭಯಪಡುವಿಕೆಗೆ, ಚಿಂತೆಪಡುವಿಕೆಗೆ ಮತ್ತು ಅಸುರಕ್ಷತೆಯಿಂದ ನರಳುವುದಕ್ಕೆ ಯಾವುದೇ ಕಾರಣವಿರುವುದಿಲ್ಲ (ಸನ್ನಿವೇಶವಿರುವುದಿಲ್ಲ). ಪ್ರತಿಯೊಬ್ಬರು ಸಹಾ ತುಂಬಾ ಸುಖಿಯಾಗಿರಲು ಮತ್ತು ಶಾಂತಿಯಿಂದಿರಲು ಇಷ್ಟಪಡುತ್ತಾರೆ. ಆದರೆ ನಮ್ಮಲ್ಲಿ ಎಷ್ಟು ಜನರು ತಮ್ಮ ಜೀವನದಲ್ಲಿ ನಿಜಕ್ಕೂ ಶಾಂತಿಯ ಅನುಭೂತಿಯನ್ನು ಪಟ್ಟಿದ್ದಾರೆ? ನಾವು ಕೆಲವು ಕ್ಷಣಗಳ ಸುಖವನ್ನು ಪಡೆಯುವುದಕ್ಕಾಗಿ ಪ್ರತಿ ಸಾಧ್ಯತೆಯ ರೀತಿಯಲ್ಲಿ ಏನನ್ನಾದರೂ ಮಾಡಲು ಇಚ್ಛಿಸುವೆವು. ಆದರೆ ಹೇಗಾದರೂ ಗಳಿಸಿದ, ಯಾವುದೇ ಸುಖವಾಗಲಿ ಅದು ಕ್ಷಣಿಕವಾಗಿಬಿಡುತ್ತದೆ. ಅದು ಎಂದಿಗೂ ಶಾಶ್ವತವಾಗಿ ತೃಪ್ತಿಯುತ ಅಧಿಕಕಾಲ ಉಳಿಯುವುದಿಲ್ಲ.
ಆದರೆ ಈ ಜೀವಿತದಲ್ಲೇ ಶಾಶ್ವತ ಸುಖವು ಸಾಧ್ಯ. ಆದರೆ ಅದು ಸಾಧ್ಯವಾಗುವುದು ಅದನ್ನು ಹೇಗೆ ಪ್ರಾಪ್ತಿಮಾಡಬೇಕು ಎಂಬ ರಹಸ್ಯವನ್ನು ಅರ್ಥಮಾಡಿಕೊಂಡಾಗ ಮಾತ್ರ. ಏಕೆಂದರೆ ನಾವೆಂದೂ ದುಃಖದ ಸ್ವರೂಪವನ್ನಾಗಲಿ ಮತ್ತು ದುಃಖದ ಕಾರಣಗಳನ್ನಾಗಲಿ ಅರ್ಥವೇ ಮಾಡಿಕೊಂಡಿಲ್ಲ. ನಾವು ಈಗಿರುವ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿರುವಂತೆ ಹೊಸ ಸಮಸ್ಯೆಗಳನ್ನು ಸೃಷ್ಠಿಸುವೆವು. ಹೇಗೆಂದರೆ ಸಿಂಹವೊಂದು ಬಲೆಯಲ್ಲಿ ಸಿಕ್ಕಿಕೊಂಡಾಗ, ಅದನ್ನು ಬಿಡಿಸಿಕೊಳ್ಳಲು ಕಠಿಣವಾಗಿ ಹೋರಾಟ ಮಾಡಿದಷ್ಟು ಅದು ಮತ್ತಷ್ಟು ಬಿಗಿಯಾಗಿ ಬಂಧಿಯಾಗುವಂತೆ ಆಗುವುದು.
ಒಂದುವೇಳೆ ಹೊಸ ಸಮಸ್ಯೆ ಚಿಕ್ಕದಾಗಿದ್ದರೆ, ನಾವು ಅದನ್ನು ಸಾಮಥ್ರ್ಯವಿದ್ದಷ್ಟು ಸಹಿಸಿಕೊಳ್ಳುತ್ತೇವೆ ಮತ್ತು ದುಃಖ ಶಮನಕ್ಕೆ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡುತ್ತೇವೆ. ಉದಾಹರಣೆಗೆ ನಮಗೆ ಗ್ಯಾಸ್ಟ್ರಿಕ್ ಅಲ್ಸರ್ ಆದಾಗ ಅಪಾರ ನೋವು ಪಡುತ್ತೇವೆ, ಡಾಕ್ಟರನ್ನು ಭೇಟಿಯಾಗುತ್ತೇವೆ. ಡಾಕ್ಟರ್ ಆಪರೇಷನ್ ಮಾಡಲೇಬೇಕು ಎಂದು ಹೇಳಿದರೆ ನಾವು ವಾಸ್ತವವನ್ನು ಸ್ವೀಕರಿಸುತ್ತೇವೆ. ಹಾಗಾದಾಗ ನಾವು ಇನ್ನೂ ಹೆಚ್ಚಿನ ನೋವು ಆಗುವುದು ಎಂದು ಗೊತ್ತಿದ್ದೂ ವಾಸ್ತವ ಸ್ವೀಕರಿಸುತ್ತೇವೆ. ಆದರೆ ಹಾಗಾಗಲು ಕಾರಣವೇನೆಂದರೆ ಬೇರೆ ಪರಿಹಾರ ಮಾರ್ಗವಿಲ್ಲದಿರುವಾಗ ಇದನ್ನೇ ಸ್ವೀಕರಿಸುತ್ತೇವೆ. ಆಗ ನಾವು ಇರುವ ಸಮಸ್ಯೆಯಿಂದ ಪಾರಾಗುವುದಕ್ಕಾಗಿ ಹೊಸ ಸಮಸ್ಯೆಯಾದ ಆಪರೇಷನ್ಗೆ ನಿರ್ಧರಿಸುತ್ತೇವೆ.
ಆಗ ನಾವು ಕೊನೆಗೂ ನೋವಿನಿಂದ ಮುಕ್ತರಾಗುವೆವು ಎಂದು ಅರಿವಾಗಿ ನೋವನ್ನು ಸಹಿಸಲು, ಅಸುಖವನ್ನು ಸಹಿಸಲು ನಿರ್ಧರಿಸುವೆವು. ಇದೇರೀತಿಯಾಗಿ ನಾವು ಈಗಿರುವ ಬೃಹತ್ ಸಮಸ್ಯೆಗಳಿಂದ ಪಾರಾಗಲು ಕೆಲವು ಸಮಸ್ಯೆಗಳನ್ನು ಅಥವಾ ನೋವುಗಳನ್ನು ಸಹಿಸುವೆವು. ಆದ್ದರಿಂದಲೇ ನಾವು ಕೆಲವೊಮ್ಮೆ ನಗುಮೊಗದಿಂದ ನೋವನ್ನು ಎದುರಿಸುವೆವು.
ನಾವು ಇನ್ನೊಂದು ಸಮಸ್ಯೆಯನ್ನು ಎದುರಿಸದೆಯೇ ಅಥವಾ ಏನನ್ನಾದರೂ ಭೌತಿಕವಾಗಿ ಅಥವಾ ಮಾನಸಿಕವಾಗಿ ತ್ಯಾಗ ಮಾಡದೆಯೇ ಇರುವಂತಹ ಸಮಸ್ಯೆಯನ್ನು ದಾಟಲಾರೆವು. ನಾವು ಹಠಮಾರಿಯಾಗಿ ಇದ್ದು ನಮ್ಮ ಸಮಸ್ಯೆಗಳನ್ನು ಪರಿಹರಿಸುವುದು ಅಸಾಧ್ಯದ ಮಾತಾಗಿದೆ. ಆದ್ದರಿಂದಲೇ ನಾವು ಸಮಸ್ಯೆಗಳೊಂದಿಗೆ ಸಂಧಾನವನ್ನು ಹುಡುಕುವೆವು ಮತ್ತು ತೆಗೆದುಕೊ ಮತ್ತು ನೀಡು ಎಂಬ ನೀತಿಗೆ ಮೊರೆಹೋಗಿ ನಮ್ಮ ಸಮಸ್ಯೆಗಳನ್ನು ಪರಿಹರಿಸುವೆವು. ತಾಳ್ಮೆ, ಕ್ಷಮೆ ಮತ್ತು ಸಹನೆಗಳು ನಮ್ಮ ಹಲವಾರು ಸಮಸ್ಯೆಗಳನ್ನು ತಡೆಯುತ್ತವೆ. ನಾವೇನಾದರೂ ನಮ್ಮ ಸ್ವಾರ್ಥಯುತ ಅಹಂಕಾರವನ್ನು ತಗ್ಗಿಸುತ್ತ ಹೋದರೆ ಬಹಳಷ್ಟು ಘರ್ಷಣೆಗಳು, ತಿಕ್ಕಾಟಗಳು ಶತೃತ್ವ ಮತ್ತು ಹಿಂಸೆಗಳನ್ನು ತಡೆಯಬಹುದು.
ಬುದ್ಧ ಭಗವಾನರು ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಬಹಳ ಅರ್ಥಪೂರ್ಣವಾದ ಮತ್ತು ಪ್ರಯೋಗಾತ್ಮಕ ವಿಧಾನವನ್ನು ಪರಿಚಯಿಸಿದ್ದಾರೆ. ಅವರು ಸಮಸ್ಯೆಗಳಿಗೆ ಅಲ್ಲಲ್ಲೇ ತೇಪೆ ಹಾಕುವಂತಹ ವಿಧಾನಕ್ಕೆ ಶಿಫಾರಸ್ಸು ಮಾಡಲಿಲ್ಲ. ಕಾಲದ ಮಿತಿಯಲ್ಲಿರುವ ಜೀವಿಯ ಟೊಳ್ಳು ಸುಖಕ್ಕಾಗಿ ಶಿಫಾರಸ್ಸು ಮಾಡಲಿಲ್ಲ. ಬದಲಾಗಿ ಅವರು ಸಮಸ್ಯೆಗಳ ಮೂಲ ಕಾರಣಗಳನ್ನು ಬೇಧಿಸಿಕೊಂಡು ಅರಿಯುವ ಮಾರ್ಗವನ್ನು ಬೋಧಿಸಿದ್ದಾರೆ ಮತ್ತು ಪ್ರಧಾನ ಕಾರಣಗಳನ್ನು ಅನ್ವೇಷಿಸಲು ಬೋಧಿಸಿದ್ದಾರೆ.
ಅವರ ವಿಧಾನವು ಸಮಸ್ಯೆಗಳ ಲಕ್ಷಣಗಳನ್ನು ಕ್ಷೀಣಿಸುವಂತೆ ಮಾಡುವಂತಹ ದ್ದಾಗಿರಲಿಲ್ಲ. ಬದಲಾಗಿ ಸಮಸ್ಯೆಗಳನ್ನೇ ಇಲ್ಲದಂತೆ ಮಾಡುವದಾಗಿತ್ತು. ಹೇಗೆಂದರೆ ಕೆಲವು ವೈದ್ಯರು ರೋಗದ ಲಕ್ಷಣಗಳನ್ನು ಇಲ್ಲದಂತೆ ಮಾಡುತ್ತಾರೆ, ಹೊರತು ರೋಗವನ್ನಲ್ಲ. ನಮಗೆ ಗಂಭೀರವಾದ ತಲೆನೋವು ಬಂದಾಗ ನಾವು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತೇವೆ. ನಂತರ ನಮಗೆ ನೋವು ನಿವಾರಣೆಯಾದಂತೆ ಭಾಸವಾಗುವುದು, ಸ್ವಲ್ಪಕಾಲ ನೋವು ಇರುವುದಿಲ್ಲ. ಆದರೆ ಇದು ಪೂರ್ಣ ನಿವಾರಣೆಯಲ್ಲ. ಏಕೆಂದರೆ ನೋವು ಪುನಃ ಮರುಕಳಿಸುವುದು. ಅಂತಹ ಔಷಧಿಯು ತಾತ್ಕಾಲಿಕ ಶಮನ ನೀಡುತ್ತದೆಯೇ ಹೊರತು ನೋವಿನ ಮೂಲ ಕಾರಣವಾದುದನ್ನು ತೆಗೆದುಹಾಕುವುದಿಲ್ಲ.
ಊಹಿಸಿರಿ ! ನಮ್ಮ ಶರೀರದಲ್ಲಿ ನೋವುಯುಕ್ತ ಗಾಯಗಳಿವೆ, ಹಲವಾರು ರೀತಿಯ ಔಷಧದ ಸೇವನೆಯ ನಂತರ ನಾವು ಅದರ ನಿವಾರಣೆ ಮಾಡುವೆವು. ನಂತರ ಯಾರಾದರೂ ಈಗ ಹೇಗಿದೆ ಎಂದು ಕೇಳಿದಾಗ, ನಾವು ತುಂಬಾ ಉತ್ತಮವಾಗಿ ಚೆನ್ನಾಗಿರುವೆವು ಎಂದು ಹೇಳುವೆವು. ಆದರೆ ಉತ್ತಮವೆನ್ನುವುದು ಸಾಪೇಕ್ಷ ಕಾಲಾವಧಿಯ ಪದವಾಗಿದೆ. ಇಲ್ಲಿ ಇದರ ಅರ್ಥವೇನೆಂದರೆ ಈಗ ಮಾತ್ರ ಜೀವಿಗೆ ಹೆಚ್ಚಿನ ನೋವಿಲ್ಲ. ಅಂದರೆ ನಾವು ಪರರಿಗೆ ಹೇಳುವಂತಹ ಉತ್ತಮವಾಗಿದ್ದೇವೆ ಅಥವಾ ಚೆನ್ನಾಗಿದ್ದೇವೆ ಅಥವಾ ಕ್ಷೇಮವಾಗಿದ್ದೇವೆ ಎನ್ನುವುದು ಆ ಕ್ಷಣದಲ್ಲಿ ಸಮಸ್ಯೆಯಿಲ್ಲ ಎಂದರ್ಥವಷ್ಟೇ. ಅದರಿಂದಲೇ ಯಾರಾದರೂ ಹೇಗಿದ್ದೀರಿ? ಎಂದು ಕೇಳಿದಾಗ ಓ ನಾನು ಚೆನ್ನಾಗಿರುವೆನು, ಕುಶಲವಾಗಿರುವೆನು ಎಂದು ಹೇಳುವೆವು. ಆದರೂ ಸಹಾ ಹಾಗೆ ಹೇಳುವಾಗ ನಾವು ಪರಮಾರ್ಥದ ಪೂರ್ಣ ಅರ್ಥದಲ್ಲಿ ಹೇಳುತ್ತಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ನಮಗೆ ಎಲ್ಲರಿಗೂ ಉತ್ತಮವಾಗಿ ತಿಳಿದಿರುವಂತಹ ವಿಷಯವೇನೆಂದರೆ, ಯಾವುದೇ ಕ್ಷಣದಲ್ಲಿ ಅದೇರೀತಿಯ ಅಥವಾ ಪೂರ್ಣವಾಗಿ ಹೊಸ ವಿಧವಾದ ಸಮಸ್ಯೆಗಳಿಗೆ ಅಥವಾ ನೋವುಗಳಿಗೆ ಮತ್ತೆ ಗುರಿಯಾಗುವೆವು. ನಮ್ಮ ಭೌತಿಕ ಶರೀರವೇ ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸುವುದು. ಆದ್ದರಿಂದಲೇ ನಾವು ಜೀವನವಿಡೀ ನಮ್ಮ ಪ್ರಮುಖ ಕರ್ತವ್ಯಗಳನ್ನು ಅಲಕ್ಷಿಸಿ, ಅವುಗಳ ಶುಶ್ರೂಷೆ ಮಾಡುವೆವು. ಆದರೆ ನಾವು ಸೇವೆ ಮಾಡಿದಷ್ಟೂ ಹಲವು ಹೊಸ ಸಮಸ್ಯೆಗಳು ಹುಟ್ಟಿ ಕ್ಷೊಭೆಗೊಳಿಸುವುದು. ಆದ್ದರಿಂದ ಇದು ಅಂತ್ಯವಿಲ್ಲದ ಯುದ್ಧವಾಗಿದೆ.
ಬುದ್ಧ ಭಗವಾನರ ಮಾರ್ಗ ವಿಧಾನವು ತಾತ್ಕಲಿಕ ಶಮನಗೈಯುವ ನೋವು ನಿವಾರಕವಲ್ಲ. ಬದಲಾಗಿ ನಮ್ಮ ಸಮಸ್ಯೆಗಳ ಪ್ರಧಾನ ಕಾರಣಗಳನ್ನು ಬುಡಸಮೆತ ಕಿತ್ತುಹಾಕುವಂತಹದ್ದಾಗಿದೆ. ಆದ್ದರಿಂದಲೇ ಹಲವಾರು ಜನರು ಬುದ್ಧರ ಬೋಧನೆಯನ್ನು ಪಾಲಿಸಲು ಕಷ್ಟಕರ ಎನ್ನುತ್ತಾರೆ.
ಒಮ್ಮೆ ಬುದ್ಧ ಭಗವಾನರು ಘೋಷಿಸಿದ್ದೇನೆಂದರೆ ನಮ್ಮೆಲ್ಲಾ ದುಃಖಗಳ ಕಾರಣವು, ಪ್ರಾಪಂಚಿಕ ಸಮಸ್ಯೆಗಳೊಡನೆ ಸಿಕ್ಕಿಕೊಂಡಿರುವ ಗೋಜಿನೊಂದಿಗೆ ಸಿಲುಕಿದೆ. ಆದ್ದರಿಂದ ಜೀವನದ ಸ್ವರೂಪವನ್ನು ಅರ್ಥಮಾಡಿಕೊಂಡಿರುವವನು ಶೀಲವನ್ನು ವೃದ್ಧಿಸುತ್ತಾನೆ. ಅಂದರೆ ನೈತಿಕತೆಯ ವರ್ತನೆ ಅಥವಾ ಸ್ವಶಿಸ್ತು ಶೀಲದ ಅರ್ಥವೇನೆಂದರೆ ಇಂದ್ರೀಯಗಳ ನೀತಿಯುತ ಶಿಸ್ತು ಆಗಿದೆ. ಒಬ್ಬ ಪ್ರಾಜ್ಞ ಪ್ರಯತ್ನಶಾಲಿಯು ಹೇಗೆ ಸಮಸ್ಯೆಯ ಮೂಲಕ್ಕೆ ಹೋಗುವುದೆಂದು ತಿಳಿದಿರುತ್ತಾನೆ ಮತ್ತು ಕೆಲವೊಂದನ್ನು ಜಯಿಸಿರುತ್ತಾನೆ.
ಇಲ್ಲಿ ನಮಗೆ ಬುದ್ಧ ಭಗವಾನರ ಬುದ್ಧಿವಾದವೇನೆಂದರೆ ನಾವು ನಮ್ಮ ಸಮಸ್ಯೆಗಳಿಂದ ಮುಕ್ತರಾಗಬೇಕೆಂದರೆ ಒಳ್ಳೆಯವರಾಗುವುದು, ಯತ್ನಶೀಲರಾಗುವುದು ಮತ್ತು ಪ್ರಾಜ್ಞಯುತರಾಗಿ ವತರ್ಿಸುವುದು ನಮ್ಮ ಸಮಸ್ಯೆಗಳಿಗೆ ಅಂತಿಮ ಪರಿಹಾರ ಪಡೆಯಲು ಬೇರ್ಯಾವ ಮಾರ್ಗವೂ ಇಲ್ಲವಾಗಿದೆ. ಸಾಮಾನ್ಯವಾಗಿ ನಮಗೆ ಸಮಸ್ಯೆ ಉಂಟಾದಾಗ ನಾವು ಪರರಲ್ಲಿಗೆ ಹೋಗಿ ಸಲಹೆಗಳಿಗಾಗಿ ಹುಡುಕುವೆವು. ಆಗ ಅವರು ಹೇಳುವುದೇನೆಂದರೆ ದೇವಾಲಯಗಳಿಗೆ ಹೋಗಿ ಎಂದು ಹಲವು ದೇವರನ್ನು ಪ್ರಾಥರ್ಿಸಿ ಅಥವಾ ಪೂಜ್ಯನಿಯ ಸ್ಥಳಗಳಿಗೆ ಹೋಗಿ. ಆದರೆ ಬುದ್ಧ ಭಗವಾನರ ಮಾರ್ಗವು ಇದಲ್ಲ. ಅವರ ಬುದ್ಧಿವಾದವು ಸಮಸ್ಯೆ ಹೇಗೆ ಉದಯಿಸಿತು, ಎಲ್ಲಿ ಉದಯಿಸಿತು ಎಂದು ಹುಡುಕುತ್ತ, ವಿಶ್ಲೇಷಿಸುತ್ತ ಸಮಸ್ಯೆಗಳ ಪರಿಹಾರಕ್ಕೆ ನೇರವಾಗಿ ಪ್ರವೇಶಿಸುವುದಾಗಿದೆ. ನಾವು ಸಾಮಾನ್ಯವಾಗಿ ನಮ್ಮ ಸಮಸ್ಯೆಗಳಿಗೆ ಪರರನ್ನೇ ಹೊಣೆ ಮಾಡಿ ದೂಷಿಸುವೆವು. ಇದೇ ನಮಗೆ ಅಭ್ಯಾಸವಾಗಿಬಿಟ್ಟಿದೆ. ನಾವು ಪ್ರಮಾಣಿಕರಾಗಿದ್ದರೆ, ಪರರನ್ನು ದೂಷಿಸದೆ, ನಮ್ಮಿಂದಲೇ ಸಮಸ್ಯೆಗಳ ಮೂಲವನ್ನು ಹುಡುಕುವೆವು. ಪರರಿಗೆ ಒಂದು ಬೆರಳು ತೋರಿಸಿದಾಗ ಉಳಿದ ಮೂರು ಬೆರಳುಗಳು ನಮ್ಮತ್ತಲೇ ಸೂಚಿಸುವ ನುಡಿಗಟ್ಟನ್ನು ನೆನಪಿಸಿಕೊಳ್ಳಿ. ಪ್ರತಿ ಒಳ್ಳೆಯ ಕ್ರಿಯೆಯಲ್ಲೂ ಕೆಟ್ಟ ಪರಿಣಾಮವು ಉಂಟು. ಅದೇರೀತಿ ಪ್ರತಿ ಕೆಟ್ಟ ಕ್ರಿಯೆಯಲ್ಲೂ ಒಳ್ಳೆಯ ಪರಿಣಾಮವು ಇದೆ. ನೆನಪಿಡಿ: ಮೋಡವಿಲ್ಲದೆ ಮತ್ತು ಬಿರುಗಾಳಿಯಿಲ್ಲದೆ ಕಾಮನಬಿಲ್ಲು ರಚಿತವಾಗದು.
ಆದರೆ ಸಮಸ್ಯೆಯಿರುವುದು ಎಲ್ಲೆಂದರೆ ನಾವು ಯಾವುದೇ ಸಮಸ್ಯೆಯನ್ನು ಎದುರಿಸಿದಾಗ, ಆ ಸಮಸ್ಯೆಯ ನಿಜವಾದ ದುಃಖಕ್ಕಿಂತ ಹೆಚ್ಚಿನ ದುಃಖವನ್ನು ನಾವು ನಮ್ಮ ಕಲ್ಪಿತ ಶತ್ರು, ಸಂಶಯ ಮತ್ತು ಆಧಾರಹೀನ ಕಲ್ಪನೆಗಳಿಂದ ಪಡೆಯುತ್ತೇವೆ. ನಮ್ಮ ಸಮಸ್ಯೆಗಳಿಂದ ಪಾರಾಗಲು ನಾವು ಪರರ ಬುದ್ಧಿವಾದಕ್ಕೆ ಹುಡುಕಾಡುವೆವು. ಆದರೆ ಅವರ ಬುದ್ಧಿವಾದವು ಸಮಸ್ಯೆಯ ಬಗ್ಗೆ ಅವರ ಮೂಢನಂಬಿಕೆ ಅಥವಾ ಕಲ್ಪನೆ ಅಥವಾ ಮಿಥ್ಯಾದೃಷ್ಟಿಗಳಿಂದ ಕೂಡಿರುತ್ತದೆ ಎಂಬುದನ್ನು ಯೋಚಿಸಿಯೇ ಇರುವುದಿಲ್ಲ. ಇದು ಯಥೋಚಿತ ಸತ್ಯವಾಗಿದೆ. ನೀವೇ ಗಮನಿಸಿ, ಜನರು ಜ್ಯೋತಿಷಿಗಳ ಬಗ್ಗೆ ಮತ್ತು ಭವಿಷ್ಯ ನುಡಿಯುವವರ ಬಗ್ಗೆ ತಮ್ಮ ಸಮಸ್ಯೆ ಪರಿಹರಿಸಲು ಹೋಗಿ, ಅವರ ಮೌಢ್ಯವನ್ನು ತಮ್ಮಲ್ಲಿ ತುಂಬಿಸಿಕೊಂಡು ಬರುವುದಿಲ್ಲವೇ?
ಉದಾಹರಣೆಗೆ, ಕೆಲವು ವ್ಯಾಪಾರಿಗಳು ತಮ್ಮ ಉದ್ಯಮದಲ್ಲಿ ಉಂಟಾದಾಗ ದುರಾದೃಷ್ಟ ಎಂದು ಬಗೆದು, ಪುನಃ ಲಾಭ ಮತ್ತು ಅದೃಷ್ಟ ಪಡೆಯಲು, ಅವರು ವಿಭಿನ್ನರೀತಿಯ ಶಾಂತಿ ಮಾಡಿಸುವಿಕೆ, ಯಂತ್ರ ಕಟ್ಟುವಿಕೆ, ಮಂತ್ರ ಪ್ರಯೋಗ ಮಾಡುವಿಕೆ, ತಂತ್ರ ಕ್ರಿಯೆಗಳನ್ನು ನಡೆಸುವಿಕೆ ಮೊದಲಾದ ಕಾರ್ಯಗಳನ್ನು ಮಾಡಲು ಹೋಗುತ್ತಾರೆ. ಆದರೆ ಬುದ್ಧರು ನಮಗೆ ಬುದ್ಧಿವಾದ ನುಡಿದಿರುವುದು ನಮ್ಮ ಸಮಸ್ಯೆಗಳನ್ನು ವಿಚಾರಶೀಲತೆಯ ಮಾರ್ಗದಿಂದ ಸರಿಪಡಿಸುವುದು ಹಾಗೂ ಸಮಯ ವ್ಯರ್ಥಮಾಡದೆ, ಪೂರ್ಣ ಶ್ರಮ ಮತ್ತು ಜ್ಞಾನದ ಬಳಕೆ ಮಾಡುವುದೇ ಹೊರತು ಮೌಢ್ಯಕ್ಕೆ ಅವಲಂಬಿತವಾಗಿ, ಅರ್ಥಹೀನ ಪದ್ಧತಿಗಳ ಆಚರಣೆಯಲ್ಲಿ ಹಣ ಮತ್ತು ಸಮಯ ವ್ಯರ್ಥ ಮಾಡುವುದಲ್ಲ.
ಯಾರಾದರೂ ತಮಗೆ ಪವಾಡಶಕ್ತಿಯಿದೆ, ಅತೀಂದ್ರಿಯ ಶಕ್ತಿಯಿದೆ, ರೋಗ ಗುಣಪಡಿಸುವ ಸ್ಪರ್ಶಶಕ್ತಿ ಇದೆ ಎಂದು ಹೇಳಿಕೊಂಡಾಗ, ಬಹಳಷ್ಟು ಜನರು ಸ್ವಯಿಚ್ಛೆಯಿಂದ ಅವರಲ್ಲಿಗೆ ಧಾವಿಸುತ್ತಾರೆ. ಅವರಿಗೆ ಅಪಾರ ಹಣ ನೀಡಿ, ಅದೃಷ್ಟ ಮತ್ತು ಯಶಸ್ಸು ಪಡೆದೆವು ಎಂದು ಭಾವಿಸಿ ಹಿಂತಿರುಗುತ್ತಾರೆ. ಆದರೆ ನಂತರ ತಾವು ಮೋಸ ಹೋದೆವು ಎಂದು ತಿಳಿದು ಪಶ್ಚಾತ್ತಾಪಪಡುತ್ತಾರೆ. ಅದೃಷ್ಟ ಪಡೆಯುವುದು ಸುಲಭವಲ್ಲ ಮತ್ತು ತಾವು ಬಯಸಿದ್ದು ಪಡೆಯಲಿಲ್ಲ, ಬದಲಾಗಿ ಇರುವುದನ್ನು ಕಳೆದುಕೊಂಡು ತಮ್ಮಿಂದಾಗಿಯೇ ಹೆಚ್ಚಿನ ಸಮಸ್ಯೆಗಳನ್ನು ತಂದುಕೊಳ್ಳುವರು. ನಾವು ನಮ್ಮ ಹಲವಾರು ಸಮಸ್ಯೆಗಳಿಗೆ ಕಾರಣಗಳನ್ನೇ ಅರಿತಿಲ್ಲ. ಏಕೆಂದರೆ ನಾವು ಯೋಚಿಸುವ ವಿಧಾನವು ಅಭಿವೃದ್ಧಿಯಾಗದೆ, ಕಲ್ಪನೆ ಮತ್ತು ಭ್ರಮೆಯಿಂದ ಕೂಡಿರುತ್ತದೆ. ಅದಕ್ಕೆ ಅಜ್ಞಾನ ಕಾರಣವಾಗಿದೆ.
ಯೋಗ್ಯ ತಿಳುವಳಿಕೆಯಿಂದ ಲಭಿಸುವ ಜೀವನ ವಿಧಾನವನ್ನು ವೃದ್ಧಿಸಲು ನಾವು ಪ್ರಯತ್ನಿಸುತ್ತಲೇ ಇಲ್ಲ. ಹಲವಾರು ರೀತಿಗಳಲ್ಲಿ ಧಮ್ಮವು ನಮಗೆ ಯೋಗ್ಯ ಅರಿವನ್ನು ವೃದ್ಧಿಸಲು ಸಹಾಯ ಮಾಡಬಲ್ಲದು. ಏಕೆಂದರೆ ಧಮ್ಮವು ಮಾನವ ಸ್ವಭಾವ ಸ್ವರೂಪವನ್ನು ಮತ್ತು ಸಮಸ್ಯೆಗಳನ್ನು ನಿರ್ವಹಿಸುವುದು ಹೇಗೆಂದು ವಿವರಿಸುತ್ತದೆ. ಹಾಗಿದ್ದರೂ ಹಲವಾರು ಜನರು ಯೋಚಿಸುವುದು ಏನೆಂದರೆ ಧಮ್ಮವು ಕೇವಲ ಪ್ರಾಥರ್ಿಸಲು ಮತ್ತು ಕೆಲವೊಂದು ವಿಧಿ ಆಚರಣೆಗಳನ್ನು ಪಾಲಿಸಲು ಮಾತ್ರ. ಎಂದು. ನಾವು ಅಂತಹ ಕಿರಿದಾದ ದೃಷ್ಟಿಕೋನವನ್ನು ಹೊಂದಿರುವಾಗ, ಹೇಗೆ ತಾನೆ ನಾವು ಸತ್ಯಗಳನ್ನು ಯಥಾಭೂತವಾವಾಗಿ ಅರಿತು, ನಮ್ಮ ಜ್ಞಾನವನ್ನು ಶ್ರೀಮಂತಗೊಳಿಸುವೆವು? ನಾವು ಧಮ್ಮವನ್ನು ಸುಖ ಪ್ರಾಪ್ತಿಗೆ ಸಹಾಯ ಮಾಡುವಷ್ಟು ಮೌಲ್ಯಯುತವಾದುದು ಎಂದು ಗುರುತಿಸಿಯೇ ಇಲ್ಲ. ಇಂದು ನಾವು ನಮ್ಮ ಪ್ರಾಪಂಚಿಕ ಜೀವನವನ್ನು ಹೇಗೆ ವ್ಯವಸ್ಥಿತಗೊಳಿಸಿದ್ದೇವೆ ಎಂದರೆ ನಮ್ಮ ಶಾಂತಿಗೆ ಮತ್ತು ಸುಖಕ್ಕೆ ಮನಸ್ಸನ್ನು ಸುಶಿಕ್ಷಣಗೊಳಿಸಲು ನಮ್ಮಲ್ಲಿ ಸಮಯವೇ ಇಲ್ಲವಾಗಿದೆ.
ಇದರ ಫಲಿತಾಂಶ ನಮ್ಮಲ್ಲಿ ಅಹಿತಕ್ಕಿಂತ ಹೆಚ್ಚಾಗಿಯೇ ಭೌತಿಕ ಅಗತ್ಯತೆಗಳು ಇವೆ. ಆದರೂ ನಾವು ಎಂದಿಗೂ ತೃಪ್ತರಾಗುವುದಿಲ್ಲ. ಅಗತ್ಯಕ್ಕಿಂತ ನಾವು ಹೆಚ್ಚು ಹಣವನ್ನು ಮಾಡುವುದು ಹೇಗೆ ಎಂದು ಚಿಂತಿಸುತ್ತೇವೆ. ಪರರ ಜೀವನಗಳ ಬೆಲೆ ತೆತ್ತಾದರೂ ಇಂದ್ರೀಯ ಸುಖವನ್ನು ಪಡೆಯುವುದು ಹೇಗೆ ಎಂದು ಯೋಚಿಸುತ್ತೇವೆ.  ಅಂತಹ ಸುಖಗಳು ಕ್ಷಣಿಕವಾಗಿರುತ್ತದೆ. ನಾವು ಬಯಸಿದ್ದನ್ನು ಪಡೆದ ಕೂಡಲೇ ನಾವು ಅದರಲ್ಲಿ ಆಸಕ್ತಿ ಕಳೆದುಕೊಳ್ಳುವೆವು. ಇದರಲ್ಲಿ ನಾವು ಅರಿಯಬಹುದಾದ ಫಲಿತಾಂಶವೇನೆಂದರೆ ನಾವು ನಿರಂತರ ಹಂಬಲಿಸುತಿರುವುದು ಅಂತಹುದೇ ವಿಷಯಗಳನ್ನೇ. ಮತ್ತೆ ನಾವು ಸದಾ ಅತೃಪ್ತರಾಗಿಯೇ ಉಳಿಯುವೆವು.  ನಾವು ಕೆಲವು ಸಮಸ್ಯೆಗಳನ್ನು ಅನುಭವಿಸುವಾಗ,  ಗೊಣಗುಟ್ಟುವೆವು, ಕೋಪ ತೋರಿಸುವೆವು ಮತ್ತು ಹೆಚ್ಚಿನ ತೊಂದರೆಗಳನ್ನು ಸೃಷ್ಟಿಸುವೆವು ಮತ್ತು ಪರರೇ ನಮ್ಮ ಸಮಸ್ಯೆಗಳ ಕಾರಣಕರ್ತರೆಂದು ದೂಷಿಸುವೆವು.
ಇಂದು ನಾವು ಯೋಚಿಸುವುದೇನೆಂದರೆ ಅಭಿವೃದ್ಧಿಹೊಂದಿದ ರಾಷ್ಟ್ರಗಳು ಸುಖವಾಗಿವೆ ಎಂದು. ಅದಕ್ಕೆ ನಾವು ನೀಡುವ ಕಾರಣವೇನೆಂದರೆ ಅವರು ಹೇರಳವಾದ ಭೌತಿಕ ಸಂಪತ್ತನ್ನು ಹೊಂದಿದ್ದಾರೆ ಎಂದು. ಆದರೆ ವಾಸ್ತವವೇನೆಂದರೆ ಅವರು ಹಲವಾರು ವಿಧದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗಿಂತ ಅಸುಖಿಗಳಾಗಿದ್ದಾರೆ ಮತ್ತು ವಿಶೇಷತಃವಾಗಿ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ ಯೋಗ್ಯವಾದ ಶೀಲಾಭಿವೃದ್ಧಿಯಿಲ್ಲದೆ, ಇಂದ್ರಿಯ ಸುಖಗಳ ದಾಸರಾಗಿರುವುದು ಮತ್ತು ಭೌತಿಕ ಸುಖಗಳ ಗುಲಾಮರಾಗಿರುವುದು. ಒತ್ತಡ, ಭಯ, ಆತಂಕ ಮತ್ತು ಅಭದ್ರತೆಯು ಅವರ ಮನಸ್ಸುಗಳಿಗೆ ಕ್ಷೊಭೆ ತರುತ್ತಿದೆ. ಈ ರೀತಿಯ ಮಾನಸಿಕ ಕ್ಷೊಭೆಯು ಮಾನವನ ಜೀವನ ವಿಧಾನಕ್ಕೆ ತೊಂದರೆ ಉಂಟುಮಾಡುತ್ತಿದೆ.
ಹಲವಾರು ಔಧ್ಯಮಿಕ ದೇಶಗಳಲ್ಲಿ ಹಗರಣಗಳು ಅತಿದೊಡ್ಡ ಸಮಸ್ಯೆಯಾಗಿದೆ. ಏಕೆಂದರೆ ಅವರೆಂದೂ ತೃಪ್ತಿಯನ್ನು ನಿರ್ವಹಿಸಲು ಕಲಿತಿಲ್ಲ. ಬಹಳಷ್ಟು ಜನರು ಶ್ರದ್ಧೆಯನ್ನೇ ಕಳೆದುಕೊಂಡು, ಸಮಸ್ಯೆಗಳನ್ನು ಎದುರಿಸುತ್ತ, ತಮ್ಮ ಜೀವನವನ್ನು ಏನು ಮಾಡುವುದು ಎಂದು ದ್ವಂದ್ವಕ್ಕೆ ಸಿಲುಕುತ್ತಾರೆ. ಇಂತಹುದಕ್ಕೆ ಪ್ರಮುಖ ಕಾರಣವೇನೆಂದರೆ ಮಹತ್ವಾಕಾಂಕ್ಷೆ ಮತ್ತು ಚಿಂತೆ. ಇವೆಲ್ಲವು ಸ್ಪಧರ್ೆ, ಅಸೂಯೆ ಮತ್ತು ಭಯದಿಂದ ಸೃಷ್ಟಿಯಾಗಿದೆ. ಇಂತಹ ಜನರು ಕೇವಲ ತಮ್ಮನ್ನೇ ತೊಂದರೆ ಸಿಲುಕಿಸುತ್ತಿಲ್ಲ, ಬದಲಾಗಿ ತಮ್ಮ ಸುತ್ತಮುತ್ತಲಿನ ಹಲವರನ್ನು ಘಾಸಿಗೊಳಿಸುತ್ತಿದ್ದಾರೆ. ಅಂತಹ ಸಮಸ್ಯೆಗಳು ಸ್ವಾಭಾವಿಕವಾಗಿ ಕೆಟ್ಟ ಸನ್ನಿವೇಶಗಳು ಸೃಷ್ಟಿಮಾಡಿ, ಶಾಂತವಾಗಿ ಜೀವಿಸುವವರಿಗೆ ಹಾನಿ ಉಂಟುಮಾಡುತ್ತದೆ. ಇಂತಹ ಸಮಸ್ಯೆಗಳಿಂದ ಪಾರಾಗುವುದಕ್ಕಾಗಿ ಯಾವುದೇ ಕಿರುದಾರಿಗಳಿಲ್ಲ.
ನಾವು ಎದುರಿಸುತ್ತಿರುವ ಸಮಸ್ಯೆಗಳ ಕಾರಣಗಳನ್ನು ಅರಿಯಲು ಪ್ರಯತ್ನಿಸಬೇಕು ಮತ್ತು ಪರಿಹಾರಗಳನ್ನು ಕಂಡುಹಿಡಿಯಬೇಕು. ಆದರೆ ದಾರಿ ತಪ್ಪಿಸುವ ಯೋಚನೆಗಳಲ್ಲಿ ಸಿಲುಕಬಾರದು. ಉದಾಹರಿಸುವುದಾದರೆ: ಸುಖವನ್ನು ಸುಲಭವಾಗಿ ಪಡೆಯಬಹುದು; ಜೀವನವಿದ್ದಲ್ಲಿ ಸಮಸ್ಯೆಗಳು ಇರಲಾರವೇ? ನಾವು ಹೆಚ್ಚು ದುಃಖಿತರಾಗುವುದು ಅಥವಾ ಆಗದಿರುವುದು. ನಾವು ವಿಷಯಗಳತ್ತ ನಮ್ಮ ಮನಸ್ಸನ್ನು ಎಷ್ಟು ಹರಿಸಿದ್ದೇವೆ ಎಂಬುದರ ಮೇಲಿದೆ. ನಮಗೆ ಕೆಲವು ಸಮಸ್ಯೆಗಳು ಉಂಟಾದ ತಕ್ಷಣ ನಾವು ಪರರ ಮೇಲೆ ಅವರು ಮಾಟ, ವಾಮಾಚಾರ ಮಾಡಿಸಿರಬಹುದೆಂದು ಸಂಶಯಪಡುತ್ತೇವೆ ಹೊರತು ಆ ಎಲ್ಲಾ ಸಮಸ್ಯೆಗಳಿಗೆ ತಾವೇ ಸೃಷ್ಟಿಕರ್ತರು ಎಂದು ಒಪ್ಪಲು ಸಿದ್ಧರಿಲ್ಲ ಮತ್ತು ಹಾಗೇ ಯತಾರ್ಥವಾಗಿ ಚಿಂತಿಸಲು ಸಿದ್ಧರಿಲ್ಲ.
ಇಂದು ಜನರು ಯಾವುದು ಸತ್ಯ/ಯೋಗ್ಯವಾದುದು ಮತ್ತು ಯಾವುದು ತಪ್ಪು/ಅಯೋಗ್ಯವಾದುದು ಎಂದು ತಿಳಿಯದೇ ಅಜ್ಞಾನದ ಕತ್ತಲೆಯಲ್ಲೇ ಜೀವಿಸುತ್ತಿದ್ದಾರೆ. ಅವರು ಪ್ರಾಪಂಚಿಕ ಪಾಪಗಳ ಕೆಸರಿನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರು ಯೋಚಿಸುವುದು ಏನೆಂದರೆ ಅವರು ಅನುಭವಿಸುತ್ತಿರುವ ಆ ಕ್ಷಣಿಕ ಸುಖಗಳು ನಿತ್ಯವೆಂದು, ಶಾಶ್ವತವೆಂದು. ಆದರೆ ವಾಸ್ತವವಾಗಿ ಅವು ಅನಿತ್ಯವಾಗಿವೆ, ಅಶಾಶ್ವತವಾಗಿವೆ, ಪರಿವರ್ತನೆಶೀಲವಾಗಿವೆ, ಕ್ಷಣಿಕವಾಗಿವೆ.
ಆದರೆ ಇಂತಹ ತೀಕ್ಷ್ಣಪ್ರಭೆಯ ಸತ್ಯವನ್ನು ಸಹಾ ಜನರು ತಿಳಿಯಲಾರದೆ, ಕ್ಷಣಿಕ ಅವಧಿಯ ಸುಖಗಳಲ್ಲೇ ತಲ್ಲೀನರಾಗಿಬಿಡುತ್ತಾರೆ ಮತ್ತು ಹೆಚ್ಚುಹೆಚ್ಚಾಗಿ ತೊಡಕುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ನಂತರ ಇಂದ್ರಿಯ ಸುಖಗಳಿಗೆ ಗುಲಾಮರಾಗುತ್ತಾರೆ ಮತ್ತು ಸತ್ಯವನ್ನು ಅರಿಯದಷ್ಟು ಅಂಧರಾಗಿಬಿಡುತ್ತಾರೆ. ದುರ್ಬಲ ಹೃದಯಗಳವರಲ್ಲಿ, ದೃಢ ಬಲಿಷ್ಠ ಹೃದಯಿಗಳಾಗುವುದು, ಅಜ್ಞಾನಿಗಳ ನಡುವೆ ಪ್ರಾಜ್ಞರಾಗುವುದು, ಸಹನೆಗೆಟ್ಟವರ ನಡುವೆ ಸಹನೆಯಿಂದ ಕೂಡಿರುವುದು; ಭಾವೋದ್ರೇಕಗಳ ಮತ್ತಿನವರ ನಡುವೆ, ಪ್ರಶಾಂತ ಚಿತ್ತದಿಂದ ಕೂಡಿರುವುದು; ದ್ವೇಷಿಸುವವರ ನಡುವೆ ದಯಾಳು ಆಗಿರುವುದು; ಇಂತಹವುಗಳು ನಮ್ಮ ಜೀವನದಲ್ಲಿ ಕಡುಕಷ್ಟ ಆಗಿರುವಂತಹ ಸಾಧನೆಗಳಾಗಿವೆ.
ಈ ಕಾಲದ ಭೌತಿಕ ಯಶಸ್ಸಿನ ಜನರು ಅಂತಹ ವಿಶಿಷ್ಟ ಅನುಭೂತಿಗಳನ್ನು ಎಂದಿಗೂ ಅನುಭವಿಸುತ್ತಲೇ ಇಲ್ಲ. ಇಂತಹ ಅದ್ಭುತವಾದ ಭೌತಿಕ ಉನ್ನತೆಯಿದ್ದರೂ ಧಮ್ಮದ ಪರಮಾರ್ಥದ ಉನ್ನತಿಯನ್ನು ಅಲಕ್ಷಿಸಿರುವುದು ಅತಿ ದೌಭರ್ಾಗ್ಯಕರವಾಗಿದೆ. ಇಂದು ಮನುಕುಲವು ಭೌತಿಕತೆಯ ಸಾಧನೆಗಳಿಂದ ಕುರುಡಾಗಿ ಭೌತಿಕತೆಯೇ ಸರ್ವ ವಿಷಯಗಳ ಅಂತಿಮ ಎಂದು ಯೋಚಿಸಿ ಅಂಧಕಾರದಿಂದ ಕೂಡಿದೆ.
ಅವರು ಭೌತಿಕವಾದವೇ, ಭೌತಿಕ ಸುಖವೇ ನಿಜ ಸುಖವನ್ನು ನೀಡುವುದಿಲ್ಲ ಎಂಬುದನ್ನು ಮರೆತಿದ್ದಾರೆ. ಅವರು ನಿಜಸುಖವನ್ನು ಮತ್ತು ನಿಜ ಕ್ಷೇಮವನ್ನು ಧಮ್ಮದಿಂದ ಅರಿಯಲೇಬೇಕಾಗಿದೆ. ಈ ರೀತಿ ತಮ್ಮ ಅನ್ವೇಷಣೆಯನ್ನು ಪೂರ್ಣಮಾಡಬೇಕಾಗಿದೆ. ಧಮ್ಮದ ಸಾಂತ್ವನ ಮತ್ತು ಭೌತಿಕತೆಯು ಜೊತೆಯಿದ್ದಾಗಲೇ ಸರ್ವರಿಗೂ ಸುಖ ಸಿಗುವುದು.
ಇಂದು ನಾವು ಎಲ್ಲೆಡೆ ಶೀಲದ ಶಿಥಿಲತೆಯನ್ನು ಕಾಣುತ್ತಿದ್ದೇವೆ. ಆಧುನಿಕ ಸಮೂಹ ಮಾಧ್ಯಮದಿಂದಾಗಿ ನಾವಿಂದು ಮಾನವನ ಅಮಾನವೀಯತೆಯನ್ನು ಹಿಂದೆಂದೂ ಕೇಳದ ರೀತಿಯಲ್ಲಿ ಅರಿಯುತ್ತಿದ್ದೇವೆ. ಸಮಾಜದಲ್ಲಿರುವ ವ್ಯಕ್ತಿಗಳು ಸಮಾಜದ ಪ್ರತಿಯೊಬ್ಬರೂ ಇರುವಂತಹ ತಮ್ಮ ಕರ್ತವ್ಯಗಳನ್ನು, ಕಾರ್ಯಗಳನ್ನು ಮರೆತಿದ್ದಾರೆ ಅಥವಾ ಪೂರ್ಣವಾಗಿ ಅಲಕ್ಷಿಸಿದ್ದಾರೆ. ಔದ್ಯೋಗಿಕ ಸಂಸ್ಥೆಗಳು ತಮ್ಮ ಲಾಭದ ಮತ್ತು ಭೌತಿಕ ಗಳಿಕೆಗಾಗಿ ಕ್ರೂರ ಸೆಣಸಾಟ ನಡೆಸಿ, ಸಭ್ಯತೆಯ ಪ್ರಜ್ಞೆಯನ್ನೇ ಕಳೆದುಕೊಂಡಿದ್ದಾರೆ. ಅವರು ಮಾನವನ ಘನತೆಯಂತಹ ವಿಷಯವು ಇದೆ ಎಂಬುದನ್ನು ಮರೆತಿದ್ದಾರೆ. ಇಂತಹ ವಿಪತ್ತಿನ ಸನ್ನಿವೇಶಗಳಲ್ಲಿಯೂ ಹಲವು ಮಂದಿ ಮಾನವತೆಯ ಘನತೆ ಮತ್ತು ಶೀಲದ ಆಚರಣೆಯನ್ನು ಎತ್ತಿಹಿಡಿದಿದ್ದಾರೆ. ಅವರು ಮಿತಿಮೀರಿದ ಮಾನವನ ಲೋಭವನ್ನು ನಿಗ್ರಹಿಸಿ, ಮಾನವತೆಯ ಸಭ್ಯತೆ ಹಾಗು ಧಮ್ಮದ ಸಾಂತ್ವನದ ಸಮ್ಮಿಶ್ರತೆಯ ಹಾದಿಯಲ್ಲಿ ನಡೆಸಲು, ಪರಿಹಾರ ಪಡೆಯಲು ಯತ್ನಿಸುತ್ತಿದ್ದಾರೆ.
ಮಾನವರು ಇಂದು ಅಂತರಿಕ್ಷವನ್ನು ಜಯಸಿದ್ದಾರೆ. ಅವರು ತಮ್ಮನ್ನು ಉತ್ಕೃಷ್ಟ ಜೀವಿಗಳಾಗಿ ಏರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ಸಭ್ಯ ಮಾನವರಾಗಲು ಸಾಧ್ಯವಾಗುತ್ತಿಲ್ಲ ಹಾಗು ಪರರಲ್ಲಿ ಮೈತ್ರಿ ಮತ್ತು ಕರುಣೆ ತೋರಲು ಆಗುತ್ತಿಲ್ಲ. ಈ ಹಗರಣಗಳ ದುಃಸ್ಥಿತಿಯು ಇರುವುದು ಏಕೆಂದರೆ ಜನರು ಅಧುನಿಕ ನಾಗರಿಕತೆಯನ್ನು ಮೂಡಿಸಲು ಮಿಥ್ಯಾ ಹಾದಿಯನ್ನು ಆಯ್ಕೆ ಮಾಡಿರುವುದಾಗಿದೆ. ಅವರು ಭೌತಿಕತೆಯೊಂದೇ ಸುಖದ ಮಾರ್ಗ ಎಂದು ಮಿಥ್ಯಾದೃಷ್ಟಿಯನ್ನು ಹೊಂದಿರುವುದಾಗಿದೆ. ಇದು ಭ್ರಾಂತಿಯಾಗಿದೆ, ಅವರು ತಪ್ಪಾದ ಹಾದಿಯಲ್ಲಿದ್ದಾರೆ. ಶತಮಾನಗಳಿಂದ ಧಮ್ಮದ/ಆಧ್ಯಾತ್ಮಿಕತೆಯ ನಾಯಕರ ಬುದ್ಧಿವಾದವನ್ನು ಲೆಕ್ಕಿಸದೆ, ತಮ್ಮಿಚ್ಛೆಯಿಂದಲೇ ಈ ದುಃಸ್ಥಿತಿಯನ್ನು ಆಯ್ಕೆ ಮಾಡಿದ್ದಾರೆ.
ಅದೇವೇಳೆ ಒಪ್ಪಬಹುದಾದಂತಹ ವಿಷಯವೇನೆಂದರೆ ವಿಜ್ಞಾನವು ಅತಿಶೀಘ್ರ ಫಲಿತಾಂಶವನ್ನು ಮತ್ತು ಭೌತಿಕ ಗಳಿಕೆಯ ಮಾಪನವನ್ನು ನೀಡಿದೆ, ಆದರೆ ಅಂತಹ ಭೌತಿಕತೆಯ ಲಾಭದ ಪರಿಣಾಮ ಸ್ವರೂಪವು ಭ್ರಾಂತಿಕಾರಕ ಮತ್ತು ಕ್ಷಣಿಕದ್ದಾಗಿದೆ. ಇಂತಹ ಭ್ರಮಾತ್ಮಕ ಮತ್ತು ಅಲ್ಪಾವಧಿಗೆ ವಿರುದ್ಧವಾಗಿ ನಮ್ಮ ಧಮ್ಮನಾಯಕರ ಉದಾತ್ತ ಬೋದನೆಗಳಂತೆ ಸಾಗಿದರೆ ನಿಜ ಶಾಶ್ವತ ಸುಖ ಮತ್ತು ಭ್ರಾಂತಿಕಾರಕವಲ್ಲದುದು ದೊರೆಯುತ್ತದೆ. ಧಮ್ಮದ ಸಾಂತ್ವನವಿಲ್ಲದ ಭೌತಿಕತೆಯ ಗಳಿಕೆಯು ಎಂದಿಗೂ ನಿಜ ಮತ್ತು ನಿತ್ಯ ಸುಖವನ್ನು ನೀಡಲಾರದು.
ಮಾನವನ ಪರಮಾರ್ಥದ ಉನ್ನತಿಗೆ ಧಮ್ಮದ ಆಧಾರವು ಪೂರ್ಣವಾಗಿ ಅತ್ಯಗತ್ಯ. ಅದರಿಂದಾಗಿಯೇ ಚಿತ್ತಪ್ರಶಾಂತತೆ ಮತ್ತು ನಿತ್ಯ ಸುಖವು ಲಭಿಸುವುದು. ನಾವು ಮಾನವನ ವರ್ತನೆಯನ್ನು ಅರಿಯಲು ಇತಿಹಾಸ ಅಧ್ಯಯನ ಮಾಡಿದಾಗ ನಮಗೆ ತಿಳಿಯುವು ದೇನೆಂದರೆ ನಮ್ಮ ಹಿಂದಿನವರಲ್ಲಿರುಷ್ಟು ಸಹಾ ನಮ್ಮ ನೈತಿಕತೆ ಬೆಳೆದಿಲ್ಲ, ಆದರೂ ಸಹಾ ನಾವು ನಮ್ಮ ನಾಗರಿಕತೆಯನ್ನು ವೈಭವೀಕರಿಸುವ ನಾಟಕವಾಡುತ್ತೇವೆ.
ಬೌದ್ಧ ಧರ್ಮದ ಮತ್ತೊಂದು ಪ್ರಮುಖ ಅಂಶವೇನೆಂದರೆ ಮಾನವನ ಸಮಸ್ಯೆಗಳಿಗೆ ಪ್ರಧಾನ ಕಾರಣವನ್ನು ವಿವರಿಸುವುದು. ಬುದ್ಧ ಭಗವಾನರ ಪ್ರಕಾರ ನಾವು ಈ ಲೌಕಿಕ ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವುದು ಯಾಕೆಂದರೆ ನಮ್ಮ ಮನಸ್ಸಿನಲ್ಲಿ ಪ್ರಬಲವಾಗಿರುವ ಸ್ವಾರ್ಥದ ಬಯಕೆಗಳಿಂದ ಆಗಿದೆ. ಹಾಗು ಅವರು ಇನ್ನೂ ಬಿಡಿಸಿ ಹೇಳಿದ್ದಾರೆ. ಅದೆಂದರೆ ಮೂರು ವಿಧವಾದ ತೀವ್ರ ಬಯಕೆ. ಈ ಮೂರು ತೀವ್ರ ಬಯಕೆಗಳೇ ನಮ್ಮ ಅಸ್ತಿತ್ವಕ್ಕೆ, ನಮ್ಮ ಪುನರ್ಜನ್ಮಕ್ಕೆ ಹಾಗೆಯೇ ನಮ್ಮ ಸಾವಿರಾರು ಸಮಸ್ಯೆಗಳಿಗೆ ಮತ್ತು ಮಾನಸಿಕ ಕ್ಷೊಭೆಗಳಿಗೂ ಇದೇ ಕಾರಣವಾಗಿದೆ.
ಬುದ್ಧರ ಹೇಳಿಕೆಯ ಉದಾತ್ತವಾದ ಅರ್ಥವು ಸಿಗಬೇಕಾದರೆ ಅದನ್ನು ಅತಿ ಪ್ರಾಜ್ಞತೆಯಿಂದ ಪರಿಶೀಲಿಸಬೇಕಾಗುತ್ತದೆ. ಆಗ ಮಾತ್ರ ಅರಿವು ಉಂಟಾಗಲು ಸಾಧ್ಯ. ವಿಶ್ವವಿಖ್ಯಾತ ತತ್ವಜ್ಞಾನಿಗಳು ಮತ್ತು ಮನಶಾಸ್ತ್ರಜ್ಞರು ಸಹಾ ಈ ಮೂರು ಬಲಗಳ ಬಗ್ಗೆ ಹೇಳಿದ್ದಾರೆ. ಆದರೆ ಅವರು ಬೇರೆ ಪದಗಳನ್ನು ಬಳಿಸಿದ್ದಾರೆ ಅಷ್ಟೇ. ಉದಾಹರಿಸುವುದಾದರೆ: ಜರ್ಮನ್ ಲೇಖಕ ಅಥರ್ಾತ್ ಶ್ಯೂಪೆನ್ಹೇರ್ ಈ ಮೂರು ಬಲಗಳನ್ನು ಹೀಗೆ ಹೆಸರಿಸಿದ್ದಾರೆ: ಲೈಂಗಿಕತೆ, ಸ್ವರಕ್ಷಣೆ ಮತ್ತು ಆತ್ಮಹತ್ಯೆ.
ಆಸ್ಟ್ರೀಯಾದ ಮನಶಾಸ್ತ್ರಜ್ಞ ಸಿಗ್ಮಂಡ್ ಪ್ರಾಡ್ ಇವುಗಳನ್ನು ಹೀಗೆ ಹೆಸರಿಸಿದ್ದಾನೆ: ಕಾಮೇಚ್ಚೆ, ಅಹಂ ಪ್ರವೃತ್ತಿ ಮತ್ತು ಸಾವಿನ ಪ್ರವೃತ್ತಿ. ಹಾಗೆಯೇ ಪ್ರಾಡ್ನ ಖ್ಯಾತ ಶಿಷ್ಯನಾದ ಕಾಲರ್್ಜಂಗ್ ಹೀಗೆ ಹೇಳಿದ್ದಾನೆ: ಈ ಪ್ರವೃತ್ತಿಯ ಮೂಲಗಳಿಂದ ಎಲ್ಲೆಡೆ ಎಲ್ಲಾರೀತಿಯ ಸೃಜನಾತ್ಮಕತೆಯು ಪುಟಿಯುತ್ತದೆ.
ಬುದ್ಧ ಭಗವಾನರು 25 ಶತಮಾನಗಳ ಹಿಂದೆಯೇ ಸಂಶೋಧಿಸಿದ್ದ ಸತ್ಯಕ್ಕೆ, ಈ ರೀತಿಯಲ್ಲಿ ಮಹಾನ್ ಚಿಂತನಕಾರರು ಈ ರೀತಿ ಬೆಂಬಲ ನೀಡಿದ್ದಾರೆ. ಆದರೆ ನಾವು ಅವರ ವಿವರಣೆ ಮತ್ತು ಜ್ಞಾನಗಳನ್ನು ಗಮನಿಸಿದಾಗ ನಮಗೆ ಸ್ಪಷ್ಟವಾಗಿ ಗೋಚರಿಸುವುದು ಏನೆಂದರೆ ಬುದ್ಧ ಭಗವಾನರು ಇವರೆಲ್ಲರ ಅರ್ಥಮಾಡಿಕೊಳ್ಳುವ ಸಾಮಥ್ರ್ಯಕ್ಕಿಂತ ಎಷ್ಟೋ ಪಟ್ಟು ಮೀರಿದವರಾಗಿದ್ದಾರೆ.


1.2 ಕೆಲವೊಂದು ನಮ್ಮ ಸಮಸ್ಯೆಗಳು ಸ್ವಾಭಾವಿಕ

ನಾವು ಸಮಸ್ಯೆಗಳೊಂದಿಗೆ ನಮ್ಮ ಜೀವನವಿಡೀ ಹೋರಾಟವನ್ನು ಮಾಡಲೇಬೇಕು ಮತ್ತು ಸಮಸ್ಯೆಗಳನ್ನು ತಡೆಯುವ ಯಾವ ಹಾದಿಯು ಇಲ್ಲ. ಉದಾಹರಣೆಗೆ: ನಾವು ರೋಗವನ್ನಾಗಲಿ, ವೃದ್ಧಾಪ್ಯವಾಗಲಿ ಹಾಗು ಮರಣವನ್ನಾಗಲಿ ತಡೆಯಲಾರೆವು. ಹಾಗಿರುವಾಗಲು ಕೆಲವೊಂದು ಸಮಸ್ಯೆಗಳು ಮಾನವ ನಿಮರ್ಿತವಾಗಿರುತ್ತದೆ. ಜನರು ಜೀವನವನ್ನು ಅರ್ಥ ಮಾಡಿಕೊಳ್ಳುವ ಬಗೆಯಿಂದ ಜನರಿಂದಲೇ ಉಂಟಾಗಿರುತ್ತದೆ. ಕೆಲವೊಂದು ಸಮಸ್ಯೆಗಳು ಮನೋ ನಿಮರ್ಿತವಾಗಿರುತ್ತದೆ. ಅವು ಮೋಹದಿಂದ, ಅಜ್ಞಾನದಿಂದ, ಸಂಶಯ ಮತ್ತು ಭಯದಿಂದ ಉಂಟಾಗಿರುತ್ತವೆ.
ಮಾನಸಿಕ ಅಸಮತೋಲನ ಅಥವಾ ಮನಸ್ಸಿನ ನಿಯಂತ್ರಣ ಕಳೆದುಕೊಳ್ಳುವಿಕೆಗೆ ಹುಚ್ಚು ಎನ್ನುತ್ತಾರೆ. ಇದು ಇನ್ನೊಂದು ದೊಡ್ಡ ಸಮಸ್ಯೆ. ಮಾನವನು ನೈತಿಕತೆಯ ಹಾದಿಯನ್ನು ಭಂಗಿಸಿ ತನ್ನ ಶಾಂತಿ ಮತ್ತು ಸುಖವನ್ನು ಹಾಳು ಮಾಡುವುದಷ್ಟೇ ಅಲ್ಲದೆ ಪರರನ್ನು ಹಾಳು ಮಾಡುತ್ತಾನೆ. ಹೀಗಾಗಿ ಸಮಸ್ಯೆಗಳನ್ನು ಆಂತರಿಕವಾಗಿ ಆಹ್ವಾನಿಸಿ ಮತ್ತು ಬಾಹ್ಯದಿಂದ  ಪ್ರಚೋದಿತವಾಗಿ ಮನಸ್ಸಿಗೆ ಕೆಟ್ಟ ಪರಿಣಾಮ ಉಂಟುಮಾಡುತ್ತಾನೆ. ಇದರಿಂದಾಗಿ ಹೆಚ್ಚು ಹೆಚ್ಚು ಅತೃಪ್ತಿ, ದುಃಖ, ಉದ್ವೇಗ, ಭಯ ಮತ್ತು ಅಸುರಕ್ಷತೆಯು ಸೃಷ್ಟಿಯಾಗುತ್ತದೆ.
ಜಗತ್ತು ನಿರಾಶೆಯ ಭಾವದಿಂದಲೇ ಕೂಡಿದೆ. ನಾವು ಅಂದುಕೊಂಡಿರುವುದು ಯಾವುದೂ ಸಾಗುತ್ತಿಲ್ಲ. ಹೀಗಿರುವಾಗ ನಾವು ಎಂತಹುದೇ ಸನ್ನಿವೇಶವನ್ನೂ ಧೈರ್ಯದಿಂದ ಎದುರಿಸಲು ಸಿದ್ಧರಾಗಬೇಕು.
ನಾವು ಆ ಕೆಟ್ಟ ಸನ್ನಿವೇಶಗಳನ್ನು ಬದಲಿಸಲಾರೆವು ನಿಜ, ಆದರೆ ಖಂಡಿತವಾಗಿ ನಾವು ನಮ್ಮನ್ನು ಬದಲಿಸಬಲ್ಲೆವು. ಒಂದು ವಿಷಯವನ್ನು ಬದಲಿಸಲಾಗದಿದ್ದರೆ ಅವನ್ನು ಒಪ್ಪಿಕೊಳ್ಳದೆ ಬೇರೆ ಹಾದಿಯೇ ಇಲ್ಲ. ಅಥವಾ ಅಪರಿಹಾರದ (ತಪ್ಪಿಸಿಕೊಳ್ಳಲಾಗದ) ಅದಕ್ಕೆ ಸಂತೋಷದಿಂದ ರಾಜೀನಾಮೆ ನೀಡುವುದೇ ಉತ್ತಮ. ಆದರೆ ಇದು ವಿಧಿ ನಿಯಂತ್ರಕವಲ್ಲ, ನಾವು ಅತೃಪ್ತಿಯ, ದುಃಖದ ಅನುಭೂತಿಯನ್ನು ಪಡೆಯುತ್ತಿರುವುದಕ್ಕೆ ಕಾರಣ ನಾವು ಜೀವನದ ಸ್ವರೂಪವನ್ನು ತಪ್ಪಾಗಿ ಅರಿತಿರುವುದು. ಅದು ಏನೆಂದರೆ ವಿಷಯಗಳು ಎಂದಿಗೂ ನಮ್ಮ ಬಯಕೆಗಳಂತೆಯೇ ನಡೆಯುವುದಿಲ್ಲ. ಇದನ್ನು ಸ್ಪಷ್ಟವಾಗಿ ಅರಿತಾಗ ನಮ್ಮ ಮನದಲ್ಲಿ ಪ್ರಶಾಂತತೆಯು ಸೃಷ್ಟಿಸಲ್ಪಡುವುದು.
ಇದರ ಅರ್ಥವು ನಮಗೆ ಎದುರಾಗುವ ಪ್ರತಿ ವಿಪತ್ತಿಗೂ ತಲೆಬಾಗುವುದು ಎಂದಲ್ಲ. ಎಲ್ಲಿಯವರೆಗೆ ಸನ್ನಿವೇಶವನ್ನು ನಮ್ಮ ಇಷ್ಟದಂತೆ ಬದಲಿಸಬಹುದೋ ಅಲ್ಲಿಯವರೆಗೂ ನಾವು ಪೂರ್ಣ ಪ್ರಯತ್ನ ನಡೆಸೋಣ. ಆದರೆ ನಮ್ಮ ಜ್ಞಾನವು ನಾವು ಈ ಮಾರ್ಗದಿಂದ ಗುರಿ ತಲುಪಲಾಗುವುದಿಲ್ಲ, ಬದಲಾಗಿ ಪ್ರತಿಕೂಲ ಸಂಭವಿಸುವುದೆಂದು ಸ್ಪಷ್ಟವಾಗಿ ತಿಳಿದಾಗ ಅದಕ್ಕಾಗಿ ನಾವು ಚಿಂತಿಸಬಾರದು. ಒಬ್ಬ ಆಧುನಿಕ ಕವಿಯು ಇದನ್ನು ಬಹು ಚಂದವಾಗಿ ಹೀಗೆ ನುಡಿದಿದ್ದಾನೆ:
ಸೂರ್ಯನ ಅಡಿಯಲ್ಲಿರುವ ಪ್ರತಿ ರೋಗಕ್ಕೂ ಪರಿಹಾರವಿದೆ ಅಥವಾ ಇಲ್ಲ.
ಪರಿಹಾರವೊಂದು ಇದ್ದಾಗ ಹುಡುಕು, ಇಲ್ಲದಿದ್ದಾಗ ಚಿಂತಿಸದಿರು.
ಕೆಲವರು ಪ್ರತಿಯೊಂದು ಸುಗಮವಾಗಿ ನಡೆಯುತ್ತಿರುವಾಗ ತಮ್ಮ ಸಮತೋಲನವನ್ನು ಕಾಯ್ದುಕೊಳ್ಳುವರು. ಆದರೆ ಇಷ್ಟದಂತೆ ನಡೆಯದ ದುರ್ಘಟನೆಗಳು ಬಂದಾಗ, ನಿರಾಶೆಯುತರಾದಾಗ ನಷ್ಟ, ರೋಗ, ಪ್ರಿಯರ ವಿಯೋಗ ಉಂಟಾದಾಗ ಅವರು ತಮ್ಮ ಸಮತೋಲನ ಕಳೆದುಕೊಳ್ಳುವರು. ಅವರು ಉಬ್ಬುತ್ತಾರೆ ಅಥವಾ ಕುಗ್ಗುತ್ತಾರೆ. ಆದರೆ ಪ್ರಾಜ್ಞರು ಉನ್ನತಿಯ ಕ್ಷಣಗಳಲ್ಲೂ ತಮ್ಮ ಪ್ರತಿಕ್ರಿಯೆಗಳನ್ನು ನಿಯಂತ್ರಿಸುತ್ತಾರೆ.
ಇದರ ಅರ್ಥವು ನೀವು ನಗಲಾರದ ಅಥವಾ ಮುಗುಳ್ನಗೆ ಬೀರಲಾರದ ಜೋಲು ಮೊಗದವರಾಗಿರಿ ಎಂದಲ್ಲ. ಅಂತಹುದರಿಂದ ದೂರವಿರಿ ಎಂದರ್ಥ. ನಾವು ಉನ್ನತಿಯಲ್ಲಿರುವಾಗ ನಮ್ಮನ್ನು ನಿಯಂತ್ರಿಸಿದರೆ ನಾವು ದುಃಸ್ಥಿತಿಯಲ್ಲಿರುವಾಗಲು ನಿಯಂತ್ರಿಸಲು ಸಾಧ್ಯ. ದುಃಸ್ಥಿತಿಯಲ್ಲಿರುವಾಗ ಆತನು ಸಮಾಧಾನಿಸಿಕೊಳ್ಳುವುದು ಏನೆಂದರೆ ಈ ರೀತಿಯ ದುಃಸ್ಥಿತಿಯು ಆತನೊಬ್ಬನಿಗೆ ಮಾತ್ರವಲ್ಲ, ಬಹಳಷ್ಟು ಜನರು ಇದೇರೀತಿಯ ಸಮಸ್ಯೆಯಲ್ಲಿರುವರು ಎಂದೂ ಅರಿಯಬೇಕು.
ಪರರ ಕೆಲವು ವಿಪತ್ತುಗಳನ್ನು ಕಂಡಾಗ ನಮ್ಮ ಸಮಸ್ಯೆಯು ಏನೇನೂ ಅಲ್ಲ, ವಾಸ್ತವವೇನೆಂದರೆ ಪರರು ಸಹಾ ಸಮಸ್ಯೆಯಲ್ಲಿದ್ದಾರೆ. ಇದನ್ನು ಅರಿತಾಗ ನಮ್ಮ ಸಮಸ್ಯೆಯು ಪರಿಹಾರವಾಗುವುದಿಲ್ಲ. ಆದರೆ ಖಂಡಿತವಾಗಿ ತುಸು ಸಾಂತ್ವನ ದೊರೆಯುತ್ತದೆ.
ಈ ಪರಿವರ್ತನೆಯ ಜಗದಲ್ಲಿ ನಿಜ ಸುಖ ಎಂಬುದೇ ಇಲ್ಲ. ಇದನ್ನು ಸ್ಪಷ್ಟವಾಗಿ ಅರಿಯಬೇಕಾದರೆ ಸುತ್ತಲೂ ವೀಕ್ಷಿಸುವುದು ಅತ್ಯಗತ್ಯ. ಯಾವ ಕುಟುಂಬ ಸಾವು-ನೋವುಗಳಿಂದ, ಪ್ರಿಯ ವಿಯೋಗದಿಂದ ನರಳಿಲ್ಲ? ಯಾವುದಾದರೂ ವ್ಯಕ್ತಿ ರೋಗ ಮತ್ತು ಮುಪ್ಪಿನಿಂದ ಮುಕ್ತಿ ಪಡೆದಿರುವನೋ? ಹಾಗೆಯೇ ಕೆಲವರು ಈ ಕ್ಷಣದಲ್ಲಿ ದೇಹ ಮತ್ತು ಮನಸ್ಸಿನ ದೊಡ್ಡ ವಿಪತ್ತಿನಿಂದ ಪಾರಾಗಿರಬಹುದು. ಆದರೆ ಅನಿತ್ಯದ ನಿಯಮದ ಆ ಕರಾಳ ಕೈಯು ತನ್ನ ಕ್ರೂರತನವನ್ನು ಶೀಘ್ರದಲ್ಲೇ ತೋರಿಸಬಹುದು ಮತ್ತು ನಂತರ ಇಡೀ ಯೌವ್ವನ ಮುಪ್ಪಾಗಬಹುದು, ಆರೋಗ್ಯವು ರೋಗವಾಗಿ ಮಾಪರ್ಾಟಾಗುತ್ತದೆ, ಶಕ್ತಿಯು ದುರ್ಬಲವಾಗುತ್ತದೆ. ಸುಂದರತೆಯು ಕುರೂಪವಾಗುತ್ತದೆ ಮತ್ತು ಇಡೀ ಜೀವನ ಸಾವಿನಲ್ಲಿ ಅಂತ್ಯವಾಗುತ್ತದೆ. ಇದನ್ನು ಯಾವ ಅಧಿಕಾರದ ಶಕ್ತಿಯಾಗಲಿ, ಜ್ಞಾನವಾಗಲಿ ಅಥವಾ ಐಶ್ವರ್ಯವಾಗಲಿ ತಡೆಯಲಾರದು.
ಹಾಗಾದರೆ ಈ ಬದಲಾಗುವ ಜಗತ್ತಿನ ಬಗ್ಗೆ ನಮ್ಮ ಸ್ಪಷ್ಟ ಅಭಿಪ್ರಾಯವಾದರೂ ಏನು? ಅದಕ್ಕಾಗಿ ಅಳುವುದು ವ್ಯರ್ಥ. ಅದು ವಿಷಯವನ್ನು ಇನ್ನೂ ಹಾಳು ಮಾಡುತ್ತದೆ. ಜಗತ್ತಿನ ಈ ಸ್ಪಷ್ಟ ನಿಜ ಸ್ವರೂಪವನ್ನು ಅರಿತು ಧೈರ್ಯವಾಗಿ ಬದುಕೋಣ. ನಾವು ನಕುಲಪಿತನಿಗೆ ಬುದ್ಧ ಭಗವಾನರು ನೀಡಿದ ಬುದ್ಧಿವಾದವನ್ನು ನೆನೆಯೋಣ. ನಕುಲಪಿತನು ತನ್ನ ವೃದ್ಧಾಪ್ಯದಲ್ಲಿ, ರೋಗದಿಂದ ತತ್ತರಿಸಿ ಭಗವಾನರನ್ನು ಭೇಟಿ ಮಾಡಿದಾಗ, ಭಗವಾನರು ಆತನಿಗೆ ಹೇಗೆ ನುಡಿಯುತ್ತಾರೆ: ಶರೀರಕ್ಕೆ ರೋಗವಿದ್ದರೂ, ಮನಸ್ಸು ಸದಾ ಆರೋಗ್ಯದಿಂದಿರಲಿ ಹೀಗೆ ನೀನು ನಿನ್ನನ್ನು ಸುಶಿಕ್ಷಿಸಿಕೋ. ಆದ್ದರಿಂದ ಸುಖ ಎನ್ನುವುದು ಮನಸ್ಸಿನ ಸ್ಥಿತಿಯಾಗಿದೆ.
ಏನು ಸಂಭವಿಸಿತು ಎನ್ನುವುದಲ್ಲ, ಬದಲಾಗಿ ಸಂಭವಿಸಿದಾಗ ನಮ್ಮ ಪ್ರತಿಕ್ರಿಯೆ ಹೇಗಿತ್ತು ಎಂಬುದೇ ನಮ್ಮ ಸುಖದ ಅಥವಾ ದುಃಖದ ಮೌಲ್ಯವನ್ನು ನಿರ್ಧರಿಸುತ್ತದೆ. ಸನ್ನಿವೇಶಗಳಿಗೆ ನಮ್ಮ ಚಿತ್ತಶಾಂತಿಯನ್ನು ಕದಡುವ ಸಾಮಥ್ರ್ಯ ಸಿಗುವುದು ನಾವು ಅವುಗಳಿಗೆ ಅವಕಾಶ ಕಲ್ಪಿಸಿದಾಗ, ಪ್ರತಿಕ್ರಿಯೆ ವ್ಯಕ್ತಪಡಿಸಿದಾಗ ಮಾತ್ರ. ಸನ್ನಿವೇಶಗಳು ಕೇವಲ ಬಾಹ್ಯ ಜಗತ್ತಿನ ವಿಷಯವಾಗಿದೆ. ಆದರೆ ಸುಖವು ಆಂತರಿಕ ಜಗತ್ತಿಗೆ ಸಂಬಂಧಿಸಿದೆ, ಬಾಹ್ಯದ ಸಂಭವಿಸುವಿಕೆಯಲ್ಲ, ಬದಲಾಗಿ ಆಂತರಿಕ ಪ್ರತಿಕ್ರಿಯೆ ಅದು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ.
ಜೀವನವು ಸುಮಧುರ ಹಾಡಿನಂತೆ,
ಹರಿಯುವಾಗ ಆನಂದವಾಗಿರುವುದು ಸುಲಭವೇ ಸರಿ.
ಯಾವಾಗ ಜೀವನ, ಮರಣ ಸದೃಶದಂತೆ ತಪ್ಪಾದಾಗ
ಆಗಲೂ ಮುಗುಳ್ನಗೆ ಬೀರುವಂತಹ
ಮಾನವನ ಜೀವನವು ಮೌಲ್ಯಯುತವೇ ಸರಿ.
ಬಹಳಷ್ಟು ಜನರು ಹತಾಶೆಯಿಂದ, ಖಿನ್ನತೆಯಿಂದ ಮತ್ತು ನರದೌರ್ಬಲ್ಯದಿಂದ ನರಳುತ್ತಿರುವರು. ಏಕೆಂದರೆ ಅವರು ತಮ್ಮ ಮನಸ್ಸನ್ನು ಗೊಂದಲಗಳು ಇದ್ದಾಗ, ತೊಂದರೆ ಇದ್ದಾಗ ಶಾಂತವಾಗಿರುವುದನ್ನು ಕಲಿತಿಲ್ಲ. ಅವರು ಕೇವಲ ಇಂದ್ರಿಯ ಬೋಗಕ್ಕೆ ತಲ್ಲೀನರಾಗುವಿಕೆಯಲ್ಲಿ ತೀವ್ರ ಬಯಕೆ ಬೆಳೆಸುವುದರಲ್ಲಿ ಮನಸ್ಸನ್ನು ಹರಿಸಿದ್ದಾರೆ. ಯಾರು ಧಮ್ಮದ ಮಾರ್ಗದರ್ಶನ ಹೊಂದಿಲ್ಲವೋ ಅವರು ಇಂದ್ರೀಯ ಭೋಗದಲ್ಲಿ ಅತಿಯಾಗಿ ತಲ್ಲೀನವಾಗುವಿಕೆಯೇ ಅಭಿವೃದ್ಧಿ ಎಂದು ಭಾವಿಸಿದ್ದಾರೆ.
ಇದರ ಪರಿಣಾಮವಾಗಿ ಜನರು ಅನಾರೋಗ್ಯಕರ ದೃಷ್ಟಿಕೋನಗಳನ್ನು ಬೆಳೆಸುತ್ತಾರೆ. ಅದರಿಂದಾಗಿ ಮತ್ಸರ, ದ್ವೇಷ, ಶತೃತ್ವ, ನಂತರ ಹಿಂಸೆಯಲ್ಲಿ ಬದಲಾಗುತ್ತಾರೆ. ಈ ರೀತಿಯಾಗಿ ಅಶಿಸ್ತಿನ ಜನರು ಇಡೀ ಜಗತ್ತನ್ನೇ ಯುದ್ಧರಂಗವಾಗಿ ಪರಿವತರ್ಿಸುತ್ತಾರೆ. ಒಮ್ಮೆ ಹಿಂಸೆ ಪ್ರಾರಂಭವಾದರೆ ಕೆಲಕಾಲ ಪ್ರತಿಯೊಬ್ಬರು ಶಾಂತಿಗಾಗಿ ಪರಿತಪಿಸುತ್ತಾರೆ. ನಂತರ ಆ ಧಾರಾವಾಹಿಯು ಮರೆತು, ಹೊಸದೊಂದು ಉದ್ಭವವಾಗಿ ಇನ್ನೂ ಹೆಚ್ಚು ದುಃಖ ಆವರಿಸುತ್ತದೆ.
ಬಹಳಷ್ಟು ಜನರಿಗೆ ಇದೆಲ್ಲಾ ಅಭಿವೃದ್ಧಿಯಾಗದ ಮನಸ್ಸಿನಿಂದ ಸಮಸ್ಯೆಗಳೆಲ್ಲವೂ ಉಂಟಾಗಿದೆ ಎಂಬುದು ತಿಳಿದಿಲ್ಲ. ಜನರು ಸೈತಾನನೇ (ದುಷ್ಟಶಕ್ತಿ) ಇವೆಲ್ಲಕ್ಕೂ ಕಾರಣ ಎಂದು ಆರೋಪಿಸಿ ದುಃಖದಲ್ಲೇ ಇರುತ್ತಾರೆ. ಆಗ ಆ ಸೈತಾನನೊಂದಿಗೆ ಹೋರಾಡಲು ಅವರು ದೇವರಕಡೆ ತಿರುಗುತ್ತಾರೆ. ಹೀಗಾಗಿ ಅವರು ಪ್ರಾಥರ್ಿಸಲು ಮತ್ತು ಪೂಜಿಸಲು ಮುಂದಾಗಿ ಆ ದೇವರು ಈ ದೇವರುಗಳಲ್ಲಿ ಸಹಾಯಕ್ಕಾಗಿ ಯಾಚಿಸುತ್ತಾರೆ. ಅದಕ್ಕಾಗಿ ಎಲ್ಲಾರೀತಿಯ ಕಾರ್ಯಗಳನ್ನು ಮಾಡುತ್ತಾರೆ. ಆದರೆ ಅವರ ಸಮಸ್ಯೆಗಳೆಲ್ಲಾ ತಮ್ಮಿಂದಲೇ ಸೃಷ್ಠಿಯಾಗಿವೆ ಎಂಬುದನ್ನು ತಿಳಿದಿರುವುದಿಲ್ಲ. ಈಗ ನಾವು ಸಮಸ್ಯೆಗಳನ್ನು ಸೃಷ್ಟಿಸುವರು ಯಾರು ಎಂದು ಅರ್ಥಮಾಡಿಕೊಳ್ಳೋಣ.
ಬುದ್ಧ ಭಗವಾನರು ಇಡೀ ಲೋಕ (ಜಗತ್ತು) ನಿಮ್ಮಲ್ಲಿದೆ ಎನ್ನುತ್ತಾರೆ. ಯಾವಾಗ ನೀವು ಶಿಸ್ತಿನಿಂದ ಕೂಡಿರುವಿರೋ ಆಗ ಇಡೀ ಜಗತ್ತೇ ಶಿಸ್ತಿನಿಂದ ಕೂಡಿದ್ದು, ಆಗ ಶಾಂತಿ ಕೇವಲ ನಿಮ್ಮಲ್ಲಿ ಅಲ್ಲದೆ ಸರ್ವತ್ರ ವ್ಯಾಪಿಸುತ್ತದೆ. ಆಗ ನೀವು ಯಾವುದೇ ದಿವ್ಯಶಕ್ತಿಯಲ್ಲಿ ಸಹಾ ಶಾಂತಿಗಾಗಿ ಬೇಡುವ ಅಗತ್ಯವಿಲ್ಲ.
ಒಳಿತು, ಕೆಡಕು, ಶಾಂತಿ ಮತ್ತು ಹಿಂಸೆ ಇವೆಲ್ಲಾ ಹೊರಗಡೆಯಿಂದ ಬರುವುದಿಲ್ಲ. ಜನರ ಮಾನಸಿಕ ದೃಷ್ಟಿಕೋನಗಳಿಂದಾಗಿ ಅವೆಲ್ಲಾ ಜೀವಂತವಾಗಿದೆ.
ಸೃಷ್ಟಿಯ ಆದಿಯನ್ನು ಅನ್ವೇಷಿಸಿದಾಗ ಸಕಲ ಸಮಸ್ಯೆಗಳ ಮೂಲವನ್ನು ಅರಿಯುತ್ತೇವೆ ಎಂದು ಧಮ್ಮದಲ್ಲಿ ಪಳಗದ ಅಪಕ್ವ ಜನರು ಮಾತ್ರ ನಂಬುತ್ತಾರೆ. ಬುದ್ಧರು ನಮಗೆ ನೀಡಿದ ಬುದ್ಧಿವಾದ ಏನೆಂದರೆ ಸೃಷ್ಟಿಯ ಆದಿಯ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು. ಏಕೆಂದರೆ ಅಂತಹ ತರ್ಕ, ಊಹೆಗಳಿಂದ ನಮ್ಮ ಯಾವೊಂದು ಸಮಸ್ಯೆಗಳಿಗೆ ಸಹಾಯ ಸಿಗಲಾರದು.


1.3 ಮಾನವರು ಹೆಚ್ಚಿನ ತೀವ್ರಬಯಕೆ ಹೊಂದಿದ್ದಾರೆ.

ಬೇರೆ ಯಾವುದೇ ಜೀವಿಗಿಂತ, ಮಾನವರು ಸುಖಗಳ ತೀವ್ರ ಬಯಕೆಗಳಲ್ಲಿ ಹೆಚ್ಚಿನ ಸ್ವಾಥರ್ಿಗಳಾಗಿದ್ದಾರೆ. ಅವರು ಪರರ ಸುಖ ಕ್ಷೇಮಗಳನ್ನು ಯೋಚಿಸದೆ, ಇಂದ್ರಿಯ ಸುಖದ ಪ್ರಾಪಂಚಿಕತೆಯಲ್ಲಿ ಮುಳುಗುತ್ತಾರೆ. ಇಂತಹ ಇಂದ್ರಿಯ ಭೋಗಿಗಳು ಹೆಚ್ಚಿನ ಸುಖವನ್ನು ಅನುಭವಿಸುವುದಕ್ಕಾಗಿ ದೀಘರ್ಾಯುವಾಗಲು ಇಚ್ಛಿಸುತ್ತಾರೆ. ಅವರು ಆಸ್ತಿಯನ್ನು ಸಂಗ್ರಹಿಸುವ ತೀವ್ರ ಬಯಕೆಯಲ್ಲಿ ಬಿದ್ದು ಅತಿಯಾಗಿ ಆಸ್ತಿಯನ್ನು ಸಂಗ್ರಹಿಸುತ್ತಾರೆ ಮತ್ತು ಅವರು ಸಾಯಲು ಭಯಪಡುತ್ತಾರೆ. ಏಕೆಂದರೆ ಅವರು ಸಂಪಾದಿಸಿದ ಆಸ್ತಿಯಿಂದ ಬೇರ್ಪಡಲು ಸಿದ್ಧರಿಲ್ಲ.
ಬೇರೆ ಜೀವಿಗಳಲ್ಲಿ ಈ ಬಗೆಯ ವಸ್ತುಗಳನ್ನು ಸಂಗ್ರಹಿಸುವ ಮತ್ತು ಅವುಗಳಲ್ಲೇ ಮುಳುಗುವ ಬುದ್ಧಿ ಇಲ್ಲ. ಅವು ತಮ್ಮ ಪಂಚೇಂದ್ರಿಯಗಳನ್ನು ಕೇವಲ ಜೀವದಿಂದ ಉಳಿಯಲು ಮತ್ತು ಪರರಿಗೆ ವಂಚಿಸದೆ, ಸ್ವಾಭಾವಿಕ ಜೀವನ ನಡೆಸುತ್ತವೆ. ಕೇವಲ ಮಾನವರು ಮಾತ್ರವೇ ತಿನ್ನುವುದಕ್ಕಿಂತ, ಅಗತ್ಯಕ್ಕಿಂತ ಹೆಚ್ಚಾಗಿ ಸಂಗ್ರಹಿಸುವವನು ಎಂದು ಹೇಳಲಾಗುತ್ತದೆ. ಇತರ ಪ್ರಾಣಿಗಳು ಕೇವಲ ಅಗತ್ಯವಿದ್ದಷ್ಟು ಮಾತ್ರ ಸ್ವೀಕರಿಸುತ್ತವೆ, ತಮಗೆ ಅಗತ್ಯವಿಲ್ಲದ್ದನ್ನು ಅವು ಉಳಿದವುಗಳಿಗೆ ಬಿಟ್ಟು ಹೊರಡುತ್ತವೆ.
ಆರ್ಥರ್ ಶ್ಯೂಪೆನ್ ಹ್ಯೂಯೆರ್ ಹೇಳುವುದು ಸರಿಯಾಗಿಯೇ ಇದೆ: ಐಶ್ವರ್ಯವೆನ್ನುವುದು ಸಮುದ್ರದ ನೀರಿನಂತೆ, ನಾವು ಹೆಚ್ಚು ಕುಡಿದಷ್ಟು, ಬಾಯಾರಿಕೆಯು ಇನ್ನಷ್ಟು ಹೆಚ್ಚಾಗುವುದು ಮತ್ತು ಇದೇ ಸತ್ಯ, ಕೀತರ್ಿಯ ದಾಹಕ್ಕೂ ಸಹ ಅನ್ವಯಿಸುವುದು.


1.4 ನಮ್ಮ ಮೋಹವು ಸಮಸ್ಯೆಗಳನ್ನು ಸೃಷ್ಟಿಸುವುದು

ವಾಸ್ತವವಾಗಿ ನಾವು ಹಲವಾರು ಸಮಸ್ಯೆಗಳಿಂದ ನರಳುತ್ತಿರುವುದು ನಮ್ಮ ಭ್ರಮೆ ಮತ್ತು ಭ್ರಾಂತಿಗಳ ಪರಿಣಾಮದಿಂದಲೇ ಆಗಿದೆ. ಬುದ್ಧ ಭಗವಾನರ ಬುದ್ಧಿವಾದವನ್ನು ಅನುಸರಿಸಿದರೆ ನಾವು ಮಾನವನ ದೌರ್ಬಲ್ಯವನ್ನು ಬೇರುಸಹಿತ ಕಿತ್ತುಹಾಕಬಹುದು. ಯಾವಾಗ ನಮ್ಮಲ್ಲಿ ಮೂಢನಂಬಿಕೆಗಳು ಉದಯಿಸುತ್ತವೋ ಆಗ ನಾವು ನಮ್ಮ ಪ್ರಜ್ಞಾಶೀಲತೆಯನ್ನು ಬಳಸುತ್ತಿಲ್ಲ. ನಾವು ನಮ್ಮ ಮನಸ್ಸನ್ನು ಬಲಿಷ್ಠಗೊಳಿಸಿ ಮತ್ತು ಸ್ವಶ್ರದ್ಧೆಯನ್ನು ವೃದ್ಧಿಗೊಳಿಸಿ ಅವುಗಳಿಂದ ಪಾರಾಗಲೇಬೇಕಾಗಿದೆ. ಆಗ ಮಾತ್ರ ನಾವು ಬಹಳಷ್ಟು ಸಮಸ್ಯೆಗಳನ್ನು ದಾಟಬಹುದು ಮತ್ತು ಬಹಳಷ್ಟು ಸಂಗತಿಗಳಲ್ಲಿ ಕಲ್ಪಿತ ಸಮಸ್ಯೆಗಳು ಸರಳವಾಗಿ ಇನ್ನಿಲ್ಲವಾಗುತ್ತದೆ.
ಕೆಲವೊಂದು ಧರ್ಮಗಳು ಈ ರೀತಿಯ ಹೇಳಿಕೆಗಳನ್ನು ನೀಡಿ ವಾಸ್ತವದಿಂದ ಪರಾರಿಯಾಗುತ್ತದೆ. ಅದೆಂದರೆ ಎಲ್ಲಾ ಒಳ್ಳೆಯ ವಿಷಯಗಳು, ನಮಗೆ ಆಗುವ ಪ್ರತಿ ಒಳಿತಿಗೆ, ಭಾಗ್ಯಕ್ಕೆ ದೇವರೇ ಕಾರಣಕರ್ತನಾಗಿದ್ದಾನೆ ಮತ್ತು ನಮಗೆ ಏನಾದರೂ ಕೆಟ್ಟದಾದರೆ ಅದಕ್ಕೆ ಸೈತಾನನೇ ಕಾರಣವೆಂದು ದೂಷಿಸುತ್ತಾರೆ. ಆದರೆ ಸ್ಪಷ್ಟ ದೃಷ್ಟಿಯ ಬೌದ್ಧರಿಗೆ ಅಂತಹ ನಂಬಿಕೆಗಳಲ್ಲಿ ಯಾವುದೇ ಅರ್ಥವಿಲ್ಲ, ಹುರುಳಿಲ್ಲ ಎಂದು ತಿಳಿದಿರುತ್ತಾರೆ.
ನಮ್ಮಲ್ಲಿ ಬಹಳಷ್ಟು ಜನರು ನಾವೇಕೆ ಅಸುಖಿಗಳು ಮತ್ತು ನಾವೇಕೆ ನಮ್ಮ ಜೀವನದಲ್ಲಿ ತೃಪ್ತರಾಗಿಲ್ಲ ಮತ್ತು ಈ ಸನ್ನಿವೇಶಕ್ಕೆ ಹೊಣೆಗಾರರು ಯಾರು ಎಂಬುದನ್ನು ಅರಿಯಲು ಯತ್ನಿಸುವುದೇ ಇಲ್ಲ. ಜೊತೆಗೆ ಎಲ್ಲಾ ವೈಯಕ್ತಿಕ ಸಮಸ್ಯೆಗಳಿಗೆ ನಾವೇ ನೇರ ಹೊಣೆಗಾರರಾಗಿದ್ದು ಮತ್ತೆ ಇನ್ನಿತರ ಸಾಮಾಜಿಕ ಸಮಸ್ಯೆಗಳಾದಂತಹ ಜನಾಂಗಿಯ, ಸಾಂಪ್ರದಾಯಿಕ, ಧಾಮರ್ಿಕ ಮತ್ತು ಆಥರ್ಿಕ ಸಮಸ್ಯೆಗಳು ಸಹಾ ಮಾನವತೆಯನ್ನು ಬೇರ್ಪಡಿಸುತ್ತವೆ.
ಈ ಬಗೆಯ ಮನುಕುಲದ ಶಿಥಿಲೀಕರಣಕ್ಕೆ ಕಾರಣವೇನೆಂದರೆ ನೈತಿಕತೆಯ ಅವನತಿಯು ಸರ್ವವ್ಯಾಪಿಯಾಗಿ ಸಾಗುತ್ತಿರುವುದು ಮತ್ತು ಕಲುಶಿತ ಮನಸ್ಸಿನಿಂದಾಗಿ ಜನರು ಕೆಳಮಟ್ಟಕ್ಕೆ ಸಾಗುತ್ತಿರುವುದು, ಮಾನವನು ನಿರಂತರ ತಪ್ಪುಗಳನ್ನು ಮಾಡುತ್ತಿದ್ದಾನೆ. ಆತನು ತಪ್ಪಾದ ಗುರಿಗಳನ್ನು ತಲುಪಿದ್ದಾನೆ, ತಪ್ಪಾದ ಹಾದಿಯನ್ನು ಹಿಡಿಯುತ್ತಿದ್ದಾನೆ ಮತ್ತು ತಪ್ಪು ಮೌಲ್ಯಗಳನ್ನು ವೈಭವೀಕರಿಸುತ್ತಿದ್ದಾನೆ. ಇದರಿಂದಾಗಿಯೇ ಆತನು ಹೆಚ್ಚು ದುಃಖವನ್ನು ಮತ್ತು ಅಸುರಕ್ಷತೆಯನ್ನು ಅನುಭವಿಸುತ್ತಿದ್ದಾನೆ. ಅದರಿಂದಾಗಿ ಅಪರಾಧಿ ಮನೋಭಾವನೆಯು ಚಿಂತೆ, ತನ್ನನ್ನೇ ದ್ವೇಷಿಸುವಂತಹುದು, ನಿರಾಶೆ ಇವೆಲ್ಲವೂ ತಡೆಯಿಲ್ಲದೆ ತುತ್ತತುದಿಗೇರಿವೆ. ಆತನು ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದಾನೆ. ಆದರೆ ಆತನು ಪರಿಹಾರವನ್ನು ಹೊರಗಡೆ ಹುಡುಕುತ್ತಿದ್ದಾನೆ. ಆದರೆ ತನ್ನಲ್ಲೇ ತನ್ನ ಆಂತರ್ಯದಲ್ಲೇ ಪ್ರತಿ ಸಮಸ್ಯೆಯ ಮೂಲ ಹಾಗೂ ಪರಿಹಾರವಿದೆ ಎಂದು ಅರ್ಥಮಾಡಿಕೊಂಡಿಲ್ಲ.


1.5 ನಾವು ನಮ್ಮ ಸಮಸ್ಯೆಗಳ ಅಂತಸ್ತನ್ನು (ಮಟ್ಟ) ಅರಿಯಲೇಬೇಕು

ನಮ್ಮ ಸಾಂತ್ವನಕ್ಕೆ ಒಂದು ಮಾರ್ಗವೆಂದರೆ ಸಾಂದಭರ್ಿಕ ಮಾನಸಿಕ ಯಾತನೆ ಮತ್ತು ಅಸುಖಗಳನ್ನು ನಾವು ಪರರೊಂದಿಗೆ ಹೋಲಿಸಿ ದುಃಖದ ಮಟ್ಟವನ್ನು ಅಳೆಯುವುದು, ಏಕೆಂದರೆ ಆಗ ನಾವು ಅದುಃಖಿಗಳಾದ ಜಗತ್ತೇ ನಮ್ಮ ವಿರುದ್ಧವಿದೆ ಎಂದು ಭಾವಿಸುತ್ತೇವೆ. ನಮ್ಮ ಸುತ್ತಲಿನ ಪ್ರತಿಯೊಂದು ಕುಸಿಯುತ್ತಿದೆ. ನಾವೊಬ್ಬರೆ ಇದರಲ್ಲಿ ಸಿಲುಕುತ್ತ ಸಾಗುತ್ತಿದ್ದೇವೆ ಎಂದು ಭಾವಿಸುತ್ತೇವೆ. ಮಾರ್ಗದ ಅಂತ್ಯ ಸಮೀಪಿಸಿತು ಎಂದು ಭಾವಿಸುತ್ತೇವೆ, ಹಾಗಿರುವಾಗಲು ನಾವು ವಿಚಾರಪೂರ್ವಕವಾಗಿ ಚಿಂತನೆ ಮಾಡಲು ಯತ್ನಿಸಿದರೆ ಮತ್ತು ಪಕ್ಷಪಾತವಿಲ್ಲದೆ ಸನ್ನಿವೇಶಕ್ಕೆ ಬೆಲೆ ಕಟ್ಟಿದರೆ ನಾವು ಶುಭವನ್ನು ಕಾಣಬಹುದು. ಆಗ ನಾವು ಪರರಿಗಿಂತ ಎಷ್ಟೋ ಪಟ್ಟು ಚೆನ್ನಾಗಿದ್ದೇವೆ ಎಂದು ತಿಳಿಯುತ್ತೇವೆ. ಹಾಗೆಯೇ ಒಂದು ಪುಟ್ಟ ಪುಸ್ತಕದಲ್ಲಿ ನಮ್ಮ ಜೀವನದಲ್ಲಿ ಸಂಭವಿಸುವ ಒಳ್ಳೆಯ ವಿಷಯಗಳು ಮತ್ತು ಕೆಟ್ಟ ವಿಷಯಗಳನ್ನು ದಾಖಲು ಮಾಡುವುದು ಉತ್ತಮ ಹವ್ಯಾಸವಾಗಿದೆ. ನಂತರ ನಾವು ಈ ಎರಡು ಪಟ್ಟಿಯನ್ನು ತುಲನೆ ಮಾಡಿದಾಗ ಜೀವನವು  ನಮಗೆ ಸದಾ ಪಕ್ಷಪಾತವಾಗಿ ವತರ್ಿಸಿಲ್ಲ ಎಂಬುದು ತಿಳಿಯುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಅನಗತ್ಯವಾಗಿ ನಮ್ಮ ಕಷ್ಟಗಳಿಗೆ ಮತ್ತು ಸಮಸ್ಯೆಗಳಿಗೆ  ನಾವೇ ಗಾಢ ಒತ್ತನ್ನು ನೀಡಿದ್ದೇವೆ ಎಂದು ತಿಳಿಯುತ್ತದೆ. ಹಲವರ ಸ್ಥಿತಿಯು ನಮಗಿಂತ ಕೆಟ್ಟದಾಗಿ ಇದ್ದರೂ ಸಹಾ ನಾವು ಅದನ್ನು ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣುವುದಿಲ್ಲ. ಸಮಸ್ಯೆಗಳು ಸದಾ ಇರುತ್ತವೆ. ಆಗ ಚಿಂತೆಯುಳ್ಳವರಾಗಿ ನಮ್ಮ ಖಿನ್ನತೆ ಮತ್ತು ನೋವುಗಳನ್ನು ಹೆಚ್ಚಿಸುವ ಬದಲು, ಅವನ್ನು ಪರಿಹರಿಸುವ ದೃಢತೆ ತಾಳಬೇಕು.
ನಾವು ಯಾವುದೇ ಸಮಸ್ಯೆಗಳಾಗಲಿ ಅಥವಾ ವಿವಾದಗಳಾಗಲಿ ಎದುರಾದಾಗ ಅವನ್ನು ಸರಿಪಡಿಸುವ ದೃಢನಿಧರ್ಾರವನ್ನು ಮಾಡಲೇಬೇಕು. ನಾವು ಇದಕ್ಕೂ ಕೆಟ್ಟದಾದ ಸನ್ನಿವೇಶಗಳನ್ನು ಈ ಹಿಂದೆಯೇ ಅನುಭವಿಸಿದ್ದೇವೆ ಎಂದು ಅರಿತು ಹೊಸ ವಿವಾದಗಳನ್ನು ಎದುರಿಸುವ ಸಿದ್ಧತೆ ನಡೆಸಬೇಕು. ಅದರಿಂದಲೇ ನಾವು ಚಕ್ರದ ಚಿಹ್ನೆಯನ್ನು ಬಳಸುವೆವು.
ಯಾವಾಗಲೂ ಇದು ಚಲಿಸುವುದು. ಅದೇರೀತಿ ಜೀವನವು ಸಹಾ ನಿರಂತರವಾಗಿ ಚಲಿಸುವುದು, ಯಾವುದೇ ನಿದರ್ಿಷ್ಟ ಸ್ಥಳದಲ್ಲಿ ಹೆಚ್ಚುಕಾಲ ಉಳಿಯಲಾರದು, ಅದೇರೀತಿ ಜೀವನದ ಉಪಚಾರವು ಎಂದಿಗೂ ಸ್ಥಿರವಾಗಿ ನಿಲ್ಲಲಾರದು. ಸದಾ ನೆನಪಿಡಿ ಇದು ಮುಂದೆ ಸಾಗುವುದು (ಗತಿಸುವುದು) ಎಂತಹ ಸನ್ನಿವೇಶವೇ ಬರಲಿ, ಈ ಬಗೆಯ ಮನೋರಚನೆಯಿಂದಾಗಿ, ನಾವು ಕೂಡಲೇ ಸ್ವ-ಶ್ರದ್ಧೆಯನ್ನು ಪಡೆದು, ನಮಗಾಗಿ ಇರುವ ಮತ್ತು ಬರುವ ಎಂತಹುದೇ ಸಮಸ್ಯೆಯಿರಲಿ ಎದುರಿಸಲು ಸಮರ್ಥರಾಗುವೆವು.
ನಮ್ಮ ಸಮಸ್ಯೆಗಳಿಂದ ಹೊರಬರಲು ನಾವು ಯಾವುದೇ ವಿಧಾನವನ್ನು ಅನುಸರಿಸಿದರೂ ಸಹಾ, ಜೀವನದಲ್ಲಿ ಪೂರ್ಣ ತೃಪ್ತಿಪಡೆಯಲು ಅಸಾಧ್ಯವಾಗಿದೆ. ಏಕೆಂದರೆ ನಮ್ಮ ಮನಸ್ಸಿಗೆ ಸ್ವಾರ್ಥ ಕ್ಷೀಣಿಸಲು ಮತ್ತು ತೀವ್ರ ಬಯಕೆಯಿಂದ ಹೊರಬರಲು ಶಿಕ್ಷಣ ನೀಡುವವರೆಗೂ ಅದು ಸಾಧ್ಯವಾಗುವುದಿಲ್ಲ. ಬುದ್ಧ ಭಗವಾನರ ಬೋಧನೆಯಲ್ಲಿ ನಮಗೆ ಮಾನವನ ಸಮಸ್ಯೆಗಳು ಮತ್ತು ಅವುಗಳಿಂದ ಹೊರಬರುವಿಕೆಯ ಸಿಗುತ್ತದೆ. ಬುದ್ಧ ಭಗವಾನರು ಜಗತ್ತು ದುಃಖದಲ್ಲಿದೆ ಎನ್ನುತ್ತಾರೆ. ಇಲ್ಲಿ ಜಗತ್ತು ಎಂದರೆ ಎಲ್ಲಾ ಆಗುಹೋಗುವಿಕೆಗಳು, ನಮ್ಮ ಶರೀರವೂ ಸಹಾ. ಜಗತ್ತೇ ಹೀಗಿರುವಾಗ ಹೇಗೆತಾನೇ ನಾವು ಬದುಕಿರುವವರೆಗೂ ಪೂರ್ಣ ತೃಪ್ತಿ ನಿರೀಕ್ಷಿಸಲು ಸಾಧ್ಯ? ಆದ್ದರಿಂದ ಇದನ್ನು ಅಥರ್ೈಸಿಕೊಂಡು ನಾವು ಅರ್ಥಮಾಡಿಕೊಂಡಂತೆ ಹಲವು ರೀತಿಯ ತೃಪ್ತಿಯನ್ನು ಜೀವನದಲ್ಲಿ ಪಡೆಯಲು ಯತ್ನಿಸಿ, ನಮ್ಮ ಮನದಲ್ಲಿ ಶಾಂತಿಯನ್ನು ಸ್ಥಾಪಿಸಬೇಕು.


1.6 ನೀವೇ ನಿಮ್ಮ ಸ್ವರ್ಗ ಮತ್ತು ನರಕ ನಿಮರ್ಿಸುವವರು

ನೀವು ಈ ಜಗತ್ತಿನಲ್ಲಿ ಸುಖಿಯಾಗಿ ಮತ್ತು ಶಾಂತಿಯಾಗಿ ಜೀವಿಸಲು ಇಚ್ಛಿಸಿದರೆ, ನೀವು ಪರರಿಗೂ ಸಹಾ ಸುಖಿಯಾಗಿ ಮತ್ತು ಶಾಂತಿಯಾಗಿ ಜೀವಿಸಲು ಅವಕಾಶ ನೀಡಿ. ಹಾಗಾದಾಗ ಮಾತ್ರ ಈ ಜಗತ್ತು ಜೀವಿಸಲು ಅರ್ಹವಾಗುತ್ತದೆ. ಹೀಗಲ್ಲದೆ ನೀವು ಈ ಉದಾತ್ತ ತತ್ವಗಳಿಗೆ ಹೊಂದಿಕೊಳ್ಳದಿದ್ದರೆ, ಈ ಜಗತ್ತಿನಲ್ಲಿ ನೀವು ಸುಖವನ್ನಾಗಲಿ ಮತ್ತು ಶಾಂತಿಯನ್ನಾಗಲಿ ನಿರೀಕ್ಷಿಸಲಾರಿಸಿ. ನೀವು ಈ ಸುಖ ಮತ್ತು ಶಾಂತಿಯನ್ನು ಕೇವಲ ಪ್ರಾರ್ಥನೆಯಿಂದಾಗಲಿ ಅಥವಾ ಸ್ವರ್ಗದಿಂದಾಗಲಿ ಪಡೆಯಲಾರಿರಿ.
ನೀವು ಮಾನವತೆಯ ಘನತೆ ಎತ್ತಿಹಿಡಿಯುವಂತಹ ನೈತಿಕ ತತ್ವಗಳ ಅನುಸಾರವಾಗಿ ಜೀವಿಸಿದರೆ ಇಲ್ಲೇ ಈ ಜಗತ್ತಿನಲ್ಲೇ, ಈಗಲೇ ಸ್ವರ್ಗವನ್ನು ನಿಮರ್ಿಸುವಿರಿ. ಅದರಂತೆಯೇ ನೀವು ಇದಕ್ಕೆ ವಿರುದ್ಧವಾಗಿ ನಡೆದು ಮೌಲ್ಯಯುತ ಮಾನವನ ಜೀವನಕ್ಕೆ ಧಿಕ್ಕರಿಸಿದರೆ ಈ ಪೃಥ್ವಿಯಲ್ಲೇ ನರಕಾಗ್ನಿಯನ್ನು ಸೃಷ್ಟಿಸಬಲ್ಲಿರಿ. ಈ ಲೋಕದಲ್ಲಿ ಸಾರ್ವತ್ರಿಕ ಕಮ್ಮ ನಿಯಮಗಳನ್ನು ಅರಿಯದೆ ಜೀವಿಸಿದರೆ ನಾವು ಬಹಳಷ್ಟು ಬಾರಿ ಎಡವುವೆವು. ಪ್ರತಿಯೊಬ್ಬ ಮಾನವನು ಸಹಾ ಅಹಿಂಸಾಯುತವಾಗಿ ಮತ್ತು ಗೌರವಯುತ ಜೀವನವನ್ನು ಇಚ್ಛಿಸಿ ಅದರಂತೆಯೇ ಯತ್ನಿಸಿದರೆ, ಆಗ ಜನರು ನಿಜ ಸ್ವರ್ಗದ ಆಹ್ಲಾದಾನಂದವನ್ನು, ಸಾವಿನ ನಂತರ ಪಡೆಯಲು ಇಚ್ಛಿಸುವುದನ್ನು ಅದಕ್ಕೆ ಮುಂಚೆಯೇ ಪಡೆಯಬಹುದು.
ಶೀಲವಂತಿಕೆಗೆ ಉಡುಗೊರೆಯಾಗಿ ಸ್ವರ್ಗವನ್ನು ಸೃಷ್ಟಿಸುವುದು ಅಥವಾ ಪಾಪಕ್ಕೆ ಶಿಕ್ಷೆಯಾಗಿ ನರಕಕ್ಕೆ ದೂಡುವುದು. ಇಂತಹ ಕಲ್ಪನೆ ಅಗತ್ಯಕ್ಕಿಂತ ಹೆಚ್ಚಿನದೇ ಆಗಿದೆ. ಶೀಲ (ನೈತಿಕತೆ) ಮತ್ತು ಪಾಪ (ದುಶ್ಶೀಲತೆ) ಇವೆರಡು ಈ ಜಗತ್ತಿನ ತಡೆಯಲಾಗದ ಪ್ರತಿಕ್ರಿಯೆಗಳಾಗಿವೆ. ಕರುಣೆಯೊಂದೇ ಸಕಲ ಜೀವಿಗಳಿಗೆ ಸುಗತಿ ನೀಡುವ ಏಕೈಕ ಹಾದಿಯಾಗಿದೆ.
ಸಹನೆಯಿಂದ ಸದಾ ಕೂಡಿದವರಾಗಿ ಮತ್ತು ಪರರ ಉನ್ನತಿ ಮತ್ತು ಸುಖದ ಬಗ್ಗೆ ಅಭಿನಂದನಾ ಆನಂದ, ಸಹಾನುಭೂತಿಯಿಂದ ಕೂಡಿದ್ದು, ನಾವು ಇದೇ ತೇಜೋಮಯ ಅವಿರೋಧವುಳ್ಳಂತಹ ಆದರ್ಶವನ್ನು ಸಮಾಜದ ಒಳಿತಿಗಾಗಿ ಮತ್ತು ದೇಶದ ಉನ್ನತಿಗಾಗಿ ಬಳಸಬಹುದಾಗಿದೆ.
ನಾವು ಇಲ್ಲಿಯತನಕ ಮಾನವ ಪಂದ್ಯಾಟದಲ್ಲಿ ಸಾಗಿದ್ದೇವೆ. ಏಕೆಂದರೆ ಖ್ಯಾತನಾಮರು ನಮಗೆ ಹಾದಿ ತೋರಿಸಿದ್ದಾರೆ. ಶೀಲವಂತಿಕೆಯ ಹಾದಿಯಿಂದ ಮಾತ್ರ ನಿಮಗೆ ನೀವೇ ಮತ್ತು ಪರರಿಗೂ ಸಹಾಯ ಮಾಡಬಹುದಾಗಿದೆ. ಇಂದಿನ ಮಾನವ ಅವನಂತೆ ಕಾಣುತ್ತಿಲ್ಲ; ಅವನೇನಲ್ಲವೋ ಅದಾಗಿದ್ದಾನೆ. ಬ್ರಹ್ಮಾಂಡದಲ್ಲಿ ಈ ಗ್ರಹವು ಹುಚ್ಚರ ಆಶ್ರಮವಾಗಿದೆ. ಇಲ್ಲಿ ಜನರು ಧರ್ಮವನ್ನು, ರಾಜಕೀಯವನ್ನು, ಸಂಪ್ರದಾಯವನ್ನು, ಪದ್ಧತಿಗಳನ್ನು, ಸ್ಪಧರ್ೆಯನ್ನು, ಜೀವನ ವಿಧಾನಗಳನ್ನು ಮುಂದೆ ತರುತ್ತಾರೆ ಮತ್ತು ಪರರನ್ನು ವಿವೇಚಿಸುತ್ತಾರೆ, ಹಿಂಸೆಯನ್ನು ಸೃಷ್ಟಿಸುತ್ತಾರೆ.


1.7 ಜೀವನವು ದುಃಖದಿಂದ ಮುಕ್ತವಾಗಿಲ್ಲ

ನಾವೇನಾದರೂ ಆಳವಾದ ಚಿಂತನೆ ಮಾಡಿದರೆ ಜೀವನವು ನಿಜಕ್ಕೂ ನಿತ್ಯ ದುಃಖಕರ ಎಂದು ಒಪ್ಪುತ್ತೇವೆ. ನಾವು ಪ್ರತಿಕ್ಷಣ ಶಾರೀರಿಕವಾಗಿ, ಭಾವುಕವಾಗಿ ಅಥವಾ ಮಾನಸಿಕವಾಗಿ ದುಃಖಿಸುತ್ತಿದ್ದೇವೆ. ಇಡೀ ಜಗತ್ತಿನಲ್ಲಿ ಶಾರೀರಿಕವಾಗಿ, ಭಾವುಕವಾಗಿ ಅಥವಾ ಮಾನಸಿಕವಾಗಿ ದುಃಖಿಸದ ಏಕೈಕ ವ್ಯಕ್ತಿಯನ್ನು ನೀವು ಎಂದಾದರೂ ಹುಡುಕಿರುವಿರಾ? ಯಾರು ಸಂತತ್ವವನ್ನು ಪ್ರಾಪ್ತಿ ಮಾಡಿರುವರೋ ಅವರು ಸಹ ಶರೀರವಿರುವ ತನಕ ಶಾರೀರಿಕ ನೋವಿನಿಂದ ಮುಕ್ತರಲ್ಲ. ಆದ್ದರಿಂದ ಜೀವನ ಮತ್ತು ದುಃಖ ಬೇರ್ಪಡಿಸಲಾಗದಂತಹದು.
ಯಾರಾದರೂ ಈ ರೀತಿ ಪ್ರಶ್ನಿಸಬಹುದು. ಜಗತ್ತಿನಲ್ಲಿ ಅನಿಶ್ಚಿತ ವಿಷಯವು ಯಾವುದು? ಅದಕ್ಕಿರುವ ನಿಜವಾದ ಉತ್ತರ ಎಂದರೆ ಜೀವನವೇ ಅತಿ ಅನಿಶ್ಚಿತವಾದಂತಹ ವಿಷಯವಾಗಿದೆ ಈ ಜಗತ್ತಿನಲ್ಲಿ ನಾವು ಮಾಡುವ ಪ್ರತಿಯೊಂದೂ ಸಹಾ ದುಃಖದಿಂದ ಮತ್ತು ಮರಣದಿಂದ ತಪ್ಪಿಸಿಕೊಳ್ಳಲು ಅಥವಾ ನುಣುಚಿಕೊಳ್ಳುವ ಪ್ರಯತ್ನವಾಗಿದೆ. ನಾವು ಒಂದು ಕ್ಷಣವನ್ನು ಸಹಾ ಅಲಕ್ಷಿಸಿದರೆ, ನಮ್ಮ ಜೀವನ ಕಳೆದುಕೊಳ್ಳಲು ಅಷ್ಟೇ ಸಾಕು. ನಮ್ಮ ದಿನನಿತ್ಯದ ಚಟುವಟಿಕೆಗಳಾದ ಕೆಲಸ ಮಾಡುವುದು, ತಿನ್ನುವುದು, ಕುಡಿಯುವುದು, ನಿದ್ರಿಸುವುದು ಮತ್ತು ನಡೆಯುವುದು ಇವೆಲ್ಲವೂ ದುಃಖ ಮತ್ತು ಮರಣದಿಂದ ತಡೆಯಲು ನಾವು ಹೊಂದಿಸಿಕೊಂಡಿರುವ ವಿಧಾನಗಳಾಗಿವೆ.
ಆದರೂ ಕೆಲವೊಮ್ಮೆ ಹಲವು ಬಗೆಯ ಕ್ಷಣಿಕ ಪ್ರಾಪಂಚಿಕ ಸುಖಗಳನ್ನು ಅನುಭವಿಸುತ್ತೇವೆ. ಆದರೆ ಅಂತಹ ಆಸೆಗಳನ್ನು ತೃಪ್ತಿಪಡಿಸುತ್ತ, ಇರುವ ಮುಂದಿನ ಕ್ಷಣಗಳೇ, ಸುಖವನ್ನಿತ್ತ ಆ ವಿಷಯಗಳೇ ದುಃಖವಾಗಿ ಪರಿವತರ್ಿತವಾಗುತ್ತದೆ. ಆದ್ದರಿಂದ ನಮಗೆ ಸ್ಪಷ್ಟವಾಗಿ ತಿಳಿಯುವ ವಿಷಯವೇನೆಂದರೆ ಶಾಂತಿ ಮತ್ತು ಸುಖದ ಉದಾತ್ತ ಭಂಡಾರವು ಶ್ರೀಮಂತನ ಬಳಿಯಲಿಲ್ಲ, ಬದಲಾಗಿ ಸರ್ವಸುಖ ತ್ಯಾಗ ಮಾಡಿದವನ ಬಳಿಯಲ್ಲಿದೆ.
ನಮ್ಮ ಜೀವನಕ್ಕೆ ಸಂಬಂಧಪಟ್ಟ ಪ್ರತಿಯೊಂದು ಪರಿವತರ್ಿತ ಆಗುತ್ತದೆ ಮತ್ತು ಅತೃಪ್ತಿಕರವಾಗಿರುತ್ತದೆ, ದುಃಖಕಾರಿಯಾಗಿರುತ್ತದೆ. ಆದ್ದರಿಂದಲೇ ಬುದ್ಧ ಭಗವಾನರು ಹೀಗೆ ಹೇಳಿದ್ದಾರೆ ಎಲ್ಲಿಯವರೆಗೆ ಪ್ರಾಪಂಚಿಕ ಸುಖಗಳಲ್ಲಿ ಅಥವಾ ಶಾಶ್ವತವಾಗಿ ಇರಬೇಕೆನ್ನುವ ಆಸೆಗಳಲ್ಲಿ ತೀವ್ರ ಬಯಕೆ ಇರುವುದೋ ಅಲ್ಲಿಯವರೆಗೆ ಒಬ್ಬನು ದುಃಖದಿಂದ ಪಾರಾಗಲು ಸಾಧ್ಯವಿಲ್ಲ. ಇರುವಿಕೆಗೆ ಆಸೆಯು ಅತಿಮುಖ್ಯವಾದುದು. ಯಾವಾಗ ಇರುವಿಕೆ (ಅಸ್ತಿತ್ವ) ಸಂಭವಿಸುವುದೋ ಆಗ ದುಃಖವನ್ನು ತಡೆಯಲಾಗುವುದಿಲ್ಲ.
ಹಲವಾರು ಜನರು ಶಾಶ್ವತವಾದ ಜೀವನವನ್ನು ಹುಡುಕುತ್ತ ಚಿಂತನೆ ನಡೆಸುತ್ತಿದ್ದಾರೆ.  ಆದರೂ ಹಾಸ್ಯಾಸ್ಪದ ವಿಷಯವೇನೆಂದರೆ ಬಹಳಷ್ಟು ಜನರಿಗೆ ದೀಘರ್ಾಯುಷ್ಯವು ಅತಿ ಬೇಸರದ ಸಂಗತಿಯಾಗಿ ಒಂದು ದಿನವನ್ನು ಮುಂದೆ ಸಾಗಿಸಲು ಗೊತ್ತಾಗುತ್ತಿಲ್ಲ! ಮಾನವನ ದೀಘರ್ಾಯುವಿನ ಬಯಕೆಯ ಬಗ್ಗೆ ಚೈನಾದ ಒಂದು ನಾಣ್ಣುಡಿಯು ಹೀಗಿದೆ: ಮಾನವ ತನಗೆ ತಾನೇ ಮೂರ್ಖನನ್ನಾಗಿಸಿಕೊಳ್ಳುತ್ತಿದ್ದಾನೆ. ಆತನು ದೀಘರ್ಾಯುವಿಗೆ ಪ್ರಾಥರ್ಿಸಿಕೊಳ್ಳುತ್ತಿದ್ದಾನೆ, ಆದರೂ ಮುಪ್ಪಿಗೆ ಹೆದರುತ್ತಿದ್ದಾನೆ.
ಸಹಜವಾಗಿ ಆತನ ಇಚ್ಛೆಯು ಸದಾ ಯುವಕನಾಗಿ ನಿರಂತರ ಜೀವನ ಸುಖಗಳನ್ನು ಅನುಭವಿಸುವುದಾಗಿದೆ. ಬುದ್ಧರ ಪ್ರಕಾರ ಈ ಅಮರರಾಗಿ ಜೀವಿಸುವಿಕೆಯ ತೀವ್ರ ಬಯಕೆಯು ಸ್ವಾರ್ಥದ ಬಯಕೆಗಳಿಗೆ ಮತ್ತು ದುಃಖಗಳಿಗೆ ಕಾರಣವಾಗುತ್ತದೆ. ನೀವೇನಾದರೂ ಈ ರೀತಿ ನಿಮ್ಮನ್ನು ಸಾಂತ್ವನಗೊಳಿಸಲು ಯೋಚಿಸಿರುವಿರಾ? ಮೊದಲು ನಾವು ತರುಣರಾಗೋಣ, ನಂತರ ಮಧ್ಯವಯಸ್ಕರಾಗೋಣ, ನಂತರ ನಾವು ವೃದ್ಧರಾಗೋಣ, ನಂತರ ನಾವು ಅದ್ಭುತತೆಯಿಂದಿರುವೆವು (ಲೇಡಿ ಡಯನ ಕೂಪರ್).
ಯಾವುದೆಲ್ಲಾ ಅಲ್ಪ ಸುಖವನ್ನು ನಾವು ಪಡೆದಿಹೆವೋ, ಅವೆಲ್ಲವೂ ಹಲವು ನಿರಾಶೆ, ಸೋಲು ಮತ್ತು ನಷ್ಟಗಳಿಂದ ಉಂಟಾದುದಾಗಿದೆ. ಹಲವಾರು ಕಷ್ಟಗಳಿಲ್ಲದೆ, ಸಮಸ್ಯೆಗಳಿಲ್ಲದೆ, ಸಂಘರ್ಷಗಳಿಲ್ಲದೆ, ನಿರಾಶೆಗಳಿಲ್ಲದೆ ಸಾವಿರಾರು ಅಕ್ಷೇಮ ಸನ್ನಿವೇಶಗಳಿಲ್ಲದೆ ಮಾನವ ಜೀವನವನ್ನು ಹುಡುಕಲಾರನು. ಹಗಲು-ರಾತ್ರಿ ಮಾನವನು ಈ ಎಲ್ಲಾ ಅಪ್ರಿಯ ಸನ್ನಿವೇಶಗಳಿಂದ ಮುಕ್ತನಾಗಲು ಹೋರಾಡುತ್ತಿದ್ದಾನೆ.
ಯಾವಾಗ ಆತನು ಒಂದು ಸಮಸ್ಯೆಯಿಂದ ಇಚ್ಛಾಪೂರ್ವಕವಾಗಿ ಅಥವಾ ಅನಿಚ್ಚಾಪೂರ್ವಕವಾಗಿ ಪಾರಾಗಲು ನಿರ್ವಹಿಸಿದಾಗ ಆತನು ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಿಕೊಂಡಿರುತ್ತಾನೆ. ಈ ಎಲ್ಲಾ ಸಮಸ್ಯೆಗಳಿಗೆ ಕೊನೆ ಎಂದು ಆಗುವುದು? ನಮ್ಮ ಉಳಿವಿಗಾಗಿ ನಾವು ಅಂತಹ ಕಷ್ಟಗಳನ್ನು ಮತ್ತು ದುಃಖಗಳನ್ನು ಯಾವುದೇ ದೂರುಗಳನ್ನು ಹೇಳದೆಯೇ ಸ್ವೀಕರಿಸುವೆವು. ಬೇರೆ ಯಾವುದೂ ಪಯರ್ಾಯವಿಲ್ಲ, ದುಃಖವು ಅಲ್ಲಿ ಯಾವಾಗಲೂ ಇದೆ! ಆದರೂ ದುಃಖ ಮತ್ತು ಅಸುಖ ತಡೆಯಲಾರದಂತಹುದೇನಲ್ಲ. ಬುದ್ಧ ಭಗವಾನರು ಅದರ ಬಗ್ಗೆ ಹೀಗೆ ಹೇಳುತ್ತಾರೆ ದುಃಖ... ಇದೊಂದು ರೋಗದ ಹಾಗೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಯಾವಾಗ ಚಿತ್ತದ ಪರಿಶುದ್ಧತೆ ಅಥವಾ ಪರಿಪೂರ್ಣತೆ ಪ್ರಾಪ್ತಿಯಾಗುವುದೋ ಆಗ ದುಃಖದಿಂದ ವಿಮುಕ್ತರಾಗಬಹುದು.
ಲಾವೋತ್ಸು ಹೀಗೆ ಹೇಳಿದ್ದಾನೆ: ನಾನು ಶರೀರವಿದ್ದುದರಿಂದಾಗಿ ದುಃಖಿಸಿದೆನು, ನನಗೆ ಶರೀರವಿಲ್ಲದಿದ್ದರೆ ನಾನು ಹೇಗೆ ತಾನೇ ದುಃಖಿಸುತ್ತಿದ್ದೆ?.
ಜಾಕೊವ್ ಬೊಯ್ಹೆಮ್ ಹೀಗೆ ಹೇಳಿದ್ದಾನೆ: ಎಲ್ಲಾ ಪರ್ವತಗಳು ಪುಸ್ತಕಗಳಾದರೂ ಮತ್ತು ಎಲ್ಲಾ ಸರೋವರಗಳು ಶಾಯಿಯಾದರೂ ಮತ್ತು ಎಲ್ಲಾ ಮರಗಳು ಲೇಖನಿಯಾದರೂ ಸಹಾ ಇಡೀ ಜಗತ್ತಿನ ದುಃಖವನ್ನು ಬಣ್ಣಿಸಲು ಸಾಕಾಗುವುದಿಲ್ಲ.
ಯಾವಾಗ ನೀವು ಈ ಜಗತ್ತಿನಲ್ಲಿ ಜನರು ದುಃಖಿಸುವ ವಿಧಾನವನ್ನು ಗಮನಿಸುವಿರೋ, ಆಗ ನೀವು ಪ್ರಾಪಂಚಿಕ ಜೀವನದ ನಿಜಸ್ವರೂಪದ ಸನ್ನಿವೇಶ ಗಮನಿಸುವಿರಿ. ಏಕೆ ಹೀಗೆ ಅವರು ದುಃಖಿಸಬೇಕು? ಮತ್ತು ಅವರ ದುಃಖಗಳ ಕಾರಣಕರ್ತರು ಯಾರು? ಬುದ್ಧರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಸಹಾ ತನ್ನ ದುಃಖಕ್ಕೆ ತಾನೇ ಕಾರಣಕರ್ತ (ಹೊಣೆಗಾರ) ನಾಗಿದ್ದಾನೆ. ಅವರು ಇಂದು ಇಲ್ಲಿ ದುಃಖಿಸುತ್ತಿರುವುದು ಏತಕ್ಕೆಂದರೆ ಅವರ ಇರುವಿಕೆಯ ತೀವ್ರ ಬಯಕೆ (ಭವತನ್ಹಾ) ಹೀಗಾಗಿ ಇರುವಿಕೆಯ ದಾಹದಿಂದ ಹಲವಾರು ಪಾಪಕೃತ್ಯಗಳನ್ನು ಮಾಡುತ್ತಾರೆ. ಇದೇ ದುಃಖದ ಮುಖ್ಯ ಕಾರಣವಾಗಿದೆ. ಬುದ್ಧ ಭಗವಾನರ ಈ ಸತ್ಯವಚನವನ್ನು ನಿಜವೆಂದೆ, ಸತ್ಯವೆಂದೇ ತಿಳಿಯಲು ಹಲವಾರು ತತ್ವಶಾಸ್ತ್ರಜ್ಞರಿಗೆ ಮತ್ತು ಮನಃಶಾಸ್ತ್ರಜ್ಞರಿಗೆ 2500 ವರ್ಷಗಳು ಬೇಕಾದವು. ಒಬ್ಬ ಕವಿಯು ನಮ್ಮ ಜೀವನವನ್ನು ಹೀಗೆ ವಿಶ್ಲೇಷಿಸಿದ್ದಾನೆ:
ಬೆಂಕಿಯತ್ತ ಪತಂಗಗಳು ಹಾರುವವು, ತಿಳಿಯದೆ ಅವುಗಳು ಸಾಯುವವು. ಪುಟ್ಟ ಮೀನುಗಳು ಕಡಿಯುವವು ಗಾಳವನ್ನು, ತಿಳಿಯದೆ ಮುಂಬರುವ ಅಪಾಯವನ್ನು.
ಆದರೆ ಅಪಾಯ ಬಹುಚೆನ್ನಾಗಿ ತಿಳಿದರೂ ಪಾಪಯುತ ಪ್ರಾಪಂಚಿಕ ಸುಖಗಳನ್ನು ತೊರೆಯದೆ ಗಟ್ಟಿಯಾಗಿ ಅಂಟುವೆವು. ಓಹ್! ನಮ್ಮ ಮೂರ್ಖತನ ಅದೆಷ್ಟು ಬೃಹತ್ತಾಗಿದೆ.
ಬುದ್ಧ ಧಮ್ಮವು ನಮಗೆ ಜೀವನವು ಅತಿ ಕ್ಷಣಿಕ, ಅಲ್ಪವೆಂದು ಸೂಚಿಸುತ್ತದೆ ಮತ್ತು ನಾವು ಸ್ಮೃತಿಯಿಂದ ಜಾಗ್ರತೆಯಿಂದ ಮತ್ತು ಎಚ್ಚರಿಕೆಯಿಂದ ನಮ್ಮ ವಿಮುಕ್ತಿಗೆ ಶ್ರಮಿಸಬೇಕು ಎಂದು ತೋರಿಸುತ್ತದೆ.
ಜನರು ಎಂದಿಗೂ ನಿಜವಾಗಿ ಅಥರ್ೈಸಿಕೊಳ್ಳಲಾರರು, ಅವರಿಲ್ಲಿ ಇರುವುದು ಅತಿ ಅಲ್ಪಾವಧಿ ಮಾತ್ರವೇ. ಆದರೆ ಯಾರು ಈ ಸತ್ಯವ ಅರಿತಿಹನೋ ನಿಜಕ್ಕೂ ಆತನು ದುಃಖಗಳನ್ನು ಮತ್ತು ಜಗಳಗಳನ್ನು ದೂರವಿರಿಸುತ್ತಾನೆ (ಥೇರಗಾಥ)


1.8 ಈ ಜಗವು ಒಂದು ರಣರಂಗ

ಇಡೀ ಬ್ರಹ್ಮಾಂಡವೇ ಒಂದು ಅತಿವಿಶಾಲ ರಣರಂಗವಾಗಿದೆ. ಅಸ್ತಿತ್ವವು ನಿರಂತರ ಸಂಘರ್ಷವಲ್ಲದೆ ಬೇರೇನೂ ಅಲ್ಲ. ಅಣುಗಳು ಅಣುಗಳೊಂದಿಗೆ, ಪರಮಾಣುಗಳು ಪರಮಾಣುಗಳೊಂದಿಗೆ, ಎಲೆಕ್ಟ್ರಾನ್ಗಳು ಎಲೆಕ್ಟ್ರಾನ್ಗಳೊಂದಿಗೆ ಮತ್ತು ಭೌತಿಕ ಶರೀರ ವ್ಯವಸ್ಥೆಯು ಸಹಾ ದೊಡ್ಡ ರಣರಂಗವಾಗಿದೆ. ಮನಸ್ಸು ಸಹಾ ಬೃಹತ್ ಯುದ್ಧಭೂಮಿಯಾಗಿದೆ.
ಯಾವ ಮನುಷ್ಯ ತನ್ನಲ್ಲಿಯೇ ಶಾಂತಿಯಿಂದ ಇಲ್ಲವೊ ಆತನು ಜಗತ್ತಿನೊಂದಿಗೂ ಶಾಂತಿಯಿಂದ ಇರಲಾರ. ಬಾಹ್ಯ ಯುದ್ಧಗಳು ಜರುಗುತ್ತಲೇ ಇರುತ್ತವೆ. ಆದರೆ ಜೊತೆಯಲ್ಲಿಯೇ ಅವು ಆಂತರಿಕ ಯುದ್ಧದ ಪ್ರತಿಫಲನ ಎಂಬುದು ಅಡಗಿಯೇ ಇರುವ ವಾಸ್ತವ ಆಗಿದೆ. ಇಂದು ಇಡೀ ಮಾನವತೆಗೆ ಬೇಕಾಗಿರುವ ಪ್ರಾರ್ಥನೆ ಶಾಂತಿಗಾಗಿಯೇ ಆಗಿದೆ. ಆದರೆ ಎಲ್ಲಿಯವರೆಗೆ ಮಾನವನ ಅಂತರಂಗದ ಘರ್ಷಣೆಗಳು ನಿಲ್ಲಲಾರವೋ ಅಲ್ಲಿಯವರೆಗೆ ಯುದ್ಧಭರಿತ ಜಗತ್ತಿಗೆ ಶಾಂತಿಯಿಲ್ಲ. ಫುಟ್ಬಾಲ್ ಆಟವನ್ನು ವೀಕ್ಷಿಸುತ್ತಿದ್ದ ಮಗುವೊಂದು ತಾಯಿಗೆ ಹೇಳಿದ್ದು ಹೀಗೆ: ಅಮ್ಮ ಈ ಜನರು ಒಂದು ಚೆಂಡಿಗಾಗಿ ಏಕೆ ಹೀಗೆ ಕಚ್ಚಾಡುತ್ತಿದ್ದಾರೆ, ಅವರಿಗೆಲ್ಲರಿಗೂ ಒಂದೊಂದು ಚೆಂಡು ನೀಡಿದರೆ ಅವರು ಹೀಗೆ ಮಾಡುವುದನ್ನು ನಿಲ್ಲಿಸುತ್ತಾರಲ್ಲ.
ಬುದ್ಧರ ನೋಟದಲ್ಲಿ ಜೀವಿಗಳು ಕಂಪಿಸುತ್ತಿದ್ದಾರೆ. ಹೇಗೆಂದರೆ ಹೊಳೆಯಲ್ಲಿದ್ದ ಮೀನುಗಳು, ಹೊಳೆ ಒಣಗಿದ ಮೇಲೆ ಒದ್ದಾಡುವಂತೆ ಜೀವಿಗಳ ಸ್ಥಿತಿಯಿದೆ. ತೀವ್ರದಾಹದ ಹಿಡಿತದಲ್ಲಿ ಇಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗೆ ಓಡುತ್ತ ಮೊಲದಂತೆ ಬಲೆಗೆ ಬೀಳುತ್ತವೆ. ಪ್ರತಿಯೊಂದರ ವಿರುದ್ಧ ಪ್ರತಿಯೊಂದು ಘರ್ಷಣೆಗೆ ಇಳಿದಿರುವುದನ್ನು ಅವರು ಕಂಡರು. ದುರ್ಬಲರನ್ನು ಸುಲಿಗೆ ಮಾಡುವ ಅಥವಾ ತಿನ್ನುವ ಪ್ರವೃತ್ತಿಯನ್ನು ಇಂತಹ ಪ್ರಜ್ಞಾಹೀನ ಸರಣಿಯನ್ನು ಜೀವಿಗಳಲ್ಲಿ ಅವರು ಕಂಡರು.
ನಾವು ಜಗತ್ತಿನ ಇತಿಹಾಸವನ್ನು ವೀಕ್ಷಿಸಿದಾಗ ನಮಗೆ ಕಾಣುವುದು ಏನು? ಜನಾಂಗಿಯ ಮತ್ತು ವರ್ಣ ಭೇದಭಾವ, ಧಾಮರ್ಿಕ ಮತಾಂಧತೆ, ಅಧಿಕಾರ ದಾಹ ಮತ್ತು ಐಶ್ವರ್ಯ ಲೋಭ ಇವೆಲ್ಲಾ ಈ ಜಗತ್ತಿನಲ್ಲಿ ಅಪಾರ ದುಃಖವನ್ನು, ಶೋಕವನ್ನು, ದುರಂತಗಳನ್ನು ನೀಡಿರುವುದನ್ನು ನಾವು ಕಾಣಬಹುದು. ಅವುಗಳೆಲ್ಲಾ ಮಾನವರಿಗೆ ಭಾರಿ ತೆರಿಗೆಗಳನ್ನು ಹಾಕಿ ಕ್ರೂರವಾದ ರೀತಿಯಲ್ಲಿ ನಡೆದುಕೊಂಡರು. ಇಂತಹ ಸಂಗತಿಗಳು ಎಂದಿಗೂ ಜಗತ್ತಿನ ಏಳಿಗೆಗೆ ಸಹಕಾರಿಯಾಗಿರಲಿಲ್ಲ. ಯಾವ ಜನರು ಅಧಿಕಾರದ ಮತ್ತು ಐಶ್ವರ್ಯದ ಲೋಭಿಗಳಾಗಿದ್ದರೊ ಅವರೆಲ್ಲರೂ ಲೋಭ, ಮತ್ತದರ ಮತ್ತಿನಲ್ಲಿ ಮುಳುಗಿ ಅನೇಕಾನೇಕ ಸಮಸ್ಯೆಗಳನ್ನು ಸೃಷ್ಟಿಸಿದ್ದಲ್ಲದೆ, ತಮ್ಮ ಈ ಕಾರ್ಯಗಳೆಲ್ಲಾ ಧರ್ಮಕ್ಕಾಗಿ, ಶಾಂತಿಗಾಗಿ ಮತ್ತು ನ್ಯಾಯಕ್ಕಾಗಿ ಎಂದು ಪ್ರಜ್ಞಾಹೀನ ಮಾತುಗಳನ್ನು ಆಡಿ ಸಮಥರ್ಿಸಿಕೊಂಡರು. ಜನರು ಸಹಾ ಅದನ್ನೇ ನಂಬಿದರು. ನಾವೆಲ್ಲರೂ ಇಂದು ನಂಬಿಕೆ ಗಳಿಕೆಯ ಜಗತ್ತಿನಲ್ಲಿದ್ದೇವೆ. ಅದು ಶಾರೀರಿಕವಾಗಿ ಐಕ್ಯತೆಯಿಂದ ಕಾಣುತ್ತಿದ್ದರೂ, ಮಾನಸಿಕವಾಗಿ ವಿಭಜಿತವಾಗಿದೆ ಮತ್ತು ಹಾಗೆಯೇ ಮಾನಸಿಕವಾಗಿ ಒಂದಾದರೂ ಶಾರೀರಿಕವಾಗಿ ಅನೈಕ್ಯತೆಯಿಂದಿದ್ದೇವೆ. ಈ ಮುಂದಿನ ಹೇಳಿಕೆಯು ನಮ್ಮ ಜೀವನದಲ್ಲಿ ಹೇಗೆ ಬದಲಾವಣೆ ಹೊಂದುತ್ತವೆ ಎಂದು ಸೂಚಿಸುತ್ತದೆ.
ನಾವು ಕನಸು ಕಾಣುತಿಹೆವು, ಕಾರ್ಯ ಮಾಡುತಿಹೆವು, ಜೀವಿಸುತಿಹೆವು. ಪ್ರತಿಯೊಬ್ಬರು ತಮ್ಮ ಅಲ್ಪ ಯೋಜನೆ ಹೊಂದಿಹೆವು. ಕೆಲವೊಮ್ಮೆ ನಗುವೆವು, ಕೆಲವೊಮ್ಮೆ ಅಳುವೆವು. ಹೀಗೆ ದಿನ ಸಾಗುತಿಹುದು.


1.9 ಮಾನವನೇ ಕಾರಣಕರ್ತ (ಹೊಣೆಗಾರ)

ಜನರು ಯಾವಾಗಲೂ ಜಗತ್ತಿನ ಸನ್ನಿವೇಶಗಳ ಅನಿಶ್ಚಿತತೆಯ ಬಗ್ಗೆ ಮಾತನಾಡು ತ್ತಿರುತ್ತಾರೆ. ಆದರೆ ಚಾಕಚಕ್ಯತೆಯುಳ್ಳ ಮಾನವ ಎಂದು ಕರೆಸಿಕೊಳ್ಳುವ ಅವನಲ್ಲದೆ ಬೇರೆ ಯಾರುತಾನೆ ಈ ದೌಭರ್ಾಗ್ಯಯುತ ಸನ್ನಿವೇಶಕ್ಕೆ ಕಾರಣನಾಗುತ್ತಾನೆ? ಮಾನವ ಹೀಗೆ ಅಸಂಸ್ಕೃತದ ರೀತಿ ವತರ್ಿಸಿದರೆ, ನಾವು ಹೇಗೆತಾನೆ ಉತ್ತಮ ಮತ್ತು ಶಾಂತಿಯುತ ಜಗತ್ತಿನ ಬಗ್ಗೆ ನಿರೀಕ್ಷಿಸಬಹುದು? ಇಂತಹ ಅನಿಶ್ಚಿತತೆಯ ಜಗತ್ತಿನಲ್ಲಿ ನಾವು ಹೇಗೆತಾನೆ ಆನಂದಿಸಬಹುದು? ವಿಜ್ಞಾನಿಗಳು ಸಹಾ ತಮ್ಮ ಭೌತಿಕ ಅಗತ್ಯಗಳಿಗೆ, ಪ್ರಕೃತಿಯನ್ನು ಜಯಿಸಲು ಹೊರಟಿಹರು.
ಧಮ್ಮದ ತತ್ವಜ್ಞಾನಿಗಳು ಸೌಹಾರ್ದತೆಯಿಂದ, ಚಿತ್ತಶಾಂತಿಯಿಂದ ಮತ್ತು ಪರಮಾರ್ಥದ ಉನ್ನತಿಯಲ್ಲಿ ಜೀವಿಸಲು ಇಚ್ಛಿಸುತ್ತಾರೆ. ನೀವು ನಿಮ್ಮ ಇಚ್ಛೆಯಂತೆ ಪ್ರಾಪಂಚಿಕ ಸ್ಥಿತಿಗಳನ್ನು ಬದಲಾಯಿಸಲಾರಿರಿ. ಆದರೆ ನಿಮ್ಮ ಸುಖಕ್ಕಾಗಿ, ನಿಮ್ಮ ಮನಸ್ಸನ್ನು ಬದಲಿಸಿ, ಸಂತೃಪ್ತಿಯನ್ನು ಹೆಚ್ಚಿಸಬಲ್ಲಿರಿ. ಯಾವ ಮನುಷ್ಯ ಕೇವಲ ಪ್ರಾಪಂಚಿಕ ಸುಖಗಳನ್ನು ಹುಡುಕುವನೋ ಆತನು ಉನ್ನತವಾದ ಜ್ಞಾನವನ್ನು ಹೊಂದಲಾರನು. ಆದರೆ ಅದನ್ನು ನಿರಂತರ ಅನ್ವೇಷಣೆಯ ಹೊರತು ಹುಡುಕಲಾರರು.
ಭೌತಿಕತೆಯು ಮಾನವನನ್ನು ಪಶುವಿನ ಸ್ಥಿತಿಗೆ ಕರೆದೊಯ್ಯುತ್ತದೆ. ಆದರೆ ಧಮ್ಮವು ಆತನನ್ನು ದಿವ್ಯ ಅಥವಾ ಉದಾತ್ತ ಸ್ಥಿತಿಗೆ ಏರಿಸುತ್ತದೆ. ಭೌತಿಕತೆಯ ಸಾಮ್ರಾಜ್ಯದಲ್ಲಿ ಮಾನವ ಇಂದ್ರೀಯಗಳ ಗುಲಾಮನಾಗುತ್ತಾನೆ. ಸ್ವಾಭಾವಿಕವಾಗಿ ಬಹಳಷ್ಟು ಜನರು, ಜೀವನದ ವಾಸ್ತವಿಕತೆ ಎದುರಿಸಲು ಇಷ್ಟಪಡುವುದಿಲ್ಲ. ಅವರು ಯತಾರ್ಥದ ನೆರಳಿನಲ್ಲಿ, ಕಲ್ಪನೆಯಲ್ಲಿ, ಕನಸುಗಳಲ್ಲಿ, ಮಿಥ್ಯದ ರಕ್ಷಣೆಯಲ್ಲೇ ನಿದ್ರಿಸಲು ಇಷ್ಟಪಡುತ್ತಾರೆ. ಸ್ವಾಭಾವಿಕವಾಗಿ ಜನರು ದೇವರು ರೋಗಮುಕ್ತಗೊಳಿಸಿದನೆಂದು ನಂಬುತ್ತಾರೆ. ಆದರೆ ವೈದ್ಯರು ಔಷಧದ ಚೀಟಿಗಳನ್ನು ಕಳುಹಿಸುತ್ತಾರೆ.
ಪ್ರಾಪಂಚಿಕತೆಯ ಬಲ (ಅಧಿಕಾರ)ಗಳ ಮತ್ತು ಪ್ರಾಪಂಚಿಕತೆಯ ಸುಖಗಳ ಬಗ್ಗೆ ಬುದ್ಧರ ಅಭಿಪ್ರಾಯದಲ್ಲಿ ಈ ರೀತಿ ವಿವರಿಸಬಹುದು: ಇಡೀ ಪೃಥ್ವಿಯ ಸಾರ್ವಭೌಮತ್ವಕ್ಕಿಂತಲೂ ಸೋತಾಪತ್ತಿಯ ಫಲವು ಶ್ರೇಷ್ಠವಾದುದು ಹಾಗು ಉತ್ತಮವಾದುದು.
ಅಂದರೆ ಸಂತತ್ವ ಅಥವಾ ಪರಿಶುದ್ಧತೆಯ ಪ್ರಥಮ ಹಂತವು ಶ್ರೇಷ್ಠವಾದುದು. ಕೇವಲ ತನ್ನ ಕಾಲವನ್ನು ಭೌತಿಕ ಉನ್ನತಿಗೆ ಬಳಸುತ್ತ, ತನ್ನ ಆಸೆಗಳ (ಇಂದ್ರೀಯ ಸುಖಗಳು) ಫಲಿಸಲು ಶ್ರಮಿಸುವುದರಿಂದ ಮಾನವ ಜೀವನದ ದುಃಖಗಳಿಂದ ಪಾರಾಗಲು ಸಾಧ್ಯವಿಲ್ಲ. ಬುದ್ಧರ ಪ್ರಕಾರ ಈ ಜಗತ್ತು ಘರ್ಷಣೆಯಿಂದ, ತಿಕ್ಕಾಟಗಳಿಂದ, ಅತೃಪ್ತಿಯಿಂದ ಮತ್ತು ಅನಿತ್ಯದಿಂದ ತುಂಬಿದೆ ಮತ್ತು ಅವರು ಹೇಳುವುದೇನೆಂದರೆ ಪ್ರಾಪಂಚಿಕ ಲಾಭದ ಹಾದಿಯೇ ಒಂದು, ಮತ್ತು ಮುಕ್ತನಾಗುವ ಮಾರ್ಗವೇ ಇನ್ನೊಂದು.


1.10 ಮಾನವ ದೌರ್ಬಲ್ಯಗಳು

ಮಾನವ ದೌರ್ಬಲ್ಯಗಳಾದ ಅಹಂಕಾರ, ಲೋಭ, ಮತ್ಸರ, ದ್ವೇಷ ಮತ್ತು ಸೇಡು ಇತ್ಯಾದಿಗಳು ಇವೆಲ್ಲವೂ ಸ್ಮರಣಾತೀತ ಕಾಲದಿಂದಲೂ ಬಳಕೆಯಲ್ಲಿದೆ. ಇಂದಿಗೂ ಸಹಾ ಬದಲಾಗದೆ ಹಾಗೇ ಉಳಿದಿವೆ. ಈ ಸರ್ವಕಾಲಿಕ ಸಮಸ್ಯೆಗಳು ಮಾನವನನ್ನು ಆಕ್ರಮಿಸುವುದಕ್ಕೆ ಕಾರಣವೇನೆಂದರೆ, ಆತನು ತನ್ನ ಭಾವೋದ್ರೇಕವಾದ ದ್ವೇಷವನ್ನು ನಿಗ್ರಹಿಸಿ ಅದರ ಸ್ಥಾನದಲ್ಲಿ ಮೈತ್ರಿಯನ್ನು ಮತ್ತು ಕರುಣೆಯನ್ನು ಸ್ಥಾಪಿಸಲು ಅಸಮರ್ಥನಾಗಿರುವುದೇ ಆಗಿದೆ. ಪ್ರಾಯೋಗಿಕವಾಗಿ ನಮ್ಮ ಜೀವನದ ಪ್ರತಿಯೊಂದು ರಂಗದಲ್ಲೂ ಅದು ಕೌಟುಂಬಿಕವಾಗಿರಲಿ, ಸಾಮಾಜಿಕವಾಗಿರಲಿ, ಸಾಮೂಹಿಕವಾಗಿರಲಿ, ರಾಷ್ಟ್ರೀಯವಾಗಿರಲಿ, ಅಂತರರಾಷ್ಟ್ರೀಯವಾಗಿರಲಿ ಎಲ್ಲೆಲ್ಲೂ ನಾವು ಕುರೂಪಯುತ ಪದವಾದ ದ್ವೇಷವನ್ನೇ ಕಾಣುವೆವು. ಅದರೊಂದಿಗೆಯೇ ವ್ಯವಹರಿಸುವೆವು. ತಂದೆಯು ಮಗನ ಅವಿಧೇಯತನವನ್ನು ದ್ವೇಷಿಸುತ್ತಾನೆ. ಮಗುವು ಅಗತ್ಯತೆ ತೀರಿಸದಿದ್ದಾಗ ಪೋಷಕರನ್ನು ದ್ವೇಷಿಸುತ್ತಾನೆ. ಸಾಮಾಜಿಕವಾಗಿಯು ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ದ್ವೇಷಿಸುತ್ತಾನೆ. ಏಕೆಂದರೆ ನ್ಯಾಯಕ್ಕಾಗಿ ಅಥವಾ ತಪ್ಪಾಗಿ ನಡೆದುಕೊಂಡಾಗ, ತನ್ನ ಆಸೆಗೆ ಅಡ್ಡಿಯಾದಾಗ ತನ್ನ ಭಾವನೆಗಳಿಗೆ ವ್ಯತಿರಿಕ್ತವಾದಾಗ ದ್ವೇಷಿಸುತ್ತಾನೆ. ಅಷ್ಟೇ ಅಲ್ಲ, ರಾಷ್ಟ್ರೀಯ ಮಟ್ಟದಲ್ಲೂ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಒಂದು ದೇಶ ಮತ್ತೊಂದು ದೇಶವನ್ನು ದ್ವೇಷಿಸುತ್ತದೆ. ಏಕೆಂದರೆ ಕೆಲವು ವಿಷಯಗಳಲ್ಲಿ ವ್ಯತಿರಿಕ್ತವಾಗಿ ವರ್ತನೆ ಮಾಡಿದಾಗ ಹೀಗೆಯೇ ಆಗುತ್ತದೆ.


1.11 ನಾವು ಹೇಗೆ ಬಾಡಿಗೆಯನ್ನು ನೀಡುತ್ತಿದ್ದೇವೆ

ನೀವು ನಿಮ್ಮ ದೈನಂದಿನ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಲೇಬೇಕು. ಸಮಸ್ಯೆಗಳಿಲ್ಲದೇ ಅಸ್ತಿತ್ವವೇ ಇಲ್ಲ. ಪ್ರತಿಯೊಬ್ಬರಿಗೂ ಸಮಸ್ಯೆಗಳಿವೆ, ಅದೇ ವಾಸ್ತವ. ನಾವು ಇಂದ್ರೀಯ ಭೋಗವನ್ನು ಅನುಭವಿಸಿ ಆನಂದಿಸಲು ಪ್ರಬಲವಾದ ಬಯಕೆಯಿಡುತ್ತೇವೆ. ಆದರೆ ಅದೇವೇಳೆ ಈ ಕ್ಷಣಿಕವಾದ ಸುಖಗಳಿಗೆ, ತೃಪ್ತಿಗೆ ನಾವು ಬಹಳಷ್ಟೇ ಬೆಲೆ ತೆತ್ತಿದ್ದೇವೆ. ಅದೆಂದರೆ ಶಾರೀರಿಕ ನೋವು ಮತ್ತು ಮಾನಸಿಕ ಒತ್ತಡ ಇತ್ಯಾದಿ. ಆದರೂ ಈ ಇಂದ್ರೀಯ ಸುಖಗಳು ಶಾಶ್ವತವಾಗಿ ನಮ್ಮಲ್ಲಿ ಉಳಿಯಲಾರವು. ಅವು ಬೇಗನೆ ಅಥವಾ ನಿಧಾನವಾಗಿಯೋ ನಮ್ಮಿಂದ ವಿಯೋಗ ಅಥವಾ ದೂರವಾಗಿ ಬಿಡುತ್ತದೆ. ಇದು ಹೇಗಿದೆ ಎಂದರೆ ಮನೆಯ ವಾಸಕ್ಕಾಗಿ ಬಾಡಿಗೆ ನೀಡುವಂತೆ, ನಾವು ಶರೀರಕ್ಕೆ ನೀಡುತ್ತಿದ್ದೇವೆ.
ಯೋಚಿಸಿ! ಶಾರೀರಿಕ ನೋವು ಮತ್ತು ಮಾನಸಿಕ ಯಾತನೆಯನ್ನು ನಾವು ಬಾಡಿಗೆಯಂತೆ ನೀಡುತ್ತಿದ್ದೇವೆ. ಅದು ಕ್ಷಣಿಕತೆಯ ಆಧಾರದ ಮೇಲೆ ಇಲ್ಲಿ ದೇಹವೇ ಬಾಡಿಗೆ ಮನೆಯಾಗಿದೆ.
ನಮ್ಮ ದೇಹದ ಮೂಲಕ ನಾವು ಇಂದ್ರೀಯ ಭೋಗವನ್ನು ಅನುಭವಿಸುತ್ತಿದ್ದೇವೆ ಮತ್ತು ಅದಕ್ಕಾಗಿ ನಾವು ಬೆಲೆ ತೆರಲೇಬೇಕು. ಈ ಜಗತ್ತಿನಲ್ಲಿ ನಿಮಗೆ ಉಚಿತವಾಗಿ ಯಾವುದೂ ಸಿಗುವುದಿಲ್ಲ. ಆದ್ದರಿಂದಾಗಿ ನಾವು ಗಂಭೀರವಾಗಿ ಶಾರೀರಿಕ ನೋವು ಮತ್ತು ಮಾನಸಿಕ ಯಾತನೆಗಳನ್ನು ತೆಗೆದುಹಾಕಲು ಚಿಂತಿಸಿರುವುದಾದರೆ, ನಾವು ಇಂದ್ರೀಯ ಸುಖಗಳಲ್ಲಿ ಹರಿಯುವ ಪ್ರಬಲವಾದ ತೀವ್ರ ಬಯಕೆಯನ್ನು ನಿಗ್ರಹಿಸಬೇಕು, ಧಮಿಸಬೇಕು. ಎಲ್ಲಿಯವರೆಗೆ ನಾವು ಈ ತೀವ್ರ ಬಯಕೆಗಳಿಗೆ ವಶವಾಗಿರುವೆವೋ ಅಲ್ಲಿಯವರೆಗೆ ನಾವು ನೋವು ಯಾತನೆಗಳ ಪರಿಣಾಮವನ್ನು ಪಡೆಯಲೇಬೇಕಾಗಿದೆ. ಹೀಗಾಗಿ ನಾವು ಬಯಕೆಗಳ ದಾಸರಾಗಿದ್ದೇವೆ.
ನಾವು ಶಾರೀರಿಕ ನೋವುಗಳನ್ನು ಮತ್ತು ಮಾನಸಿಕ ಶೋಕಗಳನ್ನು ಪಡೆಯುವುದೋ ಅಥವಾ ಪರಮಾರ್ಥದ ಪರಮಸುಖವನ್ನು ಪಡೆಯುವುದೋ ಅದು ನಮ್ಮ ಆಯ್ಕೆಯಲ್ಲಿದೆ. ನಾವು ಎರಡನ್ನೂ ಪೂರ್ಣವಾಗಿ ಹೊಂದಲಾರೆವು. ಬುದ್ಧ ಭಗವಾನರ ಮಧ್ಯಮ ಮಾರ್ಗವು ನಮ್ಮ ಮಿತವಾಗಿ ಸುಖಗಳನ್ನು ಪಡೆಯಲು ಅವಕಾಶವಿತ್ತರೂ ಅದೇವೇಳೆ ನಾವು ನಮ್ಮ ಪ್ರಜ್ಞಾಶೀಲತೆ ಬೆಳೆಸಬೇಕಾಗುತ್ತದೆ. ಏಕೆಂದರೆ ಮುಂದೆ ಅವನ್ನು ತ್ಯಜಿಸುವುದಕ್ಕಾಗಿ ಸುಶಿಕ್ಷಣ ಪಡೆಯಬೇಕಾಗುತ್ತದೆ. ನಾವು ಇಂದ್ರೀಯಗಳ ಪರಿಣಾಮವಾಗಿ ಉಂಟಾದ ಕೆಲವು ಸಮಸ್ಯೆಗಳಿಗೆ ಬಾಹ್ಯದ ಮೂಲಗಳಿಗೆ ನಿಂದಿಸಬಾರದು. ಆ ರೀತಿ ಯೋಚಿಸಬಾರದು.
ಜನರು ಚಿಂತೆ, ದುಃಖದ ಬೆಲೆಯನ್ನು ನೀಡದೆ ಪ್ರಾಪಂಚಿಕ ಸುಖವನ್ನು ಅನುಭವಿಸಲಾರರು. ಅವರು ಪ್ರಾಪಂಚಿಕ ಜೀವನದಲ್ಲಿ ಆನಂದಿಸಲು ಸಿದ್ಧರಾದರೆ, ಅವುಗಳ ಪರಿಣಾಮಗಳನ್ನೂ ಸ್ವೀಕರಿಸಿ, ಎದುರಿಸಲು ಸಿದ್ಧರಾಗಬೇಕು. ಯಾರಿಗೆ ಈ ಪರಿಣಾಮಗಳ ಅರಿವಿರುವುದಿಲ್ಲವೋ ಅವರು ಆಳವಾಗಿ ನಿರಾಶರಾಗುತ್ತಾರೆ. ರೋಗದಿಂದ ಮತ್ತು ಮುಪ್ಪಿನಿಂದ ಬದಲಾದ ಸನ್ನಿವೇಶಗಳು ಈ ಸುಖಗಳನ್ನೇ ರದ್ದುಮಾಡುತ್ತವೆ. ಯಾವ ಜನರು ಈ ಸಮಸ್ಯೆಗಳನ್ನು ಎದುರಿಸಲು ಸಿದ್ಧರಿಲ್ಲವೋ ಅವರು ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಾರೆ. ಅಥವಾ ಮಾನಸಿಕ ಆಸ್ಪತ್ರೆಗಳಿಗೆ ಹುಚ್ಚರಾಗಿ ದಾಖಲಾಗುತ್ತಾರೆ. ಜೀವನದಲ್ಲಿ ಬರುವ ಇವೆಲ್ಲಾ ವಾಸ್ತವ ಸತ್ಯಗಳನ್ನು ಇರುವಂತೆ ಹೇಳಿದುದಕ್ಕಾಗಿ ಬುದ್ಧ ಧಮ್ಮಕ್ಕೆ ನಾವು ನಿರಾಶವಾದದ ಧರ್ಮ ಎಂದು ಪಟ್ಟಿ ನೀಡಬಾರದು! ಬುದ್ಧಭಗವಾನರ ಸರ್ವ ಬೋಧನೆಯು ಸಹಾ ನಮಗೆ ಮಾನವನ ಸ್ವಭಾವ ಮತ್ತು ಸುತ್ತಲಿನ ಜಗತ್ತಿನ ವಾಸ್ತವ ಅರಿತು ಹೇಗೆ ಜೀವನವನ್ನು ಅರ್ಥಪೂರ್ಣವಾಗಿ, ಸುಖಿಯಾಗಿ, ಜೀವಿಸಬೇಕು ಎಂದು ಕಲಿಸುತ್ತದೆ.


1.12 ಸೋಲುತ್ತಿರುವ ಯುದ್ಧ

ವಿಜ್ಞಾನದ ಮತ್ತು ತಂತ್ರಜ್ಞಾನದ ಮುನ್ನಡೆಯಿಂದಾಗಿ ಮಾನವ ಇಂದು ಜಗತ್ತನ್ನು ತನ್ನ ಹಿಡಿತದಲ್ಲಿ ತೆಗೆದುಕೊಂಡಿದ್ದಾನೆ. ಆತನು ಪ್ರಕೃತಿಯ ರಹಸ್ಯಗಳನ್ನು ಅನ್ವೇಷಿಸಿ ಮತ್ತು ಪ್ರಭುತ್ವ ಪಡೆದು ಈ ಪೃಥ್ವಿಯನ್ನೇ ಸ್ವರ್ಗವಾಗಿ ಪರಿವತರ್ಿಸಬಹುದೆಂದು ನಂಬಿದ್ದಾನೆ. ಈ ಬಗೆಯಲ್ಲಿ ಆತನು ಪೃಥ್ವಿ, ಸಾಗರ, ವಾಯು ಮತ್ತು ಆಕಾಶದಲ್ಲಿ ತನ್ನ ಅಧಿಪತ್ಯದ ತೀರಿಸಲಾಗದ ದಾಹದಿಂದಾಗಿ ಆತನು ಹೊಸ ಭೂಭಾಗಗಳನ್ನು ನಿರಂತರ ಅನ್ವೇಷಿಸುತ್ತ ತನ್ನ ಆಂತರ್ಯದ ಜಗತ್ತನ್ನು ಅರಿಯಲು ಅಲಕ್ಷಿಸಿದ್ದಾನೆ. ಬಾಹ್ಯ ಜಗತ್ತಿನ ಎಲ್ಲಾ ಸಂಶೋಧನೆಗಳು ಆತನಿಗೆ ಶಾಂತಿ ಮತ್ತು ಸುಖದ ಕಡೆಗೆ ಹತ್ತಿರ ಕರೆದೊಯ್ಯುವುದಿಲ್ಲ. ಇದರಿಂದಾಗಿ ಆತನ ಮನಸ್ಸು ಇನ್ನಷ್ಟು ಒತ್ತಡಕ್ಕೆ ಒಳಗಾಗಿ ಅತೃಪ್ತನಾಗಲು ಮಾತ್ರ ಸಹಾಯಕವಾಗುತ್ತದೆ.
ಶಾಂತಿ ಸುಖವು ದೊರಕಬೇಕಾದರೆ ನಾವು ಶ್ರಮಿಸಬೇಕಾಗುತ್ತದೆ. ಆದರೆ ಹಾಗೆ ಶ್ರಮಿಸಬೇಕಾದರೆ ಮೊದಲು ಸತ್ಯವನ್ನು ಅವು ಇರುವ ಹಾಗೆಯೇ ಯಥಾಭೂತವಾಗಿ ನೋಡುವುದನ್ನು ಕಲಿಯಬೇಕು. ಜೀವಿಸುವ ಕಲೆಯು ಮಹಾಯದ್ಧದಲ್ಲಿ ಹೋರಾಡುವ ಹಾಗೆ, ಅದು ಹೇಗೆ ಕಾಣುವುದೆಂದರೆ ದುಃಖದಿಂದ ಪಾರಾಗಲು ಸುಖವನ್ನು ಪಡೆಯಲು ಹೋಗಿ ಯುದ್ಧದಿಂದ ಸೋಲುವ ರೀತಿ. ಏಕೆಂದರೆ ಎಲ್ಲಾ ಜೀವಿಗಳು ಕೊನೆಗೆ ಅತೃಪ್ತರಾಗಿ ದುಃಖ ಪಡೆದು ಸಾಯುವವು. ಈ ಹೋರಾಟದ ಪ್ರಕ್ರಿಯೆಯಲ್ಲಿ ಸುಖವೆಂದು ತಪ್ಪಾಗಿ ಭ್ರಮಿಸಿ, ಸ್ವಲ್ಪ ಭಾವಾವೇಶದ ತೃಪ್ತಿ ತಾಳುವೆವು. ಬಹಳಷ್ಟು ಜನರು ಸುಖಕ್ಕಾಗಿ ತಪ್ಪು ಮಾಡುವರು, ಆದರೆ ಯಾವಾಗ ಮನಸ್ಸು ಭಯದಿಂದ, ಒತ್ತಡದಿಂದ ಮತ್ತು ಅಸುರಕ್ಷತೆಯಿಂದ ಮುಕ್ತವಾಗದಿದ್ದಾಗ ಮನಸ್ಸಿಗೆ ಹೇಗೆತಾನೆ ಸುಖವು ದೊರೆಯುವುದು.
ಜನರು ಕ್ಷಣಿಕ ಭೌತಿಕ ತೃಪ್ತಿಗಾಗಿ ತಮ್ಮ ಇಂದ್ರೀಯಗಳಲ್ಲಿ ಸುಖಿಸುವರು. ಅವರ ಈ ತೃಪ್ತಿಯು ಬಹು ಸುಲಭವಾಗಿ ಅಸುಖವಾಗಿ ಮುಂದಿನ ಕ್ಷಣಗಳಲ್ಲಿ ಪರಿವತರ್ಿತವಾಗುವುದು. ಆದ್ದರಿಂದಾಗಿ ಜೀವನ ಪ್ರವಾಹದಲ್ಲಿ ಪೂರ್ಣವಾದಂತಹ ಮತ್ತು ಶಾಶ್ವತ ತೃಪ್ತಿಯನ್ನು ಅವರು ಭೌತಿಕ ಸುಖದಲ್ಲಿ ಅಥವಾ ಭಾವಾವೇಶದ ಸುಖದಲ್ಲಿ ಅವರು ಪಡೆಯಲಾರರು. ಕೇವಲ ಧಮ್ಮದ ಸುಶಿಕ್ಷಣದಿಂದ ಮತ್ತು ಚಿತ್ತವನ್ನು ಶಾಂತಗೊಳಿಸುವುದರಿಂದಾಗಿ ಸ್ವಾರ್ಥವನ್ನು ಮತ್ತು ಅಪರಾಧ ಮನೋವೃತ್ತಿಯನ್ನು ದಾಟಬಹುದು. ಹಾಗು ನಿಜ ಸುಖವನ್ನು ಅನುಭವಿಸಬಹುದು.
ಗೋಚರ ಸಂಶೋಧನೆಗಳ ವಿಶ್ಲೇಷಣೆಯ ಪ್ರಕಾರ ಅಮೆರಿಕಾದಲ್ಲೇ 18.7% ರಷ್ಟು ವಯಸ್ಕರು ಅಸುಖಿಗಳಾಗಿದ್ದಾರೆ. ಅಂದರೆ ಆರರಲ್ಲಿ ಒಬ್ಬರಂತೆ ಮನೋವ್ಯಾದಿಗಳಿಗೆ ಗುರಿಯಾಗಿರುವರು. ಯಾವ ಸಮಾಜದಿಂದ ಮಾನವ ಚಂದ್ರನಲ್ಲಿಗೆ ಹೋಗಿ ಇಳಿದನೋ ಮತ್ತು ಬಾಹ್ಯಕಾಶವನ್ನು ಗೆದ್ದನೋ ಅಲ್ಲೇ ಹೀಗಾಗಿದೆ. ಚಂದ್ರನಲ್ಲಿ ಇಳಿದು ಮಾನವ ಏನನ್ನು ಗಳಿಸಿದನು? ಅದರಿಂದಾಗಿ ಆತನ ಮಾನಸಿಕ ಕ್ಷೊಭೆಗಳಾಗಲಿ, ರೋಗ, ಮುದಿತನಗಳಾಗಲಿ ಮತ್ತು ಮರಣವೇ ಆಗಲಿ ಇವುಗಳಿಂದ ಪಾರಾಗಲು ಸಹಾಯವಾಯಿತೆ? ಅಥವಾ ಪರರೊಂದಿಗೆ ಶಾಂತಿಯಿಂದ ಸಹಬಾಳ್ವೆ ನಡೆಸಲು ಸಾಧ್ಯವಾಯಿತೆ? ಅಥವಾ ಮನಸ್ಸು ಪಳಗುವುದಕ್ಕೆ ಸಹಾಯವಾಯಿತೆ? ಸಧ್ಯ! ಚಂದ್ರನಲ್ಲಿ  ಅಮೂಲ್ಯ ಲೋಹಗಳಾದ ಚಿನ್ನವಾಗಲಿ ಅಥವಾ ರತ್ನಗಳಾದ ವಜ್ರಗಳಾಗಿ ಸಿಗಲಿಲ್ಲ. ಇದು ನಿಜಕ್ಕೂ ಒಳ್ಳೆಯ ವಿಷಯ. ಇಲ್ಲದಿದ್ದಲ್ಲಿ ಚಂದ್ರನ ಅದಿಪತ್ಯಕ್ಕಾಗಿ ದೇಶಗಳ ನಡುವೆಯೇ ರಕ್ತದ ಹೊಳೆ ಹರಿಯುತ್ತಿತ್ತು.
ಎಲ್ಲಾ ಶ್ರೇಷ್ಠ ಧರ್ಮ ನಾಯಕರು ಮಾನವತೆಗೆ ನೀಡಿದಂತಹ ಬುದ್ಧಿವಾದವೆಂದರೆ ನಿಜವಾದ ಸುಖವು ಪ್ರಾಪಂಚಿಕ ವಸ್ತುಗಳನ್ನು ಹೊಂದಿದ ಮಾತ್ರಕ್ಕೆ ಸಿಗಲಾರದು. ಸ್ವಾರ್ಥಪರತೆಯಿಂದ ಅಥವಾ ಪರರನ್ನು ತುಳಿದು, ಸುಲಿಗೆಗೈದು, ಪರರ ಹಕ್ಕುಗಳನ್ನು ಛಿದ್ರಗೊಳಿಸಿ, ನಾವು ಪಡೆಯುವುದು ಸುಖವಲ್ಲ, ಪಾಪವಾಗಿದೆ. ಬದಲಾಗಿ ತಮ್ಮ ಸುಖಗಳನ್ನು ಪರರಲ್ಲಿ ಹಂಚಿ, ಪರರ ಸುಖಗಳಲ್ಲಿ ಆನಂದಿಸುವುದೇ ಸುಖವಾಗಿದೆ.
ಇದರ ಬಗ್ಗೆ ಯೇಸುಕ್ರಿಸ್ತರು ಹೀಗೆ ಹೇಳಿದ್ದಾರೆ: ತನ್ನನ್ನು ನಾಶಗೊಳಿಸುತ್ತ, ಇಡೀ ವಿಶ್ವವನ್ನು ಮಾನವ ಗಳಿಸಿದರೇನು? ಇದರಿಂದಾಗಿ ಮಾನವ ಯಾವ ಲಾಭ ಪಡೆದಿದ್ದಾನೆ? (ಒಚಿಡಿಞ 8.36) ಒಬ್ಬನು ಅಧರ್ಮದಿಂದಾಗಿ ಮತ್ತು ಸ್ವಾರ್ಥಯುತ ವಕ್ರಮಾರ್ಗದಿಂದಾಗಿ ಭೌತಿಕ ವಸ್ತುಗಳನ್ನು ಪಡೆಯಬಾರದು.
ಸರಳತೆ ಮತ್ತು ಸಂತೃಪ್ತಿಯು ಸುಖಕ್ಕಾಗಿ ಇರುವ ಸಾರಯುತ ಘಟಕಗಳಾಗಿವೆ. ಗಾಂಧೀಜಿಯ ಪ್ರಕಾರ ಅತಿ ಅಲ್ಪ ಅಗತ್ಯತೆಗಳಿದ್ದಾಗ, ಅತಿಹೆಚ್ಚು ಸುಖಿಯಾಗಿರಬಹುದು. ಒಮ್ಮೆ ಗ್ರೀಕ್ ತತ್ವಜ್ಞಾನಿಯಾದ ಏಪಿಕ್ಸೂರಸ್ ಹೀಗೆ ಹೇಳಿದ್ದನು: ನೀವು ಮನುಷ್ಯನನ್ನು ಸುಖಿಯಾಗಿ ಇಡಬೇಕಾದರೆ, ಆತನಿಗೆ ಹೆಚ್ಚು ಸಿರಿಯನ್ನು ತುಂಬಬೇಡಿರಿ, ಬದಲಾಗಿ ಆತನಿಂದ ಆತನ ಬಯಕೆಗಳನ್ನು ತೆಗೆದುಬಿಡಿ. ಡಬ್ಯ್ಲೂ. ಇರನ್ ವೆನ್ಟ್ಜ್ ಒಮ್ಮೆ ಹೀಗೆ ಹೇಳಿದ್ದನು: ಮಹಾಪುರುಷನ ಲಕ್ಷಣಗಳೆಂದರೆ ಅತಿ ಅಲ್ಪ ಬಯಕೆಗಳನ್ನು ಹೊಂದಿರುವುದು ಮತ್ತು ಸರಳ ವಿಷಯಗಳಲ್ಲಿ ಸಂತೃಪ್ತನಾಗಿರುವುದು.
ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಒಂದು ಕಾರಣ ಏನೆಂದರೆ ನಮ್ಮಲ್ಲಿರುವ ಲಾಭ ಅಥವಾ ಸುಖವನ್ನು ಪರರೊಂದಿಗೆ ಹಂಚಲು ಇಚ್ಛಿಸದಿರುವುದು. ಮಾನವನು ಹಂಚಿ ದಾನ ಮಾಡುವುದನ್ನು ಕಲಿಯದಿದ್ದರೆ ಮತ್ತು ನಿಷ್ಪಕ್ಷಪಾತವಾಗಿ ಸತ್ಯವನ್ನು ಅರಿಯಲು ಮನಸ್ಸಿಗೆ ಶಿಕ್ಷಣ ನೀಡದಿದ್ದರೆ ಈ ಜಗತ್ತಿನಲ್ಲಿ ಶಾಂತಿಯು ಅಧಿಪತ್ಯ ಮಾಡಲು ಸಾಧ್ಯವೇ ಇಲ್ಲ.


1.13 ಸಂತೃಪ್ತಿಯ ಸುಲಾಭಗಳು

ಒಂದುದಿನ ರಾಜನೊಬ್ಬನು ಬುದ್ಧರ ಬಳಿಗೆ ಬಂದು ಪ್ರಶ್ನೆಯೊಂದನ್ನು ಕೇಳಿದನು ನಾನು ನಿಮ್ಮ ಶಿಷ್ಯರನ್ನು ನೋಡಿದಾಗ ಅವರಲ್ಲಿ ಪ್ರಶಾಂತತೆ, ಉತ್ಸಾಹ ಮತ್ತು ಪ್ರಭೆಯುಳ್ಳ ತೇಜಸ್ಸನ್ನು ಕಂಡಿದ್ದೇನೆ. ನಾನು ಈ ರೀತಿಯೂ ಕೇಳಿದ್ದೆನೆ. ಏನೆಂದರೆ ಅವರು ದಿನಕ್ಕೊಂದು ಸಾರಿ ಮಾತ್ರ ಆಹಾರ ತೆಗೆದುಕೊಳ್ಳುವರು ಎಂದು. ಆದರೆ ನಿಜಕ್ಕೂ ಅವರು ತಮ್ಮ ಜೀವನಶೈಲಿಯನ್ನು ಹೇಗೆ ನಿರ್ವಹಿಸುವರೆಂಬುದೇ ನನಗೆ ತಿಳಿಯುತ್ತಿಲ್ಲ. ಆಗ ಬುದ್ಧ ಭಗವಾನರು ಸುಂದರವಾದ ಉತ್ತರವನ್ನು ನೀಡಿದರು:
ನನ್ನ ಶಿಷ್ಯರು ಹಿಂದೆ ಏನೆಲ್ಲಾ ಮಾಡಿದ್ದಾರೋ, ಅದರ ಬಗ್ಗೆ ಪಶ್ಚಾತ್ತಾಪಪಡುವುದಿಲ್ಲ. ಆದರೆ ನಿರಂತರ ಹೆಚ್ಚು ಹೆಚ್ಚು ಪುಣ್ಯಕಾರ್ಯಗಳನ್ನು ಮಾಡುತ್ತಿರುತ್ತಾರೆ. ಆದರೆ ಅದನ್ನು ಪಶ್ಚಾತ್ತಾಪಡುತ್ತ, ಪ್ರಾಥರ್ಿಸುತ್ತ ಮತ್ತು ಪೂಜಿಸುತ್ತ ಮಾಡುವುದಿಲ್ಲ. ಬದಲಾಗಿ ತಾವು ಹಿಂದೆ ಮಾಡಿದಂತಹ ತಪ್ಪಿನ ಬದಲು ಪರರಿಗೆ ಅಪಾರ ಸೇವೆ ಸಹಾಯ ಸಲ್ಲಿಸುತ್ತಾರೆ. ಹಾಗೆಯೇ ನನ್ನ ಶಿಷ್ಯರು ಎಂದಿಗೂ ಭವಿಷ್ಯದ ಬಗ್ಗೆ ಚಿಂತೆ ತಾಳುವುದಿಲ್ಲ. ಅವರು ತಮಗೆ ಲಭಿಸಿದ ಏನೇ ಆಗಿರಲಿ ಅದರಲ್ಲೇ ತೃಪ್ತಿತಾಳುತ್ತಾರೆ ಮತ್ತು ಹೀಗೆ ಅವರು ತೃಪ್ತಿಯನ್ನು ನಿರ್ವಹಿಸುತ್ತಾರೆ. ಅವರು ಎಂದಿಗೂ ಸಹ ಇದು ಅಥವಾ ಅದು ನಮಗೆ ಸಾಲದು ಎಂದು ಹೇಳುವುದಿಲ್ಲ. ಇದೇ ಅವರ ಜೀವನ ಮಾರ್ಗವಾಗಿದೆ. ಆದ್ದರಿಂದಲೇ ಅವರು ಸದಾ ಪ್ರಶಾಂತತೆ, ಉತ್ಸಾಹ ಮತ್ತು ತೇಜೋಭರಿತ ದೇಹಕಾಂತಿ ಹೊಂದಿರುತ್ತಾರೆ. ಇವೆಲ್ಲ ಸಂತೃಪ್ತಿಯ ಪರಿಣಾಮವಾಗಿದೆ.
ಯಾರೇ ಆಗಲಿ ಈ ಬಗೆಯ ಉತ್ಸಾಹವನ್ನು ಸಂತೃಪ್ತಿಯಿಂದ ಹೊಂದಬಹುದು. ಯಾರಾದರೂ ಈ ರೀತಿ ಕೇಳಬಹುದು: ನಮ್ಮಲ್ಲಿ ಸಾಕಷ್ಟು ವಸ್ತು ಸಾಮಗ್ರಿಗಳಿವೆ. ಆದರೂ ನಾವೇಕೆ ಜೀವನದಲ್ಲಿ ತೃಪ್ತರಾಗಿಲ್ಲ? ಇದಕ್ಕೆ ಸರಿಯಾದ ಉತ್ತರವೇನು? ಇದಕ್ಕೆ ಇರುವ ಉತ್ತರ ಒಂದೇ ಅವರಲ್ಲಿ ತೃಪ್ತಿ ಇಲ್ಲದಿರುವಿಕೆ. ಅವರಲ್ಲಿ ನಿಜಕ್ಕೂ ತೃಪ್ತಿಯಿದ್ದಿದ್ದರೆ, ಅವರು ಎಂದೂ ನಾವು ಇದರಲ್ಲಿ ಅಥವಾ ಅದರಲ್ಲಿ ತೃಪ್ತರಾಗಿಲ್ಲ ಎಂದು ಹೇಳುತ್ತಿರಲಿಲ್ಲ. ನಮ್ಮ ಅತೃಪ್ತ ಸ್ವಾರ್ಥದ ಬಯಕೆ ಮತ್ತು ಅನಿತ್ಯದ ನಿಯಮಗಳ ನಡುವಿನ ತಿಕ್ಕಾಟದಿಂದಾಗಿ ನಾವೆಂದೂ ನಮ್ಮಲ್ಲಿ ಸಂತೃಪ್ತರಾಗುವುದಿಲ್ಲ.
ಬುದ್ಧ ಭಗವಾನರು ನಮಗೆ ಸಾಧಿಸಲು ನೀಡಿರುವ ಅತ್ಯುತ್ತಮ ಉಪದೇಶವೆಂದರೆ ಸಂತೃಪ್ತಿಯೇ ಶ್ರೇಷ್ಠವಾದ ಐಶ್ವರ್ಯ. ಒಬ್ಬನು ಶ್ರೀಮಂತನಾಗಲು ಐಶ್ವರ್ಯವಂತನಾಗಲೇಬೇಕಿಲ್ಲ. ಐಶ್ವರ್ಯವುಳ್ಳವನು ಸದಾ ತನ್ನ ಜೀವದ ಭಯವನ್ನು ಹೊಂದಿರುತ್ತಾನೆ. ಆತನು ಸದಾ ಸಂಶಯದ ಮತ್ತು ಭಯದ ಸ್ಥಿತಿಯನ್ನೇ ಹೊಂದಿರುತ್ತಾನೆ. ಜನರು ತನ್ನನ್ನು ಅಪಹರಿಸಬಹುದೆಂದು, ಅದಕ್ಕಾಗಿ ಕಾಯುತ್ತಿರುವರೆಂದು ಯೋಚಿಸುತ್ತಾನೆ. ಐಶ್ವರ್ಯವುಳ್ಳವನು ಅಂಗರಕ್ಷಕರ ಹೊರತು ಹೊರ ಹೋಗುವುದೇ ಇಲ್ಲ. ಆತನು ಹಲವು ಕಬ್ಬಿಣದ ಹೊರ ಬಾಗಿಲುಗಳು ಮತ್ತು ತನ್ನ ಮನೆಗೆ ಬಲಿಷ್ಠವಾದ ಬೀಗಗಳು ಇದ್ದರೂ ಸಹಾ ಆತನು ಭಯರಹಿತವಾಗಿ ಮತ್ತು ಚಿಂತರಹಿತವಾಗಿ ನಿದ್ರಿಸಲಾರನು.
ತುಲನಾತ್ಮಕವಾಗಿ ಹೇಳುವುದಾದರೆ ಸಂತೃಪ್ತ ಮನುಷ್ಯನು ನಿಜಕ್ಕೂ ಅದೃಷ್ಟಶಾಲಿಯೇ ಹೌದು. ಏಕೆಂದರೆ ಆತನ ಮನಸ್ಸು ಅವೆಲ್ಲಾ ತೊಂದರೆಗಳಿಂದ ಮುಕ್ತವಾಗಿರುತ್ತದೆ. ಆತನು ನಿಜಕ್ಕೂ ಶ್ರೀಮಂತನಾಗಿದ್ದಾನೆ. ಹಾಗಾದರೆ ಸಂತೃಪ್ತಿ ಎಂದರೇನು? ಯಾವಾಗ ವ್ಯಕ್ತಿಯೊಬ್ಬನು ಇಷ್ಟು ನನಗೆ ಸಾಕು ಮತ್ತು ಇಷ್ಟು ನನ್ನ ಕುಟುಂಬಕ್ಕೆ ಸಾಕು ಮತ್ತು ಇದಕ್ಕಿಂತ ಹೆಚ್ಚಿನದೇನೂ ಬೇಡ ಎಂದು ಯೋಚಿಸುವನೋ ಮತ್ತು ಅದರಂತೆಯೇ ಇರುವನೋ ಅದೇ ಸಂತೃಪ್ತಿಯಾಗಿದೆ. ಪ್ರತಿಯೊಬ್ಬರು ಈ ರೀತಿ ಚಿಂತಿಸಿದರೆ, ಆಗ ಸಮಸ್ಯೆಗಳೇ ಇರುವುದಿಲ್ಲ. ಯಾವಾಗ ನಾವು ಈ ರೀತಿಯ ಸಂತೃಪ್ತಿಯನ್ನು ನಿರ್ವಹಿಸುವೆವೋ ಆಗ ಮತ್ಸರವು ಎಂದಿಗೂ ನಮ್ಮ ಮನಸ್ಸಿನಲ್ಲಿ ಉಂಟಾಗುವುದೇ ಇಲ್ಲ. ಮತ್ತು ಹೀಗಾಗಿ ನಾವು ಪರರನ್ನು ಸಹಾ ಅವರ ಜೀವನದಲ್ಲಿ ಸುಖಿಯಾಗಿ, ಆನಂದವಾಗಿರಲು ಅವಕಾಶ ನೀಡುತ್ತೇವೆ. ಯಾವಾಗ ಈಷರ್ೆ, ಮತ್ಸರ ಇರುವುದಿಲ್ಲವೋ ಆಗ ಕೋಪವು ಉಂಟಾಗುವುದಿಲ್ಲ. ಯಾವಾಗ ಕೋಪವಿರುವುದಿಲ್ಲವೋ ಆಗ ಹಿಂಸೆಯು ಇರುವುದಿಲ್ಲ ಮತ್ತು ರಕ್ತಹರಿಯುವಿಕೆಯು ಇರುವುದಿಲ್ಲ. ಪ್ರತಿಯೊಬ್ಬರೂ ಶಾಂತಿಯಿಂದ ಜೀವಿಸುವರು.
ಸಂತೃಪ್ತ ಜೀವನವು ಸದಾ ಭರವಸೆಯನ್ನು ಮತ್ತು ಶ್ರದ್ಧೆಯನ್ನು ನೀಡುತ್ತದೆ. ಇದು ಆದರ್ಶವಾದವಲ್ಲ. 25 ಶತಮಾನಗಳಿಂದ ಬೌದ್ಧ ಭಿಕ್ಷು, ಭಿಕ್ಷುಣಿಯರು, ಉಪಾಸಕ, ಉಪಾಸಿಕೆಯರು ಅಂತಹ ಶಾಂತಿಯುತ ಜೀವನವನ್ನು ಜೀವಿಸಿದ್ದಾರೆ. ಅವರಿಗೆ ಕೇವಲ ನಾಲ್ಕು ಅವಶ್ಯಕತೆಗಳು ಇದ್ದವು. ಅವೆಂದರೆ: ಆಹಾರ, ವಸ್ತ್ರ, ವಸತಿ ಮತ್ತು ಔಷಧ. ಜೀವನಕ್ಕೆ ಇಷ್ಟರ ಹೊರತು ಬೇರೇನನ್ನೂ ಅವರು ಬಯಸುತ್ತಿರಲಿಲ್ಲ. ಅಷ್ಟೇ ಅಲ್ಲ, ಬೌದ್ಧ ಗೃಹಸ್ಥರು ಸಹಾ ಸಂತೃಪ್ತ ಜೀವನದಲ್ಲಿ ಜೀವಿಸಿ, ಲೋಭವನ್ನು ಸುಳಿಯಲು ಬಿಡುತ್ತಿರಲಿಲ್ಲ, ಇದು ಆಶ್ಚರ್ಯಕರವಾಗಿದೆ! ಸಂತೃಪ್ತರಾಗಲು ಎಷ್ಟು ಅಲ್ಪಮಾತ್ರ ಸಾಕು ಎಂದು ಇದರಿಂದ ನಮಗೆ ತಿಳಿಯುತ್ತದೆ. ಇದರ ಬಗ್ಗೆ ನೀವು ಸಹ ಚಿಂತನೆ ಮಾಡಿರಿ.


1.14 ಮನಸ್ಸಿನ ಸ್ವರೂಪ

ಮಾನವತೆಯ ಮೌಲ್ಯಗಳು ಮಾನವನ ವಿಚಾರಶೀಲತೆಯ ಮನಸ್ಸಿನಿಂದ ಉದಯಿಸಿವೆ. ಈ ಕಾರಣದಿಂದಲೇ ನಮಗೆ ಮನುಷ್ಯ ಎನ್ನುವರು. ಅಂದರೆ ಚಿಂತನೆ ಮಾಡಲು ಮನಸ್ಸನ್ನು ಹೊಂದಿರುವವನು ಮಾನವನೆಂಬ ಪದವು ಸಹಾ ಸಂಸ್ಕೃತದ ಮನಸ್ ಎಂಬುದರಿಂದಲೇ ಉಂಟಾಗಿದೆ. ಅದರ ಅರ್ಥ ತಕರ್ಿಸಲು ಮನಸ್ಸನ್ನು ಹೊಂದಿರುವವನು. ಬುದ್ಧ ಭಗವಾನರು ಹೀಗೆ ಹೇಳಿದ್ದಾರೆ: ಮನಸ್ಸೇ ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಅಗ್ರಗಾಮಿ (ಮಾರ್ಗದರ್ಶಕ). ಹೀಗಾಗಿ ಪರಜೀವಿಗಳು ಚಿಂತನೆ ಮಾಡಲು ಅಷ್ಟು ಸಾಮಥ್ರ್ಯ ಇಲ್ಲದವರಾಗಿ ನಾವು ಅವರೆಲ್ಲರಿಗಿಂತ ವಿಭಿನ್ನ ವಿಶಿಷ್ಟವಾಗಿರುವೆವು. ಪ್ರಾಣಿಗಳಂತಹ ಬೇರೆ ಜೀವಿಗಳು ಮಾನವನಂತಹ ಗುಣಲಕ್ಷಣಗಳನ್ನು ಹೊಂದಿಲ್ಲ. ಅವುಗಳು ಚಿಂತನೆ, ತರ್ಕದಂತಹ ಪ್ರಜ್ಞಾಶೀಲತೆ ಹೊಂದಿಲ್ಲ, ಅವು ಸಮರ್ಥತೆ ಹೊಂದಿಲ್ಲ. ಮಾನವರಂತೆ ಅವು ತಾತ್ವಿಕ ಚಿಂತನೆ ಮಾಡಲಾರವು. ಹೀಗಾಗಿ ಮಾನವರು ಈ ಜಗತ್ತಿನಲ್ಲಿಯೇ ಅದ್ವಿತೀಯರಾಗಿದ್ದಾರೆ. ಈ ರೀತಿಯಲ್ಲಿದ್ದು ಅವರ ಮನಸ್ಸುಗಳನ್ನು ಸರಿಯಾಗಿ ಸುಶಿಕ್ಷಣಗೊಳಿಸಿ ಮತ್ತು ಧಮ್ಮದ ಉದಾತ್ತ ಬೋಧನೆಯನ್ನು ಮಾರ್ಗದಶರ್ಿಯನ್ನಾಗಿ ಮಾಡಿದರೆ, ಮನಸ್ಸು ಯೋಗ್ಯವಾದುದನ್ನೇ ಚಿಂತಿಸಿ ಮಾನವತೆಗೆ ಒಳಿತನ್ನು ಉಂಟುಮಾಡಿ, ಜಗತ್ತಿನಲ್ಲಿ ಇಂದು ನಡೆಯುತ್ತಿರುವ ಭಾರಿ ವಿಪತ್ತುಗಳನ್ನು ತಡೆಯುತ್ತದೆ. ಚಿಂತನೆ ಮಾಡದೆ ಮಾತನಾಡುವುದು ಹಾಗೆಯೇ ಗುರಿಯಿಲ್ಲದೆ ಬಾಣ ಬಿಡುವುದು ಎರಡೂ ವ್ಯರ್ಥವಾಗುತ್ತದೆ.
ಯುನೆಸ್ಕೊವಿನ ಸಂವಿಧಾನದ ಪೀಠಿಕೆಯಲ್ಲಿ ಗಮನಾರ್ಹವಾದ ಸಾರಯುತ ನುಡಿಯಿದೆ: ಹೇಗೆ ಯುದ್ಧಗಳು ಮಾನವನ ಮನಸ್ಸಿನಲ್ಲಿಯೇ ಆರಂಭವಾಗುವುದೋ ಹಾಗೆಯೇ ಮಾನವನ ಮನಸ್ಸಿನಲ್ಲಿಯೇ ಶಾಂತಿಯ ರಕ್ಷಣೆಯು ಸಹಾ ನಿಮರ್ಾಣವಾಗಬೇಕಿದೆ. ಮಾನವನ ಮನಸ್ಸಿನಲ್ಲಿಯೇ ಜಗತ್ತಿನ ಎಲ್ಲಾ ಪಾಪಗಳು ಉದಯಿಸುತ್ತವೆ ಮತ್ತು ಯೋಗ್ಯವಾದ ಮನೋ ನಿಮರ್ಾಣದಿಂದಾಗಿ ಮಾನವತೆಯ ಒಳಿತಿಗೆ ಎಲ್ಲಾ ಪಾಪಗಳನ್ನು ತೆಗೆದುಹಾಕಬಹುದು.
ನಾವು ಸೌಭಾಗ್ಯಶಾಲಿಗಳಾಗಿದ್ದೇವೆ. ಏಕೆಂದರೆ ಬುದ್ಧಿವಂತಿಕೆಯಿಂದ ಕಾರ್ಯ ಮಾಡಲು ಮತ್ತು ಮಾನವತೆಗೆ ಸಹಾಯ ಮಾಡಲು ಸಾಧ್ಯವಾಗುವಂತಹ ಮನಸ್ಸನ್ನು ನಾವು ರಚಿಸಬಹುದು. ಹಾಗೆಯೇ ಬೇರ್ಯಾವ ಜೀವಿಯಲ್ಲೂ ಇಲ್ಲದಂತಹ ಕೃತ್ತಿಮ ಅಥವಾ ವಂಚನೆಯ ದುಗರ್ುಣವು ಸಹಾ ಮಾನವನಲ್ಲೇ ಇದೆ. ಈ ಪ್ರವೃತ್ತಿಯಿಂದಾಗಿ ಮಿಕ್ಕೆಲ್ಲಾ ಮಾನವ ಮೌಲ್ಯಗಳು ಮರೆಯಾಗುತ್ತವೆ. ವಾಸ್ತವವಾಗಿ ಹೇಳುವುದಾದರೆ ನಮ್ಮೆಲ್ಲಾ ಸಮಸ್ಯೆಗಳ, ದುಃಖಗಳ ಮತ್ತು ಅವ್ಯವಸ್ಥಿತತೆಯ ಈ ಜಗತ್ತು ಏನಿದೆಯೋ ಅವೆಲ್ಲವೂ ಸಹ ಮಾನವನ ಸ್ವಾರ್ಥದ, ವಂಚನೆಯ ಅಥವಾ ವಕ್ರತೆಗಳ ಪರಿಣಾಮವಾಗಿದೆ. ಈ ಪ್ರವೃತ್ತಿಗಳನ್ನು ಕಿತ್ತುಹಾಕಲು ಅತಿಕಷ್ಟ ಸಾಧ್ಯವಾಗಿದೆ.
ಒಂದುವೇಳೆ ಮಾನವರಿಗೆ ತಮ್ಮ ಇಷ್ಟಬಂದ ಹಾಗೆ ಪ್ರವತರ್ಿಸಲು ಪೂರ್ಣ ಸ್ವತಂತ್ರ ನೀಡಿದ್ದೇ ಆದರೆ ಅವರು ಅತಿ ಅಲ್ಪಕಾಲದಲ್ಲೇ ಇಡೀ ಜಗತ್ತನ್ನು ನಾಶಮಾಡಿಬಿಡುತ್ತಾರೆ. ನಿತ್ಯ ನವೀನ ಅವಿಷ್ಕಾರಗಳಿಂದಾಗಿ ಮಾನವರು ಎಷ್ಟು ಭಯಾನಕವಾಗಿದ್ದಾರೆ ಎಂದರೆ ಅವರ ಉಳಿವೇ ಸಂಶಯಾಸ್ಪದವಾಗಿದೆ. ಹಾಗಿರುವಾಗಲೂ ಧಮ್ಮವು ಮಾನವನ ಜೀವನದಲ್ಲಿ ಅತಿ ತಿರುವನ್ನು ನೀಡಲು ಪ್ರಮುಖಪಾತ್ರ ವಹಿಸುತ್ತದೆ. ಅದು ಮಾನವನಲ್ಲಿರುವ ಮೋಸ, ವಂಚನೆ ಇತ್ಯಾದಿಗಳಿಂದ ಮುಕ್ತನಾಗಲು ಅವಕಾಶ ನೀಡುತ್ತದೆ. ಧಮ್ಮ ಮತ್ತು ಅದರ ಉದಾತ್ತ ಶೀಲಗಳು ಮಾನವನ ಪರಮಾರ್ಥ ಉದ್ಧಾರಕ್ಕಾಗಿ ಮತ್ತು ಸರ್ವಪಾಪದ ವಿಮುಖತೆಗಾಗಿ ಸಹಾಯ ಮಾಡುತ್ತದೆ. ಧಮ್ಮವು ಶಾಂತಿಯ ಮತ್ತು ಪ್ರಶಾಂತತೆಯ ಪಥದೆಡೆಗೆ ದಿಕ್ಸೂಚಿಯಂತೆ ಮಾರ್ಗದಶರ್ಿತವಾಗಿ ಸರ್ವಹಿತಕ್ಕಾಗಿ ಮತ್ತು ಸರ್ವರ ಸುಖಕ್ಕಾಗಿ ಕಾರ್ಯವಹಿಸುತ್ತದೆ. ಬುದ್ಧ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಪಾಪ ನಿಮರ್ೂಲನೆಗಾಗಿ ಮತ್ತು ಪರಹಿತಕ್ಕಾಗಿ ಕಾರ್ಯವಹಿಸುತ್ತದೆ.
ಬುದ್ಧ ಭಗವಾನರ ಪ್ರಕಾರ ನಮಗಿರುವ ಅತ್ಯಂತ ಮೌಲ್ಯಯುತ ಸ್ವತ್ತೆಂದರೆ ಬೋಧಿಯನ್ನು ಪಡೆಯಲು ನಮ್ಮ ಮನಸ್ಸನ್ನು ಪೋಷಿಸಿ, ಅಭಿವೃದ್ಧಿಗೊಳಿಸುವ ನಮ್ಮ ಸಾಮಥ್ರ್ಯವೇ ಆಗಿದೆ. ಇದೇ ಬೌದ್ಧ ಧರ್ಮದ ತಳಹದಿಯಾಗಿದೆ. ನಿಜವಾದ ಮಾನವತಾ ಮೌಲ್ಯಗಳು ನಮಗಿಂದು ಕಾಣಿಸುವುದು ಯಾರಲ್ಲಿ ಅಂದರೆ ಯಾರು ಬುದ್ಧರ ಬೋಧನಾನುಸಾರವಾಗಿ ತಮ್ಮ ಮನಸ್ಸನ್ನು ಅಭಿವೃದ್ಧಿಗೊಳಿಸಿರುವರೋ ಅವರಲ್ಲಿ ಮಾತ್ರ. ದೌಭರ್ಾಗ್ಯಯುತವಾಗಿ ನಮ್ಮಲ್ಲಿ ಅನೇಕರ ಮನಸ್ಸುಗಳು ಮೋಹಗೊಂಡಿವೆ, ಅಜ್ಞಾನದಿಂದ ಆವರಿಸಿವೆ ಮತ್ತು ಸ್ವಾರ್ಥದಿಂದ ಕೂಡಿವೆ.
ನಮ್ಮಲ್ಲಿ ಪ್ರತಿಯೊಬ್ಬರಲ್ಲಿಯೂ ಪರಮಾರ್ಥದ ದಿವ್ಯ ಸ್ವರೂಪವನ್ನು ಪ್ರಾಪ್ತಿಮಾಡಲು ಎಲ್ಲಾ ಸಾಮಥ್ರ್ಯವಿದ್ದರೂ ಸಹಾ, ನಮ್ಮಲ್ಲಿರುವ ಮೋಹ, ದ್ವೇಷ, ಕೋಪ, ಅಸೂಯೆ ಇನ್ನಿತರ ಕಲ್ಮಶಗಳಿಂದಾಗಿ ನಮ್ಮ ಬೋಧಿ ಸಾಕ್ಷಾತ್ಕಾರಕ್ಕೆ ತಡೆಯುಂಟಾಗಿದೆ. ಇದರಿಂದಾಗಿ ನಮ್ಮಲ್ಲಿರುವ ನಿಜ ಮಾನವತಾ ಮೌಲ್ಯಗಳ ಅನುಭೂತಿ ಹೊಂದಲು ಅಸಮರ್ಥರಾಗಿದ್ದೇವೆ.


1.15 ಸಾಮಾನ್ಯ ಜೀವನದಲ್ಲಿ ಮುಂದೆ ಹೋಗಿ ಸುಖಿಯಾಗಿರಿ

ಬುದ್ಧ ಭಗವಾನರ ಬೋಧನೆಯನ್ನು ವಿವರಿಸುವಾಗ ಕೆಲಜನರು ಬೋಧನೆಯ ಬಗ್ಗೆ ಮಿಥ್ಯಾ ಪ್ರಭಾವ ಬೀರುತ್ತಾರೆ. ಅದು ಏನೆಂದರೆ ಬೋಧನೆಯ ಪ್ರಕಾರ ಸರ್ವರೂ ಎಲ್ಲಾ ಲೌಕಿಕ ಸ್ವತ್ತು ಮತ್ತು ಅನುಭೋಗಗಳೆಲ್ಲವನ್ನು ಬಿಟ್ಟು, ಯಾವ ಕಾರ್ಯವನ್ನು ಮಾಡದೆ, ಯಾವ ವೃತ್ತಿಯನ್ನು ಮಾಡದೆ, ಯಾವುದೇ ಭೋಗವಿಲ್ಲದೆ, ಯಾವ ಲಾಭವೂ ಇಲ್ಲದೆ ಸೋಮಾರಿತನದಿಂದ ಕೂಡಿರುವುದು. (ಕೆಲವು ಜನರಲ್ಲಿ ಇಂತಹ ದೃಷ್ಟಿಕೋನವು ಚಲಾವಣೆಯಲ್ಲಿರುವ ನೋಟಿನಂತೆ ಹರಡಿ ಬುದ್ಧರ ಬೋಧನೆಯ ಬಗ್ಗೆ ಪೂರ್ಣ ತಪ್ಪು ಅಭಿಪ್ರಾಯ ತರಿಸುತ್ತದೆ).
ಇಲ್ಲಿ ಇನ್ನೊಂದು ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಇದೆ. ಅದೆಂದರೆ ತ್ಯಾಗದಿಂದಲೇ ಮನಸ್ಸಿನ ಪೂರ್ಣ ಶಾಂತಿ ದೊರಕುವುದು. ಆದರೆ ಅದು ಜಗತ್ತಿನ ಕ್ಷಣಿಕತೆಯ ಜ್ಞಾನ ಅನುಭವದಿಂದಲೇ ಬರಬೇಕಾಗಿದೆ. ಬುದ್ಧರು ಎಂದೂ ಸೋಮಾರಿತನದ ಜೀವನಕ್ಕೆ ಪ್ರೋತ್ಸಾಹಿಸಲೇ ಇಲ್ಲ. ಅವರೆಂದೂ ಯಾವುದೇ ಬಗೆಯ ಕೆಲಸಗಳಿಂದ ವಿಮುಖರಾಗಿ ಎಂದು ತಮ್ಮ ಅನುಯಾಯಿಗಳಿಗೆ ತಿಳಿಸಿಲ್ಲ. ಬದಲಾಗಿ ಅವರು ತಮ್ಮ ನಾಲ್ಕು ಬಗೆಯ ಸುಖಗಳು ಎಂಬ ಸುತ್ತದಲ್ಲಿ ಸ್ಪಷ್ಟವಾಗಿ ಹೇಳಿರುವುದು ಏನೆಂದರೆ ಮಾನವನು ಐಶ್ವರ್ಯ ಪ್ರಾಪ್ತಿಗಾಗಿ ದೃಢವಾದ ಶ್ರಮ ಪಡಬೇಕು. ಹೀಗೆ ಬಂದ ಐಶ್ವರ್ಯದಿಂದಾಗಿ ಉನ್ನತವಾದ ಲೌಕಿಕ ಜೀವನ ನಡೆಸಬೇಕು ಎಂದಿದ್ದಾರೆ. ಬೌದ್ಧ ಧರ್ಮದಲ್ಲಿ ಮಾನವತಾ ಮೌಲ್ಯಗಳು ಅಭಿವೃದ್ಧಿಗೊಳಿಸುವುದು ಅತಿ ಸರಳವಾಗಿದೆ. ಒಬ್ಬನು ದೃಢ ಪರಿಶ್ರಮಪಡಬೇಕು ಮತ್ತು ವಿವೇಚನಾಶಕ್ತಿಯಿಂದ ಕೂಡಿರಬೇಕು. ಒಬ್ಬನು ತನ್ನ ಅತ್ಯಮೂಲ್ಯ ಸಮಯವನ್ನು ಅನಗತ್ಯವಾಗಿ ವ್ಯರ್ಥ ಮಾಡಬಾರದು. ಏನನ್ನೂ ಮಾಡದೆ ಸೋಮಾರಿತನದಿಂದ ಕೂಡಿರಬಾರದು. ನಿದ್ರೆಯ ವಿಷಯವಾಗಿಯು ಸಹಾ ಅಷ್ಟೇ ವಿಚಾರಶೀಲತೆಯಿಂದ ಕೂಡಿದ್ದು, ಆರೋಗ್ಯಕ್ಕೆ ಅಗತ್ಯವಾದಷ್ಟು ನಿದ್ರಿಸಿ, ಮಿತನಿದ್ದೆಯಿಂದಿರಬೇಕು. ಒಬ್ಬನು ಅತಿ ಬಿಸಿಲು ಅಥವಾ ಅತಿ ಚಳಿ ಇತ್ಯಾದಿ ನೆಪಗಳನ್ನು ಹಾಕುತ್ತ ತನ್ನ ಕಾರ್ಯಗಳನ್ನು ಮುಂದೂಡಿ, ಸಮಯ ವ್ಯರ್ಥ ಮಾಡದಿರಲಿ. ಏನೇ ಮಾಡಲಿ ರಚನಾತ್ಮಕವಾಗಿ ಮತ್ತು ವಿವೇಚನೆಯಿಂದ ಕೂಡಿರಲಿ, ನಿಮಗಿದು ತಿಳಿದಿರಲಿ, ಬುದ್ಧ ಭಗವಾನರು ಈ ಜಗತ್ತು ಕಂಡ ಅತ್ಯಂತ ಕ್ರಿಯಾಶೀಲ ಧಮ್ಮಗುರುಗಳು ಆಗಿದ್ದರು. ಬೋಧಿ ಪ್ರಾಪ್ತಿಯ ನಂತರದ 45 ವರ್ಷಗಳ ಜೀವನದಲ್ಲೂ ಅವರು ಕೇವಲ ಎರಡು ಗಂಟೆ ನಿದ್ರಿಸಿ, ಮಿಕ್ಕೆಲ್ಲಾ ಸಮಯವೆಲ್ಲಾ ಪರಹಿತಕ್ಕೆ, ಮಾನವತೆಯ ಸೇವೆಗೆ ಮೀಸಲಾಗಿಟ್ಟಿದ್ದರು. ಇಡೀ ದೇಶವೆಲ್ಲಾ ನಡೆದಾಡಿ ಜನರಿಗೆ ಹೇಗೆ ಉದಾತ್ತ ಜೀವನವನ್ನು ಜೀವಿಸಬಹುದು ಎಂದು ತಿಳಿಸುತ್ತಿದ್ದರೇ ಹೊರತು ಮತಾಂತರ ಮಾಡುತ್ತಿರಲಿಲ್ಲ.
ಮಾನವರಲ್ಲಿ ಕೃತಿಮತೆ ಮತ್ತು ಕೊರೆತೆಗಳು ಇರುವುದನ್ನು ಚೆನ್ನಾಗಿ ಬಲ್ಲಂತಹ ಬುದ್ಧರು ತಮ್ಮ ಹಿಂಬಾಲಕರಿಗೆ ಜನರೊಂದಿಗೆ ಬೆರೆಯುವಾಗ ಎಚ್ಚರದಿಂದಿರಿ ಎಂದು ಎಚ್ಚರಿಸಿದ್ದರು. ಒಬ್ಬನು ಸತ್ಪುರುಷರೊಂದಿಗೆ ಬೆರೆಯಲೇ ಬೇಕು. ಯಾರು ಮಿತ್ರರೆಂದು ಕರೆಸಿಕೊಳ್ಳುತ್ತಾರೋ ಅವರು ಮಿತ್ರತ್ವದಿಂದಲೇ ದೂರವಿರುತ್ತಾರೆ. ಅಷ್ಟೇ ಅಲ್ಲದೆ ಮೋಸ ಮತ್ತು ಸುಲಿಗೆ ಮಾಡಲು ಸಿದ್ಧರಾಗುತ್ತಾರೆ. ಒಬ್ಬ ಪಾಶ್ಚಾತ್ಯ ವಿದ್ವಾಂಸನು ಹೀಗೆ ತನ್ನ ಪ್ರಾರ್ಥನೆಯನ್ನು ವ್ಯಕ್ತಪಡಿಸಿದನು: ಓ ಪ್ರಭುವೆ, ದಯವಿಟ್ಟು ನನ್ನ ಸ್ನೇಹಿತರಿಂದ ನನ್ನನ್ನು ಕಾಪಾಡು, ನನಗೆ ನನ್ನ ಶತ್ರುಗಳಿಂದ ಪಾರಾಗಲು ಮಾತ್ರ ಗೊತ್ತಿದೆ. ಬುದ್ಧರು ನಮಗೆ ನಮ್ಮ ಮಿತ್ರರು ಯಾರು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ ಎಂದು ಬುದ್ಧಿವಾದ ನುಡಿದಿದ್ದಾರೆ. ನಾವು ಜನರೊಂದಿಗೆ ಬೆರೆಯುವಾಗ, ಅವರ ಚಾರಿತ್ರ್ಯ, ಸ್ವಭಾವ (ಪ್ರತಿಭೆ ಮತ್ತು ಪ್ರವೃತ್ತಿ) ಮತ್ತು ಅವರ ಮನಸ್ಸಿನ ಸ್ಥಿತಿಯನ್ನು ಅರಿಯಲು ಪ್ರಯತ್ನಿಸಬೇಕು. ಬುದ್ಧರ ಬುದ್ಧಿವಾದ ಏನೆಂದರೆ ನಂಬಿಕಸ್ಥ, ಸುಶೀಲ ಮಿತ್ರ ದೊರೆಯದಿದ್ದರೆ ಒಂಟಿಯಾಗಿ ಜೀವಿಸುವುದೇ ಉತ್ತಮ ಎಂದು.


1.16 ಸಂತೋಷ ಮತ್ತು ಸುಖ

ಬಹಳಷ್ಟು ತೊಂದರೆಗಳು ವ್ಯಕ್ತವಾಗದಿದ್ದರೂ, ಕೆಲವು ಪಾಪಯುತ ಯೋಚನೆಗಳು ಆಳವಾದ ಮನಸ್ಸಿನಲ್ಲಿಯೇ ಇರುತ್ತವೆ. ಕೆಲವೊಂದು ವೇಳೆ ನಾವು ಶಾಂತವಾಗಿಯೇ ಇರುತ್ತೇವೆ ಮತ್ತು ಚೆನ್ನಾಗಿಯೇ ಕಾಣಿಸುತ್ತೇವೆ. ಏಕೆಂದರೆ ಯಾವುದೇ ತೊಂದರೆಗಳು ಬಾಧಿಸುತ್ತಿಲ್ಲವಾದ್ದರಿಂದ. ಆದರೆ ಕೆಲವೊಂದು ತೊಂದರೆಗಳು ಉದಯಿಸಿದಾಗ ನಮ್ಮ ದೃಷ್ಟಿಕೋನಗಳೇ ಬದಲಾಗುತ್ತದೆ ಮತ್ತು ನಾವು ಹಿಂಸಾಪಶುಗಳಾಗಿ ಮತ್ತು ಕುರೂಪಿಗಳಾಗುತ್ತೇವೆ. ಹಾಗೆಯೇ ಇಂದ್ರೀಯ ಭೋಗಗಳು ಕ್ಷಣದಲ್ಲಿ ಮನಸ್ಸಿನಲ್ಲಿ ಉದಯಿಸಿದಾಗ ತಪ್ಪಾಗಿ ನಾವು ಅದನ್ನು ಸುಖವೆಂದು ಪರಿಗಣಿಸುತ್ತೇವೆ. ವಾಸ್ತವವಾಗಿ ಅದು ಸುಖವಾಗಿರುವುದಿಲ್ಲ.
ಸಂತೋಷವು ಕೇವಲ ಭಾವನಾತ್ಮಕ ತೃಪ್ತಿಯಾಗಿದೆ. ಸುಖದ ಕ್ಷಣಿಕ ಸ್ವಭಾವವು ಎಂಥಹುದೆಂದರೆ ಅದು ಮರುಕ್ಷಣದಲ್ಲೇ ಮರೆಯಾಗುವುದು. ಸಂತೋಷದ ಹುಡುಕಾಟವನ್ನು, ಸುಖದ ಅನ್ವೇಷಣೆಗೆ ಪರಿಗಣಿಸಿ ಗೊಂದಲಕ್ಕೆ ಈಡಾಗಬಾರದು. ಸಂತೋಷವು ಜಾರುವಂತಹ, ಕ್ಷಣಿಕ ಮತ್ತು ಕಹಿಫಲವನ್ನು ಕೊಡುವಂತಹದ್ದಾಗಿದೆ. ಹಾಗೆಯೇ ಭಾರಿ ಬೆಲೆಯುಳ್ಳದ್ದು. ಹಾಗೆಯೇ ಅತೃಪ್ತಿಕರವೂ ಹೌದು. ಆದರೆ ಸುಖವು ಹಾಗಲ್ಲ. ಅದನ್ನು ನಾವು ಕೊಳ್ಳಬೇಕಿಲ್ಲ. ಅದು ಆಂತರ್ಯದಿಂದ ಬರುವಂತಹುದು. ಅಂದರೆ ಮನಸ್ಸಿನ ಮೂಲದಿಂದ ಬರುವಂತಹುದು ಮತ್ತು ದೀರ್ಘಕಾಲ ಉಳಿಯುವಂತಹುದು.
ಯಾವ ಸಂತೋಷವನ್ನು ನಾವು ಈ ಕ್ಷಣದಲ್ಲಿ ಹೊಂದಿದ್ದೇವೆಯೋ ನಂತರ ಅದು ನಿರಾಸೆಯನ್ನು ಉಂಟುಮಾಡಬಹುದು. ಏಕೆಂದರೆ ಸಂತೋಷದ ಕ್ಷಣಿಕತೆ. ಅದೇ ವೇಳೆಯಲ್ಲಿ ನಾವು ಸುಖವನ್ನು ಹೊಂದಲಾರೆವು. ಏಕೆಂದರೆ ಚಿತ್ತ ಕಶ್ಮಲಗಳಾದ ಭಯ, ಕೋಪ, ಅಸೂಯೆ, ಹಗೆತನ ಮತ್ತು ಸೇಡುಗಳು ಇರುವುದರಿಂದಾಗಿ ಮತ್ತು ಯಾವಾಗ ಇವು ಮನಸ್ಸಿನಲ್ಲಿ ಕ್ರಿಯಾಶೀಲವಾಗುವುದಿಲ್ಲವೋ ಆಗ ಮನಸ್ಸಿನಲ್ಲಿ ತಾತ್ಕಾಲಿಕವಾಗಿ ಹೊಂದುವ ಆ ಹೊಳಪೇ ಸುಖವಾಗಿದೆ.


1.17 ಅಪಾರ ಮೂರ್ಖತನ

ಅಪಾರ ಗಲಿಬಿಲಿ
ಅಪಾರ ಆಶ್ರು
ಅನೇಕ ಜನರು
ಅಪಾರ ಹಣ
ಅಪಾರ ಸಮಯ
ಮತ್ತು ಇದೆಲ್ಲಾ ಏತಕ್ಕಾಗಿ ?
ಅಪಾರ ಸಂಕಷ್ಟಗಳು
ಚಿಕ್ಕ ದೇಹ !
ಪ್ರೋಟಿನಿನ ಒಂದು ಹನಿ
ವೇಗವಾಗಿ ತಿರುಗದ
ಪುಟ್ಟ ಶವ
ಶೀಘ್ರವಾಗಿ ಕೊಳೆಯುವಿಕೆ
ನಂತರ ಅದು ಯಾರಿಗೂ
ಇಷ್ಟವಾಗದು, ತಂದೆಗಾಗಲಿ
ತಾಯಿಗಾಗಲಿ ಅಥವಾ
ಇನ್ಯಾವುದೇ ಪ್ರಿಯರಿಗಾಗಲಿ
ಇದರ ನಡುವೆಯು
ಸಂತ್ವಾನ ಮತ್ತು ಶವಪೆಟ್ಟಿಗೆ
ಮೆರವಣಿಗೆ ಮತ್ತು ಗೋರಿಕಲ್ಲು
ಸಮಾರಂಭಗಳು ಮತ್ತು ವಿಲಾಪ
ವಿಧಿ ಮತ್ತು ಸಂಸ್ಕಾರಗಳು
ಹೂಳುವುದು ಅಥವಾ ಸುಡುವುದು
ಎಂದೆಂದಿಗೂ ಸುಗಂಧವಾಗಿಡುವುದು
ಇವೆಲ್ಲಾ ಊದಿದ ದೇಹಕ್ಕಾಗಿ
ಮಕ್ಕಳು ನೆನಪಿಡುತ್ತಾರೆ
ಮೊಮ್ಮಕ್ಕಳು ಸ್ವಲ್ಪ
ನಂತರ ಬರುವವರು
ಸತ್ತ ಸ್ಮರಣೆ
ಕಲ್ಲುಗಳು ಮತ್ತು ಮೂಳೆಗಳು
ಮಾತ್ರ ಉಳಿಯುವವು
ಹೀಗಾಗಿ ಇವೆಲ್ಲಾ
ಅನೇಕ ಮೂರ್ಖತನವಲ್ಲವೆ?
(ಖಾಂತಿ ಪಾಲೋ)


1.18 ಆಧುನಿಕ ಯುಗದಲ್ಲಿ ಸಮಸ್ಯೆಗಳು

ಆಧುನಿಕ ಯುಗವಂತೂ ಅಪೂರ್ವ ಕ್ಷಣಿಕತೆಗೆ ಗಮನಾರ್ಹವಾಗಿದೆ. ಬದಲಾವಣೆಗಳು ಎಷ್ಟು ಕ್ಷಿಪ್ರವಾಗಿ ಆಗುತ್ತವೆ ಎಂದರೆ ನಮ್ಮ ಸಮತೋಲನವೇ ಕಳೆದುಹೋಗಿದೆ. ಹಿಂದೆ ಇದ್ದಂತೆ ಜಗತ್ತಿನ ಶಾಂತ ಸ್ಥಿತಿಯು ಈಗಿಲ್ಲ. ಇದು ಪ್ರಕ್ಷುಬ್ದತೆಯ ಯುಗವಾಗಿದೆ, ಅದರಲ್ಲಿ ಸಂಪ್ರಾದಾಯದ ಸಮಾಜಗಳು, ಅಧುನಿಕತೆಯ ರಾಕ್ಷಸನ ಮುಂದೆ ಚೂರು ಚೂರಾಗಿದೆ. ಬದಲಾವಣೆಯ ವೇಗವು ವಿಫುಲವಾದ ವೇಗದಿಂದ ಆಗುತ್ತಿವೆ.
ಯಾವ ಬದಲಾವಣೆಗಳು ಆಗಲು ನೂರು ಅಥವಾ ಸಾವಿರ ವರ್ಷಗಳು ಆಗುತ್ತಿತ್ತೊ ಅಂತಹುವೆಲ್ಲಾ ಈಗ ಕೆಲವೇ ವರ್ಷಗಳಲ್ಲಿ ಆಗುತ್ತಿವೆ. ಉದಾಹರಿಸುವುದಾದರೆ ಪ್ರೊಜೆರಿಯಾ ಅಥವಾ ಅಕಾಲ ವೃದ್ಧಾಪ್ಯ ರೋಗಕ್ಕೆ ಬಲಿಯಾದ ಬಾಲಕನ ಘಟನೆಯನ್ನೇ ತೆಗೆದುಕೊಳ್ಳಿ.
ಆ ಬಾಲಕನು ಕೆನಡಾದಲ್ಲಿದ್ದನು. ಆತನು ಅಕಾಲ ವೃದ್ಧಾಪ್ಯ ರೋಗದಿಂದಾಗಿ ಕೇವಲ 11ನೇ ವಯಸ್ಸಿನಲ್ಲಿಯೇ ಮಾಚರ್್ 1967ರಲ್ಲಿ ಸತ್ತನು. ಆತನಲ್ಲಿದ್ದ ರೋಗದ ಲಕ್ಷಣಗಳೆಂದರೆ ವೃದ್ಧಾಪ್ಯದ ಎಲ್ಲಾ ಕುರುಹುಗಳು. ರಕ್ತನಾಳಗಳ ಗಡುಸತೆ, ಬೋಳುತಲೆ, ಜಡತ್ವ ಮತ್ತು ಸುಕ್ಕುಚರ್ಮ - ಈ ಎಲ್ಲಾ 90 ವರ್ಷದ ವೃದ್ಧಾಪ್ಯದ ಲಕ್ಷಣಗಳೆಲ್ಲಾ ಕೇವಲ 11ನೇ ವರ್ಷಕ್ಕೆ ಆ ಬಾಲಕನಿಗಿತ್ತು. ಪ್ರಚಂಡ ಬದಲಾವಣೆಗಳು ಮೊದಲು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರಂಭವಾಗಿ ನಂತರ ಜಗತ್ತಿನಾದ್ಯಂತ ಹರಡಿವೆ.
ಜಗತ್ತಿನಾದ್ಯಂತ ಜನಸಂಖ್ಯೆ ಸ್ಫೋಟಕ್ಕೆ ನಾವೇ ಸಾಕ್ಷಿಯಾಗಿದ್ದೇವೆ. ಔದ್ಯಮಿಕ ಅರ್ಥ ವ್ಯವಸ್ಥೆಯ ಕ್ಷಿಪ್ರ ಉದಯ ಮತ್ತು ನಗರೀಕರಣಗಳ ಶೀಘ್ರ ಬೆಳವಣಿಗೆ, ಜ್ಞಾನದ ಅಪೂರ್ವ ವಿಕಸತೆ, ಕ್ಷಿಪ್ರಗತಿಯ ತಂತ್ರಜ್ಞಾನದ ಸಂಶೋಧನೆಗಳು, ಸಂಪ್ರದಾಯ ಮೌಲ್ಯಗಳ ಶಿಥಿಲತೆ ಮತ್ತು ಹೊಸ ಸಂಪ್ರದಾಯ ಮತ್ತು ಸಂಸ್ಕೃತಿಗಳ ಬೆಳವಣಿಗೆ ಮತ್ತು ಮರೆಯಾಗುವಿಕೆ ಇವೆಲ್ಲವನ್ನು ನಾವು ಕಾಣುತ್ತಿದ್ದೇವೆ. ಇವೆಲ್ಲಾ ವಲಯಗಳ ಬದಲಾವಣೆಗಳು ಸಾಮಾಜಿಕ ಸಾಂಸ್ಕೃತಿಕ ವಿಷಯಾಂಶಗಳ ಸಮಾಜದಲ್ಲಿ ಪ್ರಚಂಡ ಸಂಘರ್ಷವನ್ನು ತರುತ್ತವೆ. ಕ್ಷಿಪ್ರ ಬದಲಾವಣೆಯು ಸಾಮೂಹಿಕ, ಸಾಮಾಜಿಕ ಪರಿವರ್ತನೆಯಲ್ಲಿ ತಡೆಯಲಾರದ ಪರಿವರ್ತನೆ ತರುತ್ತದೆ. ಇದರಿಂದಾಗಿ ಮಾನವನ ಅನುಭವದಲ್ಲಿ ಮತ್ತು ಸಂಸ್ಥೆಗಳಲ್ಲಿ ಎಲ್ಲಾ ಹಂತಗಳಲ್ಲಿಯೂ ಅಂದರೆ ವ್ಯಕ್ತಿಗತ, ಕೌಟುಂಬಿಕ, ಸಾಮಾಜಿಕ ಮತ್ತು ವಿಶ್ವದ ಎಲ್ಲಾ ರಂಗಗಳಲ್ಲಿಯೂ ಅವ್ಯವಸ್ಥೆಯು ಉಂಟಾಗುತ್ತಿದೆ.
ಜನರು ಇಂದು ಎದುರಿಸುತ್ತಿರುವ ಹತಾಶೆ, ಅವಿಶ್ರಾಂತಿ ಮತ್ತು ಕೋಪಗಳಿಗೆ ಕಾರಣವೇನೆಂದರೆ ಅವರಿಗೆ ಕ್ಷಣಿಕತೆಯ ಅತಿಶಯದ ಹೆಜ್ಜೆಗಳೊಂದಿಗೆ ಹೇಗೆ ವತರ್ಿಸುವುದೋ ತಿಳಿಯದು ಮತ್ತು ಇಂದು ರಾಜಕೀಯದಲ್ಲಿ ಆಥರ್ಿಕವಾಗಿ, ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲಿ ವಿರೋಧಾಭಾಸದ ವರ್ತನೆಗಳಿವೆ. ಆಳವಾಗಿ ಹುದುಗಿರುವ ಹತಾಶೆಯು ಹಿಂಸೆಯ ಹೆಚ್ಚಾಗುವಿಕೆಯಿಂದ, ಅಸಹನೆಯಿಂದ ಮತ್ತು ಮಾದಕ ವ್ಯಸನದಿಂದಾಗಿ ಇಂದು ಸಮಾಜದಲ್ಲಿ ವ್ಯಕ್ತವಾಗುತ್ತಿದೆ. ಅದೇವೇಳೆಯಲ್ಲಿ ನೈತಿಕ ಮೌಲ್ಯಗಳು ಬದಲಾಗಿವೆ. ಇವೆಲ್ಲವೂ ಭೌತಿಕವಾದದ ಮತ್ತು ಇಂದ್ರೀಯ ಭೋಗದ ವ್ಯಸನದ ಪರಿಣಾಮವೇ ಆಗಿದೆ. ಹಾಗೆಯೇ ಸಾಮಾಜಿಕ ಅರ್ಥ ವ್ಯವಸ್ಥೆಯಲ್ಲಿ ಎರಡು ಲಿಂಗಗಳಲ್ಲಿ ಆದ ಬದಲಾವಣೆಯು ಪ್ರಮುಖಪಾತ್ರ ವಹಿಸಿವೆ.
ಈಗಂತೂ ವಿವಾಹ ವಿಚ್ಛೇದನ ಮತ್ತು ಬೇರ್ಪಡುವಿಕೆಯ ಸಂಖ್ಯೆಯು ಅತಿಹೆಚ್ಚುತ್ತಿದೆ. ಹಾಗೆಯೇ ಆಕಸ್ಮಿಕ ವಿವಾಹೇತರ ಸಂಬಂಧಗಳು ಮತ್ತು ಲೈಂಗಿಕವಾಹಕ ರೋಗಗಳ ಘಟನೆಗಳು ಹೆಚ್ಚಾಗುತ್ತಿದೆ. ಇವೆಲ್ಲಾ ಸೂಚಿಸುವುದು ಏನೆಂದರೆ ವಿವಾಹ ಸಂಸ್ಥೆಯು ಪ್ರಯೋಗದ ಹಂತದಲ್ಲಿದೆ ಎಂದು. ಈಗಂತು ಬಹಳಷ್ಟು ಮಂದಿ ನಂಬುವುದು ಏನೆಂದರೆ ವಿವಾಹವು ಮುಗಿದು ಹೋದ ಕಾಲದ ಸಂಸ್ಥೆಯಾಗಿದ್ದು, ವಜರ್ಿಸಲು ಸರಿ ಎಂದು ನಂಬಿದ್ದಾರೆ.
ದೇಶಗಳು ಸಹಾ ಇಂದು ಉನ್ಮಾದದ ಔನತ್ಯದಲ್ಲಿದೆ. ವಿಶೇಷವಾಗಿ ಶಸ್ತ್ರಾಸ್ತ್ರದ ಓಟದ ಪಂದ್ಯದಲ್ಲಿ ಅವು ಕೇವಲ ಸೈನಿಕ ಸಾಮಾನುಗಳ ಸಂಗ್ರಹದಲ್ಲಿ ನಿರತವಾಗಿವೆ. ಅದರಿಂದಾಗಿ ಎಲ್ಲಾರೀತಿಯ ಜೀವಕುಲಕ್ಕೆ ವಿಪತ್ತು ಆಗಲಿದೆ. ಮಾನವರು ಪರಸ್ಪರ ಶಾಂತಿಯಿಂದ ಜೀವಿಸಲು ಕಲಿಯದಿದ್ದರೆ ಅದು ಹಾಗೆ ಆಗುವುದು. ಆತನು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅತಿ ಕರ್ತವ್ಯಬದ್ಧನಾಗಿ ಮತ್ತು ವಿವೇಚನೆಯಿಂದ ಬಳಸಬೇಕಾಗಿದೆ. ಮಾನವ ಜನಾಂಗದ ನಾಗರಿಕತೆಯು ಎಷ್ಟುಕಾಲ ಉಳಿಯುವುದು ಎಂಬುದೇ ಸಂಶಯಸ್ಥವಾಗಿದೆ. ಇಂದು ಪ್ರತಿ ದೇಶವು ಸಹಾ ಧ್ವಂಸಾತ್ಮಕ ಉದ್ದೇಶಗಳಿಗಾಗಿ ನ್ಯೂಕ್ಲಿಯರ್ ಶಸ್ತ್ರಗಳನ್ನು ತಯಾರಿಸುತ್ತಿದೆ. ಅದೇ ಇಂದು ದೊಡ್ಡ ಸ್ಪಧರ್ೆಯಾಗಿದೆ. ಹಾಗೆಯೇ ಅವರು ಜೈವಿಕ ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಮನುಕುಲದ ನಾಶಕ್ಕಾಗಿ ಉತ್ಪಾದಿಸುತ್ತಿದ್ದಾರೆ.
ಬೇರೊಂದು ವಿಧವಾಗಿ ಹೇಳುವುದಾದರೆ ಮನುಕುಲಕ್ಕೆ ಭವಿಷ್ಯವಿದೆಯೇ? ಇದೇ ವಿಧವಾದ ವರ್ತಮಾನವು ಅಂದರೆ ಸಾರ್ವತ್ರಿಕ ತೇಜೋಭಂಗವಾಗುತ್ತಿದೆ, ಸಂಭವನೀಯತೆ ಅತಿ ಅಲ್ಪವೆಂದು ಹೇಳಬಹುದು. ಆದರೆ ಮನುಕುಲವು ಭವಿಷ್ಯವನ್ನು ಹೊಂದಬಲ್ಲದೆ? ಹೌದು ಎನ್ನಬಹುದು. ಹೇಗೆಂದರೆ ಮನುಕುಲವು ತನ್ನ ಹಾದಿಗಳನ್ನು ಸುಧಾರಿಸುತ್ತಾ ಮತ್ತು ಜೀವಿಸುವುದನ್ನು ಪುನಃ ಕಲಿತರೆ, ಉದಾತ್ತ ಜೀವನಕ್ಕೆ ಅನುಸಾರವಾಗಿ ಜೀವಿಸಿದರೆ, ಬುದ್ಧರ ಮತ್ತು ಇನ್ನಿತರ ಧಾಮರ್ಿಕ ಗುರುಗಳ ಬೋಧನೆಯಂತೆ ನೈತಿಕ ಮತ್ತು ಧಮ್ಮ ಮೌಲ್ಯಗಳ ಅನುಸಾರವಾಗಿ ಜೀವಿಸಿದರೆ ಮನುಕುಲವು ಭವಿಷ್ಯ ಹೊಂದಬಲ್ಲದು.
ಹೇಗೆ ಸರಪಳಿಯ ಬಲಿಷ್ಠತೆಯು ಪ್ರತಿ ಕೊಂಡಿಗಳ ಬಲಿಷ್ಠತೆಯನ್ನು ಅವಲಂಬಿಸಿದೆಯೋ ಹಾಗೆಯೇ ಜಗತ್ತಿನ ಶಾಂತಿಯು ಪ್ರತಿ ಸಮಾಜದ ಮೇಲೆ, ಪ್ರತಿ ಕುಟುಂಬದ ಮೇಲೆ, ಪ್ರತಿ ವ್ಯಕ್ತಿಯ ಸುಶಾಂತಿಯ ಮೇಲೆ ಅವಲಂಬಿತವಾಗಿದೆ. ಇದನ್ನು ಪಿರಮಿಡ್ನಂತೆ ಹೋಲಿಸಬಹುದು. ಪ್ರತಿ ಹಂತದಲ್ಲೂ ಬಲಿಷ್ಠ ಸ್ಥಿರತೆ, ಸಾಧಿಸಿದಾಗಲೇ ಪಿರಮಿಡ್ ಆಗಬಲ್ಲದು.
ಆಧುನಿಕ ಮಾನವನು ಹೆಚ್ಚುಹೆಚ್ಚಾಗಿ ಇಂದ್ರೀಯಗಳ ಉತ್ತೇಜನವನ್ನು ಹುಡುಕುತ್ತಿದ್ದಾನೆ. ಇಯರ್ಫೋನ್ ಸಹಿತ ಅಥವಾ ರಹಿತವಾದ ಒಯ್ಯುವಂತ ರೇಡಿಯೋ, ಮೊಬೈಲ್ ಮತ್ತು ಟೆಲಿವಿಷನ್ಗಳಿಗೆ ಯುವಪೀಳಿಗೆ ವಶವಾಗಿರುವುದು ಇಂದ್ರೀಯಗಳ ಉತ್ತೇಜನವನ್ನು ಹುಡುಕುವುದು ಸ್ಪಷ್ಟವಾಗಿ ತಿಳಿಯುತ್ತದೆ. ಇವೆಲ್ಲದರಿಂದಾಗಿ ನಾವು ನಮ್ಮಂದಲೇ ಪರಕೀಯರಾಗಿದ್ದೇವೆ. ನಮಗೆ ನಮ್ಮ ನಿಜಸ್ವರೂಪವಾಗಲಿ ಅಥವಾ ಮನಸ್ಸಿನ ಸ್ವರೂಪವಾಗಲಿ ತಿಳಿದಿಲ್ಲ.
ಮೇಲಾಗಿ ನಾವು ಸಾಮಾಜಿಕ ಜೀವನದ ಯಾವುದೇ ವೃತ್ತಿಗೆ ಹೋದಾಗ, ನಾವು ಪ್ರತಿ ಸನ್ನಿವೇಶಕ್ಕೂ ಸಮಂಜಸ ಮುಖವಾಡಗಳನ್ನು ಹಾಕಿಕೊಳ್ಳುತ್ತೇವೆ. ನಾವು ಬಹಳಷ್ಟು ಸಲ ನಮ್ಮ ನಿಜ ಭಾವವೇಶಗಳಾದ ಅಸೂಯೆ, ಲೋಭ, ದ್ವೇಷ, ಅಹಂಕಾರ ಅಥವಾ ಸ್ವಾರ್ಥತೆಯನ್ನು ತೋರಿಸುವುದೇ ಇಲ್ಲ. ಅವೆಲ್ಲವನ್ನು ನಾವು ಸಾಮಾಜಿಕವಾಗಿ ಅಡಗಿಸಿ, ತೋರಿಕೆಯ ವಾಚಿಕ ವ್ಯಕ್ತತೆಯನ್ನು ಹೀಗೆ ನುಡಿಯುತ್ತಿರುವೆವು. ಅಭಿನಂದನೆಗಳು, ಕೃತಜ್ಞತೆಗಳು, ಆಳವಾದ ಸಹಾನುಭೂತಿ ಇತ್ಯಾದಿ. ಆದರೆ ಕೆಲವೊಮ್ಮೆ ನಮ್ಮ ನಕಾರಾತ್ಮಕ ಭಾವಾವೇಶಗಳು ಎಷ್ಟೊಂದು ತೀಕ್ಷ್ಣವಾಗುತ್ತದೆ ಎಂದರೆ ಅವೆಲ್ಲಾ ಹೊರಗೆ ವ್ಯಕ್ತವಾಗಿ ಹಿಂಸೆಯ ರೂಪದಲ್ಲಿ ಹಾಗೆಯೇ ಕಳ್ಳತನ, ಜಗಳ, ಚಾಡಿ ಇತ್ಯಾದಿಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೂ ಸಾಮಾನ್ಯವಾಗಿ ಈ ವಿಷಭರಿತ ಸರ್ಪಗಳನ್ನು ತಡೆಯಲು ಪ್ರಯತ್ನಿಸುತ್ತೇವೆ.


1.19 ವ್ಯಕ್ತಿಗತ ಹಂತದಲ್ಲಿ ಸಮಸ್ಯೆಗಳು

ಇಂದು ಅತ್ಯಂತ ಆಶ್ಚರ್ಯವಾಗುವ ವಿಷಯವೇನೆಂದರೆ ಯಾವುದೆಲ್ಲಾ ಅತಿ ಉನ್ನತ ಸಮಾಜವೆಂದು ಕರೆಸಿಕೊಳ್ಳುವ ಪಾಶ್ಚಿಮಾತ್ಯರೇ ಆಗಿರಲಿ ಅಥವಾ ಪೂವರ್ಾತ್ಯರೇ ಆಗಲಿ, ಅವರೆಲ್ಲರೂ ಲೋಭದ, ಭಯದ ಮತ್ತು ದ್ವೇಷದ ಪ್ರಾಬಲ್ಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬಹಳಷ್ಟು ಜನರು ಅವಿಶ್ರಾಂತಿ, ಹತಾಶೆ, ಮತ್ಸರ ಮತ್ತು ಹಗೆತನಗಳಿಗೆ ಒಳಗಾಗುವವರು ಹೆಚ್ಚಾಗುತ್ತಿದ್ದಾರೆ.
ಸಂಪತ್ತು ಮತ್ತು ಐಶಾರಾಮ ಜೀವನದಿಂದ ಬಂದಂತಹ ಬಹಳಷ್ಟು ಯುವಕರಿಗೆ ಜೀವನವೆಂದರೆ ಅರ್ಥವಿಲ್ಲದ್ದು ಆಗಿದೆ. ಅವರು ಕೋಪ ಮತ್ತು ಹತಾಶೆಗಳಿಂದಾಗಿ ಅವರು ನಾನಾ ಚಳುವಳಿಗಳಿಗೆ ಸೇರಿ ಯಾವುದಕ್ಕಾದರೂ ಪ್ರತಿಭಟನೆ ಮಾಡುವವರು ಆಗಿದ್ದಾರೆ. ಸ್ಥಾಪಿತವಾಗಿರುವ ಸಂಪ್ರದಾಯಗಳಿಗೆ ಸವಾಲು ಹಾಕುತ್ತಾರೆ. ನೈತಿಕತೆಯ ಅವನತಿ, ಕೌಟುಂಬಿಕ ಒಡಕು ಮತ್ತು ಬುದ್ಧಿವಿಕಲ್ಪಗೈಯುವ ಕಲೆ, ನೃತ್ಯ ಮತ್ತು ಫ್ಯಾಷನ್ಗಳಲ್ಲಿ ನುಗ್ಗಿ ಅವನ್ನು ಪೋಷಿಸುತ್ತಾರೆ.
ಎಲ್ಲಾರೀತಿಯ ಪರಿವರ್ತನೆ ಮತ್ತು ಐಶ್ವರ್ಯಗಳ ನಡುವೆಯೂ ಜನರು ಒಂಟಿಯಾಗಿದ್ದಾರೆ ಮತ್ತು ಬೇಸರದಿಂದಿದ್ದಾರೆ. ಈ ಜಗತ್ತಿನಲ್ಲಿ ಆರು ಲಕ್ಷ ಕೋಟಿ ನಿವಾಸಿಗಳು ಇದ್ದಾಗಲೂ, ಜನರು ಒಂಟಿತನದಲ್ಲೇ ತುಂಬಿರುವುದು ವಿರೋಧಾಭಾಸ ವಲ್ಲವೆ? ಬಹಳಷ್ಟು ಮಟ್ಟಿಗೆ ಇದು ನಿಜವಾಗಿದೆ. ಆದರೆ ಏಕಾಂಗಿಯಾಗಿದ್ದಾಗಲೂ ಒಂಟಿತನದ ವೇದನೆ ಅನುಭವಿಸುತ್ತಾನೆ ಎಂದೂ ಅರ್ಥವಲ್ಲ. ಧ್ಯಾನಿಯು ಅರಣ್ಯದಲ್ಲಿ ಏಕಾಂಗಿಯಾಗಿದ್ದಾಗ, ತನ್ನ ಮನೋವಿಕಾಸಕ್ಕಾಗಿ ಪೂರ್ಣವಾಗಿ ಭತರ್ಿಯಾಗಿರುತ್ತಾನೆ. ಹಾಗೆಯೇ ಒಬ್ಬನು ದೊಡ್ಡ ಜನಜಂಗುಳಿಯ ಮಧ್ಯದಲ್ಲಿದ್ದರೂ ಸಹಾ ಒಂಟಿತನದ ವೇದನೆಯಿಂದ ಪೂರ್ಣವಾಗಿ ಹೊರಬಂದಿರುತ್ತಾನೆ.
ಒಬ್ಬನು ಹೀಗೆ ಸ್ಥಿರಪಡಿಸಿಕೊಳ್ಳಬೇಕು ಯಾವಾಗ ನಾನು ಏಕಾಂಗಿಯಾಗಿರುವೆನು, ಆಗ ನಾನು ಒಂಟಿಯಾಗಿರುವುದಿಲ್ಲ, ಏಕೆಂದರೆ ನನ್ನ ಇಷ್ಟದಂತೆ ವತರ್ಿಸಲು ನಾನು ಸ್ವತಂತ್ರನಾಗಿರುತ್ತೇನೆ. ಆದರೆ ನಾನು ಸಮಾಜದ ಇತರರೊಂದಿಗೆ ಬೆರೆತಾಗ ಮಾತ್ರ ಒಂಟಿಯಾಗಿರುತ್ತೇನೆ. ಆಗ ನಾನು ಒಂಟಿತನವನ್ನು ಅನುಭವಿಸುತ್ತೇನೆ. ಹೇಗೆಂದರೆ ಆಗ ನನಗೆ ಸ್ಥಳರಹಿತನೆನಿಸುತ್ತದೆ, ಪಕ್ಷಪಾತದ ಸಂದೇಹವೇಳುತ್ತದೆ, ಸಂಪ್ರದಾಯಗಳು, ತೋರಿಕೆಯ ವರ್ತನೆಗಳು ಮತ್ತು ಶಾಸ್ತ್ರೋಕ್ತ ಪದ್ಧತಿಗಳ ಸಮಾಜದಲ್ಲಿ ತುಂಬಿವೆ ಎನಿಸುತ್ತದೆ, ಆದ್ದರಿಂದ ಏಕಾಂತತೆಯೇ ಶ್ರೇಷ್ಠ.
ಬಹಳಷ್ಟು ಜನರಿಗೆ ತಮ್ಮ ಜೀವನವು ಬರಿದಾದುದು ಎಂದೆನಿಸುತ್ತದೆ. ಅವರಿಗೆ ಜೀವನವು ಉದ್ದೇಶರಹಿತವಾದುದು ಎಂದೆನಿಸಿ, ಅದು ಒಂದೇರೀತಿಯ ಯಾಂತ್ರಿಕ ಕೆಲಸದಿಂದಾಗಿ ಬೇಸರ ಮೂಡುತ್ತದೆ. ಹೀಗಾಗಿ ಅವರು ಇಂತಹವುಗಳಿಂದ ಮತ್ತು ಒಂಟಿತನದಿಂದ ಬೇಸತ್ತು ಹೊರಬರುವುದಕ್ಕಾಗಿ ಹೇಯ ಕೃತ್ಯಗಳಲ್ಲಿ ತೊಡಗುತ್ತಾರೆ. ಆಕರ್ಷಣೆ ಮೂಡುವಂತಹ ವಸ್ತ್ರಗಳನ್ನು ತೊಡುತ್ತಾರೆ ಅಥವಾ ವಿಭಿನ್ನ ವಿಚಿತ್ರ ಕೇಶಾಲಂಕಾರವನ್ನು ಮಾಡಿಕೊಳ್ಳುತ್ತಾರೆ. ಹಾಗೆಯೇ ಜೂಜಾಟದಲ್ಲಿ ತೊಡಗುತ್ತಾರೆ, ನಂತರ ಕಳ್ಳತನ ಅಥವಾ ಹೊಡೆದಾಟದಲ್ಲೂ ತೊಡಗುತ್ತಾರೆ. ಕೇವಲ ಜೀವನದಲ್ಲಿ ಉತ್ತೇಜನ ಹೊಂದಲು ಹೀಗೆ ಮಾಡುತ್ತಾರೆ. ಆದರೆ ಎಲ್ಲಿಯವರೆಗೆ ತಮ್ಮಲ್ಲೇ ತಲ್ಲೀನರಾಗುತ್ತಾರೋ ಮತ್ತು ಅವರ ತಣಿಯಲಾಗದ ಬಯಕೆಗಳಿಂದಾಗಿ ಅವರ ಸಹಚರರಿಗೆ ಒಳಿತು ಆಗುವ ಬದಲು ಅವರ ಒಂಟಿತನವು ನಿರಂತರ ಹಾಗೆಯೇ ಉಳಿದುಬಿಡುತ್ತದೆ.
ಈ ಒಂಟಿತನದಿಂದ ದೂರವಾಗಲು ಜನರು ಮದ್ಯವ್ಯಸನಕ್ಕೆ ಬಲಿಯಾಗಿ, ಸಮಾಜದಲ್ಲಿ ಒಂದಾಗಿ ಬೆರೆಯಲು ಅಥವಾ ಮುಳುಗುವ ಹಾದಿ ಎಂದು ಅಥವಾ ಒಂಟಿತನವನ್ನು ತೊಳೆದುಹಾಕಲು ಮದ್ಯಪಾನಕ್ಕೆ ತಿರುಗುತ್ತಾರೆ. ಆದರೆ ಮದ್ಯಪಾನವು ಒಬ್ಬನ ಸಮಸ್ಯೆಗಳನ್ನು ಎಂದಿಗೂ ತೊಳೆಯಲಾರದು. ಅದು ಕೇವಲ ಸಮಸ್ಯೆಗಳನ್ನು ಬೆಂಕಿಗೆ ಎಣ್ಣೆಯನ್ನು ಸುರಿದಂತೆ ಇನ್ನಷ್ಟು ಹಾಳುಮಾಡುತ್ತದೆ.


1.20 ಒತ್ತಡವು ನಾಗರಿಕತೆಯ ರೋಗ

ಒತ್ತಡವನ್ನು ಅರ್ಥಮಾಡಿಕೊಳ್ಳುವಿಕೆ ಮತ್ತು ನಿರ್ವಹಿಸುವಿಕೆ : ಒತ್ತಡ ಎಂಬ ಪದವನ್ನು ಮನಶಾಸ್ತ್ರ ಮತ್ತು ಔಷಧ ಶಾಸ್ತ್ರದಲ್ಲಿ ಬಳಸುತ್ತಾರೆ. ಇದು ತಂತ್ರವಿಜ್ಞಾನದ ಭಾಗವಾಗಿದೆ. ಇಲ್ಲಿ ಅದರ ಅರ್ಥವೆಂದರೆ ಒಂದು ಪ್ರದೇಶದ ಮೇಲೆ ಬಲ ಅಥವಾ ಒತ್ತಡದ ಪ್ರಯೋಗವಾಗುವಿಕೆ. ಈಗಿನ ಯುಗದಲ್ಲಿ ಹಲವು ಬಲಗಳು ಪಾತ್ರವಹಿಸುತ್ತವೆ ಮತ್ತು ಹೀಗಾಗಿ ಈ ಅತಿಯಾದ ಒತ್ತಡದೊಂದಿಗೆ ಹೋರಾಡುವುದು ಅತಿ ಕಷ್ಟಕರವಾಗಿದೆ. ಆದ್ದರಿಂದ ಒತ್ತಡವು ನಾಗರಿಕತೆಯ ರೋಗ ಎನಿಸಿದೆ. ಪಿಲಿಪ್ ಜéೆಮ್ಬಾರ್ಡೊ ತನ್ನ ಮನಶಾಸ್ತ್ರ ಮತ್ತು ಜೀವನದಲ್ಲಿ ನಾವು ಪರಿಸರದೊಂದಿಗೆ ಪ್ರತಿಕ್ರಿಯೆ ಮಾಡುವಂತಹ ನಾಲ್ಕು ಪರಸ್ಪರ ಸಂಬಂಧವುಳ್ಳ ಹಂತಗಳನ್ನು ಹೇಳುತ್ತಾನೆ.
ಅವು ಯಾವುವೆಂದರೆ : ಭಾವನಾತ್ಮಕ ಹಂತ, ವರ್ತನೆಯ ಹಂತ, ಮಾನಸಿಕ ಹಂತ ಮತ್ತು ತಿಳುವಳಿಕೆಯ ಹಂತ. ಒತ್ತಡದಿಂದಾಗಿ ಭಾವನಾತ್ಮಕವಾಗಿ ಆಗುವ ಪ್ರತಿಕ್ರಿಯೆಯೇ ದುಃಖ, ಹತಾಶೆ, ಕೋಪ, ಶೀಘ್ರಸಿಟ್ಟು ಮತ್ತು ನಿರಾಸೆಯಾಗಿದೆ. ಒತ್ತಡದಿಂದಾಗಿ ವರ್ತನೆಯ ಹಂತದಲ್ಲಾಗುವ ಪ್ರತಿಕ್ರಿಯೆ ಎಂದರೆ ದುರ್ಬಲ ಏಕಾಗ್ರತೆ, ಮರೆಯುವಿಕೆ, ದುರ್ಬಲ ಪರಸ್ಪರ ಸಂಬಂಧದ ಬಾಂಧವ್ಯಗಳು ಮತ್ತು ಅಲ್ಪ ಉತ್ಪಾದನೆ.
ಒತ್ತಡದಿಂದಾಗುವ ಮಾನಸಿಕ ಹಂತದ ಪ್ರತಿಕ್ರಿಯೆಗಳೆಂದರೆ ದೈಹಿಕ ಬಿಗಿತನ. ಅದರಿಂದಾಗಿ ತಲೆನೋವು, ಬೆನ್ನುನೋವು, ಹೊಟ್ಟೆಯ ಅಲ್ಸರ್, ಅತಿಯಾದ ರಕ್ತದೊತ್ತಡ ಮತ್ತು ಮರಣಾಂತಿಕ ರೋಗಗಳು ಸಹಾ ಉಂಟಾಗುತ್ತವೆ. ಮತ್ತು ಒತ್ತಡದಿಂದಾಗಿ ತಿಳುವಳಿಕೆ ಹಂತದಲ್ಲಿ ಆಗುವ ಪ್ರತಿಕ್ರಿಯೆ ಏನೆಂದರೆ ಒಬ್ಬನು ತನ್ನ ಮೇಲಿನ ಶ್ರದ್ಧೆಯನ್ನೇ ಕಳೆದುಕೊಳ್ಳಬಹುದು. ಅದರಿಂದಾಗಿ ಆತನು ಆಶಾರಹಿತನಾಗಿ ಮತ್ತು ಅಸಹಾಯಕ ಮನೋವೃತ್ತಿವುಳ್ಳವನಾಗಬಹುದು. ಅಂತಹ ವ್ಯಕ್ತಿಯು ಆತ್ಮಹತ್ಯೆ ಸಹಾ ಮಾಡಿಕೊಳ್ಳಬಲ್ಲನು.
ಒತ್ತಡವನ್ನು ಅರ್ಥಮಾಡಿಕೊಳ್ಳಬೇಕಾದರೆ ಆಧುನಿಕ ಮಾನವನನ್ನು ಒತ್ತಡಕ್ಕೆ ಎಡೆಮಾಡುವ ಹಲವಾರು ಪರಿಸರಾತ್ಮಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಈ ಅಣು ಯುಗದಲ್ಲಿ ಉಳಿದಿರುವ ಜೀವಿಗಳೇ ಬೆದರಿಕೆಗೆ ಒಳಪಟ್ಟಿವೆ. ಅಣು ಯುದ್ಧವು ಯಾವ ದೇಶವೇ ಆಗಿರಲಿ, ಅದು ಅಣ್ವಸ್ತ್ರ ಹೊಂದಿರಲಿ ಅಥವಾ ಇಲ್ಲದಿರಲಿ ಪ್ರತಿ ಮಾನವನನ್ನು ಹೆದರಿಸುತ್ತಿದೆ. ಜನಸಂಖ್ಯಾ ಸ್ಫೋಟವು ಮಾನವನಿಗೆ ಆಹಾರ ಕೊರತೆಯ ಭೀತಿ ಹುಟ್ಟಿಸುತ್ತದೆ.
ಇಂದು ಜನಸಂಖ್ಯೆಯ ಅತ್ಯಧಿಕ ಭಾಗ ಯೋಗ್ಯ  ಪೋಷಣೆಯಿಲ್ಲದೆ ಇದೆ. ಹಾಗೆಯೇ ಜನರು ಆಹಾರವಿಲ್ಲದೆ ಹಾಗು ಪೋಷಕಾಂಶದ ಸಮತೋಲನದ ಆಹಾರವಿಲ್ಲದೆ ಸಾಯುತ್ತಿದ್ದಾರೆ. ಹಾಗೆಯೇ ಪರಿಸರ ಮಾಲಿನ್ಯವು ಸಹಾ ಶಾರೀರಿಕ ಮತ್ತು ಮಾನಸಿಕ ವ್ಯಾಧಿಗಳನ್ನು ನೀಡಿದೆ.
ಕೌಶಲ್ಯವುಳ್ಳವರಲ್ಲಿ ನಿರುದ್ಯೋಗಿಗಳು. ಇದು ಸಹಾ ಬೆಳೆಯುತ್ತಿರುವ ವಿಶ್ವಮಟ್ಟದ ಸಮಸ್ಯೆಯಾಗಿದೆ. ಇಂದು ಮಾನವನ ಜೀವನದ ವೇಗ ಹೇಗಿದೆ ಎಂದರೆ ಆತನು ಕೇವಲ ಒಂದು ಕಾರ್ಯದಿಂದ, ಇನ್ನೊಂದಕ್ಕೆ ರಭಸವಾಗಿ ನುಗ್ಗುತ್ತಿದ್ದಾನೆ. ಆತನಿಗೆ ಯಾವುದೇ ವಿಶ್ರಾಂತಿ ಇಲ್ಲವಾಗಿದೆ. ಇಂದು ಅಪಾರವಾಗಿ ಕೆಲಸದವನರನ್ನು, ಕಾಮರ್ಿಕರನ್ನು ಉಳಿಸುವ ಸಾಧನಗಳಿದ್ದರೂ ಎಂದೂ ಇಲ್ಲದಿದ್ದ ಈ ರೀತಿಯ ಅಪೂರ್ವ ಪರಿಮಾಣವಿದ್ದರೂ ವಿಶ್ರಾಂತಿ ಇಲ್ಲದಿರುವುದು ನಿಜಕ್ಕೂ ವಿರೋಧಾಭಾಸದ ಸಂಗತಿಯಾಗಿದೆ.
ವಿದ್ಯಾಭ್ಯಾಸದ ಮತ್ತು ವೃತ್ತಿಯ ಅವಕಾಶಗಳ ಸ್ಪಧರ್ೆಯು ಇಂದು ಎಷ್ಟು ನಿಷ್ಠೂರವಾಗಿದೆ ಎಂದರೆ ಆತ್ಮಹತ್ಯೆಗಳ ವೇಗವು ಹೆಚ್ಚಾಗಿದೆ. ಇಂದ್ರೀಯ ಭೋಗಗಳ ದಾಹವು ಇಂದು ಯಾವ ಆಳಕ್ಕೆ ಹೋಗಿದೆ ಎಂದರೆ ಉಪ್ಪು ನೀರನ್ನು ದಾಹದ ತೀರಿಸುವಿಕೆಗೆ ಬಳಸುವಂತಾಗಿದೆ. ನಿರಂತರ ಇಂದ್ರೀಯಗಳ ಉತ್ತೇಜನವೇ ಇಂದಿನ ಅಗತ್ಯತೆ ಎಂದು ಭಾವಿಸಿಕೊಂಡಿದ್ದಾರೆ. ಹೀಗಾಗಿ ಇಯರ್ ಫೋನ್ ಸಹಿತ ಪ್ಯಾಕೆಟ್ ರೇಡಿಯೋ (ಮೊಬೈಲ್) ಮತ್ತು ಸೌಂದರ್ಯ ಸಾಮಗ್ರಿಗಳು ಎಲ್ಲೆಡೆ ಚಲಾವಣೆಯಲ್ಲಿವೆ. ಇಂದ್ರೀಯ ಸುಖಗಳ ಉತ್ತೇಜನ ಎಲ್ಲೆಡೆ ಹಬ್ಬಿದರೂ, ಅವುಗಳ ತೃಪ್ತಿಯನ್ನು ಮಾತ್ರ ಎಂದಿಗೂ ಸಾಧಿಸಲಾಗಲಿಲ್ಲ. ಹೀಗಾಗಿ ಮಾನವ ಇವುಗಳಲ್ಲಿ ಸಿಲುಕಿರುವುದು ಆಶ್ಚರ್ಯವೇನಲ್ಲ. ಆತನು ಭಯಾನಕವಾಗಿ ಗೊಂದಲಕ್ಕೀಡಾಗಿ, ಹತಾಶೆಗೊಂಡಿದ್ದಾನೆ ಮತ್ತು ಆತನ ಜೀವನವು ಸಹಿಸಲಾಗದ ಒತ್ತಡಕ್ಕೆ ಒಳಗಾಗಿದೆ. ಇಂತಹ ಸನ್ನಿವೇಶವನ್ನು ಬುದ್ಧ ಭಗವಾನರು ಬಲೆಯಲ್ಲಿ ಒಳಗೂ, ಹೊರಗೂ ಎಲ್ಲೆಡೆ ಸಿಲುಕಿರುವಿಕೆ ಎಂದಿದ್ದಾರೆ.
ನಿಜಸುಖಕ್ಕಾಗಿ ತಡೆಗಳು
ಈ ಮೇಲಿನ ಅವಲೋಕನವು ಆಧುನಿಕ ಅಧ್ಯಯನದಂತೆ ಸಮಕಾಲೀನ ಸ್ಥಿತಿಗಳನ್ನು ವಿವರಿಸಲಾಗಿದೆ. ಬುದ್ಧ ಧಮ್ಮವು ಸಹಾ ಸಮಾನರೂಪ ಅವಲೋಕನವನ್ನು ಮನಶಾಸ್ತ್ರಿಯ ನೋಟದಲ್ಲಿ ಮಾಡಿದೆ. ಮಾನವ ಒತ್ತಡ ಮತ್ತು ದುಃಖವನ್ನು ಅನುಭವಿಸುವುದು ಐದು ಮನೋಸ್ಥಿತಿಗಳಿಂದಲೇ ಅವು ಅತನ ಇಡೀ ವ್ಯಕ್ತಿತ್ವವನ್ನೇ ಆವರಿಸಿದೆ.
ಅದನ್ನು ಪಾಳಿ ಭಾಷೆಯಲ್ಲಿ ನಿವರಣ ಎಂದು ಕರೆಯುತ್ತಾರೆ. ಅವು ಸುಖಕ್ಕೆ ತಡೆಯಾಗಿದ್ದು ಮತ್ತು ಮಾನವನ ದೃಷ್ಟಿಕೋನಕ್ಕೆ ಮುಸುಕು ಹಾಕುತ್ತವೆ. ಅಷ್ಟೇ ಅಲ್ಲದೆ ಆತನ ಪರಿಸರಕ್ಕೂ ಮತ್ತು ಇವೆರಡರ ನಡುವಿನ ಸಂವಹನ ಕ್ರಿಯೆಯಲ್ಲಿ ತಡೆಮಾಡುತ್ತದೆ. ಈ ತಡೆಗಳು ದಟ್ಟವಾದಷ್ಟು ಮತ್ತು ಬಲಿಷ್ಟವಾದಷ್ಟು, ಮಾನವನ ಒತ್ತಡ ಮತ್ತು ದುಃಖಗಳು ಅಧಿಕವಾಗಿ ಅನುಭವಿಸುತ್ತಾನೆ. ಹಾಗೆಯೇ ಈ ತಡೆಗಳು ತೆಳುವಾದಷ್ಟು ಮತ್ತು ವಿರಳವಾದಷ್ಟು ಆತನ ಸುಖವು ಹೆಚ್ಚಾಗಿ ದುಃಖವು ಕ್ಷೀಣವಾಗುತ್ತ ಹೋಗುತ್ತದೆ.
ಈ ಐದು ತಡೆಗಳು (ನಿವರಣ) ಯಾವುವೆಂದರೆ: ಇಂದ್ರೀಯ ಸುಖಗಳ ಬಯಕೆ, ಕೋಪ, ಸೋಮಾರಿತನ, ಚಿಂತೆ ಮತ್ತು ಸಂದೇಹ. ಪಾಳಿ ಸಾಹಿತ್ಯವು ಈ ಐದು ನಿವರಣಗಳನ್ನು ಐದು ಉಪಮೆಯ ಮೂಲಕ ವಿವರಿಸುತ್ತದೆ. ಯಾವ ಮನಸ್ಸು ಇಂದ್ರೀಯ ಸುಖಗಳನ್ನು ಬಯಸುತ್ತದೋ ಅದು ಬಣ್ಣಗಳ ನೀರಿನಂತೆ, ಬಣ್ಣದ ನೀರಿನಲ್ಲಿ ನಾವು ನಿಜ ಪ್ರತಿಬಿಂಬವನ್ನು ನೋಡಲಾಗುವುದಿಲ್ಲ, ಅದಕ್ಕೆ ಬಣ್ಣವೇ ತಡೆಯಾಗಿದೆ.
ಹೀಗೆ ಯಾವ ಮನುಷ್ಯ ಬಯಕೆಗಳಿಂದ ಕೂಡಿರುವನೋ ಆತನಿಗೆ ತನ್ನ ನಿಜ ಯಥಾರೂಪ ದರ್ಶನವಾಗುವುದಿಲ್ಲ. ಕೇವಲ ಆತನದಷ್ಟೇ ಅಲ್ಲ, ಪರರ ಅಥವಾ ಪರಿಸರದ ನಿಜಸ್ವರೂಪವನ್ನು ಆತನು ಕಾಣಲಾರ. ಹಾಗೆಯೇ ಯಾವ ಮನಸ್ಸು ಕೋಪದಿಂದ ಕೂಡಿರುವುದೋ, ಅದನ್ನು ಕುದಿಯುವ ನೀರಿಗೆ ಹೋಲಿಸಲಾಗುತ್ತದೆ. ಕುದಿಯುವ ನೀರು ಸ್ಪಷ್ಟವಾದ ಪ್ರತಿಬಿಂಬ ನೀಡಲಾರದು. ಹಾಗೆಯೇ ಯಾವ ಮನುಷ್ಯ ಕೋಪಕ್ಕೆ ಅಧೀನನಾಗಿರುವನೋ ಆತನು ಸಹಾ ವಿಷಯಗಳನ್ನು, ಯಥಾಭೂತವಾಗಿ ಗ್ರಹಿಸಲಾರನು.
ಯಾವ ಮನಸ್ಸು ಸೋಮಾರಿತನದ ಹಿಡಿತಕ್ಕೆ ಸಿಲುಕಿರುವುದೋ ಅದು ಪಾಚಿಗಟ್ಟಿದ ನೀರಿನಂತೆ ಇರುತ್ತದೆ. ಆಗ ಬೆಳಕು ಸಹಾ ಅದರಲ್ಲಿ ತೂರಲಾರದು ಮತ್ತು ಪ್ರತಿಬಿಂಬ ಕಾಣುವುದು ಸಹಾ ಅಸಾಧ್ಯವಾಗುತ್ತದೆ. ಅದೇರೀತಿಯಲ್ಲಿ ಸೋಮಾರಿ ಮನುಷ್ಯನು ಯೋಗ್ಯ ಅರಿವು ಪಡೆಯಲು ಪ್ರಯತ್ನವೇಪಡುವುದಿಲ್ಲ. ಅದೇರೀತಿ ಚಿಂತಾಕ್ರಾಂತ ಚಿತ್ತವು ಅಲೆಗಳ ನೀರಿನಂತೆ ಅದು ಸಹಾ ಪ್ರತಿಬಿಂಬ ನೀಡಲಾರದು.
ಚಿಂತೆಯುಳ್ಳ ಮನುಷ್ಯ ಎಂದಿಗೂ ಅವಿಶ್ರಾಂತನಾಗಿರುತ್ತಾನೆ. ಆಗ ಆತನು ಯಾವುದೇ ವಿಷಯದಲ್ಲಿ ಯೋಗ್ಯ ಬೆಲೆ ಕಟ್ಟುವಲ್ಲಿ ವಿಫಲನಾಗುತ್ತಾನೆ ಮತ್ತು ಸಂಶಯಯುಕ್ತ ಮನಸ್ಸು ರಾತ್ರಿ ಹೊತ್ತಿನ ಕೆಸರಿನ ನೀರಿನಂತೆ ಇದ್ದು, ಅದರಲ್ಲೂ ಪ್ರತಿಬಿಂಬ ಕಾಣುವುದಿಲ್ಲ. ಹೀಗೆ ಎಲ್ಲಾ ಐದು ತಡೆಗಳು ಮನಸ್ಸಿನ ಅರಿವು ಮತ್ತು ಸುಖವನ್ನು ಕಸಿಯುತ್ತವೆ ಮತ್ತು ಒತ್ತಡ ಹಾಗು ದುಃಖಕ್ಕೆ ಕಾರಣಕರ್ತವಾಗುತ್ತವೆ.


ಶೀಲದ ಅಭಿವೃದ್ಧಿಯಿಂದ ಸುಖ

ಬೌದ್ಧ ಧಮ್ಮವು ಒತ್ತಡ ಮತ್ತು ದುಃಖದ ಕ್ರಮವಾದ ಕ್ಷಯಕ್ಕೆ (ವಿನಾಶಕ್ಕೆ) ಮತ್ತು ಸುಖ ಹಾಗು ಅರಿವಿನ ವೃದ್ಧಿಗೆ ಪರಮ ಯೋಗ್ಯವಾದ ವಿಧಾನವನ್ನು ನೀಡಿದೆ. ಅದರಲ್ಲಿರುವ ಮೊದಲ ಹೆಜ್ಜೆಯೇ ಪಂಚಶೀಲವನ್ನು ಸ್ವ-ಇಚ್ಛೆಯಿಂದ ಪಾಲಿಸುವುದು. ಅದೆಂದರೆ ಕೊಲ್ಲುವಿಕೆಯಿಂದ ವಿರತನಾಗುವುದು, ಕಳ್ಳತನದಿಂದ ವಿರತನಾಗುವುದು, ಅನೈತಿಕ ಲೈಂಗಿಕತೆಯಿಂದ ದೂರವಿರುವುದು, ಸುಳ್ಳನ್ನಾಡದಿರುವುದು ಮತ್ತು ಯಾವುದೇ ರೀತಿಯ ಮಾದಕ ಮತ್ತು ಮದ್ಯಪಾನದಿಂದ ವಿಮುಕ್ತನಾಗಿರುವುದು. ಒತ್ತಡವು ಪಾಪದ ಪಶ್ಚಾತ್ತಾಪದಿಂದ ಹೆಚ್ಚಾಗುತ್ತದೆ ಮತ್ತು ಈ ಪಂಚಶೀಲಗಳು ಮಾನವನನ್ನು ಪಾಪದ ಪಶ್ಚಾತ್ತಾಪದಿಂದ (ಅಪರಾಧಿ ಮನೋಭಾವ) ಮುಕ್ತನನ್ನಾಗಿಸುತ್ತದೆ. ಧಮ್ಮಪದವು ಹೀಗೆ ಹೇಳುತ್ತದೆ ಪಾಪಿಯು ಇಲ್ಲಿಯು ದುಃಖಿಸುತ್ತಾನೆ ಮತ್ತು ಪರಲೋಕದಲ್ಲಿಯೂ ದುಃಖಿಸುತ್ತಾನೆ ಹಾಗೆಯೇ ಮತ್ತೊಂದೆಡೆ ಪುಣ್ಯಶಾಲಿಯು ಇಲ್ಲಿಯೂ ಆನಂದಿಸುತ್ತಾನೆ ಮತ್ತು ಪರಲೋಕದಲ್ಲಿಯೂ ಆನಂದಿಸುತ್ತಾನೆ ಎಂದಿದೆ.
ಬೌದ್ಧ ಧಮ್ಮವು ದೃಢವಾಗಿ ನಂಬುವುದು ಏನೆಂದರೆ ಪಾಪವು ಒತ್ತಡವನ್ನು ವೃದ್ಧಿಸುತ್ತದೆ. ಹಾಗೆಯೇ ಪುಣ್ಯವು ಸುಖವನ್ನು ವೃದ್ಧಿಸುತ್ತದೆ. ಜೀವನವಿಡೀ ಪಂಚಶೀಲದ ಆಚರಣೆಯ ಜೊತೆಗೆ ಬೌದ್ಧ ಉಪಾಸಕರು ಉಪಾಸೋಥ ದಿನಗಳಲ್ಲಿ ಅಷ್ಠಾಂಗ ಶೀಲಗಳನ್ನು ಪರಿಪಾಲಿಸುತ್ತಾರೆ. ಈ ಹೆಚ್ಚಿನ ಶೀಲಗಳು ಮಾನವನಿಗೆ ಲೋಭವಿಲ್ಲದೆ ತೃಪ್ತಿಯಿಂದ ಮಾನವ ಹೇಗೆ ಜೀವಿಸಬಹುದು ಎಂದು ಕಲಿಸುತ್ತದೆ. ಸರಳ ಜೀವನವು ಅಲ್ಪ ಅವಶ್ಯಕತೆಗಳಿಂದ ಕೂಡಿರುತ್ತದೆ ಮತ್ತು ಈ ರೀತಿಯ ಸಂತೃಪ್ತಿಯನ್ನು ಬೌದ್ಧ ಧಮ್ಮದಲ್ಲಿ ಅತಿ ಶ್ಲಾಘನೆ ಮಾಡುತ್ತಾರೆ. ಅತ್ಯಾಸೆಯ ಮತ್ತು ಸಂಗ್ರಹ ಬುದ್ಧಿಯೇ ಒತ್ತಡಕ್ಕೆ ಪ್ರಧಾನ ಕಾರಣವಾಗಿದೆ.


ಇಂದ್ರೀಯಗಳ ನಿಗ್ರಹದಿಂದಾಗಿ ಸುಖ

ಮುಂದಿನ ಹೆಜ್ಜೆಯೆಂದರೆ ಇಂದ್ರೀಯಗಳನ್ನು ಪೂರ್ಣ ವಶೀಕೃತ ಮಾಡುವಿಕೆ, ಯಾವಾಗ ನಮ್ಮ ಇಂದ್ರೀಯಗಳು ಅನಿಯಂತ್ರಿತವಾಗುವವೋ ಆಗ ನಾವು ಅತಿಯಾದ ಒತ್ತಡವನ್ನು ಅನುಭವಿಸುತ್ತೇವೆ. ಇದಕ್ಕೆ ಮೊದಲು ಇಂದ್ರೀಯಗಳ ಅನಿಯಂತ್ರತೆ ಎಂದರೇನು ಎಂಬುದನ್ನು ಅರಿಯೋಣ. ಯಾವಾಗ ಒಬ್ಬನು ಸುಂದರವಾದ ದೃಶ್ಯವನ್ನು ನೋಡುತ್ತಾನೋ, ಆಗ ಆತನು ಆಕಷರ್ಿತನಾಗುತ್ತಾನೆ. ಹಾಗೆಯೇ ಅಪ್ರಿಯ ದೃಶ್ಯಗಳನ್ನು ನೋಡಿದಾಗ, ಅದನ್ನು ಆತನು ತಿರಸ್ಕರಿಸುತ್ತಾನೆ.
ಅದೇರೀತಿಯಲ್ಲಿ ಇತರ ಇಂದ್ರೀಯಗಳಲ್ಲೂ ಆಗುತ್ತವೆ. ಹೀಗಾಗಿ ವ್ಯಕ್ತಿಯು ಇಂದ್ರೀಯಗಳಲ್ಲಿ ಯಾವುದೇ ನಿಯಂತ್ರಣವನ್ನು ಹೊಂದಿಲ್ಲ. ಆತ ನಿರಂತರವಾಗಿ ಆಕಷರ್ಿತನಾಗುವುದು ಮತ್ತು ವಿಕಷರ್ಿತ (ತಿರಸ್ಕಾರ) ಆಗುವುದು, ಜಾಗೃತವಾಗಿರುವಾಗ ಇಂದ್ರೀಯಗಳು ನಿರಂತರ ಮಾಹಿತಿಯನ್ನು ಪಡೆಯುತ್ತಲೇ ಇರುತ್ತವೆ. ಯಾವಾಗ ಗಮನವನ್ನು ವಿಭಿನ್ನ ದಿಕ್ಕುಗಳತ್ತ ಎಳೆಯಲ್ಪಟ್ಟಾಗ, ನಾವು ಗೊಂದಲಕ್ಕೀಡಾಗಿ ಒತ್ತಡಕ್ಕೆ ಒಳಗಾಗುವೆವು.
ನಮ್ಮ ಇಂದ್ರೀಯಗಳಿಗೆ ವಿಭಿನ್ನ ವಸ್ತು ವಿಷಯಗಳಿರುತ್ತವೆ ಮತ್ತು ವಿಭಿನ್ನ ಕಾರ್ಯಕ್ಷೇತ್ರಗಳೂ ಸಹಾ ಇರುತ್ತವೆ ಮತ್ತು ಹೇಗೆ ಅವು ಪ್ರತ್ಯೇಕವಾಗಿ ಮತ್ತು ಒಟ್ಟಾರೆ ಮಾನವನ ಮೇಲೆ ಅಧಿಪತ್ಯ ನಡೆಸುವವೋ ಅದಕ್ಕೆ ಅವನ್ನು ಇಂದ್ರೀಯಗಳು ಎಂದು ಪಾಳಿಯಲ್ಲಿ ಕರೆಯುತ್ತಾರೆ. ಅದರ ಅರ್ಥವೇನೆಂದರೆ ಪ್ರಭುಗಳು ಅಥವಾ ಒಡೆಯರು, ನಾವೇನಾದರೂ ಇಂದ್ರೀಯಗಳಿಗೆ ಅಧಿಪತ್ಯ ನಡೆಸಲು ಬಿಟ್ಟರೆ, ನಾವು ಭೀಕರವಾಗಿ ಗೊಂದಲಕ್ಕೆ ಈಡಾಗುವೆವು. ಆದರೆ ಅದಕ್ಕೆ ಬದಲಾಗಿ ನಾವೇ ಇಂದ್ರೀಯಗಳನ್ನು ಅಧಿಪತ್ಯ ನಡೆಸಿದರೆ, ನಿಗ್ರಹಿಸಿದರೆ, ನಿಯಂತ್ರಿಸಿದರೆ, ನಮಗೆ ಏಕಮೇವ ಆನಂದ ಸಿಗುತ್ತದೆ. ಅಂದರೆ ಕಶ್ಮಲರಹಿತವಾದ, ಕಶ್ಮಲಗಳಾವುವು ಇಲ್ಲದ ಆನಂದ ಒಂದೇ ಸಿಗುತ್ತದೆ. ಇದನ್ನೇ ಧಮ್ಮಾನಂದ ಅಥವಾ ಆಧ್ಯಾತ್ಮಿಕ ಆನಂದ ಅಥವಾ ದಿವ್ಯ ಆನಂದ ಎನ್ನುತ್ತಾರೆ. ಇಂದ್ರೀಯ ಸುಖಗಳಿಂದ ಒತ್ತಡವು ಉಂಟಾಗುತ್ತದೆ. ಆದರೆ ಇಂದ್ರೀಯ ನಿಗ್ರಹದಿಂದ ಪರಮಾರ್ಥ ಸುಖವು ಉಂಟಾಗಿ ಒತ್ತಡವನ್ನು ಕ್ಷೀಣಿಸುತ್ತದೆ ಮತ್ತು ಮನಶ್ಶಾಂತಿಯನ್ನು ಮತ್ತು ಸಂತೃಪ್ತಿಯನ್ನು ವೃದ್ಧಿಸುತ್ತದೆ.


ಧ್ಯಾನದಿಂದ ಸುಖ

ಒತ್ತಡ ನಿಮರ್ೂಲನ ನಿರ್ವಹಣೆಗಾಗಿ ಮೂರನೆಯ ಹೆಜ್ಜೆಯೇನೆಂದರೆ ಕುಶಲ ಮಾನಸಿಕ ಸ್ಥಿತಿಗಳನ್ನು ಧ್ಯಾನದ ಮೂಲಕ ಅಭಿವೃದ್ಧಿಗೊಳಿಸುವುದು (ಭಾವನ). ಹೇಗೆ ನಾವು ನಮ್ಮ ಶರೀರವನ್ನು ಯೋಗ್ಯ ಆಹಾರ ಮತ್ತು ಶುಚಿತ್ವದಿಂದಾಗಿ ನೋಡಿಕೊಂಡು ಪೋಷಿಸುತ್ತೇವೆಯೋ ಹಾಗೆಯೇ ಮನಸ್ಸಿಗೂ ಯೋಗ್ಯ ಪೋಷಣೆ ಮತ್ತು ಪರಿಶುದ್ಧಗೊಳಿಸುವಿಕೆ ಅತ್ಯಗತ್ಯವಾಗಿರುತ್ತದೆ. ಮನಸ್ಸು ಪಳಗದ ಸ್ಥಿತಿಯಲ್ಲಿ ಅತಿ ಉಗ್ರವಾಗಿರುತ್ತದೆ. ಆದರೆ ಯಾವಾಗ ಅದನ್ನು ಪಳಗಿಸುತ್ತೇವೆಯೋ ಮತ್ತು ಸ್ಥಿರವನ್ನಾಗಿ ಮಾಡುವೆವೋ ಆಗ ಅತ್ಯಧಿಕ ಶ್ರೇಷ್ಠ ಸುಖವು ಲಭಿಸುವುದು. ಬೌದ್ಧ ಧಮ್ಮವು ಎರಡು ಮಹತ್ವದ ಧ್ಯಾನ ವಿಧಾನಗಳನ್ನು ಮಾಡಲು ಸಲಹೆ ನೀಡುತ್ತದೆ. ಅದೆಂದರೆ ಸಮಥ (ಪ್ರಶಾಂತತೆ) ಮತ್ತು ವಿಪಸ್ಸನ (ಅಂತರ್ದೃಷ್ಟಿ ಧ್ಯಾನ). ಮೊದಲನೆಯದು ಅಸ್ಥಿರವಾದ ಮನಸ್ಸನ್ನು ಶಾಂತಗೊಳಿಸುವ ಸಮಥ ಧ್ಯಾನದ ವಿಧಾನವಾಗಿದೆ ಮತ್ತು ಎರಡನೆಯದು ಶರೀರ ಮತ್ತು ಮನಸ್ಸಿನ ಎಲ್ಲಾ ಆಗುಹೋಗುಗಳ ನಿಜಸ್ವರೂಪವನ್ನು ಯಥಾವತ್ತಾಗಿ ಅರಿಯುವ ವಿಪಸ್ಸನ ಧ್ಯಾನವಾಗಿದೆ. ಎರಡು ವಿಧಾನಗಳು ಸಹಾ ಒತ್ತಡದಿಂದ ದಾಟುವುದಕ್ಕಾಗಿ ಅತಿ ಸಹಾಯಕಾರಿಯಾಗಿವೆ. ಬುದ್ಧ ಭಗವಾನರು ಐದು ಉಚಿತವಾದ ಹೋಲಿಕೆಗಳಿಂದ ಧ್ಯಾನದಿಂದ ಹೇಗೆ ಒತ್ತಡಗಳನ್ನು ಉಂಟುಮಾಡುವ ಪಂಚನಿವರಣ (ತಡೆ) ಗಳನ್ನು ಕ್ಷೀಣಿಸಬಹುದು ಎಂದು ವಿವರಿಸಿದ್ದಾರೆ.
ಯಾರು ಧ್ಯಾನವನ್ನು ಅಭ್ಯಸಿಸುತ್ತಾನೋ, ಆತನೋ ಸಮಾಧಾನವನ್ನುಂಟು ಮಾಡುವ ಶ್ರೇಷ್ಠ ಪ್ರಜ್ಞೆಯನ್ನು ಪಡೆದಿರುತ್ತಾನೆ. ಹಾಗೆಯೇ ಭಾರರಹಿತತೆ, ಹೊರೆರಹಿತತೆ ಮಾಡಿಕೊಳ್ಳುವ ಪ್ರಜ್ಞಾಶೀಲತೆಯನ್ನು ಪಡೆದಿರುತ್ತಾನೆ. ಈ ಉಪಮೆಗಳು ಅದನ್ನು ವಿವರಿಸುತ್ತದೆ. ಒಬ್ಬನು ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಸಾಲವನ್ನು ತೆಗೆದುಕೊಂಡಿರುತ್ತಾನೆ. ನಂತರ ಹಾಗೆಯೇ ಅಭಿವೃದ್ಧಿ ಹೊಂದಿ, ಸಾಲವನ್ನು ತೀರಿಸುತ್ತಿರುತ್ತಾನೆ. ಹೀಗೆಯೇ ತನ್ನ ದೈನಂದಿನ ಜೀವಿತದಲ್ಲಿ ಸುಖಿಯಾಗಿರುತ್ತಾನೆ. ಪೂರ್ಣವಾಗಿ ಸಾಲರಹಿತನಾದ ಸಮಾಧಾನದ ಆನಂದ ಪಡೆಯುತ್ತಾನೆ. ಅಂತಹವನು ಶ್ರೇಷ್ಠ ಸಮಾಧಾನದ ಅನುಭವವನ್ನು ಪಡೆಯುತ್ತಾನೆ. ಇನ್ನೊಂದು ಉಪಮೆ ಹೀಗಿದೆ. ಒಬ್ಬನು ದೀರ್ಘಕಾಲದಿಂದ ವ್ಯಾಧಿಗೆ ಗುರಿಯಾಗಿ ನರಳುತ್ತಿದ್ದವನು, ಯೋಗ್ಯ ಚಿಕಿತ್ಸೆ ಪಡೆದು ಗುಣಮುಖನಾಗಿ, ರುಚಿಕರವಾದ ಆಹಾರ ಸೇವಿಸುವವನಾಗಿ, ಶಾರೀರಿಕ ಬಲ ಪಡೆದ ಆತನು ಅನುಭವಿಸುವ ಸಾಂತ್ವನ ಶ್ರೇಷ್ಠಕರವಾಗಿರುತ್ತದೆ. ಅದೇರೀತಿಯಲ್ಲಿ ಮೂರನೆಯ ಉಪಮೆ ಹೀಗಿದೆ. ಕಾರಾಗೃಹದಲ್ಲಿ ದೀರ್ಘಕಾಲ ಬಂಧಿಯಾಗಿ ನಂತರ ಬಿಡುಗಡೆಯಾಗುವ ವ್ಯಕ್ತಿಯ ಆನಂದದಂತೆ ಸಾಂತ್ವನ  ಶ್ರೇಷ್ಠವಾಗಿರುತ್ತದೆ. ನಾಲ್ಕನೆಯ ಉಪಮೆ ಹೀಗಿದೆ: ದೀರ್ಘ ಕಾಲದ ಗುಲಾಮನೊಬ್ಬ ಗುಲಾಮಗಿರಿಯಿಂದ ಸ್ವತಂತ್ರ್ಯ ಪಡೆದಾಗ ಅನುಭವಿಸುವ ಆನಂದದಂತೆ ಸ್ವಾಂತನ ಶ್ರೇಷ್ಠಕರವಾಗಿರುತ್ತದೆ ಮತ್ತು ಐದನೆಯ ಉಪಮೆ ಹೀಗಿದೆ: ಮರಳುಗಾಡಿನಲ್ಲಿ ಹಾದಿ ತಪ್ಪಿರುವವನು ಹಸಿವು, ಬಾಯಾರಿಕೆ ಮತ್ತು ಭೀಕರವಿರುವ ಸ್ಥಳದಿಂದ ಆತನು ಸುರಕ್ಷಿತವಾದ ಸ್ಥಳ ತಲುಪಿ ಶ್ರೇಷ್ಠವಾದ ಸಮಾಧಾನವನ್ನು ಪಡೆಯುತ್ತಾನೆ.
ಯಾವಾಗ ಒಬ್ಬನು ತಡೆಗಳಿಂದ (ನಿವರಣ) ಮನಸ್ಸನ್ನು ಮುಕ್ತನನ್ನಾಗಿಸುವನೋ ಆಗ ಆತನಿಗೂ ಈ ಮೇಲಿನ ಉಪಮೆಗಳಂತೆ ಶ್ರೇಷ್ಠ ಸಾಂತ್ವನ, ಸಮಾಧಾನ ಮತ್ತು ಆನಂದ, ಸುಖ ಲಭಿಸುವುದು. ಆದ್ದರಿಂದಾಗಿ ಒತ್ತಡದಿಂದ ಮುಕ್ತರಾಗಲು ಅತ್ಯುತ್ತಮ ಮತ್ತು ಅತಿ ಪರಿಣಾಮಾತ್ಮಕವಾದ ಹಾದಿಯೆಂದರೆ ಧ್ಯಾನವನ್ನು ಅಭ್ಯಸಿಸಿ ಮಾನಸಿಕ ವಿಕಾಸವನ್ನು ಮಾಡಿಕೊಳ್ಳುವುದಾಗಿದೆ. ಆದರೆ ಅದಕ್ಕೆ ಮುನ್ನ ಪಂಚಶೀಲವನ್ನು ಅಭ್ಯಸಿಸಲೇ ಬೇಕಾಗಿದೆ.


ಸಕಾರಾತ್ಮಕ ಭಾವಾವೇಶಗಳಿಂದ ಸುಖ

ಸಕಾರಾತ್ಮಕ ಭಾವಾವೇಶಗಳಾದ ಮೈತ್ರಿ (ಮೆತ್ತಾ - ಪರಿಶುದ್ಧವಾದ ವಿಶಾಲ ಪ್ರೀತಿ), ಕರುಣೆ, ಮುದಿತಾ (ಅಭಿನಂದಾತ್ಮಕ ಆನಂದ) ಮತ್ತು ಉಪೇಕ್ಖಾ (ಉಪೇಕ್ಷೆ-ಸಮಚಿತ್ತತೆ) ಇವು ಒತ್ತಡಗಳನ್ನು ಗೆಲ್ಲಲು ಇರುವ ಇನ್ನೊಂದು ಹಾದಿಯಾಗಿದೆ. ಗೃಹಸ್ಥ ಜೀವನದಲ್ಲಿ ಮತ್ತು ವೃತ್ತಿ ಜೀವನದಲ್ಲಿ ಪರಸ್ಪರ ವ್ಯಕ್ತಿಗತ ಬಾಂಧವ್ಯಗಳಲ್ಲಿ ಒಡಕು ಉಂಟಾಗುವುದು ಸಹಾ ಒತ್ತಡಕ್ಕೆ ಕಾರಣವಾಗಿದೆ.
ಮೈತ್ರಿ (ಮೆತ್ತ)ಯು ಸಕಾರಾತ್ಮಕ ಕುಶಲ ಭಾವನೆಯಾಗಿದ್ದು, ಅದರಿಂದಾಗಿ ಒಬ್ಬನು ತನ್ನ ಒಳಿತಿಗಾಗಿ ಮತ್ತು ಪರರ ಒಳಿತಿಗಾಗಿ ಎಲ್ಲರಲ್ಲಿಯೂ ಅನ್ಯೋನ್ಯ ಬಾಂಧವ್ಯವಿಡುತ್ತಾನೆ.
ಕರುಣೆಯು ಶ್ರೇಷ್ಠ ಭಾವಾವೇಶವಾಗಿದ್ದು ಅದನ್ನು ದುಃಖಿತರ ಸಹಾಯಕ್ಕಾಗಿ ವೃದ್ಧಿಗೊಳಿಸಬೇಕಾಗಿದೆ.
ಮುದಿತಾವು ಪರರ ಸುಖ ಮತ್ತು ಉನ್ನತಿಯನ್ನು ಗಮನಿಸಿ ಆನಂದಿಸುವ ಸಾಮಥ್ರ್ಯವಾಗಿದೆ. ಆದರೆ ತುಚ್ಛ ವ್ಯಕ್ತಿತ್ವದ ವ್ಯಕ್ತಿಗೆ ಪರರ ಆನಂದದಲ್ಲಿ, ಉನ್ನತಿಯಲ್ಲಿ ಆನಂದಿಸುವುದು ಅತಿಕಷ್ಟಕರವಾಗಿದೆ. ಅವರಲ್ಲಿ ಮತ್ಸರವು ಸುಲಭವಾಗಿ ಪುಟಿಯುತ್ತದೆ. ಎಲ್ಲಿ ಈಷರ್ೆ ಇರುವುದೋ, ಅಲ್ಲಿ ಐಕ್ಯತೆಯಿರುವುದಿಲ್ಲ. ಎಲ್ಲಿ ಐಕ್ಯತೆಯಿರುವುದಿಲ್ಲವೋ ಅಲ್ಲಿ ಉನ್ನತಿಯಿರುವುದಿಲ್ಲ. ಆದ್ದರಿಂದ ಈ ಸುಭಾವವೇಶದಿಂದಾಗಿ ಪ್ರಾಪಂಚಿಕತೆಯಲ್ಲೂ ಮತ್ತು ಧಮ್ಮದ ಜೀವನ ಎರಡರಲ್ಲೂ ಉನ್ನತಿ ಹೊಂದುತ್ತಾರೆ.
ಉಪೇಖ್ಖಾ (ಸಮಚಿತ್ತತೆ)ಯ ಜೀವನದ ಏರುಪೇರಿನಲ್ಲಿ ಹೊಂದಿಸಲೇಬೇಕಾದ ಭಾವನೆಯಾಗಿದೆ. ಜಗತ್ತಿನಲ್ಲಿ ಎಂಟುರೀತಿಯ ಸ್ವಾಭಾವಿಕ ಆಗು-ಹೋಗುಗಳನ್ನು ನಾವು ಎದುರಿಸಲೇಬೇಕಾಗಿದೆ. ಅವೆಂದರೆ ಲಾಭ ಮತ್ತು ನಷ್ಟ, ಜಯ ಮತ್ತು ಪರಾಜಯ, ಸ್ತುತಿ ಮತ್ತು ನಿಂದೆ, ಸುಖ ಮತ್ತು ದುಃಖ. ಒಬ್ಬನು ಜೀವಿತದ ಈ ವಿಷಮ ಪರಿಸ್ಥಿತಿಗಳಲ್ಲಿ ಉಬ್ಬದೆ ಅಥವಾ ಕುಗ್ಗದೆ ಸಮಚಿತ್ತತೆಯನ್ನು ಸಾಧಿಸಲು ಸುಶಿಕ್ಷಣ ಪಡೆದರೆ ಆತನು ಜೀವನವೆಲ್ಲಾ ಒತ್ತಡವನ್ನು ತಡೆದು ಸರಳಜೀವನವನ್ನು ಶಾಂತಿ ಮತ್ತು ಸಂತೃಪ್ತಿಯಿಂದ ಜೀವಿಸುತ್ತಾನೆ.
ನಮಗೆ ಸದಾ ಸುಖ ನೀಡುವಂತೆ ಜಗತ್ತನ್ನು ನಾವು ಬದಲಾಯಿಸಲಾರೆವು. ಆದರೆ ಜಗತ್ತಿನ ಬಗ್ಗೆ ನಮ್ಮ ಅಭಿಪ್ರಾಯವನ್ನು ನಾವು ಖಂಡಿತವಾಗಿ ಬದಲಿಸಬಲ್ಲೆವು. ಅದರಿಂದಾಗಿ ನಾವು ನಮ್ಮ ಸುತ್ತಮುತ್ತಲಿನ ಸನ್ನಿವೇಶಗಳಿಂದ ದುಃಖಿತರಾಗದೆ, ಒತ್ತಡಕ್ಕೀಡಾಗದೆ, ವಿಕೃತಿಯಾಗದೆ, ಇರಬಲ್ಲೆವು. ಬುದ್ಧ ಧಮ್ಮವು ನಮಗೆ ಇಂತಹ ಕುಶಲ ದೃಷ್ಟಿಕೋನ ತರಲು ಹಾದಿ ತೋರಿಸುತ್ತದೆ.
ಬಡಪಾಯಿ ಮತ್ತು ಅಸಹಾಯಕ ಪ್ರಾಣಿಗಳು ಚಿತ್ರಹಿಂಸೆಗೆ ಗುರಿಯಾಗುತ್ತವೆ ಅಥವಾ ಕೊಲ್ಲಲ್ಪಡುತ್ತವೆ. ಅದು ನಾಗರಿಕ ಎಂದು ಕರೆಸಿಕೊಳ್ಳುವ ಮಾನವನ ಆಟ ಮತ್ತು ಸಾಹಸಗಳಿಂದ ಹೀಗೆ ಆಗುತ್ತವೆ. ಮುಗ್ಧ ಪ್ರಾಣಿಗಳು ನಾಗರಿಕ ಸಮಾಜದ ತೀವ್ರ ಬಯಕೆಗಳನ್ನು, ಹಸಿವನ್ನು, ಪೂರೈಸಬೇಕಾಗಿದೆ. ಕೆಲವರ ಸುಖ ಮತ್ತು ಆನಂದಕ್ಕಾಗಿ ಅದೆಷ್ಟು ಜೀವಿಗಳು ದುಃಖಿಸಬೇಕಾಗಿದೆ ಮತ್ತು ಸಾಯಬೇಕಾಗಿದೆ?!


1.21 ಒತ್ತಡದೊಂದಿಗೆ ಹೋರಾಟ

ಒತ್ತಡ (ಣಡಿಜ) ಈ ಪದವನ್ನು ನಾವು ಭೌತಶಾಸ್ತ್ರ ಮತ್ತು ಯಂತ್ರಶಾಸ್ತ್ರ (ಇಟಿರಟಿಜಜಡಿಟಿರ) ದಿಂದ ಪಡೆದುಕೊಂಡಿದ್ದೇವೆ. ಅಲ್ಲಿ ಅದಕ್ಕೆ ಸಂಕ್ಷಿಪ್ತ ಅರ್ಥವಿದೆ. ಅದೇನೆಂದರೆ ವಿರೂಪಗೊಳಿಸಲು ಸಾಕಷ್ಟು ಪರಿಮಾಣದ ಬಲ. ಆದರೆ ಮನೋರೋಗ ಚಿಕಿತ್ಸೆಯಲ್ಲಿ ಒತ್ತಡವು ವ್ಯಕ್ತಿಗಳಲ್ಲಿ ಭೌತಿಕ ಮತ್ತು ಭಾವವೇಶದ ಪ್ರತಿಕ್ರಿಯೆಯಾಗಿದ್ದು, ಅದು ತನ್ನ ಮತ್ತು ಸನ್ನಿವೇಶಗಳ ನಡುವೆ ಉಂಟಾದ ಒತ್ತಡವಾಗಿದೆ. ಎರಡುರೀತಿಯ ಪ್ರಧಾನ ಒತ್ತಡಗಳಿವೆ. ಒಂದು ಪ್ರಿಯ ವಿಯೋಗದಿಂದ ಉಂಟಾಗುವಂತಹದ್ದಾಗಿದೆ. ಅಂದರೆ ಪ್ರಿಯರ ಅಗಲಿಕೆ, ವಿಯೋಗ, ಮೈತ್ರಿಯ ಕಳೆದುಕೊಳ್ಳುವಿಕೆ ಅಥವಾ ಆಕಾಂಕ್ಷೆಯ ಈಡೇರದಿರುವಿಕೆ. ಅಸಾಧ್ಯದ ಬಯಕೆ ಮತ್ತು ಅಪ್ರಿಯದ ಆಗಮನ ಅಂದರೆ ವ್ಯಕ್ತಿಯ ಘನತೆ, ಗುರಿಗಳು, ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಬೆದರಿಕೆ, ಅಪಾಯ.
ಒತ್ತಡವು ತನ್ನ ಕುಖ್ಯಾತಿ ಪಡೆಯುತ್ತದೆ. ಏಕೆಂದರೆ ಅದು ತಡೆಯಲಾಗದ ಜೀವನದ ಭಾಗವಾಗಿದೆ ಮತ್ತು ಒಬ್ಬನು ನಿರಂತರವಾಗಿ ಉದ್ವೇಗ ತಾಳಲು ಕಾರಣಕರ್ತವಾಗಿದೆ. ಯಾವಾಗ ಇದು ಆಗುವುದೋ ಆಗ ಅದು ಅತಿಯಾದ ಹೊರೆಯಾಗಿ, ಶಾರೀರಿಕವಾಗಿ ಅಥವಾ ಮಾನಸಿಕವಾಗಿ ಅಥವಾ ಎರಡರಿಂದಲೂ ದುಃಖಿಸಬೇಕಾಗುತ್ತದೆ.
ಒತ್ತಡವು ನಾನಾ ಕಾರಣಗಳಿಂದ ಸಂಭವಿಸುತ್ತದೆ. ಒಳಿತಿನ ಮತ್ತು ಕೆಡಕಿನ ಬದಲಾವಣೆಗಳಿಂದ, ವ್ಯಕ್ತಿಗತ ತೊಂದರೆಗಳಿಂದ, ಭೌತಿಕ ಸಂಕಷ್ಟಗಳಿಂದ, ರೋಗ ಇತ್ಯಾದಿಗಳಿಂದ ಆಗುತ್ತದೆ. ಒತ್ತಡದ ಸಾಮಾನ್ಯ ಮೂಲಗಳೆಂದರೆ ಸಂಗಾತಿಯ ಮರಣ ಅಥವಾ ಅತಿ ಹತ್ತಿರದ ಮಿತ್ರನ ಮರಣ. ಸಂಗಾತಿಯ ವಿಯೋಗ, ವಿಚ್ಛೇದನ, ಲೈಂಗಿಕ ತೊಂದರೆಗಳು, ವಾಸಸ್ಥಳದ ಬದಲಾವಣೆ, ಮನೆಯಿಂದ ಮಗುವಿನ ಹೊರಹೋಗುವಿಕೆ, ಗಭರ್ಾವಸ್ಥೆ, ಕಾನೂನಿನ ತೊಡಕುಗಳು, ವೃತ್ತಿಯ ಅಮಾನತು ಅಥವಾ ವಜಾ, ಮಿತಿಮೀರುವಿಕೆ, ಕರ್ತವ್ಯಗಳ ಬದಲಾವಣೆ ಅಥವಾ ವ್ಯಕ್ತಿಸ್ಥಿತಿಗಳ ಬದಲಾಗುವಿಕೆ ಮತ್ತು ಮೇಲಾಧಿಕಾರಿಯಿಂದ ಕಿರಿಕಿರಿ.
ಜೀವನದ ಪ್ರತಿ ಹಂತದಲ್ಲೂ ತನ್ನದೇ ರೀತಿಯ ಒತ್ತಡಗಳಿರುತ್ತವೆ. ಜೀವನದ ಪ್ರಾರಂಭದಲ್ಲಿ ಮಗುವು ಕುಟುಂಬದ ಸದಸ್ಯರೊಂದಿಗೆ ನಂತರ ಶಾಲೆಯಲ್ಲಿನ ಒತ್ತಡ, ಆ ಮಗುವಿಗೆ ತನ್ನ ಗುರುಗಳೊಂದಿಗೆ ಮತ್ತು ಸಹಪಾಠಿಗಳೊಂದಿಗೆ ತನ್ನನ್ನು ಹೊಂದಿಸಿಕೊಳ್ಳುವುದೇ ಪರಮ ಒತ್ತಡವಾಗಿರುತ್ತದೆ. ನಂತರ ಹುಡುಗ, ಹುಡುಗಿಯರ ಬಾಂಧವ್ಯದ ಒತ್ತಡವು ಪ್ರೌಢಾವಸ್ಥೆಯಲ್ಲಿ ಬರುತ್ತದೆ. ನಂತರ ಶೈಕ್ಷಣಿಕ ಒತ್ತಡವು ಕಾಲೇಜಿನ ದಿನಗಳಲ್ಲಿ ಬರುತ್ತದೆ. ಆನಂತರ ಉದ್ಯೋಗದ ಆಯ್ಕೆಯ ಚಿಂತೆಯು ಹುಟ್ಟುತ್ತದೆ.
ಕಾಲೇಜಿನ ನಂತರದ ವರ್ಷದಲ್ಲಿ ಹೊಸ ಉದ್ಯೋಗಗಳ ಸಮಸ್ಯೆಗಳು ಹಾಗೆಯೇ ಪ್ರಥಮ ವರ್ಷದ ವಿವಾಹದ ಸಮಸ್ಯೆಯು ಇರುತ್ತದೆ. ಇವು ಅತಿ ಗಂಭೀರವಾಗಿ ಕೆಲವೊಮ್ಮೆ ವಿಚ್ಛೇದನಕ್ಕೂ ಕರೆದೊಯ್ಯಬಹುದು. ಸ್ತ್ರೀಗೆ ಮಗುವನ್ನು ಹೆರುವ ನೋವಂತು ಸಹಿಸಲು ಅತಿ ಕಷ್ಟಕರವಾಗಿ ಕಾಡುತ್ತದೆ. ಅದೇವೇಳೆಯಲ್ಲಿ ಪುರುಷರಿಗೆ ವೃತ್ತಿಯ ಪ್ರಾರಂಭಿಕ ಜೀವನವು ಸಮಸ್ಯಮಯ ಆಗಿರುತ್ತದೆ.


1.22 ಒತ್ತಡವು ರೋಗದೆಡೆ ಕರೆದೊಯ್ಯಬಲ್ಲದು

ಒತ್ತಡಕ್ಕೆ ಸಂಬಂಧಿಸಿದ ವ್ಯಾಧಿಗಳೆಂದರೆ ಪೆಪ್ಟೆಕ್ ಅಲ್ಸರ್, ಮೈಗ್ರೇನ್ ತಲೆನೋವು, ಖಿನ್ನತೆ, ಉನ್ನತ ರಕ್ತದೊತ್ತಡ, ಪಾರ್ಶವಾಯು ಮತ್ತು ಹೃದಯದ ಆಘಾತಗಳು. ನಿರಂತರ ಒತ್ತಡವು ದೇಹದ ರಕ್ಷಣಾ ವ್ಯವಸ್ಥೆಯನ್ನೇ ದುರ್ಬಲವನ್ನಾಗಿಸುತ್ತದೆ. ಇದರ ಪರಿಣಾಮವಾಗಿ ರೋಗಗಳೊಂದಿಗೆ ಹೋರಾಡುವ ರೋಗ ನಿರೋಧಕ ಶಕ್ತಿಯು ಅಂತಹ ಪರಿಣಾಮಕಾರಿಯಾಗುವುದಿಲ್ಲ. ಕೆಲವೊಂದು ಅಧ್ಯಯನದ ಪ್ರಕಾರ ನಿರಂತರ ಒತ್ತಡವು ಮತ್ತು ದೀರ್ಘಕಾಲೀನ ವ್ಯಾಧಿಯು ಕ್ಯಾನ್ಸರ್ ತರಿಸಬಹುದು ಮತ್ತು ವೃದ್ಧಿಸಬಹುದು.
ಒತ್ತಡದ ಸಮಯದಲ್ಲಿ ದೇಹವು ಅಂದರೆ ಮೆದುಳು ರಸಾಯನಿಕ ದ್ರವ್ಯಗಳನ್ನು ಮತ್ತು ಹಾಮರ್ೊನ್ಗಳನ್ನು ಸ್ರವಿಸಬಹುದು. ಅವುಗಳಲ್ಲಿ ಅಡ್ರಿನಾಲೈನ್ ಮತ್ತು ಹೈಡ್ರೋ ಕಾಟರ್ಿಸೋನ್ ಸಹಾ ಇರುತ್ತದೆ. ಅವು ಮಾಡು ಇಲ್ಲ ಮಡಿ ಸಮಯದಲ್ಲಿ ಸ್ರವಿತವಾಗುತ್ತದೆ.  ಅವುಗಳಲ್ಲಿ ಅಡ್ರಿನಾಲೈನ್ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ಹಾಗೆಯೇ ಉಸಿರಾಟದ ದರವನ್ನು ಸಹಾ ತೀವ್ರಗೊಳಿಸುತ್ತದೆ ಮತ್ತು ಶರೀರವನ್ನು ಹೋರಾಟಕ್ಕೆ ಸಿದ್ಧಗೊಳಿಸುತ್ತದೆ. ಅಥವಾ ಪಾರಾಗಲು ಸಹಾಯ ಮಾಡುತ್ತದೆ. ಹೈಡ್ರೋಕಾರ್ಟಿಸೊನ್ ಒತ್ತಡದೊಂದಿಗೆ ವ್ಯವಹರಿಸಿ ಸಮತೋಲನ ತರುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದಲೇ ನಾವು ಕೆಟ್ಟ ಸುದ್ದಿಯನ್ನು ಫೋನಿನಲ್ಲಿ ಕೇಳಿದಾಗ ತಕ್ಷಣ ಅಡ್ಡಿನಾಲಿನ್ನಿಂದ ಪ್ರತಿಕ್ರಿಯೆ ಆರಂಭವಾಗಿ, ಹೈಡ್ರೋಕಾಟರ್ಿಸೋನ್ನಿಂದ ಸ್ರವಿಕೆ ಸಾಗುತ್ತದೆ.
ಹಾಮರ್ೊನ್ಗಳು ಒತ್ತಡದೊಂದಿಗೆ ಹೋರಾಡಿ ಸಹಾಯ ಮಾಡುವುದು ತಾತ್ಕಾಲಿಕ ಅವಧಿಯದ್ದಾಗಿದೆ. ದೀರ್ಘ ಅವಧಿಯ ಒತ್ತಡವು ಅನಾರೋಗ್ಯವನ್ನುಂಟು ಮಾಡುತ್ತದೆ. ನಿರಂತರ ಒತ್ತಡದಿಂದಾಗಿ, ದೇಹವು ಅಡ್ರೆನಾಲಿನ್ ಮತ್ತು ಹೈಡ್ರೋಕಾಟರ್ಿಸೋನ್ ಸ್ರವಿಕೆ ಉಂಟಾದಾಗ ರಕ್ತ ಪ್ರವಾಹದಲ್ಲಿ ಸವೆತ ಉಂಟಾಗಬಹುದು. ಉದಾಹರಣೆಗೆ ಹೃದಯಕ್ಕೆ ಮತ್ತು ಪುಪ್ಪಸಕ್ಕೆ ಪ್ರಯಾಸಕರ ಶ್ರಮ ಉಂಟಾಗಿ ರಕ್ತದೊತ್ತಡ ಹೆಚ್ಚಾಗಿಯೇ ಇರುತ್ತದೆ. ಇದರ ಪರಿಣಾಮವಾಗಿ ಹೃದಯಾಘಾತ ಅಥವಾ ಪಾಶ್ರ್ವವಾಯುವಿಗೆ ಗುರಿಯಾಗಬಹುದು. ಚಿಂತೆಯು ಭಯದ ಸಂವೇದನೆಯಾಗಿದೆ. ಒತ್ತಡ ಅಥವಾ ಚಡಪಡಿಸುವಿಕೆಯು ಭಯದ ನಿರೀಕ್ಷೆಯಿಂದ ಉಂಟಾಗುತ್ತದೆ. ನಾವೆಲ್ಲರೂ ಕಠಿಣವಾದ ಕಾರ್ಯವನ್ನು ಚೆನ್ನಾಗಿ ಮಾಡಲು ನಿಂತಾಗ ಸ್ವಲ್ಪ ಚಿಂತೆಯನ್ನು ಅನುಭವಿಸುತ್ತೇವೆ. ಬಹಳಷ್ಟು ಚಿಂತೆಯು ಅಸಮಾರ್ಥತೆಯನ್ನು ಸೂಚಿತವಾಗುತ್ತದೆ. ಚಿಂತೆಯು ಬಹಳಷ್ಟು ಮಾನಸಿಕ ವ್ಯಾಧಿಗಳಿಗೆ ಕಾರಣವಾಗಿದೆ. ಉದಾಹರಿಸುವುದಾದರೆ, ಭೀತಿಗಳು, ಭಯಾನಕತೆಯ ಆಘಾತ ಮತ್ತು ಗಾಯದ ತರುವಾಯದ ಒತ್ತಡದ ಅವ್ಯವಸ್ಥೆ. ಬಹಳಷ್ಟು ಜನರಿಗೆ ಸಾಮಾನ್ಯ ಭಯವಿರುತ್ತದೆ. ಅಂದರೆ ನಿದರ್ಿಷ್ಟ ವಸ್ತುವಿನ ಭಯ ಅಥವಾ ನಿದರ್ಿಷ್ಟ ಸನ್ನಿವೇಶದ ಭಯ. ಭಯಗಳು ಸಾಮಾನ್ಯವಾಗಿದೆ, ಇವು ಜಗತ್ತಿನ ಶೇಕಡ 3ರಷ್ಟು ಜನಸಂಖ್ಯೆಗೆ ಪರಿಣಾಮ ಬೀರಿದೆ.
ಅವರು ಸಾಮಾಜಿಕ ಸನ್ನಿವೇಶಗಳನ್ನು ತಡೆಯಲು ಹವಣಿಸುತ್ತಾರೆ. ನಂತರ ಅಪಮಾನಕ್ಕೀಡಾಗುತ್ತಾರೆ ಅಥವಾ ಪೇಚಿಗೆ ಸಿಲುಕುತ್ತಾರೆ. ನಿದ್ರಾಹೀನತೆ ಅಥವಾ ಇನ್ಸೊಮ್ಮಿಯಾ ಹಲವಾರು ಜನರಿಗೆ ಸಾಮಾನ್ಯವಾಗಿದೆ. ವಿಭಿನ್ನ ಸನ್ನಿವೇಶಗಳ ಕಾರಣದಿಂದ ನಿದ್ರಾಹೀನತೆ ಉಂಟಾಗಿ ಶೇಕಡ 10ರಷ್ಟು ಜನರು ಇಂದು ನಿದ್ರಾಹೀನರಾಗಿದ್ದಾರೆ. ನಿದ್ರಾಹೀನತೆಗೆ ನಾನಾ ಕಾರಣಗಳಿವೆ. ಒಬ್ಬನು ತಾತ್ಕಾಲಿಕತೆಯನ್ನು ಎದುರಿಸುತ್ತಿರಬಹುದು. ಆದರೆ ಅತ್ಯಂತ ಮುಖ್ಯ ವಿಷಯದ ಗಡುವಿನ ಕಾರ್ಯದಲ್ಲಿ ತಲ್ಲೀನರಾಗಿರಬಹುದು, ಅಥವಾ ಅಪಾರ ಒತ್ತಡದಲ್ಲಿ ಸಿಲುಕಿರಬಹುದು. ಚಿಂತೆಗಳು ತುಂಬಿ ನಿದ್ರೆಯನ್ನೇ ಕಳೆದುಕೊಂಡಿರಬಹುದು. ನಮ್ಮ ಶರೀರಗಳು ಹಗಲಿನ ಚಟುವಟಿಕೆಗಳನ್ನೇ ಆಯ್ಕೆ ಮಾಡುತ್ತವೆ. ಆದ್ದರಿಂದಾಗಿ ರಾತ್ರಿ ಪಾಳಿಯ ಕಾಮರ್ಿಕನು ನಿದ್ರೆಯ ತೊಂದರೆಗೆ ಈಡಾಗಿ ನರಳಬಹುದು.
ದಿನನಿತ್ಯದಲ್ಲಿ ಒತ್ತಡಯುತ ಸನ್ನಿವೇಶ ಅಥವಾ ಒತ್ತಡದೊಂದಿಗೆ ಹೋರಾಡಲು ಇರುವಂತಹ ಶ್ರೇಷ್ಠ ಉಪಾಯವೇನೆಂದರೆ ಸಮತೋಲನ ಆಹಾರ ಸೇವಿಸುವುದು, ಸಾಕಷ್ಟು ನಿದ್ರೆ ಮಾಡುವುದು, ನಿತ್ಯವೂ ವ್ಯಾಯಾಮ ಮಾಡುವುದು, ಆನಂದ ಉಂಟುಮಾಡುವ ಕಾರ್ಯಗಳಿಗೆ ಸಮಯ ನೀಡುವುದು, ಧೂಮಪಾನ ಅಥವಾ ಮದ್ಯಪಾನ ಅಥವಾ ಇತರ ಮಾದಕ ವಸ್ತುಗಳಿಗೆ ಬಲಿಯಾಗದಿರುವುದು ಮತ್ತು ಯಾವ ಜನರು ಸುಲಭವಾಗಿ ತಲೆಕೆಡಿಸಿಕೊಳ್ಳುವರೋ ಮತ್ತು ತೀವ್ರವಾಗಿ ಒತ್ತಡಕ್ಕೆ ಒಳಗಾಗುವ ಸೂಕ್ಷ್ಮತೆಯುಳ್ಳವರೊ ಅವರಂತು ಧ್ಯಾನ, ವಿಶ್ರಾಂತಿ ಮತ್ತು ನಡತೆಯ ಮಾಪರ್ಾಡಿನ ತಂತ್ರಗಳನ್ನು ಕಲಿತು ತಮ್ಮ ಒತ್ತಡವನ್ನು ತಗ್ಗಿಸಲು ಪ್ರಯತ್ನಿಸಲೇಬೇಕಾಗಿದೆ.

                                                                       - 0 - 0 - 0  

No comments:

Post a Comment

ಪರಧರ್ಮಗಳ ಬಗ್ಗೆ ಬೌದ್ಧರ ಸೌಹಾರ್ದ ಮನೋಭಾವ

 ಪರಧರ್ಮಗಳ ಬಗ್ಗೆ  ಬೌದ್ಧರ ಸೌಹಾರ್ದ ಮನೋಭಾವ ಈ ಲೇಖನದ ಉದ್ದೇಶವೇನೆಂದರೆ ಧರ್ಮದ ಉತ್ತಮ ತಿಳುವಳಿಕೆಗೆ, ಧಾಮರ್ಿಕ ಸಹಿಷ್ಣುತೆಗೆ ಮತ್ತು ಬೌದ್ಧರ ದೃಷ್ಟಿಕೋನದಿಂದ ವಿಶಾ...