Saturday, June 16, 2018

ಧಮ್ಮದ ಪಾತ್ರ


ಧಮ್ಮದ ಪಾತ್ರ

2.1 ಧಮ್ಮವು ಹೇಗೆ ನಮ್ಮ ಸಮಸ್ಯೆಗಳನ್ನು ಪರಿಹರಿಸಬಲ್ಲದು


ಜನರು ತೊಂದರೆಗೊಳಪಟ್ಟಾಗ ತಮ್ಮ ಹಿರಿಯರನ್ನು ಅಥವಾ ಧಾಮರ್ಿಕ ನಾಯಕರನ್ನು ನೆನೆಸಿಕೊಳ್ಳುತ್ತಾರೆ ಮತ್ತು ಅವರಲ್ಲಿ ಸಹಾಯ ಯಾಚಿಸುತ್ತಾರೆ ಮತ್ತು ಕೆಲವೊಮ್ಮೆ ಅವರಿಗಾಗಿ ಪ್ರಾಥರ್ಿಸಲು ಕೇಳಿಕೊಳ್ಳುತ್ತಾರೆ. ಯಾವಾಗ ಅವರು ಸಂಕಷ್ಟದಲ್ಲಿ ಇರುವರೋ ಆಗ ಧಮ್ಮವನ್ನು ನೆನೆಪಿಸಿಕೊಂಡು ರಕ್ಷಣೆಗಾಗಿ ಹಾರೈಕೆ ಮತ್ತು ಮಾರ್ಗದರ್ಶನವನ್ನು ಹುಡುಕುತ್ತಾರೆ. ಅದಕ್ಕೆ ಮುನ್ನ ಇದು ಅಗತ್ಯವೆಂದು ಅವರು ಯೋಚಿಸಿಯೇ ಇರುವುದಿಲ್ಲ. ತಮ್ಮ ಸಂಸ್ಕೃತಿ ಅಥವಾ ಧರ್ಮದಂತೆ ಯಾವುದು ಸರಿ ಅಥವಾ ಯಾವುದು ತಪ್ಪು ಎಂದು ಅವರು ಯೋಚಿಸಿಯೇ ಇರುವುದಿಲ್ಲ.
ಆರಂಭಿಕರಿಗೆ ಪರಮಾರ್ಥದ ಜೀವನದಲ್ಲಿ ಊದ್ರ್ವಮುಖವಾಗಿ ಪ್ರಯಾಣಿಸುವುದು ಕಷ್ಟಕರವಾಗಿ ಕಾಣಬಹುದು. ಆದರೆ ಒಂದು ಹೆಜ್ಜೆ ತನ್ನೆಲ್ಲಾ ಪ್ರಯತ್ನ ಮತ್ತು ಅಲ್ಪಜ್ಞಾನವನ್ನು ಬಳಿಸಿ ಮುನ್ನಡೆದರೆ ಅರ್ಧ ಕಷ್ಟಗಳನ್ನೆಲ್ಲಾ ದಾಟಬಹುದು. ನಾವು ನೆನಪಿಡಬೇಕಾದ ಅಂಶವೇನೆಂದರೆ ಮೌಂಟ್ ಎವರೆಸ್ಟ್ನ ತುದಿಯನ್ನು ಒಂದೇ ಹೆಜ್ಜೆಯಿಂದಲೇ ತಲುಪಲಾಗುವುದಿಲ್ಲ. ಆದರೆ ನಿರಂತರ ಪರಿಶ್ರಮದಿಂದ ಅಡ್ಡಿಗಳನ್ನೆಲ್ಲಾ ಕಿತ್ತೆಸೆಯುತ್ತ ಹೆಜ್ಜೆ ಹೆಜ್ಜೆಗಳೊಂದಿಗೆ ಮುನ್ನಡೆದಾಗ ಮಾತ್ರ ಸಾಧ್ಯವಾಗುತ್ತದೆ. ಧಮ್ಮದ ಪ್ರಧಾನ ಉದ್ದೇಶವೇನೆಂದರೆ ನಮಗೆ ಸಹಾಯ ಮಾಡುವುದೇ ಆಗಿದೆ. ಅಂದರೆ ಕೆಲವು ಉದಾತ್ತ ತತ್ವಗಳನ್ನು ಹಿಂಬಾಲಿಸಿದಾಗ ದುಃಖಕ್ಕೆ ಕಾರಣವಾಗಿರುವ, ನಮ್ಮಿಂದಲೇ ನಿಮರ್ಿತವಾಗುವ ತೊಂದರೆಗಳನ್ನು ತಡೆಗಟ್ಟುವುದು. ಇಲ್ಲಿ ನಾವು ಮಾತನಾಡುತ್ತಿರುವ ವಿಷಯವೇನೆಂದರೆ ಬೌದ್ಧಿಕತೆಯಿಂದ ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳುವುದು. ಅಷ್ಟೇ ಅಲ್ಲ, ನಮ್ಮ ಜೀವನದಲ್ಲಿ ವಿಚಾರಶೀಲತೆಯಿಂದ ಮಾತ್ರವೇ ವಿವರಿಸಲಾಗದಂತಹ ಬಹಳಷ್ಟು ವಿಷಯಗಳಿವೆ. ನಮಗೆ ಧಮ್ಮದ ಸಾಂತ್ವನದ ಅಗತ್ಯವಿದೆ.
ಶೈಕ್ಷಣಿಕ ಜ್ಞಾನದಲ್ಲಿ ವೈಯುಕ್ತಿಕ ಅಥವಾ ಮನೋವೈಜ್ಞಾನಿಕ ಅನುಭೂತಿಯ ಒಳಗೊಳ್ಳುವಿಕೆಗೆ ಅವಕಾಶವಿಲ್ಲ. ಕೆಲವರು ಶೈಕ್ಷಣಿಕ ಜ್ಞಾನದ ಶಾಸ್ತ್ರವನ್ನು ಹೊಂದಿ ವಿಜ್ಞಾನವನ್ನು ವೈಭವೀಕರಿಸುವತ್ತ ತಾವು ಜಗತ್ತಿನ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಯೋಚಿಸುತ್ತಾರೆ. ವಿಜ್ಞಾನವು ನಮ್ಮ ಭೌತಿಕ ಅಗತ್ಯತೆಯ ಸಮಸ್ಯೆಗಳಿಂದ ಪಾರಾಗಲು ಸಹಾಯ ಮಾಡಬಲ್ಲದು ಮತ್ತು ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸಲೂಬಹುದು. ಆದರೆ ಆಧ್ಯಾತ್ಮಿಕತೆಯ ಪರಮಾರ್ಥದ ಸಮಸ್ಯೆಗಳನ್ನು ಬಿಡಿಸಲು ಅದರಿಂದಾಗದು. ಜಗತ್ತನ್ನು ಅನುಭವಿಸಿರುವ ಜ್ಞಾನಿಗಳಿಗೆ ಬದಲಿಸಲು ಆಗುವುದಿಲ್ಲ.
ಈ ಹೇಳಿಕೆ ಬಗ್ಗೆ ಯೋಚಿಸಿರಿ: ನನಗೆ 18 ವರ್ಷ ಆಗಿದ್ದಾಗ ನನ್ನ ತಂದೆ ಎಷ್ಟು ಮೂರ್ಖನೆಂದು ಯೋಚಿಸಿದ್ದೆ. ಈಗ ನನಗೆ 28 ಆಗಿರುವಾಗ ಈ 10 ವರ್ಷದಲ್ಲಿ ಈ ಹಿರಿಯ ಅದೆಷ್ಟು ಕಲಿತಿದ್ದಾನೆ ಎಂದು ಆಶ್ಚರ್ಯಪಡುತ್ತೇನೆ. ಆದರೆ ಇಲ್ಲಿ ಕಲಿತಿರುವುದು ನಿಮ್ಮ ತಂದೆಯಲ್ಲ, ಬದಲಾಗಿ ನಿಮ್ಮ ತಂದೆಯ ಕಣ್ಣುಗಳಿಂದ ಪಕ್ವವಾದ ಪಥದಲ್ಲಿ ಜಗತ್ತನ್ನು ನೋಡುವುದನ್ನು ನೀವೇ ಕಲಿತಿರುವಿರಿ. 2500 ವರ್ಷಗಳ ಹಿಂದೆಯೇ ಭಗವಾನ್ ಬುದ್ಧ, ಕನ್ಫೂಷಿಯಸ್, ಲಾವೊತ್ಸು ಮತ್ತು ಇನ್ನಿತರ ಧಮ್ಮಗುರುಗಳು ನಮಗೆ ಅದ್ಭುತವಾದ ಬೋಧನೆಯನ್ನು ನೀಡಿದ್ಧಾರೆ. ಆ ಬೋಧನೆಯು ಎಂದಿಗೂ ಭೂತಕಾಲಕ್ಕೆ ಸೀಮಿತವಲ್ಲ. ಅದು ಕಾಲಾತೀತವಾಗಿದೆ. ಅದು ಸತ್ಯದಿಂದ ಕೂಡಿದೆ, ಸತ್ಯಾಧಾರವುಳ್ಳದ್ದಾಗಿದೆ. ಅದು ಎಂದೆಂದಿಗೂ ನಿತ್ಯ ನವೀನ ತಾಜಾತನದಿಂದ ಕೂಡಿರುತ್ತದೆ. ನಾವು ಸನಾತನ ಶ್ರೇಷ್ಠ ಜ್ಞಾನವನ್ನು ಅಲಕ್ಷಿಸಿದರೆ ನಮ್ಮ ಮಾನವೀಯ ಸಮಸ್ಯೆಗಳಿಂದ ಹೊರಬರಲು ಅಸಾಧ್ಯವಾಗುತ್ತದೆ.
ಮಲೇಶಿಯಾದಲ್ಲಿ ನಡೆದ ಇತ್ತೀಚಿನ ಘಈಃ ಸಮ್ಮೇಳನದಲ್ಲಿ ಅಲ್ಲಿನ ಆಗಿನ ಪ್ರಧಾನ ಮಂತ್ರಿಗಳಾದಂತಹ ಟುನ್ ಡಾ|| ಮಹತೀರ್ ಮೊಹಮ್ಮದ್ರವರು ಹೀಗೆ ಹೇಳಿದ್ದರು: ವಿಜ್ಞಾನವು ಏನು ಎಂಬುದನ್ನು ಹಾಗು ಹೇಗೆ ಎಂಬುದನ್ನು ವಿವರಿಸಬಲ್ಲದು. ಆದರೆ ಏಕೆ? ಎಂಬುದನ್ನು ಎಂದಿಗೂ ಪೂರ್ಣವಾಗಿ ವಿವರಿಸಲಾರದು. ಏಕೆ? ಎಂಬುದನ್ನು ಅರಿಯಲು ನಾವು ಶತಮಾನಗಳ ಹಿಂದಿನ ವೈಯಕ್ತಿಕ ಅನುಭಾವಿಗಳ ಧಮ್ಮದಲ್ಲಿ ಮಾತ್ರ ಹುಡುಕಬಹುದು. ಆ ಪ್ರಜ್ಞಾವೇ ನಮಗೆ ಮಾನವನ ಘನತೆ, ಅರಿವು, ಶಾಂತಿ ಮತ್ತು ಸುಖವನ್ನು ನೀಡಬಲ್ಲದು.
ಬಹುತೇಕ ಮಟ್ಟಿಗೆ ನಮ್ಮನ್ನು ದಿನನಿತ್ಯ ಕ್ಷೊಭೆಯುಂಟುಮಾಡುವ ಕೆರಳುವಿಕೆಯ ಸಂಪನ್ಮೂಲವು ನಮ್ಮ ಸುತ್ತಮುತ್ತಲಿನ ಜನರೊಂದಿಗೆ ವತರ್ಿಸುವುದರಿಂದಲೇ ಆರಂಭವಾಗುವುದು. ಪ್ರತಿದಿನವು ನಾವು ಜನರೊಂದಿಗೆ ವತರ್ಿಸುವ ಹಾದಿಯಲ್ಲಿಯೇ ನಮ್ಮ ಭಾವಾವೇಶಗಳು ಪರೀಕ್ಷೆಗೆ ಒಳಪಡುತ್ತವೆ. ಕೆಲವರಲ್ಲಿ ನಾವು ಪ್ರೀತಿ ತೋರಿಸುವೆವು, ಕೆಲವರನ್ನು ದ್ವೇಷಿಸುವೆವು, ಉಳಿದವರಲ್ಲಿ ತಟಸ್ಥಭಾವ ಹೊಂದಿರುವೆವು.
ಒಬ್ಬನು ಬೌದ್ಧ ಧಮ್ಮವನ್ನು ಕಲಿಯಲು ಆರಂಭಿಸಿದರೆ ಜೀವನದ ಪ್ರತಿ ಕ್ಲಿಷ್ಟವಾದ ಎಲ್ಲಾ ಸಮಸ್ಯೆಗಳು ಸಹಾ ಸುಲಭವಾಗಿ ಅರ್ಥವಾಗುತ್ತದೆ. ಅದು ಏಕೆಂದರೆ ಬುದ್ಧರು ಈ ವಿಷಯಗಳೆಲ್ಲಾ ನೇರವಾಗಿ, ವೈಜ್ಞಾನಿಕವಾಗಿ, ಆಳವಾಗಿ ಸಾಮಿಪ್ಯವಹಿಸಿದ್ದರು. ಅದರಿಂದಲೇ ಪರಿಣಾಮಾತ್ಮಕವಾಗಿ ಮತ್ತು ಬಹು ದೂರಕ್ಕೂ ತಲುಪುತ್ತದೆ.
ಧಮ್ಮವಿಲ್ಲದೆ ಜನರಿಗೆ ಉಳಿದ ವಿದ್ಯಾಭ್ಯಾಸ ನೀಡಿದರೆ ಅವರನ್ನು ನೀವು ಚಾಣಾಕ್ಷ ರಾಕ್ಷಸರನ್ನಾಗಿ ಮಾಡುವಿರಿ.
- ಡ್ಯೂಕ್ ಆಫ್ ವೆಲ್ಲಿಂಗ್ಟನ್


2.2 ಮಾನವನಿಗೆ ಬುದ್ಧ ಧಮ್ಮ ಕೋರುವುದೇನು?

ಮಾನವನಿಗೆ ಬುದ್ಧ ಧಮ್ಮ ಕೋರುವುದೇನು? ಒಮ್ಮೆ ಒಬ್ಬ ಚೀನಿಯ ವಿದ್ವಾಂಸ ಬೌದ್ಧ ಭಿಕ್ಷುವಿನಲ್ಲಿ ಈ ಪ್ರಶ್ನೆ ಕೇಳಿದನು? ಬುದ್ಧ ಧಮ್ಮದ ಸಾರವು ಏನು? ಏನನ್ನು ಬುದ್ಧ ಧಮ್ಮವು ಒಳಗೊಂಡಿದೆ? ಆಗ ಆ ಜ್ಞಾನಿಯು ಹೀಗೆ ಉತ್ತರಿಸಿದನು.
ಯಾವ ಪಾಪವನ್ನು ಮಾಡದಿರು, ಕುಶಲವನ್ನೇ ಮಾಡು (ಒಳಿತನ್ನೇ ಮಾಡು) ಚಿತ್ತವನ್ನು ಶುದ್ಧಿಗೊಳಿಸಿಕೋ - ಇದೇ ಸರ್ವಬುದ್ಧರ ಶಾಸನವಾಗಿದೆ.
ಆದರೆ ಆ ಚೀನಿ ವಿದ್ವಾಂಸನು ಇದಕ್ಕಿಂತ ಗಂಭೀರವಾದ ಉತ್ತರವನ್ನು ನಿರೀಕ್ಷಿಸಿದ್ದನು. ಏನೆಂದರೆ ಆಳವಾದ ಮತ್ತು ಅತಿ ಗಹನವಾದ ಪ್ರತಿಕ್ಷೆಯಲ್ಲಿದ್ದನು. ಹೀಗಾಗಿ ಆತನು ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದನು. ಮೂರು ವರ್ಷದ ಮಗುವು ಸಹಾ ಇದನ್ನು ಅರ್ಥ ಮಾಡಿಕೊಳ್ಳುತ್ತದೆ. ಇದರಲ್ಲೇನು ವಿಶೇಷ? ಆಗ ಸಂತ ಹೀಗೆ ಹೇಳುತ್ತಾನೆ: ಹೌದು ನಿಜವೇ! ಮೂರು ವರ್ಷದ ಮಗುವು ಅಥರ್ೈಸಿಕೊಳ್ಳಬಲ್ಲದು. ಆದರೆ ನೂರು ವರ್ಷದ ಮನುಜನು ಇದನ್ನು ಪ್ರಾಯೋಗಿಕವಾಗಿ ಸಿದ್ಧಿಸಲಾರ.
ಬುದ್ಧ ಭಗವಾನರು ಸಹಾ ಇದೇರೀತಿಯ ಎಚ್ಚರಿಕೆಯನ್ನು ಪೂಜ್ಯ ಆನಂದ ಭಿಕ್ಷುವಿಗೆ ಆಗ ನೀಡಿದ್ದರು. ಆಗ ಆನಂದರವರು ಸಹಾ ಪಾಲಿಸಲು ಸರಳವಾಗಿದೆ ಎಂದು ಗಂಭೀರವಾಗಿ ಲಕ್ಷ ನೀಡದಿದ್ದಾಗ ಬುದ್ಧಿವಾದ ಹೇಳಿದ್ದರು.
ಇದೇ ಬುದ್ಧ ಧಮ್ಮದ ಸಾರವಾಗಿದೆ. ಮಾನವನಿಗೆ ತನ್ನ ವಿಮುಕ್ತಿಗಾಗಿ ಈ ಸರಳವಾದ ಶೀಲಗಳನ್ನು ಪಾಲಿಸುವುದು ಅತಿ ಅಗತ್ಯವಾಗಿದೆ. ಆದರೆ ಸಾಧಿಸಲು ಇವು ಅತಿ ಕಷ್ಟಕರವಾಗಿದೆ. ಇದನ್ನು ಹೀಗೆ ಪ್ರಾರಂಭಿಸುತ್ತಾರೆ:
* ಒಬ್ಬನು ಅರಿವಿದ್ದು ಯಾವುದೇ ಜೀವಿಯ ಪ್ರಾಣಹರಣ ಮಾಡಬಾರದು.
* ಒಬ್ಬನು ಕೊಡದಿದ್ದ ಯಾವುದನ್ನೂ ತೆಗೆದುಕೊಳ್ಳಬಾರದು.
* ಒಬ್ಬನು ಅನೈತಿಕ ಕಾಮುಕತೆಯಿಂದ ತನ್ನನ್ನು ರಕ್ಷಿಸಿಕೊಳ್ಳಬೇಕು.
* ಒಬ್ಬನು ಸುಳ್ಳಿನ, ನಿಂದೆಯ, ಚಾಡಿಯ ಮತ್ತು ಹರಟೆಗಳಿಂದ ದೂರವಾಗಬೇಕು.
* ಒಬ್ಬನು ಮತ್ತನ್ನುಂಟುಮಾಡುವ ಮದ್ಯಪಾನ ಮತ್ತು ಇತರ ಯಾವುದೇ ವಸ್ತುಗಳನ್ನು ಸೇವಿಸಬಾರದು.
ಇವೇ ಬುದ್ಧ ಧಮ್ಮವನ್ನು ಪಾಲಿಸಲು ಅವಶ್ಯಕವಾಗಿರುವ ತತ್ವಗಳಾಗಿವೆ ಹೊರತು ತೋರಿಕೆಗೆ, ಡಾಂಭಿಕತೆಗಲ್ಲ. ಇದನ್ನು ಕೇವಲ ಅರ್ಥಮಾಡಿಕೊಂಡು ಪಾಲಿಸಬೇಕಾಗಿದೆ. ಇಂದು ಧಮ್ಮದ ಕೇಂದ್ರೀಕೃತ ಸಮಸ್ಯೆ ಏನೆಂದರೆ ಪ್ರತಿಯೊಬ್ಬರು ಇದನ್ನು ಬೌದ್ಧಿಕ ಜ್ಞಾನದ ರೀತಿ ಅರಿಯಲು ಸಿದ್ಧರಾಗುತ್ತಾರೆ. ಆದರೆ ಪ್ರಾಯೋಗಿಕವಾಗಿ ಸಿದ್ಧಿಸಿಕೊಳ್ಳಲು ಸಿದ್ಧರಿಲ್ಲ.
ಬೌದ್ಧರ ಪರಮೋಚ್ಛ ಗುರಿ ಏನೆಂದರೆ ನಿರಂತರ ಪುನರ್ಜನ್ಮಕ್ಕೆ ಬಂಧಿಸುವ ಬಂಧನಗಳನ್ನು, ಜನನ-ಮರಣದ ಸಂಸಾರದಿಂದ ಪಾರಾಗಲು, ಬದಲಿಸಲು ಆಗದ ಬಂಧನಗಳೆಲ್ಲವನ್ನು ಪೂರ್ಣವಾಗಿ ಕತ್ತರಿಸಿ ಮುಕ್ತನಾಗುವುದು. ಮಾನವನು ಅನಂತ ಪುನರ್ಜನ್ಮಗಳ ಚಕ್ರಕ್ಕೆ ಅಜ್ಞಾನದಿಂದಾಗಿ ಸಿಲುಕುತ್ತಾನೆ, ಮಾನವನು ದೀರ್ಘಕಾಲ ಇರುವಂತಹ ಅಸ್ತಿತ್ವವಾದ ಅಹಂ ಅಥವಾ ತಾನುವಿಗೆ ರೂಪ ನೀಡುತ್ತಾನೆ.
ಸತ್ಯದ ಬದಲು ಆತನು ಅಹಂವಿನ ನಾನೇ ಎಂಬ ಭ್ರಮೆಗೆ ಸಿಲುಕಿ ಸ್ವಾರ್ಥದ ಬಯಕೆಗಳನ್ನು ಬೆಳೆಸುತ್ತಾನೆ. ಹೀಗಾಗಿ ಮಾನವನು ತನ್ನ ತೀವ್ರ ಬಯಕೆಗಳನ್ನು ತಣಿಸಲು ಅನಂತವಾಗಿ ಹೋರಾಡುತ್ತಾನೆ. ಆದರೆ ಆತನೆಂದಿಗೂ ತೃಪ್ತನಾಗಲಾರ. ಅದು ಹೇಗಿದೆ ಎಂದರೆ ಕ್ಷಣಿಕ ಶಮನಕ್ಕಾಗಿ ಹುಣ್ಣನ್ನು ಕೆರೆದುಕೊಳ್ಳುವ ಹಾಗೆ. ನಂತರ ಆತನ ತುರಿಕೆ ಹೆಚ್ಚಾಗಿ, ಉದ್ರೇಕ ಹೆಚ್ಚಾಗಿ ಗಾಯವು ಮಾತ್ರ ಇನ್ನೂ ಭೀಕರವಾಗುತ್ತದೆ.


2.3 ಈ ಜಗತ್ತಿಗೆ ಆದಿ ಇದೆಯೇ?

ಹಲವು ಜನರು ಜಗತ್ತಿನ ಮತ್ತು ಮಾನವನ ಅಸ್ತಿತ್ವದ ಬಗ್ಗೆ ಆಳವಲ್ಲದ ದೃಷ್ಟಿಕೋನವನ್ನು ಹೊಂದಿದ್ದಾರೆ. ಅವರಿಗೆ ಈ ಜಗತ್ತು ರಚಿತವಾಗಿರುವುದು ಯಾವುದರಿಂದ ಎಂದು ಗೊತ್ತಿಲ್ಲ. ಬುದ್ಧ ಭಗವಾನರು ಜಗತ್ತಿಗೆ ಆದಿಯಾಗಲಿ ಅಥವಾ ಅಂತ್ಯವಾಗಲಿ ಇಲ್ಲ ಎಂದು ಹೇಳಿದಾಗ ಜನರಿಗೆ ಅದರ ಅರ್ಥವೇ ತಿಳಿಯಲಿಲ್ಲ. ಏಕೆಂದರೆ ಆ ಜನರು ಜಗತ್ತು ಇರುವುದು ಆಂತರ್ಯದಲ್ಲೇ ಎಂದು ತಿಳಿಯಲಿಲ್ಲ.
ನೀವು ಇಡೀ ಜಗತ್ತನ್ನು ಪರೀಕ್ಷಿಸಿ ಮತ್ತು ನಿಮ್ಮ ಶರೀರದೊಂದಿಗೆ ತುಲನೆಗೈಯಿರಿ, ಆಗ ನಿಮಗೆ ಸ್ಪಷ್ಟವಾಗಿ ಅರಿವಾಗುವುದು ಏನೆಂದರೆ ಅದೇ ಮೂಲಧಾತುಗಳು, ಶಕ್ತಿಗಳು ಮತ್ತು ಸ್ಥಿತಿಗತಿಗಳು ಶರೀರದಲ್ಲಿಯೂ ಮತ್ತು ಇಡೀ ಬ್ರಹ್ಮಾಂಡದಲ್ಲಿಯೂ ಒಂದೇ ಕಾಲದಲ್ಲಿ, ಒಂದೇ ತೆರನಾಗಿದೆ ಎಂದು ತಿಳಿಯುತ್ತದೆ. ಆದರೆ ಇರುವ ವ್ಯತ್ಯಾಸವೇನೆಂದರೆ ನಿಮಗೆ ಮಾತ್ರ ಚಿಂತಿಸಲು ಮತ್ತು ಅರಿವು ಮಾಡಿಕೊಳ್ಳಲು ಮನಸ್ಸು ಇದೆ.
ಯಾವ ಸಾಮಾನ್ಯತೀತ ಮಾನಸಿಕ ಶಕ್ತಿಯನ್ನು ಮಾನವರು ಅನುಭವಿಸುತ್ತಿರುವರೋ ಅಂತಹವನ್ನು ಬೇರೆ ಯಾವುದೇ ಜೀವಿಗಳಲ್ಲಿ ನೋಡಲಾಗುವುದಿಲ್ಲ. ಹಾಗಿದ್ದರೂ ಈ ಮಾನಸಿಕ ಶಕ್ತಿಗಾಗಿ ತರಬೇತಿ ಪಡೆದು ಅಭ್ಯಸಿಸಬೇಕಾಗುತ್ತದೆ ಮತ್ತು ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ ಮಾನವನ ಮನಸ್ಸೇ ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪ್ರಧಾನ ಕಾರಣವಾಗುತ್ತದೆ. ಮನಸ್ಸನ್ನು ಯೋಗ್ಯವಾಗಿ ಶಿಕ್ಷಣಗೊಳಿಸಿದಾಗ, ಸಾಮರಸ್ಯ, ಅರಿವು ಮತ್ತು ಶಾಂತಿಯು ಮೇಲುಗೈಯಾಗುತ್ತದೆ. ಶೈಕ್ಷಣಿಕ ಅಥವಾ ಪ್ರಾಪಂಚಿಕ ಜ್ಞಾನವು ಮಾನಸಿಕ ಶಿಸ್ತು ಇಲ್ಲದೆ ಅಥವಾ ಮಾನಸಿಕ ಅಭಿವೃದ್ಧಿಯಾಗದಿದ್ದಾಗ ಆ ಜ್ಞಾನವು ಅಜ್ಞಾನಕ್ಕಿಂತಲೂ ಅಪಾಯಕಾರಿಯಾಗಿರುತ್ತದೆ.
ಧಮ್ಮದ ಅಥವಾ ಪರಮಾರ್ಥದ ವಿಕಾಸವಿಲ್ಲದೆ ಜ್ಞಾನವು ಧ್ವಂಸಾತ್ಮಕ ಉದ್ದೇಶಗಳಿಗೆ ಬಳಸಲ್ಪಡುತ್ತದೆ. ಎಲ್ಲೆಲ್ಲೂ ಪ್ರತಿಯೊಂದು ಸಹಾ ಅನಿತ್ಯದ ಸಾರ್ವತ್ರಿಕ ನಿಯಮಗಳಿಗೆ ಒಳಪಟ್ಟಿದೆ. ಇದೇ ಪ್ರತಿಯೊಂದು ವಸ್ತುಗಳ ಸ್ವರೂಪವಾಗಿದೆ. ಅವೆಲ್ಲವೂ ಅನಿತ್ಯದ, ಕ್ಷಣಿಕತೆಯ ನಿಯಮಕ್ಕೆ ಒಳಪಟ್ಟು ಶಿಥಿಲವಾಗುತ್ತವೆ ಮತ್ತು ಕ್ಷೀಣಿಸುತ್ತವೆ. ಮೂಲಧಾತುಗಳ ಮತ್ತು ಶಕ್ತಿಗಳ ಹಾಗು ಅವುಗಳ ಅಸ್ತಿತ್ವಗಳ ಸಂಯೋಜನೆಯು ವಿಷಯಗಳ ಭ್ರಮೆಯನ್ನು ಉತ್ಪನ್ನಗೊಳಿಸುತ್ತವೆ. ಅವನ್ನು ನಾವು ವೀಕ್ಷಿಸಬಲ್ಲೆವು ಹಾಗು ಸ್ಪಶರ್ಿಸಬಲ್ಲೆವು. ನಾವು ಅವುಗಳ ಘನತೆ ಮತ್ತು ನಿತ್ಯತೆಗಳ ಮೋಹವನ್ನು ಸೃಷ್ಟಿಸುತ್ತೇವೆ. ಅವುಗಳ ಬದಲಾವಣೆಗೆ ಕಾರಣವೇನೆಂದರೆ ಮೂಲಧಾತುಗಳ ಮತ್ತು ಶಕ್ತಿಗಳ ನಡುವೆ ಆಗುವ ಘರ್ಷಣೆಯಾಗಿದೆ. ಯಾವಾಗ ಗೋಚರ ವಸ್ತುವು ವಿಘಟಿತವಾಗುವುದೋ ಆಗ ಧಾತುಗಳು ಮತ್ತು ಶಕ್ತಿಗಳು ಆಳವಾಗಿ ಕರಗಿ ನಂತರ ಅವೇ ಸಂಯುಕ್ತ ವಸ್ತುವಾಗುವುದು.
ಇದು ಸ್ವಾಭಾವಿಕ ಆಗುಹೋಗುವಿಕೆಯಾಗಿದೆ ಮತ್ತು ಪ್ರತಿ ಅಂಗಗಳು, ವಸ್ತುಗಳು ಇದೇರೀತಿಯಾಗಿ ಸಂಘಟಿತವಾಗುತ್ತದೆ. ವಸ್ತುಸ್ಥಿತಿ ಹೀಗಿರುವಾಗ ವಿಶ್ವವನ್ನು ದೇವರ ಸೃಷ್ಟಿಯೆಂದು ಹೇಳಲು ಯಾವುದೇ ತರ್ಕವಾಗಲಿ, ಆಧಾರವಾಗಲಿ, ವಿಚಾರಶೀಲತೆಯಾಗಲಿ ಇಲ್ಲವಾಗಿದೆ. ಅಥವಾ ಇದು ಸೃಷ್ಟಿಯ ಆದಿಯ ವೇಳೆ ನಡೆದ ಪಾಪಕ್ಕೆ ಶಿಕ್ಷೆಯೆಂದು ಹೇಳಲಾಗುವುದಿಲ್ಲ. ಬೌದ್ಧರು ಇದನ್ನು ಸ್ವಾಭಾವಿಕ ಆಗುಹೋಗುವಿಕೆ ಎಂದು ಅನಿತ್ಯತೆಯ ಬದಲಾವಣೆಯ ಫಲಿತಾಂಶವೆಂದು ಪರಿಗಣಿಸುತ್ತಾರೆ.
ನಾವು ನಿತ್ಯವೆಂಬ ಭಾವನೆಗೆ ಅಂಟಿಕೊಂಡಾಗಲೇ ಜೀವನದಲ್ಲಿ ಅತೃಪ್ತಿಯು ಮತ್ತು ದುಃಖವು ಪ್ರಾರಂಭವಾಗುತ್ತದೆ. ಇದು ಸತ್ಯ ಹಾಗು ಬಹು ಸಾಧ್ಯತೆಯ ವಿಷಯವಾಗಿದೆ. ಆದರೆ ಪರರು ಇದನ್ನು ದಿವ್ಯಶಕ್ತಿಯ ಲೀಲೆ ಎನ್ನುತ್ತಾರೆ. ಮಾನವನಿಗೆ ಪರೀಕ್ಷೆ ಒಡ್ಡುವ ದೈವಶಕ್ತಿ ಎನ್ನುತ್ತಾರೆ ಮತ್ತು ದೇವರ ಇಚ್ಛೆ ಎಂದು ಭಾವಿಸಿ ಶರಣಾಗತರಾಗುತ್ತಾರೆ.
ಆದರೆ ವೈಜ್ಞಾನಿಕ ಧರ್ಮವು ನಮಗೆ ಬೋಧಿಸುವುದು ಏನೆಂದರೆ ಅಗೋಚರ ಶಕ್ತಿಗಳು ನಮ್ಮ ಜೀವನದಲ್ಲಿ ಪರಿಣಾಮ ಬೀರುತ್ತವೆ. ಬ್ರಹ್ಮಾಂಡದ ಬಲಗಳು ಸಹಾ ಧಾತುಗಳ ಮೇಲೆ ಮತ್ತು ಶಕ್ತಿಗಳ ಮೇಲೆ ನಮ್ಮ ಶರೀರದ ಒಳಗೂ ಮತ್ತು ಹೊರಗೂ ಪ್ರಭಾವ ಬೀರುತ್ತವೆ. ಹಲವಾರು ನಮ್ಮ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಇವುಗಳ ಪ್ರಭಾವದಿಂದಲೂ ಆಗುವುದು. ಹಲವು ಅಜ್ಞಾತ ಬಲಗಳು ಸಹಾ ನಮ್ಮ ಜೀವನದಲ್ಲಿ ತೊಂದರೆ ಉಂಟುಮಾಡುವುವು. ಅದನ್ನು ಆದಿಯ ಜನರು ದೆವ್ವಗಳೆಂದು ಪರಿಗಣಿಸಿದ್ದರು.
ಭಯ, ಕಲ್ಪನೆ, ಸಂಶಯ ಮತ್ತು ಮೌಢ್ಯಯುತ ಭಾವನೆಗಳು ಮನಸ್ಸಿನಲ್ಲಿ ಜೀರ್ಣಗೊಂಡು ಅಂತಹವರ ಮನಸ್ಸಿಗೆ ತೊಂದರೆ ಉಂಟುಮಾಡುತ್ತವೆ. ಯಾವಾಗ ಅವರ ಮನಸ್ಸು ಕ್ಷೊಭೆಗೊಳ್ಳುತ್ತದೋ, ಆಗ ಅವರು ಅದರ ಪರಿಣಾಮದಿಂದ ಭೌತಿಕ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹಾಗಿರುವಾಗಲು ನಾವು ಮನಸ್ಸನ್ನು ಸುಶಿಕ್ಷಣಗೊಳಿಸಿ ಮತ್ತು ಅಭಿವೃದ್ಧಿಗೊಳಿಸಿ, ಅರಿವಿನಿಂದ ಜೀವಿಸಿದರೆ ನಾವು ಇಂತಹ ಎಲ್ಲಾ ಸಮಸ್ಯೆಗಳನ್ನು ತಡೆಗಟ್ಟಬಹುದು. ಆದ್ದರಿಂದಲೇ ಬುದ್ಧ ಭಗವಾನರು ಸದಾ ಮನಸ್ಸನ್ನು ಎಲ್ಲಾ ಕುಶಲ ಮತ್ತು ಅಕುಶಲ ಸ್ಥಿತಿಗಳ ಅಗ್ರಗಾಮಿ, ಮುಂದಾಳು ಎಂದಿದ್ದಾರೆ. ಅವೆಲ್ಲವೂ ಮನಸ್ಸಿನಿಂದಲೇ ಹುಟ್ಟಿವೆ.

2.4 ಧಾಮರ್ಿಕ ಘರ್ಷಣೆ

ನಮ್ಮ ಬಹಳಷ್ಟು ಸಾಮಾಜಿಕ ತೊಂದರೆಗಳು ಧಾಮರ್ಿಕ ಸಂಘರ್ಷಗಳಾಗಿ ವಿಸ್ತರಿಸಿವೆ. ವಾಸ್ತವವಾಗಿ ಧರ್ಮವೇ ಈ ಸಂಘರ್ಷಗಳಿಗೆ ಕಾರಣವಾಗಿದೆ. ಧರ್ಮದ ಉದ್ದೇಶವೇನೆಂದರೆ ಮಾನವತೆಯಲ್ಲಿ ಸಾಮರಸ್ಯದ ಜೀವನಕ್ಕೆ, ಐಕ್ಯತೆಗೆ ಮತ್ತು ಮಾನವತಾ ಸದ್ಗುಣಗಳ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವುದು. ಆದರೆ ಇಂದು ಹಾಗಿರುವಾಗಲೂ ಧಮ್ಮವು ಪರಧರ್ಮಗಳ ವಿರುದ್ಧವಾಗಿ ಪಕ್ಷಪಾತ ಧೋರಣೆಗಾಗಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲದೆ ಮತ್ಸರ, ತಾರತಮ್ಯ ಮತ್ತು ದ್ವೇಷದ ವೃದ್ಧಿಯು ಕಾಣಸಿಗುತ್ತದೆ. ವಾಸ್ತವವಾಗಿ ಇಂದು ಮಾನವರು ಧರ್ಮವನ್ನು ಶಾಂತಿ ಸ್ಥಾಪನೆಗೆ ಬಳಸುತ್ತಿಲ್ಲ, ಬದಲಾಗಿ ಮೇಲು-ಕೀಳು ಮನೋವೃತ್ತಿಗಳನ್ನು ಹೆಚ್ಚಿಸಲು ಬಳಸುತ್ತಿದ್ದಾರೆ. ಇಂತಹ ವೈರತ್ವದ ಮನೋವೃತ್ತಿಯಿಂದಾಗಿ ಅನಾರೋಗ್ಯಕರ ಧಾಮರ್ಿಕ ಸ್ಪಧರ್ೆಗಳು ಬೆಳೆದು ಜಗತ್ತಿನ ಹಲವಾರು ಭಾಗಗಳಲ್ಲಿ ರಕ್ತವು ಮಿತಿಮೀರಿ ಹರಿದಿದೆ.
ಧಾಮರ್ಿಕ ನಾಯಕರೆಂದು ಕರೆಸಿಕೊಳ್ಳುವ ಅವರು ತಮ್ಮ ನಂಬಿಕೆಗಳನ್ನೇ ಪ್ರಶಂಸಿಸುತ್ತಾ ಅದನ್ನೇ ತಮ್ಮ ಧಾಮರ್ಿಕ ವಿಧಿ ಮತ್ತು ಸಂಪ್ರದಾಯಗಳ ಒಂದು ಭಾಗವನ್ನಾಗಿ ಮಾಡಿಕೊಂಡುಬಿಟ್ಟಿದ್ದಾರೆ. ಹಾಗೆಯೇ ಅವರು ಪರ ಮತಧರ್ಮಗಳನ್ನು ಕೀಳಾಗಿ ಕಂಡು, ವ್ಯಂಗ್ಯಮಾಡುತ್ತ, ಆ ಧರ್ಮದಲ್ಲಿನ ನಂಬಿಕೆ ಆಚರಣೆಗಳನ್ನು ಧಿಕ್ಕರಿಸುತ್ತಾರೆ. ಇನ್ನೂ ಕೆಲವರು ಧರ್ಮವನ್ನು ತಮ್ಮ ಲೌಕಿಕ ಲಾಭಕ್ಕಾಗಿ, ರಾಜಕೀಯ ಅಧಿಕಾರಕ್ಕಾಗಿ, ಸ್ವ-ಕೀತರ್ಿಗಾಗಿ ಮತ್ತು ಪ್ರಾಪಂಚಿಕ ಅಧಿಕಾರ ಬಲಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂದು ಧರ್ಮವೇ ಒಂದು ಸಮಸ್ಯೆಯಾಗಿ ಪರಿಣಮಿಸಿದೆ.
ಕೆಲವರು ಕೇವಲ ಐಶ್ವರ್ಯದ ಬಗ್ಗೆಯೇ ಮನಸ್ಸನ್ನು ಹರಿಸುತ್ತಿದ್ದಾರೆ, ಐಶ್ವರ್ಯವು ಕೆಲವು ಸಮಸ್ಯೆಗಳನ್ನು ದಾಟಿಸಬಹುದು. ಪ್ರಾಪಂಚಿಕ ಸುಖ, ಇಂದ್ರೀಯ ಭೋಗವನ್ನೆಲ್ಲಾ ಐಶ್ವರ್ಯದಿಂದಾಗಿ ಪಡೆಯಬಹುದು. ಆದರೆ ಹಣವು ಸ್ವಾಭಾವಿಕ ಸಮಸ್ಯೆಗಳನ್ನೆಲ್ಲಾ ಕಿತ್ತು ಎಸೆಯಲಾರದು. ಧಾಮರ್ಿಕ ಗುರುಗಳು, ತತ್ವಜ್ಞಾನಿಗಳು, ಮಹಾ ಚಿಂತಕರು ಮತ್ತು ವಿಚಾರವಾದಿಗಳು ಮಾನವನ ದೌರ್ಬಲ್ಯಗಳ ಸ್ವರೂಪದ ಕಡೆಗೆ ಗಮನಹರಿಸುವಂತೆ ತೋರಿಸಿದ್ದಾರೆ. ಹಾಗೆಯೇ ಅವುಗಳಿಂದ ವಿಮೋಚನೆ ಹೊಂದುವುದನ್ನು ತಿಳಿಸಿದ್ದಾರೆ. ಹಾಗಿದ್ದರೂ ಸಾಮಾನ್ಯ ಜನರು ಅದನ್ನೆಲ್ಲಾ ಸಿದ್ಧಾಂತವೆಂದು ಪರಿಗಣಿಸಿದ್ದಾರೆ ಹೊರತು, ಸಮಸ್ಯಾ ಪರಿಹಾರಕವೆಂದು ನಿರ್ಧರಿಸಿಲ್ಲ.


2.5 ಮೌಲ್ಯಯುತ ಮಾನವ ಜೀವನ

ಮಾನವನ ಜೀವನವು ಮೌಲ್ಯಯುತವಾದುದು. ಅದು ಪವಿತ್ರವಾದುದು ಮತ್ತು ನಮಗೆ ಅದ್ವಿತೀಯ ಅನುಭೂತಿಗಳನ್ನು ನೀಡುತ್ತದೆ. ಬುದ್ಧ ಭಗವಾನರು ಹೀಗೆ ಹೇಳುತ್ತಾರೆ:
ಮಾನವ ಜನ್ಮವು ದುರ್ಲಭ, ಮತ್ರ್ಯರ ಜೀವನವು ಕಷ್ಟಕರ.
ಮಾನವರ ಜೀವನವು ಪ್ರೀತಿಯಿಂದ ಪಾಲನೆಗೊಳಪಡಬೇಕು ಮತ್ತು ಜೋಪಾನವಾಗಿ ಮಾರ್ಗದಶರ್ಿತವಾಗಬೇಕಾಗಿದೆ. ಅದನ್ನು ಮಾನವತೆಗೆ ಶಾಪಕಾರಿಯಾಗುವಂತೆ ಮಾಡಬಾರದು, ನಾವು ಮೈತ್ರಿಯಿಂದ ಮತ್ತು ಕರುಣೆಯುತವಾಗಿ ಬಾಳಿ, ಎಲ್ಲರಲ್ಲಿ ಶಾಂತಿಯನ್ನು ತರಬೇಕಾಗಿದೆ ಮತ್ತು ಹೀಗೆ ಎಚ್ಚರಿಕೆಯಿಂದ ಜೀವಿಸಿ ಮಾನವತೆಯ ಜೀವನವನ್ನು ಮೌಲ್ಯಯುತವನ್ನಾಗಿ ಮಾಡಬೇಕಾಗಿದೆ.
ನಾವು ಜ್ಞಾನವಿಕಾಸದ ಮಹತ್ಕಾಲದಲ್ಲಿ ಮಾನವರಾಗಿ ಹುಟ್ಟಿರುವುದಕ್ಕಾಗಿ ಮಹಾ ಭಾಗ್ಯಶಾಲಿಗಳಾಗಿದ್ದೇವೆ. ಈಗ ಪ್ರಾಧಾನ್ಯವಾಗಿರುವುದು ಏನೆಂದರೆ ನಾವು ಈ ಜ್ಞಾನವನ್ನು ಬಳಸಿಕೊಂಡು ಎಲ್ಲಾ ಸಂಪನ್ಮೂಲಗಳಿಂದ ಕಸ ತೆಗೆದು, ಜೀವಗಳನ್ನು ಕಾಪಾಡಬೇಕಾಗಿದೆ. ಹಾಗು ಮಾನವ ಜೀವನದ ಗುಣಮಟ್ಟವನ್ನು ವಧರ್ಿಸಬೇಕಾಗಿದೆ. ಹಾಗು ಮಾನವ ನಾಗರಿಕತೆಗೆ ಕಾಣಿಕೆ ಸಲ್ಲಿಸಬೇಕಾಗಿದೆಯೇ ಹೊರತು ನಮ್ಮ ಮತ್ತು ಪರಿಸರವನ್ನು ನಾಶ ಮಾಡುವುದಲ್ಲ. ಮಾನವನ ಪ್ರಚನ್ನತೆಯನ್ನು ಅತ್ಯುತ್ತಮ ಬಳಕೆ ಮಾಡಬೇಕಾಗಿದೆ. ಪೃಥ್ವಿಯ ಜೀವಿಗಳ ಗೋಪುರಾಕೃತಿಯಲ್ಲಿ ಮಾನವನು ಸರ್ವ ಉನ್ನತ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಕೇವಲ ಪರಜೀವಿಗಳೊಡನೆ ಹೋಲಿಸಿಕೊಳ್ಳಿ. ಅವುಗಳಿಗೆ ಇರುವ ಕೆಲವು ವಿಶೇಷ ಗುಣಗಳಿಂದಾಗಿ, ಅವು ಮಾನವನ ಸಾಮಥ್ರ್ಯವನ್ನೇ ಮೀರಿಸಿವೆ. ಕೆಲವು ಪ್ರಾಣಿಗಳು ಅಪಾರ ಬಲವನ್ನು ಹೊಂದಿದೆ ಮತ್ತು ಸಹಜ ಪ್ರವೃತ್ತಿಯ ಅವುಗಳ ಬಲದಲ್ಲಿ, ಮಾನವನು ಏನೇನೂ ಇಲ್ಲ. ಯಾವ ಮಾನವನು ಸಹ ಸಮವಾಗಲಾರ.
ಕೆಲವು ಕೀಟಗಳು ಮತ್ತು ಪ್ರಾಣಿಗಳು ವಾತಾವರಣದ ಸ್ಥಿತಿಗತಿಗಳನ್ನು ಬಹು ಮುಂಚಿತವಾಗಿಯೇ ಅರಿತುಬಿಡುತ್ತವೆ. ಸಂಪರ್ಕಕ್ಕಾಗಿ ತಮ್ಮ ಘ್ರಾಣ ಇಂದ್ರೀಯವನ್ನು ಅತ್ಯುತ್ತಮವಾಗಿ ಬಳಸುತ್ತವೆ, ಸಂದೇಶಗಳನ್ನು ಸಾರಲು ಎಲೆಕ್ಟ್ರಿಕಲ್ ಪ್ರಚೋದನೆಗಳನ್ನು ರವಾನಿಸುತ್ತವೆ. ಹಾಗೆಯೇ ಭೂಕಂಪ ಮತ್ತು ಭೀಕರ ಬಿರುಗಾಳಿಗಳ ಬರುವಿಕೆಯನ್ನು ಮುಂಚಿತವಾಗಿ ಗ್ರಹಿಸುತ್ತವೆ. ಅವುಗಳ ವರ್ತನೆಯನ್ನು ಅವುಗಳ ಪ್ರವೃತ್ತಿಯಿಂದಾಗಿ ಆಳ್ವಿಕೆಯಾಗುತ್ತಿದೆ ಎಂದು ಅರಿಯಬಹುದು. ಆದರೆ ಮಾನವರಿಗೆ ಹೋಲಿಸಿದರೆ ಅವುಗಳ ಬುದ್ಧಿಮತ್ತೆಯು ಅತಿ ಪರಿಮಿತವಾಗಿದೆ.
ಈ ಎಲ್ಲಾ ಕೊರತೆಯು ಇದ್ದರೂ ಸಹಾ ಅವು ಕೀಟಗಳೊಂದಿಗೆ ಸಾಮರಸ್ಯದೊಂದಿಗೆ ಸಾಮಾನ್ಯ ಜೀವನ ನಡೆಸುತ್ತವೆ. ಕೆಲವು ಮಾನವರು ತಮ್ಮ ಬುದ್ಧಿಮತ್ತೆಯನ್ನು ದುರುಪಯೋಗಗೊಳಿಸಿಕೊಂಡು ಮಾನವನ ಘನತೆಗೆ ಅಪಮಾನಗೈದಿದ್ದಾರೆ. ಈ ರೀತಿಯ ಜನರು ನಾನಾರೀತಿಯ ಮಿಥ್ಯಾದೃಷ್ಟಿಗಳಿಂದ ನಂಬಿಕೆಗಳಿಂದ, ಕಲ್ಪನೆಗಳಿಂದ ಕೂಡಿ ತಮ್ಮ ಮನಸ್ಸನ್ನು ಮಿಥ್ಯದಿಂದ ಆವರಿಸಿಕೊಂಡಿದ್ದಾರೆ. ಹೀಗಾಗಿ ಮಿಥ್ಯ ಮಾರ್ಗದಶರ್ಿತರಾಗಿ ಹಾನಿಯುತ ಅಂತ್ಯಕ್ಕೆ ಸಾಗುತ್ತಿರುವರು.
ತಮ್ಮ ಜೀವನದಲ್ಲಿ ಪೂರ್ಣವಾಗಿ ತೃಪ್ತಿಯನ್ನು ಹೊಂದಿದ್ದೇವೆ ಎನ್ನುವ ಪುರುಷನಾಗಲಿ ಅಥವಾ ಸ್ತ್ರೀಯಾಗಲಿ ಈ ಜಗತ್ತಿನಲ್ಲಿ ಯಾರೂ ಇಲ್ಲ. ಯಾವುದೇ ರೀತಿಯ ಸುಖವನ್ನು ಅನುಭವಿಸಲಿ ಅಥವಾ ಭೌತಿಕ ವಸ್ತುಗಳನ್ನು ಪಡೆಯಲಿ, ಕೊನೆಯಲ್ಲಿ ಅತೃಪ್ತಿಯೇ ಉಳಿಯುವುದು. ಇದೇ ಸ್ವಾಭಾವಿಕವಾಗಿದೆ. ಇಲ್ಲಿ ಅತೃಪ್ತಿಯನ್ನು ತಡೆಯಬೇಕೆ ಅಥವಾ ನಿರೋಧಿಸಬೇಕೆ ಎಂಬುದು ಪ್ರಶ್ನೆಯಲ್ಲ, ಆದರೆ ಯಾವುದನ್ನೇ ವ್ಯಕ್ತಿಯು ಮಾಡಲಿ, ಆ ವಿಷಯಗಳೆಲ್ಲಾ ಅತೃಪ್ತಿಕರವಾಗುತ್ತವೆ. ಆತನು ಸಹನೆಯಿಂದ ಮತ್ತು ಅರಿವಿನಿಂದ ವತರ್ಿಸಬೇಕೆ ಅಥವಾ ತನ್ನನ್ನು ಹಾಗು ಪರರನ್ನು ಹಾನಿಗೆ ಒಳಪಡಿಸಬೇಕೆ? ಆತನ ಕ್ರಿಯೆಯ ನೂಕಾಟದ ರಭಸವು ಆತನ ಲೋಭದ ವಿಸ್ತಾರಕ್ಕೆ ಅನುಗುಣವಾಗಿರುತ್ತದೆ.
ಗಾಂಧೀಜಿಯವರ ಪ್ರಕಾರ : ಈ ಜಗತ್ತಿನಲ್ಲಿ ಪ್ರತಿಯೊಬ್ಬನ ಅಗತ್ಯಕ್ಕೆ ಸಾಕಾಗುವಷ್ಟು ಸಂಪನ್ಮೂಲ ಇದೆ. ಆದರೆ ಒಬ್ಬನ ಲೋಭ (ದುರಾಸೆ)ಕ್ಕೆ ಸಾಕಾಗುವಷ್ಟು ಇಲ್ಲವಾಗಿದೆ. ಯಾರು ಶ್ರೀಮಂತರಾಗಿದ್ದಾರೋ ಅವರು ಮತ್ತಷ್ಟು ಶ್ರೀಮಂತರಾಗುವ ಆಸೆಯಿಡುತ್ತಾರೆ. ಯಾರು ಅಧಿಕಾರ ಹೊಂದಿದ್ದಾರೋ ಅವರು ಮತ್ತಷ್ಟು ಅಧಿಕಾರವನ್ನು ಬಯಸುತ್ತಿದ್ದಾರೆ. ಹೀಗಾಗಿ ತೃಪ್ತಿಹೊಂದದ ಈ ಬಯಕೆಗಳೇ ಸಕಲ ತಿಕ್ಕಾಟಗಳಿಗೆ ಮೂಲಕಾರಣವಾಗಿದೆ. ನೀವು ಕೇಳಬಹುದು, ಬಯಕೆಗಳಿಲ್ಲದೆ ನಾವು ಜೀವಿಸುವುದು ಹೇಗೆಂದು? ಹೌದು ಜೀವಿಸಲು ಬಯಕೆಗಳನ್ನು ಬಿಡಲಾಗದು, ಹಾಗಿರುವಾಗಲು ಒಬ್ಬನು ಜೀವಿಸಲು ಬೇಕಾದ ಅವಶ್ಯಕತೆಗಳು ಮತ್ತು ಇಂದ್ರಿಯಗಳ ತೃಪ್ತಿಗೆ ಬೋಗಗಳಲ್ಲಿ ತಲ್ಲೀನನಾಗುವಿಕೆಗೆ ನಡುವೆ ಇರುವ ವ್ಯತ್ಯಾಸವನ್ನು ಕಲಿಯಲೇಬೇಕು. ಹೀಗಾಗಿ ಅವಶ್ಯಕತೆ ಮತ್ತು ಬಯಕೆ ಇವುಗಳ ನಡುವೆ ಸೂಕ್ಷ್ಮವಾದ ವ್ಯತ್ಯಾಸವಿರುವುದು ಕಂಡುಬರುತ್ತದೆ.
ಜೀವನದಲ್ಲಿ ಒಬ್ಬನು ತನ್ನ ಉಳಿವಿಗಾಗಿ ಹಾಗೆಯೇ ಸುಖಬೋಗದಲ್ಲಿ ತಲ್ಲೀನನಾಗಲು ಸಂಘರ್ಷ ಮಾಡುತ್ತಿರುತ್ತಾನೆ. ಈ ಪ್ರಕ್ರಿಯೆಯಲ್ಲಿ ಒಬ್ಬನ ಮಾನಸಿಕ ಮತ್ತು ನೈತಿಕ ಪ್ರವೃತ್ತಿಯಂತೆ ಒಬ್ಬನು ಹಲವಾರು ತಪ್ಪುಗಳನ್ನು ಮಾಡುತ್ತ, ತನ್ನನ್ನೂ ಹಿಂಸಿಸುತ್ತಾ ಹಾಗೆಯೇ ಪರರ ಸುಖ ಮತ್ತು ಶಾಂತಿಗೆ ಧಕ್ಕೆ ತರುತ್ತಾನೆ.
ನಾವು ನಮ್ಮ ಬಯಕೆಗಳ ತೃಪ್ತಿಯ ವಿಷಯದಲ್ಲಿ ಅತಿ ಜಾಗರೂಕರಾಗಿರಬೇಕು. ಜನರು ಅತಿಯಾದ ಬೋಗದಿಂದಾಗಿ ತಮನ್ನೇ ನಾಶಗೊಳಿಸುತಿಹರು, ಹೇಗೆ ಇರುವೆಗಳು ಜೇನಿನ ಬಟ್ಟಲಿನಲ್ಲಿ ಅಂತ್ಯ ಕಾಣುವ ಹಾಗೆ ಹಲವಾರು ಐಶ್ವರ್ಯವಂತ ಜನರು ಆಗಾಗ್ಗೆ ತಮ್ಮ ಜೀವನದ ಕೊನೆಗಾಣುವರು. ಮಿತಿಮೀರಿದ ಐಶ್ವರ್ಯದ ಬಯಕೆಯು ಸುಖದೆಡೆಗೆ ಕೊಂಡೊಯ್ಯುವುದಿಲ್ಲ. ಬದಲಾಗಿ ಖಿನ್ನತೆಯ ಬಂಡಾರಕ್ಕೆ ಒಯ್ಯುವುದು. ಈ ರೀತಿಯ ಒತ್ತಡಕ್ಕೀಡಾಗಿ ಬಹಳಷ್ಟು ಜನರು ವಿಶ್ರಾಂತಿಯ ಕಲೆಯನ್ನೇ ಮರೆತಿಹರು, ಹೀಗಾಗಿ ಸಮಾಧಾನ ತರುವ ಔಷಧ ಸೇವನೆಯಿಲ್ಲದೆ ಜನರು ಸುಖವಾದ ನಿದ್ದೆಯನ್ನೇ ಮಾಡುತ್ತಿಲ್ಲ. ನಿರಂತರ ಒತ್ತಡದಿಂದಾಗಿ ದೈಹಿಕ ಸಾಮಥ್ರ್ಯವು ಕ್ಷೀಣಿಸಿ ರೋಗಾವಸ್ಥೆಗೆ ದೂಡುವುದು, ನಾನಾವ್ಯಾಧಿಗಳಿಂದಾಗಿ ಕೊನೆಗೆ ಸಾವು ಪಡೆಯುವರು.


2.6 ಅಸ್ತಿತ್ವದ ಸ್ವರೂಪ

ನಮ್ಮ ಅಸ್ತಿತ್ವದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅತ್ಯಗತ್ಯ ಪ್ರಾಧಾನ್ಯ ವಿಷಯವಾಗಿದೆ. ಏಕೆಂದರೆ ಅದರಿಂದಾಗಿ ನಾವು ಎಲ್ಲಾ ಆಗು-ಹೋಗುಗಳನ್ನು ಮತ್ತು ಜೀವನವನ್ನು ಆಳುವಂತಹ ಸಾರ್ವತ್ರಿಕ ನಿಯಮಗಳನ್ನು ಅರಿತು ನಾವು ಸಾಮರಸ್ಯದಿಂದಾಗಿ ಹೊಂದಾಣಿಕೆಯಿಂದಾಗಿ ಜೀವಿಸಬಹುದಾಗಿದೆ. ಜನರು ತಮ್ಮ ಮಾನವತಾ ಪ್ರಚನ್ನತೆಯನ್ನು ಪೂರ್ಣವಾಗಿ ಬಳಸಿ ಜೀವಿಸುತ್ತಿಲ್ಲ. ಅವರು ಕ್ಷುಲ್ಲಕ ವಿಷಯಗಳ ಹುಡುಕಾಟದಲ್ಲೇ ತಮ್ಮ ಜೀವನಗಳನ್ನು ವ್ಯರ್ಥ ಮಾಡುತ್ತಿದ್ದಾರೆ. ಅವರು ಹೀಗೆಯೇ ವತರ್ಿಸುತ್ತಿದ್ದಲ್ಲಿ ಅವರು ಎಂದಿಗೂ ಈ ಜಗದಲ್ಲಿ ಶಾಂತಿ ಮತ್ತು ಸುಖಗಳನ್ನು ಹೊಂದಲಾರರು. ಆದ್ದರಿಂದಾಗಿ ಮಾನವತೆಯು ತನ್ನ ಜೀವಿತದ ಹಾದಿಯನ್ನು ಬದಲಿಸಿ ಒಳಿತಿಗಾಗಿ ತನ್ನ ಸಾಮಥ್ರ್ಯ ವೃದ್ಧಿಸಬೇಕಾಗಿದೆ.
ಜನರು ಅಜ್ಞಾನದಿಂದಾಗಿ ಹಾದಿ ತಪ್ಪುತ್ತಿದ್ದಾರೆ, ಆದರೂ ಈ ಜೀವನವನ್ನು ಅನಿಶ್ಚಿತವೆಂದು, ಸಾವು ನಿಶ್ಚಿತವೆಂದು ಅರಿತು ಈ ಆನಂದಗಳ ಅವಕಾಶವನ್ನು ಬಿಟ್ಟರೆ ಸಿಗಲಾರದೆಂದು ಭಾವಿಸಿ ಪ್ರಾಪಂಚಿಕ ಆನಂದಗಳ ಅನ್ವೇಷಣೆಯಲ್ಲಿ ತೊಡಗಿದ್ದಾರೆ. ಆದರೆ ಸುಖಯುತ ಜೀವನಕ್ಕಾಗಿ ಹಾನಿಯಲ್ಲದ ಸುಖಗಳನ್ನು ಪಡೆಯುವುದರಲ್ಲಿ ಯಾವ ತಪ್ಪು ಇಲ್ಲ. ಆದರೆ ಸದಾ ಇಂದ್ರೀಯ ಸುಖಗಳಲ್ಲೇ ತಲ್ಲೀನರಾಗಿ ಉನ್ನತ ಗುಣಗಳ ವಿಕಾಸವನ್ನೇ ಅಲಕ್ಷಿಸುವುದು ಮಾತ್ರ ಸರಿಯಲ್ಲ.
ಇಲ್ಲದೇ ಹೋದರೆ ಒಬ್ಬನು ಅತೃಪ್ತನಾಗಿಯೇ ಮತ್ತು ಹತಾಶನಾಗಿಯೇ ಈ ಜಗತ್ತನ್ನು ಬಿಡಬೇಕಾಗುತ್ತದೆ. ಬಹಳಷ್ಟು ಜನರು ಸಾವಿನ ವೇಳೆ ಬಹು ಭಯದಿಂದ ದುಃಖ ಪಡುತ್ತಾರೆ. ಏಕೆಂದರೆ ಅವರಲ್ಲಿ ಬಹಳಷ್ಟು ಅತೃಪ್ತ ಬಯಕೆಗಳಿರುತ್ತವೆ ಮತ್ತು ಆಸೆಗಳಿರುತ್ತವೆ. ಆಗ ಅವರು ನಂಬಿರುವುದೇನೆಂದರೆ ಅವರು ಮಾಡಬೇಕಾದ್ದು ಅಥವಾ ಮಾಡಬಾರದ್ದು ಬಹಳಷ್ಟಿರುತ್ತದೆ. ಸಾವಿನ ಕ್ಷಣಗಳಲ್ಲೂ ಅವರು ಪಶ್ಚಾತ್ತಾಪದಿಂದ ಕೂಡಿರುತ್ತಾರೆ. ಏಕೆಂದರೆ ಅವರ ಬಹಳಷ್ಟಿನ ಬಯಕೆಗಳು ಇನ್ನೂ ತೃಪ್ತಿಯಾಗಿರುವುದಿಲ್ಲ.
ಬುದ್ಧ ಧಮ್ಮವು ನಮಗೆ ಹೇಗೆ ದಿನನಿತ್ಯದ ಜೀವನದಲ್ಲಿ ತೃಪ್ತಿಯನ್ನು ನಿಯಂತ್ರಿಸಬೇಕು ಮತ್ತು ಸಾವಿನ ಕ್ಷಣದಲ್ಲಿ ಭಯವನ್ನು ಹೇಗೆ ಮೀರಬೇಕು ಎಂದೆಲ್ಲಾ ಬೋಧಿಸುತ್ತದೆ. ಜೀವನದ ಮತ್ತು ಪ್ರಾಪಂಚಿಕ ಸ್ಥಿತಿಗಳ ಸತ್ಯತೆ ಸ್ಪಷ್ಟವಾಗಿ ಅರ್ಥವಾದಾಗ ನಾವು ಇಂದ್ರೀಯಗಳ ಹಿಂದೆ ಸುತ್ತದೆ ನಿಯಂತ್ರಿಸುವುದನ್ನು ಕಲಿಯಬಲ್ಲೆವು ಮತ್ತು ಮೂಢನಂಬಿಕೆಗಳನ್ನು ಕಿತ್ತೆಸೆಯುವೆವು. ಹಾಗೆಯೇ ಇದು ಜೀವನದ ಸ್ಪಷ್ಟ ಉದ್ದೇಶವನ್ನು ಸಹಾ ನೀಡುತ್ತದೆ. ಉದ್ದೇಶರಹಿತರಾಗಿರುವವರ ಜೀವನವು ಗಾಳಿಯಲ್ಲಿ ಸಿಲುಕಿದ ಒಣ ಎಲೆಗಳ ರೀತಿ ಅಡ್ಡಾಡುತ್ತಿರುತ್ತದೆ. ನಮ್ಮ ಜೀವನದಲ್ಲಿ ನಾವು ಯಥಾರೂಪದ ಪ್ರಜ್ಞಾಶೀಲತೆ ಪಡೆದಿರಲೇಬೇಕು. ಜೀವನದ ಸ್ವರೂಪವನ್ನು ಮತ್ತು ಅದರ ಗುಣಲಕ್ಷಣಗಳೆಲ್ಲವನ್ನು ಅರಿತುಕೊಳ್ಳುವುದು ಅತ್ಯಂತ ಪ್ರಾಧಾನ್ಯಕರ ವಿಷಯವಾಗಿದೆ. ಜೀವನದ ಒಂದು ಪ್ರಮುಖ ಗುಣಲಕ್ಷಣವೇನೆಂದರೆ ಅನಿತ್ಯ (ಕ್ಷಣಿಕ/ಪರಿವರ್ತನೆ) ಜೀವನದಲ್ಲಿ ಯಾವುದೆಲ್ಲವೂ ಎಷ್ಟೇ ಪರಿಪೂರ್ಣವಾಗಿರಲಿ ಅಥವಾ ಎಷ್ಟೇ ಬಲಿಷ್ಠವಾಗಿರಲಿ ಅಥವಾ ಯಾವುದೇ ಭಾವನೆಯಾಗಲಿ ಅಥವಾ ಯಾವುದೇ ವಿಷಯವಾಗಲಿ, ಯಾವುದೂ ಸಹಾ ಕ್ಷೇಮಕರವಲ್ಲ ಅಥವಾ ಬದಲಾವಣೆಗಳಿಂದ ಮುಕ್ತವಾಗಿಲ್ಲ. ಆದುದರಿಂದಾಗಿ ಅದು ಪೂರ್ಣವಾಗಿ ತೃಪ್ತಿಯುತವಾಗಿರದು. ನಾವು ನಮ್ಮ ಜೀವನಗಳಲ್ಲಿ ಪ್ರತಿಕ್ಷಣವು ಬದಲಾವಣೆಯ ಭೀತಿಯನ್ನು ಎದುರಿಸುತ್ತೇವೆ.
ಈ ಅನಿತ್ಯತೆಯು ಅತೃಪ್ತಿಯೊಂದಿಗೆ ಸಂಬಂಧ ಜೋಡಿಸಲ್ಪಟ್ಟಿದೆ. ಅದು ಜೀವನದ ಎರಡನೆಯ ಲಕ್ಷಣವಾಗಿದೆ. ಜೀವನದಲ್ಲಿ ಬರುವಂತಹ ಒಂದು ಭೀಕರ ಬದಲಾವಣೆ ಎಂದರೆ ಜೀವನದ ಭಾಗ ಮತ್ತು ಕಂತೆಯಾಗಿರುವಂತಹುದೇ ಮೃತ್ಯು. ನಾವು ಅಂತಿಮವಾಗಿ ತಪ್ಪದೆ ಬರುವ ಸಾವಿನೊಂದಿಗೆ ಎದುರಿಸುವುದು ಹೇಗೆ ಎಂಬುದನ್ನು ಕಲಿಯಲೇಬೇಕಾಗಿದೆ. ನಮ್ಮ ಪ್ರತಿಕ್ಷಣವೂ ಸ್ಮಶಾನ ಸಮೀಪಕ್ಕೆ ಹೋಗುತ್ತಿದೆ. ಜನನ ಮತ್ತು ಮರಣ ನಿಜಕ್ಕೂ ಒಂದೇ ತಂತಿಯ ಎರಡು ತುದಿಗಳಾಗಿವೆ. ಮರಣವಿಲ್ಲದೆ ಜೀವಿತವೂ ಇಲ್ಲ. ಶಾಶ್ವತ ಜೀವನ ನಡೆಸಿಕೊಂಡು ಬರುವಿಕೆಗೆ ಮೃತ್ಯುವನ್ನು ತೆಗೆಯಲು ಆಗದು.
ನಾವು ಜನನ ಮತ್ತು ಮರಣವನ್ನು ಒಂದೇ ಪ್ರಕ್ರಿಯೆಯ ಭಾಗವೆಂದು ತಿಳಿದರೆ ಹಾಗು ಮರಣದ ನಂತರ ಪುನಃ ಜೀವನವಿದೆ ಎಂದು ಸ್ಪಷ್ಟವಾಗಿ ತಿಳಿದಾಗ, ಆಗ ಭಯಕ್ಕೆ ಯಾವ ಕಾರಣವೇ ಇಲ್ಲ. ಗುರುನಾನಕರು ಒಮ್ಮೆ ಹೀಗೆ ಹೇಳಿದ್ದಾರೆ: ಇಡೀ ಜಗತ್ತು ಸಾವಿಗೆ ಹೆದರುತ್ತಿದೆ, ಆದರೆ ನನಗೆ ಮಾತ್ರ ಅದು ದಿವ್ಯಾನಂದವನ್ನು ತರುತ್ತಿದೆ.
ಜೀವನವು ಸೃಷ್ಟಿಯಾಗಿಲ್ಲ, ಹಾಗೆಯೇ ಸಿದ್ಧಪಡಿಸಿದ ವಸ್ತುವೂ ಅಲ್ಲ. ಅದು ಕಾರಣವಿಲ್ಲದೇ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂದಿರುವುದೂ ಅಲ್ಲ ಅಥವಾ ಸೃಷ್ಟಿಯ ಭವ್ಯ ಕ್ಷಣದಲ್ಲಿ ಬಂದಿರುವುದೂ ಅಲ್ಲ. ಇದು ಅಪಾರ ಕಾರಣಗಳ ಪರಿಣಾಮವಾಗಿದೆ. ಈ ಜೀವನವು ಕಾರಣಗಳಿಂದ ಉದ್ಭವವಾಗಿದೆ. ನಂತರ ಇದು ಸಹಾ ಹಲವಾರು ಕಾರಣಗಳನ್ನು ಸೃಷ್ಟಿಸುತ್ತದೆ. ಹೀಗೆಯೇ ಜೀವನದ ಪ್ರಕ್ರಿಯೆಗಳು ನಿರಂತರ ಸಾಗುತ್ತವೆ. ಈ ಪ್ರಕ್ರಿಯೆಗಳು ಎಲ್ಲಿಯವರೆಗೆ ಮನಸ್ಸಿನಲ್ಲಿ ಬಯಕೆಗಳು ತೆಗೆದುಹಾಕಲ್ಪಟ್ಟಿಲ್ಲವೋ ಅಲ್ಲಿಯವರೆಗೆ ನಡೆಯುತ್ತಲೇ ಇರುತ್ತವೆ. ಬುದ್ಧರ ಆಗಮನದವರೆವಿಗೂ ಇದರ ಪೂರ್ಣ ನಿಮರ್ೂಲನೆಗೆ ಸರಿಯಾದ ವಿಧಾನ ಸಿಕ್ಕಿರಲಿಲ್ಲ. ಅಸ್ತಿತ್ವದ ಚಕ್ರದ ನಿರೋಧವಿಲ್ಲದೆ, ಏಕೆ ಜೀವನದ ಪ್ರಕ್ರಿಯೆಗಳು ಹರಿಯುತ್ತಲೇ ಇರುತ್ತವೆ ಎಂಬುದಕ್ಕೆ ವಿವರಣೆಯಿಲ್ಲ.
ಮಾನವನ ಮನಸ್ಸು ನಿರಂತರವಾಗಿ ನಿತ್ಯಜೀವನದ ಭ್ರಮೆಯನ್ನು ಸೃಷ್ಟಿಸುತ್ತಲೇ ಇದೆ. ಆದರೆ ಅನಿತ್ಯದ ಶರೀರದಲ್ಲಿ ಮನೆಮಾಡಿ ಜೀವನವು ಹೇಗೆತಾನೆ ನಿತ್ಯವಾಗಬಲ್ಲದು? ವಾಸ್ತವವಾಗಿ ನಮಗೆ ನಿಜವಾಗಿ ಸುಖವಾಗಿರುವುದಕ್ಕಾಗಿ ಬೇಕಾಗಿರುವುದು ಅಮರತ್ವದ ಜೀವನವಲ್ಲ, ಬದಲಾಗಿ ಅಮರತ್ವದ ಬಯಕೆಯಿಂದ ಮುಕ್ತವಾಗಬೇಕಾಗಿದೆ.
ಜೀವನವು ಹರಿಯುವಿಕೆಯ ಸ್ಥಿರ ಸ್ಥಿತಿಯಿಂದಾಗಿದೆ. ಇದು ಎಂದಿಗೂ ಬದಲಾಗದೆ ಇರದು. ಜೀವನದಲ್ಲಿ ನಿರಂತರ ಅಸ್ಥಿರತೆಯೇ ಕಂಡುಬರುವುದು. ಇಲ್ಲಿನ ಸ್ಥಿತಿಗತಿಗಳು ನಮಗೆ ಎಲ್ಲೆಂದರಲ್ಲಿ ಬೀಳುವಂತೆ ಮಾಡುತ್ತವೆ. ಕ್ಷಣಕ್ಷಣಕ್ಕೂ ಕಾಡಿಸುತ್ತದೆ. ಆದರೆ ಒಮ್ಮೆ ಆತನಿಗೆ ಈ ಬದಲಾವಣೆಯ ನಿಯಮವು ಎಲ್ಲಾರೀತಿಯ ಅಸ್ತಿತ್ವಗಳಲ್ಲಿದೆ ಎಂದು ಗೊತ್ತಾದಾಗ ಆತನ ಇಷ್ಟದಂತೆ ಆಗದಿದ್ದಾಗ ಆತನು ಅತಿಕಡಿಮೆ ಹತಾಶನಾಗುತ್ತಾನೆ.
ಬಹಳಷ್ಟು ಜನರು ನಂಬುವುದೇನೆಂದರೆ ಒಂದು ಶಾಶ್ವತವಾದ ಅಸ್ತಿತ್ವ ಅಥವಾ ಆತ್ಮವಿದೆ, ಅದು ಎಂದೆಂದಿಗೂ ಇರುತ್ತದೆ ಎಂದು. ಆದರೆ ಬುದ್ಧರ ಬೋಧನೆಯಲ್ಲಿ ಅಂತಹುದಕ್ಕೆ ಸ್ಥಾನವಿಲ್ಲವಾಗಿದೆ. ಬುದ್ಧ ಭಗವಾನರು ತಮ್ಮ ಅನತ್ತ (ಅನಾತ್ಮ) ಬೋಧನೆಯಲ್ಲಿ ಜೀವನದಲ್ಲಿ ಅಂತಹ ಕಲ್ಪಿತತೆಯಿಲ್ಲದೆಯೇ ಜೀವನವಿದೆ, ಇದೇ (ಅನತ್ತ) ಜೀವನದ ಮೂರನೆಯ ಲಕ್ಷಣವಾಗಿದೆ.
ಪ್ರತಿಯೊಂದು ಅನಿತ್ಯದ ನಿಯಮಕ್ಕೆ ಒಳಪಟ್ಟಿದೆ. ಆದ್ದರಿಂದಾಗಿ ಬುದ್ಧ ಧಮ್ಮದಲ್ಲಿ ನಿತ್ಯತೆಯ ನಂಬಿಕೆಗೆ, ಚಿರ, ಅಖಂಡ, ಕರಗದಂತಹುದಕ್ಕೆ ಸ್ಥಾನವಿಲ್ಲವಾಗಿದೆ. ನಿತ್ಯತೆಯ ನಂಬಿಕೆಯು ಅಭಾಜ್ಯ ನಂಬಿಕೆಗೆ ಸಮಾನವಾಗಿದೆ. ಪ್ಲೇಟೋವಿನ ಕಾಲದಿಂದ 20ನೇ ಶತಮಾನದವರೆಗೂ ಅಣುವು ಮುರಿಯಲಾಗದಂತಹುದು, ಕತ್ತರಿಸಲಾಗದಂತಹುದು ಎಂದೇ ನಂಬಿದ್ದರು. ಆದರೆ ನಂತರ ಅಣುವನ್ನು ಒಡೆಯಬಹುದು ಎಂದು ತಿಳಿದರು. ಹಾಗೆಯೇ ನಿತ್ಯವಾದ ಆತ್ಮ ಎಂಬ ಭಾವನೆಯು ಕಲ್ಪಿತವಾಗಿದೆಯೇ ಹೊರತು ಆಧಾರಪೂರಿತವಾಗಿಲ್ಲ.



2.7 ಜೀವನದ ರಸಾಯನ ಶಾಸ್ತ್ರ

ಮಾನವನ ಜೀವನವು ಮನಸ್ಸು ಮತ್ತು ಶರೀರದ ಸಂಯೋಜನೆಯಿಲ್ಲದೆ ಬೇರೇನೂ ಅಲ್ಲ. ಮನಸ್ಸು ನಾಲ್ಕುವಿಧದ ಮಾನಸಿಕ ಶಕ್ತಿಗಳಿಂದ ಅಡಕವಾಗಿದೆ. ಅವೆಂದರೆ ವೇದನೆ, (ಸಂವೇದನೆಗಳು, ಅನುಭವಗಳು) ಸನ್ಯಾ (ಗ್ರಹಿಕೆ), ಸಂಖಾರ (ಮಾನಸಿಕ ಪ್ರವೃತ್ತಿಗಳು) ಮತ್ತು ವಿನ್ಯಾಣ (ಅರಿವು). ಅದೇರೀತಿಯಲ್ಲಿ ಶರೀರವು ನಾಲ್ಕು ಮೂಲಧಾತುಗಳಿಂದ ಅಡಕವಾಗಿದೆ. ಅವೆಂದರೆ ಪೃಥ್ವಿ (ಘನತ್ವ). ನೀರು (ದ್ರವ/ಹರಿಯುವಂತಹುದು). ತೇಜೋ (ಉಷ್ಣ) ಮತ್ತು ವಾಯು (ಚಲನೆ) ಅದರಿಂದಾಗಿ ಜೀವನವೆಂದರೆ ಮಾನಸಿಕ ಮತ್ತು ದೈಹಿಕ ಆಗು-ಹೋಗುವಿಕೆಗಳ ಮತ್ತು ಏಳು ಬೀಳುವಿಕೆಗಳ ಹರಿಯುವಿಕೆಯಾಗಿದೆ.
ಯಾವಾಗ ಭೌತಿಕ ಮತ್ತು ಮಾನಸಿಕ ಶಕ್ತಿಗಳು ಸಂಯೋಜಿತವಾಗಿ ಸಾಗುತ್ತವೆಯೋ, ಮತ್ತು ವ್ಯವಸ್ಥೆಯಂತೆ ಕಾರ್ಯವಹಿಸುತ್ತವೆಯೋ ಆಗ ಜಗದ ಶಕ್ತಿಗಳೊಂದಿಗೆ ಸಹಕಾರಯುತವಾಗಿ ಜೊತೆಗೂಡುತ್ತವೆ. ಅಲ್ಲೇ ಜೀವನವಿದೆ, ಜೀವನವನ್ನು ಸಂರಕ್ಷಿಸುವ ಅಂಗ-ಉಪಾಂಗಗಳ ಸಂಯೋಜನೆಯ ಪ್ರಕ್ರಿಯೆ ನಿಂತಾಗ ಜೀವನವೇ ಕೊನೆಗೊಳ್ಳುತ್ತದೆ.  ಈ ಶಕ್ತಿಗಳ ಮತ್ತು ಧಾತುಗಳ ವಿಘಟಿತಗೊಳ್ಳುವಿಕೆಯನ್ನೇ ನಾವು ಮರಣವೆನ್ನುವೆವು. ಸಾವಿನ ನಂತರ ಪುನಃ ಸಂಯೋಜನೆಗೊಳ್ಳುವುದನ್ನೇ ನಾವು ಪುನರ್ಜನ್ಮ ಎನ್ನುವೆವು ಅಥವಾ ಹೊಸ ಜೀವಿಯ ಪ್ರಾರಂಭ ಎನ್ನುವೆವು.
ಜೀವಿಗಳ ಬಗ್ಗೆ ವೈಜ್ಞಾನಿಕ ವಿವರಣೆಯಲ್ಲಿ ಬಳಸಲಾಗುವಂತಹ ಸಂಜ್ಞೆಗಳಾದ ಪ್ರೋಟಿನ್ ಅಣುಗಳು, ಅಮ್ಯೊನೊ ಆಸಿಡ್ಗಳು, ಅಯಾನ್ಗಳು ಮತ್ತು ಜೀವಕೋಶದ ಕ್ರಿಯೆಗಳು ಜೀವನ ಏನೆಂದು ಸ್ಪಷ್ಟವಾಗಿ ವಿವರಿಸುವುದಿಲ್ಲ. ಬುದ್ಧ ಧಮ್ಮದ ಪ್ರಕಾರ ವರ್ತಮಾನದ ಜನ್ಮವನ್ನೇ ಜೀವನದ ಆದಿ ಅಥವಾ ಪ್ರಥಮ, ಪ್ರಾರಂಭವೆಂದು ಪರಿಗಣಿಸುವುದಿಲ್ಲ. ನಾವೇನಾದರೂ ಅಸ್ತಿತ್ವದ ನಿಜ ಅರ್ಥವನ್ನು ಅರಿಯದೆ ಜೀವನದ ಉದ್ದೇಶವನ್ನು ಹುಡುಕಲು ಹೋದರೆ ನಾವು ಭೌತಿಕವಾದದೆಡೆಗೆ ಹಾಗೂ ಪ್ರಾಪಂಚಿಕವಾದದೆಡೆಗೆ ಬಂದುಬಿಡುವೆವು. ಹೀಗಾಗಿಯೇ ಬಹಳಷ್ಟು ಮಂದಿಗೆ ಜೀವನದ ಉದ್ದೇಶವೇನೆಂದರೆ ಜೀವಿಸಿರುವಷ್ಟು ಕಾಲ, ಇಂದ್ರೀಯ ಭೋಗಗಳನ್ನು ಅನುಭವಿಸುವುದೇ ಆಗಿದೆ. ಅವರ ಹೇಳಿಕೆಗಳು ಹೀಗಿವೆ: ಯಾವುದರ ಬಗ್ಗೆಯು ತಲೆಕೆಡಿಸಿಕೊಳ್ಳಬಾರದು, ಇಂದಿರುವೆವು, ನಾಳೆ ಸಾಯುವೆವು, ಇನ್ನೇನೂ ಹೆಚ್ಚಿಗೆ ಇಲ್ಲ.
ಯಾರು ಜೀವನ ದೇವರ ಸೃಷ್ಠಿ ಎಂದು ನಂಬಿರುವರೋ ಅವರು ದೇವರಿಗೆ ಜೀವನಕ್ಕಾಗಿ ಕೃತಜ್ಞತೆ ಸಲ್ಲಿಸುವರು. ಆದರೂ ಸಹಾ ಅವರು ಜೀವನದಲ್ಲಿ ಇಂತಹುದೇ ನಾನಾ ಸಮಸ್ಯೆಗಳಲ್ಲಿ ಸಿಲುಕುವರು. ನಾವೇಕೆ ಈ ಬಗೆಯಲ್ಲಿ ದುಃಖಿಸಲು ಜನ್ಮಿಸಿದ್ದೇವೆ? ಇದು ಏಕೆಂದರೆ ಸೃಷ್ಟಿಕರ್ತನು ಈ ಬಗೆಯಲ್ಲೇ ಇರಬೇಕೆಂದು ರಚಿಸಿದನೇ? ಅಥವಾ ಇನ್ನೂ ಉತ್ತಮವಾಗಿ ಬದಲಿಸಲು ಅಸಮರ್ಥನೇ? ಏತಕ್ಕಾಗಿ ಕೆಲವರು ಈ ಜಗತ್ತಿನಲ್ಲಿ ಉಳಿದವರಿಗಿಂತ ಹೆಚ್ಚಾಗಿ ದುಃಖಿಸುತ್ತಾರೆ? ಏತಕ್ಕಾಗಿ ಇಲ್ಲಿ ಕಣ್ಣು ಕುಕ್ಕುವಂತಹ ಅಸಮಾನತೆಯಿದೆ. ಈ ಅಸಮಾನತೆಗೆ ಆಧಾರವೇನು ಮತ್ತು ಸಮರ್ಥನೆ ಏನು? ಮತ್ತೆ ಕೆಲವರಿಗೆ ಜೀವನವೆಂದರೆ ದೊಡ್ಡ ಹೊರೆಯಾಗಿದೆ. ನಾವು ಜನ್ಮಿಸದೆ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು? ಎಷ್ಟು ಉತ್ತಮವಾಗಿರುತ್ತಿತ್ತು ಎಂದು ಅವರು ಕೇಳುತ್ತಾರೆ. ಹೀಗಾಗಿ ಅವರು ಬಾಹ್ಯ ಜೀವನ ನೋಡುವ ಬದಲು, ಜೀವನದ ಅಂತ್ಯಕ್ಕಾಗಿ ಹಾತೊರೆಯುತ್ತಿದ್ದಾರೆ.
ಜನರಿಗೆ ಜೀವನದ ಬಗ್ಗೆ ಹಾಗೆಯೇ ಜೀವನದ ಉದ್ದೇಶದ ಬಗ್ಗೆ ವಿವಿಧ ದೃಷ್ಟಿಕೋನಗಳಿವೆ. ಜನರು ಅರ್ಥಪೂರ್ಣವಾದ ಜೀವನದ ಉದ್ದೇಶವನ್ನು ಹೊಂದುವುದು ಅತಿ ಪ್ರಾಧಾನ್ಯಮಯ ವಿಷಯವಾಗಿದೆ ಮತ್ತು ಸ್ವಾಥರ್ಿಗಳಾಗದಿರುವುದೂ ಅಷ್ಟೇ ಮುಖ್ಯವಾದ ವಿಷಯವಾಗಿದೆ. ಮಾನವನ ಜೀವನಕ್ಕೆ ಅರ್ಹವಾದ ಉದ್ದೇಶವೇನೆಂದರೆ ನಮ್ಮನ್ನು ನಮ್ಮ ಪ್ರಚನ್ನತೆಗಳನ್ನು ಅಥರ್ೈಸಿಕೊಂಡು, ಕ್ರಮಬದ್ಧವಾದ ವಿಕಾಸ ಹೊಂದಿ ಪೂರ್ಣವಾಗಿ ಚಿತ್ತವಿಶುದ್ಧಿ ಹೊಂದುವುದಾಗಿದೆ.
ಪರಮಾರ್ಥದ ಅಭಿವೃದ್ಧಿಯಿಂದ ಮತ್ತು ಮಾನಸಿಕ ಸುಸಂಸ್ಕೃತಿ (ವಿಕಾಸ)ಯಿಂದ ನಾವು ಸ್ವಾರ್ಥದ ಎಲ್ಲಾ ಕಲೆಗಳಿಂದ ಮತ್ತು ಕಲ್ಮಶಗಳಿಂದ ಶುದ್ಧರಾಗಿ, ಜೀವನದ ಎಲ್ಲಾ ಕ್ಷಣಗಳಲ್ಲಿಯೂ ಹಾಗೆಯೇ ಎಲ್ಲಾ ಪ್ರಕಾರಗಳ ಜೀವಿಗಳಲ್ಲಿಯೂ ಶಾಂತಿಯನ್ನು ಮತ್ತು ಬ್ರಹ್ಮಾಂಡದಲ್ಲಿ ಶಾಂತಿಯನ್ನು ಸ್ಥಾಪಿಸುವುದು. ಜೀವಂತವಾಗಿರುವಾಗ ಮಾನವ ಶರೀರವು ಅತ್ಯಮೂಲ್ಯ ಮತ್ತು ಅತಿ ರಹಸ್ಯಮಯ ಪದಾರ್ಥವಾಗಿದೆ. ಈ ಶರೀರವನ್ನು ನಾವು ಸುಂದರವೆಂದು ಪರಿಗಣಿಸುತ್ತೇವೆ. ಅದರ ಪೋಷಣೆಗಾಗಿಯೇ ನಮ್ಮ ಸಮಯ, ಶಕ್ತಿ ಮತ್ತು ಹಣವನ್ನೆಲ್ಲಾ ಬಳಸಿ ಅದಕ್ಕೆ ಇನ್ನೂ ಹೆಚ್ಚು ಸುಂದರವನ್ನಾಗಿಸುವ ಪ್ರಯತ್ನವನ್ನು ಮಾಡುವೆವು. ನಾವು ಅದನ್ನು ಸುಖದ ಸಾಧನವೆಂದು ಪರಿಗಣಿಸಿ ನಮ್ಮ ಜೀವಿತವೆಲ್ಲಾ ವಿನಿಯೋಗಿಸಿ, ಸುಖದ ವಿಷಯಗಳನ್ನು ಹುಡುಕುವೆವು. ಅದನ್ನೇ ನಮ್ಮ ಶಕ್ತಿಯುತ ಭಾಗವನ್ನಾಗಿ ಕಲ್ಪಿಸುವೆವು. ಈ ಬಗ್ಗೆ ಬುದ್ಧ ಧಮ್ಮದಲ್ಲಿ ಅವರು ನೀಡುವ ಮೌಲ್ಯ ಅರಿತರೆ ಉಪಯುಕ್ತವಾಗುತ್ತದೆ.
ಮಾನವ ಶರೀರವು ಇಡೀ ಜಗತ್ತಿನಲ್ಲಿಯೇ ಅತ್ಯಂತ ಗಹನವಾದ ಯಂತ್ರವಾಗಿದೆ. ಪ್ರತಿ ಮಾನವ ದೇಹವು ನೋಡಲು ಮಾತ್ರ ಅದ್ವಿತೀಯವಾಗಿರದೆ ಅದು ಜೀವ ರಸಾಯನಿಕ ಆಕೃತಿಯಾಗಿದೆ. ಚುರುಕಾದ ಇಂದ್ರಿಯಗಳು, ರೋಗ ನಿರೋಧಕ, ಹಾಗೆಯೇ ರೋಗಕ್ಕೆ ಒಳಗಾಗುವಂತಹ, ಇತ್ಯಾದಿ ಅನುವಂಶಿಕತೆಯ ನಿಯಮಗಳೊಂದಿಗೆ (ಮಾತ್ರವೇ) ತೃಪ್ತಿಕಾರಕ ವಿವರಣೆಯನ್ನು, ಪ್ರತಿ ವ್ಯಕ್ತಿಯ ಬಗ್ಗೆ ನೀಡಲು ಅಸಮರ್ಥವಾಗಿದೆ.
ದೇಹದಲ್ಲಿರುವ ಇಂದ್ರೀಯಗಳು ಸದಾ ಸುಖವನ್ನೇ ಹುಡುಕುವುವು. ಕಣ್ಣು ಪ್ರಿಯವಾದ ಆಕಾರಗಳನ್ನು ಹುಡುಕಿದರೆ, ಕಿವಿಯು ಇಂಪಾದ ಮಧುರ ಶಬ್ದಗಳನ್ನು ಆಲಿಸಲು ಬಯಸುತ್ತದೆ. ಹಾಗೆಯೇ ಮೂಗು ಸುವಾಸನೆಗಳಿಗೆ ಹುಡುಕುತ್ತದೆ. ನಾಲಿಗೆಯು ರುಚಿಕರವಾದ ಸ್ವಾದಿಷ್ಟ ಆಹಾರದತ್ತ ವಾಲುತ್ತದೆ. ಹಾಗು ಶರೀರವು ಪ್ರಿಯವಾದ ಸ್ಪರ್ಶಕ್ಕೆ ಹಾತೊರೆಯುತ್ತದೆ. ನಮ್ಮ ಜೀವಿತದ ಬಹಳಷ್ಟು ಸಮಯವು ಈ ಸುಖಗಳ ಹಿಂದೆಯೇ ಬೆನ್ನಟ್ಟಿ ಸಾಗುತ್ತದೆ. ಆದರೆ ಒಪ್ಪಬಹುದಾದಂತಹ ಸತ್ಯವು ಏನೆಂದರೆ ನಮ್ಮ ಶರೀರವು ಅತಿಯಾದ ಸುಖಗಳನ್ನು ಸಹಾ ಸಹಿಸಲಾರದು.
ಎಷ್ಟೇ ಸುಖಮಯವಾಗಿರಲಿ, ಈ ಶರೀರವು ಅತಿರೇಕಕ್ಕೆ ಒಳಗಾದಾಗ ರೋಗಕ್ಕೆ ಈಡಾಗುತ್ತದೆ. ಉದಾಹರಣೆಗೆ ಎಷ್ಟೇ ಸ್ವಾದಿಷ್ಟಕರ ಉತ್ತಮ ಆಹಾರವಿರಲಿ, ಅದನ್ನು ಅತಿಯಾಗಿ ಸೇವಿಸಿದಾಗ ಶರೀರವು ರೋಗಕ್ಕೆ ಈಡಾಗುತ್ತದೆ. ಹಾಗೆಯೇ ಮಿಕ್ಕ ರೋಗಗಳಿಗೂ ಅವಕಾಶ ನೀಡುವಂತಹುದು ಆಗಿಬಿಡುತ್ತದೆ. ಅದೇರೀತಿ ಕಾಮುಕತೆಯಲ್ಲಿ ಅತಿಯಾಗಿ ತೊಡಗಿದಾಗ ವಾಸಿಯಾಗದ ಏಡ್ಸ್ನಂತಹ ಭೀಕರ ರೋಗಗಳಿಗೆ ಶರೀರ ಗುರಿಯಾಗುತ್ತದೆ. ಆದ್ದರಿಂದಾಗಿ ಉತ್ತಮವಾದ ಆರೋಗ್ಯಕ್ಕೆ ಮತ್ತು ದೀರ್ಘಯುವಿಗೆ ಇಚ್ಛಿಸುವವರಿಗೆ ಇಂದ್ರೀಯ ಬೋಗಗಳಲ್ಲಿ ಮಿತಿಯಿಂದಿರುವುದೇ, ನಿಯಂತ್ರಿತವಾಗಿರುವುದೇ ಹಾದಿಯಾಗಿದೆ.
ಬುದ್ಧ ಹೇಳುವುದೇನೆಂದರೆ ನೀವು ಕಲ್ಪಿಸುವಂತೆ ನಿಜಕ್ಕೂ ಶರೀರವು ನಮ್ಮದೆ ಆಗಿದ್ದರೆ ಅದು ನಾವು ಇಚ್ಛಿಸುವಂತೆ, ಹೇಳಿದಂತೆ, ವತರ್ಿಸುತ್ತಿತ್ತು. ಆಗ ನಾವು ಬಯಸುವಂತೆ ಯೌವ್ವನದಿಂದ, ಆರೋಗ್ಯಯುತವಾಗಿ, ಸುಂದರವಾಗಿ ಮತ್ತು ಶಕ್ತಿಯುತವಾಗಿ ಇರುತ್ತಿತ್ತು. ಆದರೆ ಶರೀರವು ನಾವು ಇಚ್ಛಿಸುವಂತೆ ವತರ್ಿಸುವುದಿಲ್ಲ ಮತ್ತು ಶರೀರವು ನಮ್ಮ ಇಚ್ಛೆಗೆ ಮತ್ತು ನಿರೀಕ್ಷೆಗಳಿಗೆ ವಿರುದ್ಧವಾಗಿ ಹೋಗಲಾರಂಭಿಸಿದಾಗ ನಾವು ದುಃಖಿತರಾಗುತ್ತೇವೆ. ಬುದ್ಧರ ಬುದ್ಧಿವಾದ ಏನೆಂದರೆ ಶರೀರವು ನಿಜಕ್ಕೂ ನಮಗೆ ಸೇರಿಲ್ಲ ಅಥವಾ ಆತ್ಮವಲ್ಲ ಅಥವಾ ಆತ್ಮಕ್ಕೆ ಸೇರಿಲ್ಲ ಅಥವಾ ಸ್ವಯಂ ಅಲ್ಲ ಅಥವಾ ಸ್ವಯಂನ ಭಾಗವಲ್ಲ. ಆದ್ದರಿಂದಾಗಿ ನಾವು ಅದಕ್ಕಾಗಿ ತೀವ್ರ ಬಯಕೆಪಡುವುದನ್ನು ಬಿಡಬೇಕು. ಅದರೊಂದಿಗೆ ನಮ್ಮನ್ನು ಗುರುತಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಶರೀರದಲ್ಲಿ ಆಸಕ್ತಿ, ಬಯಕೆಗಳನ್ನು ಹೊಂದುವುದನ್ನು ತ್ಯಜಿಸಿದಾಗ ಸುಖ ಮತ್ತು ಶಾಂತಿ ದೊರೆಯುತ್ತದೆ.
ನಾವು ಶರೀರಕ್ಕೆ ಆಸಕ್ತಿ ಹೊಂದಿರುವುದು, ಅಭ್ಯಾಸಯುತ ತಾದಾತ್ಮ ಭಾವನೆಯನ್ನು ಮತ್ತು ಸ್ವಾಮಿತ್ವ ಭಾವನೆಯನ್ನು ಹೊಂದಿದ್ದೇವೆ. ಇವೆಲ್ಲದರಿಂದ ಮುಕ್ತಿ ಹೊಂದಲು ನಾವು ವಿಕರ್ಷಣಾ ಭಾವನೆ ತಾಳಬೇಕಿದೆ ಮತ್ತು ಶರೀರದೊಂದಿಗೆ ಪರಕೀಯ ಭಾವನೆ ವೃದ್ಧಿಸಬೇಕಾಗಿದೆ. ಇದನ್ನು ಮನಸ್ಸಿನ ಆಳದವರೆಗೂ ಮುದ್ರಿಸಬೇಕಾಗಿದೆ. ಆಗ ನಮ್ಮ ದೃಷ್ಟಿಕೋನಗಳು ಬದಲಾಗಿ, ಸಮ್ಮಾದೃಷ್ಟಿಯೊಂದಿಗೆ ಇರುತ್ತೇವೆ. ದೇಹದ ಅಶುಭ (ಅಸುಂದರ/ಕುರೂಪ)ವನ್ನೇ ನಿರಂತರವಾಗಿ ಧ್ಯಾನಿಸುವುದರಿಂದ, ಪದೇ ಪದೇ ಈ ರೀತಿ ಚಿಂತನೆ ಮಾಡುವುದರಿಂದಾಗಿ ನಾವು ಸತ್ಯದ ಸಾಮಿಪ್ಯಕ್ಕೆ, ವಾಸ್ತವದ ಯಥಾಭೂತ ದರ್ಶನಕ್ಕೆ ಅನುಕೂಲವಾಗುತ್ತದೆ. ಈ ಹಾದಿಯಲ್ಲಿಯೇ ದುಃಖ ವಿಮುಕ್ತರಾಗಬಹುದು. ಈ ಹಾದಿಯು ನಿರಾಶವಾದಕ್ಕೆ ದೂರವಾಗಿದೆ. ನಮ್ಮನ್ನು ಯಥಾಭೂತವಾಗಿ ದಶರ್ಿಸಲು ಮತ್ತು ವಾಸ್ತವದ ನಿಜ ಸ್ವರೂಪದಲ್ಲಿಯೇ ವೀಕ್ಷಿಸಲು ಏಕೈಕ ಮಾರ್ಗವಾಗಿದೆ. ಇದು ಅಂತತಃ ಶಾಂತಿಯೆಡೆಗೆ ಮತ್ತು ಪ್ರಶಾಂತತೆಯೆಡೆಗೆ ಕರೆದೊಯ್ಯುತ್ತದೆ.


2.8 ಜೀವನದ ಅನಿಶ್ಚಿತತೆಗಳು

ಅನಿತ್ಯದ, ಅತೃಪ್ತಿಯ (ದುಃಖದ), ಅನಾತ್ಮದ (ನಿಜವಲ್ಲದ/ಹುರುಳಿಲ್ಲದ) ಅರಿವನ್ನು ಹೊಂದಿದಾಗ ಜೀವನದ ಲಕ್ಷಣಗಳನ್ನು, ಜೀವನದ ನಿಜ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು. ಆಗ ಮಾತ್ರ ನಾವು ಜೀವನದಲ್ಲಿ ಹೆಚ್ಚು ಉದ್ದೇಶಯುತವಾಗಿ ಕಾರ್ಯನಿರ್ವಹಿಸಬಹುದು. ಇಲ್ಲದೆ ಹೋದರೆ ನಾವು ಸದಾ ನಂಬಿಕೆ ಇಡುವ ಜಗತ್ತಿನಲ್ಲಿಯೇ ಚಿಂತೆಯಿಂದ ದುಃಖಿಸುತ್ತಾ, ಪರಮಾರ್ಥದ ಕರ್ತವ್ಯಗಳನ್ನು ಮುಂದೂಡುತ್ತಾ ಹೋಗುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಈ ವಿಷಯವನ್ನು ವಿವರಿಸುವ ಉಪಮೆ ಹೀಗಿದೆ.
ಒಮ್ಮೆ ಒಂದು ಜೇನುನೊಣವು ಮಧುವನ್ನು ಸಂಗ್ರಹಿಸಲು ಕಮಲದ ಹೂವಿನಲ್ಲಿ ಕುಳಿತಿತ್ತು. ಅದು ಮಕರಂದ ಹೀರುತ್ತಾ ಮೈಮರೆಯಿತು. ಕಮಲದ ದಳಗಳು ನಿಧಾನವಾಗಿ ಮುಚ್ಚುತ್ತಿರುವುದನ್ನು ಅದು ಗಮನಿಸಲಿಲ್ಲ, ಆಗ ಅದು ಕಮಲದಲ್ಲಿಯೇ ಬಂಧಿಯಾಯಿತು.  ಅದು ಅನುಚಿತವಾಗಿ ಚಿಂತೆ ಮಾಡಲಿಲ್ಲ, ತಡವರಿಸದೆ ಅದು ಹೀಗೆ ಹೇಳಿತು, ನಾನು ರಾತ್ರಿ ಇಲ್ಲೇ ಕಳೆಯುವೆನು ಮತ್ತು ಕಮಲವು ಮತ್ತೆ ಅರಳುವುದು. ಹೀಗಾಗಿ ಮುಂಜಾನೆ ನಾನು ಸ್ವತಂತ್ರನಾಗುವೆನು. ಹೀಗೆ ಅದು ಚಿಂತಿಸುತ್ತಿರುವಾಗಲೇ ಆನೆಯೊಂದು ಅಲ್ಲಿಗೆ ಬಂದಿತು. ಅದು ಕಮಲವನ್ನು ಕಿತ್ತು ತಿಂದಿತು. ಈ ರೀತಿಯಲ್ಲಿ ಜೇನುಹುಳುವಿನ ಅಂತ್ಯವಾಯಿತು. ಆ ಜೇನು ಹುಳುವಿನಂತೆ ನಾವು ಸಹಾ ಭವಿಷ್ಯದ ಬಗ್ಗೆ ಹಗಲುಗನಸು ಗಳನ್ನು ಕಾಣುತ್ತಿರುವೆವು. ಆ ಕನಸುಗಳ ನಿಜವಾಗುವಿಕೆಗಾಗಿ ಕಾರ್ಯ ಮಾಡುತ್ತಿದ್ದೇವೆ. ಆದರೆ ಇಲ್ಲಿ ನಾವು ಜೀವನದ ಬಗ್ಗೆ ಒಂದು ಅಂಶವನ್ನು ಬಹಳಷ್ಟು ಬಾರಿ ಅರ್ಥ ಮಾಡಿಕೊಂಡಿಲ್ಲ. ಅದು ಏಕೆಂದರೆ ಜೀವನ ಯಾವ ನಿಯಮಗಳಿಂದ ಸಾಗುತ್ತಿದೆಯೋ, ಅದೆಲ್ಲವೂ ಪೂರ್ಣವಾಗಿ ನಮ್ಮಿಂದ ನಿರ್ಧರಿತವಾಗಿಲ್ಲ ಮತ್ತು ನಮ್ಮ ಶ್ರಮಗಳಿಂದ ಅರಿವಾಗುವುದು ಏನೆಂದರೆ ನಮ್ಮ ಕನಸುಗಳು ಬಹುಶಃ ಕೊನೆಗೊಳ್ಳಬಹುದು. ಇಂತಹ ವಿಷಯಗಳು ವಿಶೇಷತಃವಾಗಿ ನಮ್ಮ ಪರಮಾರ್ಥದ ವಿಕಾಸದ ಮುಂದೂಡಿಕೆಯಿಂದಾಗಿ ಸಂಭವಿಸುತ್ತದೆ ಹೊರತು ವರ್ತಮಾನದಲ್ಲಿ ಶ್ರಮಿಸುವುದರಿಂದಾಗಿ ಅಲ್ಲ.
ನಾವು ವಿಮುಕ್ತಿಗಾಗಿ ಶ್ರಮಿಸುವಾಗ ಅನಿಶ್ಚಿತತೆಗಳು ಮತ್ತು ತಡೆಗಳನ್ನು ನಾವು ಅನುಭವಿಸುತ್ತೇವೆ. ಒಂದು ದಿನ ಬುದ್ಧ ಭಗವಾನರು ಗಂಗಾನದಿಯಲ್ಲಿ ಮರದ ದೊಡ್ಡ ದಿಮ್ಮಿ ತೇಲುತ್ತಿರುವುದನ್ನು ಕಂಡರು. ಆಗ ಅವರು ಜೊತೆಯಲ್ಲಿದ್ದ 500 ಭಿಕ್ಷುಗಳೊಡನೆ ಹೀಗೆ ತಿಳಿಸಿದರು: ಆ ಮರದ ದಿಮ್ಮಿಯಂತೆ ದುಃಖ ವಿಮುಕ್ತನಾಗಲು ಶ್ರಮಿಸುತ್ತಿರುವ ವ್ಯಕ್ತಿಯೂ ಸಹಾ. ಆ ದಿಮ್ಮಿಯು ಸಾಗರವನ್ನು ತಲುಪುವುದು ಹೇಗೆ ಅನಿಶ್ಚಿತತೆಯೋ ನೀವೇ ನೋಡಿ. ಅದು ದಡದಲ್ಲಿಯೇ ಸಿಕ್ಕಿಕೊಳ್ಳಬಹುದು ಅಥವಾ ಮಾನವನೊಬ್ಬ ತೆಗೆದುಕೊಂಡು ಹೋಗಬಹುದು ಅಥವಾ ಕೊಳೆಯಬಹುದು ಅಥವಾ ಸುಳಿಗೆ ಸಿಲುಕಿ ಮುಳುಗಬಹುದು.
ಬುದ್ಧ ಭಗವಾನರು ಹೇಳುವುದು ಏನೆಂದರೆ ದುಃಖವಿಮುಕ್ತನಾಗಲು ಅನ್ವೇಷಿಸುತ್ತಿರುವವನು ಮರದ ದಿಮ್ಮಿಯಂತೆ, ಆತನ ಗುರಿಯೆಡೆಗಿನ ಪ್ರಯಾಣವು ಹಲವಾರು ವಿಧದಲ್ಲಿ ತಡೆಗೊಳ್ಳಬಹುದು. ಆತನು ಇಂದ್ರೀಯ ಭೋಗಗಳಲ್ಲಿ ಸಿಕ್ಕಿಕೊಳ್ಳಬಹುದು ಅಥವಾ ಭೌತಿಕ ಮತ್ತು ಮಾನಸಿಕ ಪ್ರಕ್ರಿಯೆಗಳಲ್ಲಿ ಅಂಟಿಕೊಳ್ಳಬಹುದು. ಅಹಂಕಾರಿಯಾಗಿ, ದಪರ್ಿಯಾಗಿ, ಜನರೊಂದಿಗೆ ಸೇರಿ ಹಾದಿ ತಪ್ಪಬಹುದು. ಮತ್ತೆ ಕಾಮಲೋಕದಲ್ಲಿ ಜನಿಸಬಹುದು ಮತ್ತು ಇಂದ್ರೀಯಗಳಲ್ಲಿ ನಿಯಂತ್ರಣ ತಪ್ಪಬಹುದು.
ಒಬ್ಬನು ನಿಜವಾಗಿ ಸಾಗರವನ್ನು ತಲುಪಲು ಇಚ್ಛಿಸುವವನಾದರೆ ಆತನು ಮಧ್ಯದ ಪ್ರವಾಹದಲ್ಲಿ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಅಂದರೆ ಉದಾತ್ತ ಚಾರಿತ್ರ್ಯದ ನಿಯಮಗಳನ್ನು ಪಾಲಿಸುತ್ತ ಶೀಲವನ್ನು, ಸಮಾಧಿಯನ್ನು ಮತ್ತು ಪ್ರಜ್ಞಾವನ್ನು ವಿಕಸಿಸಬೇಕು. ಯಾವುದೇ ಉದಾತ್ತ ಮಾನವನು, ಮಾನವನ ನಿಜಸ್ವರೂಪವನ್ನು ಸ್ಪಷ್ಟವಾಗಿ ಅರಿತಾಗ ವಿಮುಕ್ತನಾಗಲು ಸಾಧ್ಯವಾಗುತ್ತದೆ ಮತ್ತು ಯಾವ ದಿಕ್ಕಿನಲ್ಲಿ, ಮಾರ್ಗದರ್ಶನದಲ್ಲಿ ಆತನ ವಿಮುಕ್ತಿಯು ಅಡಗಿದೆ ಎಂದು ಅರಿತುಕೊಳ್ಳಬೇಕು. ಹಿಂದು ಧರ್ಮವು ಮಾನವನ ಭವಿಷ್ಯವನ್ನು ಹೀಗೆ ತಾತ್ವಿಕವಾಗಿ ಬಿತ್ತಿ ತಿಳಿಸಿದೆ.
ಅಸತ್ಯದಿಂದ ಸತ್ಯದೆಡೆಗೆ,
ತಮಸ್ಸಿನಿಂದ ಹೊಂಬೆಳಕಿನೆಡೆಗೆ,
ಮೃತ್ಯುವಿನಿಂದ ಅಮರತ್ವದೆಡೆಗೆ (ಉಪನಿಷತ್ತು)
ನಾವು ಕೆಟ್ಟದಾಗಿ ಸಮತೋಲನ ತಪ್ಪಿದ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಇದು ಪೂರ್ಣವಾಗಿ ಗುಲಾಬಿಗಳಿಂದ ಕೂಡಿದ ಸ್ವರ್ಗವಲ್ಲ. ಹಾಗೆಯೇ ಪೂರ್ಣವಾಗಿ ಮುಳ್ಳುಗಳಿಂದ ಆವೃತವಾದ ನರಕವೂ ಅಲ್ಲ. ಗುಲಾಬಿಯು ಮೃದು, ಸುಂದರ ಮತ್ತು ಪರಿಮಳಭರಿತ. ಆದರೆ ಕಾಂಡವು ಮುಳ್ಳುಭರಿತ. ಗುಲಾಬಿಯ ಕಾರಣಕ್ಕಾಗಿ ಒಬ್ಬನು ಮುಳ್ಳುಗಳನ್ನು ಸಹಿಸುತ್ತಾನೆ. ಹಾಗಿರುವಾಗಲು ಮುಳ್ಳುಗಳು ಇದೆ ಎಂದು ಗುಲಾಬಿಗಳನ್ನು ತಿರಸ್ಕೃತ ಮಾಡುವ ಹಾಗಿಲ್ಲ. ಆಶಾವಾದಿಗೆ ಜಗತ್ತು ಪೂರ್ಣವಾಗಿ ಗುಲಾಬಿಯೇ. ಹಾಗೆಯೇ ನಿರಾಶಾವಾದಿಗೆ ಜಗತ್ತು ಪೂರ್ಣವಾಗಿ ಮುಳ್ಳುಭರಿತವೇ. ಆದರೆ ವಾಸ್ತವವಾದಿಗೆ ಈ ಜಗತ್ತು ಪೂರ್ಣವಾಗಿ ಗುಲಾಬಿಯೂ ಅಲ್ಲ, ಹಾಗೆಯೇ ಪೂರ್ಣವಾಗಿ ಮುಳ್ಳುಭರಿತವೂ ಅಲ್ಲ. ಅದು ಸುಂದರವಾದ ಗುಲಾಬಿಗಳಿಂದ ಮತ್ತು ಚುಚ್ಚುವ ಮುಳ್ಳುಗಳಿಂದ ತುಂಬಿದೆ.
ಪ್ರಾಜ್ಞನಾದ ವ್ಯಕ್ತಿಯು ಗುಲಾಬಿಯ ಸುಂದರತೆಯಿಂದ ಉನ್ಮತ್ತನಾಗುವುದಿಲ್ಲ. ಬದಲಾಗಿ ಅದು ಹೇಗಿದೆಯೋ ಹಾಗೆ ಕಾಣುತ್ತಾನೆ. ಅವುಗಳಲ್ಲಿ ಮುಳ್ಳುಗಳು ಇರುವುದನ್ನು ಚೆನ್ನಾಗಿ ಅರಿತು ಅವುಗಳನ್ನು ಯಥಾಭೂತವಾಗಿ ಹಾಗೇ ಅರಿತು, ಗಾಯವಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಾನೆ.
ಹೇಗೆ ಲೋಲಕವು ನಿರಂತರವಾಗಿ ತೂಗಾಡುತ್ತಿರುತ್ತದೋ, ಹಾಗೆಯೇ ನಾಲ್ಕು ಪ್ರಿಯವಾದ ಮತ್ತು ನಾಲ್ಕು ಅಪ್ರಿಯವಾದ ಸನ್ನಿವೇಶಗಳು ಈ ಜಗತ್ತಿನಲ್ಲಿ ಸದಾ ಇರುತ್ತದೆ. ಪ್ರತಿಯೊಬ್ಬನು ಯಾವ ವಿನಾಯಿತಿಯೂ ಇಲ್ಲದೆ ಇವುಗಳನ್ನು ಜೀವನವಿಡೀ ಎದುರಿಸಲೇ ಬೇಕಾಗಿದೆ. ಅವೆಂದರೆ ಲಾಭ-ನಷ್ಟ, ಜಯ-ಪರಾಜಯ, ಸ್ತುತಿ-ನಿಂದೆ ಮತ್ತು ಸುಖ-ದುಃಖಗಳು. ವಿರೋಧತೆಗೆ ಹೆದರದಿರಿ, ನೆನಪಿಡಿ ಗಾಳಿಪಟವು ಸದಾ ವಿರೋಧದೊಂದಿಗೆ ಹಾರುತ್ತ ಮೇಲೇರುವುದು ಹೊರತು ಗಾಳಿಯ ಜೊತೆಗಲ್ಲ (ಹಾಮಿಲ್ಟನ್ ಮೇಬಿ).


2.9 ಲಾಭ ಮತ್ತು ನಷ್ಟ

ವ್ಯಾಪಾರಿಯು ನಿಯಮದಂತೆ ಲಾಭ-ನಷ್ಟಗಳೆರಡಕ್ಕೂ ಗುರಿಯಾಗುತ್ತಾನೆ. ಲಾಭವಾದಾಗ ಆನಂದಪಡುವುದು ಸಾಮಾನ್ಯ ವಿಷಯ. ಅದೇನು ತಪ್ಪೂ ಅಲ್ಲ, ಸಾಮಾನ್ಯ ಮನುಷ್ಯನಿಗೆ ಸತ್ಯಹಾದಿಯ ಲಾಭವೇ ಆಗಲಿ ಅಥವಾ ಮಿಥ್ಯಾಹಾದಿಯ ಲಾಭವೇ ಆಗಲಿ ಸ್ವಲ್ಪಮಟ್ಟಿಗೆ ಸುಖವನ್ನು ನೀಡುವುದು. ಇಂತಹ ಸುಖಿಕರ ಕ್ಷಣಗಳಿಲ್ಲದೆ ಹೋದರೆ, ಎಷ್ಟೇ ವೇಗದ್ದಾಗಿರಲಿ, ಜೀವನವು ಮೌಲ್ಯಯುತ ಎನಿಸುವುದಿಲ್ಲ.
ಇಷ್ಟಕ್ಕೂ ನಮ್ಮ ಜಗತ್ತಿಗೂ ಮತ್ತು ನರಕಕ್ಕೂ ಇರುವ ವ್ಯತ್ಯಾಸವಾದರೂ ಏನು? ಅಲ್ಲಿ ಒಂದು ಕ್ಷಣವು ಸುಖವು ಇರುವುದಿಲ್ಲ. ಇಂತಹ ಸ್ಪಧರ್ಾತ್ಮಕ ಮತ್ತು ಅವ್ಯವಸ್ಥಿತ ಜಗತ್ತಿನಲ್ಲಿ ಜನರು ಅವರ ಹೃದಯಕ್ಕೆ ಆನಂದ ನೀಡುವ ಸ್ವಲ್ಪ ಸುಖವನ್ನು ಆನಂದಿಸುವುದು ಯೋಗ್ಯವೇ ಸರಿ. ಅಂತಹ ಭೌತಿಕ ಸುಖದಿಂದಾಗಿ ಅವರಿಗೆ ಆರೋಗ್ಯ ಮತ್ತು ದೀಘರ್ಾಯು ಸಿಗುತ್ತದೆ.
ಬೌದ್ಧರ ಐಶ್ವರ್ಯದ ಬಗೆಗಿನ ದೃಷ್ಟಿಕೋನವು ಎಂತಹುದೆಂದರೆ ಅದನ್ನು ಆದಾಯದ ಮಾಳಿಗೆಯಿಂದ ಇಳಿಯಿರಿ ಎಂದು ಎಂದಿಗೂ ಆಜ್ಞಾಪಿಸುವುದಿಲ್ಲ. ಇಲ್ಲಿ ಬುದ್ಧಿವಾದ ಹೇಳುವುದು ಏನೆಂದರೆ ಐಶ್ವರ್ಯವನ್ನು ಯೋಗ್ಯವಾದ ದಾರಿಯಿಂದ ಸಂಪಾದಿಸಬೇಕು ಮತ್ತು ಯೋಗ್ಯವಾದ ರೀತಿಯಿಂದಲೇ ವಿನಿಯೋಗಿಸಬೇಕು. ಐಶ್ವರ್ಯವನ್ನು ಯಾರಿಗೂ ಹಾನಿ ಮಾಡದೆ ಸ್ವತಃ ಬೆವರು ಸುರಿಸಿ, ಸಂಪಾದಿಸಬೇಕೇ ಹೊರತು ಮೋಸ ಅಥವಾ ಸ್ವ-ಪ್ರಯೋಜನಕ್ಕೆ ಪರರನ್ನು ದುಡಿಸುತ್ತಾ ಅವರಿಗೆ ಅಲ್ಪ ನೀಡಿ ಸಂಪಾದಿಸಬಾರದು. ಇಂತಹ ಕಾರ್ಯ ಪ್ರಶಂಸನೀಯವಾಗಿರುತ್ತದೆ. ಐಶ್ವರ್ಯಕ್ಕೆ ಉಪಕರಣಿಯ ಮೌಲ್ಯ ಮಾತ್ರವೇ ಇದೆ ಎಂಬುದನ್ನು ಜ್ಞಾನಿಗಳು ಸದಾ ಒತ್ತಿ ಸಲಹೆ ನೀಡಿದ್ದಾರೆ.
ಐಶ್ವರ್ಯವನ್ನು ಈ ಎಲ್ಲದಕ್ಕೂ ಬಳಕೆ ಮಾಡಬಹುದು :
* ಸುಖವಾಗಿ ಜೀವಿಸಲಿಕ್ಕೆ ಮತ್ತು ತನ್ನ ಕುಟುಂಬ, ತಾಯ್ತಂದೆಯರನ್ನು, ತನಗೆ ಅವಲಂಬಿತರಾದವರನ್ನು ಮತ್ತು ಮಿತ್ರರನ್ನು ಸುಖಿಯಾಗಿಡಲು.
* ಆಪತ್ಧನವಾಗಿ ಅಕಸ್ಮಾತ್ತಾಗಿ ಸಂಭವಿಸುವ ದುರ್ಘಟನೆಗಳಾದ ಬೆಂಕಿ, ನೀರು, ರೋಗ ಇತ್ಯಾದಿಗಳಿಂದ ಸಂರಕ್ಷಿಸಿಕೊಳ್ಳಲು.
* ತನ್ನ ಬಂಧುಗಳಿಗೆ, ಅತಿಥಿಗಳಿಗೆ ಮತ್ತು ದೇಶಕ್ಕೆ ಹಾಗು ಧಾಮರ್ಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ.
* ಯಾರು ಧಮ್ಮದಲ್ಲಿ ಅತ್ಯುನ್ನತವಾಗಿ ತಮ್ಮನ್ನು ತೊಡಗಿಸಿಕೊಂಡಿರುವವರೋ ಅಂತಹವರ ಸಲುಹುವಿಕೆಗಾಗಿ.
ಹೀಗೆ ತನ್ನ ಶಕ್ತಾನುಸಾರವಾಗಿ ಅಲ್ಪ ಅಥವಾ ಅಧಿಕ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಉತ್ತಮವಾಗಿ, ಯೋಗ್ಯವಾದ ರೀತಿಯಲ್ಲಿ ಬಳಸಿಕೊಳ್ಳಬಹುದು.
ತೊಂದರೆಗಳು ಆರಂಭವಾಗುವುದು ನಷ್ಟವಾದಾಗ ವಿಶೇಷವಾಗಿ ಅಲ್ಪ ಪ್ರಜ್ಞೆಯುಳ್ಳ ಅಸ್ತಿತ್ವದವರೊಂದಿಗೆ ಮಾತ್ರ.. ಲಾಭಗಳನ್ನು ಮುಗುಳುನಗುತ್ತಾ ಸ್ವೀಕರಿಸುವರು, ಆದರೆ ನಷ್ಟಗಳನಲ್ಲ. ನಷ್ಟಗಳು ಮಾನಸಿಕ ಖಿನ್ನತೆಗಳತ್ತ ಕರೆದೊಯ್ಯುತ್ತವೆ. ಕೆಲವರಂತೂ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ಸನ್ನಿವೇಶಗಳಲ್ಲಿ ಒಬ್ಬನು ಉನ್ನತವಾದ ನೈತಿಕ ಧೈರ್ಯವನ್ನು ಮತ್ತು ಯೋಗ್ಯ ಮಾನಸಿಕ ಸಮತೋಲನವನ್ನು ಪ್ರದಶರ್ಿಸಬೇಕಾಗುತ್ತದೆ.
ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳು ಇದ್ದೇ ಇರುತ್ತವೆ. ನಾವು ಒಳಿತಿಗೆ ಹಾಗೆಯೇ ನಷ್ಟಗಳಿಗೂ ಸಿದ್ಧರಾಗಬೇಕಾಗಿದೆ. ಆಗ ಮಾತ್ರ ಅತ್ಯಲ್ಪ ನಿರಾಶೆಯಾಗುವುದು.
ಯಾವಾಗ ಏನಾದಾರೂ ಕಳುವಾಗುವುದೋ ಆಗ ಸಹಜವಾಗಿ ಒಬ್ಬನು ದುಃಖಿತನಾಗುತ್ತಾನೆ. ಆದರೆ ದುಃಖಿತನಾಗುವುದರಿಂದ ಒಬ್ಬನು ಕಳೆದುಹೋಗಿದ್ದು ಪುನಃ ಪಡೆಯಲಾರನು. ಒಬ್ಬನು ನಷ್ಟವನ್ನು ತಾತ್ವಿಕವಾಗಿ ತೆಗೆದುಕೊಳ್ಳಬೇಕು. ಒಬ್ಬನು ದಾನ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಹೇಗೆಂದರೆ ಆತನ ಅಗತ್ಯವು ನನಗಿಂತ ದೊಡ್ಡದಾಗಿದೆ, ಆತನು ಸುಖಿಯಾಗಿರಲಿ ಮತ್ತು ಕ್ಷೇಮವಾಗಿರಲಿ ಎಂದು.
ಒಮ್ಮೆ ಚೀನಾದ ಹೊಸ ವರ್ಷ ಬಂದಾಗ ಹನ್ನೊಂದು ವರ್ಷದ ಹುಡುಗನಿಗೆ ಹಲವಾರು ಅಂಗ್ ಪೌ (ಹಣವಿದ್ದ ಕೆಂಪು ಪಾಕೆಟ್ಗಳು) ದೊರೆಯಿತು. ಆದರೆ ಅದೇ ರಾತ್ರಿ ಕಳ್ಳರು ಮನೆಗೆ ನುಗ್ಗಿ ಅವೆಲ್ಲವನ್ನೂ ದೋಚಿದರು. ಆಗ ತಾಯ್ತಂದೆಯರಿಗೆ ದುಃಖವಾಯಿತು. ಆದರೆ ಪ್ರಾಜ್ಞನಾಗಿದ್ದ ಆ ಹುಡುಗನು ಹೀಗೆ ಹೇಳಿದನು. ಚಿಂತೆ ಏತಕ್ಕೆ? ಇಷ್ಟಕ್ಕೂ ಆ ಹಣ ನಮ್ಮದಲ್ಲವಲ್ಲ. ಏಕೆಂದರೆ ಅದು ನಮಗೆ ಕೊಡಲ್ಪಟ್ಟಿತ್ತು. ಆದ್ದರಿಂದಾಗಿ ನಮ್ಮದಲ್ಲದ್ದರಿಂದ ನಮ್ಮದೇನೂ ನಷ್ಟವಾಗಿಲ್ಲ. ಇದರಿಂದಾಗಿ ತಿಳಿಯುವುದು ಏನೆಂದರೆ ಆ ಬಾಲಕನು ಚಿಕ್ಕವನಾದರೂ ಅಲ್ಪದ ನಷ್ಟಕ್ಕಾಗಿ ಅಳುವುದು ವ್ಯರ್ಥ ಎಂಬ ಮಹಾಸತ್ಯ ತಿಳಿದಿದ್ದನು.
ಬುದ್ಧರ ಕಾಲದಲ್ಲಿ ಒಬ್ಬ ಶ್ರೇಷ್ಠ ಸ್ತ್ರೀಯು ಪೂಜ್ಯ ಭಿಕ್ಷುಗಳಿಗೆ ದಾನವಾಗಿ ಆಹಾರವನ್ನು  ಬಡಿಸುತ್ತಿದ್ದಳು. ಅದೇವೇಳೆಯಲ್ಲಿ ಆಕೆಯ ದಾಸಿಯು ಆಕೆಗೆ ದುವರ್ಾತೆಯ ಸಂದೇಶ ಪತ್ರವೊಂದನ್ನು  ನೀಡಿದಳು. ಆದರೆ ಅದನ್ನು ಗಮನಿಸಿಯೂ ಆಕೆ ಸ್ವಲ್ಪವೂ ವಿಚಲಿತಳಾಗದೆ, ಆ ಸಂದೇಶ ಪತ್ರವನ್ನು ತನ್ನ ಚೀಲದಲ್ಲಿಟ್ಟುಕೊಂಡು, ಏನೂ ಸಂಭವಿಸಿಲ್ಲದ ರೀತಿಯಲ್ಲಿ ಆಕೆಯು ಆಹಾರ ಬಡಿಸುವುದನ್ನು ಮುಂದುವರೆಸಿದಳು. ಅದೇ ಸಮಯದಲ್ಲಿ ದಾಸಿಯೊಬ್ಬಳು ಹಾಲಿನ ಪಾತ್ರೆಯನ್ನು ಗಡಿಬಿಡಿಯಲ್ಲಿ ಬೀಳಿಸಿದಳು. ಅದು ಒಡೆದು ಚೂರಾಗಿ, ಹಾಲು ಚೆಲ್ಲಿ ಹರಡಿತು. ಆಗ ಆ ಸ್ತ್ರೀಯು ಸಹಜವಾಗಿ ನಷ್ಟದ ಕಾರಣದಿಂದಾಗಿ ದುಃಖಿಸಬಹುದೆಂದು ಭಿಕ್ಷುಗಳು ಈ ರೀತಿ ಸಮಾಧಾನಿಸುತ್ತಾರೆ ಚಿಂತಿಸದಿರು ಸೋದರಿ! ಎಲ್ಲಾ ವಸ್ತುಗಳು ಮತ್ತು ಸಂಖಾರಗಳು ಸಹಾ ಕ್ಷಣಿಕವೇ ಆಗಿದ್ದು, ಎಲ್ಲವೂ ಒಡೆದು ಹೋಗುವ ಸ್ವಭಾವವನ್ನು ಹೊಂದಿವೆ. ಆಗ ಆ ಪ್ರಾಜ್ಞಳಾದ ಸ್ತ್ರೀಯು ಹೀಗೆ ಪ್ರತಿಕ್ರಿಯಿಸಿದಳು ಭಂತೆ, ಈ ಕ್ಷುಲ್ಲಕವಾದ ನಷ್ಟವು ಏನು ಮಹಾ? ನನ್ನ ಕುಟುಂಬದವರಾದ ನನ್ನ ಗಂಡ ಮತ್ತು ಪುತ್ರರ ಹತ್ಯೆಯಂತಹ ದೌಭರ್ಾಗ್ಯ ಸಂದೇಶವನ್ನು ಸ್ವೀಕರಿಸಿಯೂ ನನ್ನ ಸಮಚಿತ್ತತೆ ವಿಚಲಿತವಾಗಲಿಲ್ಲ. ಅಂತಹುದರಲ್ಲಿ ಈ ಮಡಿಕೆಯು ಒಡೆದರೆ ನಾನು ಕ್ಷೊಭೆಗೊಳ್ಳುವೆನೇ? ಆ ಸಂದೇಶ ಬಂದರೂ ಸಹಾ ವಿಚಲಿತಳಾಗದೆ ನಿಮಗೆ ಸೇವೆ ಮಾಡುತ್ತಿರುವೆನು ಎಂದಳು. ಅಂತಹ ಧೈರ್ಯದ ಅಭಿಪ್ರಾಯವು ಸದಾ ಪ್ರಶಂಸನೀಯವಾಗಿದೆ.
ಒಮ್ಮೆ ಬುದ್ಧ ಭಗವಾನರು ಆಹಾರಕ್ಕಾಗಿ ಹಳ್ಳಿಗೆ ಹೊರಟರು. ಆಗ ಮಾರನ ಕುತಂತ್ರದಿಂದಾಗಿ ಬುದ್ಧರಿಗೆ ಆಹಾರ ದೊರೆಯಲಿಲ್ಲ. ಆಗ ಮಾರನು ಬುದ್ಧರಿಗೆ ಹಸಿವಾಗಿದೆಯೇ ಅಥವಾ ಇಲ್ಲವೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದಾಗ, ಬುದ್ಧ ಭಗವಾನರು ಕಶ್ಮಲರಹಿತರ ದೃಷ್ಟಿಕೋನವನ್ನು ಹೀಗೆ ನುಡಿದರು: ಓಹ್, ಸುಖವಾಗಿ ನಾವು ಜೀವಿಸುವೆವು, ನಮಗೆ ಯಾವ ತಡೆಗಳೂ ಇಲ್ಲ. ಅಭಸ್ಸರ ದೇವತೆಗಳ ರೀತಿ ನಾವು ಆನಂದವನ್ನೇ ಆಹಾರವಾಗಿಸಿ ತೇಜಸ್ಸಿನಿಂದ ಆನಂದದಿಂದ ಇರುವೆವು.
ಇನ್ನೊಂದು ಸಂದರ್ಭದಲ್ಲಿ ಬುದ್ಧ ಭಗವಾನರು ಮತ್ತು ಭಿಕ್ಷುಗಳು ಇಡೀ ವರ್ಷ ಕಾಲದಲ್ಲಿ ಬ್ರಾಹ್ಮಣನಿಂದ ಆತಿಥ್ಯಕ್ಕೆ ಒಪ್ಪಿದ್ದರು. ಆಗ ಮಳೆಗಾಲದಲ್ಲಿ ಭಿಕ್ಷುಗಳ ವಾಸ ಸ್ಥಳದಲ್ಲೇ ಆಹಾರ ತಂದು ನೀಡುತ್ತಿದ್ದರು. ಆದರೆ ಆ ಬ್ರಾಹ್ಮಣನು ತಾನು ನೀಡಿದ್ದ ವಚನ ಮರೆತು ಹೋಗಿದ್ದರಿಂದ ಆ ಇಡೀ ಮೂರು ತಿಂಗಳು ಬುದ್ಧರಿಗೆ ಮತ್ತು ಭಿಕ್ಷುಗಳಿಗೆ ಆಹಾರಕ್ಕೆ ತೊಂದರೆ ಉಂಟಾಯಿತು. ಆಗ ಮಹಾ ಮೊಗ್ಗಲಾನರು ತಮ್ಮ ಅತೀಂದ್ರಿಯಶಕ್ತಿಯಿಂದಾಗಿ ಸರ್ವರಿಗೂ ಆಹಾರ ಸೃಷ್ಟಿಸುವೆ ಎಂದು ಹೇಳಿದಾಗ ಭಗವಾನರು, ಆ ಸಮಯದಲ್ಲಿ ಕುದುರೆ ವ್ಯಾಪಾರಿಯು ನೀಡುತ್ತಿದ್ದ ಕುದುರೆಗಳ ಆಹಾರದಿಂದಲೇ ತೃಪ್ತಿಹೊಂದಿರಿ, ಭಿಕ್ಷುಗಳಿಗೂ ಅದೇ ಸಲಹೆ ನೀಡಿದರು. ಎಲ್ಲರೂ ಈ ರೀತಿಯ ಸಂತೃಪ್ತಿಯ ಜೀವನ ನಡೆಸಿದರು. ಆದ್ದರಿಂದಾಗಿ ಒಬ್ಬನು ತನ್ನ ಪುರುಷಾರ್ಥದಿಂದಾಗಿ ನಷ್ಟಗಳನ್ನು ಸಹಿಸಿಕೊಳ್ಳುವುದನ್ನು ಕಲಿಯಲೇಬೇಕು. ಅನಿರೀಕ್ಷಿತವಾಗಿ ಕೆಲವೊಮ್ಮೆ ನಷ್ಟಗಳು ಗುಂಪು ಗುಂಪಾಗಿ ಬರುತ್ತವೆ. ಒಂಟಿಯಾಗಿ ಬರುವುದಿಲ್ಲ. ಆಗ ಸಾಧಕನು ಸಮಚಿತ್ತತೆಯಿಂದಾಗಿ ಅವನ್ನೆಲ್ಲಾ ಎದುರಿಸಬೇಕು ಮತ್ತು ಅಂತಹ ಸಮಯವನ್ನೇ ಉದಾತ್ತ ಗುಣಗಳ ಪಾಲನೆಗಾಗಿ ಇರುವ ಸುಮುಹೂರ್ತವೆಂದು ಭಾವಿಸಬೇಕಾಗಿದೆ ಮತ್ತು ಪಾಲಿಸಬೇಕಾಗಿದೆ.


2.10 ಕೀತರ್ಿ ಮತ್ತು ಅಪಕೀತರ್ಿ

ಕೀತರ್ಿ ಮತ್ತು ಅಪಕೀತರ್ಿಯು ನಮ್ಮ ದಿನನಿತ್ಯದ ಜೀವನದಲ್ಲಿ ತಡೆಯಲಾರದೆ ಬರುವಂತಹ ಲೋಕಸ್ಥಿತಿಗಳಾಗಿವೆ. ಕೀತರ್ಿಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅಪಖ್ಯಾತಿಯನ್ನು ನಾವು ಇಷ್ಟಪಡುವುದಿಲ್ಲ. ಕೀತರ್ಿಯು ನಮ್ಮ ಹೃದಯದಲ್ಲಿ ಆನಂದವನ್ನುಕ್ಕಿಸುತ್ತದೆ. ಹಾಗೆಯೇ ಅಪಕೀತರ್ಿಯು ಎದೆಗುಂದಿಸುತ್ತದೆ. ನಾವು ಪ್ರಸಿದ್ಧಿ ಪಡೆಯಲೆಂದು ಆಶಿಸುತ್ತೇವೆ. ದಿನಪತ್ರಿಕೆಗಳಲ್ಲಿ ನಮ್ಮ ಭಾವಚಿತ್ರ ಬರಲೆಂದು ವ್ಯಾಕುಲ ಪಡುತ್ತೇವೆ. ನಮ್ಮ ಚಟುವಟಿಕೆಗಳು ಎಷ್ಟೇ ಕ್ಷುಲ್ಲುಕವಾಗಿರಲಿ ನಾವು ಜನಪ್ರಿಯವಾಗಲು ಆನಂದಿಸುತ್ತೇವೆ. ಕೆಲವೊಮ್ಮೆಯಂತೂ ಅಯೋಗ್ಯವಾದ ಜನಪ್ರಿಯತೆ (ಕುಖ್ಯಾತಿ)ಯನ್ನು ಸಹಾ ನಾವು ಹುಡುಕುವೆವು.
ಕೆಲವರಂತೂ ತಮ್ಮ ಭಾವಚಿತ್ರವು ಮ್ಯಾಗಜಿನ್ಗಳಲ್ಲಿ (ನಿಯತಕಾಲಿಕ ಪತ್ರಿಕೆಗಳಲ್ಲಿ) ಯಾವುದೇ ಬೆಲೆ ತೆತ್ತಾದರೂ ಬರಲೇಬೇಕೆಂದು ತೀವ್ರ ಆಕಾಂಕ್ಷಿಗಳಾಗಿರುತ್ತಾರೆ. ಖ್ಯಾತಿ ಪಡೆಯಲೆಂದು ಕೆಲವರು ಸುಖವನ್ನು ಅಪರ್ಿಸಲು ಅಥವಾ ಗಣನೀಯ ದಾನವನ್ನು ನೀಡಲು ಸಿದ್ಧರಾಗಿಬಿಡುತ್ತಾರೆ. ಕೆಲವರು ತಮ್ಮ ದಾನವನ್ನೇ ಪ್ರದಶರ್ಿಸುತ್ತಾರೆ. ಆದರೆ ತಮ್ಮ ಅಕ್ಕಪಕ್ಕದ ಬಡವರಿಗೆ ಮತ್ತು ಅವಶ್ಯಕತೆಯುಳ್ಳ ದುಃಖಿತರ ಬಗ್ಗೆ ತಟಸ್ಥತೆ ತಾಳುತ್ತಾರೆ. ಇವೆಲ್ಲಾ ಮಾನವನ ದೌರ್ಬಲ್ಯಗಳಾಗಿವೆ. ಬಹಳಷ್ಟು ಜನರು ಆಚೆಯ (ಪರಲೋಕದ) ಉದ್ದೆಶಗಳನ್ನು ಹೊಂದಿರುತ್ತಾರೆ. ಫಲಾಪೇಕ್ಷೆರಹಿತರಾದ ನಿಸ್ವಾರ್ಥ ಜನರು ಈ ಲೋಕದಲ್ಲಿ ತುಂಬಾ ಅಪರೂಪವಾಗಿದ್ದಾರೆ. ಬಹಳಷ್ಟು ಜನರು ಅಹಂಭಾವದಿಂದಿದ್ದಾರೆ. ಯಾರು ಪರಿಪೂರ್ಣ ಒಳ್ಳೆಯವ? ತಮ್ಮ ಉದ್ದೇಶಗಳಲ್ಲಿ ಪರಿಶುದ್ಧರು ಎಷ್ಟು ಮಂದಿ? ಎಷ್ಟು ಜನರು ಪೂರ್ಣವಾಗಿ ಪರೋಪಕಾರಿ ಮನೋಭಾವನೆಯುಳ್ಳವರು?
ನಾವು ಖ್ಯಾತಿಯ ಹಿಂದೆ ಬೇಟೆಯಾಡಬಾರದು, ಬೆನ್ನಟ್ಟಬಾರದು. ನಾವು ಕೀತರ್ಿಗೆ ಅರ್ಹರಾಗಿದ್ದರೆ, ನಾವು ಹುಡುಕಾಡದೆಯೇ ಅದೇ ನಮ್ಮಲ್ಲಿಗೆ ಬರುತ್ತದೆ. ಹೂವಿನಿಂದ ದುಂಬಿಯು ಆಕಷರ್ಿತವಾಗುತ್ತದೆ. ಮಧುವಿನಿಂದ ಹೂ ಕೂಡಿದ್ದರೆ ದುಂಬಿಗಳನ್ನು ಅದು ಕರೆಯಬೇಕಿಲ್ಲ. ನಿಜಕ್ಕೂ ನಮ್ಮ ಖ್ಯಾತಿಯು ಉದ್ದಗಲಕ್ಕೂ, ದೂರಕ್ಕೂ ಹಬ್ಬಿದಾಗ ನಾವು ಅತಿಯಾಗಿ ಸಂತೋಷಿಸುವೆವು. ಆದರೆ ನಾವು ಸದಾ ಜ್ಞಾಪಕದಲ್ಲಿಡಬೇಕಾದ ಅಂಶವೇನೆಂದರೆ ಖ್ಯಾತಿ, ಕೀತರ್ಿ, ವೈಭವಗಳು ಅತಿ ಕ್ಷಿಪ್ರ ಕಾಲದಲ್ಲೇ ಮರೆಯಾಗುವುವು. ಅಬ್ರಾಹಂ ಲಿಂಕನ್ರವರು ಒಂದು ಘನ ನುಡಿಮುತ್ತು ಹೇಳಿದ್ದಾರೆ: ನಿಮಗೆ ಶಾಂತಿ ಬೇಕಿದ್ದರೆ ಜನಪ್ರಿಯತೆಯನ್ನು ತಡೆಗಟ್ಟಿ.
ಕುಖ್ಯಾತಿ ಬಗ್ಗೆ ಹೇಳುವುದಾದರೆ ಅದು ನಮ್ಮ ಕಿವಿಗೂ ಮತ್ತು ಮನಸ್ಸಿಗೂ ಜೀರ್ಣವಾಗುವುದಿಲ್ಲ. ಅಪ್ರಿಯವಾದ, ಕಠೋರ ಶಬ್ದಗಳು ನಮ್ಮ ಕಿವಿಯನ್ನು ತಲುಪಿದರೆ ಅದು ಸಂಶಯವಿಲ್ಲದೆ ನಮ್ಮಲ್ಲಿ ಕ್ಷೊಭೆಯನ್ನುಂಟುಮಾಡುವುದು. ಹಾಗೆಯೇ ಆ ನಿಂದನೆಯು ಸುಳ್ಳಾಗಿದ್ದರೆ ಮತ್ತು ಅನ್ಯಾಯಪೂರಿತವಾಗಿದ್ದರೆ ಆಗ ಇನ್ನೂ ಹೆಚ್ಚಾದ ಅಸಹನೀಯವಾದ ನೋವು ಉಂಟಾಗುತ್ತದೆ.
ಸಾಮಾನ್ಯವಾಗಿ ಒಂದು ಭವ್ಯವಾದ ಕಟ್ಟಡವನ್ನು ಕಟ್ಟಬೇಕಾದರೆ ವರ್ಷಗಳು ಹಿಡಿಯುತ್ತವೆ. ಆದರೆ ಅದರ ಧ್ವಂಸಕ್ಕಾಗಿ ಈಗಿನ ಆಧುನಿಕ ಶಸ್ತ್ರಾಸ್ತ್ರಗಳ ಸಹಾಯದಿಂದ ಕ್ಷಣವೇ ಸಾಕು. ಅದೇರೀತಿಯಲ್ಲಿ ಗೌರವ ಪ್ರತಿಷ್ಠೆ ಪಡೆಯಲು ಹಲವು ವರ್ಷಗಳು ಅಥವಾ ಕೆಲವೊಮ್ಮೆ ಇಡೀ ಜೀವನಕಾಲ ಹಿಡಿದಿರುತ್ತದೆ. ಆದರೆ ಅಂತಹ ಸತ್ಕೀತರ್ಿ ನಾಶವಾಗಲು ಅಲ್ಪ ಸಮಯವೇ ಸಾಕು. ಯಾರೊಬ್ಬರೂ ಸಹಾ ಅಪಕೀತರ್ಿಯಿಂದ ಪಾರಾಗಲು ಸಾಧ್ಯವಿಲ್ಲ. ಆದರೆ ಆತನು ತುಂಬಾ ಸಚ್ಚಾರಿತ್ರ್ಯವುಳ್ಳವನೇ ಆಗಿದ್ದರೂ, ಏನೆಲ್ಲಾ ಪುಣ್ಯ ಕಾರ್ಯಗಳನ್ನು ಮಾಡಿದ್ದರೂ, ಅಂತಹ ಇಡೀ ಸತ್ಕೀತರ್ಿಯು ಆದರೆ ಎಂಬುದರಿಂದ ಕಪ್ಪಾಗುತ್ತದೆ. ನೀವು ಬುದ್ಧರ ತರಹದ ಜೀವನವನ್ನೇ ಆಚರಿಸಿದರೂ ಸಹಾ ನೀವು ಟೀಕೆಗಳಿಂದ, ನಿಂದನೆಗಳಿಂದ ಮತ್ತು ಆಕ್ರಮಣಗಳಿಂದ ತಪ್ಪಿಸಿಕೊಳ್ಳಲಾರಿರಿ.
ಬುದ್ಧ ಭಗವಾನರು ಅತ್ಯಂತ ಸುಖ್ಯಾತವಂತರು ಆಗಿದ್ದರೂ ಅವರ ಮೇಲೆ ಅತಿ ದೋಷಣೆಗಳು ಉಂಟಾದವು. ಮಹಾ ಪುರುಷರು ಆಗಾಗ್ಗೆ ಗುರುತಿಸಲ್ಪಡುತ್ತಾರೆ. ಅವರು ಹೇಗೆ ಸುಖ್ಯಾತಿಯಿಂದ ಗುರುತಿಸಲ್ಪಡುತ್ತಾರೆಯೋ ಹಾಗೆಯೇ ತಪ್ಪಾಗಿಯೂ ಗುರುತಿಸಲ್ಪಡುತ್ತಾರೆ. ಕೆಲವು ಪ್ರತಿರೋಧಿ ಧರ್ಮದವರು ಬುದ್ಧರ ಬಗ್ಗೆ ಅಪಪ್ರಚಾರ ಸೃಷ್ಟಿಸಿದರು. ಸ್ತ್ರೀಯೊಬ್ಬಳು ರಾತ್ರಿಯ ವೇಳೆ ವಿಹಾರದಲ್ಲಿ ಕಾಲ ಕಳೆದಿದ್ದಾಳೆ ಎಂದು ಅಪಪ್ರಚಾರ ಮಾಡಿದರು. ಅದು ಫಲಕಾರಿಯಾಗದೆ ಹೋದಾಗ, ತಾವೇ ಸ್ತ್ರೀಯನ್ನು ಕೊಂದು ಒಣಹೂವಿನ ಕಸದ ರಾಶಿಯಲ್ಲಿ ಅಡಗಿಸಿ ಆ ಪಾಪವನ್ನು ಬುದ್ಧರು ಮತ್ತು ಅವರ ಶಿಷ್ಯರ ಮೇಲೆ ಹೊರಿಸಿದರು. ನಂತರ ಅಪರಾಧ ಮಾಡಿದವರು ತಮ್ಮ ಕುಕೃತ್ಯಗಳನ್ನು ಒಪ್ಪಿಕೊಂಡರು.
ಅವರ ಚಾರಿತ್ರಾರ್ಹ ಧಮ್ಮ ಪ್ರಚಾರ ಯಶಸ್ಸನ್ನು ಮುಟ್ಟಿ ಬಹಳಷ್ಟು ಜನರು ಅವರ ಬಳಿ ದೀಕ್ಷೆ ತೆಗೆದುಕೊಂಡಾಗಿತ್ತು. ಆಗ ಅವರ ವಿರೋಧಿಗಳು ಇದನ್ನು ಸಹಿಸಲಾರದೆ ಹೊಸ ದೋಷಾರೋಪಣೆಗಳನ್ನು ಮಾಡಿದರು. ಅದೆಂದರೆ ಅವರು ತಾಯಿ-ತಂದೆಯರಿಂದ ಮಕ್ಕಳನ್ನು ಕಿತ್ತುಕೊಳ್ಳುವರು, ಪತ್ನಿಯರಿಂದ ಗಂಡಂದಿರನ್ನು ಕಸಿದುಕೊಳ್ಳುತ್ತಿದ್ದಾರೆ, ದೇಶದ ಉನ್ನತಿಗೆ ತಡೆ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾರಂಭಿಸಿದರು. ಇವೆಲ್ಲಾ ರೀತಿಯ ದೋಷಾರೋಪಣೆಗಳ ಜೊತೆಗೆ ಅವರ ಸ್ವತಃ ಭಾವಮೈದ ಹಾಗೆಯೇ ಚಿಕ್ಕಪ್ಪನ ಮಗನಾದ ದೇವದತ್ತನು ಅಸೂಯೆಯಿಂದ ಅವರನ್ನು ಕೊಲ್ಲಲು ಪ್ರಯತ್ನಿಸಿ ದೊಡ್ಡ ಹೆಬ್ಬಂಡೆಯನ್ನು ಬುದ್ಧರ ಮೇಲೆ ಉರುಳಿಸಿದನು, ಆದರೆ ಯಶಸ್ವಿಯಾಗಲಿಲ್ಲ. ಹೀಗೆ ದೋಷರಹಿತರು, ಪರಮ ಪರಿಶುದ್ಧರಾಗಿರುವ, ಪರಿಪೂರ್ಣ ಬುದ್ಧರೇ ದೋಷಾರೋಪಣೆಗೆ ಸಿಲುಕಿರುವಾಗ ಸಾಮಾನ್ಯ ಮತ್ರ್ಯರ ಪಾಡೇನು?
ಬೆಟ್ಟದ ಮೇಲೆ ಎತ್ತರಕ್ಕೆ ಏರಿದಷ್ಟೂ ಪರರ ಕಣ್ಣಿಗೆ ಚೆನ್ನಾಗಿ ಕಾಣಿಸುತ್ತಾರೆ. ಆಗ ನಿಮ್ಮ ಬೆನ್ನು ಕಾಣಿಸಿಕೊಳ್ಳುತ್ತದೆ. ಆದರೆ ನಿಮ್ಮ ಮುಂಭಾಗ ಅಡಗಿರುತ್ತದೆ. ಅದೇರೀತಿಯಲ್ಲಿ ದೋಷಾರೋಪಣೆ ಮಾಡುವವರು ನಿಮ್ಮ ನ್ಯೂನತೆಗಳನ್ನು ಪ್ರದಶರ್ಿಸುತ್ತಾರೆ. ಆದರೆ ನಿಮ್ಮ ಗಮನಾರ್ಹವಾದ ಸದ್ಗುಣಗಳನ್ನು ಅಲಕ್ಷಿಸುತ್ತಾರೆ. ತೂರುವ ಬೀಸಣಿಕೆಯು ಹೊಟ್ಟನ್ನು ಚೆಚ್ಚಿ, ಧಾನ್ಯವನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೆ ಜರಡಿಯು ಇದಕ್ಕೆ ವಿರುದ್ಧವಾಗಿ ಸ್ಥೂಲವಾದ ಶೇಷವನ್ನು ಇಟ್ಟುಕೊಂಡು ಸಿಹಿಯಾದ ಫಲರಸವನ್ನು ನೀಡುತ್ತದೆ. ಅದೇರೀತಿಯಲ್ಲಿ ಸುಸಂಸ್ಕೃತರು ಸೂಕ್ಷ್ಮವಾದುದನ್ನು ಪಡೆದುಕೊಂಡು ಸ್ಥೂಲವಾದುದನ್ನು ತೆಗೆದುಹಾಕುವರು. ಆದರೆ ಅಸಂಸ್ಕೃತರು ಸ್ಥೂಲವಾದುದನ್ನು ಉಳಿಸಿಕೊಂಡು ಸೂಕ್ಷ್ಮವಾದುದನ್ನು ತೆಗೆದುಹಾಕುವರು.
ಯಾವಾಗ ನೀವು ಉದ್ದೇಶ ಪೂರ್ವಕವಾಗಿ ಅಥವಾ ಬೇರೆ ಯಾವುದೋ ರೀತಿಯ ದೋಷಣೆಗೆ ಒಳಗಾದಾಗ ಎಪಿಕ್ಟೆಟಸ್ನ ಈ ಬುದ್ಧಿವಾದವನ್ನು ಸದಾ ನೆನಪಿಡಿ: ಓ ಆತನ ತಾತ್ಸರಭರಿತ ಪರಿಚಯಿಸುವಿಕೆಯಿಂದ ಮತ್ತು ನನ್ನ ಬಗ್ಗೆ ಮೂಚರ್ಿತ ಜ್ಞಾನದಿಂದಾಗಿ ನಾನು ಬಹು ಅಲ್ಪವಾಗಿ ಟೀಕಿಸಲ್ಪಟ್ಟೆನು. ಆದರೆ ನಾನು ಚೆನ್ನಾಗಿ ಗೋಚರಿಸಬೇಕೆಂದರೆ ಹೆಚ್ಚು ಗಂಭೀರವಾಗಿ ಕಾಣಿಸಲ್ಪಡಬೇಕಾದರೆ ನನ್ನ ವಿರುದ್ಧವಾಗಿ ಅತಿಹೆಚ್ಚು ದೋಷಾರೋಪಣೆ ಆಗಬೇಕಿತ್ತು ಎಂಬುದು.
ಸನ್ನಿವೇಶಗಳು ಸ್ಪಷ್ಟತೆಗೆ ಆಗ್ರಹಿಸದಿದ್ದರೆ ಮಿಥ್ಯಾ ದೋಷಾರೋಪಣೆಯನ್ನು ತಿದ್ದಿಕೊಳ್ಳಲು ಹೋಗುವುದು ನಿಜಕ್ಕೂ ಸಮಯ ವ್ಯರ್ಥವೇ ಸರಿ. ಶತ್ರುವು ಹೆಚ್ಚು ಆನಂದಿಸುವುದು ನೀವು ನೋವಿಗೆ ಒಳಗಾಗಿದ್ದೀರಿ ಎಂದು ತಿಳಿದಾಗಲೇ. ಅದೇ ಆತನು ಬಯಸುತ್ತಾನೆ.
ನೀವು ಪರರಿಂದ ಬರುವ ಮಿಥ್ಯಾಪವಾದಗಳಿಗೆ ತಟಸ್ಥರಾದರೆ, ಕಿವುಡರಂತೆ ವತರ್ಿಸಿದರೆ ಅದು ರಾಜಮಾರ್ಗ ಆಗುತ್ತದೆ. ಆಗ ಕಿವುಡನ ಮುಂದೆ ಕಿಂದರಿ ಬಾರಿಸಿದಂತೆ ಅವರ ಪ್ರಯತ್ನ ವ್ಯರ್ಥವಾಗುತ್ತದೆ. ಪರರ ಬಗ್ಗೆಯು ಅಪವಾದಗಳನ್ನು ಕೇಳುವಾಗಲೂ ಸಹಾ ನೀವು ಕಿವುಡರಂತೆಯೇ ವತರ್ಿಸಬೇಕು. ನಿಜಕ್ಕೂ ಮಿಥ್ಯಾ ಆರೋಪಗಳನ್ನು, ಸುದ್ದಿಗಳನ್ನು ಮತ್ತು ಗಾಳಿಸುದ್ದಿಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲ.
ಇಡೀ ಜಗತ್ತು ಅಪಾರ ಕಲ್ಲು-ಮುಳ್ಳುಗಳಿಂದ ಕೂಡಿದೆ. ಆದರೂ ಸಹಾ ಅಂತಹ ವಿಘ್ನಗಳಿದ್ದರೂ ನಾವು ನಡೆಯಲೇಬೇಕಾಗಿದೆ. ಆದರೆ ಇಲ್ಲಿ ಅವನ್ನು ಕಿತ್ತುಹಾಕುವ ಅಸಾದ್ಯ ಪ್ರಯತ್ನದ ಬದಲು ಒಂದು ಜೊತೆ ಚೆಪ್ಪಲಿ ಧರಿಸಿ ಹಾನಿಗೊಳಗಾಗದಂತೆ ನಡೆಯುವುದು ಜ್ಞಾನೋಚಿತವಾಗಿದೆ. ನಾವು ಸಿಂಹದಂತೆ ಶಬ್ದಗಳಿಗೆ ಕಂಪಿಸಬಾರದು, ಗಾಳಿಯಂತೆ ಬಲೆಗೆ ಸಿಲುಕಬಾರದು, ಕಮಲದಂತೆ ಕೆಸರಿನಲ್ಲಿ ಅಂಟಬಾರದು. ಏಕಾಂಗಿಯಾಗಿ ಖಡ್ಗಮೃಗದಂತೆ ಸಂಚರಿಸಬೇಕು. ಕಾಡಿನ ರಾಜ ಸಿಂಹದಂತೆ ನಿರ್ಭಯರಾಗಿರಬೇಕು.
ಸಿಂಹಗಳು ಸ್ವಭಾವದಂತೆ ಪರ ಪ್ರಾಣಿಗಳ ಗರ್ಜನೆಗೆ ಭೀತಿ ತಾಳುವುದಿಲ್ಲ. ಈ ಜಗತ್ತಿನಲ್ಲಿ ನಾವು ಪ್ರತಿಕೂಲ ಸುದ್ದಿಗಳನ್ನು, ಮಿಥ್ಯಾ ಅಪವಾದಗಳನ್ನು ಹತೋಟಿಯಿಲ್ಲದ ನಾಲಿಗೆಗಳ ನೀಚ ಟೀಕೆ ಬಂದಾಗ, ನಾವು ಸಿಂಹದಂತಿದ್ದು ಅವನ್ನು ಕೇಳಲಿಕ್ಕೂ ಹೋಗಬಾರದು. ಆಗ ಬೊಮ್ರ್ಯಾಂಗ್ನಂತೆ ಅವು ಪ್ರಾರಂಭವಾದೆಡೆಗೆ ಪುನಃ ಮರಳುವುವು. ನಾಯಿಗಳು ಬೊಗಳುತ್ತಿರುತ್ತವೆ, ಆದರೆ ಆನೆಗಳು ಅಥವಾ ವರ್ತಕರ ಬಂಡಿಗಳು ಶಾಂತವಾಗಿ ಚಲಿಸುತ್ತಿರುತ್ತವೆ. ಯಾರು ತಪ್ಪುಗಳನ್ನೇ ಮಾಡುವುದಿಲ್ಲವೋ ಆತನೇನೂ ಮಾಡುವುದಿಲ್ಲ. ಬಹಳಷ್ಟು ಬಾರಿ ತಪ್ಪುಗಳೇ ಅತ್ಯುತ್ತಮ ಗುರುಗಳಾಗಿರುತ್ತವೆ.
ನಾವು ಕೆಸರಿನ ಲೋಕದಲ್ಲಿ ಜೀವಿಸುತ್ತಿದ್ದೇವೆ. ಬಹಳಷ್ಟು ಕಮಲಗಳು ಕೆಸರಿಗೆ ಅಂಟದೆಯೇ ಪುಟಿದೆದ್ದು ಅರಳುತ್ತವೆ, ಅವು ಲೋಕವನ್ನೇ ಅಲಂಕರಿಸುತ್ತವೆ. ಕಮಲದಂತೆ ನಾವು ಸಹಾ ದೋಷರಹಿತರಾಗಬೇಕು. ನಮ್ಮತ್ತ ಎಸೆಯುವ ಕೆಸರನ್ನು ಪರಿಗಣಿಸದೆ ಉದಾತ್ತ ಜೀವನ ನಡೆಸಬೇಕು. ನಮ್ಮತ್ತ ಗುಲಾಬಿಗಳ ಬದಲು ಕೆಸರೇ ಬೀಳಲೆಂದು ನಿರೀಕ್ಷಿಸಬೇಕು ಆಗ ಯಾವುದೇ ಹತಾಶೆಗಳಿರುವುದಿಲ್ಲ.
ಕಷ್ಟವಾದರೂ ನಮ್ಮ ಅಂಟುವಿಕೆಯನ್ನು ಕ್ಷೀಣಿಸಬೇಕು. ನಾವು ಒಂಟಿಯಾಗಿಯೇ ಬಂದಿದ್ದೇವೆ, ಒಂಟಿಯಾಗಿಯೇ ಹೋಗುವೆವು. ಯಾವುದಕ್ಕೂ ಅಂಟಿಕೊಳ್ಳದ ಮನೋಭಾವನೆಯೇ ಮನಶಾಂತಿಗೆ ಸಹಾಯ ಮಾಡುತ್ತದೆ. ಮಹಾಪುರುಷರು ದೋಷಣೆಗೆ ಒಳಪಟ್ಟರು, ನಿಂದಿಸಲ್ಪಟ್ಟರು, ವಿಷ ಸೇವನೆಗೆ ಒಳಪಟ್ಟರು, ಶಿಲುಬೆಗೆ ಏರಿಸಲ್ಪಟ್ಟರು ಅಥವಾ ಗುಂಡಿಗೆ ಬಲಿಯಾದರು. ಇವೆಲ್ಲವೂ ನಿಜಕ್ಕೂ ತಲೆತಗ್ಗಿಸುವಂತಹ ವಿಷಯವಾಗಿವೆ. ಮಹಾನ್ ಸಾಕ್ರಟೀಸ್ ವಿಷ ಸೇವನೆಗೆ ಗುರಿಯಾಗಿಸಲ್ಪಟ್ಟನು. ಉದಾತ್ತ ಯೇಸು ಕ್ರಿಸ್ತರನ್ನು ಕ್ರೌರ್ಯವಾಗಿ ಶಿಲುಬೆಗೆ ಏರಿಸಿದರು. ಯಾವ ಮಹಾತ್ಮ ಗಾಂಧಿಯು ತಮ್ಮ ಧರ್ಮ ಮತ್ತು ಅಧ್ಯಾತ್ಮಿಕತೆಗೆ ಪ್ರಸಿದ್ಧಿ ಪಡೆದಿದ್ದರೋ ಅವರನ್ನು ಗುಂಡಿಕ್ಕಿ ಕೊಂದರು. ಮಹಾನ್ ನಾಟಕಕರ್ತ ಬೆನರ್ಾಡ್ಷಾ ಹೀಗೆ ಟೀಕಿಸಿದ್ದಾನೆ: ನಿಜಕ್ಕೂ ಅತಿ ಒಳ್ಳೆಯವನಾಗುವುದು ಸಹಾ ಅಪಾಯಕಾರಿಯಾಗಿದೆ.
ಮಹಾಪುರುಷರು ತಾವು ನಂಬಿದ ಸಿದ್ಧಾಂತಕ್ಕೆ, ಮೌಲ್ಯಗಳಿಗೆ ಪ್ರಾಣತೆತ್ತರೆ ಅಂತಹವರಿಗೆ ಕೃತಘ್ನರಾಗಿ ಆರೋಪಿಸಲು ನಾವ್ಯಾರು? ಅತಿ ಒಳ್ಳೆಯವರಾಗಿರುವುದು ನಿಜಕ್ಕೂ ಅತಿ ಅಪಾಯಕಾರಿಯೇ? ಹೌದು, ಅವರ ಜೀವನ ಕಾಲದಲ್ಲಿ ಅವರು ಟೀಕೆಗೆ ಒಳಪಟ್ಟರು, ಆಕ್ರಮಣಕ್ಕೆ ಗುರಿಯಾದರು ಮತ್ತು ಕೊಲ್ಲಲ್ಪಟ್ಟರು. ಆದರೆ ಅವರ ಮರಣದ ನಂತರ ಅವರನ್ನು ದೈವೀಕರಿಸಿದರು ಮತ್ತು ಗೌರವಿಸಿ ಪೂಜಿಸಿದರು. ಆದರೆ ಮಹಾ ಪುರುಷರು ಎಂದೆಂದಿಗೂ ಕೀತರ್ಿ ಮತ್ತು ಅಪಕೀತರ್ಿಗೆ ತಟಸ್ಥರಾಗಿರುತ್ತಾರೆ. ಅವರು ಎಂದಿಗೂ ನಿಂದೆ, ಟೀಕೆ, ಅಪವಾದಗಳಿಗೆ ಕ್ಷೊಭೆ ತಾಳುವುದಿಲ್ಲ. ಹಾಗೆಯೇ ಅವರು ಕೀತರ್ಿ ಅಥವಾ ಸ್ತುತಿಗೆ ಕಾರ್ಯವೂ ಮಾಡುವುದಿಲ್ಲ. ಅಂತಹ ಮಹಾಪುರುಷರು ತಮ್ಮ ಸೇವೆಗಳಿಗೆ ಪರರು ಗುರುತಿಸುವರೋ ಅಥವಾ ಇಲ್ಲವೋ ಎಂಬುದಕ್ಕೆ ತಟಸ್ಥರಾಗಿರುತ್ತಾರೆ.

2.11 ಸ್ತುತಿ ಮತ್ತು ನಿಂದೆ

ಮಾನವನ ಮೇಲೆ ಪರಿಣಾಮ ಬೀರುವ ಇನ್ನೆರಡು ಲೋಕ ಸ್ಥಿತಿಗಳೆಂದರೆ ಸ್ತುತಿ ಮತ್ತು ನಿಂದನೆಗಳಾಗಿವೆ. ಸ್ತುತಿಗೆ ಒಳಗಾದಾಗ ಉಬ್ಬುವುದು ಮತ್ತು ನಿಂದೆಗೆ ಒಳಗಾದಾಗ ಕುಗ್ಗುವುದು ಸ್ವಾಭಾವಿಕವಾಗಿದೆ. ಸ್ತುತಿ ನಿಂದೆಗಳ ನಡುವೆಯು ಜ್ಞಾನಿಗಳು ಉಬ್ಬದೆ ಅಥವಾ ಕುಗ್ಗದೆ ಶಾಂತರಾಗಿರುವರೆಂದು ಬುದ್ಧ ಭಗವಾನರು ಹೇಳುತ್ತಾರೆ. ಹೇಗೆ ಹೆಬ್ಬಂಡೆಯು ವಾಯುವಿನಿಂದ ಅಲುಗಾಡುವುದಿಲ್ಲವೋ ಹಾಗೆಯೇ ಅವರು ಸಹಾ ಸ್ಥಿರವಾಗಿರುತ್ತಾರೆ. ಸ್ತುತಿಸುವಾಗ ಅರ್ಹವಾಗಿದ್ದರೆ ಕೇಳಲು ಆನಂದಕರವಾಗಿರುತ್ತದೆ. ಆದರೆ ಸ್ತುತಿಯು ಅನರ್ಹವಾಗಿದ್ದರೆ ಕೇಳಲು ಪ್ರಿಯವಾಗಿ ಕಂಡರೂ ಅದು ಕೃತಿಮದ್ದಾಗಿರುತ್ತದೆ, ವಂಚನೆಯದ್ದಾಗಿರುತ್ತದೆ. ಆದರೆ ಎಲ್ಲಾ ಶಬ್ದಗಳು ನಮ್ಮ ಕಿವಿಯೊಳಗೆ ತಲುಪದಿದ್ದರೆ ಯಾವ ಪರಿಣಾಮವೂ ಉಂಟಾಗಲಾರದು.
ಪ್ರಾಪಂಚಿಕತೆಯ ದೃಷ್ಟಿಕೋನದಿಂದಾಗಿ ಸ್ತುತಿಯ ಒಂದು ಶಬ್ದವು ಸಹಾ ತುಂಬಾ ದೂರ ಕೊಂಡೊಯ್ಯುತ್ತದೆ. ಅಲ್ಪವಾಗಿ ಸ್ತುತಿಸಿದರೂ ಕೃಪೆಯು ಸುಲಭವಾಗಿ ದೊರೆಯುವುದು. ಮಾತನಾಡುವ ಮುನ್ನ ಅರ್ಹವಾದ ಒಂದು ಪದದ ಸ್ತುತಿಯು ಇಡೀ ಸಭಿಕರನ್ನು ಆಕಷರ್ಿಸುತ್ತದೆ. ಭಾಷಣ ಮಾಡುವವನು ಸಭಿಕರನ್ನು ಸ್ವಲ್ಪ ಹೊಗಳಿದರೂ ಆಗ ಅವರೆಲ್ಲ ಗಮನವಿಟ್ಟು ಕೇಳುತ್ತಾರೆ. ಆದರೆ ಅದರ ಬದಲು ಆತನು ಭಾಷಣಕ್ಕೆ ಮುನ್ನ ಸಭಿಕರನ್ನು ಟೀಕೆ ಮಾಡಿದರೆ ಪ್ರತಿಕ್ರಿಯೆಯು ತೃಪ್ತಿದಾಯಕವಾಗಿರುವುದಿಲ್ಲ. ಸುಸಂಸ್ಕೃತರು ಹೊಗಳಿಕೆಯಲ್ಲಿ ಆಶ್ರಯ ಪಡೆಯುವುದಿಲ್ಲ. ಹಾಗೆಯೇ ಅವರು ತಪ್ಪಾಗಿಯು ಪರಿಗಣಿಸಲ್ಪಡುವುದಿಲ್ಲ. ಪ್ರಶಂಸೆಗೆ ಅರ್ಹರಾದವರನ್ನು ಅವರು ಅಸೂಯೆಯಿಲ್ಲದೆ ಪ್ರಶಂಸಿಸುತ್ತಾರೆ. ಹಾಗೆಯೇ ದೋಷಣೆಗೆ ಅರ್ಹರಾದವರನ್ನು ಅವರು ಸುಧಾರಣೆಯ ಉದ್ದೇಶದಿಂದ, ಕರುಣೆಯಿಂದ ಕೂಡಿ ಖಂಡಿಸುತ್ತಾರೆ. ನಿಮಗೆ ಯಾವ ಟೀಕಾಕಾರನು ಇಲ್ಲದಿದ್ದರೆ, ನೀವು ಯಶಸ್ಸು ಹೊಂದಿರುವಂತೆ ಕಾಣಿಸುವುದಿಲ್ಲ (ಮ್ಯಾಲ್ಕಮ್ ಪೋರ್ಟ್)
ಯಾರ್ಯಾರು ಬುದ್ಧರಲ್ಲಿ ಆತ್ಮೀಯತೆ ಹೊಂದಿರುವರೋ ಅವರೆಲ್ಲಾ ಬುದ್ಧರನ್ನು ತಮ್ಮದೇ ಆದರೀತಿಯಲ್ಲಿ ಪ್ರಶಂಸಿಸಿದ್ದಾರೆ. ಅವರು ಯಾವ ಪೂರ್ವ ಸಿದ್ಧತೆಯಿಲ್ಲದೇ ಬುದ್ಧರ ನೂರಾರು ಸದ್ಗುಣಗಳನ್ನು ಹಾಡಿ ಹೊಗಳಿದ್ದಾರೆ. ಬುದ್ಧರ ಸದ್ಗುಣ ಚಿಂತನೆಯನ್ನೇ ಧ್ಯಾನವನ್ನಾಗಿಸಿದ್ದಾರೆ. ಅವರ ಮಹಾ ಸದ್ಗುಣಗಳು ಅವರ ಹಿಂಬಾಲಕರಿಗೆ ಮಹಾ ಸ್ಫೂತರ್ಿಯಾಗಿದೆ. ಇನ್ನೂ ಟೀಕೆಗಳ ಬಗ್ಗೆ ಹೇಳುವುದಾದರೆ...?
ಬುದ್ಧರು ಹೀಗೆ ಹೇಳಿದ್ದಾರೆ: ಮಿತಭಾಷಿಯನ್ನು ನಿಂದಿಸುವರು, ಮೌನಿಯನ್ನು ನಿಂದಿಸುವರು, ಹಾಗೆಯೇ ಅತಿ ವಾಚಾಳಿಯನ್ನು ನಿಂದಿಸುವರು. ಈ ಜಗದಲ್ಲಿ ಅನಿಂದಿತರು ಇಲ್ಲವೇ ಇಲ್ಲ. ನಿಂದನೆಯು ಮಾನವನಿಗೆ ಸಿಕ್ಕ ಸಾರ್ವತ್ರಿಕ ಆಸ್ತಿಯೆಂದೂ ಹೇಳಬಹುದು. ಈ ಜಗತ್ತಿನಲ್ಲಿ ಇಂದು ಬುದ್ಧರನ್ನು ಟೀಕಿಸಬಹುದು. ಅಂತಹ ಅಶಿಸ್ತಿನ ಜನರು ಲೋಕದಲ್ಲಿ ಇರುವರು. ಆದರೂ ಬುದ್ಧರಂತಹ ಮಹೋನ್ನತರು, ಯುದ್ಧದಲ್ಲಿ ಆನೆಯು ಬಾಣಗಳ ನೋವನ್ನು ಸಹಿಸುವಂತೆ ಎಲ್ಲಾ ನಿಂದೆಯನ್ನು ಸಹಿಸಿ, ಕ್ಷಮಾಶೀಲರಾಗಿದ್ದಾರೆ.
ಮೋಹದಿಂದ ಆವೃತರಾದ, ಪಾಪಿಗಳು ಸದಾ ಪರರಲ್ಲಿಯ ತಪ್ಪುಗಳನ್ನೇ ಹುಡುಕುವರು. ಆದರೆ ಅವರು ಪರರಲ್ಲಿಯ ಸದ್ಗುಣಗಳಾಗಲಿ, ಸುಂದರತೆಯಾಗಲಿ ಗಮನಿಸುವುದೇ ಇಲ್ಲ. ಅಂತಹ ಸುಂದರ ಸದ್ಗುಣಗಳಿಂದಲೇ ಕೂಡಿರುವಂತಹ ಪರಿಪೂರ್ಣ ಪರಿಶುದ್ಧರಾದ ಬುದ್ಧರು ಅನನ್ಯರಾಗಿದ್ದಾರೆ. ಯಾರು ಸಹಾ ಪೂರ್ಣವಾಗಿ ಕೆಟ್ಟವರು ಅಲ್ಲ, ಸದ್ಗುಣಗಳು ಇರುವವರಲ್ಲಿಯು ಕೆಲವು ದೋಷಗಳು ಇರುತ್ತವೆ. ಹಾಗೆಯೇ ಪಾಪಿಗಳಲ್ಲಿಯೂ ಉತ್ತಮ ಗುಣವು ಇರುತ್ತದೆ. ಒಬ್ಬನು ಪರಿಶುದ್ಧ ಆಶಯಗಳಿಂದ ಕಾರ್ಯ ಮಾಡಬೇಕು. ಆದರೂ ಬಾಹ್ಯ ಜಗತ್ತು ದುಷ್ಟತನದಿಂದ ಪ್ರೇರೇಪಿತರಾಗಿ ಆತನ ಕ್ರಿಯೆಗಳನ್ನು ವಿಪರೀತಾರ್ಥವಾಗಿ ಭಾವಿಸಿ ನಿಂದಿಸುತ್ತಾರೆ. ಒಬ್ಬರು ಪರರ ಸಾಲಗಳನ್ನು ತನ್ನಮೇಲೆ ತಂದುಕೊಂಡು ಅಥವಾ ತನ್ನ ಆಸ್ತಿಯನ್ನೇ ಮಾರಿ ಸ್ನೇಹಿತನಿಗೆ ಸಹಾಯ ಮಾಡಬಹುದು. ಆದರೆ ನಂತರ ಸಹಾಯ ಪಡೆದ ಮೋಹ ಪೀಡಿತನು ಸುಮಿತ್ರನ ಮೇಲೆಯೇ ತಪ್ಪು ಹುಡುಕಬಹುದು. ಆತನಿಗೆ ಬೆದರಿಕೆ ಹಾಕಿ ವಂಚಿಸಬಹುದು. ಆತನ ಕೀತರ್ಿಯನ್ನೇ ನಾಶಮಾಡಿ, ಆತನ ಅವನತಿಯಲ್ಲೇ ಆನಂದಿಸಬಹುದು. ಇಂತಹ ಪ್ರಸಂಗಗಳು ಜಗತ್ತಿನಲ್ಲಿ ನಡೆಯುತ್ತಲೇ ಇರುತ್ತವೆ.
ಜಾತಕ ಕಥೆಗಳಲ್ಲಿ ಗುಟ್ಠಿಲಾ ಎಂಬ ವಾದ್ಯಗಾರನು ತನಗೆ ತಿಳಿದಿರುವುದೆಲ್ಲವನ್ನೂ ಯಾವುದೇ ಶೇಷವಿಲ್ಲದೆ ತನ್ನ ಶಿಷ್ಯನಿಗೆ ಕಲಿಸಿಬಿಡುತ್ತಾನೆ. ಆದರೆ ಆ ಕೃತಘ್ನ ಪಾಪಿ ಶಿಷ್ಯನು ತನ್ನ ಗುರುವಿನ ಮೇಲೆಯೇ ಸವಾಲು ಹಾಕುತ್ತಾನೆ. ಗುರುವಿನ ಅವನತಿ ಬಯಸುತ್ತಾನೆ, ಅದಕ್ಕೆ ಪ್ರಯತ್ನಿಸುತ್ತಾನೆ. ಒಂದು ಸಂದರ್ಭದಲ್ಲಿ ಬುದ್ಧ ಭಗವಾನರು ಬ್ರಾಹ್ಮಣನ ಮನೆಯಲ್ಲಿ ಔತಣಕ್ಕೆ ಆಹ್ವಾನಿಸಲ್ಪಡುತ್ತಾರೆ. ಆದರೆ ಅಲ್ಲಿ ಔತಣಕ್ಕೆ ಬದಲಾಗಿ ಆತನು ನಾನಾರೀತಿಯಲ್ಲಿ ನಿಂದನೆ ಮಾಡುತ್ತಾನೆ.
ಆಗ ಬುದ್ಧ ಭಗವಾನರು ಸೌಜನ್ಯದಿಂದ ಆತನನ್ನು ಹೀಗೆ ಪ್ರಶ್ನಿಸುತ್ತಾರೆ:
ಓ ಬ್ರಾಹ್ಮಣ, ನಿನ್ನ ಮನೆಗೆ ಬೇರೆಯವರನ್ನು ಆತಿಥ್ಯಕ್ಕೆ ಆಹ್ವಾನಿಸುವೆ ಅಲ್ಲವೇ?
ಹೌದು.
ಅವರು ಬಂದಾಗ ಏನು ಮಾಡುವೆ?
ಉತ್ತಮೋತ್ತಮ ಭೋಜ್ಯಗಳಿಂದಾಗಿ ಸತ್ಕರಿಸುತ್ತೇವೆ.
ಅವರು ಆ ಆಹಾರಗಳನ್ನೆಲ್ಲ ತಿರಸ್ಕರಿಸಿದರೆ?
ಸಂತೋಷದಿಂದ ನಾವೇ ಇಟ್ಟುಕೊಳ್ಳುವೆವು.
ಒಳ್ಳೆಯದು ಬ್ರಾಹ್ಮಣ, ನೀನು ಈಗ ನನಗೆ ಆಹ್ವಾನಿಸಿ, ನಿಂದನೆ ಮಾಡಿರುವೆ. ಇದರಲ್ಲಿ ಲವಲೇಶವು ನಾನು ಸ್ವೀಕರಿಸಿಲ್ಲ. ದಯವಿಟ್ಟು ಇವನ್ನೆಲ್ಲಾ ಹಿಂದಕ್ಕೆ ಪಡೆದುಕೋ.
* - * - * - *
ಬುದ್ಧ ಭಗವಾನರು ಎಂದಿಗೂ ಸೇಡು ಭಾವನೆಯನ್ನೇ ಹೊಂದಿರಲಿಲ್ಲ. ಸೇಡು ಬೇಡ ಎಂಬುದು ಅವರ ಬೋಧನೆಯಾಗಿತ್ತು. ದ್ವೇಷದಿಂದ ದ್ವೇಷ ನಶಿಸಲಾರದು, ಪ್ರೀತಿಯಿಂದ ಮಾತ್ರ ನಶಿಸುತ್ತದೆ. ಇಂದು ಬುದ್ಧ ಭಗವಾನರ ಉದಾತ್ತವಾಣಿಯಾಗಿತ್ತು. ಬುದ್ಧರಷ್ಟು ಸತ್ಕಾರ ಮತ್ತು ಪ್ರಶಂಸಿತರಾದ ಧಾಮರ್ಿಕ ಗುರುವೇ ಇಲ್ಲ, ಹಾಗೆಯೇ ಅವರಷ್ಟು ಟೀಕೆ ಮತ್ತು ನಿಂದನೆಗಳಿಗೆ ಗುರಿಯಾದವರು ಬೇರೆ ಯಾರೂ ಇಲ್ಲ. ಬುದ್ಧರಂತಹ ಉದಾತ್ತ ಪುರುಷರ ಭಾಗ್ಯವೇ ಹೀಗಿರುತ್ತದೆ.
ಬಹಳಷ್ಟು ಮಾನವರಿಗೆ ನಿಂದನೆಯು ಸರ್ವಸಾಮಾನ್ಯವಾಗಿದೆ. ನೀವು ಹೆಚ್ಚು ಪರಿಶ್ರಮಪಟ್ಟಷ್ಟು ನೀವು ಶ್ರೇಷ್ಠರಾಗುವಿರಿ. ಹಾಗೆಯೇ ನಿಂದನೆ ಮತ್ತು ಟೀಕೆಗಳಿಗೆ ಗುರಿಯಾಗುವಿರಿ. ನಿಂದನೆಯು ನೀಚರ ಶಸ್ತ್ರವಾಗಿದೆ.
ಸಾಕ್ರಟೀಸ್ನು ತನ್ನ ಪತ್ನಿಯಿಂದಲೇ ನಿಂದಿಸಲ್ಪಡುತ್ತಿದ್ದನು. ಆತನು ಪರರಿಗೆ ಸಹಾಯ ಮಾಡಲೆಂದು ಯಾವಾಗಲಾದರೂ ಹೊರಗೆ ಹೋದಾಗ ಆತನ ಪತ್ನಿಯು ಹೀಯಾಳಿಸುತ್ತಿದ್ದಳು. ಒಂದುದಿನ ಆಕೆಯ ಆರೋಗ್ಯ ಚೆನ್ನಾಗಿರಲಿಲ್ಲ, ಆಕೆಗೆ ತನ್ನ ದೈನಂದಿನ ಕಾರ್ಯವನ್ನು ಮಾಡಲಾಗಲಿಲ್ಲ. ಆ ದಿನ ಸಾಕ್ರಟೀಸ್ನು ಸಪ್ಪೆಮೊರೆಯಿಂದ ಮನೆಬಿಟ್ಟನು. ಆತನ ಸ್ನೇಹಿತರು ಆತನ ವಿಷಾದತೆಗೆ ಕಾರಣ ಕೇಳಿದಾಗ, ಸಾಕ್ರಟೀಸ್ ಹೇಳಿದುದು ಏನೆಂದರೆ ಆತನ ಪತ್ನಿಯು ಆ ದಿನ ಬೆಯ್ಯಲಿಲ್ಲವಂತೆ. ಆಗ ಅವರು ಹೀಗೆ ಪ್ರಶ್ನಿಸಿದರು ನಿಂದಿಸದ ದಿನ ಸಂತೋಷಪಡಬೇಕಲ್ಲ. ಆಗ ಸಾಕ್ರಟೀಸ್ ಈ ರೀತಿ ಉತ್ತರಿಸಿದರು: ಆಕೆ ಹೀಯಾಳಿಸುವಾಗಲೆಲ್ಲ ನನಗೆ ಸಹನೆ ಅಭ್ಯಸಿಸುವ ಅವಕಾಶ ಸಿಗುತ್ತಿತ್ತು. ಇಂದು ನನಗೆ ಆ ಅವಕಾಶ ತಪ್ಪಿದೆ. ಆದ್ದರಿಂದಲೇ ನಾನು ದುಃಖಿತನಾಗಿದ್ದೇನೆ. ಇದು ಸರ್ವರಿಗೂ ಸ್ಮರಣೀಯ ಪಾಠವಾಗಿದೆ. ಯಾವಾಗಲೇ ಆಗಲಿ, ನಿಂದನೆಗೆ ಒಳಪಟ್ಟಾಗ ನಾವು ಸಹನೆಗೆ ಅವಕಾಶ ಸಿಕ್ಕಿದೆ ಎಂದು ಭಾವಿಸಬೇಕೆ ಹೊರತು ಅಪಮಾನವಾಗಿದೆ ಎಂದು ಭಾವಿಸಬಾರದು.


2.12 ಸುಖ ಮತ್ತು ದುಃಖ

ಲೋಕದಲ್ಲಿ ಕಂಡುಬರುವ ಅಷ್ಟ ಧಮ್ಮಗಳಲ್ಲಿ ಸುಖ ಮತ್ತು ದುಃಖಗಳೇ ಕೊನೆಯ ಜೋಡಿಯಾಗಿದೆ. ಇವು ಮಾನವನ ಮೇಲೆ ಅತ್ಯಂತ ಪರಿಣಾಮ ಬೀರುವಂತಹದ್ದಾಗಿದೆ. ಯಾವುದು ಸುಖಕರವಾಗಿ ಉದಯಿಸುವುದೋ ಅದೇ ಸುಖವಾಗಿದೆ. ಯಾವುದು ಸಹಿಸಲು ಕಷ್ಟಕರವಾಗಿರುವುದೋ ಅದೇ ದುಃಖ. ಸಾಮಾನ್ಯ ಸುಖವು ಕೇವಲ ಆಸೆಗಳ ಸಂತೃಪ್ತಿಯಾಗಿದೆ. ಒಂದು ಆಸೆಯು ಈಡೇರಿದ ಮರುಕ್ಷಣದಲ್ಲೇ ಇನ್ನೊಂದಕ್ಕೆ ಆಸೆಪಡುವೆವು. ಹೀಗಾಗಿ ನಮ್ಮ ಸ್ವಾರ್ಥದ ಆಸೆಗಳಿಗೆ ತೃಪ್ತಿಯೇ ಇಲ್ಲ, ಅಂತ್ಯವೂ ಇಲ್ಲ. ಆದರೆ ಈ ಇಂದ್ರೀಯಗಳ ಸುಖವು ಉನ್ನತವಾಗಿ ಮತ್ತು ಏಕೈಕವಾಗಿ ಕಾಣಿಸುವುದು ಕೇವಲ ಸಾಧಾರಣ ಮನುಷ್ಯನಿಗೆ ಮಾತ್ರ.
ಪೂರ್ವ ನಿರೀಕ್ಷೆಯಲ್ಲಾಗಲಿ, ಅನುಭವ ತೃಪ್ತಿಯಲ್ಲಾಗಲಿ ಮತ್ತು ಪುನಃ ಸ್ಮರಿಸುವುದ ರಲ್ಲಾಗಲಿ ಇಂದ್ರೀಯಗಳಲ್ಲಿ ಕ್ಷಣಿಕ ಸುಖವಿದೆ. ಈ ಬಗೆಯ ಸುಖಗಳನ್ನು ಅತಿಶ್ರೇಷ್ಠವೆಂದೇ ಇಂದ್ರೀಯ ಬೋಗಿಯು ಹೇಳುವನು. ಆದರೆ ವಾಸ್ತವವಾಗಿ ಇದು ಭ್ರಮಾತ್ಮಕ ಮತ್ತು ಕ್ಷಣಿಕವಾಗಿದೆ. ಭೌತಿಕ ಅನುಬೋಗ ಅಥವಾ ಸ್ವತ್ತಿನಲ್ಲಿ ಅಪ್ಪಟ ಸುಖವಿದೆಯೇ? ಒಂದುವೇಳೆ ಇದ್ದಿದ್ದರೆ ಕೋಟ್ಯಾಧಿಪತಿಗಳು ಜೀವನದಿಂದಾಗಿ ಹತಾಶೆ ತಾಳುತ್ತಿರಲಿಲ್ಲ. ಕೆಲವೊಂದು ಅಭಿವೃದ್ಧಿ ಹೊಂದಿದ ದೇಶಗಳು ಭೌತಿಕತೆಯ ಅಭಿವೃದ್ಧಿಯಲ್ಲಿ ಉತ್ತುಂಗ ಶಿಖರವೇರಿದೆ. ಆದರೂ ಅಲ್ಲಿ ಸುಖಿಯಾಗಿ ಜೀವನ ಸಾಗಿಸುತ್ತಿಲ್ಲ. ಭೌತಿಕ ಅನುಬೋಗವೊಂದೇ ಸುಖವು ನೀಡುವುದಾದರೆ ಅವರೇಕೆ ಸುಖಿಗಳಾಗಿಲ್ಲ, ಅವರಿಗೇಕೆ ಸುಖ ಸಿಗುತ್ತಿಲ್ಲ?
ಇಡೀ ಜಗತ್ತಿನ ಒಡೆತನ ಅಥವಾ ಪ್ರಭುತ್ವ ಸಿಕ್ಕರೂ ನಿಜ ಸುಖವು ಸಿಗುವುದೇ? ಶ್ರೇಷ್ಠನಾದ ಅಲೆಗ್ಸಾಂಡರ್ ಭಾರತದತ್ತ ವಿಜಯೋತ್ಸವದಿಂದ ಸಾಗಿದನು. ದಾರಿಯಲ್ಲಿ ಸಿಕ್ಕ ಭೂಭಾಗಗಳೆಲ್ಲಾ ಗೆದ್ದನು. ಆದರೂ ಇನ್ನಷ್ಟು ಭೂಮಿಯನ್ನು ಜಯಿಸಲು ಹಂಬಲಿಸಿದನು.
ಅಷ್ಟೇ ಏಕೆ, ಆಧುನಿಕ ಇತಿಹಾಸ ಪುಟಗಳನ್ನು ತಿರುವಿದಾಗ, ರಾಕ್ಷಸರಂತೆ ಭೀತಿಯನ್ನು ಸೃಷ್ಟಿಸಿದ ಭಯಾನಕರಾಗಿದ್ದಂತಹ ಪೊಲ್ಪಾಟ್, ಇದಿಅಮಿನ್, ಹಿಟ್ಲರ್ರವರು ಲಕ್ಷಾಂತರ ಮುಗ್ಧ ಮಾನವರನ್ನು ಸಾಮೂಹಿಕವಾಗಿ ಹತ್ಯೆ ಮಾಡಿದರು. ಅವರು ಆ ರೀತಿ ಮಾಡಲು ಕಾರಣ ಮಾನವರಲ್ಲೇ ಅವರಿಗಿದ್ದ ಜನಾಂಗೀಯ ಭೇದ. ತಮ್ಮಿಂದ ಬೇರೆಯಂತಿರುವವರನ್ನು ನಾಶಗೊಳಿಸಿಯೇ ಹೊಸ ಜಗತ್ತು ರಚಿಸುವೆವು ಎಂದು ಅವರು ನಂಬಿದ್ದರು. ಆದರೆ ಅವರೇನು ಪಡೆದರು? ಇಡೀ ಜಗತ್ತು ಅವರನ್ನು ನಿಂದಿಸಿತು ಮತ್ತು ದ್ವೇಷಿಸಿತು.
ಬಹಳಷ್ಟುಬಾರಿ ಅಪಾರ ಅಧಿಕಾರವಿರುವ ರಾಜ ಮುತ್ಸದಿಯರ ಜೀವನವೇ ಸುರಕ್ಷಿತವಾಗಿರುವುದಿಲ್ಲ. ಜಾನ ಕೆನಡಿ ಮತ್ತು ಮಹಾತ್ಮ ಗಾಂಧಿಯವರ ದುರಂತಗಳೇ ಇದಕ್ಕೆ ಸಾಕ್ಷಿಯಾಗಿದೆ. ನಿಜವಾದ ಸುಖವು ಆಂತರ್ಯದಲ್ಲಿ ಸಿಗುವುದು ಮತ್ತು ಅದನ್ನು ನಾವು ಐಶ್ವರ್ಯದಿಂದ, ಅಧಿಕಾರದಿಂದ, ಗೌರವಗಳಿಂದ ಅಥವಾ ಜಯಭೇರಿಗಳಿಂದ ನಿರೂಪಿಸಲಾರೆವು. ಪ್ರಾಪಂಚಿಕ ಸ್ವತ್ತುಗಳನ್ನೇನಾದರೂ ಬಲವಂತವಾಗಿ ಅಥವಾ ಅನ್ಯಾಯಯುತವಾಗಿ ಪಡೆದರೆ ಅಥವಾ ಕೆಟ್ಟ ಮಾರ್ಗದರ್ಶನದಿಂದ ಹೊಂದಿದರೆ ಅಥವಾ ಅಂತಹ ಪ್ರಬಲ ದುರಾಸೆ ಹೊಂದಿದ್ದೇ ಆದರೆ ಅದು ಅಪಾರ ನೋವು ಮತ್ತು ದುಃಖಗಳನ್ನು ಹೊಂದಿದವರಿಗೆ ಸಿಗುವುದು.
ಯಾವುದು ಒಬ್ಬನಿಗೆ ಸುಖಕರವೋ, ಅದು ಇನ್ನೊಬ್ಬನಿಗೆ ಸುಖವಾಗಿರುವುದಿಲ್ಲ. ಯಾವ ಮದ್ಯ ಮತ್ತು ಮಾಂಸವು ಒಬ್ಬನಿಗೆ ಸ್ವರ್ಗಸಮಾನವೋ ಅದೇ ಇನ್ನೊಬ್ಬನಿಗೆ ವಿಷವಾಗಿರುತ್ತದೆ. ಬುದ್ಧ ಭಗವಾನರು ನಾಲ್ಕುಬಗೆಯ ಪ್ರಾಪಂಚಿಕ ಸುಖಗಳನ್ನು ಹೇಳಿದ್ದಾರೆ. ಅವೆಂದರೆ (1) ಅತ್ಥಿಸುಖ ಅಂದರೆ ಹೊಂದಿರುವಂತಹ ಸುಖ. ಉದಾಹರಣೆಗೆ: ಆರೋಗ್ಯ, ಐಶ್ವರ್ಯ, ದೀಘರ್ಾಯು, ಸೌಂದರ್ಯ, ಆನಂದ, ಬಲ, ಅಧಿಕಾರ, ಸ್ವತ್ತುಗಳು, ಪತ್ನಿಪುತ್ರರು ಇತ್ಯಾದಿ. (2) ಭೋಗಸುಖ ಅಂದರೆ ಹೊಂದಿರುವ ಈ ಮೇಲಿನವುಗಳಿಂದ ಸುಖ ಹೊಂದುವಿಕೆ.
ಸಾಧಾರಣ ಸ್ತ್ರೀ ಮತ್ತು ಪುರುಷರು ಆನಂದಪಡುವಿಕೆಯನ್ನು ಇಷ್ಟಪಡುತ್ತಾರೆ. ಬುದ್ಧ ಭಗವಾನರು ಎಲ್ಲರಿಗೂ ತಮ್ಮ ಪ್ರಾಪಂಚಿಕ ಸುಖಗಳನ್ನು ತ್ಯಜಿಸಿ, ಏಕಾಂತಕ್ಕೆ ಹೊರಡಿ ಎಂದು ಬುದ್ಧಿವಾದ ನೀಡಿಲ್ಲ. ಐಶ್ವರ್ಯದ ಆನಂದವು ನಮಗೆ ಮಾತ್ರ ಬಳಸಿದರೆ ಅಷ್ಟಾಗಿ ಸಿಗದು. ಬದಲಾಗಿ ಪರಹಿತಕ್ಕೆ ವಿನಿಯೋಗಿಸಿದರೆ ಮಹತ್ ಆನಂದ ಸಿಗುವುದು. ಏನನ್ನು ನಾವು ತಿನ್ನುತ್ತಿದ್ದೆವೋ ಅದು ಕೇವಲ ಕ್ಷಣಿಕ. ಯಾವುದನ್ನು ನಾವು ಜೋಪಾನವಾಗಿ ರಕ್ಷಿಸುವೆವೋ ಅದನ್ನು ನಾವು ಹೋದ ಬಳಿಕ ಬಿಡಬೇಕಾಗುತ್ತದೆ. ಯಾವುದನ್ನು ನಾವು ದಾನ ಮಾಡುವೆವೋ ಅದನ್ನು ಮಾತ್ರ ನಮ್ಮೊಂದಿಗೆ ನಾವು ತೆಗೆದುಕೊಂಡು ಹೋಗುವೆವು. ನಮ್ಮ ಪ್ರಾಪಂಚಿಕ ಸ್ವತ್ತುಗಳಿಂದ ನಾವು ಮಾಡಿದ ಅನೇಕಾನೇಕ ಪುಣ್ಯಕಾರ್ಯಗಳಿಂದ ನಾವು ಸದಾ ನೆನಪಿರುವೆವು.
ಪ್ರವಾದಿ ಮೊಹಮ್ಮದ್ ಒಂದೆಡೆ ಹೀಗೆ ಹೇಳಿದ್ದಾರೆ: ನಮ್ಮದೆಂದು ನಾವು ಹಕ್ಕಿನಿಂದ ಹೇಳುವಂತಹುದು ಯಾವುದೆಂದರೆ ನಾವು ವ್ಯಯ ಮಾಡಿದ್ದು, ದಾನವಾಗಿ ನೀಡಿದ್ದು ಮತ್ತು ಧರ್ಮಕ್ಕಾಗಿ ಸಮಪರ್ಿಸಿದ್ದು ಅಷ್ಟೇ ಹೊರತು ಉಳಿದಿದ್ದು ಯಾವುದೂ ನಮ್ಮದಲ್ಲ.
(3) ಅನನಸುಖ (ಸಾಲಕ್ಕೆ ಬೀಳದಿರುವ ಸುಖ) : ಇದು ಸಹ ಸುಖದ ಮೂಲವಾಗಿದೆ. ನಮ್ಮಲ್ಲಿ ಇರುವಷ್ಟರಲ್ಲಿ ನಾವು ಸಂತೃಪ್ತರಾದರೆ ಮತ್ತು ನಾವು ಮಿತವ್ಯಯಗಳಾದರೆ, ನಾವು ಸಾಲ ತೆಗೆದುಕೊಳ್ಳಬೇಕಿಲ್ಲ. ಸಾಲ ಪಡೆದವರು ಸದಾ ಮಾನಸಿಕ ಒತ್ತಡದಲ್ಲಿರುತ್ತಾರೆ, ಚಿಂತೆಯಿಂದ ಇರುತ್ತಾರೆ ಮತ್ತು ಸಾಲ ಪಡೆದವರ ಋಣ ಹಾಗು ಕರಾರಿಗೆ ಬದ್ಧರಾಗಿರುತ್ತಾರೆ. ಬಡವರಾಗಿದ್ದರೂ ಸಾಲದಿಂದ ಮುಕ್ತನಾಗಿದ್ದರೆ, ನಾವು ಸಮಾಧಾನವನ್ನು ಅನುಭವಿಸುತ್ತೇವೆ ಮತ್ತು ಮಾನಸಿಕವಾಗಿ ಸುಖಿಯಾಗಿರುತ್ತೇವೆ. (4) ಅನವಜ್ಜ ಸುಖ (ಕಳಂಕರಹಿತ ಜೀವನದ ಸುಖ) ಕಳಂಕರಹಿತವಾದ ಜೀವನವು ಗೃಹಸ್ಥನಿಗೆ ಸಂಪನ್ಮೂಲಭರಿತ ಸುಖಕರವಾಗಿರುತ್ತದೆ.
ಕಳಂಕರಹಿತ ವ್ಯಕ್ತಿಯು ತನಗೂ ಮತ್ತು ಪರರಿಗೂ ಶುಭ ತರುವವ ಆಗಿದ್ದಾನೆ. ಆತನು ಎಲ್ಲರಿಂದ ಮೆಚ್ಚುಗೆ ಗಳಿಸಿ, ತಾನು ಸಹಾ ಸುಖೀಯುತ ಅನುಭವ ಅನುಭವಿಸುತ್ತಾನೆ. ಪರರಲ್ಲಿಯೂ ಶಾಂತಿಯುತ ಅಲೆಗಳನ್ನು ಉಂಟುಮಾಡುತ್ತಾನೆ. ಆದರೂ ಸಹಾ ಸರ್ವತ್ರವಾಗಿ ಉತ್ತಮ ಹೆಸರು ಗಳಿಸುವುದು ಅತಿಕಷ್ಟಕರವಾಗಿದೆ. ಉದಾತ್ತ ಮನಸ್ಸಿನ ವ್ಯಕ್ತಿಗಳು ಕೇವಲ ಕಳಂಕರಹಿತ ಜೀವನಕ್ಕೆ ಒತ್ತು ನೀಡಿ, ಬಾಹ್ಯದ ಪ್ರಶಂಸೆಗೆ ಉದಾಸೀನರಾಗಿರುತ್ತಾರೆ.
ಜಗತ್ತಿನ ಬಹುಪಾಲು ಜನರು ಇಂದ್ರೀಯ ಸುಖಗಳಲ್ಲೇ ಆನಂದಿಸುತ್ತಾರೆ. ಆದರೆ ಕೆಲವರು ಮಾತ್ರ ವೈರಾಗ್ಯದಲ್ಲಿ ಆನಂದಿಸುತ್ತಾರೆ. ಯಾವುದಕ್ಕೂ ಅಂಟದಿರುವಿಕೆ ಅಥವಾ ಇಂದ್ರೀಯ ಸುಖಗಳನ್ನು ಮೀರಿರುವಿಕೆ ಇದು ಧಾಮರ್ಿಕ ಮನೋಭಾವದವರ ಸುಖವಾಗಿದೆ. ಸಾಧಾರಣ ಸುಖವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದಕ್ಕೆ ವಿರುದ್ಧವಾದ ದುಃಖವನ್ನು ನಾವು ಸ್ವಾಗತಿಸುವುದಿಲ್ಲ. ಅದಂತೂ ಸಹಿಸಲು ತುಂಬಾ ಕಷ್ಟಕರವಾಗಿರುತ್ತದೆ. ದುಃಖ ಅಥವಾ ಶೋಕವು ನಾನಾ ಮುಖವಾಡಗಳನ್ನು ಹೊತ್ತುಬರುತ್ತದೆ. ನಮಗೆ ಮುಪ್ಪು ಬಂದಾಗ ದುಃಖಿಸುವುದು ಸ್ವಾಭಾವಿಕವಾಗಿದೆ. ಸಮಚಿತ್ತತೆಯಿಂದಾಗಿ ನಾವು ಮುಪ್ಪಿನ ದುಃಖವನ್ನು ಸಹಿಸಬಹುದು. ಅದರಲ್ಲೂ ರೋಗದಿಂದ ಕೂಡಿದ ಮುಪ್ಪು ಇನ್ನಷ್ಟು ನೋವುದಾಯಕ ಆಗಿರುತ್ತದೆ. ಸಾಮಾನ್ಯ ಹಲ್ಲು ನೋವು ಅಥವಾ ತಲೆನೋವು ಕೆಲವೊಮ್ಮೆ ಅಸಹನೀಯ ನೋವುಂಟುಮಾಡುತ್ತದೆ. ಅದಕ್ಕಿಂತಲೂ ದೊಡ್ಡ ಸಮಸ್ಯೆ ಉದಯಿಸಿದಾಗ ಇದು ಚಿಕ್ಕದಾಗಿರುತ್ತದೆ.
ನಾವು ರೋಗಕ್ಕೆ ಗುರಿಯಾದಾಗ ಸಹನೆಯಿಂದ, ತಾಳ್ಮೆಯಿಂದ ಸಹಿಸಿಕೊಳ್ಳುವುದನ್ನು ಕಲಿಯಲೇಬೇಕಾಗಿದೆ. ಆಗ ನಾವು ಗಂಭೀರವಾದ ರೋಗದಿಂದ ಪಾರಾಗಿದ್ದೇವೆ ಎಂದು ನಮ್ಮನ್ನೇ ಸಮಾಧಾನಿಸಿಕೊಳ್ಳಬೇಕು. ಬಹಳಷ್ಟುಸಾರಿ ನಾವು ನಮ್ಮ ಪ್ರಿಯರನ್ನು ಅಗಲಿರುತ್ತೇವೆ. ಅಂತಹ ಅಗಲಿಕೆಯು ಅಪಾರವಾದ ಮಾನಸಿಕ ನೋವನ್ನು ನೀಡಿರುತ್ತದೆ. ಯಾವುದೆಲ್ಲಕ್ಕೂ ಮಿಲನವಿದೆಯೋ ಅವೆಲ್ಲಕ್ಕೂ ವಿಯೋಗವಿದೆ, ಅಗಲಿಕೆಯಿದೆ ಎಂದು ಸ್ಪಷ್ಟವಾಗಿ ಅಥರ್ೈಸಿಕೊಳ್ಳಬೇಕು. ನಿಜಕ್ಕೂ ಅಂತಹ ಸನ್ನಿವೇಶಗಳು ಸಮಚಿತ್ತತೆ ಪಾಲಿಸಲು ಅತ್ಯುತ್ತಮ ಅವಕಾಶಗಳಾಗಿವೆ. ನಮಗೆ ಜಿಗುಪ್ಸೆಕಾರಕವಾದುದನ್ನು, ಬೇಸರಪಡುವುದನ್ನು, ಅಸಹ್ಯಿಸುವುದನ್ನು ಸಹಿಸಲಾರದೆ ಇರುವಂತಹವುಗಳಲ್ಲಿ ನಾವು ಒತ್ತಾಯಪೂರ್ವಕ ಹಾಗು ಶಾಂತವಾಗಿ, ದೃಢವಾಗಿ ಸಹಿಸುವುದನ್ನು ರೂಢಿಸಿಕೊಳ್ಳಬೇಕು. ಆಗ ನಾವು ಸಹಿಸಲು ಸಮರ್ಥರಾಗುತ್ತೇವೆ.
ಬಹುಶಃ ನಾವು ಭೂತಕಾಲದ ಅಥವಾ ವರ್ತಮಾನದ ಕರ್ಮಗಳ ಫಲಗಳನ್ನು ಅನುಭವಿಸುತ್ತೇವೆ. ನಾವು ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಅಥವಾ ಯಾವುದೇರೀತಿ ತಡೆಗಳಿಂದ ಹೊರಬರಲು, ದಾಟಲು ಯತ್ನಿಸುತ್ತಿದ್ದೇವೆ.
ನಗು, ಇಡೀ ಜಗತ್ತು ನಿನ್ನೊಂದಿಗೆ ನಗುವುದು. ಅಳು ಮತ್ತು ಏಕಾಂಗಿಯಾಗಿ ಅಳುವೆ. (ಎಲ್ಲ ವ್ಹೀಲರ್ ವಿಲ್ಕಾಕ್ಸ್)
ತಮ್ಮ ಎಲ್ಲಾ ಕಲ್ಮಶಗಳನ್ನು ನಾಶಗೊಳಿಸಿದ ಪರಿಪೂರ್ಣ ಜೀವಿಯಾದ ಬುದ್ಧ ಭಗವಾನರು ಸಹಾ ದೈಹಿಕ ದುಃಖಗಳಾದ ರೋಗ ಮತ್ತು ಆಕಸ್ಮಿಕಗಳಿಂದಾದ ನೋವುಗಳನ್ನು ಸಹಿಸಿದ್ದಾರೆ. ಬುದ್ಧ ಭಗವಾನರು ಕೆಲವೊಮ್ಮೆ ತಲೆನೋವಿಗೆ ಗುರಿಯಾಗಿದ್ದರು. ಅವರ ಅಂತಿಮ ದಿನಗಳಲ್ಲಿಯೂ ಹೊಟ್ಟೆ ನೋವಿನಂತಹ ಭೌತಿಕ ನೋವಿಗೆ ಗುರಿಯಾಗಿದ್ದರು. ದೇವದತ್ತನೆಂಬ ವಿರೋಧಿಯು ಒಮ್ಮೆ ಮೇಲಿನಿಂದ ಬಂಡೆ ತಳ್ಳಿ ಬುದ್ಧರ ಹತ್ಯೆ ಮಾಡಲು ಯತ್ನಿಸಿದ್ದ. ಆದರೆ ಅದು ಯಶಸ್ವಿಯಾಗದೆ ಕೇವಲ ಕಾಲಿಗೆ ಗಾಯವಾಗಿ, ಕಾಲಿಗೆ ಜೀವಕನೆಂಬ ಶ್ರದ್ಧಾಳು ವೈದ್ಯ ಶಸ್ತ್ರಚಿಕಿತ್ಸೆ ಮಾಡಿಸಿದ್ದನು. ಕೆಲವೊಮ್ಮೆ ಅವರು ತಮ್ಮ ಶಿಷ್ಯಂದಿರ ಅವಿಧೇಯತನದಿಂದಾಗಿ ಹಸಿವಿನಿಂದಲೇ ಕಾಲಕಳೆಯುತ್ತಿದ್ದರು. ಒಮ್ಮೆ ಶಿಷ್ಯರ ಅವಿಧೇಯತನದಿಂದಾಗಿ ಅವರು ಕಾಡಿನಲ್ಲಿಯೇ ಮೂರು ತಿಂಗಳು ಕಾಲಕಳೆದರು. ಒರಟು ನೆಲದಮೇಲೆ ಕೆಲವು ಎಲೆಗಳನ್ನು ಹಾಕಿ ಅದನ್ನೇ ಹಾಸಿಗೆಯಾಗಿ ಬಳಸಿದರು. ಶೀತವಾದ ಗಾಳಿಯಂತಹ ವಿಪರೀತ ಸನ್ನಿವೇಶಗಳಲ್ಲೂ ಅವರು ಪರಿಪೂರ್ಣ ಸಮಚಿತ್ತತೆ ಪಾಲಿಸುತ್ತಿದ್ದರು. ಅಪಾರ ನೋವು ಮತ್ತು ಪರಮಸುಖಗಳ ನಡುವೆಯೂ ಅವರು ಸಮಚಿತ್ತತೆಯ ಸಮತೋಲನದ ಮನಸ್ಸಿನಿಂದಲೇ ಜೀವಿಸುತ್ತಿದ್ದರು.
ಸಂಸಾರದಲ್ಲಿ ಸಂಚರಿಸುವಾಗ ಮರಣದಂತಹ ದೊಡ್ಡ ದುಃಖವನ್ನು ನಾವು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಅನೇಕ ಪ್ರಿಯರ ಮರಣಗಳನ್ನು ನೋಡಬೇಕಾಗುತ್ತದೆ. ಅದು ನಿಜಕ್ಕೂ ಸಹಿಸಲು ಕಷ್ಟವಾಗಿರುತ್ತದೆ. ಉದಾಹರಿಸುವುದಾದರೆ ಪಟಾಚಾರಳು ತನಗೆ ಪ್ರಿಯರಾದಂತಹ ಪತಿ, ಮಕ್ಕಳು, ಸೋದರ ಮತ್ತು ತಾಯ್ತಂದೆಗಳೆಲ್ಲರನ್ನು ಕಳೆದುಕೊಂಡು ಅವರ ಮೃತ್ಯುವಿನ ಆಘಾತದಿಂದಾಗಿ ಆಕೆ ಹುಚ್ಚಿಯಾದಳು. ಆದರೆ ಬುದ್ಧರ ಅನುಕಂಪ, ಪ್ರಜ್ಞೆ ಮತ್ತು ಸಾಂತ್ವನದಿಂದಾಗಿ ಆಕೆಯು ದುಃಖ ಇಲ್ಲದಿರುವಿಕೆಯ ಮತ್ತು ಆ ಸ್ಥಿತಿಗೆ ಕೊಂಡೊಯ್ಯುವ ಮಾರ್ಗವನ್ನು ಅರಿತು ದುಃಖದೊಂದಿಗೆ ಹೋರಾಡುವ ಕುಶಲತೆಯನ್ನು ಕಲಿತಳು.
ಕಿಸಾಗೋತಮಿಯು ತನ್ನ ಶಿಶುವನ್ನು ಕಳೆದುಕೊಂಡಳು. ಮೃತ್ಯುವಿನ ಪರಿಚಯವೇ ಇಲ್ಲದ ಆಕೆಯು ತನ್ನ ಮಗುವಿನ ಶವದೊಂದಿಗೆ ಸಂಚರಿಸುತ್ತ ಆ ಮಗುವನ್ನು ಗುಣಪಡಿಸಲೆಂದು ಆಕೆಯು ತಿರುಗಾಡುತ್ತ, ಆಕೆ ಬುದ್ಧರ ಬಳಿಗೂ ಬಂದಳು. ಹಾಗು ಪರಿಹಾರ ಕೇಳಿದಳು. ಆಗ ಬುದ್ಧ ಭಗವಾನರು ಆಕೆಗೆ ಲೋಕದ ದುಃಖವನ್ನು ಪರಿಚಯಿಸಲೆಂದು ಹೀಗೆ ಹೇಳಿದರು:
ಒಳ್ಳೆಯದು ತಂಗಿಯೇ, ಹಿಡಿಯಷ್ಟು ಸಾಸುವೆ ಕಾಳನ್ನು ತರುವೆಯಾ?
ಖಂಡಿತ ತರುವೆ ಭಗವಾನ್.
ಆದರೆ ಸೋದರಿ, ಆ ಕುಟುಂಬದಲ್ಲಿ ಯಾರೂ ಸತ್ತಿರಬಾರದು ನೆನಪಿಟ್ಟುಕೋ.
ಸಾಸುವೆಯೇನೋ ಆಕೆಗೆ ಸಿಕ್ಕಿತು. ಆದರೆ ಸಾವಿಲ್ಲದ ಮನೆಯು ಆಕೆಗೆ ಸಿಗಲಿಲ್ಲ. ಆಗ ಆಕೆಗೆ ಜೀವನದ ಸ್ವರೂಪವಾದ ದುಃಖ ಸ್ಪಷ್ಟವಾಗಿ ಅರಿವಾಯಿತು. ಇನ್ನೊಂದು ಘಟನೆಯಲ್ಲಿ ತಾಯಿಯೊಬ್ಬಳು ತನ್ನ ಮಗನು ಸತ್ತರೂ ಅಳಲಿಲ್ಲ. ಕಾರಣ ಕೇಳಿದಾಗ, ಆಕೆ ಉತ್ತರಿಸಿದ್ದು ಹೀಗೆ: ಕರೆಯದೆ ಬಂದ, ತಿಳಿಸದೆಯೇ ಹೊರಟುಹೋದ, ಹೇಗೆ ಬಂದನೋ ಹಾಗೆಯೇ ಹೊರಟನು, ಆದ್ದರಿಂದಾಗಿ ಏತಕ್ಕೆ ಅಳಬೇಕು.
ಹೇಗೆ ಮರದಲ್ಲಿರುವ ಎಲ್ಲಾ ಬಗೆಯ ಫಲಗಳು ಮೃದು, ಪಕ್ವವಾದ ಅಥವಾ ಹಣ್ಣಾದ ಫಲಗಳು ಬಿದ್ದುಹೋಗುವವೋ ಹಾಗೆಯೇ ನಾವು ಸಹಾ. ಶಿಶುತ್ವದಲ್ಲಿ, ಬಾಲ್ಯದಲ್ಲಿ, ಯೌವ್ವನದಲ್ಲಿ, ಮಧ್ಯ ವಯಸ್ಸಿನಲ್ಲಿ ಅಥವಾ ಮುಪ್ಪಿನಲ್ಲಿ ಸಾಯುತ್ತೇವೆ. ಪೂರ್ವದಲ್ಲಿ ಸೂರ್ಯ ಉದಯಿಸುವುದು, ಪಶ್ಚಿಮದಲ್ಲಿ ಮುಳುಗುವುದಕ್ಕಾಗಿಯೇ. ಮುಂಜಾನೆ ಅರಳುವ ಪುಷ್ಪಗಳು ಸಂಜೆಗೆ ಬಾಡುತ್ತವೆ. ಹಾಗೆಯೇ ಮರಣವು ಸಹಾ ಯಾರಿಗೂ ಬಿಡದೆ ಆಕ್ರಮಿಸುವುದು. ಅದನ್ನು ನಾವು ಸಮಚಿತ್ತತೆಯಿಂದ ಎದುರಿಸಬೇಕಾಗಿದೆ.
ಹೇಗೆ ಭೂಮಿಯ ಮೇಲೆ ಏನನ್ನೇ ಬಿಸಾಡಲಿ,
ಸಿಹಿಯೇ ಆಗಿರಲಿ, ಕಶ್ಮಲವೇ ಆಗಿರಲಿ
ಎಲ್ಲವನ್ನು ಸಮನಾಗಿಯೇ ಕಾಣುವುದು,
ಯಾವುದೇ ದ್ವೇಷವಿಲ್ಲ, ಪ್ರೀತಿಯೂ ಇಲ್ಲ.
ಹಾಗೆಯೇ ಸಾಧಕನು ಸಹಾ ಒಳಿತಿನಲ್ಲಿ ಅಥವಾ ಕೆಡುಕಿನಲ್ಲಿ
ಸದಾ ಸಮಚಿತ್ತತೆಯಿಂದ ವಿಹರಿಸಲಿ.
ಬುದ್ಧರು ಹೇಳುವುದು ಏನೆಂದರೆ ಪ್ರಾಪಂಚಿಕ ಸನ್ನಿವೇಶಗಳಲ್ಲಿ ಸಿಲುಕಿದರೂ ಅರಹಂತರ (ಸಂತರ) ಮನಸ್ಸು ಎಂದಿಗೂ ಚಂಚಲವಾಗುವುದಿಲ್ಲ (ಅಲುಗಾಡುವುದಿಲ್ಲ/ಏರಿಳಿತವಾಗುವುದಿಲ್ಲ). ನಾವು ಸಹಾ ಲಾಭ-ನಷ್ಟಗಳಲ್ಲಿ, ಕೀತರ್ಿ-ಅಪಕೀತರ್ಿಗಳಲ್ಲಿ, ಸ್ತುತಿ-ನಿಂದೆಗಳಲ್ಲಿ, ಸುಖ-ದುಃಖಗಳಲ್ಲಿ ಸಮತೋಲಿತ ಸಮಚಿತ್ತತೆಯ ಮನಸ್ಸಿನಿಂದ ಇರಲು ಯತ್ನಿಸೋಣ. ಬುದ್ಧ ಭಗವಾನರು ಆರು ಇಂದ್ರೀಯಗಳ ಸಂಘರ್ಷವನ್ನು ಬಹು ಸುಂದರವಾದ ಉಪಮೆಯೊಂದಿಗೆ ವಿವರಿಸಿದ್ದಾರೆ.
ಈ ಉಪಮೆಯಲ್ಲಿ ಆರು ವಿವಿಧ ಹವ್ಯಾಸವುಳ್ಳ ಮತ್ತು ವಿವಿಧ ಕಾರ್ಯಕ್ಷೇತ್ರದಲ್ಲಿ ತೊಡಗಿರುವ ಪ್ರಾಣಿಗಳನ್ನು ಒಂದೇ ಬಲಿಷ್ಠ ಹಗ್ಗದಲ್ಲಿ ಕಟ್ಟಿದಾಗ ಆರು ಪ್ರಾಣಿಗಳು ಹೀಗೆ ವತರ್ಿಸುತ್ತವೆ. ಮೊಸಳೆಯು ನೀರಿಗೆ ಹೋಗಲು ಯತ್ನಿಸುತ್ತದೆ, ಪಕ್ಷಿಯು ಆಕಾಶದಲ್ಲಿ ಹಾರಲು ಯತ್ನಿಸುತ್ತದೆ, ನಾಯಿಯು ಹಳ್ಳಿಯತ್ತ ಓಡಲು ಯತ್ನಿಸುತ್ತದೆ, ನರಿಯು ಅರಣ್ಯದತ್ತ ಪರಾರಿಯಾಗಲು ಯತ್ನಿಸುತ್ತದೆ, ಕೋತಿಯು ಮರವೇರಲು ಯತ್ನಿಸುತ್ತದೆ, ಮತ್ತು ಹಾವು ಬಿಲದೊಳಗೆ ನುಗ್ಗಲು ಪ್ರಯತ್ನಿಸುತ್ತದೆ. ಹೀಗೆ ಆರು ಪ್ರಾಣಿಗಳು ನಿರಂತರವಾಗಿ ತಮ್ಮ ಹವ್ಯಾಸ ಮತ್ತು ಪ್ರವೃತ್ತಿಯಿಂದಾಗಿ ತಮ್ಮ ಸ್ಥಾನಕ್ಕೆ ತಲುಪಲು ಹೋರಾಟ ಮಾಡುತ್ತಲೇ ಇರುತ್ತದೆ. ಆದರೆ ಯಾವುದು ಎಲ್ಲಿಯೂ ಹೋಗುವುದಿಲ್ಲ. ಅದೇರೀತಿಯಲ್ಲಿ ಆರು ಇಂದ್ರೀಯಗಳು ನಿರಂತರವಾಗಿ ತಮ್ಮ ಇಂದ್ರೀಯ ಕ್ಷೇತ್ರದಲ್ಲಿ ತೃಪ್ತಿಹೊಂದಲು ಸದಾ ಹವಣಿಸುತ್ತದೆ ಮತ್ತು ಯಾವ ಮನುಷ್ಯನಿಗೆ ತನ್ನ ಇಂದ್ರೀಯಗಳಲ್ಲಿ ನಿಯಂತ್ರಣ ಇಲ್ಲವೋ ಆತನು ತೀರಾ ಗೊಂದಲದಿಂದ ಕೂಡಿ, ದುಃಖಕ್ಕೆ ಗುರಿಯಾಗುತ್ತಾನೆ.


2.13 ಮಾನವನ ಘನತೆ

ಜೀವನದ ಉದ್ದೇಶವಾದರೂ ಏನು? ಈ ಸಾಮಾನ್ಯವಾದ ಪ್ರಶ್ನೆಯನ್ನು ಜನರು ಆಗಾಗ್ಗೆ ಕೇಳುತ್ತಲೇ ಇರುತ್ತಾರೆ. ಆದರೆ ಸರಳವಾಗಿ ತೋರುವ ಹಾಗೆಯೇ ಸಂಕೀರ್ಣವಾದ ಈ ಪ್ರಶ್ನೆಗೆ ತೃಪ್ತಿಕರವಾಗಿ ಉತ್ತರಿಸುವುದು ಅಷ್ಟು ಸುಲಭವಲ್ಲ. ಆದರೂ ಹಲವು ಜನರು ಹಲವು ಉತ್ತರವನ್ನು ಹೊಂದಿದ್ದಾರೆ. ತಮ್ಮ ಚಿಂತನಾ ದಾಟಿಯಿಂದ ಉತ್ತರ ಕಂಡುಕೊಂಡಿದ್ದಾರೆ. ಆದರೂ ಅವು ವಿಚಾರಪರರಿಗೆ ತೃಪ್ತಿಕರವಾದ ಉತ್ತರ ಎನಿಸಿಲ್ಲ. ಇದಕ್ಕೆ ಕಾರಣವೇನೆಂದರೆ ಅವರು ಜೀವನವನ್ನು ಯಥಾಭೂತವಾಗಿ ಅದು ಇರುವಂತೆಯೇ ನೋಡಲು ಕಲಿತೇ ಇಲ್ಲ ಮತ್ತು ಯೋಗ್ಯವಾಗಿ ಗ್ರಹಿಸುವುದನ್ನು ಕಲಿತಿಲ್ಲ. ಅವರೆಲ್ಲ ತಮ್ಮ ಅರಿವಿನ ಸಾಮಥ್ರ್ಯದಂತೆ ತಮ್ಮ ಮನಸ್ಸಿನಲ್ಲಿ ಭ್ರಾಂತಿಗಳನ್ನು ಸೃಷ್ಟಿಸಿದ್ದಾರೆ. ಅದೇವೇಳೆಯಲ್ಲಿ ನಾವು ಅರಿಯಲೇಬೇಕಾದ ವಿಷಯ ಏನೆಂದರೆ ಹಲವಾರು ಧಾಮರ್ಿಕ ಗುರುಗಳು, ಮಹಾ ತತ್ವಜ್ಞರು, ಸುಖ್ಯಾತ ಕವಿಗಳು ಮತ್ತು ಮಹಾನ್ ಚಿಂತನಕಾರರು ಸಹಾ ಜೀವನದ ಬಗ್ಗೆ ತೃಪ್ತಿಹೊಂದಿಲ್ಲ.
ಅವರು ಸಹಾ ದುಃಖಭರಿತ ಈ ಜಗತ್ತಿನಲ್ಲಿ ನಾವೇಕೆ ಹುಟ್ಟಿದ್ದೇವೆ? ಎಂದು ಕೇಳಲ್ಪಟ್ಟಿದ್ದಾರೆ. ನಾವು ಜೀವನದ ಬಗ್ಗೆ ಅವರ ದೃಷ್ಟಿಕೋನಗಳನ್ನು ಓದಿದಾಗ, ನಮಗೆ ಗೊತ್ತಾಗುವುದು ಏನೆಂದರೆ ಅವರೂ ಸಹಾ ಜೀವನದ ಬಗ್ಗೆ ಸ್ಪಷ್ಟ ಚಿತ್ರಣ ನೀಡಲು ಅಸಮರ್ಥರಾಗಿದ್ದಾರೆ. ಹಲವರು ಹೇಳುವುದು ಏನೆಂದರೆ ನಾವು ದೇವರ ಬಲಿಪಶುಗಳಾಗಿದ್ದೇವೆ. ನಮ್ಮ ನಿಷ್ಠೆಯನ್ನು ಪರೀಕ್ಷಿಸಲು ಆತನು ನಮಗೆ ದುಃಖ ನೀಡುತ್ತಿದ್ದಾನೆ. ಹಲವರು ಹೀಗೂ ಹೇಳುತ್ತಾರೆ: ಜೀವನ ದುಃಖದಿಂದ, ಅನಿಶ್ಚಿತತೆಯಿಂದ ಮತ್ತು ಅತೃಪ್ತಿಕರದಿಂದ ಕೂಡಿದೆ. ಕೆಲವರು ಹೀಗೂ ಹೇಳಿದ್ದಾರೆ: ನಾವು ಹುಟ್ಟದೆ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು. ಇದರಿಂದ ಗೊತ್ತಾಗುವುದು ಏನೆಂದರೆ ಅವರು ತಮ್ಮ ದೃಷ್ಟಿಕೋನಗಳ ಮೂಲಕ ಜೀವನವನ್ನು ನೋಡಿದ್ದಾರೆ. ಆದರೆ ಸಾಮಾನ್ಯ ಮನುಷ್ಯನು ಜೀವನವನ್ನು ಕೇವಲ ಮೇಲು ಮೇಲಾಗಿಯೇ ನೋಡಿರುತ್ತಾನೆ ಹೊರತು ಆಳವಾಗಲ್ಲ. ಕೆಲವರು ಹೇಳುವುದು ಏನೆಂದರೆ ಜೀವನಕ್ಕೆ ಯಾವುದೇ ಉದ್ದೇಶವಿಲ್ಲ, ಜೀವನವನ್ನು ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳಬಹುದು.
ಅಂತಹ ಸಿದ್ಧಾಂತದ ಬಗ್ಗೆ ನಾವು ಪ್ರಾಜ್ಞರಾಗಿ ಚಿಂತಿಸಬೇಕಾಗಿದೆ. ಅನಾವಶ್ಯಕ ವಿಷಯಗಳ ಬಗ್ಗೆ ಜೀವನವನ್ನು ವ್ಯರ್ಥಮಾಡುವ ಬದಲು ಜೀವನದಲ್ಲಿ ನಮಗೆ ಮತ್ತು ಪರರಿಗೆ ಹಿತವಾಗುವಂತಹ ಉದ್ದೇಶಗಳನ್ನು ಇಟ್ಟುಕೊಳ್ಳುವುದು ಪ್ರಾಜ್ಞತೆಯಾಗಿದೆ. ಈ ರೀತಿಯಾಗಿ ಜೀವನದ ಉದ್ದೇಶವನ್ನು ನಮ್ಮಿಂದಲೇ ನಿರೂಪಿಸಬಹುದು.
ನಾವೇನಾದರೂ ಉತ್ತಮೋತ್ತಮ ಮಾನವೀಯ ಗುಣಗಳನ್ನು ಉಲ್ಲಂಘಿಸಿ ದುರ್ಬಳಕೆ ಮಾಡಿದರೆ, ಮಾನವನ ಘನತೆಗೆ ಅಪಮಾನ ಮಾಡಿದರೆ ಮತ್ತು ದುಶ್ಶೀಲತೆಯ ಆಚರಣೆಗಳನ್ನು ಮಾಡತೊಡಗಿದರೆ ಅಥವಾ ಮಾನವನ ದೌರ್ಬಲ್ಯಕ್ಕೆ ಬಳಸತೊಡಗಿದರೆ, ನಾವು ಜೀವನದಲ್ಲಿ ಅರ್ಹವಾದವುಗಳನ್ನು ಸಾಧಿಸಲು ಅಸಾಧ್ಯವಾಗಿದೆ.
ಇದಕ್ಕೆ ವಿರುದ್ಧವಾಗಿ ಅಂದರೆ ನಾವು ಪ್ರಾಜ್ಞರಾಗಿ ಸಾರ್ವತ್ರಿಕ ನೈತಿಕತೆಯನ್ನು ಪಾಲಿಸುತ್ತ, ಶೀಲದ ತತ್ವಗಳನ್ನು ಆಚರಿಸುತ್ತ ಅಂದರೆ ಸಹನೆಯನ್ನು ಅಭ್ಯಸಿಸುತ್ತ, ತಾಳ್ಮೆ, ಕ್ಷಮೆ, ಸಹಾನುಭೂತಿ, ವಿನಮ್ರತೆ ಮತ್ತು ದಯೆಯನ್ನು ವೃದ್ಧಿಸುತ್ತ ಹಾಗೆಯೇ ಪರರಿಗೂ ಸೇವೆ ಸಲ್ಲಿಸುತ್ತ ಮತ್ತು ನಿಷ್ಪಕ್ಷಪಾತವಾಗಿರುವಂತೆ ಮನಸ್ಸನ್ನು ಸುಶಿಕ್ಷಣಗೊಳಿಸಿ, ಆಗ ಮಾತ್ರ ನಾವು ಉದಾತ್ತವಾದುದನ್ನು ಸಾಧಿಸಲು ಸಾಧ್ಯವಾಗುತ್ತದೆ. ಯಾರೆಲ್ಲಾ ಇಂತಹ ಸದ್ಗುಣಗಳನ್ನು ವೃದ್ಧಿಸುತ್ತಿದ್ದಾರೋ ಅವರು ಶಾಂತಿ, ಸುಖ ಮತ್ತು ಸಂತೃಪ್ತಿಯನ್ನು ಅನುಭವಿಸುತ್ತಾರೆ. ಆಗ ಜೀವನವು ಸಹಾ ಮಹತ್ವದ ಜೀವಿತವೆನಿಸುತ್ತದೆ. ಆಗ ಪ್ರತಿಯೊಬ್ಬರಿಗೂ ಹೆಚ್ಚು ಅರ್ಥಪೂರ್ಣವಾಗಿ ಮತ್ತು ಹೆಚ್ಚು ಲಾಭದಾಯಕವಾಗಿ ಕಂಡುಬರುತ್ತದೆ. ನಿಜವಾದ ಪ್ರೀತಿಯು ಪಕ್ಷಪಾತವನ್ನು ಮೀರಿರುತ್ತದೆ. ಅಂತಹ ನೈಜ್ಯವಾದ ಪ್ರೀತಿಯಲ್ಲಿ ಯಾವುದೇ ಅಂಟುವಿಕೆ ಅಥವಾ ಸ್ವಾರ್ಥ ಇರುವುದಿಲ್ಲ ಮತ್ತು ಅಂತಹ ಅಪ್ಪಟ ಪ್ರೀತಿಯಲ್ಲಿ ಯಾವುದೇ ಕರಾರು ನಿಯಮಗಳಿರುವುದಿಲ್ಲ. ಅದು ಅವಸ್ಥಾತೀತ ವಾಗಿರುತ್ತದೆ. ನಾವು ಇಂತಹ ಪ್ರೀತಿಯನ್ನು ಸರ್ವ ಜೀವಿಗಳಲ್ಲಿ ಹಂಚಬಹುದು. ಆಗ ಅದು ಕರುಣಾ ಎನಿಸುತ್ತದೆ.
ನಾವು ಈಗ ಬೌದ್ಧರ ದೃಷ್ಟಿಕೋನದಂತೆ ಮಾನವನ ಘನತೆಯನ್ನು ಕುರಿತು ಅದರ ವಿಸ್ತಾರಗಳನ್ನೆಲ್ಲಾ ಸ್ಥಿರಪಡಿಸಿಕೊಳ್ಳೋಣ. ಯಾವ ಮಾನವೀಯ ಗುಣಗಳು ನಮನ್ನು ಘನತೆ ಮತ್ತು ಉದಾತ್ತತೆಗೆ ಏರಿಸುತ್ತವೆ? ಅವೆಂದರೆ: ಸದಾಚಾರದ, ನೈತಿಕತೆಯ, ವಿಚಾರಶೀಲ ಮತ್ತು ಚಿತ್ತಶುದ್ದಿಯಾದದ್ದಾಗಿದೆ. ಅದನ್ನೇ ನಾವು ದಿನನಿತ್ಯದ ಬಾಂಧವ್ಯಗಳಲ್ಲಿ ವಿನಿಮಯ ಮಾಡಿಕೊಳ್ಳುತ್ತೇವೆ. ಮಾನವರಾದ ನಾವು ನಮ್ಮ ಮನಸ್ಸನ್ನು ಅಭಿವೃದ್ಧಿಗೊಳಿಸಿದಾಗ ಆಗ ಸ್ಪಷ್ಟವಾಗಿ ಸತ್ಯ ಮತ್ತು ಮಿಥ್ಯದ ವ್ಯತ್ಯಾಸ ತಿಳಿಯುತ್ತದೆ. ಆಗ ನಮಗೆ ನಮ್ಮಲ್ಲಿರುವ ಯಾವ ಗುಣವು ಹೆಮ್ಮೆಗೆ ಯೋಗ್ಯ ಅಥವಾ ಯಾವ ಗುಣದಿಂದಾಗಿ ನಾಚಿಕೊಳ್ಳಬೇಕಾಗಿದೆ ಎಂದು ಅರಿವಾಗುತ್ತದೆ. ಇವೇ ಮಾನವೀಯ ಗುಣಗಳನ್ನು ನಾವು ಪಾಲಿಸುತ್ತಿದ್ದೇವೆ. ಅಂತಹ ಮೌಲ್ಯಗಳನ್ನು ನಾವು ಪಾಲಿಸುವುದ ರಿಂದಾಗಿಯೇ ನಾವು ಪ್ರಾಣಿಗಳಿಂದ ಭಿನ್ನರಾಗುತ್ತೇವೆ, ಮಾನವರೆನಿಸಿಕೊಳ್ಳುತ್ತೇವೆ.
ಮನುಸ್ಸ (ಮನುಷ್ಯ) ಎಂಬ ಪದಕ್ಕೆ ಧಾಮರ್ಿಕ ಗ್ರಂಥಗಳಲ್ಲಿ ಸಿಗುವ ವಿವರಣೆಯೇನೆಂದರೆ ಯಾರು ಮನಸ್ಸನ್ನು ಅಭಿವೃದ್ಧಿಗೊಳಿಸಿರುವವನು ಅವನು ಎಂದು. ಇಲ್ಲಿ ಅಭಿವೃದ್ಧಿ ಹೊಂದಿದ ಮನಸ್ಸೆಂದರೆ ಯಾವುದು ಶೀಲ, ಸದಾಚಾರ. ಹಾಗೆಯೇ ಯಾವುದು ದುಶ್ಶೀಲತನ, ಪಾಪ ಎಂದು ವಿವೇಚಿಸುವಂತಹ ಮನಸ್ಸಾಗಿದೆ. ಸದಾಚಾರ ಮತ್ತು ಅನಾಚಾರ, ಒಳಿತು ಮತ್ತು ಕೆಡಕು, ಕೆಟ್ಟದರಿಂದ ಒಳ್ಳೆಯದು. ಇವೆಲ್ಲವನ್ನು ವಿವೇಚಿಸುವಂತಹುದು ಮಾನವರ ಲಕ್ಷಣವಾಗಿದೆ. ಆದರೆ ಪ್ರಾಣಿಗಳು ಇವನ್ನೆಲ್ಲಾ ವಿವೇಚಿಸಲಾರೆವು. ಪ್ರಾಣಿಗಳು ಪ್ರವೃತ್ತಿಯಿಂದ ವತರ್ಿಸುತ್ತವೆ. ಆದರೆ ಕೇವಲ ಮಾನವರು ಮಾತ್ರವೇ ತಮ್ಮ ಮನಸ್ಸನ್ನು ಅಥವಾ ಚಿಂತಿಸುವ ಶಕ್ತಿಯನ್ನು ಅತಿ ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗಿರುತ್ತಾರೆ. ಇಂತಹ ಸಾಮಥ್ರ್ಯದಿಂದಲೇ ಅವರು ಬುದ್ಧತ್ವ ಪ್ರಾಪ್ತಿ ಮಾಡುತ್ತಾರೆ.
ಜಗತ್ತಿನಲ್ಲಿ ಧರ್ಮಗಳು ಆಗಮಿಸುವ ಮುಂಚೆ, ಮಾನವರು ಎರಡು ಮೌಲ್ಯಯುತ ಅಂಶಗಳಿಂದ ಮಾರ್ಗದಶರ್ಿತರಾದರು, ಸನಾತನ ಕಾಲದಿಂದಲೂ ಈ ಎರಡು ಅಂಶಗಳಿಂದಲೇ ಮಾನವನ ಘನತೆ ಎತ್ತಿಹಿಡಿಯಲ್ಪಟ್ಟಿತ್ತು. ಅವೆಂದರೆ ಹಿರಿ ಮತ್ತು ಒತ್ತಪ್ಪ ಎಂದು ಪಾಳಿಯಲ್ಲಿ ಕರೆಯುತ್ತಾರೆ. ಅಂದರೆ ಪಾಪಲಜ್ಜೆ ಮತ್ತು ಪಾಪಭಯ ಆಗಿದೆ.
ಈ ಪಾಪಭೀತಿ ಮತ್ತು ಪಾಪಲಜ್ಜೆಯು ಮಾನವನ ಪ್ರತಿ ಕ್ರಿಯೆಯಲ್ಲೂ ಆಡಳಿತ ಮಾಡುತ್ತದೆ. ಈ ಎರಡರಿಂದಲೇ ಮಾನವ ಪ್ರಾಣಿಗಳಿಂದ ವಿಭಿನ್ನವಾಗಿದ್ದಾನೆ. ಹಾಗಿದ್ದರೂ ಮಾನವರು ಇವೆರಡು ಗುಣಗಳ ನಿರ್ವಹಣೆಯಲ್ಲಿ ಸೋತಿದ್ದಾರೆ. ಯಾವಾಗ ಮಾದಕ ವಸ್ತುಗಳ ಪರಿಣಾಮ, ಮದ್ಯಪಾನ, ಕಾಮ, ಕ್ರೋಧ, ಲೋಭ, ಅಸೂಯೆ, ಸ್ವಾರ್ಥ ಮತ್ತು ದ್ವೇಷಗಳು ಉದಯಿಸುತ್ತವೋ ಆಗ ಅವರು ನಿಯಂತ್ರಣ ತಪ್ಪಿ ಮಾನವತ್ವದ ಘನತೆಯನ್ನು ಕಳೆದುಕೊಂಡಿದ್ದಾರೆ. ಪಾಪಲಜ್ಜೆ ಮತ್ತು ಪಾಪಭೀತಿ ಇಲ್ಲದಿದ್ದರೆ ಮಾನವರು ಪ್ರಾಣಿಗಳಿಗಿಂತ ನೀಚರಾಗುತ್ತಾರೆ.
ಮಾನವರು ವಿಕಾಸವಾದದ ಏಣಿಯಲ್ಲಿ ನಿಜಕ್ಕೂ ಮುಂಚೂಣಿಯಲ್ಲಿ ಇರುವರು. ಅವರು ವಿಜ್ಞಾನದಲ್ಲಿ, ಮನಶ್ಶಾಸ್ತ್ರದಲ್ಲಿ ಮತ್ತು ಭೌತಿಕತೆಯ ಬೆಳವಣಿಗೆಯಲ್ಲಿ ಮಹಾ ಯಶಸ್ಸು ಗಳಿಸಿಹರು. ಈಗಂತೂ ಅಸಂಖ್ಯಾತ ಧಾಮರ್ಿಕ ಆಚರಣೆಗಳಿವೆ. ವಿಧಿ, ಸಂಪ್ರದಾಯಗಳಿವೆ. ನಾನಾ ಮೂಢ ಆಚರಣೆಗಳಿವೆ, ಸಂಸ್ಕಾರಗಳಿವೆ. ಹರಕೆ ಮತ್ತು ಪ್ರಾರ್ಥನೆಗಳಿವೆ. ನಾವು ಅತ್ಯಂತ ನಾಗರಿಕರು ಎಂದು ಹೆಮ್ಮೆಪಡುವ ವೇಳೆಯಲ್ಲೇ ನಮ್ಮಲ್ಲಿರುವ ಕೆಲವರ ವರ್ತನೆಯಂತೂ ಪ್ರಾಣಿಗಳಿಗಿಂತ ನೀಚಕರವಾಗಿದೆ.
ಯಾವ ಮನುಷ್ಯನಲ್ಲಿ ಪಾಪಲಜ್ಜೆ ಮತ್ತು ಪಾಪಭೀತಿ ಇರುವುದೋ ಆತನು ಮಾನವರಲ್ಲೇ ಗೌರವಕ್ಕೆ ಪಾತ್ರನಾಗುತ್ತಾನೆ. ಆತನಲ್ಲಿ ದಯೆ, ಕರುಣೆ, ಸಹಾನುಭೂತಿಯಂತಹ ಸದ್ಗುಣಗಳಿರುತ್ತವೆ. ಆತನು ಪರರಿಗೆ ಹಿಂಸಿಸಲು ಹೆದರುತ್ತಾನೆ. ಆದರೆ ಪರರಿಗೆ ಸಹಾಯ ನೀಡಲು ಸದಾ ಸಿದ್ಧನಾಗಿರುತ್ತಾನೆ. ಇವು ಸಾಮಾನ್ಯವಾದರೂ ಆಧಾರವಾಗಿರುವಂತಹ ಮಾನವೀಯ ಮೌಲ್ಯಗಳಾಗಿವೆ. ಅವೆಲ್ಲವನ್ನು ನಾವು ಪಾಲಿಸುತ್ತ, ಎತ್ತಿಹಿಡಿಯಬೇಕಾಗಿದೆ. ನಾವು ಮಾನವೀಯ ಸದ್ಗುಣಗಳನ್ನು ವೃದ್ಧಿಸಬೇಕೆ ವಿನಃ ಉಲ್ಲಂಘಿಸಬಾರದು. ನಾವು ಪರರಿಗೆ ಸಹಾಯ ಮಾಡುವಾಗ ಅದಕ್ಕೆ ಸಂಬಂಧಪಟ್ಟಂತಹ ಮಹಾನ್ ಗುಣಗಳನ್ನು ವಿಕಸಿಸಬೇಕಾಗಿದೆ. ಅವೆಂದರೆ ಪ್ರಜ್ಞಾಶೀಲತೆ, ದಯೆ, ಅನುಕಂಪ, ಪ್ರಾಮಾಣಿಕತೆ, ಸರಳತೆ, ಸಭ್ಯತೆ, ವಿನಮ್ರತೆ ಮತ್ತು ಸಂತೃಪ್ತಿ. ನಾವು ಅಂತಹ ಅರ್ಹವಾದ ಮಾನವೀಯ ಮೌಲ್ಯಗಳನ್ನು ಪಡೆಯುವುದಕ್ಕಾಗಿ ಹೆಮ್ಮೆ ತಾಳಬೇಕಾಗಿದೆ. ಒಬ್ಬ ಭಿಕ್ಷುವಿಗೆ ಇಬ್ಬರು ಶಿಷ್ಯರಿದ್ದರು. ಒಬ್ಬ ತುಂಬಾ ಬುದ್ಧಿವಂತ ಮತ್ತು ಕ್ರಿಯಾಶೀಲ. ಮತ್ತೊಬ್ಬ ಸೋಮಾರಿ ಮತ್ತು ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲ. ಆಗ ಕ್ರಿಯಾಶೀಲ ಶಿಷ್ಯನು ಗುರುವಿನ ಬಳಿಗೆ ಬಂದು ಮತ್ತೊಬ್ಬ ಶಿಷ್ಯನು ಅಪ್ರಯೋಜಕನು, ಆತನು ಏನನ್ನು ಮಾಡುವುದಿಲ್ಲ ಮತ್ತು ಏನನ್ನೂ ಮಾಡದೆ ಸಮಯ ವ್ಯರ್ಥ ಮಾಡುತ್ತಿದ್ದಾನೆ. ಆತನನ್ನು ಹೊರಗೆ ಕಳುಹಿಸದಿದ್ದರೆ, ತಾನು ಹೊರಗೆ ಹೋಗುವೆನು ಎಂದು ಹೇಳಿದನು. ಅದಕ್ಕೆ ಗುರುವು ನೀನು ಹೊರಹೋದರೆ ನನಗೆ ಯಾವ ಆತಂಕವೂ ಇಲ್ಲ, ಏಕೆಂದರೆ ನೀನು ಎಲ್ಲೇ ಹೋದರೂ ಜನರು ನಿನ್ನನ್ನು ಸ್ವಾಗತಿಸುವರು ಮತ್ತು ನಿನಗೂ ಅವರೊಂದಿಗೆ ಹೇಗೆ ವತರ್ಿಸಬೇಕೆಂದು ತಿಳಿದಿದೆ. ಆದರೆ ಈ ಮುಗ್ಧನಿಗೆ ನಾನು ಹೊರಹೋಗು ಎಂದು ಹೇಳಿದರೆ ಆತನು ತೊಂದರೆಗೆ ಸಿಲುಕುವನು ಹಾಗು ಆತನಿಗೆ ಸಹಾಯ ಮಾಡುವವರು, ಸ್ವಾಗತಿಸುವವರು ಯಾರೂ ಇರುವುದಿಲ್ಲ ಮತ್ತು ಆತನಿಗೂ ಸಹಾ ಏನು ಮಾಡಬೇಕೆಂದು ತಿಳಿದಿರುವುದಿಲ್ಲ. ಆದ್ದರಿಂದಾಗಿ ಆತನ ಬಗ್ಗೆ ನನಗೆ ಅನುಕಂಪವಿದೆ, ಆತನು ಇಲ್ಲೇ ಇರಲಿ ಎಂದು ಹೇಳಿದನು. ನಿಜಕ್ಕೂ ನೈಜ್ಯ ಗುರುವಿನ ಮನೋಭಾವ ಹೀಗೆಯೇ ಇರುತ್ತದೆ.
ಮಾನವನ ಸ್ವಭಾವದಲ್ಲಿ ಕೆಲವೊಂದು ಲಕ್ಷಣಗಳಿರುತ್ತವೆ. ಅವನ್ನು ನಾವು ಜಾಗರೂಕತೆಯಿಂದ ರಕ್ಷಿಸಿ, ಪೋಷಿಸಿ ಉಪಯುಕ್ತ ಮಾನವೀಯ ಮೌಲ್ಯಗಳನ್ನಾಗಿ ಪರಿವತರ್ಿಸಬೇಕಾಗಿದೆ. ನೇರವಾಗಿ ಹೇಳುವುದಾದರೆ ಈ ಲಕ್ಷಣಗಳನ್ನು ಮೂರು ಸ್ವಭಾವವಾಗಿ ವಿಂಗಡಿಸಬಹುದು. ಅವೆಂದರೆ ನಮ್ಮ ಮೃಗೀಯ ಸ್ವಭಾವ, ನಮ್ಮ ಮಾನವ ಸ್ವಭಾವ ಮತ್ತು ದಿವ್ಯ ಸ್ವಭಾವ. ಈ ಮೂರು ಲಕ್ಷಣಗಳು ನಮ್ಮ ವರ್ತನೆಯ ಮೇಲೆ ವಿವಿಧ ಶೇಕಡಾ ಪರಿಮಾಣಗಳಿಂದ ನಮ್ಮ ಮೇಲೆ ಪರಿಣಾಮ ಬೀರುತ್ತವೆ. ನಾವೇನಾದರೂ ನಮ್ಮ ಮೃಗೀಯ ಸ್ವಭಾವವನ್ನು ಯಾವುದೇ ನಿಯಂತ್ರಣವಿಲ್ಲದೆ ತ್ಯಜಿಸಿ ಬಿಟ್ಟರೆ ನಾವು ಸಮಾಜಕ್ಕೆ ಹೊಣೆಗಾರಿಕೆಯುಳ್ಳವರಾಗುತ್ತೇವೆ.
ನಮ್ಮ ಮೃಗೀಯ ಸ್ವಭಾವವನ್ನು ನಿಯಂತ್ರಿಸಲು ಧಮ್ಮವು ಪ್ರಧಾನವಾದ ಸಾಧನವಾಗಿದೆ. ಧಾಮ್ಮಿಕ ನಾಯಕರ ಉದಾತ್ತ ಬೋಧನೆಗಳು ಮಾನವನ ವರ್ತನೆಯ ಮೆಲೆ ದಾರಿದೀಪವಾಗಿ ಮಾರ್ಗದರ್ಶನ ನೀಡುತ್ತವೆ.
ಸುಪ್ತ ಮಾನವಿಯ ಸ್ವಭಾವವು ವೃದ್ಧಿಸಲು, ಪೋಷಿಸಲು ಮತ್ತು ವಿಕಸಿಸಲು ಧಮ್ಮವು ಸಾಧನವಾಗಿದೆ. ನಮ್ಮ ಮಾನವೀಯ ಸ್ವಭಾವದ ಸಂರಕ್ಷಣೆ ಮತ್ತು ವಿಕಾಸದಿಂದ ನಾವು ದಿವ್ಯ ಸ್ವಭಾವದ ಗುರಿಯನ್ನು ಸಾಧಿಸಬಹುದು. ದಿವ್ಯ ಸ್ವಭಾವದ ಪ್ರಾಪ್ತಿಯಿಂದಾಗಿ ನಮ್ಮ ತುಚ್ಛ ಭಾವೋದ್ರೇಕಗಳಾದ ಲೋಭ, ಕಾಮ, ಕ್ರೋಧ, ದ್ವೇಷ, ಅಸೂಯೆ, ಇನ್ನಿತರ ಕಶ್ಮಲಗಳು ತೊರೆದುಹೋಗುತ್ತವೆ. ಹೀಗೆ ಮಾನವರು ಹೆಚ್ಚು ಉದಾತ್ತರೂ ಮತ್ತು ಉನ್ಮತವಾದ ಗೌರವಕ್ಕೆ ಅರ್ಹರೂ ಆಗುತ್ತಾರೆ. ದಿವ್ಯ ಸ್ವಭಾವವು ಯಾವುದೆಲ್ಲದರ ಮೇಲೆ ಅವಲಂಬಿತವಾಗಿರುತ್ತದೆ ಎಂದರೆ ಮೈತ್ರಿಯ ವೃದ್ಧಿಯ ಮೇಲೆ ಅಂದರೆ ನಿಸ್ವಾರ್ಥ ಅದ್ವೇಷ, ಸಾರ್ವತ್ರಿಕ ಪ್ರೀತಿ ಅಥವಾ ಸರ್ವರ ಹಿತಾಕಾಂಕ್ಷೆಯ ಪ್ರೀತಿ, ಕರುಣೆ, ಪರರ ಉನ್ನತಿಯ ಅಭಿನಂದನಾ ಆನಂದದ ಮುದಿತಾ ಮತ್ತು ಉಪೇಕ್ಷಾ (ಉಪೇಕ್ಖಾ) ಅಂದರೆ ಸುಖ-ದುಃಖಗಳಾದ ಲಾಭ-ನಷ್ಟ, ಸ್ತುತಿ-ನಿಂದೆಗಳೆಲ್ಲದರಲ್ಲಿ ಸಮಚಿತ್ತತೆಯಿಂದಿರುವುದು. ಇದಕ್ಕೆ ಉದಾತ್ತ ಸ್ಥಿತಿಗಳು ಅಥವಾ ಬ್ರಹ್ಮವಿಹಾರ ಎಂದೂ ಕರೆಯುತ್ತಾರೆ. ಈ ರೀತಿಯಲ್ಲಿ ಉದಾತ್ತ ಸ್ಥಿತಿಗಳು ನೆಲೆಗೊಳ್ಳುವುದರಿಂದ ದಿವ್ಯ ಸ್ವಭಾವ ಸ್ಥಾಪಿತವಾಗುತ್ತದೆ.
ಹಾಸ್ಯದ ವಿಷಯವೇನೆಂದರೆ ಇಂದಿಗೂ ಬಹಳಷ್ಟು ಮಂದಿಯು ಕೇವಲ ಪ್ರಾರ್ಥನೆಯಿಂದ ಅಥವಾ ಪೂಜೆಯಿಂದ ಮತ್ತು ಕೆಲವು ವಿಧಿ ಆಚರಣೆಗಳಿಂದ ಒಬ್ಬನ ದಿವ್ಯಗುರಿಯು ಪ್ರಾಪ್ತಿಯಾಗುವುದು ಎಂಬ ಮಿಥ್ಯಾ ಗ್ರಹಿಕೆಗಳಲ್ಲೇ ಜೀವಿಸುತ್ತಿದ್ದಾರೆ. ನಮ್ಮೆಲ್ಲರ ಕರ್ತವ್ಯಗಳು ಏನೆಂದರೆ ನಾವು ಸತ್ಯದ, ವಾಸ್ತವದ ಅಡಿಯಲ್ಲಿ ಜೀವಿಸುವುದೇ ಹೊರತು ಕಾಲ್ಪನಿಕತೆಯಲ್ಲಲ್ಲ ಮತ್ತು ಅತ್ಯಂತ ಸಭ್ಯ ಮಾನವರಾಗಿ ಬಾಳುವುದು.
ದಿವ್ಯವಾದ ಸ್ಥಿತಿಗಳನ್ನು ಪ್ರಾಪ್ತಿಮಾಡಲು ನಾವು ನಮ್ಮ ಮಾನವೀಯ ಸ್ವಭಾವವನ್ನು ವೃದ್ಧಿಸಿ ವಿಕಸಿಸಬೇಕಾಗಿದೆ. ನಾವೆಲ್ಲರೂ ಎಲ್ಲಾ ಮಾನವೀಯ ಮೌಲ್ಯಗಳನ್ನು ಇಡೀ ಮಾನವತೆಯ ಸುಖ ಹಾಗು ಕ್ಷೇಮಕ್ಕಾಗಿ ಅಭ್ಯಸಿಸಲೇ ಬೇಕಾಗಿದೆ. ನಾವು ಎಲ್ಲಾರೀತಿಯ ಒಳಿತನ್ನು ಮಾಡಲೇಬೇಕು. ಹಾಗೆಯೇ ಎಲ್ಲಾ ಕೆಡುಕನ್ನು ತೆಗೆದುಹಾಕಬೇಕಾಗಿದೆ.
ಜಗತ್ತಿನಲ್ಲಿ ಧರ್ಮಗಳು ಇರುವುದು ಮತ್ತು ಬೆಳವಣಿಗೆಯಾಗಿರುವುದೇಕೆಂದರೆ ಶಾಂತಿಯಿಂದ ಮತ್ತು ಸೌಹಾರ್ದತೆಯಿಂದ ಜೀವಿಸಲು, ಮಾರ್ಗದಶರ್ಿಯಾಗಿ ಹಾದಿ ತೋರಿಸಲು ಆಗಿದೆ. ಎಲ್ಲಾ ಧರ್ಮಗಳು ತಮ್ಮ ಹಿಂಬಾಲಕರಿಗೆ ಜೊತೆಯಲ್ಲೇ ಜೀವಿಸಿ, ತಿನ್ನಿ, ಕೆಲಸಮಾಡಿ, ಪರಸ್ಪರ ಗೌರವಿಸಿ, ಅರ್ಥ ಮಾಡಿಕೊಳ್ಳಿ ಮತ್ತು ಸಭ್ಯರಾಗಿ ಬಾಳಿ ಎಂದು ಮಾರ್ಗದರ್ಶನ ನೀಡಬೇಕಾಗಿದೆ. ಸಹ ಧಾಮರ್ಿಕರಾದ ನಾವು ಸಹಾ ಎಲ್ಲರಲ್ಲಿ ಬೆರೆತು, ಸೌಹಾರ್ದತೆಯಿಂದಿದ್ದು, ಯಾವುದೇ ದ್ವೇಷವಿಲ್ಲದೆ, ಅಸೂಯೆಯಿಲ್ಲದೆ, ಅಹಂಕಾರದ ಛಾಯೆಯೂ ಇಲ್ಲದೆ ಜೀವಿಸಬೇಕಾಗಿದೆ. ಬೌದ್ಧ ಧರ್ಮವು ಇಂತಹ ಬುದ್ಧಿವಾದ ನೀಡುತ್ತದೆ.
ಜೀವನದ ಉದ್ದೇಶವೆಂದರೆ ಸ್ವಾರ್ಥದ ಮನೋಭಾವವನ್ನು ನಿರ್ವಹಿಸುವುದಲ್ಲ. ಬದಲಾಗಿ ಪರರ ಸೇವೆ ಮಾಡುವುದು. ಇಡೀ ಮಾನವತೆಗೆ ಸೇವೆ ಸಲ್ಲಿಸುವುದು ಎಂದು ಪುರಾತನ ತತ್ವಶಾಸ್ತ್ರಗಳಲ್ಲಿ ಸ್ಪಷ್ಟವಾಗಿಯೇ ಪ್ರಸ್ತಾಪಿಸಲಾಗಿದೆ ಮತ್ತು ನಮೂದಿಸಲಾಗಿದೆ. ಜಗತ್ತಿನ ಶ್ರೇಷ್ಠ ಮತ್ತು ಜ್ಞಾನಿಗಳಾದ ಮಹಾಪುರುಷರು ತಮ್ಮ ತೃಪ್ತಿ ಮತ್ತು ಮಹೋನ್ನತೆಯನ್ನು ಹೊಂದಿರುವುದು ಪರರಿಗೆ ಹಿತ ಮತ್ತು ಸುಖವನ್ನುಂಟು ಮಾಡಿರುವುದರಿಂದಲೇ ಆಗಿದೆ. ಪರರಿಗೆ ಸೇವೆ ಸಲ್ಲಿಸುತ್ತಾ, ನಮ್ಮ ಸುಪ್ತ ಸದ್ಗುಣಗಳನ್ನು ವಿಕಾಸಿಸುತ್ತ ನಾವೆ ಲಾಭ ಪಡೆಯುವೆವು. ಹೀಗಾಗಿ ಪರರಿಗೆ ಸೇವೆ ಸಲ್ಲಿಸುತ್ತಾ ನಾವು ನಮಗೆಯೇ ಸೇವೆ ಸಲ್ಲಿಸುತ್ತಿಹೆವು. ಯಾವಾಗ ನಾವು ಪರರನ್ನು ದುಃಖದಿಂದ ಬಿಡಿಸುವೆವೋ ಆಗ ನಮ್ಮ ಸುಖ ಮತ್ತು ಚಿತ್ತ ಪ್ರಶಾಂತತೆಯನ್ನು ವೃದ್ಧಿಸುತ್ತಿರುವೆವು.


2.14 ಜೀವನದ ಸ್ವರೂಪ

ನಾವು ಜೀವಿಸಲು ಸಿದ್ಧತೆ ನಡೆಸುತ್ತಿರುವಾಗಲೇ, ಜೀವನವು ತಾನಾಗಿಯೇ ನಷ್ಟಗೊಳ್ಳುವುದು ಎಂದು ವಿದ್ವಾಂಸರೊಬ್ಬರು ಹೇಳಿದ್ದಾರೆ. ಸ್ವಾರ್ಥದ ಆಸೆಗಳನ್ನು ಸೃಷ್ಟಿಸಿದ್ದಕ್ಕಾಗಿ, ಭಯದ ಮತ್ತು ಚಿಂತೆಯ ಬೆಲೆ ಕಟ್ಟಬೇಕಾಗಿದೆ ಎಂದು ಮತ್ತೊಬ್ಬ ಧಾಮರ್ಿಕರು ಹೇಳಿದ್ದಾರೆ. ಮಾನವನ ಜನ್ಮವೆಂದರೆ ದುಃಖದ ಜನ್ಮವಾಯಿತೆಂದೇ ಅರ್ಥ. ಆತನು ಜೀವನಕ್ಕೆ ಹತಾಶನಾಗಿ ಅಂಟಿಕೊಳ್ಳುವಷ್ಟು ಕಾಲವು ಆತನು ಮೂರ್ಖನಾಗಿಯೇ ಇರುತ್ತಾನೆ. ಭವಿಷ್ಯದಲ್ಲಿ ಉಳಿಯುವ ತೀವ್ರ ದಾಹದಿಂದಾಗಿ ಆತನು ವರ್ತಮಾನದಲ್ಲಿರಲು ಅಸಮರ್ಥನಾಗುತ್ತಾನೆ ಎಂದು ಚೀನಾದ ತತ್ವಜ್ಞಾನಿಯೊಬ್ಬನು ಹೇಳುತ್ತಾನೆ. ನಾವು ಹಿಂದೆ ಏನಾಗಿದ್ದೇವೆಯೋ ಅದರ ಫಲಿತಾಂಶವಾಗಿದ್ದೇವೆ ಮತ್ತು ಇಂದೇನಾಗಿರುವೆವು ಅದರ ಫಲಿತಾಂಶವಾಗಿ ಮುಂದಿರುವೆವು ಎಂದು ಬುದ್ಧ ಭಗವಾನರು ಹೇಳಿದ್ದಾರೆ. ನಾವು ಈ ಎಲ್ಲಾ ದೃಷ್ಟಿಕೋನಗಳನ್ನು ಪರಿಗಣಿಸಿದಾಗ ನಮಗೆ ಜೀವನದ ನೈಜಸ್ವರೂಪ ಮತ್ತು ಅದರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲು ಸುಳಿವು ಸಿಗುತ್ತದೆ.
ಒಂದುವೇಳೆ ಜೀವನದ ಉದ್ದೇಶ ಕೇವಲ ಇಂದ್ರೀಯಗಳ ಸಂತೋಷಗೊಳಿಸು ವಿಕೆಯೇ ಆದರೆ, ಆಗ ನಾವು ಅವುಗಳಿಂದ ಉದಯಿಸುವ ಹಲವರು ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಬೇಕು. ವಿಜ್ಞಾನಿಗಳು ಮಾನವನ ಅನುಕೂಲಕ್ಕಾಗಿ ಹಲವಾರು ಅದ್ಭುತ ವಿಷಯಗಳನ್ನು ಸಂಶೋಧಿಸಿದ್ದರೂ, ಅಥರ್ೈಸಿಕೊಳ್ಳಲಿಲ್ಲ ಎಂದೇ ಹೇಳಬಹುದು. ಆದ್ದರಿಂದಲೇ ಖ್ಯಾತ ವಿಜ್ಞಾನಿಯೊಬ್ಬರು ಹೀಗೆ ಹೇಳುತ್ತಾರೆ:
ಜೀವನಕ್ಕೆ ಉದ್ದೇಶವಿದೆಯೇ?
ಜೀವನದ ಉದ್ದೇಶವಾದರೂ ಏನು?
ಏನು ಅಥವಾ ಎಲ್ಲಿ ಅಥವಾ ಯಾವಾಗ?
ಆಕಾಶದಿಂದ ಬ್ರಹ್ಮಾಂಡ ಉಗಮಿಸಿತು
ಅಲ್ಲಿಂದ ಸೂರ್ಯ, ಅಲ್ಲಿಂದ ಪೃಥ್ವಿ, ಅಲ್ಲಿಂದ ಜೀವನ
ಅಲ್ಲಿಂದಲೇ ಮಾನವ ಬಂದ ಮತ್ತು ಹಲವು ಬರಲಿವೆ.
ಆದರೆ ಉದ್ದೇಶದ ಬಗ್ಗೆ ಹೇಳುವುದಾದರೆ
ಯಾರದು ಅಥವಾ ಯಾವಾಗಿನಿಂದ ? ಏಕೆ ? ಯಾವುದೂ ಇಲ್ಲ.
ಮಾನವನು ನೈಜ್ಯ ಮಾನವನಂತೆ ವತರ್ಿಸುತ್ತಿಲ್ಲ ಎಂದೇ ಕಾಣುತ್ತಿದೆ. ಬೌದ್ಧ ಧಮ್ಮದ ಪ್ರಕಾರ ನಿತ್ಯ ಅಸ್ತಿತ್ವವು ಇಲ್ಲ, ಆದರೆ ವ್ಯಕ್ತತೆಯಿದೆ. ವಾಸ್ತವವಾಗಿ ಅಸ್ತಿತ್ವದಲ್ಲಿರುವುದು, ಶಕ್ತಿಯ ಆಧಾರದಿಂದಾಗಿ ಕ್ಷಣದಿಂದ ಕ್ಷಣಕ್ಕೆ ಇರುವಿಕೆಯಿದೆ, ಮಾನವನ ಜೀವನವೂ ಯಾವುದೇ ಅಲೌಕಿಕ ಜೀವಿಯಿಂದ ಸೃಷ್ಟಿಯಾಗಲಿಲ್ಲ. ಹಾಗೆಯೇ ಪ್ರಾಯೋಗಿಕ ಗಿನಿ ಹಂದಿಯಿಂದಲೂ ಉದಯಿಸಲಿಲ್ಲ, ಜೀವನಕ್ಕೆ ತನ್ನದೆ ಆದ ವೈಯಕ್ತಿಕ ಅಸ್ತಿತ್ವವಿದೆ.
ನಮ್ಮ ಅಜ್ಞಾನ ಮತ್ತು ಪ್ರಬಲ ಬಯಕೆಗಳಿಂದಾಗಿ ನಾವು ಜೀವನದ ನೈಜ್ಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲಾರೆವು. ಆದ್ದರಿಂದಲೇ ನಾವು ಈ ಜಗತ್ತಿನಲ್ಲಿ ದುಃಖವನ್ನು ಅನುಭವಿಸಿದರೂ ಸಹಾ ಇರಲು (ದೀಘರ್ಾಯುವಿಗಾಗಿ ಅಥವಾ ಮುಂದಿನ ಜನ್ಮಕ್ಕೂ)  ಬಯಸುವೆವು. ಅದರಿಂದಾಗಿ ನಾವು ಯೋಗ್ಯ ಅರಿವಿಲ್ಲದೆ ಜೀವನದ ಸ್ಪಷ್ಟ ಉದ್ದೇಶ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಸಂಶೋಧಿಸಲು ಸಹಾ ನಮಗೆ ಅಸಾಧ್ಯವಾಗಿದೆ.
ಜೀವನವು ದೇಹ ಮತ್ತು ಮನಸ್ಸಿನ ಸಂಯೋಜನೆಯಾಗಿದೆ. ಇವೆರಡರ ಸಂಯೋಜನೆಯಿಂದ ಜೀವಿಯು ಅಸ್ತಿತ್ವಕ್ಕೆ ಬರುವುದು. ನಂತರ ವಿಘಟಿತವಾಗುವರೆಗೂ ಇದು ಪರಿವರ್ತನೆಯಾಗುತ್ತ ಹೋಗುವುದು. ಹಾಗಿದ್ದರೂ ಸಹಾ ವಿಘಟಿತವಾದ ಅಣುಗಳು ಪುನಃ ಧಾತುಗಳಾಗಿ ಅಥವಾ ದ್ರವ್ಯವಾಗಿ ಮಾನಸಿಕ ಶಕ್ತಿಯೊಂದಿಗೆ ಒಡಗೂಡಿ ಪುನಃ ನಾನಾರೀತಿಯ ಆಕಾರಗಳಲ್ಲಿ ಪುನಃ ಕಾಣಿಸಿಕೊಳ್ಳುವುದು. ತನ್ನ ಹಿಂದಿನ ಜನ್ಮ ವರ್ತನೆಯ ಪರಿಣಾಮ್ಕಕೆ ತಕ್ಕಂತೆ ಅದು ವಿಭಿನ್ನ ಕ್ಷೇತ್ರಗಳಲ್ಲಿ ಜೀವನ ಪುನಃ ಪ್ರಾರಂಭಿಸುತ್ತದೆ. ಈ ಬಗೆಯ ಜೀವನ ಪ್ರವಾಹವು ಕರ್ಮಶಕ್ತಿಯು ಇರುವವರೆಗೂ ಮತ್ತು ಇರುವಿಕೆಯ ದಾಹವಿರುವವರೆಗೂ ಅನಂತವಾಗಿ ಸಾಗುತ್ತಲೇ ಇರುವುದು.


2.15 ಇಂದ್ರೀಯ ಸುಖಾಸಕ್ತಿ ಮತ್ತು ಪರಿಸರ

ಜೀವನದ ಭೌತಿಕ ಶರೀರವನ್ನು ನೊರೆಯ ರಾಶಿಗೆ ಸಮೀಕರಿಸಿದ್ದಾರೆ. ಅದರಲ್ಲಿ ವೇದನೆಗಳು ಬುರುಡೆಯಂತೆ, ಗ್ರಹಿಕೆಯು ಮರೀಚಿಕೆಯಂತೆ, ಮನೋ ನಿಮರ್ಿತಿಗಳು (ಸಂಖಾರ) ಬಾಳೆಯ ಗಿಡದಂತೆ ಮತ್ತು ಅರಿವು (ವಿನ್ಯಾನ) ಭ್ರಮೆಯಂತೆ ಎಂದು ಹೋಲಿಸಿದ್ದಾರೆ. ಇಂತಹ ಸಾಮ್ಯತೆಯ ಜೀವನದ ವಿಶ್ಲೇಷಣೆಯಿಂದಾಗಿ ಜೀವನದ ಸ್ಪಷ್ಟತೆಯಾಗಲಿ ಅಥವಾ ಉದ್ದೇಶವಾಗಲಿ ಖಚಿತಪಡಿಸುವುದು ಅತಿ ಕಷ್ಟಕರವಾಗಿದೆ.
ಈ ರೀತಿಯ ಜೀವನದ ವಿಶ್ಲೇಷಣೆಯಿಂದ ಹಲವಾರು ಧಾಮರ್ಿಕ ನಂಬಿಕೆಯುಳ್ಳವರೊಂದಿಗೆ ಪ್ರತಿಪಾದಿಸುವುದು ನಿಜಕ್ಕೂ ದೊಡ್ಡ ಸವಾಲಾಗಿದೆ. ಏಕೆಂದರೆ ಬುದ್ಧರ ಪ್ರಕಾರ ಆತ್ಮದಂತಹ ನಿತ್ಯ ಜೀವನವಿಲ್ಲ, ನಿತ್ಯ ಅಸ್ತಿತ್ವವಿಲ್ಲ, ಬದಲಾಗದ, ವಿಘಟಿತವಾಗದಂತಹುದು ಯಾವುದೂ ಇಲ್ಲ.
ದೇಹವೆಂದರೆ ರಸಾಯನಿಕಾ ದಾತುಗಳಲ್ಲಿ ನಿರಂತರ ಬದಲಾಗುತ್ತಿರುವ ಸಂಯೋಜನೆಗಳ ಸರ್ವಸಾಧಾರಣ ಭಾವನಾರೂಪವಲ್ಲದೆ ಮತ್ತೇನೂ ಅಲ್ಲ. ಜೀವನವೆಂದರೆ ಒಂದು ಚುಕ್ಕೆಯಲ್ಲಿ ಸದಾ ಹರಿಯುವ ನದಿಯಂತೆ. ಆ ಭಾಗವನ್ನು ಮಹಾಜೀವನ ಪ್ರವಾಹಕ್ಕೆ ಕಾಣಿಕೆ ನೀಡುತ್ತದೆ. ಈ ಬ್ರಹ್ಮಾಂಡದಲ್ಲಿ ಪ್ರಧಾನವಾಗಿ ಐದು ಸ್ವಾಭಾವಿಕ ನಿಯಮಗಳಿವೆ. ಹೇಳುವುದಾದರೆ ಉತುನಿಯಮ (ಋತುಗಳ ನಿಯಮ) ಬೀಜನಿಯಮ (ಬೀಜಗಳ (ಸಸ್ಯ ಶಾಸ್ತ್ರದ) ನಿಯಮ), ಚಿತ್ತನಿಯಮ (ಮಾನಸಿಕ ಶಕ್ತಿಗಳ ನಿಯಮ) ಕಮ್ಮನಿಯಮ (ಕರ್ಮಶಕ್ತಿಯ ನಿಯಮ) ಮತ್ತು ಧಮ್ಮ ನಿಯಮ (ಸಾರ್ವತ್ರಿಕ ನಿಯಮಗಳು).
ಮಾನವನು ತನ್ನ ಲಾಭಕ್ಕಾಗಿ, ಪರಿಸರವನ್ನು ಬದಲಿಸಲು ತನ್ನ ಅಂತಜರ್ಾತ ಶಕ್ತಿಗಳಾದ ತರ್ಕ, ಬುದ್ಧಿಶಕ್ತಿ ಮತ್ತು ಸೃಜನಶೀಲತೆಗಳನ್ನು ಬಳಸುತ್ತಾನೆ ಎಂಬುದರಲ್ಲಿ ಯಾವುದೇ ರಹಸ್ಯವಿಲ್ಲ. ಆದರೆ ಮಾನವನಿಗೆ ತನ್ನ ನೈತಿಕ ಬಲದಿಂದಲೂ ಸಹಾ ಪರಿಸರವನ್ನು ಪರಿವತರ್ಿಸಬಹುದು. ಹಾಗು ತನ್ನ ಸುಖ ಅಥವಾ ದುಃಖಕ್ಕೆ ಈಡಾಗುವಂತಹ ಪರಿಸರವನ್ನು ತಾನು ಇಷ್ಟಪಡಲಿ ಅಥವಾ ಪಡದಿರಲಿ ನಿಮರ್ಿತವಾಗುತ್ತದೆ ಎಂಬುದನ್ನು ಆತನು ಅರಿತಿಲ್ಲ.
ಬ್ರಹ್ಮಾಂಡದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ತೋರಿಸುವುದೇನೆಂದರೆ ಜಗತ್ತು ಚಲನೆಗಳ ಸರಣಿಯ ಅಖಂಡ ನಿರಂತರತ್ವವಲ್ಲದೆ ಬೇರೇನಿಲ್ಲ. ಇದಕ್ಕೆ ಸಂಬಂಧಿಸಿದಂತೆ ಐನ್ಸ್ಟೈನ್ ಹೀಗೆ ಹೇಳಿದ್ದಾನೆ: ಎಲ್ಲಾ ಭೌತ ದ್ರವ್ಯಗಳು ಅಲೆಗಳಿಂದ ರಚಿತವಾಗಿದೆ ಮತ್ತು ನಾವು ಸಹಾ ಅಲೆಗಳ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ.
ನಾವು ಸಹಾ ಅದೇ ಅಲೆಗಳ ಭಾಗವಾಗಿದ್ದೇವೆ, ಮಾನವನು ಅರಿಯಲು ಸಾಧ್ಯವಾದರೆ: ಆತನ ಶರೀರದ ಸ್ಥಿತಿಗಳನ್ನು, ಆತನ ಸಂವೇದನೆಗಳನ್ನು, ಆತನ ಚಿತ್ತ ಸ್ಥಿತಿಗಳನ್ನು, ಆತನ ಮಾನಸಿಕ ವಿಷಯಗಳನ್ನು, ಅಂತಹ ಜಾಗ್ರತತೆಯು ಆತನ ಜೀವನಕ್ಕೆ ಉದ್ದೇಶವೇನಾದರೂ ಇದ್ದರೆ, ಅದನ್ನು ಅನ್ವೇಷಿಸುವೆಡೆಗೆ ಕರೆದೊಯ್ಯುತ್ತದೆ.
ಹಲವಾರು ಜನರು ದೊಡ್ಡವರಾದರೂ ಮಾನವ ಶರೀರದ ಸೌಂದರ್ಯಕ್ಕೆ ಅತಿಯಾಗಿ ಅಂಟಿರುವವರು, ಆಕರ್ಷಣೆಯನ್ನು ಟಿವಿ ಮತ್ತು ಸಿನಿಮಾಗಳಲ್ಲಿ ಬಹುಮಟ್ಟಿಗೆ ಪ್ರದಶರ್ಿಸುತ್ತಿರುವವರು. ಯುವ ಮತ್ತು ಸುಂದರ ಸಿನಿಮಾ ತಾರೆಯರು ಈ ಸಂದೇಶವನ್ನು ಸದಾ ಸಾರುತಿಹರು. ಏನೆಂದರೆ ಎಲ್ಲಿಯವರೆಗೆ ಸುಂದರವಾಗಿ ಮತ್ತು ಯೌವ್ವನದಿಂದ ಕೂಡಿರುವರೋ ಅಲ್ಲಿಯವರೆಗೆ ಅವರು ಸುಖವಾಗಿರುವರು. ಯುವಕರಿಗೆ ಈ ಭೋಗ ಸಿದ್ಧಾಂತವು ಚೆನ್ನಾಗಿಯೇ ಕಾಣಬಹುದು. ಆದರೆ ಅದೇ ಸಿನಿಮಾ ತಾರೆಯರಿಗೆ ವಯಸ್ಸಾದ ಮೇಲೆ ಏನಾಗುವುದು? ಏನು ಅನಿಸುವುದು? ಕೇವಲ ಮುಷ್ಟಿಯಷ್ಟು ಜನರು ಮಾತ್ರ ಯೌವ್ವನ ತೃಪ್ತಿಕರ ಎಂದು ಸಿದ್ಧರಾಗುತ್ತಾರೆ.
ಬಹಳಷ್ಟು ಇತರರು ಮುದಿತನವನ್ನು ತಡೆಯಲು ನಾನಾರೀತಿಯಲ್ಲಿ ಪ್ರಯತ್ನಿಸುತ್ತಿರುತ್ತಾರೆ. ಆದರೆ ಅಲ್ಪ ಯಶಸ್ವಿಗಳಾಗುತ್ತಾರೆ. ತಮ್ಮ ಗತಕಾಲದ ಸೌಂದರ್ಯ ಮತ್ತು ಕೀತರ್ಿಗೆ ಅತಿಯಾಗಿ ಅಂಟಿಕೊಂಡು ಕೆಲವರಂತು ಮನೋ ವ್ಯಾಕುಲಕ್ಕೆ ಗುರಿಯಾಗುತ್ತಾರೆ. ಅವರು ಭೂತಕಾಲದ ಸ್ಮರಣೆಯಲ್ಲೇ ಸಮಪರ್ಿತರಾಗಿ, ಅದನ್ನೇ ನಿಜವೆಂದು ನಂಬಿ, ವರ್ತಮಾನದಲ್ಲಿರುವುದಿಲ್ಲ. ಸುಂದರವಾಗಿಯೇ ಹುಟ್ಟಿದರೂ ಸಹಾ, ತನ್ನ ಸೌಂದರ್ಯ ಚ್ಯುತವಾಗುವ ಭೀತಿಯಿಂದಲೇ ಕಂಗೆಡುವುದು ಎಂತಹ ಕರುಣಾಜನಕ ದೃಶ್ಯವಾಗಿದೆ. ನಮ್ಮ ಮಾನವ ಶರೀರದ ಬಗ್ಗೆ ಆಸಕ್ತಿಯನ್ನು ಬೆಳೆಸುವುದಕ್ಕೆ ಬುದ್ಧ ಧಮ್ಮವು ಪ್ರೋತ್ಸಾಹಿಸುವುದಿಲ್ಲ.
ಆದರೆ ಹಾಗೆಯೇ ನಾವು ಶರೀರವನ್ನು ಅಲಕ್ಷಿಸಬಾರದು. ನಾವು ಅದನ್ನು ಜೋಪಾನವಾಗಿ ಪರಿಗಣಿಸಬೇಕು ಮತ್ತು ವೈಯಕ್ತಿಕವಾಗಿ ಶುಚಿಯಾಗಿ, ಸ್ವಚ್ಛವಾಗಿಡಬೇಕು. ಆದರೆ ಅಷ್ಟಕ್ಕೆ ಸೀಮಿತವಾಗದೆ ಚಿತ್ತದ ಶುದ್ಧಿಗಾಗಿ ಗಮನನೀಡಬೇಕು ಮತ್ತು ಮಾನವನ ಘನತೆ ವೃದ್ಧಿಸಬೇಕು. ಸ್ವಸ್ಥತೆಯುತ ಶರೀರವೇ ಸ್ವಸ್ಥಮನಸ್ಸಿಗೆ ಸಾಧನವಾಗಿದೆ.


2.16 ಧಮ್ಮ (ಆಧ್ಯಾತ್ಮಿಕ) ಮೌಲ್ಯಗಳು

ಜೂಲಿಯನ್ ಹಕ್ಸೇ ಹೀಗೆ ಹೇಳುತ್ತಾನೆ: ಜೀವನವು ಅಸಂಖ್ಯಾತ ಸಾಧ್ಯತೆಗಳನ್ನು ಪೂರೈಸಿಕೊಳ್ಳಲೆಂದೇ ಇದೆ. ಭೌತಿಕ, ಮಾನಸಿಕ, ಧಾಮರ್ಿಕ (ಆಧ್ಯಾತ್ಮಿಕ) ಮತ್ತು ಇತ್ಯಾದಿ. ಮಾನವ ಉದಾತ್ತವಾದ ಮತ್ತು ಪರಮೋನ್ನತವಾದ ವಿಷಯಗಳನ್ನು ಸಿದ್ಧಿಸಲು ಸಾಮಥ್ರ್ಯವುಳ್ಳವನಾಗಿದ್ದಾನೆ.
ನೀವು ಈ ಜಗತ್ತಿಗೆ ಬಂದಿರುವುದು ಹಲವು ಒಳ್ಳೆಯ ಕೆಲಸ ಮಾಡಲೆಂದೇ ಹೊರತು ಸೋಮಾರಿತನದಿಂದ ಸಮಯ ವ್ಯರ್ಥ ಮಾಡಲು ಅಲ್ಲ. ನೀವು ಸೋಮಾರಿ ಯಾಗಿದ್ದರೆ ಈ ಜಗತ್ತಿಗೆ ಭಾರವಾಗಿದ್ದೀರಿ, ನೀವು ಸದಾ ಒಳ್ಳೆಯ ಕೆಲಸದಲ್ಲಿ ಮತ್ತು ಪ್ರಜ್ಞಾಶೀಲತೆಯಲ್ಲಿ ಉನ್ನತಿ ಹೊಂದಲು ಪ್ರಯತ್ನಿಸಿರಿ. ಮಾನವರಾಗಿಯೂ ಸೌಕರ್ಯವುಳ್ಳವರಾಗಿಯೂ ಪುಣ್ಯಕಾರ್ಯ ಮಾಡದೆ ಹೋದರೆ, ಶ್ರಮಿಸದೆ ಹೋದರೆ ಇಲ್ಲಿಗೆ ಬಂದು ಘನತೆಗೆ ಅರ್ಹರಾಗದಿದ್ದರೆ ನಿಂದನೆಗೆ ಈಡಾಗುವಿರಿ. ಕೇವಲ ಹಿಂದಿನದನ್ನು ನೆನೆಯುತ್ತಾ, ಪಶ್ಚಾತ್ತಾಪಪಡುತ್ತಾ, ದುಃಖಿಸುತ್ತಾ ಇದ್ದರೆ ಸೋಮಾರಿತನದಿಂದ ಮತ್ತು ಅಲಕ್ಷ್ಯದಿಂದ ಕಾಲಹಾಕುತ್ತಿದ್ದರೆ ಅಂತಹವನ ಜೀವನವು ವ್ಯರ್ಥವಾಗಿ, ಈ ಜಗತ್ತಿನಲ್ಲಿರಲು ಅಸಮರ್ಥನಾಗುತ್ತಾನೆ.
ನಾಗರಿಕತೆಯ ವೃಕ್ಷದ ಬೇರುಗಳು ಧಮ್ಮದ ಮೌಲ್ಯಗಳಿಂದ ಆಳವಾಗಿ ಬೇರೂರಿದೆ ಎಂದು ಬಹಳಷ್ಟು ಜನರಿಗೆ ಗೊತ್ತಾಗಿಲ್ಲ. ಅಂತಹ ಬೇರುಗಳು ಇಲ್ಲದಿದ್ದರೆ, ಎಲೆಗಳು ಸೊರಗಿ ಹೋಗುತ್ತಿತ್ತು ಮತ್ತು ಮರವು ಸಹಾ ಜೀವರಹಿತ ಮೋಟಾಗುತ್ತಿತ್ತು.
ಬುದ್ಧ ಭಗವಾನರು ನಮಗೆ ನೀಡಿರುವ ಬುದ್ಧಿವಾದ ಏನೆಂದರೆ ಸೋಮಾರಿಯಾಗದೆ, ಎದ್ದು ಕಾರ್ಯಮಾಡಿ, ಆದಾಯ ಗಳಿಸಿ, ಉಳಿಸಿ. ಅಲಕ್ಷಿಸದೆ, ವ್ಯರ್ಥಮಾಡದೆ, ಆದಾಯವನ್ನು ಯೋಗ್ಯರೀತಿಯಲ್ಲಿ ಬಳಸುವುದಾಗಿದೆ. ಬುದ್ಧ ಭಗವಾನರು ಪ್ರಾಪಂಚಿಕ ಜೀವನವನ್ನು ಯಾವುದೇ ಸ್ವಾರ್ಥ ಅಥವಾ ಅಹಂಕಾರದ ದೃಷ್ಟಿಕೋನಕ್ಕೆ ಬಲಿಯಾಗದೆ ಅದು ಇರುವಂತೆಯೇ ಯಥಾಭೂತವಾಗಿ ಯೋಗ್ಯವಾಗಿ ಗಮನಿಸಿದ್ದಾರೆ.
ಹಾಗೆಯೇ ಭಗವಾನರು ಹೇಳಿರುವುದು ಏನೆಂದರೆ ಸಂಸಾರದಲ್ಲಿ ಪದೇ ಪದೇ ಜನ್ಮತಾಳುತ್ತ ದೇಹ ಮತ್ತು ಮನಸ್ಸಿನ ದುಃಖ ಅನುಭವಿಸುವುದರಲ್ಲಿ, ಜೀವನದ ಯಾವುದೇ ಉದ್ದೇಶ ನೆರವೇರುವುದಿಲ್ಲ. ನಾವು ಪರರಿಗೆ ಸೇವೆ ಸಲ್ಲಿಸುತ್ತ, ಶೀಲವನ್ನು ಅಭ್ಯಸಿಸುತ್ತ, ಮನಸ್ಸನ್ನು ಸುಶಿಕ್ಷಿತಗೊಳಿಸುತ್ತ, ಈ ಲೋಕದಲ್ಲಿ ಸುಸಂಸ್ಕೃತರಾಗಿ, ಸೌಹಾರ್ದತೆಯಿಂದ ಜೀವಿಸುವುದರಿಂದ ಈ ಜೀವನವನ್ನು ಸಾರ್ಥಕಗೊಳಿಸಬಹುದು. ಬುದ್ಧರ ಪ್ರಕಾರ ಮಾನವರು ಹೊಣೆಗಾರಿಕೆಯಿಲ್ಲದ ಗೊಂಬೆಗಳಲ್ಲ. ಬದಲಾಗಿ ವಿಕಾಸ ವೃಕ್ಷದ ಉನ್ನತ ಫಲವೆಂದು ಪರಿಗಣಿಸಿದ್ದಾರೆ.


2.17 ಅತೃಪ್ತತೆ

ನಮ್ಮಲ್ಲಿ ಪ್ರತಿಯೊಬ್ಬರೂ ಅತೃಪ್ತತೆಯನ್ನು ಅನುಭವಿಸುತ್ತಿದ್ದಾರೆ. ಪ್ರತಿದಿನ ನಾವು ಇದನ್ನು ಅದೆಷ್ಟುಬಾರಿ ಅನುಭವಿಸಿದ್ದೇವೆ? ನಮಗೇನೇ ಸಿಗಲಿ ಅದರಿಂದ ನಾವು ಎಂದಿಗೂ ತೃಪ್ತರಾಗುವುದಿಲ್ಲ. ಏಕೆಂದರೆ ಅದು ಸಿಕ್ಕ ಮರುಕ್ಷಣದಲ್ಲೇ ನಾವು ಬೇರೇನನ್ನೋ ಆಶಿಸುತ್ತೇವೆ.  ಅದು ಸಿಕ್ಕ ಬಳಿಕ ನಾವು ಏನನ್ನೋ ತ್ಯಜಿಸುತ್ತೇವೆ. ಹೀಗಾಗಿ ಅದರ ಆಕರ್ಷಣೆ ನಾವು ಕಳೆದುಕೊಳ್ಳುತ್ತೇವೆ. ಇದನ್ನೇ ನಾವು ಅನಿತ್ಯ ಎನ್ನುತ್ತೇವೆ.
ಹೀಗಾಗಿ ಜೀವನವಿಡೀ ನಾವು ವಿಷಯಗಳನ್ನು ಹಿಡಿಯುವುದರಲ್ಲೇ ಹೋರಾಟ ನಡೆಸುತ್ತೇವೆ ಮತ್ತು ಸದಾ ಅತೃಪ್ತಿಯನ್ನು ಅನುಭವಿಸುತ್ತೇವೆ. ಏಕೆಂದರೆ ನಮ್ಮಲ್ಲಿ ಮತ್ತು ವಿಷಯಗಳಲ್ಲಿ ಸದಾ ಬದಲಾವಣೆ ಆಗುತ್ತಿರುತ್ತದೆ. ನಾವು ನಿಜಕ್ಕೂ ಸುಖವಾಗಿ ಇರಬೇಕಾದರೆ ಮೊದಲು ನಾವು ಮಾನವ ದೌರ್ಬಲ್ಯವನ್ನು ದಾಟಬೇಕು. ನಾವೇಕೆ ಅಸುಖಿಗಳಾಗಿದ್ದೀವಿ ಎಂಬುದನ್ನು ಅರಿಯಲು ಹೋರಾಟ ಆರಂಭಿಸಬೇಕು. ಅದೇ ನಮ್ಮ ಜೀವನದ ಗುರಿಯಾಗಬೇಕು. ನಾವೆಲ್ಲರೂ ಸುಖಕರವಾದ ತೃಪ್ತಿಭರಿತ ಮತ್ತು ಶಾಂತಿಯುತ ಜೀವನಗಳನ್ನು ಬಯಸುತ್ತೇವೆ. ಆದರೆ ನಿಜಕ್ಕೂ ಎಷ್ಟು ಜನರು ಅಂತಹ ಸುಖವನ್ನು ಪಡೆದಿಹರು. ನಾವು ತೃಪ್ತಿ ಪಡೆಯಲು ಎನನ್ನೋ ಮಾಡಲು ಸಿದ್ಧರಾದೆವು. ಆದರೆ ಅಂತಹ ನೈಜ ತೃಪ್ತಿಯನ್ನು ಸಾಧಿಸುವುದು ಅತಿ ಕಷ್ಟಕರವಾಗಿದೆ. ಈ ಜೀವನದಲ್ಲಿ ದುಃಖವು ಮೂರು ಕಾರಣಗಳಿಂದ ಬರುವುದು.
1) ಪ್ರಕೃತಿಯೊಂದಿಗೆ ಸಂಘರ್ಷವಾದಾಗ
2) ಮಾನವರೊಂದಿಗೆ ಸಂಘರ್ಷವಾದಾಗ
3) ನಮ್ಮೊಂದಿಗೆ ಸಂಘರ್ಷವಾದಾಗ
ನಾವು ಅನುಭವಿಸುವ ದುಃಖದ ಅತ್ಯಂತ ಶೇಕಡಾವಾರು ಭಾಗ ಮಾನವ ಮಾನವನೊಂದಿಗೆ ನಡೆಸುವ ಅಮಾನವೀಯತೆಯಿಂದಾಗುತ್ತದೆ. ಅದು ಪ್ರಾಯೋಗಿಕ ಹಾಸ್ಯಗಾರನ ವಿಕಟ ಚೇಷ್ಟೆಯಂತೆ ವ್ಯಕ್ತವಾಗುತ್ತದೆ. ಕೆಲವು ಕ್ರೂರರು ಶುದ್ಧ ಪ್ರಾಮಾಣಿಕನ ವೇಷಧರಿಸಿ, ಸ್ನೇಹಿತರ ಮತ್ತು ಅವರ ಕುಟುಂಬಕ್ಕೆ ಅಪಾರ ದುಃಖ ನೀಡುವರು. ಅಥವಾ ಅದನ್ನು ನಾವು ವಕ್ರಬುದ್ಧಿಯ ಸಿಡುಕಿನವ, ತನ್ನ ಅಸುಖವನ್ನು ಪರರಲ್ಲಿ ಎರಚುವವರಲ್ಲಿಯೂ ಕಾಣಬಹುದು.
ಸರಪಳಿಯ ಅತಿರೇಕದ ಕೊನೆ ಎಂದರೆ ಮಾನವ ಮತ್ತು ಮಾನವನ ಸಂಘರ್ಷವಾಗಿದೆ. ಅವರು ಎಂದಿಗೂ ಬೇಟಿಯಾಗಿರುವುದಿಲ್ಲ. ಅಥವಾ ಪರಸ್ಪರ ತಿಳಿದಿರುವುದಿಲ್ಲ. ಆದರೂ ಸಹಾ ವಿಶ್ವವ್ಯಾಪಕ ಪ್ರಯಾಣದಲ್ಲಿ ಮರಣ ಮತ್ತು ನಾಶದ ಮಳೆಯನ್ನು ಅಳೆಯಲಾಗಿದೆ. ವಿಷಯಗಳ ಸ್ವಭಾವವೇ ಹಾಗಿದೆ. ಆದ್ದರಿಂದಲೇ ಮಾನವರ ಮಧ್ಯೆ ಯುದ್ಧವು ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಇದೆ. ಅದರ ಪ್ರತಿರೂಪವು ಪ್ರಾಣಿಗಳಲ್ಲಿ ಕಾಣಬಹುದು.
ಇಲ್ಲಿ ಸಮಸ್ಯೆಗೆ ಪರಿಹಾರವು ಜಗತ್ತನ್ನು ಸುಧಾರಣೆ ಮಾಡುವುದಿಲ್ಲ. ಬದಲಾಗಿ ನಮ್ಮನ್ನೇ ಸುಧಾರಣೆ ಮಾಡಿಕೊಳ್ಳುವುದು. ಇಲ್ಲಿ ಧಮ್ಮವು ದುಃಖದ ಅಂತ್ಯವಾಗುವವರೆಗೂ ಮಾರ್ಗದ ಉದ್ದಕ್ಕೂ ಮಾರ್ಗದಶರ್ಿಯಾಗಿ, ವಿಷಯಗಳು ಮತ್ತು ವ್ಯಕ್ತಿಗಳೊಡನೆ ಉತ್ತಮ ಬಾಂಧವ್ಯ ನಡೆಯಲು ಸಹಾಯ ಮಾಡುತ್ತದೆ. ನಾವು ಪರರಿಗೆ ಮಾರ್ಗ ಅನ್ವೇಷಿಸಲು ಸಹಾಯ ಮಾಡಬಹುದು, ಆದರೆ ಪರರಿಗೆ ವಿಮುಕ್ತಿ ನೀಡಲಾರೆವು ಎಂದು ಬುದ್ಧ ಭಗವಾನರು ತೋರಿಸಿದ್ದಾರೆ. ಹಾಗಿದ್ದರೂ ಧಮ್ಮದ ಪರಿಪೂರ್ಣತೆಗಾಗಿ ಪರಿಶ್ರಮದಿಂದ ಪರರಿಗೆ ಸಹಾಯ ಮಾಡುವ ಮೊದಲು ನಮಗೇ ಮೊದಲು ಸಹಾಯ ಮಾಡಿಕೊಳ್ಳಬೇಕಾಗಿದೆ.


2.18 ಸಾವಿನ ನಂತರ ಅಮರತ್ವ

ಮಾನವನು ಜೀವನದ ಬಗ್ಗೆ ಕೇಳುವ ಪ್ರಶ್ನೆಗಳೆಲ್ಲ ಸಾವಿನ ಸತ್ಯತೆಯ ಬಗೆಗೆ ಸಂಬಂಧಿಸಿದೆ. ಈ ವಿಷಯದಲ್ಲಿ ಆತ ಉಳಿದ ಜೀವಿಗಳಿಗೆಲ್ಲಾ ವಿಭಿನ್ನವಾಗಿದ್ದಾನೆ. ತನ್ನ ಸಾವಿನ ಬಗ್ಗೆ ಜಾಗೃತನಾಗಿ ಆತನು ಎಂದಿಗೂ ಈ ವಿಷಯದಲ್ಲಿ ಸಂಧಾನವಾಗಲು ಸಿದ್ಧನಿಲ್ಲ ಎಂಬುದು ತಿಳಿಯುತ್ತದೆ.
ಜೀವನವು ಅಲ್ಪ ಮತ್ತು ಮರಣವು ತಡೆಯಲಾರದಂತಹುದು ಎಂದು ಕೇವಲ ಮನುಷ್ಯನು ಅರ್ಥಮಾಡಿಕೊಂಡರೆ ಆಗ ಆತನು ಜೀವನಕ್ಕೆ ಸೇರಿದ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದನು. ಸಾವಿಗೆ ವಿರೋಧಿಸುತ್ತಲೇ ಮಾನವ ವಿಜ್ಞಾನ ಬಳಸಿ ಜೀವನವನ್ನು ವಿಸ್ತರಿಸಿದನು. ಆದರೆ ಅದು ಸಮುದ್ರದ ಬದಿಯಲ್ಲಿ ಆಟವಾಡುವ ಮಗುವಿಗೆ ಸಮವಾಗಿದೆ. ಹೇಗೆಂದರೆ ಮಗುವು ಮರಳಿನ ಕೋಟೆ ಕಟ್ಟುವುದು, ಆದರೆ ಮತ್ತೊಂದು ಅಲೆ ಅದನ್ನು ಉರುಳಿಸುವುದು. ಮತ್ತೆ ನಿರಾಶೆಯಿಂದ ಮಗುವು ಕೋಟೆ ಕಟ್ಟಲು ಸಿದ್ಧವಾಗುವುದು.
ಮಾನವನು ಮರಣದ ವಿಷಯವನ್ನೇ ಧಾಮರ್ಿಕತೆಯ ಪ್ರಧಾನ ವಿಷಯವಾಗಿಟ್ಟು ಕೊಂಡು ಸ್ವರ್ಗದ ಹಾರೈಕೆಯಿಂದ ಅಮರ ಜೀವನದ ಕನಸು ಕಾಣುತ್ತಾನೆ.
ಪ್ರತಿಯೊಂದು ಜೀವಿಗಳಿಗೆ ಸಾವಿದೆ, ಆದರೆ ಮಾನವ ಮಾತ್ರ ಧರ್ಮವನ್ನು ಸೃಷ್ಟಿಸಿದನು. ತನ್ನ ನಿರಂತರ ಭಯ ಮತ್ತು ಮೃತ್ಯು ಬೆದರಿಕೆಯಿಂದಾಗಿ, ಸಹಿಸುವ ಇಚ್ಛೆ ಮತ್ತು ನಿರಂತರ ಉಳಿಯುವ ಇಚ್ಛೆಯಿಂದಾಗಿಯೇ ಮಾನವ ಧರ್ಮವನ್ನು ಸೃಷ್ಟಿಸಿದನು. ಅದರ ಪರಿಣಾಮದಿಂದಾಗಿ ಆತನ ಜೀವನ ಹೆಚ್ಚು ಅರ್ಥಪೂರ್ಣವಾಯಿತು.
ಕೆಲವು ಧರ್ಮಗಳು ಸ್ವರ್ಗದ ನೆಲೆಗಳನ್ನು ನಂಬಿವೆ. ಅಲ್ಲಿಯ ಜೀವನದಲ್ಲಿ ನಿರಂತರ ಸುಖವಿರುತ್ತದೆ ಮತ್ತು ಸ್ವರ್ಗ ಹಾಗು ಸ್ವರ್ಗದ ಒಡೆಯ ದೇವರನ್ನು ಸೇರಲು ಶ್ರದ್ಧಾಳು ಹಿಂಬಾಲಕರು ಇಲ್ಲಿಯ ಪ್ರತಿಯೊಂದನ್ನೂ ತ್ಯಾಗ ಮಾಡುತ್ತಾರೆ.
ಬೌದ್ಧರು ಸಹ ಪೃಥ್ವಿಯ ಅಸ್ತಿತ್ವಕ್ಕೆ ಅಂಟಲು ಆಯ್ಕೆ ಮಾಡುತ್ತಾರೆ. ಆದರೆ ಇಲ್ಲಿ ಜೀವನವು ದುಃಖವಲ್ಲದೆ ಮತ್ತೇನಿಲ್ಲ ಮತ್ತು ಪರಮೋಚ್ಛ ಪರಮಸುಖವೆಂದರೆ ದುಃಖದಿಂದ ಮುಕ್ತಿಯಾಗಿದೆ.
ಹಲವಾರು ದೇಶಗಳು ಇಂದು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಯಾವುದೆಂದರೆ ಜನಸಂಖ್ಯಾ ಸ್ಫೋಟ. ನಿರಂತರವಾಗಿ ಉಬ್ಬುತ್ತಿರುವ ಈ ಜೀವನ ಪ್ರವಾಹವನ್ನು ನಿಗ್ರಹಿಸಲು ನಾನಾ ಮಾರ್ಗಗಳನ್ನು ಹುಡುಕಿದ್ದಾರೆ. ಈ ಲಕ್ಷಾಂತರ ಮಂದಿಗೆ ಆಹಾರ, ವಸತಿ, ಸುಖ ಮತ್ತು ಸುರಕ್ಷತೆಯ ಅವಶ್ಯಕತೆಯಿದೆ. ಈ ಎಲ್ಲಾ ಜನರಿಗೆ ಜೀವನದ ಉದ್ದೇಶವೇನು? ಎಂಬ ಪ್ರಶ್ನೆಯಿಲ್ಲ. ಬದಲಾಗಿ ಜೀವನದೊಂದಿಗೆ ಮಾಡುವುದೇನು? (ಜೀವನಕ್ಕಾಗಿ ಮಾಡುವುದೇನು?)
ಇದಕ್ಕಿರುವ ಸರಳ ಉತ್ತರವೆಂದರೆ ಒಬ್ಬನು ಜೀವನದಿಂದ ಅಪಾರ ಲಾಭವನ್ನು ಪಡೆದುಕೊಳ್ಳುವುದು, ಅದಕ್ಕಾಗಿ ಶ್ರಮಿಸುವುದು. ಹಾಗೆಯೇ ಸಂಪನ್ಮೂಲದ ಲಾಭವನ್ನು ಪಡೆದುಕೊಳ್ಳುವುದು. ಯಾವುದೇ ಸುಖವನ್ನು ಒಬ್ಬನು ಹಿಡಿಯಲಿ, ಅದು ಪ್ರಯೋಗಿಕವಾಗಿರಬೇಕು ಮತ್ತು ಯೋಗ್ಯವಾದ ಮಾರ್ಗದಿಂದ ಪಡೆದುಕೊಳ್ಳಬೇಕೇ ಹೊರತು ಮನೋವೈಜ್ಞಾನಿಕ ಸಂಶೋಧನೆ ಮಾಡುತ್ತ ಅತಿಯಾಗಿ ಚಿಂತೆಗೆ ಗುರಿಯಾಗುವುದಲ್ಲ.
ಹಾಗಿದ್ದರೂ ಧರ್ಮವು ಮಾನವನಿಗೆ ಸಾಂತ್ವನ ನೀಡುವಲ್ಲಿ ಹೆಚ್ಚು ಹೆಜ್ಜೆ ಹಾಕುವುದು, ಹೊರತು ಜೀವನವೆಂದರೆ ಭಯಾನಕವಲ್ಲ ಮತ್ತು ನಿರಾಶದಾಯಕವೂ ಅಲ್ಲ ಎಂಬ ಸತ್ಯತೆಯ ಜ್ಞಾನೋದಯ ಮಾಡಿಸುವುದಿಲ್ಲ. ಭೌತಿಕತೆಯ ನೋಟದಲ್ಲಿ ಮಾತ್ರ ಜೀವನವನ್ನು ಕಾಣಲಾಗುತ್ತಿದೆ. ಮುಂದೆ ಉತ್ತಮ ಜೀವನಕ್ಕಾಗಿ ಆಶಾಕಿರಣಗಳಿವೆ.
ಮಾನವ ನಶ್ವರಜೀವಿ. ಹೀಗಾಗಿ ಆತನು ಈ ಲೋಕದಿಂದ ಹೋದ ಮೇಲೂ ತನ್ನ ಗುರುತುಗಳನ್ನು ಇಲ್ಲಿಯೇ ಬಿಡಲು ಇಷ್ಟಪಡುತ್ತಾನೆ. ಈ ಕಾರಣದಿಂದಾಗಿಯೇ ಜಗತ್ತಿನ ಎಲ್ಲಾ ಉನ್ನತಿಗಳು ಜರುಗುತ್ತಿರುತ್ತವೆ. ಒಂದುವೇಳೆ ಮಾನವ ಅಮರತ್ವವನ್ನು ಸಾಧಿಸಿದರೆ, ಜಗತ್ತಿನಲ್ಲಿ ಆತನ ದಿನಗಳು ಅನಂತವಾಗಿಬಿಡುತ್ತದೆ. ಆಗ ಆತನು ವಸ್ತುಗಳನ್ನು ಸುಲಭವಾಗಿ ತೆಗೆದುಕೊಳ್ಳುತ್ತಾನೆ. ಆಗ ಎಲ್ಲಾ ಪ್ರಚೋದನೆಗಳನ್ನು ಕಳೆದುಕೊಳ್ಳುತ್ತಾನೆ. ಅಥವಾ ಉನ್ನತಿಗೆ ಪ್ರಾರಂಭವನ್ನೇ ಕಳೆದುಕೊಳ್ಳುತ್ತಾನೆ. ಆಗ ಆತನಲ್ಲಿ ಯಾವುದೇ ಆಸೆಯಿರುವುದಿಲ್ಲ, ಜಗತ್ತನ್ನು ಇನ್ನೂ ಉತ್ತಮ ಸ್ಥಾನದಲ್ಲಿಡಲು ಆಸೆ ಇರುವುದಿಲ್ಲ.
ಸಾವೇ ಇಲ್ಲದಿದ್ದರೆ ಜೀವನವು ಜಡವಾಗಿಬಿಡುತ್ತದೆ. ವೈವಿಧ್ಯವಿಲ್ಲದ, ಒಂದೇ ರಾಗದ ಹಾಡಿನಂತಾಗಿಬಿಡುತ್ತದೆ. ಹೇಳಲಾಗದಂತಹ ಹೊರೆಯಾಗುತ್ತದೆ ಮತ್ತು ಬೇಸರಭರಿತ ವಾಗುತ್ತದೆ. ಮಾನವನಿಗೆ ಏನಾದರೂ ತನ್ನ ಸಾವಿನ ಸಮಯ ಗೊತ್ತಾಗಿ ಬಿಟ್ಟರೆ, ಆತನು ಈಗ ಮಾಡುವುದಕ್ಕಿಂತಲೂ ವಿಭಿನ್ನವಾಗಿ ಮತ್ತು ಉದ್ದೇಶಪೂರ್ವಕವಾಗಿ ವತರ್ಿಸುತ್ತಿದ್ದನು.
ಮಾನವನ ಶರೀರವು ಧೂಳು ಅಥವಾ ಕಸವಾಗಿಬಿಡುತ್ತದೆ. ಆದರೆ ಆತನ ಹೆಸರು ಅಥವಾ ಪ್ರಭಾವವು ದೃಢವಾಗಿ ನಿಲ್ಲುತ್ತದೆ. (ಬುದ್ಧ ಭಗವಾನರು)
ನಮ್ಮ ಪೂವರ್ಿಕರು ಮೃತ್ಯುವಶವಾಗಿ ಈಗಿಲ್ಲವಾದರೂ ಅವರು ನಮ್ಮ ಮಧ್ಯೆ ಇರುವಂತೆ ನಾವು ಕಲ್ಪಿಸಬಹುದು. ಶಾರೀರಿಕವಾಗಲ್ಲ, ಆದರೆ ಅವರಿಂದ ಸೃಷ್ಟಿಯಾದ ಪ್ರಭಾವವು ತಲೆತಲಾಂತರವಾಗಿ ಹರಿದು ಇನ್ನೂ ಜೀವಂತವಾಗಿದೆ.
ಪೂವಿಕರೆಂದು ಇಲ್ಲಿ ಬಳಸುತ್ತಿರುವುದು ಕೇವಲ ನಮ್ಮ ಹಿಂದಿನವರು ಎಂದು ಮಾತ್ರವಲ್ಲ. ಜೊತೆಗೆ ಯಾರೆಲ್ಲ ಪರಹಿತ ಮತ್ತು ಪರಸುಖಕ್ಕಾಗಿ ದುಡಿದು ತಮ್ಮ ಕಾಣಿಕೆಯನ್ನು ಅಪರ್ಿಸಿದರೋ ಅವರಿಗೆಲ್ಲಾ ಬಳಕೆಯಾಗಿದೆ. ಈ ಅರ್ಥದಲ್ಲಿ ನಾವು ಹಿಂದಿನ ವೀರರನ್ನು, ಸಂತರನ್ನು, ತತ್ವಜ್ಞಾನಿಗಳನ್ನು ಮತ್ತು ಕವಿಗಳನ್ನು ಈಗಲೂ ಅವರ ಪ್ರಭಾವವನ್ನು ಈಗಿನವರಲ್ಲಿ ಜೀವಂತವಾಗಿರುವುದನ್ನು ಕಾಣಬಹುದು.
ನಾವು ಆ ಪೂವರ್ಿಕ ಹುತಾತ್ಮರ ಮತ್ತು ಚಿಂತನಕಾರರೊಂದಿಗೆ ಸಂಬಂಧ ಬೆಸೆದಾಗ, ನಾವು ಅವರ ಜ್ಞಾನಭರಿತ ಚಿಂತನೆಗಳನ್ನು, ಉದಾತ್ತ ಆದರ್ಶಗಳನ್ನು ಮತ್ತು ಮಂತ್ರಮುಗ್ಧರನ್ನಾಗಿಸುವ ಶತಮಾನಗಳ ಹಿಂದಿನ ಸಂಗೀತವೇ ಆಗಿರಲಿ, ನಾವು ಹಂಚಿಕೊಳ್ಳಬಹುದು. ಜೀವನದ ಉದ್ದೇಶಕ್ಕಾಗಿ ಮಾನವನು ಪ್ರಕೃತಿಗೆ ಓಗೊರೆದರೆ ಅತ್ಯಲ್ಪ ಗ್ರಹಿಕೆ ಸಾಧಿಸಬಹುದು. ಆದರೆ ಮಾನವನು ತನ್ನಲ್ಲೇ ಅನ್ವೇಷಿಸಲು ಹೊರಟಾಗ ತನ್ನ ದಿವ್ಯ ಅಥವಾ ಉದಾತ್ತ ಸ್ವರೂಪ ಅರಿತಾಗ ಆತನು ಜೀವನದ ಉದ್ದೇಶವೇನು ಎಂದು ಕೂಗುವುದಿಲ್ಲ. ಆತನಿಗೆ ತಾನೇ ಜೀವನದ ಅಂತಿಮ ಉದ್ದೇಶ ಎಂದು ಅರಿವಾಗುವುದು. ಚಿಂತನೆಕಾರರಿಗೆ ಅನುಭವದಿಂದ ತಿಳಿದಿರುವ ವಿಷಯವೆಂದರೆ ಇತಿಹಾಸವು ರಚಿತವಾಗುವುದು ಆಕಾಶದಲ್ಲಿ ಏನು ನಡೆಯುವುದು ಎನ್ನುವ ಆಧಾರದ ಮೇಲಲ್ಲ, ಬದಲಾಗಿ ಮಾನವನ ಹೃದಯದಲ್ಲಿ ಏನು ಪರಿವತರ್ಿತವಾಗಿ ಸ್ಥಿರವಾಯಿತು ಎನ್ನುವುದರ ಮೇಲಿದೆ.
ಪರಿಪೂರ್ಣ ಮಾನವನಿಗಿಂತ ಬೇರೆ ಯಾವುದೇ ಅತಿಲೌಕಿಕ ಶಕ್ತಿ (ದೇವರು) ಇಲ್ಲ ಎಂದು ಬುದ್ಧ ಭಗವಾನರು ಹೇಳಿದ್ದಾರೆ. ಮಾನವ ತನ್ನ ಪರಿಮಿತತೆಯ ವ್ಯಕ್ತಿ ವೈಶಿಷ್ಟತೆಯಿಂದ ಮೇಲೇರಬೇಕು, ವಿಕಸಿಸವಾಗಲೇಬೇಕಾಗಿದೆ. ಆದರೂ ಆತನು ನಿತ್ಯ ನಿಯಮಗಳಿಗೆ ಮತ್ತು ನಿತ್ಯ ತತ್ವಗಳಿಗೆ ವಿರುದ್ಧವಾಗಿ ಮೇಲೇರಲಾರ.


2.19 ಈ ಜಗವ ಬಿಡಲು ಅಂಜಿಕೆಯೇಕೆ?

ಬಹಳಷ್ಟು ಜನರಿಗೆ ಸಾವು ಅಸ್ವಾಗತದ ಘಟನೆಯಾಗಿದೆ. ಬಹಳಷ್ಟು ತೀವ್ರ ಬಯಕೆಗಳು ತೃಪ್ತಿಗೊಳಿಸಬೇಕಾಗಿರುವುದರಿಂದಾಗಿ ಅಪಾರ ದುಃಖದಿಂದ ಜೀವಿಸುವ ವ್ಯವಹಾರವು ಎಂದಿಗೂ ಮುಗಿಯದ ಕಥೆಯಾಗಿದೆ. ಜನರಿಗೆ ಸಾವಿನ ನೈಜತೆಗಿಂತ ಸುಖದ ಮರೀಚಿಕೆಯೇ ಹೆಚ್ಚು ಹಿತಸುಖಕಾರಿ ಎಂದು ಭಾವಿಸುತ್ತಾರೆ. ಇದರ ಚಿಂತನೆ ಮಾಡಿದರೆ ಅಂತ್ಯ ಸಮಯದಲ್ಲಿ ಸಹಕಾರಿಯಾಗಿದೆ.
ಪ್ರಾಪಂಚಿಕತೆಯ ಜೀವನದ ಅಂಟುವಿಕೆಯೇ ಸಾವಿನ ಭಯವನ್ನು ಹೆಚ್ಚಾಗಿ ಸೃಷ್ಟಿಸುತ್ತದೆ. ಆದರೆ ನಿಜವೇನೆಂದರೆ ಜೀವನವು ದುಃಖವಲ್ಲದೆ ಬೇರೇನೂ ಅಲ್ಲ. ಸಾವು ಸ್ವಾಭಾವಿಕ, ನಿಶ್ಚಿತ ಮತ್ತು ತಡೆಯಲಾರದಂತಹುದು ಆಗಿದೆ. ಸಾವಿಗಿಂತಲೂ ಭೀಕರ ಸಾವಿನ ಭೀತಿಯೇ ಆಗಿದೆ. ಮನಸ್ಸಿಗೆ ತನ್ನಿಂದಲೇ ಸೃಷ್ಟಿಸುವಂತಹ ಸಾಮಥ್ರ್ಯ ಇರುವುದರಿಂದಾಗಿ ಅದು ಸಾವಿನ ತಪ್ಪು ಚಿತ್ರಗಳನ್ನು ರಚಿಸುತ್ತದೆ.
ಮನಸ್ಸು ಜೀವನದ ಅನಿತ್ಯತೆ ಮತ್ತು ಅತೃಪ್ತತೆಯನ್ನು ಕಾಣುವಷ್ಟು ಶಿಕ್ಷಣ ಪಡೆಯದ ಕಾರಣದಿಂದಾಗಿ ಮುಳುಗುವ ಮನುಷ್ಯ ಹುಲ್ಲನ್ನು ಹಿಡಿಯುವ ರೀತಿ ಅದು ಭ್ರಮಾತ್ಮಕ ವಿಷಯಗಳಲ್ಲಿ ಇಷ್ಟಪಟ್ಟು ಅಂಟಿಕೊಳ್ಳುತ್ತದೆ. ಅದು ಆಗಾಗ್ಗೆ ವಿಶ್ವಾಸ ಕಳೆದುಕೊಂಡು ಕಾಲ್ಪನಿಕ ದೇವರಲ್ಲಿ ಪ್ರಾಥರ್ಿಸಿ ಕ್ಷಮೆಯಾಚಿಸಿ, ಸ್ವರ್ಗದ ಬಯಕೆಯಲ್ಲಿ ಇರುವವರೆಗೂ ಅಹಿತವನ್ನು ಸೃಷ್ಟಿಮಾಡಿ ನಿರಾಶೆಯನ್ನುಂಟು ಮಾಡುತ್ತದೆ. ಸಾವಿನ ಭೀತಿಯು ಕೆಲವೊಮ್ಮೆ ಸ್ವರಕ್ಷಣೆಯನ್ನು ಮಾಡುತ್ತದೆ. ಆದರೆ ಸಾವಿನ ಭಯವನ್ನು ಗೆಲ್ಲುವ ಹಾದಿಯು ಇದೆ. ನೀವು ಸಾವಿನ ಸಮಯದಲ್ಲಿ ನಂಬಿಕೆ ಮತ್ತು ಭರವಸೆಗಳನ್ನು ಪಡೆಯಲು ಇಚ್ಛಿಸುವಿರಾ? ಹಾಗಾದರೆ ಪರರಿಗೋಸ್ಕರ ನಿಸ್ವಾರ್ಥ ಸೇವೆಯನ್ನು ಮಾಡಿರಿ. ನಿಜಕ್ಕೂ ಪರೋಪಕಾರ ಮನೋಭಾವನೆಯು ಎಲ್ಲಾ ಸ್ವಾರ್ಥವನ್ನು ಕಿತ್ತೆಸೆಯುತ್ತದೆ.
ಚಿತ್ತದ ಪರಿಶುದ್ಧತೆ, ಪ್ರಾಪಂಚಿಕತೆಯಲ್ಲಿ ಅಂಟದಿರುವಿಕೆಯು ಈ ಜಗತ್ತನ್ನು ಸುಖವಾಗಿ ಬಿಡಲು ಆಧಾರವಾಗಿದೆ. ನಿರಂತರ ಮೃತ್ಯು ಅನುಸ್ಮೃತಿಯನ್ನು ಮಾಡಿದಾಗ ಮಾತ್ರ ಜೀವನದ ಅನಿತ್ಯತೆಯನ್ನು ಅರಿಯುವಿರಿ ಮತ್ತು ಪ್ರಜ್ಞೆಯು ಮಿಥ್ಯಾ ಜೀವನವನ್ನು ಸರಿಪಡಿಸುತ್ತದೆ. ಹೀಗಾಗಿ ಅವು ಸಾವಿನಿಂದ ಭಯವನ್ನು ಬೇರ್ಪಡಿಸುತ್ತದೆ. ಚಿತ್ತವನ್ನು ಬಲಿಷ್ಠಗೊಳಿಸುವುದರಿಂದಾಗಿ ಜೀವನದ ಸತ್ಯ ಮತ್ತು ನೈಜತೆಗಳನ್ನು ಎದುರಿಸಬಹುದು. ಸದಾ ವಾಸ್ತವವಲ್ಲದ ಮತ್ತು ಅಪ್ರಯೋಗಾತ್ಮಕ ಆಕಾಂಕ್ಷೆಗಳನ್ನು ತಡೆಯಿರಿ, ಶ್ರದ್ಧೆಯನ್ನು ಅಭಿವೃದ್ಧಿಗೊಳಿಸಿ. ಆಗ ನೀವು ಅತಿ ವಿಶ್ರಾಂತಿಯನ್ನು ಅನುಭವಿಸಿ ನಿಮ್ಮ ಜೀವನದ ಕಷ್ಟಗಳನ್ನು ದಾಟುವಿರಿ. ನೀವು ಜನಿಸಿದಾಗ ನೀವು ಅತ್ತಿರಿ, ಆದರೆ ಜಗತ್ತು ಆನಂದಪಟ್ಟಿತು. ಈಗ ನೀವು ಈ ರೀತಿ ಜೀವಿಸಿರಿ, ಆಗ ಜಗವೆಲ್ಲಾ ಅಳುತ್ತಿರಬೇಕು. ಆದರೆ ನೀವು ಮಾತ್ರ ದುಃಖದಿಂದ ಮುಕ್ತರಾಗಿರಬೇಕು.
ಇನ್ನೊಂದು ಅರಿಯಲೇಬೇಕಾದ ವಿಷಯವೇನೆಂದರೆ ಜೀವನವು ಎಂದೂ ಸಾಯುವುದಿಲ್ಲ. ಯಾವಾಗ ಈ ಶರೀರವು ಜೀವಿಸಲು ಅನರ್ಹವಾಗುತ್ತದೋ ಅಂದರೆ ಇರಲು ಆಗುವುದೇ ಇಲ್ಲವೋ, ಆಗ ಜೀವನವು ಈ ಶರೀರದಿಂದ ತೆರಳುತ್ತದೋ ಅದನ್ನೇ ನಾವು ಮರಣ ಎನ್ನುವೆವು. ಹಾಗಿದ್ದರೂ ಇದು ಜೀವನದ ಅಂತ್ಯವಲ್ಲ, ತೆರಳಲ್ಪಟ್ಟ ಜೀವನವು ಪುನಃ ಕುಶಲ, ಅಕುಶಲ ಕರ್ಮ ಫಲದಂತೆ ಹೊಸ ಶರೀರವನ್ನು ರಚಿಸಿಕೊಳ್ಳುತ್ತದೆ. ಹೊಸ ಮನೆಯನ್ನು ನಿಮರ್ಿಸಿ ಅದರಲ್ಲಿ ವಾಸಿಸುವಂತೆ ಜೀವನ ಪುನಃ ಆರಂಭವಾಗುತ್ತದೆ.

2.20 ಧಾಮರ್ಿಕ ತತ್ವಗಳು ಮಹತ್ವದ್ದಾಗಿದೆ

ಮನುಷ್ಯರಾದ ನಮಗೆ ಉತ್ತಮ ತತ್ವಗಳನ್ನು ಎತ್ತಿಹಿಡಿಯುವ ಹಾಗು ಅದರಿಂದ ನಮಗೆ ಮತ್ತು ಪರರಿಗೂ ಹಿತವನ್ನುಂಟುಮಾಡುವ ಹೊಣೆಗಾರಿಕೆಯಿದೆ. ಇದರಿಂದ ನಾವು ಧಮ್ಮ ಪ್ರಜ್ಞೆವುಳ್ಳವರಾಗುತ್ತೇವೆ. ಏಕೆಂದರೆ ಎಲ್ಲಿಯವರೆಗೆ ನಾವು ಪರಿಪೂರ್ಣ ರಾಗಿಲ್ಲವೋ ಯಾವಾಗ ನಾವು ಶೀಲಗಳನ್ನು ಪಾಲಿಸುತ್ತೇವೆಯೋ ಆಗ ನಾವು ಪರರನ್ನು ಕಾಪಾಡುತ್ತೇವೆ. ನಾವು ಉತ್ತಮ ನೆರೆಹೊರೆಯವರಾಗಲು ಬಯಸಿದರೆ ನಮಗೆ ಬಲಿಷ್ಠ ಬೇಲಿಯಿದೆಯೆಂದು ಸುರಕ್ಷಿತ ಮಾಡಿಕೊಳ್ಳಬೇಕು. ಇಲ್ಲದೆ ಹೋದರೆ ಅದು ವಾದ-ವಿವಾದಗಳಿಗೆ, ಕ್ಷೊಭೆಗಳಿಗೆ ಮತ್ತು ಅಪಾರ್ಥಗಳಿಗೆ ಗುರಿಯಾಗುತ್ತೇವೆ.
ಯಾವಾಗ ನಾವು ಉತ್ತಮ ಬೇಲಿಯನ್ನು ಅಥವಾ ಗೋಡೆಯನ್ನು ಕಟ್ಟುವೆವೋ ಆಗ ನಾವು ನಮ್ಮ ಮನೆ ಮತ್ತು ನಮ್ಮ ಕುಟುಂಬವನ್ನು ಮಾತ್ರ ಕಾಪಾಡುವುದಿಲ್ಲ. ಜೊತೆಗೆ ನಮ್ಮ ನೆರೆಹೊರೆಯವರನ್ನು, ಅವರ ಕುಟುಂಬಗಳನ್ನು ಕಾಪಾಡುವೆವು. ಹೀಗಾಗಿ ಶೀಲಗಳನ್ನು ಹೀಗೆ ಪಾಲಿಸಬೇಕು. ಯಾವಾಗ ನಾವು ಪರರನ್ನು ಕೊಲ್ಲುವುದಿಲ್ಲವೋ ಅಥವಾ ಹಿಂಸಿಸುವುದಿಲ್ಲವೋ ಆಗ ನಾವು ಪರರಿಗೆ ಭಯವಿಲ್ಲದೆ ಶಾಂತಿಯಿಂದ ಜೀವಿಸಲು ಸಹಾಯ ಮಾಡುವೆವು.
ಇದೇ ನಾವು ಪರರಿಗೆ ನೀಡುವ ಶ್ರೇಷ್ಠವಾದ ಕಾಣಿಕೆಯಾಗಿದೆ. ನಾವು ಪರರನ್ನು ದೋಚುವುದನ್ನು ಮತ್ತು ಮೋಸ ಮಾಡುವುದನ್ನು ನಿಲ್ಲಿಸಬೇಕು. ಅದರಿಂದಾಗಿ ಪರರು ಸಹಾ ಭಯವಿಲ್ಲದೆ, ಸಂದೇಹಗಳಿಲ್ಲದೆ ಶಾಂತಿಯಿಂದ ಜೀವಿಸಬಲ್ಲರು. ನಮಗೆ ನಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆ ಹೇಗೆ ನಿರ್ವಹಿಸಬೇಕು ಎಂದು ಸ್ಪಷ್ಟವಾಗಿ ತಿಳಿದರೆ ನಾವು ಮಾನವೀಯ ಘನತೆ ಮತ್ತು ಮೇಧಾವಿತನವನ್ನು ಎತ್ತಿಹಿಡಿಯಬಹುದು. ಸ್ವಾಭಾವಿಕವಾಗಿ ಹೀಗೆ ಮಾಡಿದರೆ ಮಾತ್ರ ನಾವು ಶಾಂತಿ, ಸೌಹಾರ್ದತೆ ಮತ್ತು ಶಾಂತತೆಯನ್ನು ತಮ್ಮ ಜೀವನದಲ್ಲಿ ಕಾಪಾಡಬಹುದು ಮತ್ತು ನಿರ್ವಹಿಸಬಹುದು.
ಆದರೆ ರಾಬಟರ್್ ಪ್ರೊಸ್ಟ್ ತಮ್ಮ ಸುಂದರ ಕವಿತೆ ಮೆಂಡಿಂಗ್ ವಾಲ್ನಲ್ಲಿ ಹೀಗೆ ಹೇಳಿದ್ದಾರೆ. ನಾವು ಸ್ವಭಾವದಲ್ಲಿ ಒಳ್ಳೆಯವರಾಗಿದ್ದರೆ ಮತ್ತು ನಮ್ಮ ನೆರೆಹೊರೆಯವರು ಸಹಾ ಸ್ವಭಾವದಲ್ಲಿ ಒಳ್ಳೆಯವರಾಗಿದ್ದರೆ ಆಗ ಬೇಲಿಗಳು ಹೆಚ್ಚಾಗಿಯೇ ಇರುತ್ತದೆ. ಪ್ರಾಚೀನ ಕಾಲದ ಸಮಾಜಗಳು ಆದರ್ಶವಾಗಿ ಜೀವಿಸಿದ್ದವು. ನಮಗಾಗಿ ಮತ್ತು ಪರರ ರಕ್ಷಣೆಗಾಗಿ ನಾವಿಂದು ಧರ್ಮದ ಬೇಲಿಗಳನ್ನು ಕಟ್ಟಿಕೊಳ್ಳಬೇಕಾಗಿದೆ.
ನಾವಿದನ್ನು ಶೀಲಗಳ ಆಚರಣೆಯಲ್ಲಿ ಮಾಡುವೆವು. ಶೀಲವೆಂದರೆ ಮನಸ್ಸನ್ನು ಸುಶಿಕ್ಷಣಗೊಳಿಸುವ ಶಿಸ್ತಾಗಿದೆ. ಕೆಲವು ಧಾಮರ್ಿಕ ತತ್ವಗಳನ್ನು ಆಚರಿಸುವುದರಿಂದಾಗಿ ನಾವಿದನ್ನು ಪಾಲಿಸುವೆವು. ಅವುಗಳ ಉಲ್ಲಂಘನೆ ಆದಾಗ ಆಗುವ ಭಯಾನಕತೆಯನ್ನು ಅರಿತಿರುವೆವು. ಬೌದ್ಧರ ಶೀಲದ ಆಚರಣೆಗಳಿಗೂ ಮತ್ತು ಧಾಮರ್ಿಕ ಕಟ್ಟಳೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಬಹಳಷ್ಟು ಧರ್ಮಗಳಲ್ಲಿ ಕಟ್ಟಳೆಗಳನ್ನು ನಂಬಿಕೆಯ ಮತ್ತು ಭಯದ (ಶಿಕ್ಷಾ ಭಯ) ತಳಹದಿಯ ಮೇಲೆ ಆಚರಿಸುತ್ತಿರುವರು. ಇದರಿಂದ ಗೊತ್ತಾಗುವುದು ಏನೆಂದರೆ ನರಕಾಗ್ನಿಯ ಭಯವಿಲ್ಲದಿದ್ದರೆ ಇವರೆಲ್ಲ ನಿಜಕ್ಕೂ ಧಾಮರ್ಿಕ ನಿಯಮಗಳನ್ನು ಗಂಭೀರವಾಗಿ ಪಾಲಿಸಲಾರರು.
ಆದರೆ ಬೌದ್ಧರು ಈ ಧಮ್ಮತತ್ವಗಳನ್ನು ಪಾಲಿಸುವುದು ಹೇಗೆಂದರೆ ದುಷ್ಕೃತ್ಯಗಳು ತಪ್ಪು ಎಂದು ಸ್ಪಷ್ಟವಾಗಿ ಅರಿತು ನಾಚಿ ಅಂತಹವುಗಳಿಂದ ದೂರವಿರುತ್ತಾರೆ. ಒಂದು ಪದವನ್ನು ನಾವು ಇಲ್ಲಿ ಒತ್ತಿ ಹೇಳಬೇಕಾಗುತ್ತದೆ. ಕೇವಲ ಒಬ್ಬನು ಬೌದ್ಧನೆಂದು ಕರೆಸಿಕೊಂಡ ಮಾತ್ರಕ್ಕೆ ಆತನನ್ನು ಸ್ವಯಂಚಾಲಿತವಾಗಿ ಶುದ್ಧನೆಂದು ಪರಿಗಣಿಸಬಾರದು. ಬೌದ್ಧನೆಂದರೆ ಯಾರು ಬುದ್ಧ ಭಗವಾನರ ಬೋಧನೆಯನ್ನು ನಿಷ್ಠೆಯಿಂದ ಪಾಲಿಸುತ್ತಿರುವವನೂ ಮತ್ತು ತನ್ನನ್ನು ಉದಾತ್ತ ಜೀವಿಯನ್ನಾಗಿ ಮಾಡಿಕೊಳ್ಳುತ್ತಿರುವವನೋ ಆತನು ಮಾತ್ರ. ಇದಕ್ಕೆ ಹೆಚ್ಚು ಪ್ರಮಾಣಿಕತೆ ಮತ್ತು ಪ್ರಯತ್ನ ಅಗತ್ಯವಾಗಿದೆ.
ಮಾನವನಿಗೆ ಸುಖವು ಭೌತಿಕತೆಯ ತೃಪ್ತಿಯಿಂದಾಗಲಿ, ಭಾವೋದ್ರೇಕಗಳ ಆನಂದದಿಂದಾಗಲಿ ಅಥವಾ ಐಶ್ವರ್ಯದ ಗಳಿಕೆಯಿಂದಾಗಲಿ ಸಿಗುವುದಿಲ್ಲ ಎಂದು ಧಾಮರ್ಿಕ ಗುರುಗಳು ಸದಾ ಆ ತತ್ವದಲ್ಲೇ ನೆಲೆಯೂರಿದ್ದಾರೆ. ಈ ಸತ್ಯವು ಪ್ರಯೋಗ ಅನುಭವದಿಂದಲೂ ಸಿದ್ಧವಾಗಿದೆ. ನಮಗೆ ಎಲ್ಲಾರೀತಿಯ ಪ್ರಾಪಂಚಿಕ ಸುಖವು ಇದ್ದರೂ ಸಹಾ ಸುಖಿಯಾಗಿ ಮತ್ತು ಶಾಂತಯುತವಾಗಿ ಇರಲಾರೆವು. ಏಕೆಂದರೆ ನಮ್ಮ ಮನಸ್ಸು ಸದಾ ರಾಗ-ದ್ವೇಷಗಳಿಂದ ಕೂಡಿದ್ದು ನಿಜ ಸುಖ ಅಥವಾ ಶಾಂತಿಯನ್ನು ನಾವು ಪಡೆಯಲಾರೆವು. ರಾಗದ್ವೇಷಗಳು ಅಜ್ಞಾನದಿಂದ ಉಂಟಾಗುತ್ತವೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ನಿಜ ಸ್ವಭಾವದ ಅಸ್ತಿತ್ವದಲ್ಲಿ ಈ ಕ್ರಿಯೆಗಳು ನಡೆಯುತ್ತಿರುತ್ತವೆ.
ಅಪ್ಪಟವಾದ ಸುಖವನ್ನು ಐಶ್ವರ್ಯದಿಂದಾಗಲಿ, ಅಧಿಕಾರದಿಂದಾಗಲಿ, ಮಕ್ಕಳಿಂದಾಗಲಿ, ಕೀತರ್ಿಯಿಂದಾಗಲಿ ಅಥವಾ ಸಂಶೋಧನೆಗಳಿಂದಾಗಲಿ ಬೋಗ ಸಾಮ್ರಾಜ್ಯಗಳಿಂದಾಗಲಿ ಅಳೆಯಲಾರೆವು ಅಥವಾ ನಿರೂಪಿಸಲಾರೆವು. ಆದರೆ ಇವೆಲ್ಲ ಕ್ಷಣಿಕ ಭೌತಿಕ ಸುಖವನ್ನು ನೀಡುವುದರಲ್ಲಿ ಸಂಶಯವಿಲ್ಲ. ಆದರೆ ಅಂತಿಮ ಪರಮಾರ್ಥದ ದೃಷ್ಟಿಯಲ್ಲಂತು ಇವು ಖಂಡಿತ ಸುಖವಲ್ಲ. ಏಕೆಂದರೆ ಈ ಎಲ್ಲವು ಅಯೋಗ್ಯವಾಗಿ ಪಡೆದಾಗ ಅಥವಾ ದುರುಪಯೋಗಗೊಳಿಸಲ್ಪಟ್ಟಾಗ ಈ ಎಲ್ಲಾ ಸುಖ ಸಂಪನ್ಮೂಲಗಳೇ ನೋವಿನ, ಅಪರಾಧಿ ಮನೋಭಾವದ ಮತ್ತು ದುಃಖದ ಮಡುವು ಆಗಿಬಿಡುತ್ತದೆ ಹೊರತು, ಹೊಂದಿದವರಿಗೆ ಸುಖ ಸಿಗುವುದಿಲ್ಲ.
ಅತ್ಯಾಕರ್ಷಕ ದೃಷ್ಯಗಳು, ಮೋಡಿ ಮಾಡುವ ಸಂಗೀತ, ಸುವಾಸನೆಯುತ ಸೌಗಂಧ ದ್ರವ್ಯಗಳು, ಸ್ವಾದಿಷ್ಟ ಆಹಾರ ಪಾನಿಯಗಳು ಮತ್ತು ಉದ್ರೇಕಗೊಳಿಸುವ ಸ್ಪರ್ಶಗಳು ನಮ್ಮನ್ನು ಹಾದಿ ತಪ್ಪಿಸುತ್ತವೆ ಮತ್ತು ಮೋಸಗೊಳಿಸುತ್ತವೆ ಹಾಗು ಇಂದ್ರೀಯ ಸುಖಗಳ ದಾಸರನ್ನಾಗಿ ಮಾಡುತ್ತವೆ. ಹಾಗೆಯೇ ಅವುಗಳಲ್ಲಿ ಕ್ಷಣಿಕ ಸುಖವು ಸಹಾ ಇದೆ ಎಂದು ಯಾರೂ ನಿರಾಕರಿಸುವಹಾಗಿಲ್ಲ. ಪೂರ್ವ ನಿರೀಕ್ಷಣೆಯ ಸಮಯದಲ್ಲಿ ಆಗಲಿ, ಇಂದ್ರೀಯ ತೃಪ್ತಿಯ ಸಮಯದಲ್ಲಿ ಆಗಲಿ ಅಥವಾ ಪುನಃ ಸ್ಮರಣೆಯಲ್ಲಾಗಲಿ ಅಂತಹ ಸುಖಗಳು ಕ್ಷಣದಲ್ಲಿ ಬಂದು ಪುನಃ ಮರೆಯಾಗುವ ಕ್ಷಣಿಕವೇ ಆಗಿದೆ. ಯಾವಾಗ ಇವನ್ನೆಲ್ಲಾ ಸಿಂಹಾವಲೋಕನ ಅಥವಾ ಪುನರ್ ಅವಲೋಕನ ಮಾಡಿದಾಗ ವ್ಯಕ್ತಿಗೆ ಇವು ಅದೆಷ್ಟು ಕ್ಷಣಿಕವೆಂದು ಅರಿವಾಗುತ್ತದೆ ಮತ್ತು ಅಂತಹ ಸುಖಗಳು ಅತೃಪ್ತಿದಾಯಕ ಎಂದು ಅರಿವಾಗುತ್ತದೆ. ಈ ರೀತಿಯ ಅನುಸ್ಮೃತಿಯಿಂದ ಉತ್ತಮ ಸತ್ಯದರ್ಶನಕ್ಕೆ ತಿಳುವಳಿಕೆಗೆ ದಾರಿ ಮಾಡಿಕೊಡುತ್ತದೆ.
ಭೌತಿಕ ಸ್ವತ್ತುಗಳು ಸುಖಕ್ಕೆ ಪೂರ್ವಸ್ಥಿತಿಗಳಾಗಿದ್ದರೆ, ಆಗ ಐಶ್ವರ್ಯ ಮತ್ತು ಸುಖವು ಸಮಾನಾರ್ಥ ಪಡೆಯುತ್ತಿದ್ದವು.
ತೀವ್ರ ಬಯಕೆಯ ಅಪಾರ ದಾಹವನ್ನು ಐಶ್ವರ್ಯವು ಎಂದಿಗೂ ತಣಿಸಲಾರದು. ನಮ್ಮ ಸ್ಥೂಲವಾದ ಆಹಾರದ ಮತ್ತು ಲೈಂಗಿಕತೆಯ ಮೃಗೀಯ ಬಯಕೆಗಳನ್ನು ನಾವು ತಣಿಸುತ್ತ ಹೋದರೆ ನಾವು ಎಂದಿಗೂ ಸುಖವಾಗಿ ಇರಲಾರೆವು. ಹಾಗಿದ್ದಿದ್ದರೆ ಪ್ರತಿ ರಂಗದಲ್ಲೂ ನಾವು ಉನ್ನತಿ ಕಾಣುತ್ತಿದ್ದೆವು. ಆಗ ಸುಖಕ್ಕೆ ದಾರಿಯೇ ಸಿದ್ಧವಾಗಿಬಿಡುತ್ತಿತ್ತು. ಆದರೆ ವಾಸ್ತವವಾಗಿ ಸ್ಪಷ್ಟವಾಗಿ ಹೇಳಬೇಕಾದರೆ ಹಾಗಿಲ್ಲ.
ಪ್ರಾಪಂಚಿಕ ಬಯಕೆಗಳನ್ನು ಎಂದಿಗೂ ಪೂರ್ಣವಾಗಿ ತೃಪ್ತಿಪಡಿಸಲಾರೆವು. ಏಕೆಂದರೆ ನಮಗೆ ಬೇಕಾಗಿರುವುದು ನಮಗೆ ದೊರೆತ ಕ್ಷಣದಲ್ಲೇ ನಾವು ಅದರಲ್ಲೇ ಅತೃಪ್ತರಾಗುವೆವು ಮತ್ತು ಬೇರೇನನ್ನೋ ಬಯಸುವೆವು. ಹೀಗಾಗಿ ಯಾವಾಗ ನಾವು ಬದಲಾವಣೆಗಳನ್ನು ಮತ್ತು ಕ್ಷಯಿಸುವಿಕೆಯನ್ನು ಹಲವು ಇಷ್ಟಪಟ್ಟ ವಸ್ತು ವಿಷಯಗಳಲ್ಲಿ ಕಾಣುವೆವೋ, ಆಗ ಅಸುಖವನ್ನು ಅನುಭವಿಸುವೆವು.
ಇಂದ್ರೀಯ ಸುಖವು ನಿಜವಾದ ಸುಖವಲ್ಲ. ನಿಜವಾದ ಸುಖವು ನಮಗೆ ದೊರೆಯುವುದು ಚಿತ್ತದ ಪೂರ್ಣ ಬಿಡುಗಡೆಯಿಂದಲೇ. ಸುಖದ ಸಂಪನ್ಮೂಲವು ಇರುವುದು ಭೌತಿಕತೆಯಲ್ಲಲ್ಲ, ಬದಲಾಗಿ ಮಾನಸಿಕ ಕ್ಷೊಭೆಗಳಿಂದ ಮುಕ್ತವಾದಾಗ ಪಡೆಯುವೆವು. ಪ್ರಾಪಂಚಿಕ ಐಶ್ವರ್ಯ ನಿಧಿಗಳು ಕ್ಷಣಿಕವಾಗಿದೆ. ಆದರೆ ಲೋಕೋತ್ತರ ಐಶ್ವರ್ಯಗಳಾದ ಶ್ರದ್ಧೆ, ಶೀಲ, ದಾನ, ಪ್ರಾಮಾಣಿಕತೆ ಮತ್ತು ಪ್ರಜ್ಞಾಗಳು ಅವಿನಾಶಿಯಾಗಿವೆ. ಭಾವೋದ್ರೇಕದ ಅಂಟುವಿಕೆ, ದ್ವೇಷ ಮತ್ತು ಅಸೂಯೆಗಳು ವ್ಯಕ್ತಿಯನ್ನು ತುಚ್ಛನನ್ನಾಗಿಸುವವು. ಆದರೆ ಮೆತ್ತಾ (ಮೈತ್ರಿ), ಕರುಣಾ ಮುದಿತಾ, ಉಪೇಕ್ಖಾ ಇವು ಮಾನವನನ್ನು ಉದಾತ್ತನನ್ನಾಗಿಸಿ, ಈ ಜನ್ಮದಲ್ಲೇ ಜೀವನವನ್ನೇ ದಿವ್ಯವನ್ನಾಗಿಸುವುದು.
ಮಾನವ ತನ್ನ ಆಂತರ್ಯದ ಶಾಂತಿಯನ್ನು ನಿರ್ವಹಿಸಲು ಮತ್ತು ವೃದ್ಧಿಸಲು ತನ್ನ ಯೋಚನೆಗಳನ್ನು ಏಕಾಗ್ರವಾಗಿ ಒಳಹರಿಸಬೇಕೆ ಹೊರತು ಬಾಹ್ಯದಲ್ಲಲ್ಲ. ಲೋಭದ, ದ್ವೇಷದ ಮತ್ತು ಮೋಹದ ನಾಶಕಾರಿ ಬಲಗಳ ಅಪಾಯ ಮತ್ತು ಅವನತಿಯನ್ನು ಅರಿಯಲೇಬೇಕು. ಹಾಗು ಪರೋಪಕಾರಿ ಬಲಗಳಾದ ದಯೆ, ಮೈತ್ರಿ ಮತ್ತು ಸೌಹಾರ್ದತೆಗಳನ್ನು ಪೋಷಿಸಿ ಮತ್ತು ವೃದ್ಧಿಗೊಳಿಸುವುದನ್ನು ಕಲಿಯಲೇಬೇಕು. ಯುದ್ಧರಂಗವು ನಮ್ಮೊಳಗೆಯೇ ಇದೆ. ನಮ್ಮೊಳಗೆ ಇರುವ ಯುದ್ಧ ರಂಗದಲ್ಲಿ ಮಹಾಯುದ್ಧಕ್ಕಾಗಿ ಹೋರಾಡಬೇಕು ಮತ್ತು ಜಯಿಸಬೇಕಾಗಿದೆ. ಈ ಮಹಾಯುದ್ಧವನ್ನು ಶಸ್ತ್ರಗಳೊಂದಿಗೆ ಹೋರಾಡುವುದಲ್ಲ, ಬದಲಾಗಿ ಮಾನಸಿಕ ಪೂರ್ಣ ಜಾಗ್ರತೆಯಿಂದ ಮನಸ್ಸಿನಲ್ಲಿರುವ ಎಲ್ಲಾ ಸಕಾರಾತ್ಮಕ ಮತ್ತು ನಕಾರಾತ್ಮಕ ಬಲಗಳೊಂದಿಗೆ ಹೋರಾಡುವುದು. ಈ ಜಾಗ್ರತೆಯೇ ಒಂದು ಬೃಹತ್ ಹೆಬ್ಬಾಗಿಲಿನ ಕೀಲಿ ಕೈಯಾಗಿದೆ. ಆ ಬಾಗಿಲಿನಿಂದಲೇ ಘರ್ಷಣೆ ಮತ್ತು ಕಲಹಗಳು ಹಾಗೆಯೇ ಕುಶಲ ಯೋಚನೆಗಳು ಬಯಲಿಗೆ ಬರುತ್ತದೆ.
ಎಲ್ಲಾ ಸುಖಗಳಿಗೆ ಮತ್ತು ಎಲ್ಲಾ ದುಃಖಗಳಿಗೆ ಚರಮ ಸಂಪನ್ಮೂಲ ಮನಸ್ಸೇ ಆಗಿದೆ. ಜಗತ್ತಿನಲ್ಲಿ ಸುಖಕರವಾಗಿರಬೇಕಾದರೆ, ಪ್ರತಿ ವ್ಯಕ್ತಿಯ ಮನಸ್ಸಿನಲ್ಲಿ ಶಾಂತಿ ಮತ್ತು ಸುಖ ನೆಲಸಬೇಕು. ವ್ಯಕ್ತಿಯ ಸುಖದಿಂದಲೇ ಸಮಾಜದ ಸುಖವಾಗುತ್ತದೆ. ಅದೇವೇಳೆ ಸಮಾಜದ ಸುಖವೆಂದರೆ ದೇಶದ ಸುಖವಾಗಿದೆ. ದೇಶಗಳ ಸುಖಗಳಿಂದಲೇ ಜಗತ್ತಿನ ಸುಖ ಶಾಂತಿಯು ಸ್ಥಾಪಿತವಾಗುತ್ತದೆ.
ಜೀವನದ ಪಾಠಗಳಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ ನಿಜವಾದ ವಿಜಯವು ಕಲಹದಿಂದ ಎಂದಿಗೂ ಗಳಿಕೆಯಾಗುವುದಿಲ್ಲ. ಯಶಸ್ಸು ಎಂದಿಗೂ ಸಂಘರ್ಷದಿಂದ ಸಿದ್ಧಿಯಾಗುವುದಿಲ್ಲ. ಹಾಗೆಯೇ ಸುಖವು ಎಂದಿಗೂ ಕೆಟ್ಟಭಾವವೇಶದಿಂದ ಅನುಭವಿಸಲಾಗುವುದಿಲ್ಲ. ಅದರಂತೆಯೇ ಶಾಂತಿಯು ಹೆಚ್ಚಿನ ಐಶ್ವರ್ಯದ ಸಂಗ್ರಹದಿಂದಾಗಲಿ ಅಥವಾ ಲೋಕದ ಅಧಿಪತ್ಯದಿಂದಾಗಲಿ ಪ್ರಾಪ್ತಿಮಾಡಲಾಗುವುದಿಲ್ಲ. ಸ್ವಾರ್ಥವನ್ನು ತ್ಯಜಿಸಿದಾಗಲೇ ಮತ್ತು ಮೈತ್ರಿಯುತ ಕಾರ್ಯಗಳಿಂದ ಸಹಾಯ ಮಾಡಿದಾಗಲೇ ಶಾಂತಿಯನ್ನು ಪ್ರಾಪ್ತಿಮಾಡಬಹುದು. ಎಲ್ಲಾ ವಿರೋಧ ಬಲಗಳನ್ನು ಹೃದಯದಲ್ಲಿ ಗೆದ್ದಾಗಲೇ ಶಾಂತಿಯು ಸ್ಥಾಪಿತವಾಗುತ್ತದೆ. ಇದರಿಂದ ಆರೋಗ್ಯಕರ ಮನಸ್ಸು ನಿರ್ವಹಿಸಲು ಸಹಾಯವಾಗುತ್ತದೆ ಮತ್ತು ಸುಖ ಹಾಗೂ ಸಂತೃಪ್ತಿಭರಿತ ಶ್ರೀಮಂತ ಜೀವನ ನಡೆಯಲು ಸಹಾಯವಾಗುತ್ತದೆ.

                                                                      - 0 - 0 - 0  

No comments:

Post a Comment

ಪರಧರ್ಮಗಳ ಬಗ್ಗೆ ಬೌದ್ಧರ ಸೌಹಾರ್ದ ಮನೋಭಾವ

 ಪರಧರ್ಮಗಳ ಬಗ್ಗೆ  ಬೌದ್ಧರ ಸೌಹಾರ್ದ ಮನೋಭಾವ ಈ ಲೇಖನದ ಉದ್ದೇಶವೇನೆಂದರೆ ಧರ್ಮದ ಉತ್ತಮ ತಿಳುವಳಿಕೆಗೆ, ಧಾಮರ್ಿಕ ಸಹಿಷ್ಣುತೆಗೆ ಮತ್ತು ಬೌದ್ಧರ ದೃಷ್ಟಿಕೋನದಿಂದ ವಿಶಾ...