Saturday, September 18, 2021

ಪರಧರ್ಮಗಳ ಬಗ್ಗೆ ಬೌದ್ಧರ ಸೌಹಾರ್ದ ಮನೋಭಾವ

 ಪರಧರ್ಮಗಳ ಬಗ್ಗೆ 

ಬೌದ್ಧರ ಸೌಹಾರ್ದ ಮನೋಭಾವ



ಈ ಲೇಖನದ ಉದ್ದೇಶವೇನೆಂದರೆ ಧರ್ಮದ ಉತ್ತಮ ತಿಳುವಳಿಕೆಗೆ, ಧಾಮರ್ಿಕ ಸಹಿಷ್ಣುತೆಗೆ ಮತ್ತು ಬೌದ್ಧರ ದೃಷ್ಟಿಕೋನದಿಂದ ವಿಶಾಲ ಅರ್ಥದಲ್ಲಿ ಅರಿಯುವಿಕೆ ಹಾಗು ಬೌದ್ಧರು ಹೇಗೆ ಪರಧಮರ್ಿಯರನ್ನು ಕಾಣುತ್ತಾರೆ ಎಂಬುದು ತಿಳಿದುಕೊಳ್ಳಬಹುದು.

ಧರ್ಮದ ಆಳ ಅರ್ಥದ ವಿವರಣೆ ಎಂದರೆ ಸ್ವಧರ್ಮದ ಎತ್ತಿಹಿಡಿಯುವಿಕೆ ಹಾಗು ಪರಧರ್ಮವನ್ನು ಯಾವುದೇ ರೀತಿಯಲ್ಲಿ ಅಸೌಜನ್ಯ ಅಥವಾ ಅಪಮಾನ ಮಾಡದಿರುವಿಕೆ. ಈ ರೀತಿಯಾಗಿ ನಾವು ಪರಸ್ಪರ ಅಥರ್ೈಸುವಿಕೆ, ಪರಸ್ಪರ ಸಹಕಾರ ಮತ್ತು ಸರ್ವ ಸಹ ಧಮರ್ಿಯರೊಂದಿಗೆ ತಾಳ್ಮೆಯಿಂದಿರುವಿಕೆ. ಈ ರೀತಿಯಲ್ಲೇ ಧಾಮರ್ಿಕ ಸಹಿಷ್ಣುತೆ ಸಾಧಿಸುವಿಕೆ ಮಾಡಬೇಕು.

ಜನರು ಯಾವಾಗಲು ಧಾಮರ್ಿಕ ತಾಳ್ಮೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಕೆಲವರು ಮಾತ್ರ ಪ್ರಾಯೋಗಿಕ ಹಾದಿಯಲ್ಲಿದ್ದು ಧಾಮರ್ಿಕ ಸಹಿಷ್ಣುತೆಯನ್ನು ಸಾಧಿಸುತ್ತಾರೆ. ಈ ಲೇಖನವನ್ನು ಓದುಗರು ಸರಿಯಾದ ಧಾಮರ್ಿಕ ಸಹಿಷ್ಣುತೆಯ ಸ್ಪಷ್ಟ ಚಿತ್ರೀಕರಣ ಪಡೆದು ನಿಜವಾದ ಧಾಮರ್ಿಕ ಸಹಿಷ್ಣುಗಳಾಗುತ್ತಾರೆ ಎಂಬ ನಂಬಿಕೆಯಿಂದ ರಚಿಸಲಾಗಿದೆ. ನಾವು ನಮ್ಮ ಶ್ರೇಷ್ಠತ್ವ ಭಾವವನ್ನು ತೆಗೆಯಲು ಪ್ರಯತ್ನಿಸಬೇಕು. ನಮ್ಮ ಅನನ್ಯ ಸಂಶಯ, ನಮ್ಮ ಧಾಮರ್ಿಕ ಪೂರ್ವಗ್ರ ಪೀಡಿತತೆ ಮತ್ತು ನಮ್ಮ ಸ್ವಾರ್ಥ ಚಾಲಿತ ಶಕ್ತಿ, ಇವೆಲ್ಲವನ್ನೂ ನಾವು ಮೀರಬೇಕು. ಆದುದರಿಂದ ಧಮ್ಮಜ್ಞಾನವು ಧರ್ಮ ಸಹಿಷ್ಣುತೆಗಿಂತ ಶ್ರೇಷ್ಠವಾದುದು. 

ಆದ್ದರಿಂದ ಧಾಮರ್ಿಕ ತಿಳುವಳಿಕೆಯು ಧಾಮರ್ಿಕ ಸಹಿಷ್ಣತೆಗಿಂತ ಮಿಗಿಲಾದುದು. ಎಲ್ಲಾ ಸಹ ಧಾಮರ್ಿಕರು ಮಾನವನ ವಿಮೋಚನೆ ಮತ್ತು ಜ್ಞಾನೋದಯದ ಸಾಧಾರಣ ಕಾರಣಕ್ಕಾಗಿ ಕಾರ್ಯ ಮಾಡುತ್ತಿದ್ದಾರೆ. ಆದರೆ ಸಂಬೋಧಿಯ ಮತ್ತು ನಿಬ್ಬಾಣದ ಸಂಶೋಧನೆಯು ಸತ್ಯದ ಸಂಶೋಧನೆ ಆಗಿದೆ. ದುರಾದೃಷ್ಟಕರ ಸಂಗತಿ ಏನೆಂದರೆ ಬಹಳಷ್ಟು ಧಾಮರ್ಿಕ ಆಚರಣೆಗಳು ಸತ್ಯವೆಂದು ತೋರಿಸಲ್ಪಡುತ್ತಿವೆ. ಆದರೆ ಅವುಗಳು ಸತ್ಯದಿಂದ ಬಹಳಷ್ಟು ದೂರವಿದೆ. ಆದರೆ ಸತ್ಯದ ಧಮ್ಮದ ಅನುಯಾಯಿಗಳಾದ ನಾವು ಸಾಕಷ್ಟು ಧೈರ್ಯ, ಸಹನೆ, ನಂಬಿಕೆಯಿಡಬೇಕಾಗಿದೆ. ಯಾವುದು ಮಿಥ್ಯಾ ದೃಷ್ಟಿ, ಮೂಢನಂಬಿಕೆಗಳಿಂದ ಕೂಡಿದುದಾಗಿದೆಯೋ ಅವುಗಳ ಸ್ವರೂಪವನ್ನು, ಸತ್ಯವನ್ನು ಅದು ಹೇಗಿದೆಯೋ ಹಾಗೆಯೇ ವಿವರಿಸಲು ಸಾಕಷ್ಟು ವಿಚಾರಶೀಲತೆಬೇಕಾಗಿದೆ. ನಾವು ನಮ್ಮ ಕರ್ತವ್ಯದಿಂದ ಬೀಳುತ್ತಿದ್ದೇವೆ. ಏಕೆಂದರೆ ನಾವು ಯಾವುದು ಸತ್ಯವಲ್ಲ ಎಂದು ನಮಗೆ ಮನವರಿಕೆ ಆಗಿಯೂ ಸಹಾ ನಾವು ಅವನ್ನೆಲ್ಲಾ ಮನದಲ್ಲಿ ಹಚ್ಚಿಕೊಂಡಿದ್ದೇವೆ. ಅದೇರೀತಿಯಲ್ಲಿ ನಾವು ಧಾಮರ್ಿಕ ಸಹಿಷ್ಣುತೆಯನ್ನು ಪಾಲಿಸದಿದ್ದರೆ ನಾವು ತಪ್ಪಾಗುತ್ತೇವೆ. (ತಪ್ಪನ್ನು ತ್ಯಜಿಸದೆ ಹಾಗೆ ಇಟ್ಟುಕೊಂಡರೆ ಅದು ಅವನತಿಯ ಸಂಕೇತವಾಗುತ್ತದೆ). ಸತ್ಯದ ಸಂಶೋಧನೆಯ ಹಾದಿಯಲ್ಲಿ ನಾವು ಸ್ಪಧರ್ಾತ್ಮಕ ದೃಷ್ಟಿಕೋನ (ಮನೋಭಾವ)ವನ್ನು ಬಿಡಬೇಕು ಮತ್ತು ಧಾಮರ್ಿಕ ಸೌಹಾರ್ದತೆಗೆ ಮತ್ತು ಮನುಕುಲದ ಉದ್ಧಾರಕ್ಕಾಗಿ ಕೈಗೆ ಕೈ ಜೋಡಿಸಿ ಈ ಶ್ರೇಷ್ಠ ಗುರಿಯನ್ನು ಸಾಧಿಸಬೇಕಾಗಿದೆ. 

ಬುದ್ಧರು ತಮ್ಮ ಕಾಲದಲ್ಲಿದ್ದ ಕೆಲವು ಆಚರಣೆಗಳಲ್ಲಿ ಯಾವುದೇ ಧಾಮರ್ಿಕ ಮಹತ್ವವಿಲ್ಲ ಎಂದು ಸ್ಪಷ್ಟವಾಗಿ ತಿಳುವಳಿಕೆ ಮೂಡಿಸಿ, ತೋರಿಸಿ ಕೊಟ್ಟಿದ್ದಾರೆ ಮತ್ತು ಬುದ್ಧಭಗವಾನರು ತಮ್ಮ ಅನುಯಾಯಿಗಳಿಗೆ ತಮಗೆ ಹಾಗು ತಮ್ಮ ಅನುಯಾಯಿಗಳಿಗೆ ನೀಡುವಂತಹ ಗೌರವ ಮತ್ತು ಆತಿಥ್ಯವನ್ನು ಇತರ ಧರ್ಮದ ನಾಯಕರಿಗೂ (ಬ್ರಾಹ್ಮಣ, ಜೈನ, ಇತ್ಯಾದಿ) ನೀಡಿ ಎಂದು ಬೋಧಿಸಿದ್ದಾರೆ. ಬುದ್ಧರು ತಮ್ಮ ಬೋಧನೆಯಲ್ಲಿ ಯಾರೂ ಸಹ ಸಮಣ ಅಥವಾ ಬ್ರಾಹ್ಮಣರಿಗೆ ಯಾವುದೇ ರೀತಿಯಲ್ಲಿ ಹಿಂಸೆ ನೀಡದಿರಿ ಎಂದು ಹೇಳಿದ್ದಾರೆ. ಇಲ್ಲಿ ಸಮಣ ಮತ್ತು ಬ್ರಾಹ್ಮಣ ಎಂದರೆ ಪರಧಮರ್ಿಯರು ಎಂದರ್ಥವಾಗಿದೆ. ಹಾಗೆಯೇ ಬುದ್ಧರು ತಮ್ಮ ಬೋಧನೆಯಲ್ಲಿ ಬ್ರಾಹ್ಮಣನಿಗೆ ಅಥವಾ ಭಿಕ್ಷುವಿಗೆ ಅಥವಾ ಸಮಣನಿಗೆ ಮೋಸ ಮಾಡಿದರೆ ಅಥವಾ ಸುಳ್ಳು ಹೇಳಿದರೆ ಅದು ಆತನ ಅವನತಿಗೆ ಕಾರಣ ಎಂದು ಹೇಳಿದ್ದಾರೆ. ಈ ರೀತಿಯಾಗಿ ಬುದ್ಧರು ಸರ್ವರನ್ನೂ ಸಮಾನ ದೃಷ್ಟಿಕೋನದಿಂದ ಸಮಾನ ಮೈತ್ರಿಭಾವದಿಂದ ಕೂಡಿದ್ದರು ಎಂದು ಮತ್ತು ಅದನ್ನೇ ಬೋಧಿಸಿದ್ದರು ಎಂದು ವ್ಯಕ್ತವಾಗುತ್ತದೆ.

ಬೌದ್ಧರ ಗುರಿಯೇನೆಂದರೆ ಪ್ರತಿಯೊಬ್ಬರು ಉದಾತ್ತ ಜೀವನವನ್ನು ಆಚರಿಸುತ್ತ ಯಾರಿಗೂ ಯಾವುದೇ ರೀತಿಯಲ್ಲಿ ಹಿಂಸಿಸದೆ ಇರುವುದು. ಹಾಗು ಮಾನವತೆಯ ಸದ್ಗುಣಗಳನ್ನು ವೃದ್ಧಿಸುವುದು. ಈ ರೀತಿಯಾಗಿ ಮಾನವನ ಘನತೆ, ಸರ್ವರನ್ನು ಉದ್ಧರಿಸುವ, ಮಹಾಕರುಣೆ, ನಿಷ್ಪಕ್ಷಪಾತದ ಸಾರ್ವತ್ರಿಕ ದಯೆ ಮೈತ್ರಿ, ಪಾಪದಿಂದ ದೂರವಾಗುವಂತಹ ಮನಸ್ಸು ಮತ್ತು ಚಿತ್ತಪರಿಶುದ್ಧತೆ ಪ್ರಾಪ್ತಿಮಾಡಿ ಶಾಂತಿ ಮತ್ತು ಸುಖವನ್ನು ಗಳಿಸುವಂತಹದ್ದಾಗಿದೆ. 

ಬೌದ್ಧ ಧರ್ಮವು ಎಂತಹ ಧರ್ಮ ಅಂದರೆ ಅದು ಜನರನ್ನು ಬಾಳು ಮತ್ತು ಬಾಳಲು ಬಿಡು ಎಂದು ಬೋಧಿಸುತ್ತದೆ. ಇಡೀ ಜಗತ್ತಿನ ಇತಿಹಾಸದಲ್ಲಿ ಎಲ್ಲಿಯೂ, ಎಂದಿಗೂ ಧಮ್ಮದ ಹೆಸರಿನಲ್ಲಿ ಒಂದು ತೊಟ್ಟು ರಕ್ತ ಹರಿದಿಲ್ಲ. ಕವಡೆಯಷ್ಟು ಆಸ್ತಿಹಾನಿ ಆಗಿಲ್ಲ. ತಮ್ಮ ಧಮರ್ೊದ್ಧಾರಕ್ಕೆ ಯಾರಿಗೂ ಯಾವುದೇ ರೀತಿಯಲ್ಲೂ ನಷ್ಟ ಉಂಟುಮಾಡಿಲ್ಲ. ಬೌದ್ಧರು ತಮ್ಮ ಪ್ರಾಪಂಚಿಕ ಉನ್ನತಿಗಾಗಿ ಮತ್ತು ಶಾಂತಿಗಾಗಿ ಪರಧಮರ್ಿಯರನ್ನು ತಮ್ಮ ತಡೆಯೆಂದು ಭಾವಿಸಿಲ್ಲ. (ಬದಲಾಗಿ ಅವರು ತಮ್ಮ ಸಹೋದರರೆಂದು ಮೈತ್ರಿ ಪ್ರಸರಿಸುತ್ತಾರೆ).

ಬುದ್ಧರ ಸಂದೇಶವು ಒಂದು ಆಹ್ವಾನವಿದ್ದಂತೆ. ಅದೆಂದರೆ ಸರ್ವ ಸಮಾನತೆಯ ಸುಖ ಮತ್ತು ಕ್ಷೇಮಾಭಿವೃದ್ಧಿಗಾಗಿ ಸರ್ವರೂ ಕೈಜೋಡಿಸಿ ಸಾರ್ವತ್ರಿಕ ಸೋದರತ್ವವನ್ನು ಸಾಧಿಸಿ, ಸರ್ವರ ಹಿತಕ್ಕಾಗಿ ಶ್ರಮಿಸುವುದು ಆಗಿದೆ. ಅವರು ಜನರಿಂದ ಆಯ್ಕೆಯಾಗಿರಲಿಲ್ಲ. ಅವರು ಸಹಾ ತಮ್ಮನ್ನು ಆಯ್ಕೆಯಾದವರು ಎಂದು ಭಾವಿಸಿರಲಿಲ್ಲ.

ಬುದ್ಧ ಭಗವಾನರ ಮೊದಲ ಧಮ್ಮದೂತರು ಅರಹಂತರಾಗಿದ್ದರು. ಅಂದರೆ ಪರಿಶುದ್ಧರು, ಪರಿಪೂರ್ಣರು ಮತ್ತು ಪರಮ ಪವಿತ್ರರಾಗಿದ್ದವರು.  ಅವರು ತಮ್ಮ ಪರಿಶ್ರಮ, ತ್ಯಾಗ ಮತ್ತು ಮಾನಸಿಕ ಸುಶಿಕ್ಷಣದಿಂದ ಪರಿಪೂರ್ಣರಾಗಿ ಶ್ರೇಷ್ಠರಾಗಿದ್ದಂತಹವರು. ಆ ಶಿಷ್ಯರನ್ನು ಕಳುಹಿಸುವ ಮುನ್ನ ಬುದ್ಧರು ಅವರಿಗೆ ಹೀಗೆ ಹೇಳಿದ್ದರು:

ಹೋಗಿ, ಓ ಭಿಕ್ಷುಗಳೇ, ಬಹುಜನ ಹಿತಕ್ಕಾಗಿ, ಬಹುಜನ ಸುಖಕ್ಕಾಗಿ ಲೋಕಾನುಕಂಪೆಯಿಂದ ಚಲಿಸಿ. ದೇವ ಮತ್ತು ಮನುಷ್ಯರ ಕಲ್ಯಾಣಕ್ಕಾಗಿ ವಿವರಿಸಿ. ಓ ಭಿಕ್ಷುಗಳೇ, ಈ ಪರಮ ಉದಾತ್ತ ಧಮ್ಮವನ್ನು (ಬೋಧನೆಯನ್ನು ಮತ್ತು ಸತ್ಯಗಳನ್ನು) ಪವಿತ್ರ ಜೀವನವನ್ನು ಪರಿಶುದ್ಧತೆಯನ್ನು ಮತ್ತು ಪರಿಪೂರ್ಣತೆಯನ್ನು ಬೋಧಿಸಿ.

ಈ ಬುದ್ಧಿವಾದದ ಪ್ರಕಾರ ಬುದ್ಧರು ಒಳಿತು ಮತ್ತು ಕೆಡಕಿನ ವ್ಯತ್ಯಾಸ ತಿಳಿಸಲು ಇಚ್ಛಿಸಿದ್ದರು. ಹಾಗೆಯೇ ಅವರು ಹೇಗೆ ಮಾನವ ಸುಖಿಯಾಗಿರಬಲ್ಲ, ಶಾಂತವಾಗಿರಬಲ್ಲ ಮತ್ತು ಋಜುತ್ವದ ಜೀವನವನ್ನು ನಡೆಸಬಲ್ಲ ಎಂದು ತಿಳಿಸಲು ಇಚ್ಛಿಸಿದ್ದರು. ಅವರು ಎಂದಿಗೂ ತಮ್ಮ ಶಿಷ್ಯರಿಗೆ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡಿ ಎಂದು ಬೋಧಿಸಿಲ್ಲ. ಅವರ ದೃಷ್ಟಿಯಲ್ಲಿ ಪರಿವರ್ತನೆ ಎಂದರೆ ಮಿಥ್ಯದಿಂದ ಸತ್ಯದೆಡೆಗೆ, ತುಚ್ಛತೆಯಿಂದ ಶ್ರೇಷ್ಠತ್ವದೆಡೆಗೆ ಮತ್ತು ಮಿಥ್ಯ ಜೀವನದಿಂದ ಸಮ್ಯಕ್ ಜೀವನದ ಹಾದಿಯೆಡೆಗೆ ಪರಿವರ್ತನೆ ಹೊಂದುವುದಾಗಿತ್ತು ಹೊರತು ಮತಾಂತರವಾಗಿರಲಿಲ್ಲ.

ಬುದ್ಧರು ಎಂದಿಗೂ ಯಾವುದೇ ಧರ್ಮವನ್ನು ಟೀಕಿಸಲಿಲ್ಲ ಅಥವಾ ಅವಹೇಳನ ಮಾಡಿರಲಿಲ್ಲ. ಬದಲಾಗಿ ಅವರು ಜನರಿಗೆ ಜ್ಞಾನೋದಯ ವನ್ನುಂಟು ಮಾಡುತ್ತಿದ್ದರು. ಅವರು ಅತಿರೇಕದ ಮಾರ್ಗಗಳಾದ ದೇಹದಂಡನೆಯ ನಿರರ್ಥಕತೆ ಹಾಗು ಇಂದ್ರಿಯ ಭೋಗದ ತುಚ್ಛತೆ ಹಾಗು ಅನರ್ಥಕತೆಯನ್ನು ವಿವರಿಸುತ್ತಿದ್ದರು. ಹಾಗೆಯೇ ಧಮ್ಮದ ಹೆಸರಿನಲ್ಲಿದ್ದ ಮೂಢನಂಬಿಕೆ ಮತ್ತು ಅರ್ಥಹೀನ ಕ್ರಿಯೆಗಳನ್ನು ತಡೆಯಲು ಯತ್ನಿಸಿದ್ದರು. 

ನಿಜವಾದ ಧರ್ಮ

ಒಂದು ಪ್ರಶ್ನೆ : ನಿಜವಾದ ಧಮ್ಮವು ಏನನ್ನು ಒಳಗೊಂಡಿರುತ್ತದೆ? 

ಇದಕ್ಕೆ ಬುದ್ಧರು ಸ್ವತಂತ್ರವಾದ ಉತ್ತರ ನೀಡಿದರು ಯಾವ ಯಾವ ಬೋಧನೆಯಲ್ಲಿ ನಾವು 4 ಆರ್ಯ ಸತ್ಯಗಳನ್ನು ಮತ್ತು ಆರ್ಯ ಅಷ್ಠಾಂಗ ಮಾರ್ಗವನ್ನು ಕಾಣುತ್ತೇವೆಯೋ ಮತ್ತು ಎಲ್ಲೆಲ್ಲಿ ಪರಮಾರ್ಥದ ವಿಕಾಸ ಹೊಂದಿರುವ ಅಪ್ಪಟ ಹಿಂಬಾಲಕರು ಇದ್ದಾರೋ ಅಲ್ಲಿ ಧಮ್ಮವು ನೆಲೆಸಿರುತ್ತದೆ. ಅವರೆಂದಿಗೂ ಬುದ್ಧ ಧರ್ಮ ಮಾತ್ರ ಏಕೈಕ ನಿಜವಾದ ಧರ್ಮ ಎಂದು ಹೇಳಿಲ್ಲ. ಆದರೆ ಸತ್ಯಾನ್ವೇಷಿಯು ಎಲ್ಲೆಲ್ಲಿ ಸತ್ಯವನ್ನು ಕಾಣುತ್ತಾರೋ (ಅದು ಅಲ್ಪವೇ ಆಗಿರಲಿ) ಆತ ಅದನ್ನು ಗೌರವಿಸಬೇಕು ಮತ್ತು ಸ್ವೀಕರಿಸಬೇಕು. ಇದರ ಅರ್ಥ ಏನೆಂದರೆ, ನಾವು ಪರಧರ್ಮಗಳ ವಿಚಾರಭರಿತ, ಯೋಗ್ಯ ಬೋಧನೆಗಳನ್ನು ಅಲಕ್ಷಿಸುವಂತಿಲ್ಲ. ಇಂತಹ ದೃಷ್ಟಿಕೋನದಿಂದ ಸ್ಪಷ್ಟವಾಗಿ ತೋರಿಸುವುದು ಏನೆಂದರೆ ಬುದ್ಧರು ಎಂದಿಗೂ ಪರಧರ್ಮಗಳ ಬಗ್ಗೆ ಪೂವರ್ಾಗ್ರಹ ಪೀಡಿತರಾಗಿರಲಿಲ್ಲ. ಹಾಗೆಯೇ ಅವರು ಎಂದಿಗೂ ಧಾಮರ್ಿಕ ಸತ್ಯವನ್ನು ಇದೊಂದೇ ಸತ್ಯ ಎಂದು ವಿವಾದ ಹುಟ್ಟಿಸಲಿಲ್ಲ. ಅವರು ತೋರಿಸುತ್ತಿದ್ದುದು, ಹುಡುಕುತ್ತಿದ್ದುದು ಒಂದೇ ಒಂದು ವಿಷಯವಾಗಿತ್ತು ಅದೇ ಸತ್ಯ. ಅವರ ಎಲ್ಲಾ ಬೋಧನೆಗಳು ನಾಲ್ಕು ಆರ್ಯಸತ್ಯಗಳಲ್ಲಿದೆ, ಅದೆಂದರೆ ದುಃಖಸತ್ಯ, ಅದರ ಕಾರಣ, ಅದರ ನಿರೋಧ ಮತ್ತು ದುಃಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗ.

ಯಾವಾಗಲೇ ಆಗಲಿ ಬುದ್ಧರು ಅವರ ಶಿಷ್ಯರಿಗೆ ಹೀಗೆ ಮಾಡಿ ಅಥವಾ ಇದರಿಂದ ದೂರವಿರಿ ಎಂದು ಬೋಧಿಸುವ ಮುನ್ನ ಶಿಷ್ಯರಿಗೆ ಅದಕ್ಕೆ ಕಾರಣ, ಅದರ ಲಾಭ, ಪರಿಣಾಮ ತಿಳಿಸುತ್ತಿದ್ದರು. ಹೀಗೆ ಮಾಡುವುದರಿಂದ ಅಥವಾ ಇವರಿಂದ ದೂರವಿರುವುದರಿಂದ ಅವರಿಗೆ ಸುಖ ಮತ್ತು ಕ್ಷೇಮ ಲಭಿಸುತ್ತದೆ ಎಂದು ವಿವರಿಸುತ್ತಿದ್ದರು. ಅಷ್ಟೇ ಅಲ್ಲ, ಅವರಿಂದ ಪರರ ಸುಖ ಮತ್ತು ಕ್ಷೇಮವು ಸಿಗುತ್ತದೆ ಎಂದು ಹೇಳುತ್ತಿದ್ದರು. ಅವರು ಹೀಗೆ ಹೇಳುತ್ತಿದ್ದರು, ಇದರಿಂದ ನಿಮಗೆ ಮತ್ತು ಪರರಿಗೆ ಒಳಿತಾಗುತ್ತದೆ ಎಂದು ಮನವರಿಕೆಯಾದರೆ ನೀವು ಮಾಡಿ, ಇಲ್ಲದೇ ಹೋದರೆ ನಿಮಗೆ ಮತ್ತು ಪರರಿಗೆ ಹಾನಿ ಎಂದು ಅರಿವಾದರೆ ಮಾಡದಿರಿ.

ಒಬ್ಬ ಸಮಾಜ ಸುಧಾರಕರಾಗಿ ಬುದ್ಧರು ಮಾನವನ ದುಃಖದ ಆಳವಾದ ಬೇರುಗಳನ್ನು ಕಂಡುಹಿಡಿದರು. ಅದೇ ಲೋಭ, ದ್ವೇಷ ಮತ್ತು ಮೋಹ. ಇವೇ ಮಾನವನ ಮನಸ್ಸಿನಲ್ಲಿ ಬೇರೂರಿರುವ ವಿಷಗಳು. ಆದರಿಂದ ಮಾನವನ ಮನಸ್ಸು ಸುಧಾರಿತವಾದರೆ ಮಾತ್ರ ಸುಪರಿಣಾಮಕಾರಿ ಯಾಗುತ್ತದೆ. ಬಾಹ್ಯ ಜಗತ್ತನ್ನು ಬಲತ್ಕಾರವಾಗಿ ಸುಧಾರಿಸುವುದು ತಾತ್ಕಾಲಿಕ ಪರಿಣಾಮವನ್ನುಂಟು ಮಾಡುತ್ತದೆ. ಆದರೆ ಯಾವುದನ್ನು ಮಾನವನ ಆಂತರ್ಯದ ಮನಸ್ಸಿನಲ್ಲಿ ಪರಿವರ್ತನೆ ಮಾಡಿದಾಗ ಅದು ನಿರಂತರ ಸುಪರಿಣಾಮವನ್ನುಂಟು ಮಾಡುತ್ತದೆ.

ಪಾಪ ಪ್ರವೃತ್ತಿಗಳಾದ ಲೋಭ, ದ್ವೇಷ ಮತ್ತು ಮೋಹಗಳನ್ನು ದಾನ-ವೈರಾಗ್ಯ, ಮೈತ್ರಿ-ಕರುಣೆ ಮತ್ತು ಪ್ರಜ್ಞಾ, ಇವುಗಳ ಮೂಲಕ ಶೀಘ್ರವಾಗಿ ದಾಟಬಹುದು, ಪಾರಾಗಬಹುದು. ಹಾಗೆ ಆದಾಗ ಮಾತ್ರ ಮಾನಸಿಕ ಪರಿಶುದ್ಧತೆ ಉಂಟಾಗಿ ಪ್ರಶಾಂತತೆ ಮತ್ತು ಸುಖವು ಧಮ್ಮದ ಮೂಲಕ ಪರಿಣಾಮಕಾರಿಯಾಗಿ ಲಭಿಸುತ್ತದೆ. 

ಬೌದ್ಧ ಧಮ್ಮವೇ ಜಗತ್ತಿನ ಪ್ರಥಮ ಧಮ್ಮದೂತರ ಧರ್ಮವಾಗಿದೆ. ಸುಮಾರು 2300 ವರ್ಷಗಳ ಹಿಂದೆ ಭಾರತದ ಮಹಾನ್ ಸಾಮ್ರಾಟ ಚಕ್ರವತರ್ಿ ಅಶೋಕನು ಭಾರತವನ್ನು ಆಳುತ್ತಿದ್ದಾಗ (ಕ್ರಿ.ಪೂ. 305-268) ಆತನಿಗೆ ಸಾಮ್ರಾಜ್ಯ ದಾಹವುಂಟಾಗಿತ್ತು. ಆದರೆ ಬುದ್ಧ ಧಮ್ಮದ ಜ್ಞಾನವುಂಟಾಗಿ ಆತನು ಖಡ್ಗವನ್ನು ಅದರ ಮೂಲಕ ನಡೆಯುವ ಹಿಂಸೆಯನ್ನು ತ್ಯಜಿಸಿದನು. ತನ್ನ ಸಮಯವನ್ನು ಪ್ರಜಾ ಕಲ್ಯಾಣಕ್ಕಾಗಿ ಹಾಗು ಬುದ್ಧ ಧಮ್ಮದ ಉದ್ಧಾರಕ್ಕಾಗಿ, ಅದರ ಸಂಸ್ಕೃತಿಯ ನಿಮರ್ಾಣಕ್ಕಾಗಿ ಶ್ರಮಿಸಿದನು. ಆತನು ಇದೇರೀತಿಯ ಶ್ರೇಷ್ಠ ಸುಖ ಜಗತ್ತಿನಲ್ಲಿ ನೆಲೆಸಿದ್ದ ಎಲ್ಲರಿಗೂ ಸಿಗಲಿ ಎಂಬ ಆಶಯದಿಂದ ಬೌದ್ಧ ಧಮ್ಮದೂತರನ್ನು ವಿಶ್ವದ ಎಲ್ಲಾ ದೇಶಗಳಿಗೂ ಕಳುಹಿಸಿದನು. ಮಹತ್ ಕಾರ್ಯಕ್ಕೆ ತನ್ನ ಪುತ್ರ ಮತ್ತು ಪುತ್ರಿಯನ್ನು ಸಂಘಕ್ಕೆ ಸಮಪರ್ಿಸಿದನು. ಬುದ್ಧರ ಶಾಂತಿ ಸಂದೇಶವನ್ನು ಎಲ್ಲೆಡೆ ಸ್ಥಾಪಿಸಿದನು. ಬುದ್ಧರ ಪರಮಶ್ರೇಷ್ಠ ಸಂಪ್ರದಾಯಕ್ಕೆ ನಿಜವಾದ ಸೇವೆ ಸಲ್ಲಿಸುವುದಕ್ಕಾಗಿ ಎಂದಿಗೂ ಪರಧಮ್ಮವನ್ನು ನಿಂದಿಸಬಾರದೆಂದು ಬುದ್ಧಿವಾದವನ್ನು ನುಡಿದು ಸಭ್ಯ ಶ್ರೇಷ್ಠ ರೀತಿಯಲ್ಲಿ ಬುದ್ಧ ಧಮ್ಮವನ್ನು ಹರಡಿಸಿದನು. ಈ ಬುದ್ಧಿವಾದವನ್ನು ನಾವು ಇಂದಿಗೂ ಭಾರತದ ಸಾರಾನಾಥದ ಅಶೋಕ ಸ್ತಂಭದಲ್ಲಿ ಬ್ರಾಹ್ಮಿಲಿಪಿಯಲ್ಲಿ ಇಂದಿಗೂ ಕಾಣಬಹುದು. 

ಈ ಮುಂದಿನ ವಾಕ್ಯಗಳು ಆ ಶಿಲಾಶಾಸನದಲ್ಲಿದೆ : ಒಬ್ಬನು ಕೇವಲ ತನ್ನ ಧರ್ಮವನ್ನೇ ಗೌರವಿಸಬಾರದು ಮತ್ತು ಪರಧರ್ಮವನ್ನು ಹೀಯಾಳಿಸಬಾರದು (ನಿಂದಿಸಬಾರದು). ಬದಲಾಗಿ ಒಬ್ಬನು  ಈ ಅಥವಾ ಆ ಕಾರಣದಿಂದಲಾದರೂ ಪರಧರ್ಮವನ್ನು ಗೌರವಿಸಬೇಕು. ಹೀಗೆ ಮಾಡಿದಾಗ ಮಾತ್ರ ಒಬ್ಬನು ತನ್ನ ಧಮ್ಮವನ್ನು ಗೌರವಿಸುತ್ತಾನೆ. ಹಾಗು ತನ್ನ ಧಮ್ಮವನ್ನು ವೃದ್ಧಿಸುತ್ತಾನೆ. ಹಾಗೆಯೇ ಪರಧರ್ಮಕ್ಕೂ ತಕ್ಕಸೇವೆ ಸಲ್ಲಿಸುತ್ತಾನೆ. ಇದರ ಹೊರತು ಬೇರೆರೀತಿ ವತರ್ಿಸಿದರೆ ಆತನು ತನ್ನ ಧಮ್ಮಕ್ಕೆ ಅಗೆದು ಗೋರಿ ಕಟ್ಟುತ್ತಾನೆ ಮತ್ತು ಪರಧರ್ಮಕ್ಕೆ ಹಾನಿ ಉಂಟು ಮಾಡುತ್ತಾನೆ. ಯಾರಾದರೂ ಕೇವಲ ಸ್ವಧರ್ಮಕ್ಕೆ ಗೌರವಿಸಿ, ಪರಧಮ್ಮವನ್ನು ನಿಂದಿಸುತ್ತಾನೋ, ಆತನು ಮಾಡುವಾಗ ಇದನ್ನು ಅಂಧಭಕ್ತಿಯಿಂದ ಹೀಗೆ ಯೋಚಿಸಬಹುದು.  ನಾನು ನನ್ನ ಧರ್ಮವನ್ನು ಹೆಮ್ಮೆಪಡುವಂತೆ ಉದ್ಧರಿಸುತ್ತಿರುವೆನು. ಆದರೆ ಪ್ರತಿಯಾಗಿ ಆತನು ಹೀಗೆ ಮಾಡುವಾಗ ತನ್ನ ಧರ್ಮಕ್ಕೆ ಮಾರಾಣಾಂತಿಕವಾಗಿ ಗಾಯಗೊಳಿಸುತ್ತಿರುವನು. ಆದ್ದರಿಂದ ಸೌಹಾರ್ದತೆಯೇ ಉತ್ತಮ.  ಎಲ್ಲರೂ ಸರ್ವರ ಬೋಧನೆಗಳನ್ನು ಕೇಳಲಿ ಮತ್ತು ಕೇಳಲು ಇಚ್ಚುಕರಾಗಲಿ.

ಏಷಿಯಾದ ಸರ್ವಜನರು ಸಾಮ್ರಾಟ ಅಶೋಕನಿಗೆ ಅಭಾರಿಯಾಗಿರ ಬೇಕು. ಒಬ್ಬ ಆಳ್ವಿಕೆಗಾರನಾಗಿ ಆತನು ಪ್ರಚಲಿತದಲ್ಲಿದ್ದ ಸರ್ವ ಧರ್ಮಗಳನ್ನು ಪಕ್ಷಪಾತವಿಲ್ಲದೆ ಸಲುಹುತ್ತಿದ್ದನು.

ಧಾಮರ್ಿಕ ಸೌಹಾರ್ದತೆ

ಧಾಮರ್ಿಕ ತತ್ವಗಳು ಇಡೀ ಮಾನವತೆಗಾಗಿ ಇದೆ. ಒಂದುವೇಳೆ ಮಾನವತೆಯ ನಿಧರ್ಿಷ್ಟ ಭಾಗವು ಧಮ್ಮದ ಶ್ರೇಷ್ಠ ಸದ್ಗುಣಗಳಾದ ಕರುಣೆ, ಸಹನೆ, ಕ್ಷಮೆ ಮತ್ತು ಪ್ರಜ್ಞಾಶೀಲತೆ ಇವುಗಳಲ್ಲಿ ಯಾವುದಾದರು ಒಂದನ್ನು ಪಾಲಿಸದಿದ್ದರೆ ಪರರು ಶಾಂತಿಯಿಂದ ಜೀವಿಸಲಾರರು.

ವಂಚಕರಿಗೆ ಹಾಗು ಸ್ವಾಥರ್ಿಗಳಿಗೆ ಪರರಲ್ಲಿನ ಯಾವುದೇ ಶೀಲದ ದುಲರ್ಾಭ ಗಳಿಸುವುದು ಸ್ವಾಭಾವಿಕವೇ ಸರಿ. ಆದರೆ ಇಂದಿನ ಎಲ್ಲಾ ಧರ್ಮದವರೇ ನೆನಪಿನಲ್ಲಿಡಿ. ಯಾರು ಧರ್ಮದ ಹೆಸರಿನಲ್ಲಿ ರಕ್ತ ಹರಿಸುವರೋ ಹಾಗು ಹೋರಾಡುವರೋ, ಅವರು ಎಂದಿಗೂ ಧಮ್ಮದ ತತ್ವಗಳನ್ನು ಪಾಲಿಸಿಲ್ಲ ಹಾಗು ಮಾನವತೆಗೆ ಕಾರಣವಾದುದಕ್ಕೆ ಸೇವೆ ಸಲ್ಲಿಸಿಲ್ಲ. ಅವರು ಕೇವಲ ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಥವಾ ಅಧಿಕಾರಕ್ಕಾಗಿ ಹೋರಾಡುತ್ತಾ ಧಮ್ಮದ ಹೆಸರು ಅಂಟಿಸಿರುತ್ತಾರೆ. ಯಾರು ನಿಜವಾಗಿ ಧರ್ಮವನ್ನು ಪಾಲಿಸುತ್ತಿರುವರೋ, ಅವರು ಹೋರಾಡಲು, ಯುದ್ಧ ಮಾಡಲು, ಯಾವುದೇ ನೆಲೆ ಬೇಕಿಲ್ಲ. ಅವರು ಶಾಂತಿಯುತ, ಸೌಜನ್ಯಯುತ ಹಾದಿಯಲ್ಲೇ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ. ಒಂದು ನಿಜವಾದ ಧಮ್ಮ ಎಂದಿಗೂ, ಎಂತಹ ಸನ್ನಿವೇಶಕ್ಕು ಯಾವುದೇ ಪ್ರಕಾರದ ಹಿಂಸೆಗೆ ಪ್ರೋತ್ಸಾಹಿಸುವುದಿಲ್ಲ. ಅದೇ ವೇಳೆಯಲ್ಲಿ ನಾವು ಗೌರವಯುತ ಧಮ್ಮವನ್ನು ಪಾಲಿಸುವಾಗ ಜನಾಂಗಿಯ ಬೇದಭಾವ ಉಂಟಾಗುವುದಿಲ್ಲ. ಬೌದ್ಧರು ಪರಧಮರ್ೀಯ ರೊಂದಿಗೆ ದ್ವೇಷವಿಲ್ಲದೆ ಕೆಲಸ ಕಾರ್ಯವು ಮಾಡಬಹುದು ಹಾಗು ಜೀವಿಸಲೂಬಹುದು. ಅದಕ್ಕೆ ಯಾವ ಅಭ್ಯಂತರವೂ ಇಲ್ಲ. ಅಷ್ಟೇ ಇಲ್ಲ, ಬೌದ್ಧರು ಧಮ್ಮಕ್ಕಾಗಿ ಎಂದಿಗೂ ಪರಧಮರ್ಿಯರೊಂದಿಗೆ ಅಥವಾ ಸ್ವಧಮರ್ಿಯರೊಂದಿಗೆ ರಕ್ತಪಾತವನ್ನು ಉಂಟುಮಾಡುವುದಿಲ್ಲ (ರಕ್ತ ಚೆಲ್ಲುವುದಿಲ್ಲ).

ಇಂದಿನವರೆಗೆ ಮತ್ತು ಇಂದಿಗೂ ಸಹಾ ಧರ್ಮದ ಹೆಸರಿನಲ್ಲಿ ಬರ್ಬರ ಕೃತ್ಯಗಳು ಹಿಂಸಾಪಾತಗಳು ನಡೆದಿವೆ ಮತ್ತು ನಡೆಯುತ್ತಿವೆ. ಬಹಳಷ್ಟು ಮಂದಿಗೆ ಧರ್ಮ ಎಂಬ ಹೆಸರೇ ದಿಗ್ಭ್ರಾಂತಿ ಉಂಟುಮಾಡಿದೆ. ಇಡೀ ಮಾನವತೆಯ ಇತಿಹಾಸದಲ್ಲಿ ಧರ್ಮ ಹೆಸರಿನ ಸೋಗಿನಲ್ಲಿ ಭೌತಿಕವಾದ, ಕಪಟ, ವಂಚನೆ, ಮತಾಂಧತೆ ಮತ್ತು ಸಾಮೂಹಿಕ ಹತ್ಯೆಗಳು ನಡೆದಿವೆ. ನಿಜವಾದ ಧರ್ಮದ ಮೌಲ್ಯಗಳು ಕ್ಷಿಪ್ರವಾಗಿ ಜನರ ಮನಸ್ಸಿನಿಂದ ಮರೆಯಾಗುತ್ತಿದೆ ಮತ್ತು ಅವರು ಕೇವಲ ನಿಗೂಢತೆ ಮತ್ತು ವಾಮಾಚಾರ ವಿದ್ಯೆಗಳ ಶೋಧನೆಗೆ ಓಡುತ್ತಿದ್ದಾರೆ. ಸ್ಥಾಪಿತ ಶ್ರೇಷ್ಠ ಧರ್ಮಗಳು ಹಲವಾರು ರೂಪಗಳಲ್ಲಿ ತುಂಡು ತುಂಡಾಗುತ್ತಾ ಹೋಗುತ್ತಿವೆ ಮತ್ತು ಬಹಳಷ್ಟು ಜನರು ಧರ್ಮವನ್ನು ವ್ಯಂಗ್ಯ ಮಾಡಲು ಹೊರಟಿದ್ದಾರೆ. ಈಗ ಎಲ್ಲಾ ಧಮ್ಮದವರು ಒಗ್ಗೂಡಿ ಧಾಮರ್ಿಕ ನಿಜಧಮ್ಮದ ತತ್ವಗಳನ್ನು ಎತ್ತಿಹಿಡಿಯುವ ಕಾಲ ಒದಗಿ ಬಂದಿದೆ. ಕೇವಲ ನಂಬಿಕೆ ಮತ್ತು ಪುರಾಣಗಳ ಬಗ್ಗೆ ಚಚರ್ಿಸುವ ಜಗಳವಾಡುವ ಕಾಲ ದೂರ ಹೋಗುತ್ತಿದೆ. 

ಧರ್ಮವೆಂದರೆ ಕೇವಲ ಪ್ರಾಥರ್ಿಸುವುದಲ್ಲ ಅಥವಾ ಪೂಜೆ ಮಾಡುವುದಲ್ಲ. ಧರ್ಮವು ಕೇವಲ ನಾಲಿಕೆಯ ಕಾರ್ಯವಲ್ಲ. ಬದಲಾಗಿ ಮಾನವತೆಯ ಸೇವೆಗಾಗಿ ಮಾನವನು ಅಹಿಂಸೆಯುತವಾಗಿ ವತರ್ಿಸುವುದಾಗಿದೆ. ಒಳಿತನ್ನು ಮಾಡುವುದಾಗಿದೆ ಶಾಂತಿ, ನಿಜವಾದ ಸುಖ ಮತ್ತು ವಿಮುಕ್ತತೆಯನ್ನು ಗಳಿಸುವಂತಹದ್ದಾಗಿದೆ.

ವಿಭಿನ್ನ ಧರ್ಮದವರು ಜೀವನದ ಪ್ರಾರಂಭ ಮತ್ತು ಅಂತ್ಯದ ಬಗ್ಗೆ ವಿಭಿನ್ನ ನಂಬಿಕೆಗಳನ್ನು ಮತ್ತು ದೃಷ್ಟಿಕೋನಗಳನ್ನು ಹೊಂದಿದ್ದಾರೆ. ಹಾಗೆಯೇ ಅಂತಿಮ ಬಿಡುಗಡೆಗೆ ವಿಧವಿಧದ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಆದರೆ ಅಂತಹ ಐಕ್ಯಮತ್ಯವಲ್ಲದ ವಿಷಯಗಳನ್ನು ನಾವು ಮುಂದೆ ತರಬಾರದು. ಏಕೆಂದರೆ ಅದರಿಂದ ತಿಕ್ಕಾಟ, ದ್ವೇಷ, ಹಿಂಸೆ, ಸೇಡು ಮತ್ತು ತಪ್ಪು ತಿಳುವಳಿಕೆಗಳಾಗುತ್ತವೆ.

ಧಮ್ಮದ ಹೆಸರಿನಲ್ಲಿ ಸಾಮಾನ್ಯ ಸದ್ಗುಣಗಳು ಎಷ್ಟೋ ಇವೆ. ಅವನ್ನು ನಾವು ಸಿದ್ಧಾಂತ ಮತ್ತು ಸಾಧನೆಯಾಗಿ ಪರಿಚಯಿಸಬಹುದು, ಅದರಿಂದಾಗಿ ಜನರು ಸತ್ಯಸಂಧರಾಗಿ, ಶಾಂತತೆಯಿಂದ, ಸಂಸ್ಕೃತರಾಗಿ ಜೀವಿಸಬಹುದು.

ನಾವು ಮತ್ತೊಬ್ಬರನ್ನು ಬೇರ್ಪಡಿಸುವುದು ಮತ್ತು ದೂರ ಮಾಡುವುದು ಬೇಕಾಗಿಯೇ ಇಲ್ಲ. ನಾವು ಹಾಗೆ ಮಾಡತೊಡಗಿದರೆ ಅಧಾಮರ್ಿಕರು ಅವಕಾಶಕ್ಕೆ ಕಾದು ಎಲ್ಲಾ ಧರ್ಮಗಳನ್ನು ವ್ಯಂಗ್ಯ ಮಾಡುತ್ತಾರೆ ಮತ್ತು ನಿಂದಿಸುತ್ತಾರೆ. ನಾವು ನಮ್ಮ ಸಹ ಧಾಮರ್ಿಕರೊಂದಿಗೆ ಆ ರೀತಿಯ ವರ್ತನೆ ಮಾಡಬಾರದು. ಈ ರೀತಿಯಲ್ಲಿ ನಾವು ದ್ವೇಷಿಸಿದರೆ ಜನರು ಧರ್ಮವೆಂದರೆ ಮಾನವತೆಯನ್ನು ಬೇರ್ಪಡಿಸುವುದು ಎಂದರ್ಥ ಎಂದು ಹೇಳುತ್ತಾರೆ.

ಬೌದ್ಧರು ಪರಧಮರ್ಿಯ ಗುರುಗಳಿಗೆ ಗೌರವಿಸುವುದನ್ನು ನಿಷೇಧಿಸಲಾಗಿಲ್ಲ ಅಥವಾ ಪರಧಮರ್ಿಯ ಪೂಜಾ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಿಲ್ಲ. ಅವರು ಹಾಗೆ ಮಾಡುವಾಗ ತಮ್ಮ ಸಹಕಾರವನ್ನು ತೋರಿಸುತ್ತಾರೆ. ಆದರೆ ಹಾಗೆಯೇ ಬೌದ್ಧ ತತ್ವಗಳನ್ನು ಅನುಸರಿಸುತ್ತಿರುತ್ತಾರೆ.

ಬೌದ್ಧ ಧಮ್ಮದಲ್ಲಿ ವಿವಿಧ ಧಾಮರ್ಿಕ ವಿಭಾಗಗಳನ್ನು ಅರಿಯುವಿಕೆಯಲ್ಲಿ ಮತ್ತು ಸಹಕಾರ ನೀಡುವಿಕೆಯಲ್ಲಿ ಪ್ರೋತ್ಸಾಹವಿದೆ. ಬೌದ್ಧರ ಪ್ರಕಾರ ಧಾಮರ್ಿಕ ಚಿಹ್ನೆಗಳು ಪರರು ಭಾವಿಸುವಂತೆ ಅದೇ ಧರ್ಮವಲ್ಲ, ಬದಲಾಗಿ ಗೌರವಯುತ ಮತ್ತು ಅಹಿಂಸಯುತ ಜೀವನವನ್ನು ಜೀವಿಸುವುದೇ ಧಾಮರ್ಿಕ ಜೀವನವಾಗಿದೆ.

ಯಾರಾದರೂ ಬೌದ್ಧ ಧರ್ಮದಲ್ಲಿ ಹುಳುಕುಗಳನ್ನು ಹಿಡಿದು, ಹುರುಳಿಲ್ಲದ ಟೀಕೆಯನ್ನು ಚೆನ್ನಾಗಿ ಮಾಡಬಹುದು. ಅದರ ಸಂಪ್ರದಾಯಿಕ ಪದ್ಧತಿಗಳನ್ನು ಟೀಕಿಸಬಹುದು. ಅವುಗಳ ರೀತಿ, ವಿಧಿಗಳನ್ನು ಟೀಕಿಸಬಹುದು. ಆದರೆ ಬುದ್ಧರ ಬೋಧನೆಗಳನ್ನು ಟೀಕಿಸಲಾಗುವುದಿಲ್ಲ. ಏಕೆಂದರೆ ಅವು ಸಾರ್ವಕಾಲಿಕ ಸತ್ಯಗಳಾಗಿವೆ. ಸಾರ್ವಕಾಲಿಕ ಒಳಿತನ್ನುಂಟು ಮಾಡುವಂತಹದ್ದಾಗಿದೆ. ಅವುಗಳನ್ನು ಯಾರೊಬ್ಬರು ಪ್ರಯತ್ನಿಸಿ ಪರೀಕ್ಷಿಸುವಂತಹದ್ದಾಗಿದೆ. 

ಬುದ್ಧರ ಬೋಧನೆಗಳನ್ನು ಪರಿಚಯಿಸಿದ ವಿಧಾನಗಳು ಶಾಂತಿಯುತ ಮತ್ತು ವಿಚಾರಯೋಗ್ಯವಾಗಿವೆ. ಬುದ್ಧರು ಸಹ ವಿಮಶರ್ೆ ಮತ್ತು ಅನುಭವದಿಂದ ಸತ್ಯ ಪರೀಕ್ಷಿಸಿ ಎಂದು ತಿಳಿಸಿದ್ದಾರೆ. ಆ ಬೋಧನೆಗಳು ಸ್ಪಷ್ಟ ಹಾಗು ಸರಳಾಕಷರ್ಿತವಾಗಿವೆ. ಹಾಗಿದ್ದು ಸಹ ಧರ್ಮ, ರಾಷ್ಟ್ರ ಹಾಗು ಮತಾಂಧತೆ ಇವುಗಳಂತಹ ಸಂಕುಚಿತತೆಯಿಂದ ಮುಕ್ತವಾಗಿದೆ. ಈ ಬೋಧನೆಯಿಂದ ಸ್ಪಷ್ಟ ಹಾಗು ಪ್ರಜ್ಞಾಶೀಲರು ಉತ್ಪತ್ತಿಯಾಗುತ್ತಾರೆ. ಆ ಬೋಧನಾ ಶೈಲಿಯಿಂದ ಸಂದೇಹಗಳು ಮತ್ತು ಮೂಢನಂಬಿಕೆಗಳು ದೂರವಾಗುತ್ತವೆ. ಹೀಗಿರುವುದರಿಂದಲೇ ಬುದ್ಧತತ್ತ್ವಗಳು ಸದಾ ಸತ್ಯ ಸಂಶೋಧಕನ ಹೃದಯ ಹಾಗು ಮನಸ್ಸಿಗೆ ಆನಂದ ನೀಡುವುದು. ಬೌದ್ಧರ ಸಹನಾ ಮನೋಭಾವ ಮತ್ತು ಪ್ರಜ್ಞಾಶೀಲತೆಗಳು ಬಹಳಷ್ಟು ಶ್ರೇಷ್ಠ ಚಿಂತಕರಿಗೆ, ತತ್ವಜ್ಞಾನಿಗಳಿಗೆ, ವಿಚಾರಪರರಿಗೆ, ಮುಕ್ತ ಚಿಂತಕರಿಗೆ ಆಜ್ಞೇಯವಾದಿಗಳಿಗೆ ಹಾಗು ನಾಸ್ತಿಕರು ಸಹ ಬುದ್ಧ ಧಮ್ಮವನ್ನು ಶಾಂತಿಯುತ ಹಾಗು ಆನಂದದಾಯಕ ಜೀವನ ಮಾರ್ಗ ಎಂದಿದ್ದಾರೆ.

ಬುದ್ಧರ ಪ್ರಕಾರ ಪುರುಷರು ತಮ್ಮ ಸ್ವಕೇಂದ್ರೀಕೃತ ಮನೋಭಾವದಿಂದ ಪ್ರತ್ಯೇಕರಾಗಿರುವರು. ಯಾವಾಗ ಇದು ದಮನವಾಗುತ್ತದೋ, ಆರೋಗ್ಯಕರ ಮಾನವತಾ ಬಾಂಧವ್ಯಗಳು ವೃದ್ಧಿಯಾಗುತ್ತವೆ. ಆದ್ದರಿಂದ ಶಾಂತಿಯ ಮತ್ತು ಸೌಹಾರ್ದಯುತ ಜೀವನ ವಿಧಾನವು ಆಂತರ್ಯದಿಂದ ಪ್ರಾರಂಭವಾಗುತ್ತದೆಯೇ ಹೊರತು ಬಾಹ್ಯದಿಂದಲ್ಲ. 

ಇಂದಿನ ಧರ್ಮವಾದಿಗಳು ಸೌಹಾರ್ದತೆಯಿಂದ ಒಟ್ಟುಗೂಡಿ ಕಾರ್ಯ ಮಾಡದಿದ್ದರೆ, ಪಕ್ಷಪಾತ ತೊರೆಯದಿದ್ದರೆ, ದ್ವೇಷ ತ್ಯಜಿಸದಿದ್ದರೆ, ಶಾಂತಿ ಎಂಬುದು ಕೇವಲ ಕನಸಾಗಿಯೇ ಉಳಿಯುತ್ತದೆ.

ಒಬ್ಬ ಪ್ರಮಾಣಿಕ ಮತ್ತು ಸಾತ್ವಿಕ ಸಹ ಧಾಮರ್ಿಕರಾಗಿ ನಾವೆಲ್ಲರೂ ಪರಸ್ಪರ ಕೈ ಜೋಡಿಸೋಣ. ವಿವಾದಾತ್ಮಕ ಮತ್ತು ಪಕ್ಷಪಾತ ಹೊಂದಿರುವ ನಮ್ಮ ಬೋಧನೆಗಳನ್ನು ನಿವಾರಿಸಿಕೊಳ್ಳೋಣ. ಸರ್ವರಿಗೂ ಸಮಾನವಾಗಿರುವ ಧರ್ಮ ತತ್ವಗಳನ್ನು ಪರಿಚಯಿಸೋಣ. ಸರ್ವರ ಹಿತ ಹಾಗು ಸುಖಕ್ಕಾಗಿ, ಮಾನವತೆಗಾಗಿ ಜನಾಂಗ ಅಥವಾ ಜಾತಿಯನ್ನು ವರ್ಣವನ್ನು ಮೀರೋಣ.  ನಾವೆಲ್ಲರೂ ನೆನಪಿಡಬೇಕಾದ ಸಂಗತಿ ಏನೆಂದರೆ ಧಮ್ಮ ಇರುವುದು ಮಾನವತೆಯ ಒಳಿತಿಗಾಗಿಯೇ. ಆದ್ದರಿಂದ ಅದನ್ನು ಮತಾಂಧತೆಯ ರೀತಿ ದುರ್ಬಳಕೆ ಮಾಡಬಾರದು. ಯಾವುದೇ ರೀತಿಯ ವೈಯುಕ್ತಿಕ ಲಾಭ ಅಥವ ಸ್ವ-ಪ್ರತಿಷ್ಠೆ ಮಾಡಿಕೊಳ್ಳದೆ ಇರೋಣ. 

ಎಲ್ಲರೂ ಒಂದಾಗೋಣ

ಎಲ್ಲಾ ಧರ್ಮದವರು ಒಂದಾಗೋಣ ಹಾಗು ಧಾಮರ್ಿಕ ಯುದ್ಧನೀತಿ ಕೈಬಿಡೋಣ. ಧರ್ಮದ ಹೆಸರಿನಲ್ಲಿ ಹಾಗು ಯುದ್ಧದ ಹೆಸರಿನಲ್ಲಿ ಆಗುವ ಮಾನವ ಸಂಹಾರ ಹಾಗು ಕ್ರೂರತೆ ನಿಲ್ಲಿಸೋಣ. ಮಾನವ ತನ್ನ ನಂಬಿಕೆಗೆ ತಕ್ಕಂತೆ ಧರ್ಮವನ್ನು ಹುಡುಕುವ ಸ್ವಾತಂತ್ರ ನೀಡಿ ಒಂದಾಗಿಸೋಣ. ಧಾಮರ್ಿಕ ಏಕಸ್ವಾಮ್ಯವನ್ನು ತ್ಯಜಿಸಲು ಒಂದಾಗೋಣ. ಪ್ರಶ್ನಾತ್ಮಕ ವಿಧಾನಗಳಿಂದ ಮಾರುಕಟ್ಟೆಗಳಲ್ಲಿ ಮತಾಂತರ ಮಾಡುವುದನ್ನು ತಡೆಯಲು ಒಂದಾಗೋಣ. ಎಲ್ಲಾ ಧರ್ಮದವರ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸಲು ಒಂದಾಗೋಣ.  ಈ ಅನಾರೋಗ್ಯಕರ ಧಾಮರ್ಿಕ ಸ್ಪಧರ್ಾತ್ಮಕ ಸವಾಲಿನ ಮನೋಭಾವವನ್ನು ಅಳಿಸಲು ಒಂದಾಗೋಣ. ನಮ್ಮ ಆಧುನಿಕ ಸಮಾಜದಲ್ಲಿ ಸಾಮಾನ್ಯವಾಗಿರುವ ಎಲ್ಲಾ ನೀಚ ದುಶ್ಶೀಲ, ಪಾಪಯುತ ಆಚರಣೆಗಳೆಲ್ಲವನ್ನು ನಿಶ್ಚೇತಗೊಳಿಸಲು ಒಂದಾಗೋಣ. ಎಲ್ಲರಲ್ಲು ಅತಿರೇಕ ತೊರೆಯಲು ಮಧ್ಯಮ ಮಾರ್ಗವನ್ನು ಪರಿಚಯಿಸಲು ಒಂದಾಗೋಣ.

ಪ್ರತಿ ಧರ್ಮ ಸಂಸ್ಥಾಪಕರು, ಮೂಲ ಉದ್ದೇಶವಿದ್ದುದೇ ಮಾನವತೆ. ಮಾನವರಲ್ಲಿ ಸೌಹಾರ್ದತೆ, ಮೈತ್ರಿ ಮತ್ತು ಪರಸ್ಪರ ತಿಳುವಳಿಕೆ ಮೂಡಿಸಿ ಜಗತ್ತನ್ನು ಸುಖವಾಗಿಡುವುದರಲ್ಲಿ ಆಗಿತ್ತು.

ಅಂತಹ ಧಾಮರ್ಿಕ ನಾಯಕರ ಹಾದಿಯನ್ನು ಹಿಂಬಾಲಿಸಿ ಪರರ ನಂಬಿಕೆಯವರನ್ನು ಗೌರವಿಸೋಣ. ದುರಾದೃಷ್ಟಕರವಾಗಿ ಪ್ರತಿ ಧರ್ಮದ ಕೆಲವರು ತಮ್ಮ ಸ್ವಾರ್ಥದಿಂದ ಹಾಗು ಅಸಹನೆಯಿಂದ ಮತ್ತು ಸಂಕುಚಿತದ ಮನೋಭಾವದಿಂದ ನಿಜ ಧರ್ಮದ ಸಾರವನ್ನೇ ಅರಿಯಲಾರದೆ ಅದರ ವಿರುದ್ಧವಾಗಿ ನಡೆದು ಘರ್ಷಣೆ, ಮಿಥ್ಯಾದೃಷ್ಟಿ, ಪಕ್ಷಪಾತ ಮತ್ತು ಅಸಹನೆಯನ್ನು ಸೃಷ್ಟಿಸಿದರು.

ನಾವು ನಿಜ ಹೃದಯದಿಂದ ನಂಬುವುದೇನೆಂದರೆ ಈ ಸತ್ಯಗಳನ್ನು ಅಥರ್ೈಸಿಕೊಂಡು ಒಂದುದಿನ ಎಲ್ಲಾ ಧರ್ಮದ ಸೋದರರು ಒಂದಾಗಿ ಮಾನವತೆಗೆ ದುಡಿಯುತ್ತಾರೆ.

ಅಂತಿಮ ವಿಶ್ಲೇಷಣೆಯಲ್ಲಿ ಹೇಳುವುದೇನೆಂದರೆ ಯಾರಲ್ಲಿ ತನ್ನ ಧಮ್ಮದ ಮೂಲಕ ಆಂತರ್ಯ ಶಕ್ತಿ ಹೊಂದಿದವರೊ ಅವರು ಶ್ರದ್ಧೆಯುಕ್ಕಿ ಅವರು ಪರರ ಧರ್ಮಕ್ಕೂ ಗೌರವಿಸುತ್ತಾರೆ. 



 

ಪರಧರ್ಮಗಳ ಬಗ್ಗೆ ಬೌದ್ಧರ ಸೌಹಾರ್ದ ಮನೋಭಾವ

 ಪರಧರ್ಮಗಳ ಬಗ್ಗೆ  ಬೌದ್ಧರ ಸೌಹಾರ್ದ ಮನೋಭಾವ ಈ ಲೇಖನದ ಉದ್ದೇಶವೇನೆಂದರೆ ಧರ್ಮದ ಉತ್ತಮ ತಿಳುವಳಿಕೆಗೆ, ಧಾಮರ್ಿಕ ಸಹಿಷ್ಣುತೆಗೆ ಮತ್ತು ಬೌದ್ಧರ ದೃಷ್ಟಿಕೋನದಿಂದ ವಿಶಾ...