Saturday, September 18, 2021

ಪರಧರ್ಮಗಳ ಬಗ್ಗೆ ಬೌದ್ಧರ ಸೌಹಾರ್ದ ಮನೋಭಾವ

 ಪರಧರ್ಮಗಳ ಬಗ್ಗೆ 

ಬೌದ್ಧರ ಸೌಹಾರ್ದ ಮನೋಭಾವ



ಈ ಲೇಖನದ ಉದ್ದೇಶವೇನೆಂದರೆ ಧರ್ಮದ ಉತ್ತಮ ತಿಳುವಳಿಕೆಗೆ, ಧಾಮರ್ಿಕ ಸಹಿಷ್ಣುತೆಗೆ ಮತ್ತು ಬೌದ್ಧರ ದೃಷ್ಟಿಕೋನದಿಂದ ವಿಶಾಲ ಅರ್ಥದಲ್ಲಿ ಅರಿಯುವಿಕೆ ಹಾಗು ಬೌದ್ಧರು ಹೇಗೆ ಪರಧಮರ್ಿಯರನ್ನು ಕಾಣುತ್ತಾರೆ ಎಂಬುದು ತಿಳಿದುಕೊಳ್ಳಬಹುದು.

ಧರ್ಮದ ಆಳ ಅರ್ಥದ ವಿವರಣೆ ಎಂದರೆ ಸ್ವಧರ್ಮದ ಎತ್ತಿಹಿಡಿಯುವಿಕೆ ಹಾಗು ಪರಧರ್ಮವನ್ನು ಯಾವುದೇ ರೀತಿಯಲ್ಲಿ ಅಸೌಜನ್ಯ ಅಥವಾ ಅಪಮಾನ ಮಾಡದಿರುವಿಕೆ. ಈ ರೀತಿಯಾಗಿ ನಾವು ಪರಸ್ಪರ ಅಥರ್ೈಸುವಿಕೆ, ಪರಸ್ಪರ ಸಹಕಾರ ಮತ್ತು ಸರ್ವ ಸಹ ಧಮರ್ಿಯರೊಂದಿಗೆ ತಾಳ್ಮೆಯಿಂದಿರುವಿಕೆ. ಈ ರೀತಿಯಲ್ಲೇ ಧಾಮರ್ಿಕ ಸಹಿಷ್ಣುತೆ ಸಾಧಿಸುವಿಕೆ ಮಾಡಬೇಕು.

ಜನರು ಯಾವಾಗಲು ಧಾಮರ್ಿಕ ತಾಳ್ಮೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಕೆಲವರು ಮಾತ್ರ ಪ್ರಾಯೋಗಿಕ ಹಾದಿಯಲ್ಲಿದ್ದು ಧಾಮರ್ಿಕ ಸಹಿಷ್ಣುತೆಯನ್ನು ಸಾಧಿಸುತ್ತಾರೆ. ಈ ಲೇಖನವನ್ನು ಓದುಗರು ಸರಿಯಾದ ಧಾಮರ್ಿಕ ಸಹಿಷ್ಣುತೆಯ ಸ್ಪಷ್ಟ ಚಿತ್ರೀಕರಣ ಪಡೆದು ನಿಜವಾದ ಧಾಮರ್ಿಕ ಸಹಿಷ್ಣುಗಳಾಗುತ್ತಾರೆ ಎಂಬ ನಂಬಿಕೆಯಿಂದ ರಚಿಸಲಾಗಿದೆ. ನಾವು ನಮ್ಮ ಶ್ರೇಷ್ಠತ್ವ ಭಾವವನ್ನು ತೆಗೆಯಲು ಪ್ರಯತ್ನಿಸಬೇಕು. ನಮ್ಮ ಅನನ್ಯ ಸಂಶಯ, ನಮ್ಮ ಧಾಮರ್ಿಕ ಪೂರ್ವಗ್ರ ಪೀಡಿತತೆ ಮತ್ತು ನಮ್ಮ ಸ್ವಾರ್ಥ ಚಾಲಿತ ಶಕ್ತಿ, ಇವೆಲ್ಲವನ್ನೂ ನಾವು ಮೀರಬೇಕು. ಆದುದರಿಂದ ಧಮ್ಮಜ್ಞಾನವು ಧರ್ಮ ಸಹಿಷ್ಣುತೆಗಿಂತ ಶ್ರೇಷ್ಠವಾದುದು. 

ಆದ್ದರಿಂದ ಧಾಮರ್ಿಕ ತಿಳುವಳಿಕೆಯು ಧಾಮರ್ಿಕ ಸಹಿಷ್ಣತೆಗಿಂತ ಮಿಗಿಲಾದುದು. ಎಲ್ಲಾ ಸಹ ಧಾಮರ್ಿಕರು ಮಾನವನ ವಿಮೋಚನೆ ಮತ್ತು ಜ್ಞಾನೋದಯದ ಸಾಧಾರಣ ಕಾರಣಕ್ಕಾಗಿ ಕಾರ್ಯ ಮಾಡುತ್ತಿದ್ದಾರೆ. ಆದರೆ ಸಂಬೋಧಿಯ ಮತ್ತು ನಿಬ್ಬಾಣದ ಸಂಶೋಧನೆಯು ಸತ್ಯದ ಸಂಶೋಧನೆ ಆಗಿದೆ. ದುರಾದೃಷ್ಟಕರ ಸಂಗತಿ ಏನೆಂದರೆ ಬಹಳಷ್ಟು ಧಾಮರ್ಿಕ ಆಚರಣೆಗಳು ಸತ್ಯವೆಂದು ತೋರಿಸಲ್ಪಡುತ್ತಿವೆ. ಆದರೆ ಅವುಗಳು ಸತ್ಯದಿಂದ ಬಹಳಷ್ಟು ದೂರವಿದೆ. ಆದರೆ ಸತ್ಯದ ಧಮ್ಮದ ಅನುಯಾಯಿಗಳಾದ ನಾವು ಸಾಕಷ್ಟು ಧೈರ್ಯ, ಸಹನೆ, ನಂಬಿಕೆಯಿಡಬೇಕಾಗಿದೆ. ಯಾವುದು ಮಿಥ್ಯಾ ದೃಷ್ಟಿ, ಮೂಢನಂಬಿಕೆಗಳಿಂದ ಕೂಡಿದುದಾಗಿದೆಯೋ ಅವುಗಳ ಸ್ವರೂಪವನ್ನು, ಸತ್ಯವನ್ನು ಅದು ಹೇಗಿದೆಯೋ ಹಾಗೆಯೇ ವಿವರಿಸಲು ಸಾಕಷ್ಟು ವಿಚಾರಶೀಲತೆಬೇಕಾಗಿದೆ. ನಾವು ನಮ್ಮ ಕರ್ತವ್ಯದಿಂದ ಬೀಳುತ್ತಿದ್ದೇವೆ. ಏಕೆಂದರೆ ನಾವು ಯಾವುದು ಸತ್ಯವಲ್ಲ ಎಂದು ನಮಗೆ ಮನವರಿಕೆ ಆಗಿಯೂ ಸಹಾ ನಾವು ಅವನ್ನೆಲ್ಲಾ ಮನದಲ್ಲಿ ಹಚ್ಚಿಕೊಂಡಿದ್ದೇವೆ. ಅದೇರೀತಿಯಲ್ಲಿ ನಾವು ಧಾಮರ್ಿಕ ಸಹಿಷ್ಣುತೆಯನ್ನು ಪಾಲಿಸದಿದ್ದರೆ ನಾವು ತಪ್ಪಾಗುತ್ತೇವೆ. (ತಪ್ಪನ್ನು ತ್ಯಜಿಸದೆ ಹಾಗೆ ಇಟ್ಟುಕೊಂಡರೆ ಅದು ಅವನತಿಯ ಸಂಕೇತವಾಗುತ್ತದೆ). ಸತ್ಯದ ಸಂಶೋಧನೆಯ ಹಾದಿಯಲ್ಲಿ ನಾವು ಸ್ಪಧರ್ಾತ್ಮಕ ದೃಷ್ಟಿಕೋನ (ಮನೋಭಾವ)ವನ್ನು ಬಿಡಬೇಕು ಮತ್ತು ಧಾಮರ್ಿಕ ಸೌಹಾರ್ದತೆಗೆ ಮತ್ತು ಮನುಕುಲದ ಉದ್ಧಾರಕ್ಕಾಗಿ ಕೈಗೆ ಕೈ ಜೋಡಿಸಿ ಈ ಶ್ರೇಷ್ಠ ಗುರಿಯನ್ನು ಸಾಧಿಸಬೇಕಾಗಿದೆ. 

ಬುದ್ಧರು ತಮ್ಮ ಕಾಲದಲ್ಲಿದ್ದ ಕೆಲವು ಆಚರಣೆಗಳಲ್ಲಿ ಯಾವುದೇ ಧಾಮರ್ಿಕ ಮಹತ್ವವಿಲ್ಲ ಎಂದು ಸ್ಪಷ್ಟವಾಗಿ ತಿಳುವಳಿಕೆ ಮೂಡಿಸಿ, ತೋರಿಸಿ ಕೊಟ್ಟಿದ್ದಾರೆ ಮತ್ತು ಬುದ್ಧಭಗವಾನರು ತಮ್ಮ ಅನುಯಾಯಿಗಳಿಗೆ ತಮಗೆ ಹಾಗು ತಮ್ಮ ಅನುಯಾಯಿಗಳಿಗೆ ನೀಡುವಂತಹ ಗೌರವ ಮತ್ತು ಆತಿಥ್ಯವನ್ನು ಇತರ ಧರ್ಮದ ನಾಯಕರಿಗೂ (ಬ್ರಾಹ್ಮಣ, ಜೈನ, ಇತ್ಯಾದಿ) ನೀಡಿ ಎಂದು ಬೋಧಿಸಿದ್ದಾರೆ. ಬುದ್ಧರು ತಮ್ಮ ಬೋಧನೆಯಲ್ಲಿ ಯಾರೂ ಸಹ ಸಮಣ ಅಥವಾ ಬ್ರಾಹ್ಮಣರಿಗೆ ಯಾವುದೇ ರೀತಿಯಲ್ಲಿ ಹಿಂಸೆ ನೀಡದಿರಿ ಎಂದು ಹೇಳಿದ್ದಾರೆ. ಇಲ್ಲಿ ಸಮಣ ಮತ್ತು ಬ್ರಾಹ್ಮಣ ಎಂದರೆ ಪರಧಮರ್ಿಯರು ಎಂದರ್ಥವಾಗಿದೆ. ಹಾಗೆಯೇ ಬುದ್ಧರು ತಮ್ಮ ಬೋಧನೆಯಲ್ಲಿ ಬ್ರಾಹ್ಮಣನಿಗೆ ಅಥವಾ ಭಿಕ್ಷುವಿಗೆ ಅಥವಾ ಸಮಣನಿಗೆ ಮೋಸ ಮಾಡಿದರೆ ಅಥವಾ ಸುಳ್ಳು ಹೇಳಿದರೆ ಅದು ಆತನ ಅವನತಿಗೆ ಕಾರಣ ಎಂದು ಹೇಳಿದ್ದಾರೆ. ಈ ರೀತಿಯಾಗಿ ಬುದ್ಧರು ಸರ್ವರನ್ನೂ ಸಮಾನ ದೃಷ್ಟಿಕೋನದಿಂದ ಸಮಾನ ಮೈತ್ರಿಭಾವದಿಂದ ಕೂಡಿದ್ದರು ಎಂದು ಮತ್ತು ಅದನ್ನೇ ಬೋಧಿಸಿದ್ದರು ಎಂದು ವ್ಯಕ್ತವಾಗುತ್ತದೆ.

ಬೌದ್ಧರ ಗುರಿಯೇನೆಂದರೆ ಪ್ರತಿಯೊಬ್ಬರು ಉದಾತ್ತ ಜೀವನವನ್ನು ಆಚರಿಸುತ್ತ ಯಾರಿಗೂ ಯಾವುದೇ ರೀತಿಯಲ್ಲಿ ಹಿಂಸಿಸದೆ ಇರುವುದು. ಹಾಗು ಮಾನವತೆಯ ಸದ್ಗುಣಗಳನ್ನು ವೃದ್ಧಿಸುವುದು. ಈ ರೀತಿಯಾಗಿ ಮಾನವನ ಘನತೆ, ಸರ್ವರನ್ನು ಉದ್ಧರಿಸುವ, ಮಹಾಕರುಣೆ, ನಿಷ್ಪಕ್ಷಪಾತದ ಸಾರ್ವತ್ರಿಕ ದಯೆ ಮೈತ್ರಿ, ಪಾಪದಿಂದ ದೂರವಾಗುವಂತಹ ಮನಸ್ಸು ಮತ್ತು ಚಿತ್ತಪರಿಶುದ್ಧತೆ ಪ್ರಾಪ್ತಿಮಾಡಿ ಶಾಂತಿ ಮತ್ತು ಸುಖವನ್ನು ಗಳಿಸುವಂತಹದ್ದಾಗಿದೆ. 

ಬೌದ್ಧ ಧರ್ಮವು ಎಂತಹ ಧರ್ಮ ಅಂದರೆ ಅದು ಜನರನ್ನು ಬಾಳು ಮತ್ತು ಬಾಳಲು ಬಿಡು ಎಂದು ಬೋಧಿಸುತ್ತದೆ. ಇಡೀ ಜಗತ್ತಿನ ಇತಿಹಾಸದಲ್ಲಿ ಎಲ್ಲಿಯೂ, ಎಂದಿಗೂ ಧಮ್ಮದ ಹೆಸರಿನಲ್ಲಿ ಒಂದು ತೊಟ್ಟು ರಕ್ತ ಹರಿದಿಲ್ಲ. ಕವಡೆಯಷ್ಟು ಆಸ್ತಿಹಾನಿ ಆಗಿಲ್ಲ. ತಮ್ಮ ಧಮರ್ೊದ್ಧಾರಕ್ಕೆ ಯಾರಿಗೂ ಯಾವುದೇ ರೀತಿಯಲ್ಲೂ ನಷ್ಟ ಉಂಟುಮಾಡಿಲ್ಲ. ಬೌದ್ಧರು ತಮ್ಮ ಪ್ರಾಪಂಚಿಕ ಉನ್ನತಿಗಾಗಿ ಮತ್ತು ಶಾಂತಿಗಾಗಿ ಪರಧಮರ್ಿಯರನ್ನು ತಮ್ಮ ತಡೆಯೆಂದು ಭಾವಿಸಿಲ್ಲ. (ಬದಲಾಗಿ ಅವರು ತಮ್ಮ ಸಹೋದರರೆಂದು ಮೈತ್ರಿ ಪ್ರಸರಿಸುತ್ತಾರೆ).

ಬುದ್ಧರ ಸಂದೇಶವು ಒಂದು ಆಹ್ವಾನವಿದ್ದಂತೆ. ಅದೆಂದರೆ ಸರ್ವ ಸಮಾನತೆಯ ಸುಖ ಮತ್ತು ಕ್ಷೇಮಾಭಿವೃದ್ಧಿಗಾಗಿ ಸರ್ವರೂ ಕೈಜೋಡಿಸಿ ಸಾರ್ವತ್ರಿಕ ಸೋದರತ್ವವನ್ನು ಸಾಧಿಸಿ, ಸರ್ವರ ಹಿತಕ್ಕಾಗಿ ಶ್ರಮಿಸುವುದು ಆಗಿದೆ. ಅವರು ಜನರಿಂದ ಆಯ್ಕೆಯಾಗಿರಲಿಲ್ಲ. ಅವರು ಸಹಾ ತಮ್ಮನ್ನು ಆಯ್ಕೆಯಾದವರು ಎಂದು ಭಾವಿಸಿರಲಿಲ್ಲ.

ಬುದ್ಧ ಭಗವಾನರ ಮೊದಲ ಧಮ್ಮದೂತರು ಅರಹಂತರಾಗಿದ್ದರು. ಅಂದರೆ ಪರಿಶುದ್ಧರು, ಪರಿಪೂರ್ಣರು ಮತ್ತು ಪರಮ ಪವಿತ್ರರಾಗಿದ್ದವರು.  ಅವರು ತಮ್ಮ ಪರಿಶ್ರಮ, ತ್ಯಾಗ ಮತ್ತು ಮಾನಸಿಕ ಸುಶಿಕ್ಷಣದಿಂದ ಪರಿಪೂರ್ಣರಾಗಿ ಶ್ರೇಷ್ಠರಾಗಿದ್ದಂತಹವರು. ಆ ಶಿಷ್ಯರನ್ನು ಕಳುಹಿಸುವ ಮುನ್ನ ಬುದ್ಧರು ಅವರಿಗೆ ಹೀಗೆ ಹೇಳಿದ್ದರು:

ಹೋಗಿ, ಓ ಭಿಕ್ಷುಗಳೇ, ಬಹುಜನ ಹಿತಕ್ಕಾಗಿ, ಬಹುಜನ ಸುಖಕ್ಕಾಗಿ ಲೋಕಾನುಕಂಪೆಯಿಂದ ಚಲಿಸಿ. ದೇವ ಮತ್ತು ಮನುಷ್ಯರ ಕಲ್ಯಾಣಕ್ಕಾಗಿ ವಿವರಿಸಿ. ಓ ಭಿಕ್ಷುಗಳೇ, ಈ ಪರಮ ಉದಾತ್ತ ಧಮ್ಮವನ್ನು (ಬೋಧನೆಯನ್ನು ಮತ್ತು ಸತ್ಯಗಳನ್ನು) ಪವಿತ್ರ ಜೀವನವನ್ನು ಪರಿಶುದ್ಧತೆಯನ್ನು ಮತ್ತು ಪರಿಪೂರ್ಣತೆಯನ್ನು ಬೋಧಿಸಿ.

ಈ ಬುದ್ಧಿವಾದದ ಪ್ರಕಾರ ಬುದ್ಧರು ಒಳಿತು ಮತ್ತು ಕೆಡಕಿನ ವ್ಯತ್ಯಾಸ ತಿಳಿಸಲು ಇಚ್ಛಿಸಿದ್ದರು. ಹಾಗೆಯೇ ಅವರು ಹೇಗೆ ಮಾನವ ಸುಖಿಯಾಗಿರಬಲ್ಲ, ಶಾಂತವಾಗಿರಬಲ್ಲ ಮತ್ತು ಋಜುತ್ವದ ಜೀವನವನ್ನು ನಡೆಸಬಲ್ಲ ಎಂದು ತಿಳಿಸಲು ಇಚ್ಛಿಸಿದ್ದರು. ಅವರು ಎಂದಿಗೂ ತಮ್ಮ ಶಿಷ್ಯರಿಗೆ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡಿ ಎಂದು ಬೋಧಿಸಿಲ್ಲ. ಅವರ ದೃಷ್ಟಿಯಲ್ಲಿ ಪರಿವರ್ತನೆ ಎಂದರೆ ಮಿಥ್ಯದಿಂದ ಸತ್ಯದೆಡೆಗೆ, ತುಚ್ಛತೆಯಿಂದ ಶ್ರೇಷ್ಠತ್ವದೆಡೆಗೆ ಮತ್ತು ಮಿಥ್ಯ ಜೀವನದಿಂದ ಸಮ್ಯಕ್ ಜೀವನದ ಹಾದಿಯೆಡೆಗೆ ಪರಿವರ್ತನೆ ಹೊಂದುವುದಾಗಿತ್ತು ಹೊರತು ಮತಾಂತರವಾಗಿರಲಿಲ್ಲ.

ಬುದ್ಧರು ಎಂದಿಗೂ ಯಾವುದೇ ಧರ್ಮವನ್ನು ಟೀಕಿಸಲಿಲ್ಲ ಅಥವಾ ಅವಹೇಳನ ಮಾಡಿರಲಿಲ್ಲ. ಬದಲಾಗಿ ಅವರು ಜನರಿಗೆ ಜ್ಞಾನೋದಯ ವನ್ನುಂಟು ಮಾಡುತ್ತಿದ್ದರು. ಅವರು ಅತಿರೇಕದ ಮಾರ್ಗಗಳಾದ ದೇಹದಂಡನೆಯ ನಿರರ್ಥಕತೆ ಹಾಗು ಇಂದ್ರಿಯ ಭೋಗದ ತುಚ್ಛತೆ ಹಾಗು ಅನರ್ಥಕತೆಯನ್ನು ವಿವರಿಸುತ್ತಿದ್ದರು. ಹಾಗೆಯೇ ಧಮ್ಮದ ಹೆಸರಿನಲ್ಲಿದ್ದ ಮೂಢನಂಬಿಕೆ ಮತ್ತು ಅರ್ಥಹೀನ ಕ್ರಿಯೆಗಳನ್ನು ತಡೆಯಲು ಯತ್ನಿಸಿದ್ದರು. 

ನಿಜವಾದ ಧರ್ಮ

ಒಂದು ಪ್ರಶ್ನೆ : ನಿಜವಾದ ಧಮ್ಮವು ಏನನ್ನು ಒಳಗೊಂಡಿರುತ್ತದೆ? 

ಇದಕ್ಕೆ ಬುದ್ಧರು ಸ್ವತಂತ್ರವಾದ ಉತ್ತರ ನೀಡಿದರು ಯಾವ ಯಾವ ಬೋಧನೆಯಲ್ಲಿ ನಾವು 4 ಆರ್ಯ ಸತ್ಯಗಳನ್ನು ಮತ್ತು ಆರ್ಯ ಅಷ್ಠಾಂಗ ಮಾರ್ಗವನ್ನು ಕಾಣುತ್ತೇವೆಯೋ ಮತ್ತು ಎಲ್ಲೆಲ್ಲಿ ಪರಮಾರ್ಥದ ವಿಕಾಸ ಹೊಂದಿರುವ ಅಪ್ಪಟ ಹಿಂಬಾಲಕರು ಇದ್ದಾರೋ ಅಲ್ಲಿ ಧಮ್ಮವು ನೆಲೆಸಿರುತ್ತದೆ. ಅವರೆಂದಿಗೂ ಬುದ್ಧ ಧರ್ಮ ಮಾತ್ರ ಏಕೈಕ ನಿಜವಾದ ಧರ್ಮ ಎಂದು ಹೇಳಿಲ್ಲ. ಆದರೆ ಸತ್ಯಾನ್ವೇಷಿಯು ಎಲ್ಲೆಲ್ಲಿ ಸತ್ಯವನ್ನು ಕಾಣುತ್ತಾರೋ (ಅದು ಅಲ್ಪವೇ ಆಗಿರಲಿ) ಆತ ಅದನ್ನು ಗೌರವಿಸಬೇಕು ಮತ್ತು ಸ್ವೀಕರಿಸಬೇಕು. ಇದರ ಅರ್ಥ ಏನೆಂದರೆ, ನಾವು ಪರಧರ್ಮಗಳ ವಿಚಾರಭರಿತ, ಯೋಗ್ಯ ಬೋಧನೆಗಳನ್ನು ಅಲಕ್ಷಿಸುವಂತಿಲ್ಲ. ಇಂತಹ ದೃಷ್ಟಿಕೋನದಿಂದ ಸ್ಪಷ್ಟವಾಗಿ ತೋರಿಸುವುದು ಏನೆಂದರೆ ಬುದ್ಧರು ಎಂದಿಗೂ ಪರಧರ್ಮಗಳ ಬಗ್ಗೆ ಪೂವರ್ಾಗ್ರಹ ಪೀಡಿತರಾಗಿರಲಿಲ್ಲ. ಹಾಗೆಯೇ ಅವರು ಎಂದಿಗೂ ಧಾಮರ್ಿಕ ಸತ್ಯವನ್ನು ಇದೊಂದೇ ಸತ್ಯ ಎಂದು ವಿವಾದ ಹುಟ್ಟಿಸಲಿಲ್ಲ. ಅವರು ತೋರಿಸುತ್ತಿದ್ದುದು, ಹುಡುಕುತ್ತಿದ್ದುದು ಒಂದೇ ಒಂದು ವಿಷಯವಾಗಿತ್ತು ಅದೇ ಸತ್ಯ. ಅವರ ಎಲ್ಲಾ ಬೋಧನೆಗಳು ನಾಲ್ಕು ಆರ್ಯಸತ್ಯಗಳಲ್ಲಿದೆ, ಅದೆಂದರೆ ದುಃಖಸತ್ಯ, ಅದರ ಕಾರಣ, ಅದರ ನಿರೋಧ ಮತ್ತು ದುಃಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗ.

ಯಾವಾಗಲೇ ಆಗಲಿ ಬುದ್ಧರು ಅವರ ಶಿಷ್ಯರಿಗೆ ಹೀಗೆ ಮಾಡಿ ಅಥವಾ ಇದರಿಂದ ದೂರವಿರಿ ಎಂದು ಬೋಧಿಸುವ ಮುನ್ನ ಶಿಷ್ಯರಿಗೆ ಅದಕ್ಕೆ ಕಾರಣ, ಅದರ ಲಾಭ, ಪರಿಣಾಮ ತಿಳಿಸುತ್ತಿದ್ದರು. ಹೀಗೆ ಮಾಡುವುದರಿಂದ ಅಥವಾ ಇವರಿಂದ ದೂರವಿರುವುದರಿಂದ ಅವರಿಗೆ ಸುಖ ಮತ್ತು ಕ್ಷೇಮ ಲಭಿಸುತ್ತದೆ ಎಂದು ವಿವರಿಸುತ್ತಿದ್ದರು. ಅಷ್ಟೇ ಅಲ್ಲ, ಅವರಿಂದ ಪರರ ಸುಖ ಮತ್ತು ಕ್ಷೇಮವು ಸಿಗುತ್ತದೆ ಎಂದು ಹೇಳುತ್ತಿದ್ದರು. ಅವರು ಹೀಗೆ ಹೇಳುತ್ತಿದ್ದರು, ಇದರಿಂದ ನಿಮಗೆ ಮತ್ತು ಪರರಿಗೆ ಒಳಿತಾಗುತ್ತದೆ ಎಂದು ಮನವರಿಕೆಯಾದರೆ ನೀವು ಮಾಡಿ, ಇಲ್ಲದೇ ಹೋದರೆ ನಿಮಗೆ ಮತ್ತು ಪರರಿಗೆ ಹಾನಿ ಎಂದು ಅರಿವಾದರೆ ಮಾಡದಿರಿ.

ಒಬ್ಬ ಸಮಾಜ ಸುಧಾರಕರಾಗಿ ಬುದ್ಧರು ಮಾನವನ ದುಃಖದ ಆಳವಾದ ಬೇರುಗಳನ್ನು ಕಂಡುಹಿಡಿದರು. ಅದೇ ಲೋಭ, ದ್ವೇಷ ಮತ್ತು ಮೋಹ. ಇವೇ ಮಾನವನ ಮನಸ್ಸಿನಲ್ಲಿ ಬೇರೂರಿರುವ ವಿಷಗಳು. ಆದರಿಂದ ಮಾನವನ ಮನಸ್ಸು ಸುಧಾರಿತವಾದರೆ ಮಾತ್ರ ಸುಪರಿಣಾಮಕಾರಿ ಯಾಗುತ್ತದೆ. ಬಾಹ್ಯ ಜಗತ್ತನ್ನು ಬಲತ್ಕಾರವಾಗಿ ಸುಧಾರಿಸುವುದು ತಾತ್ಕಾಲಿಕ ಪರಿಣಾಮವನ್ನುಂಟು ಮಾಡುತ್ತದೆ. ಆದರೆ ಯಾವುದನ್ನು ಮಾನವನ ಆಂತರ್ಯದ ಮನಸ್ಸಿನಲ್ಲಿ ಪರಿವರ್ತನೆ ಮಾಡಿದಾಗ ಅದು ನಿರಂತರ ಸುಪರಿಣಾಮವನ್ನುಂಟು ಮಾಡುತ್ತದೆ.

ಪಾಪ ಪ್ರವೃತ್ತಿಗಳಾದ ಲೋಭ, ದ್ವೇಷ ಮತ್ತು ಮೋಹಗಳನ್ನು ದಾನ-ವೈರಾಗ್ಯ, ಮೈತ್ರಿ-ಕರುಣೆ ಮತ್ತು ಪ್ರಜ್ಞಾ, ಇವುಗಳ ಮೂಲಕ ಶೀಘ್ರವಾಗಿ ದಾಟಬಹುದು, ಪಾರಾಗಬಹುದು. ಹಾಗೆ ಆದಾಗ ಮಾತ್ರ ಮಾನಸಿಕ ಪರಿಶುದ್ಧತೆ ಉಂಟಾಗಿ ಪ್ರಶಾಂತತೆ ಮತ್ತು ಸುಖವು ಧಮ್ಮದ ಮೂಲಕ ಪರಿಣಾಮಕಾರಿಯಾಗಿ ಲಭಿಸುತ್ತದೆ. 

ಬೌದ್ಧ ಧಮ್ಮವೇ ಜಗತ್ತಿನ ಪ್ರಥಮ ಧಮ್ಮದೂತರ ಧರ್ಮವಾಗಿದೆ. ಸುಮಾರು 2300 ವರ್ಷಗಳ ಹಿಂದೆ ಭಾರತದ ಮಹಾನ್ ಸಾಮ್ರಾಟ ಚಕ್ರವತರ್ಿ ಅಶೋಕನು ಭಾರತವನ್ನು ಆಳುತ್ತಿದ್ದಾಗ (ಕ್ರಿ.ಪೂ. 305-268) ಆತನಿಗೆ ಸಾಮ್ರಾಜ್ಯ ದಾಹವುಂಟಾಗಿತ್ತು. ಆದರೆ ಬುದ್ಧ ಧಮ್ಮದ ಜ್ಞಾನವುಂಟಾಗಿ ಆತನು ಖಡ್ಗವನ್ನು ಅದರ ಮೂಲಕ ನಡೆಯುವ ಹಿಂಸೆಯನ್ನು ತ್ಯಜಿಸಿದನು. ತನ್ನ ಸಮಯವನ್ನು ಪ್ರಜಾ ಕಲ್ಯಾಣಕ್ಕಾಗಿ ಹಾಗು ಬುದ್ಧ ಧಮ್ಮದ ಉದ್ಧಾರಕ್ಕಾಗಿ, ಅದರ ಸಂಸ್ಕೃತಿಯ ನಿಮರ್ಾಣಕ್ಕಾಗಿ ಶ್ರಮಿಸಿದನು. ಆತನು ಇದೇರೀತಿಯ ಶ್ರೇಷ್ಠ ಸುಖ ಜಗತ್ತಿನಲ್ಲಿ ನೆಲೆಸಿದ್ದ ಎಲ್ಲರಿಗೂ ಸಿಗಲಿ ಎಂಬ ಆಶಯದಿಂದ ಬೌದ್ಧ ಧಮ್ಮದೂತರನ್ನು ವಿಶ್ವದ ಎಲ್ಲಾ ದೇಶಗಳಿಗೂ ಕಳುಹಿಸಿದನು. ಮಹತ್ ಕಾರ್ಯಕ್ಕೆ ತನ್ನ ಪುತ್ರ ಮತ್ತು ಪುತ್ರಿಯನ್ನು ಸಂಘಕ್ಕೆ ಸಮಪರ್ಿಸಿದನು. ಬುದ್ಧರ ಶಾಂತಿ ಸಂದೇಶವನ್ನು ಎಲ್ಲೆಡೆ ಸ್ಥಾಪಿಸಿದನು. ಬುದ್ಧರ ಪರಮಶ್ರೇಷ್ಠ ಸಂಪ್ರದಾಯಕ್ಕೆ ನಿಜವಾದ ಸೇವೆ ಸಲ್ಲಿಸುವುದಕ್ಕಾಗಿ ಎಂದಿಗೂ ಪರಧಮ್ಮವನ್ನು ನಿಂದಿಸಬಾರದೆಂದು ಬುದ್ಧಿವಾದವನ್ನು ನುಡಿದು ಸಭ್ಯ ಶ್ರೇಷ್ಠ ರೀತಿಯಲ್ಲಿ ಬುದ್ಧ ಧಮ್ಮವನ್ನು ಹರಡಿಸಿದನು. ಈ ಬುದ್ಧಿವಾದವನ್ನು ನಾವು ಇಂದಿಗೂ ಭಾರತದ ಸಾರಾನಾಥದ ಅಶೋಕ ಸ್ತಂಭದಲ್ಲಿ ಬ್ರಾಹ್ಮಿಲಿಪಿಯಲ್ಲಿ ಇಂದಿಗೂ ಕಾಣಬಹುದು. 

ಈ ಮುಂದಿನ ವಾಕ್ಯಗಳು ಆ ಶಿಲಾಶಾಸನದಲ್ಲಿದೆ : ಒಬ್ಬನು ಕೇವಲ ತನ್ನ ಧರ್ಮವನ್ನೇ ಗೌರವಿಸಬಾರದು ಮತ್ತು ಪರಧರ್ಮವನ್ನು ಹೀಯಾಳಿಸಬಾರದು (ನಿಂದಿಸಬಾರದು). ಬದಲಾಗಿ ಒಬ್ಬನು  ಈ ಅಥವಾ ಆ ಕಾರಣದಿಂದಲಾದರೂ ಪರಧರ್ಮವನ್ನು ಗೌರವಿಸಬೇಕು. ಹೀಗೆ ಮಾಡಿದಾಗ ಮಾತ್ರ ಒಬ್ಬನು ತನ್ನ ಧಮ್ಮವನ್ನು ಗೌರವಿಸುತ್ತಾನೆ. ಹಾಗು ತನ್ನ ಧಮ್ಮವನ್ನು ವೃದ್ಧಿಸುತ್ತಾನೆ. ಹಾಗೆಯೇ ಪರಧರ್ಮಕ್ಕೂ ತಕ್ಕಸೇವೆ ಸಲ್ಲಿಸುತ್ತಾನೆ. ಇದರ ಹೊರತು ಬೇರೆರೀತಿ ವತರ್ಿಸಿದರೆ ಆತನು ತನ್ನ ಧಮ್ಮಕ್ಕೆ ಅಗೆದು ಗೋರಿ ಕಟ್ಟುತ್ತಾನೆ ಮತ್ತು ಪರಧರ್ಮಕ್ಕೆ ಹಾನಿ ಉಂಟು ಮಾಡುತ್ತಾನೆ. ಯಾರಾದರೂ ಕೇವಲ ಸ್ವಧರ್ಮಕ್ಕೆ ಗೌರವಿಸಿ, ಪರಧಮ್ಮವನ್ನು ನಿಂದಿಸುತ್ತಾನೋ, ಆತನು ಮಾಡುವಾಗ ಇದನ್ನು ಅಂಧಭಕ್ತಿಯಿಂದ ಹೀಗೆ ಯೋಚಿಸಬಹುದು.  ನಾನು ನನ್ನ ಧರ್ಮವನ್ನು ಹೆಮ್ಮೆಪಡುವಂತೆ ಉದ್ಧರಿಸುತ್ತಿರುವೆನು. ಆದರೆ ಪ್ರತಿಯಾಗಿ ಆತನು ಹೀಗೆ ಮಾಡುವಾಗ ತನ್ನ ಧರ್ಮಕ್ಕೆ ಮಾರಾಣಾಂತಿಕವಾಗಿ ಗಾಯಗೊಳಿಸುತ್ತಿರುವನು. ಆದ್ದರಿಂದ ಸೌಹಾರ್ದತೆಯೇ ಉತ್ತಮ.  ಎಲ್ಲರೂ ಸರ್ವರ ಬೋಧನೆಗಳನ್ನು ಕೇಳಲಿ ಮತ್ತು ಕೇಳಲು ಇಚ್ಚುಕರಾಗಲಿ.

ಏಷಿಯಾದ ಸರ್ವಜನರು ಸಾಮ್ರಾಟ ಅಶೋಕನಿಗೆ ಅಭಾರಿಯಾಗಿರ ಬೇಕು. ಒಬ್ಬ ಆಳ್ವಿಕೆಗಾರನಾಗಿ ಆತನು ಪ್ರಚಲಿತದಲ್ಲಿದ್ದ ಸರ್ವ ಧರ್ಮಗಳನ್ನು ಪಕ್ಷಪಾತವಿಲ್ಲದೆ ಸಲುಹುತ್ತಿದ್ದನು.

ಧಾಮರ್ಿಕ ಸೌಹಾರ್ದತೆ

ಧಾಮರ್ಿಕ ತತ್ವಗಳು ಇಡೀ ಮಾನವತೆಗಾಗಿ ಇದೆ. ಒಂದುವೇಳೆ ಮಾನವತೆಯ ನಿಧರ್ಿಷ್ಟ ಭಾಗವು ಧಮ್ಮದ ಶ್ರೇಷ್ಠ ಸದ್ಗುಣಗಳಾದ ಕರುಣೆ, ಸಹನೆ, ಕ್ಷಮೆ ಮತ್ತು ಪ್ರಜ್ಞಾಶೀಲತೆ ಇವುಗಳಲ್ಲಿ ಯಾವುದಾದರು ಒಂದನ್ನು ಪಾಲಿಸದಿದ್ದರೆ ಪರರು ಶಾಂತಿಯಿಂದ ಜೀವಿಸಲಾರರು.

ವಂಚಕರಿಗೆ ಹಾಗು ಸ್ವಾಥರ್ಿಗಳಿಗೆ ಪರರಲ್ಲಿನ ಯಾವುದೇ ಶೀಲದ ದುಲರ್ಾಭ ಗಳಿಸುವುದು ಸ್ವಾಭಾವಿಕವೇ ಸರಿ. ಆದರೆ ಇಂದಿನ ಎಲ್ಲಾ ಧರ್ಮದವರೇ ನೆನಪಿನಲ್ಲಿಡಿ. ಯಾರು ಧರ್ಮದ ಹೆಸರಿನಲ್ಲಿ ರಕ್ತ ಹರಿಸುವರೋ ಹಾಗು ಹೋರಾಡುವರೋ, ಅವರು ಎಂದಿಗೂ ಧಮ್ಮದ ತತ್ವಗಳನ್ನು ಪಾಲಿಸಿಲ್ಲ ಹಾಗು ಮಾನವತೆಗೆ ಕಾರಣವಾದುದಕ್ಕೆ ಸೇವೆ ಸಲ್ಲಿಸಿಲ್ಲ. ಅವರು ಕೇವಲ ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಥವಾ ಅಧಿಕಾರಕ್ಕಾಗಿ ಹೋರಾಡುತ್ತಾ ಧಮ್ಮದ ಹೆಸರು ಅಂಟಿಸಿರುತ್ತಾರೆ. ಯಾರು ನಿಜವಾಗಿ ಧರ್ಮವನ್ನು ಪಾಲಿಸುತ್ತಿರುವರೋ, ಅವರು ಹೋರಾಡಲು, ಯುದ್ಧ ಮಾಡಲು, ಯಾವುದೇ ನೆಲೆ ಬೇಕಿಲ್ಲ. ಅವರು ಶಾಂತಿಯುತ, ಸೌಜನ್ಯಯುತ ಹಾದಿಯಲ್ಲೇ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ. ಒಂದು ನಿಜವಾದ ಧಮ್ಮ ಎಂದಿಗೂ, ಎಂತಹ ಸನ್ನಿವೇಶಕ್ಕು ಯಾವುದೇ ಪ್ರಕಾರದ ಹಿಂಸೆಗೆ ಪ್ರೋತ್ಸಾಹಿಸುವುದಿಲ್ಲ. ಅದೇ ವೇಳೆಯಲ್ಲಿ ನಾವು ಗೌರವಯುತ ಧಮ್ಮವನ್ನು ಪಾಲಿಸುವಾಗ ಜನಾಂಗಿಯ ಬೇದಭಾವ ಉಂಟಾಗುವುದಿಲ್ಲ. ಬೌದ್ಧರು ಪರಧಮರ್ೀಯ ರೊಂದಿಗೆ ದ್ವೇಷವಿಲ್ಲದೆ ಕೆಲಸ ಕಾರ್ಯವು ಮಾಡಬಹುದು ಹಾಗು ಜೀವಿಸಲೂಬಹುದು. ಅದಕ್ಕೆ ಯಾವ ಅಭ್ಯಂತರವೂ ಇಲ್ಲ. ಅಷ್ಟೇ ಇಲ್ಲ, ಬೌದ್ಧರು ಧಮ್ಮಕ್ಕಾಗಿ ಎಂದಿಗೂ ಪರಧಮರ್ಿಯರೊಂದಿಗೆ ಅಥವಾ ಸ್ವಧಮರ್ಿಯರೊಂದಿಗೆ ರಕ್ತಪಾತವನ್ನು ಉಂಟುಮಾಡುವುದಿಲ್ಲ (ರಕ್ತ ಚೆಲ್ಲುವುದಿಲ್ಲ).

ಇಂದಿನವರೆಗೆ ಮತ್ತು ಇಂದಿಗೂ ಸಹಾ ಧರ್ಮದ ಹೆಸರಿನಲ್ಲಿ ಬರ್ಬರ ಕೃತ್ಯಗಳು ಹಿಂಸಾಪಾತಗಳು ನಡೆದಿವೆ ಮತ್ತು ನಡೆಯುತ್ತಿವೆ. ಬಹಳಷ್ಟು ಮಂದಿಗೆ ಧರ್ಮ ಎಂಬ ಹೆಸರೇ ದಿಗ್ಭ್ರಾಂತಿ ಉಂಟುಮಾಡಿದೆ. ಇಡೀ ಮಾನವತೆಯ ಇತಿಹಾಸದಲ್ಲಿ ಧರ್ಮ ಹೆಸರಿನ ಸೋಗಿನಲ್ಲಿ ಭೌತಿಕವಾದ, ಕಪಟ, ವಂಚನೆ, ಮತಾಂಧತೆ ಮತ್ತು ಸಾಮೂಹಿಕ ಹತ್ಯೆಗಳು ನಡೆದಿವೆ. ನಿಜವಾದ ಧರ್ಮದ ಮೌಲ್ಯಗಳು ಕ್ಷಿಪ್ರವಾಗಿ ಜನರ ಮನಸ್ಸಿನಿಂದ ಮರೆಯಾಗುತ್ತಿದೆ ಮತ್ತು ಅವರು ಕೇವಲ ನಿಗೂಢತೆ ಮತ್ತು ವಾಮಾಚಾರ ವಿದ್ಯೆಗಳ ಶೋಧನೆಗೆ ಓಡುತ್ತಿದ್ದಾರೆ. ಸ್ಥಾಪಿತ ಶ್ರೇಷ್ಠ ಧರ್ಮಗಳು ಹಲವಾರು ರೂಪಗಳಲ್ಲಿ ತುಂಡು ತುಂಡಾಗುತ್ತಾ ಹೋಗುತ್ತಿವೆ ಮತ್ತು ಬಹಳಷ್ಟು ಜನರು ಧರ್ಮವನ್ನು ವ್ಯಂಗ್ಯ ಮಾಡಲು ಹೊರಟಿದ್ದಾರೆ. ಈಗ ಎಲ್ಲಾ ಧಮ್ಮದವರು ಒಗ್ಗೂಡಿ ಧಾಮರ್ಿಕ ನಿಜಧಮ್ಮದ ತತ್ವಗಳನ್ನು ಎತ್ತಿಹಿಡಿಯುವ ಕಾಲ ಒದಗಿ ಬಂದಿದೆ. ಕೇವಲ ನಂಬಿಕೆ ಮತ್ತು ಪುರಾಣಗಳ ಬಗ್ಗೆ ಚಚರ್ಿಸುವ ಜಗಳವಾಡುವ ಕಾಲ ದೂರ ಹೋಗುತ್ತಿದೆ. 

ಧರ್ಮವೆಂದರೆ ಕೇವಲ ಪ್ರಾಥರ್ಿಸುವುದಲ್ಲ ಅಥವಾ ಪೂಜೆ ಮಾಡುವುದಲ್ಲ. ಧರ್ಮವು ಕೇವಲ ನಾಲಿಕೆಯ ಕಾರ್ಯವಲ್ಲ. ಬದಲಾಗಿ ಮಾನವತೆಯ ಸೇವೆಗಾಗಿ ಮಾನವನು ಅಹಿಂಸೆಯುತವಾಗಿ ವತರ್ಿಸುವುದಾಗಿದೆ. ಒಳಿತನ್ನು ಮಾಡುವುದಾಗಿದೆ ಶಾಂತಿ, ನಿಜವಾದ ಸುಖ ಮತ್ತು ವಿಮುಕ್ತತೆಯನ್ನು ಗಳಿಸುವಂತಹದ್ದಾಗಿದೆ.

ವಿಭಿನ್ನ ಧರ್ಮದವರು ಜೀವನದ ಪ್ರಾರಂಭ ಮತ್ತು ಅಂತ್ಯದ ಬಗ್ಗೆ ವಿಭಿನ್ನ ನಂಬಿಕೆಗಳನ್ನು ಮತ್ತು ದೃಷ್ಟಿಕೋನಗಳನ್ನು ಹೊಂದಿದ್ದಾರೆ. ಹಾಗೆಯೇ ಅಂತಿಮ ಬಿಡುಗಡೆಗೆ ವಿಧವಿಧದ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಆದರೆ ಅಂತಹ ಐಕ್ಯಮತ್ಯವಲ್ಲದ ವಿಷಯಗಳನ್ನು ನಾವು ಮುಂದೆ ತರಬಾರದು. ಏಕೆಂದರೆ ಅದರಿಂದ ತಿಕ್ಕಾಟ, ದ್ವೇಷ, ಹಿಂಸೆ, ಸೇಡು ಮತ್ತು ತಪ್ಪು ತಿಳುವಳಿಕೆಗಳಾಗುತ್ತವೆ.

ಧಮ್ಮದ ಹೆಸರಿನಲ್ಲಿ ಸಾಮಾನ್ಯ ಸದ್ಗುಣಗಳು ಎಷ್ಟೋ ಇವೆ. ಅವನ್ನು ನಾವು ಸಿದ್ಧಾಂತ ಮತ್ತು ಸಾಧನೆಯಾಗಿ ಪರಿಚಯಿಸಬಹುದು, ಅದರಿಂದಾಗಿ ಜನರು ಸತ್ಯಸಂಧರಾಗಿ, ಶಾಂತತೆಯಿಂದ, ಸಂಸ್ಕೃತರಾಗಿ ಜೀವಿಸಬಹುದು.

ನಾವು ಮತ್ತೊಬ್ಬರನ್ನು ಬೇರ್ಪಡಿಸುವುದು ಮತ್ತು ದೂರ ಮಾಡುವುದು ಬೇಕಾಗಿಯೇ ಇಲ್ಲ. ನಾವು ಹಾಗೆ ಮಾಡತೊಡಗಿದರೆ ಅಧಾಮರ್ಿಕರು ಅವಕಾಶಕ್ಕೆ ಕಾದು ಎಲ್ಲಾ ಧರ್ಮಗಳನ್ನು ವ್ಯಂಗ್ಯ ಮಾಡುತ್ತಾರೆ ಮತ್ತು ನಿಂದಿಸುತ್ತಾರೆ. ನಾವು ನಮ್ಮ ಸಹ ಧಾಮರ್ಿಕರೊಂದಿಗೆ ಆ ರೀತಿಯ ವರ್ತನೆ ಮಾಡಬಾರದು. ಈ ರೀತಿಯಲ್ಲಿ ನಾವು ದ್ವೇಷಿಸಿದರೆ ಜನರು ಧರ್ಮವೆಂದರೆ ಮಾನವತೆಯನ್ನು ಬೇರ್ಪಡಿಸುವುದು ಎಂದರ್ಥ ಎಂದು ಹೇಳುತ್ತಾರೆ.

ಬೌದ್ಧರು ಪರಧಮರ್ಿಯ ಗುರುಗಳಿಗೆ ಗೌರವಿಸುವುದನ್ನು ನಿಷೇಧಿಸಲಾಗಿಲ್ಲ ಅಥವಾ ಪರಧಮರ್ಿಯ ಪೂಜಾ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಿಲ್ಲ. ಅವರು ಹಾಗೆ ಮಾಡುವಾಗ ತಮ್ಮ ಸಹಕಾರವನ್ನು ತೋರಿಸುತ್ತಾರೆ. ಆದರೆ ಹಾಗೆಯೇ ಬೌದ್ಧ ತತ್ವಗಳನ್ನು ಅನುಸರಿಸುತ್ತಿರುತ್ತಾರೆ.

ಬೌದ್ಧ ಧಮ್ಮದಲ್ಲಿ ವಿವಿಧ ಧಾಮರ್ಿಕ ವಿಭಾಗಗಳನ್ನು ಅರಿಯುವಿಕೆಯಲ್ಲಿ ಮತ್ತು ಸಹಕಾರ ನೀಡುವಿಕೆಯಲ್ಲಿ ಪ್ರೋತ್ಸಾಹವಿದೆ. ಬೌದ್ಧರ ಪ್ರಕಾರ ಧಾಮರ್ಿಕ ಚಿಹ್ನೆಗಳು ಪರರು ಭಾವಿಸುವಂತೆ ಅದೇ ಧರ್ಮವಲ್ಲ, ಬದಲಾಗಿ ಗೌರವಯುತ ಮತ್ತು ಅಹಿಂಸಯುತ ಜೀವನವನ್ನು ಜೀವಿಸುವುದೇ ಧಾಮರ್ಿಕ ಜೀವನವಾಗಿದೆ.

ಯಾರಾದರೂ ಬೌದ್ಧ ಧರ್ಮದಲ್ಲಿ ಹುಳುಕುಗಳನ್ನು ಹಿಡಿದು, ಹುರುಳಿಲ್ಲದ ಟೀಕೆಯನ್ನು ಚೆನ್ನಾಗಿ ಮಾಡಬಹುದು. ಅದರ ಸಂಪ್ರದಾಯಿಕ ಪದ್ಧತಿಗಳನ್ನು ಟೀಕಿಸಬಹುದು. ಅವುಗಳ ರೀತಿ, ವಿಧಿಗಳನ್ನು ಟೀಕಿಸಬಹುದು. ಆದರೆ ಬುದ್ಧರ ಬೋಧನೆಗಳನ್ನು ಟೀಕಿಸಲಾಗುವುದಿಲ್ಲ. ಏಕೆಂದರೆ ಅವು ಸಾರ್ವಕಾಲಿಕ ಸತ್ಯಗಳಾಗಿವೆ. ಸಾರ್ವಕಾಲಿಕ ಒಳಿತನ್ನುಂಟು ಮಾಡುವಂತಹದ್ದಾಗಿದೆ. ಅವುಗಳನ್ನು ಯಾರೊಬ್ಬರು ಪ್ರಯತ್ನಿಸಿ ಪರೀಕ್ಷಿಸುವಂತಹದ್ದಾಗಿದೆ. 

ಬುದ್ಧರ ಬೋಧನೆಗಳನ್ನು ಪರಿಚಯಿಸಿದ ವಿಧಾನಗಳು ಶಾಂತಿಯುತ ಮತ್ತು ವಿಚಾರಯೋಗ್ಯವಾಗಿವೆ. ಬುದ್ಧರು ಸಹ ವಿಮಶರ್ೆ ಮತ್ತು ಅನುಭವದಿಂದ ಸತ್ಯ ಪರೀಕ್ಷಿಸಿ ಎಂದು ತಿಳಿಸಿದ್ದಾರೆ. ಆ ಬೋಧನೆಗಳು ಸ್ಪಷ್ಟ ಹಾಗು ಸರಳಾಕಷರ್ಿತವಾಗಿವೆ. ಹಾಗಿದ್ದು ಸಹ ಧರ್ಮ, ರಾಷ್ಟ್ರ ಹಾಗು ಮತಾಂಧತೆ ಇವುಗಳಂತಹ ಸಂಕುಚಿತತೆಯಿಂದ ಮುಕ್ತವಾಗಿದೆ. ಈ ಬೋಧನೆಯಿಂದ ಸ್ಪಷ್ಟ ಹಾಗು ಪ್ರಜ್ಞಾಶೀಲರು ಉತ್ಪತ್ತಿಯಾಗುತ್ತಾರೆ. ಆ ಬೋಧನಾ ಶೈಲಿಯಿಂದ ಸಂದೇಹಗಳು ಮತ್ತು ಮೂಢನಂಬಿಕೆಗಳು ದೂರವಾಗುತ್ತವೆ. ಹೀಗಿರುವುದರಿಂದಲೇ ಬುದ್ಧತತ್ತ್ವಗಳು ಸದಾ ಸತ್ಯ ಸಂಶೋಧಕನ ಹೃದಯ ಹಾಗು ಮನಸ್ಸಿಗೆ ಆನಂದ ನೀಡುವುದು. ಬೌದ್ಧರ ಸಹನಾ ಮನೋಭಾವ ಮತ್ತು ಪ್ರಜ್ಞಾಶೀಲತೆಗಳು ಬಹಳಷ್ಟು ಶ್ರೇಷ್ಠ ಚಿಂತಕರಿಗೆ, ತತ್ವಜ್ಞಾನಿಗಳಿಗೆ, ವಿಚಾರಪರರಿಗೆ, ಮುಕ್ತ ಚಿಂತಕರಿಗೆ ಆಜ್ಞೇಯವಾದಿಗಳಿಗೆ ಹಾಗು ನಾಸ್ತಿಕರು ಸಹ ಬುದ್ಧ ಧಮ್ಮವನ್ನು ಶಾಂತಿಯುತ ಹಾಗು ಆನಂದದಾಯಕ ಜೀವನ ಮಾರ್ಗ ಎಂದಿದ್ದಾರೆ.

ಬುದ್ಧರ ಪ್ರಕಾರ ಪುರುಷರು ತಮ್ಮ ಸ್ವಕೇಂದ್ರೀಕೃತ ಮನೋಭಾವದಿಂದ ಪ್ರತ್ಯೇಕರಾಗಿರುವರು. ಯಾವಾಗ ಇದು ದಮನವಾಗುತ್ತದೋ, ಆರೋಗ್ಯಕರ ಮಾನವತಾ ಬಾಂಧವ್ಯಗಳು ವೃದ್ಧಿಯಾಗುತ್ತವೆ. ಆದ್ದರಿಂದ ಶಾಂತಿಯ ಮತ್ತು ಸೌಹಾರ್ದಯುತ ಜೀವನ ವಿಧಾನವು ಆಂತರ್ಯದಿಂದ ಪ್ರಾರಂಭವಾಗುತ್ತದೆಯೇ ಹೊರತು ಬಾಹ್ಯದಿಂದಲ್ಲ. 

ಇಂದಿನ ಧರ್ಮವಾದಿಗಳು ಸೌಹಾರ್ದತೆಯಿಂದ ಒಟ್ಟುಗೂಡಿ ಕಾರ್ಯ ಮಾಡದಿದ್ದರೆ, ಪಕ್ಷಪಾತ ತೊರೆಯದಿದ್ದರೆ, ದ್ವೇಷ ತ್ಯಜಿಸದಿದ್ದರೆ, ಶಾಂತಿ ಎಂಬುದು ಕೇವಲ ಕನಸಾಗಿಯೇ ಉಳಿಯುತ್ತದೆ.

ಒಬ್ಬ ಪ್ರಮಾಣಿಕ ಮತ್ತು ಸಾತ್ವಿಕ ಸಹ ಧಾಮರ್ಿಕರಾಗಿ ನಾವೆಲ್ಲರೂ ಪರಸ್ಪರ ಕೈ ಜೋಡಿಸೋಣ. ವಿವಾದಾತ್ಮಕ ಮತ್ತು ಪಕ್ಷಪಾತ ಹೊಂದಿರುವ ನಮ್ಮ ಬೋಧನೆಗಳನ್ನು ನಿವಾರಿಸಿಕೊಳ್ಳೋಣ. ಸರ್ವರಿಗೂ ಸಮಾನವಾಗಿರುವ ಧರ್ಮ ತತ್ವಗಳನ್ನು ಪರಿಚಯಿಸೋಣ. ಸರ್ವರ ಹಿತ ಹಾಗು ಸುಖಕ್ಕಾಗಿ, ಮಾನವತೆಗಾಗಿ ಜನಾಂಗ ಅಥವಾ ಜಾತಿಯನ್ನು ವರ್ಣವನ್ನು ಮೀರೋಣ.  ನಾವೆಲ್ಲರೂ ನೆನಪಿಡಬೇಕಾದ ಸಂಗತಿ ಏನೆಂದರೆ ಧಮ್ಮ ಇರುವುದು ಮಾನವತೆಯ ಒಳಿತಿಗಾಗಿಯೇ. ಆದ್ದರಿಂದ ಅದನ್ನು ಮತಾಂಧತೆಯ ರೀತಿ ದುರ್ಬಳಕೆ ಮಾಡಬಾರದು. ಯಾವುದೇ ರೀತಿಯ ವೈಯುಕ್ತಿಕ ಲಾಭ ಅಥವ ಸ್ವ-ಪ್ರತಿಷ್ಠೆ ಮಾಡಿಕೊಳ್ಳದೆ ಇರೋಣ. 

ಎಲ್ಲರೂ ಒಂದಾಗೋಣ

ಎಲ್ಲಾ ಧರ್ಮದವರು ಒಂದಾಗೋಣ ಹಾಗು ಧಾಮರ್ಿಕ ಯುದ್ಧನೀತಿ ಕೈಬಿಡೋಣ. ಧರ್ಮದ ಹೆಸರಿನಲ್ಲಿ ಹಾಗು ಯುದ್ಧದ ಹೆಸರಿನಲ್ಲಿ ಆಗುವ ಮಾನವ ಸಂಹಾರ ಹಾಗು ಕ್ರೂರತೆ ನಿಲ್ಲಿಸೋಣ. ಮಾನವ ತನ್ನ ನಂಬಿಕೆಗೆ ತಕ್ಕಂತೆ ಧರ್ಮವನ್ನು ಹುಡುಕುವ ಸ್ವಾತಂತ್ರ ನೀಡಿ ಒಂದಾಗಿಸೋಣ. ಧಾಮರ್ಿಕ ಏಕಸ್ವಾಮ್ಯವನ್ನು ತ್ಯಜಿಸಲು ಒಂದಾಗೋಣ. ಪ್ರಶ್ನಾತ್ಮಕ ವಿಧಾನಗಳಿಂದ ಮಾರುಕಟ್ಟೆಗಳಲ್ಲಿ ಮತಾಂತರ ಮಾಡುವುದನ್ನು ತಡೆಯಲು ಒಂದಾಗೋಣ. ಎಲ್ಲಾ ಧರ್ಮದವರ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸಲು ಒಂದಾಗೋಣ.  ಈ ಅನಾರೋಗ್ಯಕರ ಧಾಮರ್ಿಕ ಸ್ಪಧರ್ಾತ್ಮಕ ಸವಾಲಿನ ಮನೋಭಾವವನ್ನು ಅಳಿಸಲು ಒಂದಾಗೋಣ. ನಮ್ಮ ಆಧುನಿಕ ಸಮಾಜದಲ್ಲಿ ಸಾಮಾನ್ಯವಾಗಿರುವ ಎಲ್ಲಾ ನೀಚ ದುಶ್ಶೀಲ, ಪಾಪಯುತ ಆಚರಣೆಗಳೆಲ್ಲವನ್ನು ನಿಶ್ಚೇತಗೊಳಿಸಲು ಒಂದಾಗೋಣ. ಎಲ್ಲರಲ್ಲು ಅತಿರೇಕ ತೊರೆಯಲು ಮಧ್ಯಮ ಮಾರ್ಗವನ್ನು ಪರಿಚಯಿಸಲು ಒಂದಾಗೋಣ.

ಪ್ರತಿ ಧರ್ಮ ಸಂಸ್ಥಾಪಕರು, ಮೂಲ ಉದ್ದೇಶವಿದ್ದುದೇ ಮಾನವತೆ. ಮಾನವರಲ್ಲಿ ಸೌಹಾರ್ದತೆ, ಮೈತ್ರಿ ಮತ್ತು ಪರಸ್ಪರ ತಿಳುವಳಿಕೆ ಮೂಡಿಸಿ ಜಗತ್ತನ್ನು ಸುಖವಾಗಿಡುವುದರಲ್ಲಿ ಆಗಿತ್ತು.

ಅಂತಹ ಧಾಮರ್ಿಕ ನಾಯಕರ ಹಾದಿಯನ್ನು ಹಿಂಬಾಲಿಸಿ ಪರರ ನಂಬಿಕೆಯವರನ್ನು ಗೌರವಿಸೋಣ. ದುರಾದೃಷ್ಟಕರವಾಗಿ ಪ್ರತಿ ಧರ್ಮದ ಕೆಲವರು ತಮ್ಮ ಸ್ವಾರ್ಥದಿಂದ ಹಾಗು ಅಸಹನೆಯಿಂದ ಮತ್ತು ಸಂಕುಚಿತದ ಮನೋಭಾವದಿಂದ ನಿಜ ಧರ್ಮದ ಸಾರವನ್ನೇ ಅರಿಯಲಾರದೆ ಅದರ ವಿರುದ್ಧವಾಗಿ ನಡೆದು ಘರ್ಷಣೆ, ಮಿಥ್ಯಾದೃಷ್ಟಿ, ಪಕ್ಷಪಾತ ಮತ್ತು ಅಸಹನೆಯನ್ನು ಸೃಷ್ಟಿಸಿದರು.

ನಾವು ನಿಜ ಹೃದಯದಿಂದ ನಂಬುವುದೇನೆಂದರೆ ಈ ಸತ್ಯಗಳನ್ನು ಅಥರ್ೈಸಿಕೊಂಡು ಒಂದುದಿನ ಎಲ್ಲಾ ಧರ್ಮದ ಸೋದರರು ಒಂದಾಗಿ ಮಾನವತೆಗೆ ದುಡಿಯುತ್ತಾರೆ.

ಅಂತಿಮ ವಿಶ್ಲೇಷಣೆಯಲ್ಲಿ ಹೇಳುವುದೇನೆಂದರೆ ಯಾರಲ್ಲಿ ತನ್ನ ಧಮ್ಮದ ಮೂಲಕ ಆಂತರ್ಯ ಶಕ್ತಿ ಹೊಂದಿದವರೊ ಅವರು ಶ್ರದ್ಧೆಯುಕ್ಕಿ ಅವರು ಪರರ ಧರ್ಮಕ್ಕೂ ಗೌರವಿಸುತ್ತಾರೆ. 



 

Friday, March 15, 2019

DRKSRIDHAMMANANDATHERO ಪಂಚಶೀಲಗಳು


                                                ಅಧ್ಯಾಯ - 6
                                                ಪಂಚಶೀಲಗಳು

ದುಶ್ಶೀಲನಾಗಿ, ಸಂಯಮಹೀನನಾಗಿ
ನೂರು ವರ್ಷ ಬದುಕುವುದಕ್ಕಿಂತ
ಒಂದೇ ಒಂದು ದಿನ ಶೀಲವಂತನಾಗಿ
ಧ್ಯಾನಿಯಾಗಿ ಬದುಕುವುದು ಮೇಲು (110)


ಶೀಲವೆಂದರೆ ಪಾಪಗಳಿಂದ ದೂರವಾಗುವುದು, ವಿರತನಾಗುವುದು. ಇಚ್ಛಾಪೂರ್ವಕವಾಗಿ ಶರೀರದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಪಾಪಮಾಡದಿರುವುದೇ ಆಗಿದೆ. ಹಾಗೆಯೇ ಶೀಲವೆಂದರೆ ಪುಣ್ಯವನ್ನು ಆಚರಿಸುವುದು. ಇಚ್ಛಾಪೂರ್ವಕವಾಗಿ ಒಳಿತನ್ನು ಶರೀರದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಮಾಡುವುದೇ ಆಗಿದೆ. ಎಲ್ಲಾ ಸುಕರ್ಮಗಳು ಶೀಲವೆನಿಸುತ್ತದೆ. ಶೀಲವು ಅಗೌರವವನ್ನು ತೆಗೆದು ಶಾಂತತೆಯನ್ನು ನಿಮರ್ಾಣ ಮಾಡುತ್ತದೆ. ಪಾಪವಿರತೆಯ ಕಾರ್ಯ ಮಾಡುತ್ತದೆ. ಪರಿಶುದ್ಧತೆಯಿಂದ ಶೀಲವು ವ್ಯಕ್ತವಾಗುತ್ತದೆ.
ಶೀಲದ ಅಭ್ಯಸಿಸುವಿಕೆಯಲ್ಲಿ ಎಲ್ಲಾ ಶೀಲಗಳನ್ನು ಅಚರಿಸಬೇಕಾಗುತ್ತದೆ. ಶೀಲದ ವೃದ್ಧಿಗೆ ಪಾಪಲಜ್ಜೆ ಹಾಗೂ ಪಾಪಭಯವು ತುಂಬಾ ಸಹಾಯ ಮಾಡುತ್ತದೆ, ಇದರಿಂದಾಗಿ ಸ್ವಲ್ಪ ತಪ್ಪು ಸಹಾ ನಡೆಯಲಾರದು, ಶೀಲದ ಅಭ್ಯಾಸದಿಂದ ಮಧ್ಯಮಮಾರ್ಗ ಪಾಲನೆಯಾಗುತ್ತದೆ ಹಾಗೂ ಜೀವನದಲ್ಲಿ ಸಂತೃಪ್ತಿಯಿರುತ್ತದೆ.
ಶೀಲದ ಆಚರಣೆಯಿಂದಾಗಿ ವಿಸ್ಮೃತಿ, ಗೊಂದಲ, ಒತ್ತಡ, ಹತಾಶೆ, ಮಾನಸಿಕ ಅಸಮತೋಲನ, ಪಾಪ ಯೋಚನೆಗಳು, ಅಥವಾ ಮಾನಸಿಕ ಕಶ್ಮಲಗಳಿಗೆ ತಡೆಯುಂಟಾಗುತ್ತದೆ, ಶೀಲದಿಂದ ಸಮಾಧಿಗಳಾದ ಮೆತ್ತ, ಕರುಣ, ಮುದಿತ, ಇತ್ಯಾದಿಗಳು
ವೃದ್ಧಿಯಾಗುತ್ತದೆ,ಸಹನೆ,ತಾಳ್ಮೆ, ಸಮಚಿತ್ತತೆ ದೊರೆತು ಜೀವನಕ್ಕೆ ನಿಜ ಉದ್ದೇಶ ದೊರೆಯುತ್ತದೆ. ಶಿಲೆಗಳು ಭವನಕ್ಕೆ ಆಧಾರವಾಗಿರುವಂತೆ, ಶೀಲವು ನಿಜವಾದ ಉನ್ನತಿಗೆ ಆಧಾರವಾಗಿದೆ.
ಶೀಲದ ಲಾಭಗಳು;
1. ಶೀಲವಂತನು ತನ್ನ ಜಾಗರೂಕತೆಯಿಂದಾಗಿ ಮಹಾ ಭಾಗ್ಯವನ್ನು ಪಡೆಯುತ್ತಾನೆ.
2. ಆತನ ಸುಖ್ಯಾತಿಯು ಎಲ್ಲೆಡೆ ಹರಡುತ್ತದೆ.
3. ಆತನು ಯಾವುದೇ ಸಭಾಂಗಣದಲ್ಲಿ ಪ್ರವೇಶಿಸಲು ಅಥವಾ ಅಲ್ಲಿರಲಿ, ಆತನು ಧೈರ್ಯದಿಂದ ಭಯರಹಿತತೆಯಿಂದ ಇರುತ್ತಾನೆ.
4. ಶೀಲವಂತನು ದ್ವಂದ್ವಗಳಿಲ್ಲದೆ, ಕಳವಳವಿಲ್ಲದೆ, ಶಾಂತನಾಗಿ ಮೃತ್ಯುವನ್ನಪ್ಪುತ್ತಾನೆ.
5. ಸಾವಿನ ನಂತರ ಆತನು ಸುಗತಿ ಪ್ರಾಪ್ತಿ ಮಾಡುತ್ತಾನೆ.

ಪಂಚಶೀಲಗಳ ವಿವರಣೆ ಹೀಗಿದೆ:

ಅದ್ಭುತವಾದ ಪಂಚಶೀಲಗಳು

-ಮೊದಲ ಶೀಲ-
{ಜೀವಕ್ಕಾಗಿ ಗೌರವ: ಕೊಲ್ಲದಿರುವುದು; ರಕ್ಷಿಸುವುದು}
ನಾನು ಜೀವಹತ್ಯೆ ಮಾಡುವ ನೀಚಕೃತ್ಯದಿಂದ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಛಾಪೂರ್ವಕವಾಗಿ ಪಾಲಿಸುತ್ತೇನೆ.
[ಅದರಿಂದಾಗಿ ನಾನು ಕರುಣೆಯನ್ನು ಅಭ್ಯಸಿಸುತ್ತಾ, ಸರ್ವಜೀವಿಗಳನ್ನು ರಕ್ಷಿಸುತ್ತಾ, ಹಿತ ಲಾಭಗಳನ್ನು ಮಾಡುತ್ತೇನೆ]
ಜೀವನಾಶದಿಂದ ಉಂಟಾಗುವ ದುಃಖದ ಅರಿವಿನಿಂದಾಗಿ, ನಾನು ಈ ಶೀಲವನ್ನು ಪಾಲಿಸುತ್ತಾ, ಕರುಣೆಯನ್ನು ವೃಧ್ಧಿಸುತ್ತಾ, ಮಾನವ, ಪ್ರಾಣಿ ಮತ್ತು ಸಸ್ಯಗಳ ರಕ್ಷಿಸಲು ನಾನು ಕೊಲ್ಲದಿರುವ, ಹಿಂಸಿಸದಿರುವ, ಪರರಿಗೂ ಹಾಗೇ ಪ್ರಚೋದಿಸದಿರುವ, ಮತ್ತು ಯಾವುದೆ ರೀತಿಯ ದೈಹಿಕ ಅಥವಾ ಮಾನಸಿಕ ಹಿಂಸೆಯನ್ನು ಬೆಂಬಲಿಸದಿರುವ ಹಾಗೆ ಇರುವಂತಹ, ಶೀಲಕ್ಕೆ ಬದ್ದನಾಗಿರುವಂತೆ ನಾನು ಧೃಢಸಂಕಲ್ಪ ಮಾಡುತ್ತೇನೆ.


-ಎರಡನೆಯ ಶೀಲ-
{ವ್ಯಕ್ತಿಯ ಆಸ್ತಿಗೆ ಗೌರವ: ಕದಿಯದಿರುವಿಕೆ; ದಾನಿಯಾಗಿರುವಿಕೆ}
ನಾನು ಕೊಡದೆ ಇರುವುದನ್ನು ,ತೆಗೆದುಕೊಳ್ಳದಿರುವ ಸುಶಿಕ್ಷಣದ ನಿಯಮವನ್ನು ಇಚ್ಛಾಪೂರ್ವಕವಾಗಿ ಪಾಲಿಸುತ್ತೇನೆ.
[ಅದರಿಂದಾಗಿ ನಾನು ದಾನವನ್ನು ಅಭ್ಯಸಿಸುತ್ತಾ, ನನ್ನಲ್ಲಿರುವ ಭೌತಿಕ & ಪರಮಾರ್ಥ ಐಶ್ವರ್ಯವನ್ನು ಹಂಚುತ್ತಾ ದಾನಮಾಡುವೆನು.]
ಕಳವುನಿಂದ, ಸುಲಿಗೆಯಿಂದ, ಅನ್ಯಾಯದಿಂದ, ದರೋಡೆಯಿಂದ ಮತ್ತು ದಬ್ಬಾಳಿಕೆಯಿಂದ ಉಂಟಾಗುವ ದುಃಖದ ಅರಿವಿನಿಂದಾಗಿ ನಾನು ಈ ಶೀಲವನ್ನು ಪಾಲಿಸುತ್ತಾ, ಸರ್ವಮಾನವರ & ಪ್ರಾಣಿಗಳ ಮೇಲೆ ಮೈತ್ರಿಯನ್ನು ವಿಸ್ತರಿಸುತ್ತಾ, ನಾನು ಪ್ರಾಮಾಣಿಕತೆ, & ದಾನವನ್ನು ಅಭ್ಯಸಿಸುತ್ತ, ನನ್ನ ಐಶ್ವರ್ಯ,ಕಾಲ,ಶಕ್ತಿ,ಅನುಭೂತಿ,ಸ್ಪೂತರ್ಿ ಮತ್ತಿತರ ಸಂಪನ್ಮೂಲಗಳನ್ನು ನಾನು ಪರಹಿತಕ್ಕೆ ಬಳಸುತ್ತೇನೆ, ವಿಶೇಷವಾಗಿ ಅಗತ್ಯವುಳ್ಳವರಿಗೆ ಧಮ್ಮದಾನವನ್ನು ಮಾಡುತ್ತೇನೆ. ನಾನು ಪರರಿಗೆ ಸೇರಿದ ಯಾವುದನ್ನು ಹೊಂದದಿರುವ ಅಥವಾ ಕದಿಯದಿರುವ ಬಗ್ಗೆ ಧೃಢಸಂಕಲ್ಪ ಮಾಡುತ್ತೇನೆ. (ಸಮಯವನ್ನು ಸಹಾ ಕಳುವುಮಾಡದೆ-ನಿಧಾನ ಅಥವಾ ಕಾರ್ಯದಲ್ಲಿ ಬೇಜಾವ್ಧಾರಿ ಇಲ್ಲದಂತೆ ನಿರ್ವಹಿಸುತ್ತೇನೆ). ನಾನು ಪರರಿಗೆ ಸೇರಿದ ವ್ಯಯಕ್ತಿಕ ಅಥವಾ ಸಾರ್ವಜನಿಕ ಆಸ್ತಿಗೆ ಗೌರವಿಸುತ್ತೇನೆ ಮತ್ತು ಯಾವುದೇ ಜೀವಿಯ ದುಃಖದಿಂದ ಪರರೂ ಲಾಭಗಳಿಸದಂತೆ ತಡೆಯುತ್ತೇನೆ.



-ಮೂರನೆಯ ಶೀಲ-
{ವ್ಯಕ್ತಿಗತ ಭಾಂಧವ್ಯಗಳಿಗೆ ಗೌರವ; ಇಂದ್ರೀಯಭೋಗಗಳಲ್ಲಿ ತಲ್ಲಿನನಾಗದಿರುವಿಕೆ; ಸಂತೃಪ್ತನಾಗಿರುವಿಕೆ}
ನಾನು ಕಾಮುಕತೆಯ ಮಿಥ್ಯಾಚಾರಗಳಿಂದ & ಇಂದ್ರಿಯಸುಖಗಳ ವಿಷಯಗಳಲ್ಲಿ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಚಾಪೂರ್ವಕವಾಗಿ ಪಾಲಿಸುತ್ತೇನೆ
[ನಾನು ಅನೈತಿಕ ಕಾಮುಕತೆಯಿಂದ ದೂರವಿದ್ದು, ನಾನು ಸಂತೃಪ್ತಿಯನ್ನು ಅಭ್ಯಸಿಸುತ್ತೇನೆ (ಭಿಕ್ಷುವಾಗಿದ್ದರೆ ಪೂರ್ಣ ಬ್ರಹ್ಮಚಾರ್ಯೆಯನ್ನು ಪಾಲಿಸುತ್ತ) ಮತ್ತು ನನ್ನ ಶಕ್ತಿ ಮತ್ತು ಕೇಂದ್ರಿಕರಣವನ್ನು ಪರಮಾರ್ಥದ ಅಭಿವೃಧ್ಧಿಗೆ ಹರಿಸುತ್ತೇನೆ]
ಅನೈತಿಕತೆಯ ಕಾಮುಕತೆಯಿಂದ ಉಂಟಾಗುವ ದುಃಖದ ಅರಿವಿನಿಂದಾಗಿ, ಹೊಣೆಗಾರಿಕೆಯ ವೃಧ್ಧಿಗಾಗಿ, ವ್ಯಕ್ತಿಗಳ ಐಕ್ಯತೆಗಾಗಿ, ಜೋಡಿಯ, ಕುಟುಂಬದ ಮತ್ತು ಸಮಾಜದ ಋಜುತ್ವಕ್ಕಾಗಿ ಮತ್ತು ಸುರಕ್ಷತೆಗಾಗಿ ಈ ಶೀಲವನ್ನು ಪಾಲಿಸುತ್ತೇನೆ. ಪತಿ ಆಥವಾ ಸತಿಯ ಪ್ರೇಮದ ವಿನಃ ಬೇರಾರಲ್ಲೂ ಕಾಮುಕ ಸಂಬಂಧಗಳನ್ನು ಹೊಂದದೆ ಇರುವಂತಹ ಧೃಢಸಂಕಲ್ಫವನ್ನು ಮಾಡುತ್ತೇನೆ, ಹೊಣೆಗಾರಿಕೆ ಅರಿತು ಜೀವಿಸುತ್ತೇನೆ, ಮತ್ತು ದೀರ್ಘಕಾಲ ಇದೇ ರೀತಿಯ ಪವಿತ್ರತೆಯ ನಿಷ್ಟ ಜೀವನವನ್ನು ನಡೆಸುತ್ತೇನೆ.
ನನ್ನ ಮತ್ತು ಪರರ ಸುಖದ ಸಂರಕ್ಷಣೆಗಾಗಿ, ನಾನು ಪರರ ವಚನಬದ್ಧತೆಗೆ ಗೌರವಿಸುತ್ತೇನೆ. ನಾನು ಅನೈತಿಕತೆಯ ಕಾಮುಕತೆಯ ಕಾರಣದಿಂದ ನಾಶವಾಗುತ್ತಿರುವ ಮಕ್ಕಳು, ದಂಪತಿಗಳು, ಮತ್ತು ಒಡಕಾಗುತ್ತಿರುವ ಕುಟುಂಬಗಳನ್ನು ನನ್ನ ಶಕ್ತಿಮೀರಿ ಶ್ರಮಿಸಿ ಕಾಪಾಡುತ್ತೇನೆ.
ಇಂದ್ರಿಯ ಭೋಗಗಳಿಂದ ಉಂಟಾಗುವ ಈ ಎಲ್ಲಾ ದುಃಖಗಳ ಅರಿವಿನಿಂದಾಗಿ ನಾನು ನೋಟದಿಂದಾಗಲಿ, ಶಬ್ದದಿಂದಾಗಲಿ, ಸುವಾಸನೆಯಿಂದಾಗಲಿ, ರಸದಿಂದಾಗಲಿ, ಸ್ಪರ್ಶದಿಂದಾಗಲಿ ಮತ್ತು ಮನೋಚಿಂತನೆಯಿಂದಾಗಲಿ ನಾನು ಉದ್ವೇಗತಾಳದೆ, ನಾನು ಇಂದ್ರೀಯಗಳಲ್ಲಿ ಆನಂದಿಸದೆ ಸಂಯಮದಿಂದ ಇರುತ್ತೇನೆ, (ಅಂತಹ ಪ್ರದರ್ಶನಗಳಲ್ಲಿ, ಸಂಗೀತಗಳಲ್ಲಿ, ಇತ್ಯಾದಿ). ಹೀಗಿದ್ದು ನಾನು ಸ್ವ-ಅಭಿರುದ್ಧಿಯ ಪಥದಿಂದ ಚದುರಿ ಹೋಗುವಂತಹ ಅಂತಹುದರಲ್ಲಿ ತೊಡಗುವುದಿಲ್ಲ.



-ನಾಲ್ಕನೇಯ ಶೀಲ-
{ಸತ್ಯಕ್ಕಾಗಿ ಗೌರವ; ಸುಳ್ಳು ಹೇಳದಿರುವುದು: ಸತ್ಯಸಂಧನಾಗಿರುವುದು}
ನಾನು ಸುಳ್ಳುನುಡಿ & ಮಿಥ್ಯ ಸಂಭಾಷಣೆಯಿಂದ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಚಾಪೂರ್ವಕವಾಗಿ ಪಾಲಿಸುತ್ತೇನೆ
[ಮತ್ತು ಅಕುಶಲತೆಯಿಂದ ಕೂಡಿರುವ ಮಾತುಕತೆಯಿಂದ ದೂರವಿದ್ದು ಸಕಾರಾತ್ಮಕವಾಗಿ ಸಂಭಾಷಣೆ ಮಾಡುತ್ತೇನೆ]
ಸ್ಮೃತಿಹೀನ ಮಾತುಗಳ & ಪರರ ಮಾತುಗಳನ್ನು ಆಲಿಸದ ಈ ಪ್ರವೃತ್ತಿಯಿಂದ ಆಗುವ ದುಃಖಗಳ ಅರಿವಿನಿಂದಾಗಿ ನಾನು ಈ ಶೀಲವನ್ನು ಪಾಲಿಸುತ್ತಾ, ಮೈತ್ರಿಯುತವಾಗಿ ಮಾತನಾಡುತ್ತಾ, ಪರರ ಮಾತುಗಳನ್ನು ಆಲಿಸುತ್ತಾ, ಪರರಿಗೆ ನನ್ನ ದ್ವನಿ ಹಾಗು ಜ್ಞಾನದಿಂದ ಆನಂದ & ಸುಖ ನೀಡಿ ಅವರ ದುಃಖವನ್ನು ಶಮನಗೋಳಿಸುತ್ತೇನೆ. ನಾನು ಸತ್ಯವನ್ನೆ ಆಡುತ್ತೇನೆ, ಸ್ಪೂತರ್ಿತುಂಬಿದ ಪದಗಳಿಂದ ಅವರ ಶ್ರದ್ಧೆಯನ್ನು ವಿಕಸಿಸುತ್ತೇನೆ, ಅವರಲ್ಲಿ ಆನಂದ & ಭರವಸೆ ಮೂಡಿಸುತ್ತೇನೆ, ಹಾಗೆಯೆ ನಾನು ಪರರಿಗೆ ಅಹಿತವನ್ನುಂಟು ಮಾಢುವಂತಹ ಸುದ್ಧಿಯನ್ನಾಗಲಿ, ಟೀಕೆಯನ್ನಾಗಲಿ,ಅಥವಾ ದೋಷಾರೋಪಣೆಯಾಗಲಿ ಮಾಡುವುದಿಲ್ಲ, ನನಗೆ ಗೊತ್ತಿಲ್ಲದಿರುವುದನ್ನು ತಿಳಿದಿದೆ ಎಂದು ಹೇಳುವುದಿಲ್ಲ. ನಾನು ಕುಟುಂಬಕ್ಕೆ, ಮಿತ್ರತ್ವಕ್ಕೆ ಅಥವಾ ಸಮಾಜಕ್ಕೆ ವಿಭಜನೆಯಾಗುವಂತಹ ಅಥವಾ ವೈಷಮ್ಯವುಂಟಾಗುವಂತಹ ಯಾವುದೇ ಪದಗಳನ್ನು ಸಹಾ ಆಡುವುದಿಲ್ಲ, ನಾನು ಪರರ ಚಿಕ್ಕ ಅಥವಾ ದೊಡ್ಡ ಘರ್ಷಣೆಗಳನ್ನು ಅಂತ್ಯಮಾಡಿ ಅವರಲಿ ್ಲಐಕ್ಯತೆ ಮೂಡಿಸಿ ಬೇಸುಗೆಯನ್ನುಂಟು ಮಾಡುತ್ತೇನೆ.


-ಐದನೇಯ ಶೀಲ-
{ದೈಹಿಕ & ಮಾನಸಿಕ ಸುಕ್ಷೇಮಕ್ಕೆ ಗೌರವ; ಯಾವುದೇ ಮಾದಕವಸ್ತುಗಳನ್ನು ತೆಗೆದುಕೊಳ್ಳದಿರುವಿಕೆ; ಸದಾ ಸ್ಮೃತಿಯಿಂದ ಇರುವಿಕೆ}
ನಾನು ಮತ್ತನ್ನುಂಟು ಮಾಡುವ ಯಾವುದೇ ರೀತಿಯ ಮಾದಕ ಪಾನೀಯ ಅಥವಾ ವಸ್ತುಗಳಿಂದ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಚಾಪೂರ್ವಕವಾಗಿ ಪಾಲಿಸುತ್ತೇನೆ
[ಹೀಗಾಗಿ ನಾನು ಇನ್ನೂ ಹೆಚ್ಚು ಸ್ವಸ್ತಿವುಳ್ಳವನಾಗಿರುತ್ತೇನೆ & ಅದರ ಫಲವಾಗಿ ಸ್ಮೃತಿಯನ್ನು ಕಳೆದುಕೊಳ್ಳದೇ ಯಾವುದೇ ಶೀಲಗಳನ್ನು ಕಳೆದುಕೊಳ್ಳುವುದಿಲ್ಲ]
ಸ್ಮೃತಿಹೀನತೆಯಿಂದ ಅಗುವ ನಾಶವನ್ನು, ದುಃಖವನ್ನು ಅರಿವಿನಲ್ಲಿಟ್ಟುಕೊಂಡು ನಾನು ಈ ಶೀಲವನ್ನು ಪಾಲಿಸುತ್ತಾ, ನನಗಾಗಿ, ನನ್ನ ಕುಟುಂಬಕ್ಕಾಗಿ, ಸಮಾಜದ ಹಿತಕ್ಕಾಗಿ, ಸ್ಮೃತಿಯಿಂದ ಕೂಡಿ ತಿನ್ನುತ್ತಾ, ಸೇವಿಸುತ್ತಾ, ಇತರ ಚಟುವಟಿಕೆಗಳಲ್ಲಿಯು ಸ್ಮೃತಿಯಿಂದ ಕೂಡಿ, ಉತ್ತಮವಾದ ಮಾನಸಿಕ & ದೈಹಿಕ ಸ್ವಾಸ್ತ್ಯವನ್ನು ವೃದ್ದಿಸುತ್ತೇನೆ ,ನಾನು ದೇಹದ & ಮನಸ್ಸಿನ ಆರೋಗ್ಯ, ಆನಂದ, ಶಾಂತಿಕಾರಕವನ್ನುಂಟು ಮಾಡುವಂತಹ ವಸ್ತುಗಳನ್ನೇ ಸ್ವೀಕರಿಸುತ್ತೇನೆ, ಮತ್ತು ನನ್ನ ಹಿತ, ನನ್ನ ಕುಟುಂಬದ ಗೌರವ ಹಾಗೂ ಹಿತ, ಮತ್ತು ಸಮಾಜದ ಹಿತಕ್ಕಾಗಿ ನಾನು ಯಾವುದೇ ರೀತಿಯ ಮಧ್ಯಪಾನ, ಮಾದಕವಸ್ತು, ಅಥವಾ ಇನ್ನಿತರ ಮತ್ತನ್ನುಂಟು ಮಾಡುವ ಯಾವುದೇ ನಕಾರಾತ್ಮಕ ವಸ್ತುಗಳನ್ನು ಸೇವಿಸುವುದಿಲ್ಲ, ಇದರಿಂದಾಗಿ ಉತ್ತಮವಾದ ಸ್ಮೃತಿ, ಯೋಗ್ಯಗಮನ, & ಸ್ಪಶ್ಟ ಗ್ರಹಿಕೆವುಂಟಾಗುತ್ತದೆ, ಈ ವಿಷಗಳಿಂದ ನನ್ನ ದೇಹ ಮತ್ತು ಮನಸ್ಸು ವಿಕೃತವಾಗಿ, ರೋಗಗ್ರಸ್ತವಾಗಿ, ನನ್ನ ಕುಟುಂಬ & ಸಮಾಜವು ಅವನತಿಗೀಡಾಗುತ್ತದೆ, ನಾನು ಯೋಗ್ಯ ಆಹಾರ & ಯೋಗ್ಯ ಯೋಚನೆಗಳಿಂದಾಗಿ ಸಮತೋಲನಗೈಯುತ್ತಾ, ನನ್ನಲ್ಲಿರುವ & ಸಮಾಜದಲ್ಲಿರುವ, ಹಿಂಸೆ, ಭಯ, ಕೋಪ,& ಗೋಂದಲಗಳನ್ನು ಇನ್ನಿಲ್ಲದಂತೆ ಪರಿವರ್ತನೆ ಮಾಡುವೆನು. ಯೋಗ್ಯವಾದ ಆಹಾರದಿಂದಲೇ ಸಕಾರಾತ್ಮಕ ಸ್ವ-ನಿಮರ್ಾಣ & ಸಮಾಜಿಕ ಪರಿವರ್ತನೆಯಾಗುತ್ತದೆ ಮತ್ತು ಮಾನಸಿಕ ಅಭಿರುದ್ಧಿಯ ಏಳಿಗೆಗೆ ಸಹಾಯವಾಗುತ್ತದೆ, ಎಂದು ನಾನು ಅರ್ಥಮಾಡಿಕೊಂಡಿದ್ದೆನೆ.

drksridhammananda ಸಮ್ಮಾದೃಷ್ಟಿಕೋನ (ಯೋಗ್ಯ ಮನೋಭಾವ)






ಅಧ್ಯಾಯ - 5

ಸಮ್ಮಾದೃಷ್ಟಿಕೋನ (ಯೋಗ್ಯ ಮನೋಭಾವ)

5.1 ಔಷಧಗಳ ದುರುಪಯೋಗದ ಅಪಾಯ ಮತ್ತು ಮದ್ಯಪಾನತ್ವ
ಮಾನವನ ಭೌತಿಕ ಮತ್ತು ನೈತಿಕ ಅವನತಿಗೆ ಮದ್ಯಪಾನವು ಪ್ರಧಾನ ಕಾರಣಗಳಲ್ಲಿ ಒಂದಾಗಿದೆ. ವರ್ತಮಾನದಲ್ಲಿ ಇನ್ನೊಂದು ಅಪಾಯಕಾರಿ ದುರುಪಯೋಗ ಚಲಾವಣೆಯಲ್ಲಿದೆ. ಅವೇ ಡ್ರಗ್ಸ್ಗಳು. ಉದಾಹರಿಸುವುದಾದರೆ: ಹೆರೊಯಿನ್, ಇದು ಮಾನವನಿಗೆ ಮತ್ತು ಸಮಾಜಕ್ಕೆ ಅತ್ಯಂತ ಗಂಭೀರವಾದ ಸಮಸ್ಯೆಗಳನ್ನು ಸೃಷ್ಟಿಸಿದೆ. ಈ ಸಮಸ್ಯೆ ಇಂದು ವಿಶ್ವಾದ್ಯಂತ ಹರಡಿದೆ. ಔಷಧಗಳ ದುರುಪಯೋಗದ ಪ್ರತಿಘಾತವು ಮದ್ಯಪಾನಕ್ಕಿಂತ ಗಂಭೀರ ಮತ್ತು ಮಾರಣಾಂತಿಕವಾಗಿದೆ. ಕಳ್ಳತನ, ದರೋಡೆ, ಲೈಂಗಿಕ ಅಪರಾಧಗಳು ಮತ್ತು ಅಪಾರ ಮೊತ್ತದ ಹಣವನ್ನು ವಂಚಿಸುವುದು ಇವೆಲ್ಲ ಡ್ರಗ್ಸ್ನ ದುರುಪಯೋಗದಿಂದ ಆಗಿದೆ.
ಡ್ರಗ್ಸ್ ಡಾನ್ಗಳು ಮುಗ್ಧ ಜನಸಂಖ್ಯೆಯ ಮರಣ ವ್ಯಾಪಾರಿಗಳಾಗುವಷ್ಟರಲ್ಲೇ ತೃಪ್ತಿ ತಾಳುತ್ತಿಲ್ಲ. ಜೊತೆಗೆ ದುರ್ಬಲ ಸಕರ್ಾರಗಳನ್ನು ತಮ್ಮ ಮುಷ್ಠಿಗೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಲಂಚ ಮತ್ತು ಸಕರ್ಾರಗಳ ಬುಡಮೇಲಿಗೂ ಕೈಹಾಕುತ್ತಾರೆ. ಬಾಂಬ್ ತಯಾರಿಕೆಯಲ್ಲೂ ಮಧ್ಯೆ ಪ್ರವೇಶಿಸಿದ್ದಾರೆ. ನಾಗರಿಕ ನೀತಿಯ ಪ್ರಕಾರ ಸಕರ್ಾರಗಳು ನಾಗರಿಕರನ್ನು ಈ ಡ್ರಗ್ಸ್ನ ದುರುಪಯೋಗದಿಂದ ರಕ್ಷಿಸಬೇಕಾಗಿದೆ. ಆದರೂ ಡ್ರಗ್ಸ್ ಡಾನ್ಗಳು ತಮ್ಮ ಪೈಶಾಚಿಕ ಯೋಜನೆಗಳಿಂದ, ಸಮಾಜ ಹಾಗು ಮಾನವನ ಘನತೆಯ ತಳಹದಿಗೆ ಬೆದರಿಕೆ ತಂದಿವೆ. ಮನಸಾಕ್ಷಿಯ ಪ್ರತಿನಿಧಿಗಳು ಮತ್ತು ಅವರ ಕುಟುಂಬಗಳು ಸದಾ ಗಂಡಾಂತರಗಳಿಗೆ ಬಲಿಯಾಗಬೇಕಿದೆ. ಏಕೆಂದರೆ ಅವರು ಡ್ರಗ್ಸ್ ಡಾನ್ಗಳ ಅನೀತಿಯುತವಾದ ದಾರಿಗಳಿಗೆ ಅಡ್ಡಿಯಾಗಲು ಧೈರ್ಯ ತಾಳಿದ್ದರಿಂದಾಗಿ ಹೀಗಾಗಿದೆ. 
ಅಂತರರಾಷ್ಟ್ರೀಯ ಸಹಕಾರವಿಲ್ಲದಿದ್ದರೆ ಈ ಕೆಟ್ಟ ಪಿಡುಗನ್ನು ಮಟ್ಟಹಾಕಲು ಸಾಧ್ಯವಾಗುವುದಿಲ್ಲ. ಹಲವಾರು ದೇಶಗಳ ಶಕ್ತಿ ಮತ್ತು ಭವಿಷ್ಯವು ನಿಜಕ್ಕೂ ಕರಾಳವಾಗಲಿದೆ. ವಿಶ್ವದಾದ್ಯಂತ ಅಸಂಖ್ಯಾ ಕೋಟಿಗಳು ಹಣ ಕೆಟ್ಟಾಚಾಳಿಗಳಿಂದ ಬಿಡುಗಡೆ ಹೊಂದಲಿಕ್ಕಾಗಿ ವಿನಿಯೋಗಿಸುತ್ತಿದ್ದರೂ, ಈ ಉನ್ಮತ್ತತೆಯ ಉತ್ಸಾಹವು ಜೀವಂತವಾಗಿಯೇ ಇದೆ. 
ಈ ಭಯಾನಕ ಚಟಗಳನ್ನು ಯಾವುದೇ ರೀತಿಯಲ್ಲಾಗಲಿ ಅಳಿಸಿಹಾಕುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಮಕ್ಕಳನ್ನು ಇದಕ್ಕೆ ಬಲಿಯಾಗದಂತೆ ತಡೆಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಮದ್ಯ ವ್ಯಸನಿಯ ಅಥವಾ ಡ್ರಗ್ ವ್ಯಸನಿಯ ಜೀವನವಂತೂ ಭೂಮಿಯ ಮೇಲಿನ ನರಕದಂತೆ. ಆತನನ್ನು ಬಹುಬೇಗನೆ ಗೋರಿಗೆ ಕರೆದೊಯ್ಯುತ್ತದೆ. ಮಹಾನ್ ಧರ್ಮಗಳಿಗೆ ಸೇರಿದ ಕೆಲವು ದೇಶಗಳು ಅಫೀಮನ್ನು ಅಪಾರವಾಗಿ ಉತ್ಪಾದಿಸಿ ವಿಶ್ವದೆಲ್ಲೆಡೆ ಹಂಚುತ್ತಿರುವುದು ಅತ್ಯಂತ ವಿಷಾಧನೀಯ ಸಂಗತಿಯಾಗಿದೆ.



5.2 ಕುಡುಕತನ
ಕುಡಿತವು ವಿಚಾರಶಕ್ತಿಯನ್ನು ಹೊರದಬ್ಬುತ್ತದೆ, 
ನೆನಪನ್ನು ಮುಳುಗಿಸುತ್ತದೆ, 
ಮೆದುಳನ್ನು ವಿಕೃತವನ್ನಾಗಿಸುತ್ತದೆ, 
ಶಕ್ತಿಯನ್ನು ಕುಂದಿಸುತ್ತದೆ, 
ರಕ್ತವನ್ನು ಕೆರಳಿಸುತ್ತದೆ, 
ವಾಸಿಯಾಗದ ಅಂತರ್ ಮತ್ತು ಬಾಹ್ಯ ಗಾಯಗಳಿಗೆ ಕಾರಣವಾಗಿದೆ, 
ದೇಹಕ್ಕೆ ಮಾಟಗಾತಿಯಂತೆ, 
ಮನಕ್ಕೆ ಪಿಶಾಚಿಯಂತೆ
ದುಡ್ಡುಚೀಲಕ್ಕೆ ಕಳ್ಳನಂತೆ
ಭಿಕ್ಷುಕರಿಗೆ ಶಾಪದಂತೆ,
ಪತ್ನಿಗೆ ಪ್ರಲಾಪ,
ಮಕ್ಕಳಿಗೆ ಶೋಕ,
ಮೃಗೀಯತೆಯ ಚಿತ್ರ,
ಮತ್ತು ಸ್ವ-ಕೊಲೆಪಾತಕ,
ಕುಡುಕನು ಪರರ ಆರೋಗ್ಯವನ್ನು ಹೀರಿಕೊಂಡು, ತನ್ನನ್ನೇ ದೋಚಿಕೊಳ್ಳುತ್ತಾನೆ.
ಮಾನವರಾದ ನಮಗೆ ಸರಿ ಮತ್ತು ತಪ್ಪಿನ ವ್ಯತ್ಯಾಸದಲ್ಲಿ ಸ್ವ-ನಿಯಂತ್ರಣವಿರಬೇಕು. ದಯವಿಟ್ಟು ಡ್ರಗ್ಸ್ನ ದುರುಪಯೋಗದಿಂದ ದೂರವಿರಿ ಮತ್ತು ಪರರಿಗೂ ದೂರವಿರಲು ಸಹಾಯ ಮಾಡಿ, ಇದರಿಂದಲೂ ಮಾನವತೆಗೆ ಶ್ರೇಷ್ಠ ಸೇವೆಯಾಗುವುದು.
ಸೋಲುಗಳು ವಿಜಯಗಳ ಸ್ತಂಭಗಳಲ್ಲದೆ ಬೇರೆಯಲ್ಲ. ಸೋಲಿನಿಂದ ಪಾಠ ಕಲಿತೇ ಯಶಸ್ಸಿನತ್ತ ಸಾಗಲು ಸಾಧ್ಯ. ಎಂದಿಗೂ ಸೋಲದವನು, ಎಂದಿಗೂ ಜಯಿಸಲು ಸಾಧ್ಯವಿಲ್ಲ. ಸೋಲಿನ ಕಹಿಯನ್ನು ಅನುಭವಿಸದೆಯೇ ಎಂದಿಗೂ ವಿಜಯದ ಸಿಹಿಯನ್ನು ಪ್ರಶಂಶಿಸಲಾಗುವುದಿಲ್ಲ. ಇದು ಕೇವಲ ಸನ್ನಿವೇಶದ ತಿರುವು ಆಗಿದೆ.
ಸೋಲು ನಮಗೆ ಯಶಸ್ವಿಗಳಾಗಲು ಸಹಾಯ ಮಾಡುವುದಷ್ಟೇ ಅಲ್ಲದೆ, ನಮಗೆ ಸದಾ ಜಾಗರೂಕರಾಗಲು, ಉತ್ಸಾಹಿಗಳಾಗಲು, ಯತ್ನಶೀಲರಾಗಲು ಮತ್ತು ಅನುಭೂತಿಯ ಸಿರಿವಂತರಾಗಲು ಸಹಾಯ ಮಾಡುವುದು.
ಎಲ್ಲ ಜನರು ಒಕ್ಕಣ್ಣರಾಗಿ ಮದ್ಯದಂಗಡಿಗೆ ಹೋಗುವರು, ಆದರೆ ಪೂರ್ಣ ಕುರುಡರಾಗಿ ಹೊರಬರುವರು.



5.3 ಪರರೊಂದಿಗೆ ಹೋಲಿಕೆ ಬೇಡ
ನೀವು ನಿಮ್ಮನ್ನು ಪರರೊಂದಿಗೆ ಹೋಲಿಸಿಕೊಳ್ಳದಿದ್ದರೆ ಅನಗತ್ಯ ಚಿಂತೆ ಮತ್ತು ಸಮಸ್ಯೆಗಳಿಂದ ಪಾರಾಗಬಲ್ಲಿರಿ. ಎಲ್ಲಿಯವರೆಗೆ ನೀವು ನಿಮ್ಮನ್ನು ಸಮನಾಗಿಯೋ, ಹಿರಿದಾಗಿಯೋ ಅಥವಾ ಕೀಳಾಗಿಯೋ ಭಾವಿಸಿಕೊಳ್ಳುವಿರೋ ಅಲ್ಲಿಯವರೆಗೆ ನೀವು ಅಸಹನೆ ಮತ್ತು ಅವಿಶ್ರಾಂತತೆ ಹೊಂದುವಿರಿ. ನೀವು ಅಂತಹ ಮನೋವೃತ್ತಿ ಹೊಂದಿಲ್ಲದಿದ್ದರೆ ಚಿಂತಿಸಬೇಕಾದ ಅಗತ್ಯವಿಲ್ಲ. ನೀವು ಪರರಿಗಿಂತ ಶ್ರೇಷ್ಠವೆಂದು ಭಾವಿಸಿದರೆ ನೀವು ಅಹಂಕಾರಿಗಳಾಗುವಿರಿ. ನೀವು ಯಾರಿಗೂ ಎರಡನೆಯವರಲ್ಲ ಎಂದು ಭಾವಿಸಿದರೆ ಪರರು ನಿಮ್ಮನ್ನು ಆಕ್ರಮಿಸಬಹುದು. ನಿಮ್ಮನ್ನು ನೀವು ಕೀಳಾಗಿ ಭಾವಿಸಿದರೆ, ನೀವು ಸ್ವ-ಶ್ರದ್ಧೆಯನ್ನೇ ಕಳೆದುಕೊಳ್ಳಬಹುದು.
ಬಹಳಷ್ಟು ಜನರಿಗೆ ತಮ್ಮ ಅಹಂಕಾರವನ್ನು ದಮಿಸುವುದು ಅತ್ಯಂತ ಕಷ್ಟಕರವಾಗಿದೆ. ಅಹಂಕಾರವನ್ನು ಕ್ಷೀಣಿಸುವುದು ಹೇಗೆಂದು ಕಲಿತುಕೊಳ್ಳುವುದು ಸಮುಚಿತವಾದುದು ಎಂದು ನಿಮ್ಮ ಅಹಂಕಾರವನ್ನು ತ್ಯಜಿಸುವುದಕ್ಕೆ ನೀವು ಸಮರ್ಥರಾಗಿರುವಿರೋ ಆಗಲೇ ನೀವು ನಿಮ್ಮ ಆಂತರ್ಯದಲ್ಲಿ ಶಾಂತಿ ಗಳಿಸುವಿರಿ. ನೀವು ಪರರೊಂದಿಗೆ ಸೌಹಾರ್ದತೆಯೊಂದಿಗೆ ಇದ್ದಾಗಲೇ ನೀವು ಶಾಂತಿ ಮತ್ತು ಸುಖವನ್ನು ಅನುಭವಿಸುವಿರಿ, ಯಾವುದು ಪ್ರಧಾನ್ಯಕರ ನಿಮ್ಮ ಅಹಂಕಾರವೋ ಅಥವಾ ಮನಶ್ಶಾಂತಿಯೋ? ಅರಿಯಲು ಯತ್ನಿಸಿ. ಈ ಸಮಾನತೆ, ಕೀಳರಿಮೆ ಮತ್ತು ಶ್ರೇಷ್ಠತೆ ಇವೆಲ್ಲಾ ಸದಾ ಬದಲಾಗುವ ಸಾಪೇಕ್ಷ ಸ್ಥಿತಿಗಳಾಗಿವೆ. ನೀವು ಬಡವರಾಗಿರಬಹುದು, ಆದರೆ ಇನ್ನೊಂದು ಸಮಯದಲ್ಲಿ ನೀವೂ ಶ್ರೀಮಂತರಾಗಬಹುದು. ಇಂದು ನೀವು ಅಜ್ಞಾನಿಯಾಗಿರಬಹುದು, ಮುಂದೆ ನೀವೂ ಜ್ಞಾನಿಗಳಾಗಬಹುದು. ಇಂದು ನೀವು ರೋಗಿ ಮತ್ತು ದುಃಖಿಗಳಾಗಿರಬಹುದು, ಆದರೆ ನಾಳೆ ನೀವು ಆರೋಗ್ಯವಂತ ರಾಗಬಹುದು. ಹಾಗಿದ್ದರೂ ಮಾನವರ ಹಲವಾರು ಸ್ಪಶರ್ಾತೀತ ಆಸ್ತಿಗಳಿವೆ ಅವೆಂದರೆ ಮಾನವ ಹಕ್ಕುಗಳು. ಮಾನವ ಘನತೆ, ಮಾನವ ಅಂತಸ್ತು ಇತ್ಯಾದಿ. ಇವುಗಳನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. 
ನೀವು ನಿಮಗೆ ಒಳ್ಳೆಯವರಾದರೆ, ನೀವು ಪರರಿಗೂ ಒಳ್ಳೆಯವರಾಗುವಿರಿ. ನೀವು ಪರರಿಗೆ ಒಳ್ಳೆಯವರಾದರೆ, ನಿಮಗೂ ನೀವು ಒಳ್ಳೆಯವರಾಗುವಿರಿ.




5.4 ತೊಂದರೆಕಾರರನ್ನು ನಿರ್ವಹಿಸುವುದು ಹೇಗೆ?
ನಿಮ್ಮ ಮೇಲೆ ಬೀಳುವ ತೊಂದರೆ ಮತ್ತು ಸಮಸ್ಯೆಗಳಿಂದಾಗಿ ನೀವು ಕಾಣಿಕೆಗಳನ್ನು ಹೊಂದಬಹುದು ಎಂದು ನೀವು ಅರ್ಥಮಾಡಿಕೊಳ್ಳಬೇಕು. ಈ ತೊಂದರೆಗಳಿಂದ ಪಾರಾಗಲು ನೀವು ಹಲವಾರು ಸಂಪನ್ಮೂಲಗಳಿಂದ ಹಾದು ಬಂದಿರುತ್ತೀರಿ. ಈ ತೊಂದರೆಗಳಿಂದ ಪಾರಾಗಲು ನಿಮ್ಮಲ್ಲಿ ಸಾಕಷ್ಟು ಆಳದ ಜ್ಞಾನ ಬೇಕಾಗುತ್ತದೆ. ಆಗ ಮಾತ್ರ ನೀವು ಉತ್ತಮವಾಗಿ ಹೊರಬರಲು ಹೊಣೆಗಾರಿಕೆ ಹೊಂದುವಿರಿ.
ಆಗ ಮಾತ್ರ ನೀವು ತೊಂದರೆಕಾರರನ್ನು ಮತ್ತು ವಿರೋಧಿಗಳನ್ನು ನಿರ್ವಹಿಸಲು ಸಮರ್ಥರಾಗುವಿರಿ. ಯಾರು ನಿಮ್ಮನ್ನು ವಿರೋಧಿಸುವರೋ ಅವರಲ್ಲೂ ಸಹಾ ಮಾನವ ಹೃದಯವಿರುತ್ತದೆ. ಆದ್ದರಿಂದಾಗಿ ಅವರನ್ನು ಹೊಂದಿಕೊಳ್ಳುವುದು ಕಷ್ಟವೇನೂ ಆಗುವುದಿಲ್ಲ. ಅದರಿಂದ ಬೇರ್ಪಡಿಸುವುದರ ಬದಲಾಗಿ ಅವರೊಂದಿಗೆ ಸ್ನೇಹದಿಂದಿರಿ. 
ಅವರ ತಪ್ಪು ಮನೋವೃತ್ತಿಯನ್ನು ವಿರೋಧಿಸುವಷ್ಟು ಬಲಿಷ್ಠರಾಗಿದ್ದರೆ, ಅವರೊಂದಿಗೆ ಬೆರೆಯುವುದನ್ನು ತಡೆಯಲು ಅರ್ಥವೇ ಇಲ್ಲ. ಅವರೊಂದಿಗೆ ನೀವು ಇದ್ದಾಗ, ಅವರ ಉನ್ನತಿಗಾಗಿ ಅವರ ಮೇಲೆ ಪ್ರಭಾವ ಬೀರಬಹುದು, ನೆನಪಿಡಿ. ನಿಮ್ಮ ಅರಿವೇ ನಿಮ್ಮನ್ನು ಶತ್ರುಗಳಿಂದ ಕಾಪಾಡುವುದು ಮತ್ತು ಅವರು ಒಳ್ಳೆಯವರಾಗಲು ಮಾರ್ಗದರ್ಶನ ನೀಡುವುದು.
ಒಬ್ಬನು ತನ್ನ ಅಜ್ಞಾನದಿಂದ ಮತ್ತು ಮಿಥ್ಯ ತಿಳುವಳಿಕೆಯಿಂದ ನಿಮ್ಮ ಮೇಲೆ ತಪ್ಪು ಎಸಗಿದರೆ ಆಗ ನೀವು ನಿಮ್ಮ ಪ್ರಜ್ಞಾ, ವಿದ್ಯಾಭ್ಯಾಸ ಮತ್ತು ಧಮ್ಮ ಜ್ಞಾನದಿಂದಾಗಿ ಆತನನ್ನು ತಿದ್ದಲು ಮಹತ್ವಪೂರ್ಣ ಅವಕಾಶ ಕಾಲವಾಗಿರುತ್ತದೆ. ಇಂತಹ ಪರೀಕ್ಷಾ ಸಮಯದಲ್ಲಿ ನೀವು ನಿಜ ಸಭ್ಯವ್ಯಕ್ತಿಯೆಂದು ವತರ್ಿಸಲು ಕಲಿಯದಿದ್ದರೆ ನಿಮ್ಮ ಧಮ್ಮಜ್ಞಾನ ಮತ್ತು ವಿದ್ಯಾಭ್ಯಾಸದಿಂದ ಉಪಯೋಗವಾದರೂ ಏನು? ಯಾವಾಗ ಪರರು ನಿಮ್ಮ ಮೇಲೆ ತಪ್ಪು ಎಸಗಲು ಬಂದಾಗ ಅದನ್ನು ನೀವು ನಿಮ್ಮ ತಾಳ್ಮೆ, ಸಹನೆ, ಕ್ಷಮೆ ಮತ್ತು ಸಹಾನುಭೂತಿಯ ಬೆಳವಣಿಗೆಗೆ ಸದಾವಕಾಶವೆಂದು ತಿಳಿಯಬೇಕು.
ಸಹನೆ ಅತ್ಯಂತ ಪ್ರಧಾನ ಸದ್ಗುಣವಾಗಿದೆ. ಅದನ್ನು ಪ್ರತಿಯೊಬ್ಬರೂ ಪಾಲಿಸಬೇಕು. ನೀವು ಅಂತಹ ಸದ್ಗುಣವನ್ನು ಸಾಧಿಸಿದಷ್ಟೂ ನಿಮ್ಮ ಘನತೆಯನ್ನು ಹೆಚ್ಚಿಸಿಕೊಂಡು ಹೋಗಲು ಸಮರ್ಥರಾಗುವಿರಿ. ದ್ವೇಷಿಸುವ ಜನರೊಂದಿಗೆ ನಿಮ್ಮ ಜ್ಞಾನ ಮತ್ತು ತತ್ವಗಳನ್ನು ಬಳಸಿ ಹೇಗೆ ಸದ್ಭಳಕೆ ಮಾಡಬೇಕೆಂದು ನೀವು ಅರಿಯಲೇಬೇಕು.
ಬೇಗನೆಯೋ ಅಥವಾ ನಿಧಾನವಾಗಿಯೋ ಅವರು ತಮ್ಮ ಮೂರ್ಖತ್ವವನ್ನು ಅರಿತು ತಮ್ಮ ದ್ವೇಷದ ಮನೋಭಾವವನ್ನು ಬದಲಿಸಿಕೊಳ್ಳುವರು. ಕೆಲವು ವೇಳೆ ಜನರು ನಿಮ್ಮ ತಾಳ್ಮೆ ಮತ್ತು ಸಹನೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವರು. ಅಂತಹ ವೇಳೆಯಲ್ಲಿ ನೀವು ಪ್ರಜ್ಞಾರಂತೆ ವತರ್ಿಸಿ ಅಂತಹುದಕ್ಕೆ ಬಲಿಪಶುವಾಗದಂತೆ ವತರ್ಿಸಬೇಕು. ದಯೆ, ಪ್ರಾಮಾಣಿಕತೆ ಮತ್ತು ಸಹನೆಯು ವಂಚಕರಿಗೆ ಮತ್ತು ಸ್ವಾಥರ್ಿಗಳಿಗೆ ತಮ್ಮ ಬೆಳೆ ಬೆಳೆಯಲು ಫಲವತ್ತಾದ ಭೂಮಿಯಾಗಿದೆ.



5.5 ಪ್ರಗತಿ ಮತ್ತು ಮಾಲಿನ್ಯ
ವೈಜ್ಞಾನಿಕವಾಗಿ ಮಾನವನಿಗೆ ಅಪಾರ ಲಾಭವಾಗಿದೆ. ಜೊತೆಗೆ ವೈಜ್ಞಾನಿಕ ಜ್ಞಾನದಿಂದ ಸಂದೇಹವಾದಿಯಾಗಿ ತನ್ನ ಸಾಂಸ್ಕೃತಿಕ ಆಸ್ತಿಯಿಂದಲೇ ಪರಕೀಯನಾಗಿದ್ದಾನೆ. ತಂತ್ರಜ್ಞಾನದಿಂದ ಆತನ ಸೃಜನಶೀಲತೆಯ ಸಾಮಥ್ರ್ಯವು ದೋಚಿಹೋಗಿದೆ. ಯಂತ್ರಗಳು ಮತ್ತು ಅವುಗಳ ಅಪಾರ ಶಕ್ತಿಗಳು ಮಾನವನಿಗೆ ಕೇವಲ ಬಟನ್ನ್ನು ಒತ್ತುವವನನ್ನಾಗಿ ಮಾಡಿದೆ. ಲಕ್ಷಾಂತರ ಜನರಿಗೆ ನಿರುದ್ಯೋಗವುಂಟುಮಾಡಿದೆ. ಅವರ ಶಾರೀರಿಕ ಮತ್ತು ಸೃಜನಶೀಲತೆಯ ಬಲಗಳು ನಷ್ಟಗೊಂಡಿವೆ. ವಿಘ್ನಗಳಿಗೆ ವಶವಾಗಿದೆ ಮತ್ತು ಹತಾಶೆಗಳಾಗಿದ್ದಾರೆ. ಫಲವಾಗಿ ಸ್ವದೇಶಿ ಜಾನಪದ ಕಲೆಗಳು ಮತ್ತು ಎಲ್ಲಾ ದೇಶಗಳ ಕುಸರಿ ಕಲೆಗಳು ನಿಮರ್ೂಲವಾಗಿವೆ. ಅವೆಲ್ಲ ಉದಾತ್ತ ಭಾವವೇಶಗಳ ವಾಸ್ತವಿಕ ವ್ಯಕ್ತತೆಗಳಾಗಿತ್ತು. ಯಾವ ಸೃಜನಶೀಲತೆಗಾಗಿ, ಸ್ವ-ವ್ಯಕ್ತತೆಗಾಗಿ ದುರ್ಬಲ ಹೋರಾಟ ವಾಗುತ್ತಿತ್ತೊ, ಯಾವುದೆಲ್ಲ ಆತನ ಹೆಮ್ಮೆಯ ಸಂಕೇತವಾಗಿತ್ತೋ ಅವೆಲ್ಲ ಈಗ ಪ್ರಾಚೀನ ವಸ್ತುಗಳ ಸಂಗ್ರಹಕಾರವಾಗಿ ಮಾರ್ಪಟ್ಟಿದೆ. 
ಹೀಗೆ ಮುಖ್ಯ ಅಂಶಗಳನ್ನು, ರೂಪರೇಖೆ ಮಾಡಿದವೆಲ್ಲಕ್ಕೂ ಮುಖ್ಯ ಕಾರಣವು ಆಧುನಿಕ ಸಮಾಜಕ್ಕಿರುವ ಬಲವೇ ಆಗಿದೆ. ಅವುಗಳ ಪರಿಣಾಮಗಳನ್ನು ಗಮನಿಸುವುದು ಉಪಯುಕ್ತವಾಗಿದೆ. ಊಗಿ & ಂಆಖ ಗಳು ಅನಿಗ್ರಹಿತವಾಗಿವೆ. ಅಮೆರಿಕಾದಲ್ಲಿ ಒಂದು ದಶಕಕ್ಕೆ 300% ಪಟ್ಟು ಇವು ಹೆಚ್ಚಾಗಿವೆ. ಮನೋರೋಗ ಚಿಕಿತ್ಸಾ ಕೇಂದ್ರಗಳೂ ಅತಿ ಹೆಚ್ಚಾಗುತ್ತಿರುವುದು ಮಾನಸಿಕ ಆರೋಗ್ಯಗಳು, ಕ್ಷಿಪ್ರವಾಗಿ ಕ್ಷೀಣಿಸಿವೆ ಎಂದು ಸೂಚಿಸುತ್ತವೆ. ಮದ್ಯಪಾನ ಮತ್ತು ಡ್ರಗ್ಸ್ನ ಸೇವನೆ ಅತಿದೊಡ್ಡ ಅನಾರೋಗ್ಯ ಸಮಸ್ಯೆಗಳಾಗಿವೆ.
ಅಪರಾಧಗಳ ಸಂಖ್ಯೆಯು ಎಂದಿಗಿಂತಲೂ ಅತಿ ಏರುತ್ತಿದೆ. ವೈವಾಹಿಕ ಬಂಧನವೂ ವಿಷಾಧನೀಯವಾಗಿ ಮುರಿಯುತ್ತಿವೆ ಮತ್ತು ವಿಚ್ಛೇದನಗಳ ಸಂಖ್ಯೆಯು ಎಚ್ಚರಿಕೆ ನೀಡುವಷ್ಟು ಹೆಚ್ಚಿದೆ. ಬದುಕಬೇಕಾದ ಸಂಸ್ಥೆಯಾದ ಕುಟುಂಬವು ಈಗ ಅಪಾಯಕ್ಕೊಳಗಾಗಿದೆ. ಹಲವು ಸಮಾಜಶಾಸ್ತ್ರಜ್ಞರ ಪ್ರಕಾರ ಕುಟುಂಬ ಸಂಸ್ಥೆಯು ಅತಿ ಹತ್ತಿರದಲ್ಲೇ ನಾಶವಾಗುವ ಸ್ಥಿತಿಯಲ್ಲಿದೆ. ಕೌಟುಂಬಿಕ ಒಡಕು ಮಗುವಿನ ಜೀವನವನ್ನು ಅತಿ ಕರುಣಾಜನಕವಾಗಿ ಮಾಡಿಬಿಡುತ್ತದೆ.
ಬ್ರಿಟನ್ನ ಆರೋಗ್ಯ ಅರ್ಥಶಾಸ್ತ್ರದ ಸುದ್ದಿಯ ಪ್ರಕಾರ ಬ್ರಿಟನ್ನಲ್ಲಿ ಶಿಶುಹತ್ಯೆಗಳು ಅಧಿಕವಾಗಿವೆ. ಇದಕ್ಕೆ ಶಿಶುಗಳು ಅಪಾರವಾಗಿ ಬಲಿಯಾಗುತ್ತಿದ್ದಾರೆ. ಕೌಟುಂಬಿಕ ಕಲಹಗಳು ಇದ್ದಾಗ ಮಕ್ಕಳನ್ನು ಸಾಯುವವರೆಗೆ ಹೊಡೆಯುವ ಪೋಷಕರು ಇದ್ದಾರೆ. ಪ್ರಾಯದ ಹುಡುಗರು ಡ್ರಗ್ಸ್ ಸೇವನೆ ಮತ್ತು ಯೌವ್ವನದ ತಪ್ಪುಗಳಲ್ಲಿ ಸಿಲುಕಿರುವುದು ಇಂದಿನ ದಿನಗಳಲ್ಲಿ ಭಯಾನಕ ಸಮಸ್ಯೆಗಳಾಗಿವೆ. ಈ ಸಾಮಾಜಿಕ ಪ್ರಕ್ರಿಯೆಯು ನೇರವಾಗಿ ಮಾನವನ ಇಂದ್ರೀಯ ಭೋಗದ ಮನೋವೃತ್ತಿಗೆ ಸಂಬಂಧಿಸಿದೆ. ಆದ್ದರಿಂದಾಗಿ ಗಂಭೀರವಾದ ಪುನರ್ಚಿಂತನೆ ಮತ್ತು ಪುನರ್ ವಿದ್ಯಾಭ್ಯಾಸ ಇಂದಿಗೆ ಅಗತ್ಯವಾಗಿ ಬೇಕಾಗಿದೆ. ಇಂದ್ರೀಯ ಭೋಗದಿಂದಾಗಿ ಮಾನವನು ಸ್ವ-ನಾಶವಾಗುವಿಕೆಯನ್ನು ಈಗ ತಡೆಗಟ್ಟಬೇಕಾಗಿದೆ. 
ಆಧುನಿಕ ಮಾನವನ ದಾಂಪತ್ಯ ಬಾಂಧವ್ಯವು ಸುಲಭವಾಗಿ ಒಡೆದು ಹೋಗು ವಂತಹುದು ಮತ್ತು ನಾಜೂಕಾಗಿರುವಂತಹದ್ದಾಗಿದೆ. ಏಕೆಂದರೆ ಈ ಸ್ನೇಹದ ಬಾಂಧವ್ಯವು ಕಾಮದಲ್ಲೇ ಕಳೆದುಹೋಗುತ್ತವೆ. ದೈಹಿಕ ಪ್ರೀತಿಯಲ್ಲೇ ಬಹಳ ಒತ್ತು ನೀಡಲ್ಪಟ್ಟಿರುತ್ತದೆ. ಆದರೆ ವ್ಯಕ್ತಿಗತ ಹೊಂದಾಣಿಕೆ ಮತ್ತು ಭಾವವೇಶಗಳು ಯಾವುದನ್ನು ನಾವು ತ್ಯಾಗ ಮತ್ತು ನಿಸ್ವಾರ್ಥ ಎನ್ನುವೆವು ಅವುಗಳನ್ನೆಲ್ಲಾ ನಿರ್ಲಕ್ಷಗೊಳಿಸಿರುತ್ತಾರೆ. ಮದುವೆಯಲ್ಲಿ ಕಾಮವು ಮೂಲಭೂತ ಅವಶ್ಯಕತೆಯಾಗಿದ್ದರೂ ಕಾಮವೇ ವೈವಾಹಿಕ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣವಲ್ಲ. ಕಾಮ ಸುಖವು ಎಂದಿಗೂ ಸಂತೃಪ್ತಿ ನೀಡುವುದಿಲ್ಲ. ಹಾಗಿರುವಾಗ ಸಫಲತೆ ಇನ್ನೆಲ್ಲಿ? ಅತೃಪ್ತಿಕರ ಕಾಮವನ್ನು ಬೌದ್ಧ ಸಾಹಿತ್ಯಗಳಲ್ಲಿ ಅಲಕ್ಷಿಸಿದ್ದಾರೆ. ಹಸಿದ ನಾಯಿಗೆ ಮಾಂಸರಹಿತ ಮೂಳೆಯು ಹೊಟ್ಟೆ ತುಂಬಿಸುವುದೇ? ಆದರೂ ಕಾಮವು ದಾಂಪತ್ಯ ಜೀವನದಲ್ಲಿ ಭಾವಾವೇಶದ ಅನುಭವವನ್ನು ನೀಡುವುದರಿಂದ ಅದು ದಂಪತಿಗಳ ಪ್ರೀತಿಯ ವ್ಯಕ್ತತೆಯಾಗಿದೆ. 
ವಿವಾಹದ ಗುರಿಯು ಕಾಮವೇ ಆಗಿದ್ದರೆ ಕೌಟುಂಬಿಕ ವ್ಯವಸ್ಥೆಯು ಉಂಟಾಗುತ್ತಿರಲಿಲ್ಲ. ಪ್ರಾಣಿಗಳಲ್ಲೂ ಸಹಾ ಕಾಮ ಪ್ರವೃತ್ತಿಯಿರುತ್ತದೆ. ಆದರೆ ಇಡೀ ಪ್ರಾಣಿ ಲೋಕದಲ್ಲಿ ಮಾನವ ಕುಟುಂಬಕ್ಕೆ ಸರಿಸಾಟಿಯೇ ಇಲ್ಲ. ಕುಟುಂಬದ ಜೀವನದ ಪ್ರಮುಖ ಕ್ರಿಯೆ ಏನೆಂದರೆ ಮಾನವನಿಗೆ ಅಹಂ ಕೇಂದ್ರೀಕೃತ ಸ್ವಭಾವದಿಂದ ಹೊರಬರುವ ನೈತಿಕತೆ ಕಲಿಕೆಯೇ ಆಗಿದೆ.
ಮಾನವನ ಜೀವನವು ತಾಯಿಯ ಗರ್ಭದಲ್ಲಿ ಆರಂಭವಾಗುತ್ತದೆ. ಅಲ್ಲಿ ಆ ಮಗುವು ಅತ್ಯಂತ ಸ್ವಾರ್ಥಪೂರ್ಣ ಪರಾವಲಂಬಿ ಜೀವಿಯಾಗಿರುತ್ತದೆ. ನಂತರ ದೇಹದ ವಿಕಾಸದಂತೆಯೇ ಭಾವಾವೇಶದ ಹಂತಗಳಲ್ಲಿ ಇರುತ್ತವೆ. ಅವೆಂದರೆ ಸ್ವ-ಪ್ರೀತಿ, (ವಾತ್ಸಲ್ಯಧಾರೆ) ಪಕ್ವ ಪೋಷಕರಾಗಿ ಅವರು ಪೂರ್ಣವಾಗಿ ತಮ್ಮ ಮಕ್ಕಳ ಸೇವೆಗಾಗಿ ತಮ್ಮನ್ನು ಪೂರ್ಣವಾಗಿ ಸಮಪರ್ಿಸಿಕೊಳ್ಳುತ್ತಾರೆ. ಅವರ ತ್ಯಾಗವು ಈ ರೀತಿ ಇರುತ್ತದೆ ಎಂದರೆ ಇಡೀ ಜೀವನವೆಲ್ಲಾ ಕಷ್ಟಪಟ್ಟು ಸಂಪಾದಿಸಿದ ಎಲ್ಲವನ್ನೂ ಅಪರ್ಿಸುತ್ತಾರೆ. ವಯಸ್ಸಿಗೆ ಬಂದ ಮಕ್ಕಳಿಗೆ ಯೋಗ್ಯ ವಧು/ವರರನ್ನು ಹುಡುಕಿ ಮದುವೆಯನ್ನು ಮಾಡುತ್ತಾರೆ. ಮಕ್ಕಳಿಗೆ ಉದ್ಯೋಗ ಸಿಗುವಂತೆಯೂ ಮಾಡುತ್ತಾರೆ. ಮಕ್ಕಳ ಉನ್ನತಿಯನ್ನು ಪ್ರತಿ ಹಂತದಲ್ಲೂ ಅವರು ಆನಂದಿಸುತ್ತಾರೆ. ವೃದ್ಧಾಪ್ಯದಲ್ಲಿ ಸಂತೃಪ್ತಿ ಹೊಂದಿ ಸಮಚಿತ್ತತೆಯಿಂದ ನೆಲೆಸುತ್ತಾರೆ. ಈ ಬಗೆಯ ಸುಭಾವವೇಶದ ಪಕ್ವ ಪೂರ್ಣತೆಯು, ಕಾಮವೇ ವಿವಾಹದ ಗುರಿ ಎಂಬ ಸಿದ್ಧಾಂತಗಳಿಗೆ ಸಿಗದು. ಅದು ಅವರಿಗೆ ಅಸಾಧ್ಯವಾಗಿದೆ.




5.6 ಆತ್ಮಹತ್ಯೆ ಮಾಡಿಕೊಳ್ಳುವಿಕೆ
ಆತ್ಮಹತ್ಯೆ ಅಥವಾ ಸ್ವ-ಹತ್ಯೆಯೆಂದರೆ ಸ್ವ-ಇಚ್ಛೆಯಿಂದ ಮತ್ತು ಸ್ವಯಂಪ್ರೇರಿತರಾಗಿ ತನ್ನ ಜೀವನ ಅಥವಾ ಪ್ರಾಣವನ್ನು ತೆಗೆದುಕೊಳ್ಳುವಿಕೆಯಾಗಿದೆ. ಆತ್ಮಹತ್ಯೆಗಳು ಎರಡು ವಿಧವಾಗಿವೆ. ಸಾಂಪ್ರದಾಯಿಕ ಮತ್ತು ವ್ಯಕ್ತಿಗತ. ಮೊದಲನೆಯದ್ದು ಸಂಪ್ರದಾಯದ ಫಲಿತಾಂಶದಿಂದಾಗಿ ಮತ್ತು ಸಾರ್ವಜನಿಕ ಅಭಿಪ್ರಾಯದ ಬಲಪ್ರಯೋಗದಿಂದಾಗುತ್ತದೆ. ಉದಾಹರಿಸುವುದಾದರೆ ಹರ-ಕಿರಿ ಇದು ಜಪಾನಿನ ಮೇಲಂಸ್ತಿನವರು ಅಪಮಾನಿತರಾದರೆ ಕತ್ತಿಯಿಂದ ಕಿಬ್ಬೊಟ್ಟೆಗೆ ಚುಚ್ಚಿಕೊಂಡು ಸ್ವ-ಹತ್ಯೆ ಮಾಡಿಕೊಳ್ಳುತ್ತಾರೆ.
ವ್ಯಕ್ತಿಗತ ಆತ್ಮಹತ್ಯೆಗಳು ಆಧುನಿಕ ಜಗತ್ತಿನಲ್ಲಿ ನಡೆಯುವಂತಹುವೇ ಆಗಿವೆ. ಸಿದ್ಧಾಂತದ ಪ್ರಕಾರ ಒಬ್ಬನು ಜೀವನದ ಒತ್ತಡಗಳ ಹೊಂದಾಣಿಕೆಯಲ್ಲಿ ಸೋತಾಗ ಆಗುವ ಪರಿಣಾಮವಾಗಿದೆ. ಅವರು ಸ್ವ-ಹತ್ಯೆಯನ್ನು ಹಲವಾರು ವಿಧದ ವೈಯಕ್ತಿಕ ಸಮಸ್ಯೆಗಳಾದ ಒಂಟಿತನ, ತಿರಸ್ಕಾರ, ದ್ವೇಷ, ಸೇಡು, ಭಯ, ಶಾರೀರಿಕ ನೋವು, ಅಪರಾಧಿ ಪ್ರಜ್ಞೆ ಇತ್ಯಾದಿಗಳಿಗೆ ಇದೇ ಪರಿಹಾರವೆಂದು ಭಾವಿಸುತ್ತಾರೆ. ಸ್ತ್ರೀಯರಿಗಿಂತ ಪುರುಷರೇ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಮತ್ತು ಇದು ಎಲ್ಲಾ ವಯಸ್ಸಿನವರ ಗುಂಪಿಗೂ ಅನ್ವಯಿಸುತ್ತದೆ. ಹಾಗೆಯೇ ಸ್ತ್ರೀಯರು ಪುರುಷರಿಗಿಂತ ಹೆಚ್ಚಾಗಿ ಆತ್ಮಹತ್ಯೆಯ ವಿಫಲಯತ್ನ ನಡೆಸುತ್ತಾರೆ. ಏಕೆಂದರೆ ಭಾವವೇಶದ ವಿಭಿನ್ನತೆಯೇ ಆಗಿರುತ್ತದೆ.
ಆತ್ಮಹತ್ಯೆ ಮಾಡಿಕೊಳ್ಳುವ ಬಹಳಷ್ಟು ಜನರು ಹತಾಶರಾಗಿರುತ್ತಾರೆ. ಅವರಲ್ಲಿ ಚಿಂತೆ ಹಾಗೂ ಆಶಾರಹಿತತೆ (ಭರವಸೆ ಇಲ್ಲದಿರುವಿಕೆ), ನಿರಾಸಕ್ತಿ, ಸುಖಹೀನತೆ ಎದ್ದುಕಾಣುತ್ತದೆ. ಜೊತೆಗೆ ಯಾರು ವೃದ್ಧರೋ, ಒಂಟಿತನವುಳ್ಳವರೋ ವಿಚ್ಛೇದಿತರೋ ಅಥವಾ ವಿಧುರರೋ, ಮದ್ಯವ್ಯಸನಿಗಳೋ, ಡ್ರಗ್ಸ್ ವ್ಯಸನಿಗಳೋ ಅವರಲ್ಲಿ ಆತ್ಮಹತ್ಯೆಯ ಗಂಡಾತರ ಹೆಚ್ಚಿರುತ್ತದೆ. ಯಾರು ಮನೆಯಿಲ್ಲದವರೋ ಅವರು ಬೇರೆಯವರಿಗಿಂತ ಬೇಗ ಇದಕ್ಕೆ ಸಿದ್ಧರಾಗಿಬಿಡುತ್ತಾರೆ. 
ಪ್ರಾಯದವರ ಆತ್ಮಹತ್ಯೆಯು ನಿಜಕ್ಕೂ ಭಯಾನಕ ಸಮಸ್ಯೆಯಾಗಿದೆ. ಇದು ಹಿರಿಯರಿಗೆ ಹೋಲಿಸಿದರೆ ಈ ದರವು ದುಪ್ಪಟ್ಟಾಗಿದೆ. ಇದು ಹಲವಾರು ಕಾರಣಗಳಿಂದ ಆಗಿದ್ದರೂ ಇಲ್ಲಿ ಯುವತಿಯರ ಸಂಖ್ಯೆ ದರವು ಕಡಿಮೆ ಇದೆ.
ಹಲವು ನಿಪುಣರ ಪ್ರಕಾರ ಪ್ರಾಯದ ಆತ್ಮಹತ್ಯೆಯು ಸಂಕೀರ್ಣತ್ವ ಮತ್ತು ಆಧುನಿಕ ಜೀವನದ ಒತ್ತಡದಿಂದ ಆಗಿದೆ. ಟಿ.ವಿ.ಯಲ್ಲಿ ಕಾಣಿಸುವ ಧಾರಾವಾಹಿಗಳು ಮತ್ತು ಸುದ್ದಿಗಳೇ ಇದನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಿದೆ. ಹಾಗೆಯೇ ಭಗ್ನ ಹೃದಯ ಮತ್ತು ನಿರುದ್ಯೋಗ ಸಮಸ್ಯೆ ಮತ್ತು ಸಾಧನೆಗಾಗಿ ಇರುವ ಒತ್ತಡವೂ ಕಾರಣಗಳಾಗಿವೆ.
ಆತ್ಮಹತ್ಯೆಗಳನ್ನು ತಡೆಯಲು ನಾವೇನು ಮಾಡಬೇಕು?
ಹಲವಾರು ಎಚ್ಚರಿಕೆಯ ಮುನ್ಸೂಚನೆಗಳನ್ನು ಗಮನಿಸಿದರೆ ಕಾಣಿಸುವುದೇವೆಂದರೆ ಸ್ನೇಹಿತರ ಜೊತೆಯಿಂದ ದೂರವಿರುವುದು, ದಿನನಿತ್ಯದ ಚಟುವಟಿಕೆಗಳು ಹಾದಿ ತಪ್ಪುವುದು, ವ್ಯಕ್ತಿಗತ ಬಾಹ್ಯಚಹರೆಯ ಅಲಕ್ಷಿಸುವಿಕೆ, ತಿನ್ನುವುದರ ಮತ್ತು ನಿದ್ರಿಸುವುದರಲ್ಲಿ ಬಾರಿ ಬದಲಾವಣೆ, ಡ್ರಗ್ಸ್ ಮತ್ತು ಮದ್ಯಪಾನದ ಮೊರೆ ಹೋಗುವಿಕೆ, ಪ್ರಾಯದವರು ತಮ್ಮ ಇಚ್ಛೆಗಳನ್ನು ಇನ್ನೂ ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ಅವರು ತಮ್ಮ ಪ್ರಿಯವಾದ ವಸ್ತುಗಳೆಲ್ಲವನ್ನೂ ಕೊಟ್ಟುಬಿಡುತ್ತಾರೆ ಮತ್ತು ಹೀಗೂ ಹೇಳುವುದುಂಟು. ನಾನು ನಿಮಗೆ ಸಮಸ್ಯೆಯಾಗಿ ಹೆಚ್ಚುಕಾಲ ಇರುವುದಿಲ್ಲ ಎಂದು. ಹಲವುಬಾರಿ ಈ ಆತ್ಮಹತ್ಯೆಯು ಭಾವನಾತ್ಮಕ ನಷ್ಟ ಅಂದರೆ ಭಗ್ನಪ್ರೇಮದಿಂದಾಗಿ ಅಥವಾ ವಿಚ್ಛೇದನದಿಂದಾಗಿಯೇ ಆಗುತ್ತದೆ.
ಆದ್ದರಿಂದಾಗಿ, ಈ ರೀತಿಯ ವ್ಯತ್ಯಾಸಗಳು ವರ್ತನೆಗಳು ಕಂಡುಬಂದರೆ ಅವನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ, ನಿಮ್ಮ ಮಕ್ಕಳೊಂದಿಗೆ ಅವರ ದುಃಖದ ಬಗ್ಗೆ ಚಚರ್ಿಸಿ. ಉದಾಹರಿಸುವುದಾದರೆ: ಈಗ ಆತನು ಏನನ್ನು ಮಾಡಲು ನಿರ್ಧರಿಸಿದ್ದಾನೆ, ಇತ್ಯಾದಿ. ಹೀಗೆ ಆತನ ವಿಷಯಗಳೆಲ್ಲವೂ ಹೊರಹಾಕಲು ತೊಡಗಿದರೆ ಆತನ ಚಿಂತೆಯು ಸ್ವಲ್ಪ ಕಡಿಮೆಯಾಗುತ್ತದೆ ಮತ್ತು ಆತನು ನಿಮ್ಮ ಸಹಾಯ ಬಯಸುತ್ತಾನೆ. ಆಗ ನೀವು ಆತನ ಸಮಸ್ಯೆಗಳನ್ನು ಪರಿಹರಿಸಿ. ಅಗತ್ಯವಾದರೆ ವೃತ್ತಿಪರರ ಸಹಾಯವನ್ನು ಪಡೆಯಬಹುದು. 
ಆಧುನಿಕ ಸಮಾಜದ ಅವಕಾಶ ನೀಡುವ ಪ್ರವೃತ್ತಿ ಅಡ್ಡದಾರಿಗಳಿಗೆ ಅತಿಯಾಗಿ ಸಹಿಸಿಕೊಂಡು ಹೋಗುವ ಈ ನಿಜಾಭಿಪ್ರಾಯಗಳು ಸಹಾ ಆತ್ಮಹತ್ಯೆಗಳ ಹೆಚ್ಚಳಕ್ಕೆ ಕಾರಣವಾಗಿವೆ. ಆತ್ಮಹತ್ಯೆಗಳ ವರ್ತನೆಗೆ ಸಮಾಜದ ಅಭಿಪ್ರಾಯವೂ ಅಲ್ಪ ನೈತಿಕತೆ ಹೊಂದಿದ್ದು, ದ್ವಂದ್ವಾತ್ಮಕ ಮನೋಭಾವ ಹೊಂದಿದೆ. ಇಲ್ಲಿ ನಿಂದನೆಗಿಂತ ಹೆಚ್ಚಾಗಿ ಅವರನ್ನೂ ಹಾಗು ಅದಕ್ಕೆ ಕಾರಣವನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಿದ್ಧರಾಗಬೇಕಾಗಿದೆ. ಆದರೆ ಆತ್ಮಹತ್ಯೆ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರವೃತ್ತಿಯು ಈಗಲೂ ಜೀವಂತವಾಗಿದೆ. ಅಪಾಯಕರ ಆತ್ಮಹತ್ಯೆಯು ಅಪಾರ ಶೋಕಗಳ ಸರಣಿಗಳನ್ನು ಸೃಷ್ಟಿಸುತ್ತದೆ. ತಾವು ಇನ್ನೂ ಪ್ರೀತಿಸಬೇಕಿತ್ತು, ಇನ್ನಷ್ಟು ಸಲಹಬೇಕಿತ್ತು. ತಾವೇ ಕಾರಣರೇ ಎಂಬ ಅಪರಾಧಿ ಮನೋವೃತ್ತಿಯು ಸೃಷ್ಟಿಯಾಗುತ್ತದೆ. ಅತೃಪ್ತ ಬಯಕೆ ಅಥವಾ ಬಯಸಿದುದು ಪಡೆಯದೆ ವಿಫಲರಾಗಿದ್ದೆ ಆತ್ಮಹತ್ಯೆಗೆ ಪ್ರಧಾನ ಕಾರಣವಾಗಿರುತ್ತದೆ. ಈ ಕ್ರೂರವಾದ ಕ್ರಿಯೆಯನ್ನು ಯಾವ ಧರ್ಮವು ಕ್ಷಮಿಸುವುದಿಲ್ಲ.
ಆತ್ಮಹತ್ಯೆಗೆ ಚಿಂತಿಸುತ್ತಿರುವ ಒಂಟಿ ಹಾಗು ದುಃಖಪರಿತಪ್ತರಿಗೆ ಟೆಲಿಫೋನ್ ಸಂಪರ್ಕವಾಗಿ ಸಾಮಾನ್ಯವಾಗಿ ಬಳಸಲಾಗುತ್ತಿದೆ. ಈ ರೀತಿಯಾಗಿ ಅವರಿಗೆ ಬುದ್ಧಿವಾದ ಮತ್ತು ಸಹಾಯ ನೀಡುತ್ತಾರೆ. ಮದ್ಯಪಾನಿಗರ ಅನಾಮಿಕ ಎಂಬಂತಹ ಇನ್ನಿತರ ಸಂಸ್ಥೆಗಳು ಸ್ವ-ಇಚ್ಛೆಯಿಂದ ಬುದ್ಧಿ ಬೋಧಕರಾಗಿ ಯಾವ ಕಾಲದಲ್ಲೂ ಸಹಾಯ ಮಾಡಲು ಸಿದ್ಧರಾಗುತ್ತಾರೆ. ಈ ಬಗೆಯ ಸಹಾಯ ಮಾಡುವ ನಿದರ್ಶನಗಳು ಆತ್ಮಹತ್ಯೆಯನ್ನು ಬಹಳಷ್ಟು ತಡೆಯುವವು.





5.7 ಪರಸ್ಪರ ಅರ್ಥಮಾಡಿಕೊಳ್ಳುವಿಕೆ
ಏನೆಲ್ಲಾ ಜರುಗಿವೆಯೋ ಅದೆಲ್ಲವನ್ನು ನೆನಪಿಸಿಕೊಳ್ಳಿ. ನೀವು ಸಮಚಿತ್ತತೆಯ ಶಾಂತ ಮನಸ್ಸನ್ನು ಸ್ಥಾಪಿಸುವುದನ್ನು ತಿಳಿದಿದ್ದರೆ, ಕಲಿತಿದ್ದರೆ, ನೀವು ಒಂದು ಚೂರು ನೋವಿಗೂ ಒಳಗಾಗುವುದಿಲ್ಲ. ನೀವು ನೋವಿಗೆ ಒಳಗಾಗುವುದು ಕೇವಲ ಮನೋಭಾವದಿಂದಲೇ. ನೀವು ನಿಮ್ಮೊಂದಿಗೆ ಮತ್ತು ಪರರೊಂದಿಗೆ ಹೊಂದಿಕೊಳ್ಳುವುದನ್ನು ಕಲಿಯಿರಿ, ನೀವು ಪರರಿಗೆ ಪ್ರೀತಿ ತೋರಿಸಿದರೆ, ಪರರು ಸಹಾ ಪ್ರೀತಿ ತೋರಿಸುವರು. ನೀವು ಪರರೊಂದಿಗೆ ದ್ವೇಷಕಾರಿದರೆ ಸಂಶಯವಿಲ್ಲದೆ ಪರರು ಸಹಾ ಅದನ್ನೇ ಹಿಂತಿರುಗಿಸುವರು. 
ಕೋಪಿಯು ವಿಷವನ್ನೇ ನಿಶ್ವಾಸಮಾಡುತ್ತಾನೆ. ಆತನು ಪರರಿಗೆ ಮಾಡುವ ಹಾನಿಗಿಂತ ಹೆಚ್ಚಾಗಿ ತನ್ನನ್ನೇ ಹೆಚ್ಚಾಗಿ ನೋಯಿಸಿಕೊಳ್ಳುತ್ತಾನೆ. ಹೇಗೆ ಹೊಗೆ ಇರುವೆಡೆ ದೃಶ್ಯ ಕಾಣಿಸುವುದಿಲ್ಲವೋ ಹಾಗೆಯೇ ಕೋಪಿಯು ವಾಸ್ತವವನ್ನು ಯಥಾಭೂತವಾಗಿ ಅರಿಯಲಾರನು. ಜ್ಞಾನಿಯು ಮಾತ್ರ ಕೋಪಗೊಳ್ಳನು, ಹಾಗೆಯೇ ನೋವುಗೊಳ್ಳನು. ನೆನಪಿಡಿ, ನೀವು ದಾರಿಬಿಡದ ಹೊರತು ಪರರು ನಿಮ್ಮನ್ನು ನೋವುಗೊಳಿಸರು. ಧಮ್ಮವನ್ನು (ಅಂದರೆ ಯೋಗ್ಯವಾದ ಜೀವನ ಪಥವನ್ನು) ನೀವು ಪಾಲಿಸಿದರೆ ಧಮ್ಮವು ನಿಮ್ಮನ್ನು ಕಾಪಾಡುವುದು. ಬುದ್ಧ ಭಗವಾನರು ಹೀಗೆ ಹೇಳಿರುವರು:
ಪರಿಶುದ್ಧನು ಮತ್ತು ನಿರಪರಾಧಿಯು ಆದ ಮುಗ್ಧ ಮಾನವನಿಗೆ ಯಾರು ಹಾನಿವುಂಟುಮಾಡುವರೋ, ಅಂತಹ ಮೂರ್ಖನಿಗೆ, ಬೀಸುವ ಗಾಳಿಗೆ ಎಸೆದ ದೂಳಿನಂತೆ, ಪಾಪವು ಹಿಂದಕ್ಕೆ ಹಾರುವುದು, ಆತನಿಗೇ ಹಾನಿಯಾಗುವುದು-ಧಮ್ಮಪದ.
ನೀವು ಪರರ ಮೇಲೆ ಕೋಪಗೊಂಡರೆ ಅದರಿಂದ ಉಂಟಾಗುವ ಪ್ರತಿಕ್ರಿಯೆಗೆ ನೀವು ಹೊಣೆಗಾರರಾಗುತ್ತೀರಿ. ಅಂತಹ ಆಕ್ರಮಣಕಾರಿ ಮನೋಭಾವವನ್ನು ತೋರಿಸಿ, ನಿಮ್ಮ ಶತ್ರುವಿನ ಬಯಕೆಯನ್ನು ನೀವೇ ಪೂರೈಸುತ್ತಿದ್ದೀರಿ. ಐಕ್ಯತೆ ಮತ್ತು ಸೌಹಾರ್ದತೆಯು ನಮ್ಮ ಜೀವನದ ಅತಿ ಮುಖ್ಯವಾದ ಅಂಶಗಳಾಗಿವೆ. ಜೇಡಗಳು ಒಗ್ಗಟ್ಟಾಗಿ ಜಾಲವನ್ನು ಹೆಣೆದರೆ ಅವು ಸಿಂಹವನ್ನು ಸಹಾ ಕಟ್ಟಿಹಾಕಬಲ್ಲವು.




5.8 ನಿಮ್ಮ ಹೊಣೆಗಾರಿಕೆ
ನಿಮ್ಮ ಮನಸ್ಸಿನಲ್ಲಿ ಸೃಷ್ಟಿಯಾದ ಆಂತರಿಕ ಶಾಂತತೆಯನ್ನು ರಕ್ಷಿಸುವುದನ್ನು ನೀವು ಕಲಿಯಬೇಕು. ಅದಕ್ಕಾಗಿ ಯಾವಾಗ ನಿಮ್ಮ ಶ್ರೇಷ್ಠತೆಯ ಭಾವವನ್ನು ಕಡಿಮೆಗೊಳಿಸಬೇಕು ಎಂಬುದನ್ನು ಕಲಿಯಬೇಕಾಗಿದೆ. ಹಾಗೆಯೇ ಯಾವಾಗ ನಿಮ್ಮ ಅಹಂಕಾರವನ್ನು ಅಲಕ್ಷಿಸಬೇಕು ಮತ್ತು ಯಾವಾಗ ನಿಮ್ಮ ಮಿಥ್ಯಾ ಅಹಂವನ್ನು ಧಮಿಸಬೇಕು, ಯಾವಾಗ ನಿಮ್ಮ ಮೊಂಡುತನವನ್ನು ತೊರೆಯಬೇಕು ಹಾಗು ಯಾವಾಗ ಸಹನೆಯನ್ನು ಅಭ್ಯಸಿಸಬೇಕು ಎಂಬುದೆಲ್ಲವನ್ನು ನೀವು ಅರಿಯಬೇಕಾಗಿದೆ. ನೀವು ಪರರಿಗೆ ನಿಮ್ಮ ಆಂತರಿಕ ಶಾಂತಿಯನ್ನು ಕದಡಲು ಸ್ವಾಗತಿಸಬೇಡಿ, ಬಿಡಬೇಡಿ, ನೀವು ಪ್ರಜ್ಞಾರಂತೆ ವತರ್ಿಸಿದಾಗ ಮಾತ್ರ ನಿಮ್ಮ ಆಂತರ್ಯದ ಶಾಂತಿಯನ್ನು ರಕ್ಷಿಸಬಲ್ಲಿರಿ.
ಪ್ರಾಜ್ಞಾವು ಅರಿಯುವುದರ ಮೂಲಕವೇ ಲಭಿಸುತ್ತದೆ. ಮಾನವನು ವಿಕಾಸ ಗೊಳ್ಳುತ್ತಿರುವ ಪ್ರಾಣಿ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ನಾವು ಮಾನವರಾಗಿ ನಿಲ್ಲಲ್ಲು ಮಿಲಿಯನ್ಗಳಷ್ಟು ವರ್ಷಗಳು ಬೇಕಾದವು. ನಿಮ್ಮ ತತ್ವಗಳ ಅನುಸಾರವಾಗಿ ದೃಢವಾಗಿ ನಿಲ್ಲಲು ಸಭ್ಯರಾಗಲು ನಿಮ್ಮ ಎಲ್ಲಾ ಪ್ರಯತ್ನವನ್ನು ಶ್ರದ್ಧೆಯ ಸಹಿತ ಬಳಸಿ. ಅದೇ ಕಾಲದಲ್ಲಿ ವಿನಮ್ರರಾಗಿ. ಏಕೆಂದರೆ ಶಾಂತಿಗಾಗಿ ಮತ್ತು ಸಹನೆವುಳ್ಳವರಾಗಿ ಏಕೆಂದರೆ ಕಲಹ ಮತ್ತು ಹಿಂಸೆಯನ್ನು ತಡೆಯುವುದಕ್ಕಾಗಿ. ಹೀಗೆ ಮಾಡಿದಾಗ ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ. ಬದಲಾಗಿ ಅಂತ್ಯದಲ್ಲಿ ನೀವೇ ಲಾಭ ಪಡೆಯುವಿರಿ.
ನೀವು ಈ ಜಗತ್ತಿಗೆ ಶಾಂತಿಯನ್ನು ತರಲು ಇಚ್ಛಿಸುವಿರಾ, ಹಾಗಾದರೆ ಮೊದಲು ನಿಮ್ಮ ದೃಷ್ಟಿಕೋನಗಳನ್ನು ಬದಲಿಸಿ ಸಮ್ಮಾದೃಷ್ಟಿಯುಳ್ಳವರಾಗಿ ಮತ್ತು ಸ್ವಾರ್ಥವನ್ನು ತೆಗೆದುಹಾಕಿ. ವಿಶ್ವಶಾಂತಿಯ ಕಾಂಡವು ಆಂತರಿಕ ಶಾಂತಿಯಿಂದಲೇ ಬರಬೇಕಾಗುತ್ತದೆ. ನಾವು ನಮ್ಮನ್ನು ನ್ಯಾಯವಲ್ಲದ ಟೀಕೆಗಳಿಂದ ರಕ್ಷಿಸಿಕೊಳ್ಳಲು ಕಲಿಯಬೇಕು ಮತ್ತು ಸಕಾರಾತ್ಮಕ ಟೀಕೆಯ ಸದ್ಭಳಕೆಯನ್ನು ಕಲಿಯಬೇಕಾಗಿದೆ. ನಾವು ಟೀಕೆಗೆ ಸದಾ ವಿಷಯಾತ್ಮಕವಾಗಿ ದಿಟ್ಟಿಸಬೇಕು. ಟೀಕೆಯು ಸುಳ್ಳಾಗಿದ್ದರೆ, ಅನ್ಯಾಯದಿಂದ ಕೂಡಿದ್ದರೆ, ಪಾಪದಿಂದ ಸ್ಥಾಪಿತವಾಗಿದ್ದರೆ, ದುಷ್ಟ ಇಚ್ಛೆಗಳಿಂದ ನೀಡಲ್ಪಟ್ಟಿದ್ದರೆ ನಾವು ಹೇಡಿತನದಿಂದ ನಮ್ಮ ಘನತೆಯನ್ನು ಎಂದಿಗೂ ಒಪ್ಪಿಸಬಾರದು, ಶರಣಾಗಬಾರದು.
ನಾವು ಜ್ಞಾನಪೂರ್ವಕವಾಗಿ, ಇಚ್ಛಾಪೂರ್ವಕವಾಗಿ ಯಾವುದೇ ತಪ್ಪನ್ನು ಮಾಡದಿದ್ದರೆ, ನಮ್ಮ ದೃಷ್ಟಿಕೋನವು ಸರಿಯಿದ್ದರೆ ಮತ್ತು ಜ್ಞಾನಿಗಳಿಂದ ಪ್ರಶಂಸಿತವಾಗಿದ್ದರೆ ಆಗ ನಾವು ಕೆಟ್ಟದ್ದರಿಂದ ಸ್ಥಾಪಿತವಾದ ಟೀಕೆಗೆ ಚಿಂತೆಪಡುವ ಅಗತ್ಯವಿಲ್ಲ. ಸಕಾರಾತ್ಮಕ ಟೀಕೆಯೇ ಆಗಲಿ, ನಕಾರಾತ್ಮಕ ಟೀಕೆಯೇ ಆಗಲಿ, ಅವನ್ನು ಅರಿತು ನಮ್ಮ ಜೀವನದಲ್ಲಿ ಹೊಂದಿಕೊಂಡು ನಡೆದರೆ ನಾವು ಯಾವುದೇ ಸಮಾಜದಲ್ಲೂ ಜೀವಿಸಬಹುದು. ನಮ್ಮ ನ್ಯೂನತೆ ಮತ್ತು ದೌಭರ್ಾಗ್ಯಗಳಿಂದಾಗಿ ನಾವು ಸದಾ ಪರರನ್ನು ದೂಷಿಸುವುದರಲ್ಲೇ ಭಾಗಿಗಳಾಗಿರುತ್ತೇವೆ. ನೀವು ಎಂದಾದರೂ ನಿಮ್ಮ ಸಮಸ್ಯೆಗಳಿಗೆ ನೀವು ಸಹಾ ಭಾರಿ ಹೊಣೆಗಾರರು ಎಂದು ಅರಿತಿರುವಿರಾ?
ನಿಮ್ಮ ದುಃಖಕ್ಕೆ ನಿಮ್ಮ ಕುಟುಂಬದ ಶಾಪವಾಗಲಿ ಅಥವಾ ನಿಮ್ಮ ಪೂರ್ವಜರ ಪಾಪವಾಗಲಿ ಕಾರಣವಲ್ಲ, ಹಾಗೆಯೇ ಇದು ದೇವರ ಕಾರ್ಯವಾಗಲಿ ಅಥವಾ ಸೈತಾನ ಕೃತ್ಯವೂ ಅಲ್ಲ. ನಿಮ್ಮ ದುಃಖ ನಿಮ್ಮಿಂದಲೇ ಸೃಷ್ಟಿಯಾಗಿರುವಂತಹದು. ಆದ್ದರಿಂದಾಗಿ ನಿಮಗೆ ನೀವೆ ಬಂಧಿಯು ಹಾಗೆಯೇ ನಿಮಗೆ ನೀವೇ ವಿಮೋಚಕರು ಸಹಾ ಆಗಿದ್ದೀರಿ. ನೀವೇ ನಿಮ್ಮ ನರಕವನ್ನು ಮತ್ತು ನಿಮ್ಮ ಸ್ವರ್ಗವನ್ನು ನಿಮರ್ಿಸುವವರೂ ಆಗಿದ್ದೀರಿ. ನಿಮ್ಮಲ್ಲೇ ಪಾಪಿಯಾಗುವ ಅಥವಾ ಸಂತನಾಗುವ ಎಲ್ಲಾ ಪ್ರಚನ್ನತೆಯು ಇದೆ. ಯಾರು ಸಹಾ ನಿಮ್ಮನ್ನು ಪಾಪಿಯನ್ನಾಗಲಿ ಅಥವಾ ಸಂತನನ್ನಾಗಲಿ ಮಾಡಲಾರರು.
ನಿಮ್ಮ ಜೀವನದ ಆಗು-ಹೋಗುಗಳಿಗೆ ನೀವೇ ಹೊಣೆಗಾರರು ಎಂದು ಒಪ್ಪಲು ನೀವು ಕಲಿಯಬೇಕು. ನಿಮ್ಮ ದೌರ್ಬಲ್ಯಗಳನ್ನು ಇತರರನ್ನು ದೂಷಿಸದೇ ಅಥವಾ ತೊಂದರೆ ನೀಡದೇ ನೀವೇ ಒಪ್ಪಿಕೊಳ್ಳಬೇಕು. ಹಳೆಯ ಹೇಳಿಕೆಯನ್ನು ನೆನಪಿಸಿಕೊಳ್ಳಿ: 
ಅನಾಗರಿಕ ಮನುಷ್ಯನು ದುಃಖಗಳಿಗೆ ಕಾರಣವಾಗಿ ಪರರನ್ನು ದೂಷಿಸುತ್ತಾನೆ; ಅರೆನಾಗರಿಕ ಮನುಷ್ಯನು ದುಃಖಗಳಿಗೆ ಕಾರಣವಾಗಿ ಕೇವಲ ತನ್ನನ್ನೇ ನಿಂದಿಸಿಕೊಳ್ಳುತ್ತಾನೆ ಮತ್ತು ಪೂರ್ಣ ಸುಸಂಸ್ಕೃತ ಮಾನವ ಯಾರಿಗೂ ನಿಂದಿಸನು.
ಯಾವಾಗಲೇ ಆಗಲಿ, ಸಮಸ್ಯೆಗಳು ಉಂಟಾದಾಗ, ನಾವು ಪರರನ್ನು ನಿಂದಿಸುವ ಮೊದಲು, ತಪ್ಪು ಎಲ್ಲಿ ಅಡಗಿದೆ ಎಂದು ಹುಡುಕಬೇಕು. ಪ್ರತಿಯೊಬ್ಬನೂ ತನಗೆ ತಾನೇ ತಿದ್ದಿಕೊಳ್ಳಲು ಪ್ರಯತ್ನಿಸಿದಾಗ ಈ ಜಗತ್ತಿನಲ್ಲಿ ಸಮಸ್ಯೆಯಾಗಲಿ ಅಥವಾ ಸಂಘರ್ಷವಾಗಲಿ ಇರಲಾರದು. ಆದರೆ ಜನರು ಪಕ್ಷಪಾತಕ್ಕೆ ಅತೀತರಾಗಿ ತಮ್ಮ ಅರಿವನ್ನು ವೃದ್ಧಿಸಲು ಪ್ರಯತ್ನವನ್ನೇ ಮಾಡುತ್ತಿಲ್ಲ. ಅವರು ಬಲಿಪಶುಗಳನ್ನು ಹುಡುಕಲು ಆಯ್ಕೆಮಾಡುತ್ತಾರೆ. ಅವರು ತೊಂದರೆಗಳ ಮೂಲವನ್ನು ಹುಡುಕುವ ಬದಲು ತಮ್ಮಿಂದ ಹೊರಗೆ ಕಾರಣ ಹುಡುಕುತ್ತಿದ್ದಾರೆ. ಏಕೆಂದರೆ ಅವರು ತಮ್ಮ ದೌರ್ಬಲ್ಯಗಳನ್ನು ಒಪ್ಪಲು ಮನಸ್ಸಿಲ್ಲದವ ರಾಗಿದ್ದಾರೆ. 
ಮಾನವನ ಮನಸ್ಸು ಎಷ್ಟೊಂದು ಸ್ವ-ಮೋಸ ಮಾಡಿಕೊಳ್ಳುವುದೆಂದರೆ ಆತನು ತನ್ನ ಕಾರ್ಯಗಳನ್ನು ಸಮಥರ್ಿಸಿಕೊಳ್ಳಲು ಅಪಾರ ನೆಪಗಳನ್ನು ಹುಡುಕುತ್ತಾನೆ. ಹೀಗೆ ಮಾಡುತ್ತಾ ತಾನು ನಿಂದಾತೀತ ಎಂಬ ಭ್ರಮೆಯನ್ನು ಸೃಷ್ಟಿಸುತ್ತಾನೆ. ಇದರ ಬಗ್ಗೆ ಬುದ್ಧ ಭಗವಾನರು ಹೀಗೆ ಹೇಳುತ್ತಾರೆ: ಪರರ ತಪ್ಪುಗಳು ಸುಲಭವಾಗಿ ಕಾಣುವುದು; ಆದರೆ ತನ್ನ ತಪ್ಪುಗಳನ್ನು ಕಾಣುವುದು ನಿಜಕ್ಕೂ ಕಷ್ಟಕರವಾಗಿದೆ - ಧಮ್ಮಪದ.
ಕೆಲವರು ತಮ್ಮ ದೌರ್ಬಲ್ಯಗಳನ್ನು ಮುಚ್ಚಿಹಾಕಲು ಅಡಗಿಸಲು ತಾವು ತಪ್ಪೇ ಮಾಡಿಲ್ಲ ಎಂದು ನಿರಾಕರಿಸುತ್ತಲೇ ಹೋಗುತ್ತಾರೆ. ಅದೇರೀತಿಯ ಆಕ್ರಮಣಕಾರಿ ಮನೋಭಾವವನ್ನು ಹೊಂದಿಸಿಕೊಂಡಿರುತ್ತಾರೆ. ಅವರು ಈ ರೀತಿ ಮಾಡುವುದರಿಂದ ದೋಷಿಯಾಗುವ ಲಜ್ಜೆಗೇಡಿ ಸನ್ನಿವೇಶವನ್ನು ತಡೆಯಲು, ತಾವು ಆರೋಪದಿಂದ ಪಾರಾಗಲು ಹಾಗೆ ಮಾಡುತ್ತಾರೆ. ಆದರೆ ಅಂತಹ ಮನೋವೃತ್ತಿಯಿಂದಾಗಿ ಅವರು ಇನ್ನಷ್ಟು ಸಮಸ್ಯೆಗಳನ್ನು ತಮಗಾಗಿ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಅನಾರೋಗ್ಯಕರ ಪರಿಸರವನ್ನು ಉಂಟುಮಾಡುತ್ತಿದ್ದಾರೆ.
ನೀವು ತಪ್ಪು ಮಾಡಿರುವಾಗ, ನೀವು ಒಪ್ಪಿಕೊಳ್ಳಿ. ಅದಕ್ಕೆ ಬದಲು ಪರರನ್ನು ನಿಂದಿಸುವ ಅವರನ್ನೇ ಕಾರಣಕರ್ತರನ್ನಾಗಿಸುವ ಅನಾಗರಿಕ ಹಾದಿಗಳನ್ನು ತುಳಿಯಬೇಡಿ. ಇದರ ಬಗ್ಗೆ ಬುದ್ಧ ಭಗವಾನರು ಹೀಗೆ ಹೇಳಿದ್ದಾರೆ.
ತನ್ನನ್ನು ಮೂರ್ಖನೆಂದು ಒಪ್ಪದವನೇ ಮೂರ್ಖನು. ಆತನೇ ನಿಜ ಮೂರ್ಖನು ಮತ್ತು ತನ್ನ ಮೂರ್ಖತ್ವವನ್ನು ಒಪ್ಪಿದವನು ಅಷ್ಟರಮಟ್ಟಿಗೆ ಜ್ಞಾನಿಯೇ ಸರಿ -ಧಮ್ಮಪದ.
ನಿಮಗೆ ಬರುವ ದುಃಖಗಳಿಗೆ ನೀವೇ ಕಾರಣಕರ್ತರು. ಯಾವಾಗ ನೀವು ಸಣ್ಣಪುಟ್ಟ ಪ್ರಸಂಗಗಳೆಲ್ಲವನ್ನೂ ನಿಮ್ಮ ಮನಸ್ಸಿಗೆ ಘಾಸಿಯಾಗಲು ಸ್ವಾಗತಿಸುವಿರೋ ಅದೇ ನಿಮಗೆ ದುಃಖವನ್ನು ತರುತ್ತದೆ. ಜಗತ್ತಿನಿಂದ ಏನೂ ತಪ್ಪಾಗಿಲ್ಲ, ಬದಲಾಗಿ ನಮ್ಮ ಜೀವನದ ರೀತಿಗಳಲ್ಲಿ ತಪ್ಪಾಗಿವೆ ಎಂದು ನಾವು ದುಃಖಿಸುವಾಗ ಸ್ಪಷ್ಟವಾಗಿ ಅರಿತುಕೊಳ್ಳಬೇಕಾಗಿದೆ.






5.9 ಏನನ್ನೂ ನಿರೀಕ್ಷಿಸಬೇಡಿ ಮತ್ತು ಯಾವುದೂ ನಿಮಗೆ ನಿರಾಶೆಯ ದುಃಖ ತರಲಾರದು
ನಿಮ್ಮ ಘನತೆಯ ಬಗ್ಗೆ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಆಗ ಮಾತ್ರ ನಿರಾಶೆಗಳನ್ನು ನೀವು ತಡೆಯಬಹುದು. ಯಾವುದೇ ನಿರೀಕ್ಷೆಗಳಿಲ್ಲದಿದ್ದರೆ ಆಗ ಯಾವುದೂ ಸಹಾ ನಿಮ್ಮನ್ನು ನಿರಾಶೆಗೊಳಿಸಲಾರದು ಮತ್ತು ನಿಮ್ಮಿಂದ ಯಾವುದೂ ಕಿತ್ತುಕೊಳ್ಳಲಾಗದು. ಪರರು ದುಃಖದಿಂದ ಪಾರಾಗಲು ನೀವು ಏನಾದರೂ ಮಾಡುತ್ತೀರಿ. ಆ ಮಹತ್ಕಾರ್ಯಕ್ಕಾಗಿ ನೀವು ಕೀತರ್ಿ ಅಥವಾ ಕೊಡುಗೆಯನ್ನು ನಿರೀಕ್ಷಿಸದಿದ್ದರೆ ನಿಮಗೆ ಯಾವುದೇ ಆಶಾಭಂಗವಾಗುವುದಿಲ್ಲ. ಆಗ ನೀವು ಸಂತೃಪ್ತ ವ್ಯಕ್ತಿಯಾಗುತ್ತೀರಿ! ಪರರಿಗೆ ನೀವು ಒಳಿತನ್ನು ಮಾಡುವಾಗ, ನಿಮ್ಮ ಮನಸ್ಸಿನಲ್ಲಿ ಉಂಟಾಗುವ ಆನಂದವೇ ನಿಮಗೆ ಸಿಕ್ಕ ದೊಡ್ಡ ಬಹುಮಾನವಲ್ಲವೇ?
ಆ ಆನಂದವು ನಿಮ್ಮ ಜೀವನದಲ್ಲಿ ಅಪಾರವಾದ ಸಂತೃಪ್ತಿಯನ್ನು ನೀಡುತ್ತದೆ. ನೀವು ಬಹುಮಾನವನ್ನು ನಿರೀಕ್ಷಿಸಿದರೆ ನೀವು ಆ ಶ್ರೇಷ್ಠ ಆನಂದವನ್ನು ಕಳೆದುಕೊಳ್ಳುವುದಷ್ಟೇ ಅಲ್ಲದೆ ಆಶಾಭಂಗದ ಕಹಿಯನ್ನು ಅನುಭವಿಸುವಿರಿ. ನಿಮ್ಮನ್ನು ಹಾನಿ ಮಾಡುವ ಉದ್ದೇಶವಿರುವವನಿಂದ ನೀವು ರಕ್ಷಣೆ ಪಡೆಯಬೇಕಿದ್ದರೆ ಏನನ್ನೂ ಬಯಸದಿರುವಿಕೆಯೇ ನೀವು ಹೊಂದಬೇಕಾದ ಅಸ್ತ್ರವಾಗಿದೆ. ಒಂದು ಹೇಳಿಕೆಯಿದೆ, ಅದೆಂದರೆ ಯಾವ ವ್ಯಕ್ತಿ ಏನನ್ನೂ ಬಯಸುವುದಿಲ್ಲವೋ ಅಂತಹವನಿಂದ ಎಚ್ಚರದಿಂದಿರಿ.
ನೀವು ಉತ್ತಮ ವ್ಯಕ್ತಿಯೇ ಆಗಿರಬಹುದು. ಆದ್ದರಿಂದ ನೀವು ಪರಿರಿಗೆ ಯಾವುದೇ ಹಾನಿಯನ್ನು ಮಾಡದೆ ಇರಬಹುದು. ಆದರು ಸಹಾ ನೀವು ನಿಂದೆಯನ್ನು ಪಡೆಯುವಿರಿ. ಆಗ ನೀವು ಹೀಗೂ ಪ್ರಶ್ನಿಸಬಹುದು, ಒಳ್ಳೆಯದನ್ನು ಮಾಡಿದರೆ ಒಳಿತೇ ಆಗುವುದು ಮತ್ತು ಕೆಟ್ಟದ್ದನ್ನು ಮಾಡಿದರೆ ಕೆಟ್ಟದೇ ಆಗುವುದಿದ್ದರೆ, ಪೂರ್ಣ ಮುಗ್ಧ ನಿರಾಪರಾಧಿಯಾದ ನಾನು ಏತಕ್ಕಾಗಿ ದುಃಖಿಸಬೇಕು? ನನಗೆ ಏಕೆ ಇಷ್ಟೆಲ್ಲಾ ಕಷ್ಟಗಳಿವೆ? ಇಷ್ಟೆಲ್ಲಾ ಸಂಕಷ್ಟಗಳಿಂದ ತೊಂದರೆಗಳಿಂದ ನಾನೇಕೆ ಸಿಕ್ಕಿಕೊಂಡಿದ್ದೇನೆ? ನಾನು ಒಳ್ಳೆಯದನ್ನು ಮಾಡಿಯೂ ಸಹಾ ನಿಂದನೆಗೆ ಏಕೆ ಗುರಿಯಾಗುತ್ತಿದ್ದೇನೆ? ಇದಕ್ಕಿರುವ ಸರಳ ಉತ್ತರವೆಂದರೆ ಯಾವಾಗ ನೀವು ಕೆಲವು ಒಳ್ಳೆಯದನ್ನು ಮಾಡಲು ಹೋಗುತ್ತಿರುವಿರೋ ಆಗ ನಿಮಗೆ ತಿಳಿಯದೆ ನೀವು ಕೆಟ್ಟ ಬಲಗಳೊಂದಿಗೆ (ವ್ಯಕ್ತಿ) ವಿರುದ್ಧವಾಗಿ ಹೋಗುತ್ತಿರುವಿರಿ.
ಆ ಕೆಟ್ಟ ಬಲಗಳು ಸ್ವಾಭಾವಿಕವಾಗಿ ಒಳ್ಳೆಯ ಕಾರ್ಯಗಳಿಗೆ ತಡೆಯೊಡ್ಡುತ್ತವೆ. ಅದಿಲ್ಲದಿದ್ದರೆ ನಿಮ್ಮ ಹಿಂದಿನ ಜನ್ಮದ ಪಾಪಕೃತ್ಯದ ಫಲವು ಈ ಜನ್ಮದಲ್ಲಿ ಫಲ ನೀಡುತ್ತಿದೆ. ಅತ್ಯಂತ ಪ್ರಜ್ಞಾಯುತವಾಗಿ ನೀವು ಸುಕರ್ಮಗಳನ್ನು ಮುಂದುವರೆಸಿದಾಗ ನೀವು ಅಂತಹ ತೊಂದರೆಗಳಿಂದ ಪಾರಾಗಬಹುದು. ಏಕೆಂದರೆ ನೀವೇ ಪ್ರಾರಂಭಿಕವಾಗಿ ನಿರಾಶೆಯನ್ನು ಸೃಷ್ಟಿಸಿದ್ದರಿಂದಾಗಿ ನೀವೇ ಈಗ ನಿಜ ಸನ್ನಿವೇಶಗಳನ್ನು ಅರ್ಥ ಮಾಡಿಕೊಂಡು ಇದರಿಂದ ಪಾರಾಗಬೇಕಾಗಿದೆ. 
ಬಹಳಷ್ಟು ಪ್ರಾಪಂಚಿಕ ಸ್ಥಿತಿಗತಿಗಳು ನಮ್ಮ ನಿಯಂತ್ರಣದ ಎಲ್ಲೆಯನ್ನು ಮೀರಿವೆ. ಅನಿರೀಕ್ಷಿತ ಬದಲಾವಣೆಗಳು, ವಿವಿಧ ಪ್ರಭಾವಗಳು ಮತ್ತು ಅನಿಶ್ಚಿತತೆಗಳು ನಮಗೆ ನಿರಾಶೆಯನ್ನುಂಟು ಮಾಡುತ್ತವೆ. ಆದ್ದರಿಂದಲೇ ಅಂತಹ ಬದಲಾವಣೆಗಳ ಸನ್ನಿವೇಶಗಳಲ್ಲಿ ಒಳ್ಳೆಯದನ್ನು ಮಾಡುವುದು ಕಷ್ಟಕರವಾಗುತ್ತದೆ. ಬುದ್ಧರ ಈ ಬುದ್ಧಿವಾದವನ್ನು ಜನರು ಉತ್ತಮವಾಗಿ ಯೋಚಿಸಿದರೆ, ಪ್ರತಿಯೊಬ್ಬರೂ ತಮ್ಮ ಪರಸ್ಪರ ರಕ್ಷಣೆಗಾಗಿ ಏನಾದರೂ ಕಾಣಿಕೆಯನ್ನು ನೀಡುತ್ತಿದ್ದರು. ಬಡವನಾಗಿಯು, ಸಂತೃಪ್ತನಾಗಿದ್ದರೆ, ಸುಖಿಯಾಗಿದ್ದರೆ ಅಂತಹವನು ಶ್ರೀಮಂತನಾಗಿದ್ದರೂ ಚಿಂತಿತ ಲೋಭಗ್ರಸ್ತನಾಗಿದ್ದವನಿಗಿಂತ ಉತ್ತಮ ಸ್ಥಿತಿಯಲ್ಲಿರುತ್ತಾನೆ, ಶ್ರೇಷ್ಠನಾಗಿರುತ್ತಾನೆ.
ಹಲವು ಜನರು ಈ ರೀತಿ ಗೊಣಗುತ್ತಾರೆ, ಅದು ಏನೆಂದರೆ ನಾವು ಬಹಳಷ್ಟು ಒಳ್ಳೆಯದನ್ನು ಅವರಿಗಾಗಿ ಮಾಡಿದೆವು. ಆದರೆ ಅವರು ಧನ್ಯವಾದ ಎಂದು ಸಹಾ ಹೇಳಲಿಲ್ಲ. ನಾವು ಪರರಿಗೆ ಸಹಾಯ ಮಾಡುವಾಗ ಸಿಗುವ ಆನಂದವೇ ಶ್ರೇಷ್ಠವಾಗಿರುವಾಗ ಈ ಕೃತಜ್ಞತೆಗೆ ಏತಕ್ಕಾಗಿ ಪ್ರಾಧಾನ್ಯತೆ?
ಬುದ್ಧ ಭಗವಾನರು ಕೃತಜ್ಞತೆಯನ್ನು ಶ್ರೇಷ್ಠ ಸದ್ಗುಣಗಳಲ್ಲಿ ಒಂದೆಂದು ಭಾವಿಸಿದ್ದರು. ಆದರೂ ಸಹಾ ಈ ಸದ್ಗುಣವು ಈ ಜಗತ್ತಿನಲ್ಲಿ ಅತಿವಿರಳ. ನೀವು ಪರರಿಗೆ ಮಾಡಿದ ಒಳ್ಳೆಯತನಕ್ಕಾಗಿ ಜನರನ್ನು ಸದಾ ನಿಮಗೆ ಕೃತಜ್ಞರಾಗಿರಬೇಕೆಂದು ನೀವು ನಿರೀಕ್ಷಿಸಲಾರಿರಿ. ಹಿಂದಿನ ಉಪಕಾರಗಳನ್ನು ನೆನೆಯುವಾಗ ಜನರು ಮರೆತು ಹೋಗುವುದರಲ್ಲಿ ಭಾಗಿಯಾಗಿರುತ್ತಾರೆ. ಜನರು ಕೃತಜ್ಞತೆಯನ್ನು ತೋರಿಸುವುದರಲ್ಲಿ ಸೋತಾಗ, ಆಗ ನೀವು ಅದನ್ನು ಶಾಂತವಾಗಿ ಸ್ವೀಕರಿಸಬೇಕು. ಆಗ ಮಾತ್ರ ನೀವು ನಿರಾಶೆಯನ್ನು ತಡೆಗಟ್ಟಬಹುದು. ನೀವು ಮಾಡಿದ ಉಪಕಾರ ಮತ್ತು ದಯೆಗೆ ಜನರು ಕೃತಜ್ಞತೆ ತೋರಿದರೂ ಅಥವಾ ಇಲ್ಲದಿದ್ದರೂ ನೀವು ಮಾತ್ರ ಸುಖಿಯಾಗಿ ಇರಬಹುದು. ನೀವು ನಿಮ್ಮ ಉದಾತ್ತವಾದ ಕರ್ತವ್ಯವನ್ನು ಮಾನವನಾಗಿ ಮಾಡಿದ್ದೀರಿ, ಪರರಿಗೆ ಹಿತವನ್ನೇ ಮಾಡಿರುವಿರಿ ಎಂದು ಯೋಚಿಸಿ, ನೀವು ಸಂತೃಪ್ತಿ ತಾಳಬಹುದು. 





5.10 ಕ್ಷಮಿಸಿ ಮತ್ತು ಮರೆತುಬಿಡಿ
ತೊಂದರೆಕಾರರೊಂದಿಗೆ ಸೇಡು ತೀರಿಸುವಿಕೆಯು ಇನ್ನಷ್ಟು ಸಮಸ್ಯೆಗಳನ್ನು ಮತ್ತು ತೊಂದರೆಗಳನ್ನು ಸೃಷ್ಟಿಸುತ್ತದೆ. ನಕಾರಾತ್ಮಕ ವೇದನೆಗಳು ಮತ್ತು ದ್ವೇಷಯುಕ್ತ ಕ್ರಿಯೆಗಳು ನಿಮಗೂ ಮತ್ತು ತೊಂದರೆಕಾರರಿಗೂ ಹಾನಿ ಮತ್ತು ದುಃಖವನ್ನು ತರುವುದು ಎಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿರಿ. ಸೇಡಿನ ಕ್ರಿಯೆಯಿಂದ ನಿಮ್ಮ ಮನಸ್ಸಿನಲ್ಲಿ ಅಪಾರವಾದ ದ್ವೇಷವು ನೆಲೆಸುವುದು. ಈ ದ್ವೇಷವು ವಿಷದಂತೆ, ವಿಷವು ಪ್ರಾರಂಭದಲ್ಲಿ ನಿಮ್ಮಲ್ಲಿದ್ದಾಗ ಪರರಿಗೆ ಏನಾದರೂ ಮಾಡುವ ಮುನ್ನ ನಿಮಗೆಯೇ ಮೊದಲು ಹಾನಿ ಎಸಗುತ್ತದೆ. ಪರರತ್ತ ಉರಿಯುವ ಕಬ್ಬಿಣ ಎಸೆಯುವ ಮುನ್ನ ನಿಮ್ಮ ಕೈಯನ್ನು ಸುಡುವುದು, ನಿಮ್ಮ ಈ ಕ್ರಿಯೆಯಿಂದ ನಿಮಗೂ ಮತ್ತು ನಿಮ್ಮ ವಿರೋಧಿಗೂ ಅಂತಹ ಮೂಲಭೂತ ವ್ಯತ್ಯಾಸವೇನು ಕಾಣಿಸುವುದಿಲ್ಲ. 
ಪರರಿಗೆ ದ್ವೇಷಿಸುತ್ತಾ, ನೀವು ಅವರಿಗೆ ನಿಮ್ಮನ್ನು ಆಳುವ ಅವಕಾಶ ಮಾಡುತ್ತಿರುವಿರಿ, ಇದರಿಂದ ನಿಮ್ಮ ಸಮಸ್ಯೆಯನ್ನು ನೀವು ಬಗೆಹರಿಸಲಾರಿರಿ. ನೀವು ಒಬ್ಬನ ಮೇಲೆ ಕೋಪಗೊಂಡಾಗ ಆತನು ಪ್ರತಿಯಾಗಿ ಮುಗುಳ್ನಗೆ ಬೀರಿದಾಗ, ಆಗ ನೀವು ಸೋತಂತೆ ದುಃಖ ಅನುಭವಿಸುವಿರಿ. ಏಕೆಂದರೆ ನಿಮ್ಮ ಇಚ್ಛೆಯಂತೆ ಆತನು ಸಹಕರಿಸಲಿಲ್ಲ. ಇಲ್ಲಿ ಆತನೇ ವಿಜಯಶಾಲಿಯಾದನು. ಬುದ್ಧ ಭಗವಾನರು ನಮಗೆ ತೊಂದರೆಗಳನ್ನು ಎದುರಿಸುವಾಗ ಹೇಗೆ ಸುಖವಾಗಿರಬೇಕು ಎಂದು ಹೀಗೆ ಬೋಧಿಸಿದ್ದಾರೆ. ಓಹ್ ದ್ವೇಷಗಳ ನಡುವೆ ದ್ವೇಷವಿಲ್ಲದೆ ಸುಖವಾಗಿರೋಣ, ದ್ವೇಷಿಗಳ ಮಧ್ಯೆ ದ್ವೇಷವಿಲ್ಲದೆ ಜೀವಿಸೋಣ - ಧಮ್ಮಪದ.
ನಾವು ದ್ವೇಷಾಗ್ನಿಗೆ ಇನ್ನಷ್ಟು ಗಾಳಿಯನ್ನು ಬೀಸದೇ ಅದನ್ನು ಆರಿಸಿ ಸುಖವಾಗಿ ಜೀವಿಸಬಹುದು ಬಹುಶಃ ನೀವು ನಿಮ್ಮ ಶತ್ರುಗಳ ಮೇಲೆ ದಯೆರಹಿತ ಪ್ರೀತಿಯನ್ನು ವಿಸ್ತರಿಸಲು ಸಮರ್ಥರಿಲ್ಲದಿರಬಹುದು. ಆದರೆ ನಿಮ್ಮ ಸುಖ ಮತ್ತು ಆರೋಗ್ಯಕ್ಕಾಗಿ ಮತ್ತು ಎಲ್ಲರ ಕಲ್ಯಾಣಕ್ಕಾಗಿಯು ನೀವು ಹೇಗೆ ಕ್ಷಮಿಸಬೇಕು ಮತ್ತು ಮರೆಯಬೇಕು ಎಂಬುದನ್ನು ಕಲಿಯಲೇಬೇಕಾಗಿದೆ. 
ನೀವು ತೊಂದರೆಕಾರರನ್ನು ದ್ವೇಷಿಸದೇ ಅಥವಾ ಹಿಂಸಿಸದೇ ಸಭ್ಯ ಮಾನವರಾಗ ಬೇಕಾಗಿದೆ. ಈ ರೀತಿಯಲ್ಲಿ ವತರ್ಿಸಬೇಕಾದರೆ ಆ ಬೇರೆ ವ್ಯಕ್ತಿಯು ಸಹಾ ಕೋಪದಿಂದ, ಅಸೂಯೆಯಿಂದ ಮತ್ತು ಅಜ್ಞಾನದಿಂದ ಹಾದಿ ತಪ್ಪಿರುವನು ಎಂದು ನೀವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಆತನು ಸಹಾ ಬೇರೆ ಮಾನವರಂತೆ ಭಿನ್ನವಾಗಿಲ್ಲ. ನಾವು ಅಂತಹುದೇ ಭಾವಾವೇಶಕ್ಕೆ ಹಿಂದೊಮ್ಮೆ ಬಲಿಯಾಗಿ ದಾರಿ ತಪ್ಪಿದ್ದೆವು ಎಂದೂ ಅರಿಯಬೇಕು.
ಬುದ್ಧ ಭಗವಾನರು ಹೀಗೆ ಹೇಳುವರು: ಪಾಪಿಗಳು ತಮ್ಮ ಸ್ವಭಾವದಿಂದ ಹಾಗಾಗಿಲ್ಲ. ಅವರು ತಮ್ಮ ಅಜ್ಞಾನದಿಂದಾಗಿ ಹಾಗೆ ಆಗಿದ್ದಾರೆ. ಆದ್ದರಿಂದಾಗಿ ಅವರಿಗೆ ಮಾರ್ಗದರ್ಶನದ ಅಗತ್ಯವಿದೆ.
ಅವರಿಗೆ ನಾವು ಶಪಿಸಬಾರದು. ಅವರನ್ನು ನಿತ್ಯ ನರಕದಂತಹ ದುಃಖಕ್ಕೆ ಬೀಳಲಿ ಎನ್ನುವುದು ನ್ಯಾಯಬದ್ಧವಲ್ಲ, ಅವರನ್ನು ತಿದ್ದುವುದು ತೀರಾ ನಿಧಾನವಾಗದಿರಲಿ, ನಾವು ಅವರಿಗೆ ಅವರು ತಪ್ಪಾದ ಹಾದಿಯಲ್ಲಿರುವರು ಎಂದು ಹೇಳಿ ಅವರಿಗೆ ಮನದಟ್ಟಾಗುವಂತೆ ಸತ್ಯದ ವಿಶ್ಲೇಷಣೆ ಮಾಡಿಸೋಣ. ಈ ರೀತಿಯ ತಿಳುವಳಿಕೆಯಿಂದ ನೀವು ಪಾಪಿಯನ್ನು ರೋಗಿಯಂತೆ ಆರೈಕೆ ಮಾಡಬೇಕು, ಇಲ್ಲಿ ರೋಗಿಗೆ ಮಾನಸಿಕ ಕಶ್ಮಲಗಳ ಮತ್ತು ದುಃಖದ ರೋಗವಿದೆ. ಆತನಿಗೆ ಆರೈಕೆಯ ಅಗತ್ಯವಿದೆ. ಆತನ ರೋಗವು ಗುಣಮುಖವಾದ ಮೇಲೆ ಆತನು ಮುಂದೆ ರೋಗಿಯಾಗಿಯೇ ಇರುವುದಿಲ್ಲ. ಪ್ರತಿಯೊಬ್ಬರು ಸುಖವಾಗಿ ಮತ್ತು ಕ್ಷೇಮವಾಗಿ ಇರುವರು. ಅಜ್ಞಾನಿಗೆ ಜ್ಞಾನಿಗಳ ಮಾರ್ಗದರ್ಶನ ಅಗತ್ಯವಿದೆ. ಯಾವಾಗಲೇ ಆಗಲಿ, ಉತ್ತಮ ಜೀವನವು ಪ್ರೀತಿಯಿಂದ ಸ್ಪೂತರ್ಿಗೊಂಡಿರುತ್ತದೆ ಮತ್ತು ಜ್ಞಾನದಿಂದ ಮಾರ್ಗದಶರ್ಿತವಾಗಿರುತ್ತದೆ.
ಯಾವುದೇ ಮಾನವನು ನಿಮ್ಮೊಡನೆ ಸ್ವಲ್ಪ ತಪ್ಪು ಎಸಗಿದ್ದರೆ ಅದು ಅಜ್ಞಾನದಿಂದಾಗಿ ಮತ್ತು ಮಿಥ್ಯಾದೃಷ್ಟಿಯಿಂದಾಗಿ ಆಗಿರುತ್ತದೆ. ಆದ್ದರಿಂದ ಪಾಪಿಗೆ ನಿಮ್ಮ ದಯೆಭರಿತ ಪ್ರೀತಿಯ ಅಗತ್ಯತೆಯಿರುತ್ತದೆ. ಒಂದಲ್ಲ ಒಂದುದಿನ ಆತನಿಗೆ ತನ್ನ ಮೂರ್ಖತ್ವದ ಅರಿವು ಉಂಟಾಗುತ್ತದೆ ಮತ್ತು ಆತನು ತನ್ನ ಕೆಟ್ಟ ಚಟಗಳೆಲ್ಲವನ್ನು ಬಿಟ್ಟುಬಿಡಬಹುದು. ಆದ್ದರಿಂದ ಆತನಿಗೆ ಒಳ್ಳೆಯವನಾಗಿ ಬದುಕಲು ಒಂದು ಅವಕಾಶ ನೀಡಲೇಬೇಕಾಗಿದೆ. ತನ್ನ ಹಿಂದಿನ ದುಷ್ಕೃತ್ಯಗಳಿಗಾಗಿ ಪಶ್ಚಾತ್ತಾಪವೇ ಮಾನವನನ್ನು ಬದಲಾಯಿಸುತ್ತದೆ ಮತ್ತು ಕೊನೆಗೆ ಆತನು ನಿಮ್ಮ ದಯಾಭರಿತ ಯೋಚನೆಗಳಿಗೆ ಮೆಚ್ಚುತ್ತಾನೆ. ಇದರ ಬಗ್ಗೆ ಲೋಕಾನುಕಂಪೆ ಯುಳ್ಳ ಬುದ್ಧ ಭಗವಾನರು ಹೀಗೆ ಬುದ್ಧಿವಾದ ನೀಡಿದ್ದಾರೆ:
ದ್ವೇಷದಿಂದ ದ್ವೇಷವು ನಿಲ್ಲುವುದಿಲ್ಲ, ಅದ್ವೇಷದಿಂದಲೇ (ಪ್ರೀತಿ) ದ್ವೇಷವು ನಿಲ್ಲುವುದು ಇದೇ ಸನಾತನ ನಿಯಮವಾಗಿದೆ - ಧಮ್ಮಪದ.
ನೀವು ಮೈತ್ರಿಯನ್ನು ಪ್ರಶಂಸಿಸಿದರೆ ಯಾವ ಹಾನಿಯೂ ನಿಮಗೆ ತಟ್ಟದು. ಇದರಿಂದಾಗಿ ನಿಮ್ಮ ಭೌತಿಕ ಮತ್ತು ಮಾನಸಿಕ ಸ್ವಸ್ತಗಳೆರಡನ್ನೂ ನೀವು ಪ್ರಾಪ್ತಿಮಾಡಲು ಸಾಧ್ಯವಾಗುವುದು. ಜೀವನಕ್ಕೆ ತನ್ನದೇ ಆದ ಲಯಬದ್ಧ ಚಲನೆಯಿದೆ, ಯಾವಾಗ ನೀವು ಓಲಾಡುವುದನ್ನು ಕಳೆದುಕೊಳ್ಳುವಿರೋ, ನೀವು ಆಗ ಸುತ್ತಿನಲ್ಲಿ ಗಳಿಕೆ ಮಾಡುವಿರಿ, (ತಿಜಟಿ ಥಿಠಣ ಟಠಜ ಠಟಿ ಣಜ ತಿಟಿರ, ಥಿಠಣ ರಚಿಟಿ ಠಟಿ ಣಜ ಡಿಠಣಟಿಜ ಚಿಛಠಣಣ) ಯಾರು ಈ ತತ್ವವನ್ನು ಅರ್ಥಮಾಡಿಕೊಳ್ಳುವುದಿಲ್ಲವೋ ಅವರು ಆಗಾಗ್ಗೆ ಸಮಸ್ಯೆಯಲ್ಲಿ ಬೀಳುತ್ತಾರೆ ಮತ್ತು ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಾರೆ. 
ಯಾರಾದರೂ ನಿಮ್ಮ ಮೇಲೆ, ಮೇಲಿಂದ ಮೇಲೆ ತಪ್ಪನ್ನೇ ಮಾಡುತ್ತಿದ್ದರೆ, ನೀವು ಸಹಾ ಪ್ರತಿಬಾರಿಯು ಆತನ ತಪ್ಪನ್ನು ತಿದ್ದಿರಿ, ಇದು ಮಾಡಲು ಸುಲಭವಾದ ಕಾರ್ಯವಲ್ಲ, ಆದರೂ ಬುದ್ಧರ ಆಧರ್ಶದಂತೆ ನಿಮ್ಮ ಅತ್ಯುನ್ನತ ಪರಿಶ್ರಮವನ್ನು ನೀವು ಮಾಡಲೇ ಬೇಕಾಗಿದೆ. ಆಗ ನಿಮಗೆ ಇದು ಅಸಾಧ್ಯ ಎನಿಸುವುದಿಲ್ಲ. ಇದರ ಬಗ್ಗೆ ಬುದ್ಧರ ಮನೋಭಾವ ಹೀಗೆ ಸಂಕ್ಷೇಪಿಸಲಾಗಿದೆ ಹೆಚ್ಚು ಕೆಟ್ಟದ್ದನ್ನು ನನ್ನ ಮೇಲೆ ಮಾಡಿದಷ್ಟೂ ಹೆಚ್ಚು ಹೆಚ್ಚು ಒಳ್ಳೆಯತನವು ನನ್ನಿಂದ ಪ್ರಸರಿಸುತ್ತದೆ.
ಹಲವು ಜನರ ಪ್ರಕಾರ ಕೆಟ್ಟದ್ದರ ಬದಲು ಒಳ್ಳೆಯದನ್ನು ಹಿಂತಿರುಗಿಸುವುದು ಅಷ್ಟೊಂದು ಪ್ರಯೋಗಾತ್ಮಕವಲ್ಲ. ಆದರೆ ಪ್ರಯತ್ನಿಸಿ, ನಂತರ ನೋಡಿ. ನಿಮಗೆ ಕೆಟ್ಟದ್ದರ ಬದಲು ಒಳ್ಳೆಯದನ್ನು ಮಾಡಲು ಅತಿಕಷ್ಟಕರವೆನಿಸಿದರೆ, ನೀವು ನಿಮ್ಮ ಒಳತಿಗಾಗಿ ಮತ್ತು ಪರರ ಒಳಿತಿಗಾಗಿ ಇನ್ನೂ ಬಹಳ ಶ್ರಮಪಡಲೇಬೇಕಾಗಿದೆ. ಆದರೆ ಕೊನೇಪಕ್ಷ ಕೆಟ್ಟವರ ಬದಲಿಗೆ ಕೆಟ್ಟದ್ದು ಮಾಡದಿದ್ದರೆ ಅಷ್ಟೇ ಸಾಕಾಗಿದೆ. 
ತಪ್ಪು ಮಾಡುವ ಅಲ್ಪ ಅರಿವುಳ್ಳವರ ಬಗ್ಗೆ ಸಹಾನುಭೂತಿಯ ಪರಿಶೀಲನೆ ಅಗತ್ಯವಾಗಿ ಬೇಕಾಗಿದೆ.






5.11 ನಿಮ್ಮ ಮಾನಸಿಕ ವ್ಯಥೆಯನ್ನು ಕಡಿಮೆ ಮಾಡುವುದು ಹೇಗೆ?
ಈ ಜಗತ್ತಿನಲ್ಲಿ ಯಾವುದೂ ಪೂರ್ಣವಾಗಿ ಕೆಟ್ಟದ್ದಲ್ಲ. ಹಾಗೆಯೇ ಪೂರ್ಣವಾಗಿ ಒಳ್ಳೆಯದಲ್ಲ. ಏಕೆಂದರೆ ಯಾವ ವಿಷಯಗಳು ಒಂದು ಗುಂಪಿಗೆ ಸ್ವಾಗತವೋ ಇಷ್ಟಪಡುತ್ತಾರೋ, ಅದೇ ವಿಷಯಗಳನ್ನು ಮತ್ತೊಂದು ಗುಂಪು ದ್ವೇಷಿಸುತ್ತದೆ. ಆದ್ದರಿಂದ ನಮ್ಮ ಅಗತ್ಯಗಳಿಗೆ ತಕ್ಕಂತೆ ನಾವು ಒಳ್ಳೆಯದನ್ನು ಅಥಾ ಕೆಟ್ಟದ್ದನ್ನು ನಿರೂಪಿಸುತ್ತೇವೆ. ವಿಷಯಗಳು ಸ್ವಾಭಾವಿಕವಾಗಿ ಒಳ್ಳೆಯದು ಆಗಿರುವುದಿಲ್ಲ ಅಥವಾ ಕೆಟ್ಟದ್ದೂ ಆಗಿರುವುದಿಲ್ಲ. ಬುದ್ಧ ಧಮ್ಮದ ಪ್ರಕಾರ ಜಗತ್ತು ಸಂಘರ್ಷದೊಂದಿಗೆ ಇರುತ್ತದೆ, ಅದರಲ್ಲಿ ನಾವೊಂದು ಭಾಗವಷ್ಟೇ ಆಗಿದ್ದೇವೆ. ನನ್ನನ್ನು ಒಪ್ಪಿಕೊಂಡ ಯಾವ ವ್ಯಕ್ತಿಯಿಂದಲೂ ಎಂದಿಗೂ ನಾನು ಜೀವನದಲ್ಲಿ ಏನೂ ಕಲಿತಿಲ್ಲ (ಡುಡ್ಲೇ ಪೀಲ್ಡ್ ಮಲೊನೆ).
ನಾವು ಇರುವಿಕೆಯ ತೀವ್ರ ಸ್ವಾರ್ಥಲಾಲಸೆ ಮತ್ತು ಇಂದ್ರೀಯ ಬಯಕೆಗಳನ್ನು ಹೊಂದಿದ್ದರೆ ನಾವು ಜಗತ್ತಿನ ಬಗ್ಗೆ ಇಟ್ಟಿರುವ ಮಿಥ್ಯಾದೃಷ್ಟಿಗಳಿಗಾಗಿ ಬೆಲೆಯನ್ನು ತೆರಲೇಬೇಕಾಗಿದೆ. ಹಾರೈಕೆಯ ಯೋಚನೆ ಅಮರತ್ವದ ಬಯಕೆ, ನಾನು ಮತ್ತು ನನ್ನದು ಎಂಬ ಭಾವವೇಶಗಳಿಗೆ ಅಂಟಿರುವುದು. ಇವೆಲ್ಲಾ ಮನಸ್ಸನ್ನು ಮತ್ತು ಸಮಯ ಪ್ರಜ್ಞೆಯನ್ನು ನೇಯುತ್ತದೆ. ಪೂರೈಕೆಯಾಗದ ಆಸೆಗಳು ಈ ಬಗೆಯ ಬೆಳೆಯನ್ನು ನೀಡುತ್ತವೆ. ಅವೆಂದರೆ ಜಗಳಗಳು, ಸಂಘರ್ಷ, ಸಂಪರ್ಕತೆಯ ಸೋಲುಗಳು ಭಯ, ಚಿಂತೆ, ಏಕಾಂತತೆ ಮತ್ತು ಖಿನ್ನತೆ. ಇಲ್ಲಿ ಮುಕ್ತ ಸವಾರಿ ಎಂಬುದೇ ಇಲ್ಲ. 
ನಿಮ್ಮಲ್ಲಿನ ಮಾನಸಿಕ ವ್ಯಥೆಗಳನ್ನು ನಿಮರ್ೂಲ ಮಾಡಬೇಕೆಂದು ನೀವು ಇಚ್ಛಿಸಿದರೆ, ನಿಮ್ಮ ಸ್ವಾರ್ಥಯುತ ಲಾಲಸೆಗಳನ್ನು ಧಮಿಸಲೇಬೇಕು. ಜೀವನದ ಪಥವು ಯಾವುದಕ್ಕೆ ಅವಲಂಬಿತವಾಗಿದೆ ಎಂದರೆ ನೀವು ಯೋಗ್ಯಪಥವನ್ನು ತೆಗೆದುಕೊಂಡಿರುವಿರಾ ಮತ್ತು ನೀವು ಪರಮಾಥರ್ಿಕವಾಗಿ ವಿಕಸಿಸಬೇಕಾದರೆ, ಪ್ರಾಪಂಚಿಕ ಜೀವನದ ಒತ್ತಡಗಳನ್ನೆಲ್ಲಾ ನೀವು ಸುತ್ತಿಸದಿರಿ. ಹಾಗೇ ಮಾಡಲು ಸಾಧ್ಯವಾಗದಿದ್ದರೆ ನೀವು ಮಾಡುವುದೇನೆಂದರೆ ಇಂದ್ರೀಯ ಸುಖಗಳಲ್ಲಿ ಆನಂದಿಸುವುದು ಜೊತೆಗೆ ಹಲವಾರು ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುವುದು.
ನಿಮ್ಮ ಮಾನಸಿಕ ವ್ಯಥೆಯು ಕ್ಷೀಣಿಸುವಿಕೆಗೆ ಇನ್ನೊಂದು ದಾರಿಯಿದೆ. ಅದೆಂದರೆ ನಿಮ್ಮ ದುಃಖಗಳ ಮತ್ತು ಕಷ್ಟಗಳ ಅಳತೆ ಮಾಡುವುದು ಮತ್ತು ಅದನ್ನು ಪರರ ದುಃಖಗಳ ಮತ್ತು ಕಷ್ಟಗಳ ಜೊತೆಗೆ ಹೋಲಿಕೆ ಮಾಡುವುದು. ಯಾವಾಗ ನೀವು ದುಃಖಿತರಾಗುವಿರೋ ಆಗ ನೀವು ಯೋಚಿಸುವುದು ಏನೆಂದರೆ ಇಡೀ ವಿಶ್ವವೇ ನಿಮಗೆ ಎದುರಾಳಿಯಂತೆ ವತರ್ಿಸುತ್ತಿದೆ ಮತ್ತು ನಿಮ್ಮ ಹೊರತು ಪ್ರತಿಯೊಂದು ತಪ್ಪಾಗಿದೆ ಎಂದು ಭಾವಿಸುವಿರಿ. ಹೇಗೆ ಇರಲಿ ನೀವು ನಿಮ್ಮ ಸುತ್ತಲಿನ ವಸ್ತುಗಳನ್ನು ಗಮನಿಸುತ್ತಾ ನಿಮಗಿರುವ ಧನ್ಯತೆಗಳನ್ನು (ಧನಾತ್ಮಕತೆಗಳನ್ನು) ಲೆಕ್ಕಹಾಕಿ ಆಶ್ಚರ್ಯಕರವಾಗಿ ನೀವು ಇತರರಿಗಿಂತ ಅದೆಷ್ಟು ಪಟ್ಟು ಉತ್ತಮವಾಗಿರುವಿರಿ ಎಂದು ನಿಮಗೆ ಅರಿವಾಗುತ್ತದೆ.
ನೀವು ನಿಮ್ಮ ಕಷ್ಟಗಳನ್ನು ಮತ್ತು ತೊಂದರೆಗಳನ್ನು ಅತಿಯಾಗಿ, ದೊಡ್ಡದಾಗಿ ಮಾಡಿಕೊಂಡು ವೀಕ್ಷಿಸುತ್ತಿದ್ದೀರಿ. ನಿಜ ಹೇಳಬೇಕೆಂದರೆ ಪರರ ಸ್ಥಿತಿಯು ನಿಜಕ್ಕೂ ಭಯಾನಕವಾಗಿದೆ. ಆದರೂ ಅದರ ಬಗ್ಗೆ ನೀವು ಅಷ್ಟಾಗಿ ಚಿಂತೆಪಡುತ್ತಿಲ್ಲ. ನೀವು ಸಮಸ್ಯೆಗಳಲ್ಲಿ ಸಿಕ್ಕಿರುವಾಗ, ಅವನ್ನು ಎದುರಿಸಿ ಪರಿಹರಿಸಲು ಯತ್ನಿಸಬೇಕೇ ಹೊರತು ಚಿಂತೆಪಡುತ್ತಾ ಮಾನಸಿಕ ಖಿನ್ನತೆಯನ್ನು ಹೆಚ್ಚಿಸಬೇಡಿ. ಸಮಸ್ಯೆಗಳ ಪರಿಹಾರದ ಬಗ್ಗೆ ಚೀನಾದ ಈ ಹೇಳಿಕೆ ಹೀಗಿದೆ:
ನಿಮಗೆ ದೊಡ್ಡ ಸಮಸ್ಯೆಯಿದ್ದರೆ, ಅದನ್ನು ಸಣ್ಣದಾಗಿಸಿ. ಸಣ್ಣ ಸಮಸ್ಯೆಯಿದ್ದರೆ, ಅದನ್ನು ಇಲ್ಲವಾಗಿಸಿ.
ನಿಮ್ಮ ಸಮಸ್ಯೆಗಳನ್ನು ಕಡಿಮೆ ಮಾಡಲು ಇನ್ನೊಂದು ಹಾದಿಯಿದೆ. ಅದೇನೆಂದರೆ ನೀವು ಹಿಂದೆ ಸಹಾ ಇಂತಹುದೇ ಸಮಸ್ಯೆಯ ಮೂಲಕ ಹಾದುಹೋಗಿರುವಿರಿ ಮತ್ತು ಇದಕ್ಕಿಂತ ಕೆಟ್ಟ ಸನ್ನಿವೇಶದ ಮೂಲಕ ಹಾದು ಹೋಗಿರುವಿರಿ ಮತ್ತು ನಿಮ್ಮ ಸಹನೆಯಿಂದ ಪ್ರಥಮ ಪ್ರಯತ್ನದಿಂದ ದೃಢ ಪ್ರಯತ್ನದಿಂದ ತಡೆಯಲಾರದಂಥ ಕಷ್ಟಗಳೆಲ್ಲವನ್ನೂ ನೀವು ದಾಟಿದ್ದೀರಿ. ಹಾಗೆ ಮಾಡುವಾಗ ನಿಮಗೆ ಇದ್ದ ಸಮಸ್ಯೆಗಳಿಂದ ನೀವೂ ಮುಳುಗಿ ಹೋಗಲಿಲ್ಲ. ಬದಲಾಗಿ ನೀವು ಜೀವನವನ್ನು ಹೊಸ ದೃಷ್ಟಿಕೋನದೊಂದಿಗೆ ನೋಡಿದಿರಿ ಮತ್ತು ಹಾಗೆಯೇ ಈಗಲೂ ವತರ್ಿಸಿದರೆ ನಿಮಗೆ ಎದುರಾಗುವ ಎಂಥಹುದೇ ಸಮಸ್ಯೆಯಾಗಿರಲಿ ನೀವು ಅದನ್ನೆಲ್ಲಾ ಎದುರಿಸುವಿರಿ.
ನೀವು ಇದಕ್ಕಿಂತ ನಿಕೃಷ್ಟ ಸನ್ನಿವೇಶಗಳನ್ನೂ ದಾಟಿದ್ದೀರಿ ಎಂಬುದನ್ನು ನೀವು ಅರ್ಥಮಾಡಿಕೊಂಡು ನೀವು ಅವನ್ನೆಲ್ಲಾ ನೇರವಾಗಿ ಎದುರಿಸಲು ಸಿದ್ಧರಾಗಿ. ಏನೇಬರಲಿ, ಎದುರಿಸಲು ಸಿದ್ಧರಾಗಿ, ಈ ರೀತಿಯ ಮನಸ್ಸಿನಿಂದ ಸಿದ್ಧರಾಗಿ. ಆಗ ನೀವು ಮರಳಿ ಶ್ರದ್ಧೆಯನ್ನು ತಾಳುತ್ತಿರಿ ಎಂತಹುದೇ ಸಮಸ್ಯೆಯಿರಲಿ ಅದನ್ನೆಲ್ಲಾ ಪರಿಹರಿಸುತ್ತೀರಿ. 
ನೀವು ಸಮಸ್ಯೆಗಳನ್ನು ಎದುರಿಸುವಾಗ ಹೀಗೆ ಚಿಂತಿಸಿ, ಪ್ರತಿ ಸಮಸ್ಯೆಗೂ ಪರಿಹಾರ ಇದ್ದೇ ಇದೆ. ಹಾಗಿರುವಾಗ ಚಿಂತೆ ಏಕೆ? ಒಂದುವೇಳೆ ಸಮಸ್ಯೆಗೆ ಪರಿಹಾರವೇ ಇಲ್ಲದಿದ್ದರೆ ಆಗಲೂ ಚಿಂತೆಯೇಕೆ? ಏಕೆಂದರೆ ಚಿಂತೆ ಪಡುವುದರಿಂದಾಗಿ ನಿಮ್ಮ ಸಮಸ್ಯೆಯೇನು ಪರಿಹಾರವಾಗುವುದೇ? ನಿಮ್ಮ ಚಿಂತೆಯಿಂದ ಸಮಸ್ಯೆಯು ಪರಿಹಾರವಾದಂತೆ ಆಗುವುದಿಲ್ಲ!
ಆಧುನಿಕ ಯುಗದಲ್ಲಿ ನಾವು ಎಲ್ಲಾ ಬಗೆಯ ಅಪಾಯದ ಎಚ್ಚರಿಕೆ ನೀಡುವ ಮಾನಸಿಕ ಕಾಯಿಲೆಗಳನ್ನು ಮತ್ತು ತೊಂದರೆಗಳನ್ನು ಕಾಣುತ್ತಿದ್ದೇವೆ. ಅಭಿವೃದ್ಧಿಶೀಲ ದೇಶಗಳಲ್ಲಿ ಹೆಚ್ಚು ಹೆಚ್ಚಾಗಿ ಮಾನಸಿಕ ಕಾಯಿಲೆಯ ರೋಗಿಗಳನ್ನೇ ಕಾಣುತ್ತಿದ್ದೇವೆ. 
ಹಾಗೆಯೇ ಮಾನಸಿಕ ಕಾಯಿಲೆಯಂತೆಯೇ ಸಮಾಜದಲ್ಲಿ ಅಪರಾಧದ ಧಾತುವು ಕಾಣಸಿಗುತ್ತದೆ. ಸಿಗ್ಮಂಡ್ ಪ್ರಾಡ್ಸ್ನ ಸಂಶೋಧನೆಯ ಪ್ರಕಾರ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ಮಾಡಿಸಬೇಕೆ ಹೊರತು ಶಿಕ್ಷೆಯನ್ನು ನೀಡುವುದಲ್ಲ. ಇದು ನಿಜಕ್ಕೂ ಸಕಾರಾತ್ಮಕ ಮತ್ತು ಪರಿಣಾಮಕಾರಿ ಚಿಂತನೆಯಾಗಿದೆ. ಇದು ಸಮಸ್ಯೆಯ ಪರಿಹಾರದ ಬಗ್ಗೆ ವಿಮೋಚನೆಯ ದೃಷ್ಟಿಕೋನವಾಗಿದೆ. ಈ ದೃಷ್ಟಿಕೋನವು ಪ್ರಗತಿಗಾಮಿ ಸಾಮಾಜಿಕ ಸುಧಾರಣೆಗೆ ತಳಹದಿಯಾಗಿದೆ. ಅಂದರೆ ಶಿಕ್ಷೆಯ ಬದಲಾಗಿ ಯೋಗ್ಯಸ್ಥಿತಿಗೆ ಮರಳಿಸುವುದು.
ಯಾವಾಗ ನಾವು ಬೇರೆ ಜನರು ಹೇಗೆ ಜೀವಿಸುತ್ತಿದ್ದಾರೆ ಎಂಬುದನ್ನು ಅರಿಯದೆ ಹೋದರೆ ನಾವು ಜೀವನದ ವಿವಿಧ ಹಾದಿಗಳನ್ನು ಕಲಿಯಲಾಗುವುದಿಲ್ಲ. ಜನರೊಂದಿಗೆ ವೈಯುಕ್ತಿಕ ಪ್ರತಿಭಟನೆಯು ಸ್ಥಳದಿಂದ ಸ್ಥಳಕ್ಕೆ ವಿಭಿನ್ನವಾಗಿರುತ್ತದೆ. ಇದನ್ನೆಲ್ಲ ಅರಿತಾಗ ನಾವು ಇನ್ನಷ್ಟು ಸಹಾನುಭೂತಿಯನ್ನು ಅನುಭವಿಸುತ್ತೇವೆ. ಸಹಮಾನವನ ಅಗತ್ಯತೆ ಮತ್ತು ಚಿಂತನೆ ಮಾಡುವ ವಿಧಾನದ ಬಗ್ಗೆ ಅಸಹನೆಯು ಅಜ್ಞಾನದಿಂದಲೇ ಉಂಟಾಗುತ್ತದೆ. 






5.12 ನಿಮ್ಮನ್ನೇ ಬದಲಾಯಿಸಿ
ಜಗತ್ತನ್ನು ಬದಲಾಯಿಸುವುದರಿಂದ ನೀವೇನು ಸಾಧಿಸುವಿರಿ? ನೀವು ಪರಿಪೂರ್ಣತೆ ಯನ್ನು ಸಾಧಿಸುವಿರಾ? ನೀವು ಕೇವಲ ಒಣಹೆಮ್ಮೆಯನ್ನು ಪೋಷಿಸುತ್ತಿರುವಿರಿ. ನಿಮ್ಮ ಅಹಂಕಾರಕ್ಕೆ ಬೇಕಾದ ಆಹಾರವನ್ನು ಪೂರೈಸುತ್ತಿರುವಿರಿ. ನೀವು ಜೀವನದ ಚಕ್ರಕ್ಕೆ ಬಂಧಿಯಾಗಿರುವಿರಿ. ಆದರೆ ನಿಮ್ಮನ್ನೇ ಬದಲಾಯಿಸಿದಾಗ, ನಿಮ್ಮ ಸ್ವಯಂವನ್ನೇ ಅರ್ಥಮಾಡಿಕೊಂಡಾಗ ಅದಕ್ಕಾಗಿ ಸ್ವ-ಶಿಸ್ತಿನ, ಸ್ವ-ಪ್ರಯತ್ನದಿಂದಾಗಿ ನೀವು ಪೂರ್ಣತೆಯನ್ನು ಹೊಂದುವಿರಿ.
ಅಂತಹ ಪರಿಪೂರ್ಣತೆಯನ್ನು ನೀವು ಸಾಧಿಸಿದಾಗ ಜೀವನವು ಅರ್ಥಪೂರ್ಣ ವಾಗುತ್ತದೆ. ಆಗ ಮಾತ್ರ ನೀವು ಪರರಿಗೆ ಮಹಾನ್ ಸೇವೆ ಮಾಡುವಂತಾಗುತ್ತದೆ. ಆಗ ಜನರು ಸಹಾ ನಿಮ್ಮ ಆದರ್ಶದೊಂದಿಗೆ ಸ್ಫೂತರ್ಿ ತಾಳುತ್ತಾರೆ. ಆಗ ಜೀವನದಲ್ಲಿ ಪರರು ನಿಮ್ಮನ್ನು ಹಿಂಬಾಲಿಸಿ ಅಂಥಹುದೇ ಗುರಿಯನ್ನು ಪ್ರಾಪ್ತಿಮಾಡುತ್ತಾರೆ. ಇದಕ್ಕಾಗಿಯೇ ಒಬ್ಬರೇ ಮಹಾನ್ ಪುರುಷರಾದ ಸಿದ್ಧಾರ್ಥರು ಬುದ್ಧರಾಗಲು ತಮ್ಮ ಸಾಮ್ರಾಜ್ಯವನ್ನೇ ತೊರೆದು ಭಿಕ್ಷುವಾದರು. ರಾಜನಾಗುವುದರಿಂದಾಗಿ ಕೇವಲ ಸ್ವ-ಹಿತಾಸಕ್ತಿಯನ್ನು ಹೆಚ್ಚಾಗಿ ಅನುಭವಿಸಬಹುದು. ಆದರೆ ಸ್ವ-ಪ್ರಯತ್ನದಿಂದಾಗಿ ಪರಿವರ್ತನೆಯಾದರೆ ಆತನು ಜಗತ್ತನ್ನು ರಕ್ಷಿಸಲು ಸಮರ್ಥನಾಗುತ್ತಾನೆ. ಮಾನವ ಇಂದು ಏನಾಗಿರುವನೋ ಅವೆಲ್ಲಾ ಮಿಲಿಯನ್ ಗಟ್ಟಲೆ ಹಿಂದಿನ ಯೋಜನೆಗಳ ಮತ್ತು ಕೃತಿಗಳ ಪರಿಣಾಮವಾಗಿದ್ದಾನೆ. ಆತನು ತಕ್ಷಣ ಬದಲಾಗಲು ಸಿದ್ಧ ವಸ್ತುವೇನಲ್ಲ. ಆತನ ಚಾರಿತ್ರವು ದೃಢವಾಗುವುದು ಆತನ ಸ್ವಯಂ ಚಿಂತನೆಯಿಂದಲೇ ಎಂಬುದನ್ನು ನೆನಪಿಡಿ. ಮಾನವ ಸ್ವಭಾವದಿಂದಲೇ ಪರಿಪೂರ್ಣನಲ್ಲ; ಅಭ್ಯಸಿಸಿ ಸಾಧಿಸಬೇಕಾಗುತ್ತದೆ. 
ಜೀವನವು ಮಾನವರಿಗೆ ಮಾತ್ರವೇ ಇಲ್ಲ. ಜೊತೆಗೆ ಈ ಬ್ರಹ್ಮಾಂಡದಲ್ಲಿ ವಿವಿಧ ಜೀವನದ ನಮೂನೆಗಳು ಸಹಾ ಇರುತ್ತವೆ. (ಬೇರೆ ಬೇರೆ ಜೀವಿಗಳಿರುತ್ತವೆ). ಹಾಗಿರುವಾಗಲು ಮಾನವರು ಮಾತ್ರ ಶ್ರೇಷ್ಠ ಚಿಂತನಾಶಕ್ತಿ ಮತ್ತು ತರ್ಕಶಕ್ತಿ ಹೊಂದಿರುತ್ತಾರೆ. ಈ ವಿಧದಿಂದಾಗಿಯೇ ಅವರು ಪರ ಜೀವಿಗಳಿಗಿಂತ ಶ್ರೇಷ್ಠವಾಗಿರುತ್ತಾರೆ. ಈ ಒಂದು ಶ್ರೇಷ್ಠ ಗುಣದಿಂದಲೇ ಅವರು ತಮ್ಮ ಜೀವನವನ್ನು ಯೋಗ್ಯವಾಗಿ ಮಾಪರ್ಾಟಿಸಿ ದುಃಖಗಳಿಂದ ಮುಕ್ತರಾಗುತ್ತಾರೆ. ಅದರಿಂದಾಗಿ ಜೀವನದ ಉದ್ದೇಶವು ಕೇವಲ ದುಃಖದಿಂದ ವಿಮುಕ್ತರಾಗುವುದೇ ಆಗಿದೆ. ಮಾನವರು ಅದನ್ನು ತಮ್ಮ ಪ್ರಯತ್ನದಿಂದಲೇ ಸಾಧಿಸುತ್ತಾರೆ. ಆದರೆ ಜೀವನವನ್ನು ಯೋಗ್ಯವಾಗಿ ಬಳಸದಿದ್ದರೆ ಜೀವನವೇ ಸೋಲಾಗುವುದು. ಬುದ್ಧ ಭಗವಾನರು ಮಾನವರ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ, ಒತ್ತಿ ಹೇಳಿದ್ದಾರೆ. ಅವರು ಮಾನವನ ಬಗ್ಗೆ ತಮ್ಮ ಸ್ವ-ಸಂಪೂರ್ಣತೆಗಾಗಿ ಅಂತಹ ಅನ್ವೇಷಣೆಗಾಗಿ ಜೀವನದಿಂದ ಜೀವನಕ್ಕೆ ಪ್ರಯತ್ನಪಡುವ, ಸಂಘಷರ್ಿಸುವ ಅತ್ಯಂತ ಪರಿಪೂರ್ಣ ಚಿತ್ರಣವನ್ನು ನೀಡಿದ್ದಾರೆ.
ನಿಜಕ್ಕೂ ಜೀವನವು ಒಂದು ಅದ್ವಿತೀಯ ಅನುಭವವಾಗಿದೆ. ಅದನ್ನು ನಾವು ಯಾವುದಕ್ಕೂ ಹೋಲಿಸಲಾಗುವುದಿಲ್ಲ. ಅದರ ಮೌಲ್ಯವನ್ನು ಯಾವುದರಿಂದಲೂ ಅಳೆಯಲು ಸಾಧ್ಯವಿಲ್ಲ ಮತ್ತು ಹಣದಿಂದಾಗಿ ಜೀವನವನ್ನು ಕೊಳ್ಳಲಾಗುವುದಿಲ್ಲ. ಆದರೂ ಹಲವರು ಈ ಅಮೂಲ್ಯ ಮುತ್ತಿನಿಂದೇನಾದರೂ ಮಾಡಲು ಸಾಧ್ಯವೆಂದು ಅರಿತಿದ್ದಾರೆ. ಜೀವನವೆಂದರೆ ಕೇವಲ ಭೌತಿಕ ಶರೀರವಲ್ಲ ಅಥವಾ ಇಂದ್ರೀಯಗಳೂ ಅಲ್ಲ. ಬದಲಾಗಿ ಚಿಂತನೆ ಮಾಡುವ ಮಾನವ ಮನಸ್ಸಾಗಿದೆ.






5.13 ಜೀವನದ ಅತ್ಯುತ್ತಮ ಬಳಕೆ ಮಾಡಿ
ಜೀವನದ ಬಗ್ಗೆ ಮಹತ್ವದ ಸಂಗತಿ ಏನೆಂದರೆ ನಾವು ಅದನ್ನು ಹೊಂದಿದ್ದೇವೆ ಮತ್ತು ಅದರಿಂದ ನಾವು ಅದರ ಅತ್ಯುತ್ತಮ ಬಳಕೆ ಮಾಡೋಣ. ಇದು ನಿಜಕ್ಕೂ ಜೀವನದ ಅತ್ಯುತ್ತಮ ಮೌಲ್ಯವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅವಕಾಶದ ಬಳಕೆ ಮಾಡಿಕೊಳ್ಳಬೇಕಾಗಿದೆ. ಬಹಳಷ್ಟು ಜನರು ತಮ್ಮ ಜೀವನದ ಹೆಚ್ಚಿನ ಕಾಲವನ್ನು ಚಿಂತೆಪಡುತ್ತ ಮತ್ತು ಇರುವುದಕ್ಕಾಗಿ ಹೋರಾಡುತ್ತಲೇ ಕಾಲಕಳೆಯುತ್ತಾರೆ. ಅವರು ಗುಲಾಮರಂತೆ ಕಾರ್ಯಮಾಡುತ್ತಾರೆ. ಅಪಾರ ಸಮಸ್ಯೆಗಳನ್ನು ಮತ್ತು ತಡೆಗಳನ್ನು ಎದುರಿಸುತ್ತಿದ್ದಾರೆ. 
ನಾವು ನಮ್ಮ ಹೆಚ್ಚಿನ ಶಕ್ತಿಯನ್ನು ಭಾವಾವೇಶದ ಯುದ್ಧರಂಗದಲ್ಲಿ ವಿನಿಯೋಗಿಸುತ್ತೇವೆ. ಇರುವುದಕ್ಕಾಗಿ ಹೋರಾಟ, ಕೀತರ್ಿಗಾಗಿ ಹೋರಾಟ, ಸುಖಕ್ಕಾಗಿ ಹೋರಾಟ, ಅಪಾಯದಿಂದ ಪಾರಾಗಲು ಹೋರಾಟ, ಸಾಂದಭರ್ಿಕವಾಗಿ ಕ್ಷಣಿಕ ತೃಪ್ತಿಯನ್ನು ಇದರಿಂದ ನಾವು ಪಡೆಯುತ್ತೇವೆ. ಆದರೆ ಪ್ರತಿಸುಖವು ದುಃಖದಿಂದಲೇ ಅಂತ್ಯವಾಗುತ್ತದೆ.
ಈ ಜಗತ್ತಿನೆಡೆಗೆ ನೋಡಿ ಮತ್ತು ಹೇಗೆ ಜನರು ಪರಸ್ಪರ ಕಾದಾಡುತ್ತಿದ್ದಾರೆ ನೋಡಿರಿ. ಬಾಂಬ್ಗಳನ್ನು ಹಾಕುವಿಕೆ, ಅಪಹರಣ ಮತ್ತು ಪರರಿಗೆ ಹಿಂಸೆ ಮಾಡುವಿಕೆ, ಇಡೀ ಜಗತ್ತೇ ಹುಚ್ಚರ ಮನೆಯಂತಾಗಿದೆ. ಜನರು ತಮ್ಮ ಉತ್ತಮ ಮಾನವ ಗುಣಗಳನ್ನು ಮರೆತುಹೋಗಿದ್ದಾರೆ ಮತ್ತು ವಂಚನೆಗೆ, ಕ್ರೂರತ್ವಕ್ಕೆ, ಮೋಸಕ್ಕೆ, ಡಕಾಯಿತಿಗೆ, ಕ್ರೋಧಕ್ಕೆ, ಅಸೂಯೆಗೆ, ಲೋಭಕ್ಕೆ ಮತ್ತು ಅಜ್ಞಾನಕ್ಕೆ ತಮ್ಮನ್ನು ಆಳ್ವಿಕೆ ಆಗುವಂತೆ ಬಿಟ್ಟಿದ್ದಾರೆ. ಇದರಿಂದಾಗಿ ಮಾನವನಿಗೆ ಉತ್ತಮ ಯೋಚನೆಗಳು ಬೆಳೆಸಲು ಸ್ಥಳವೇ ಇಲ್ಲದಂತೆ ಆಗಿದೆ. ಈ ರೀತಿಯಾಗಿ ಮಾನವ ನಿರಂತರವಾಗಿ ಗಳಿಕೆಗೆ ಹೋರಾಡುತ್ತಾ ಮತ್ತು ಅಪಾಯದಿಂದ ಪಾರಾಗಲೂ ಹೋರಾಡುತ್ತಿದ್ದರೆ ಇಂತಹ ರಣರಂಗದಲ್ಲಿ ಆತನಿಗೆ ಶಾಂತಿ, ಸುಖ ಮತ್ತು ಸಂತೃಪ್ತಿ ಹೇಗೆ ಸಿಗುತ್ತದೆ? ಮಾನವನ ಮೇಲೆ ಮಾನವನ ಅಮಾನವೀಯತೆಯು ಅಸಂಖ್ಯ ಜನರು ಶೋಕಿಸುವಂತೆ ಆಗಿದೆ.
ನೀವು ಸ್ಪಷ್ವವಾಗಿ ಜೀವನದ ಸ್ವರೂಪ ಮತ್ತು ಜಗತ್ತಿನ ಸ್ವರೂಪವನ್ನು ಅರ್ಥಮಾಡಿ ಕೊಂಡಿದ್ದೇ ಆಗಿದ್ದಲ್ಲಿ ವಿಮುಕ್ತಿಯ ಪೂರ್ಣ ಅಗತ್ಯವು ನಿಮಗೆ ತಿಳಿಯುತ್ತಿತ್ತು. ಆಗ ನೀವು ಈ ಪರಮಸುಖವನ್ನು ಪ್ರಾಪ್ತಿಮಾಡಲು ನಿಧಾನ ಮಾಡುತ್ತಿರಲಿಲ್ಲ. ಇಂದು ನೀವು ದುಃಖದಿಂದ ಪಾರಾಗಲು ಪ್ರಾಪಂಚಿಕ ವಿಧಾನವನ್ನು ಅನುಸರಿಸುತ್ತಿರುವಿರಿ. ಆದರೆ ಅದು ಕ್ಷಣಿಕವಾಗಿದೆ. ಆದರೆ ದುಃಖ ಮುಕ್ತರಾಗಲು ನೀವು ಜೀವನದಲ್ಲಿ ಪರಮಾರ್ಥದ ಪಥವನ್ನು ಅನುಸರಿಸಲು ಪ್ರಯತ್ನಿಸಿದ್ದರೆ ಆಗ ನೀವು ನಿಜ ಶಾಂತಿಯನ್ನು ಪಡೆಯುತ್ತಿದ್ದಿರಿ.







5.14 ಯಾವಾಗ ನೀವು ನಿಮ್ಮನ್ನೇ ರಕ್ಷಿಸಿಕೊಳ್ಳುವಿರೋ ಆಗ ಪರರನ್ನು ಕಾಪಾಡುವಿರಿ
ಜನರು ವೈಯಕ್ತಿಕ ಹಂತದಲ್ಲಿ ತಮ್ಮನ್ನು ಗುಣಪಡಿಸಿಕೊಳ್ಳುವಲ್ಲಿ, ಮಿಥ್ಯಾದೃಷ್ಟಿಯಿಂದ ರಕ್ಷಿಸಿಕೊಳ್ಳುವಲ್ಲಿ ಮತ್ತು ಸಾರ್ವತ್ರಿಕ ಹುಟ್ಟಿನಿಂದ ಪಾರಾಗುವುದನ್ನು ಕಲಿಯಲೇಬೇಕಾಗಿದೆ. ನಂತರವೇ ಅವರು ಕುಟುಂಬದ, ಸಮಾಜದ, ವಿಶ್ವಮಟ್ಟದ ಶಾಂತಿ ಮತ್ತು ಸೌಹಾರ್ದತೆಗೆ ಪ್ರಯತ್ನಿಸಲಿ. ವೈಯಕ್ತಿಕ ಹಂತದಲ್ಲೇ ನಾವು ನಮ್ಮ ಮನಸ್ಸನ್ನು ಜಾಗರೂಕತೆಯಿಂದ ಗಮನಿಸಬೇಕಾಗಿದೆ. ಹೀಗೆ ನಮ್ಮನ್ನು ರಕ್ಷಿಸಿಕೊಂಡು ಪರರನ್ನು ಅದೇವೇಳೆ ಕಾಪಾಡಬೇಕಾಗಿದೆ. ಇದರ ಬಗ್ಗೆ ಬುದ್ಧ ಭಗವಾನರು ಧಮ್ಮಪದದಲ್ಲಿ ಹೀಗೆ ಹೇಳಿದ್ದಾರೆ.
ನಿಮ್ಮನ್ನು ನೀವು ಪ್ರಿಯರೆಂದು ಭಾವಿಸಿದಲ್ಲಿ ನಿಮ್ಮನ್ನು ಅತ್ಯಂತ ಜಾಗರೂಕತೆಯಿಂದ ಕಾಯ್ದುಕೊಳ್ಳಿ.
ಸ್ಮೃತಿಯನ್ನು ಅಭ್ಯಸಿಸುತ್ತ, ನಮ್ಮನ್ನು ಚೆನ್ನಾಗಿ ಕಾಯ್ದುಕೊಳ್ಳಲು ಭಗವಾನರು ಈ ಉಪಮೆಯನ್ನು ಹೀಗೆ ನೀಡಿದ್ದಾರೆ. ಒಮ್ಮೆ ಒಬ್ಬ ದೊಂಬರಾಟದವ ತನ್ನ ಶಿಷ್ಯನ ಸಹಿತ ಅಪಾಯದಿಂದ ಕೂಡಿದ ಪ್ರದರ್ಶನ ನೀಡುತ್ತಿದ್ದನು. ಸ್ವಲ್ಪ ಜಾಗರೂಕತೆ ತಪ್ಪಿದರೂ ಅವನಿಗೆ ಅಥವಾ ಅವನ ಶಿಷ್ಯನಿಗೆ ಅಪಾಯವಾಗುತ್ತಿತ್ತು. ಒಂದು ಪ್ರದರ್ಶನದಲ್ಲಿ ಆತನು ಶಿಷ್ಯನಿಗೆ ಹೀಗೆ ಹೇಳಿದನು. ಓಹ್ ಹುಡುಗನೇ, ಈಗ ನೀನು ಕಂಬವನ್ನು ಏರಿ ನನ್ನ ಹೆಗಲ ಮೇಲೆ ನಿಂತುಕೋ ಎಂದು. ಆಗ ಆ ಹುಡುಗ ಹಾಗೆ ಮಾಡಿದನು. ನಂತರ ಶಿಷ್ಯನಿಗೆ ಹೀಗೆ ಹೇಳಿದನು: ಈಗ ಹುಡುಗನೇ ನೀನು ನನ್ನನ್ನು ಕಾಪಾಡು ಮತ್ತು ನಾನು ನಿನ್ನನ್ನು ರಕ್ಷಿಸುವೆನು, ಹೀಗೆ ಇಬ್ಬರೂ ಪರಸ್ಪರ ನೋಡಿಕೊಂಡು ನಮ್ಮ ಪ್ರದರ್ಶನಗಳನ್ನು ಮಾಡೋಣ. ಹಣವನ್ನು ಸಂಪಾದಿಸಿ ನಂತರ ಕೆಳಗಿಳಿಯೋಣ. ಆದರೆ ಪ್ರಜ್ಞಾವಂತನಾಗಿದ್ದ ಆ ಯುವಶಿಷ್ಯನು ಸ್ವಲ್ಪ ಯೋಚಿಸಿ ಹೀಗೆ ಹೇಳಿದನು. ಬೇಡ ಗುರುಗಳೇ, ಹಾಗೆ ಮಾಡಬೇಡಿ. ನೀವು ಸ್ವಯಂ ನಿಮ್ಮನ್ನೇ ರಕ್ಷಿಸಿಕೊಳ್ಳಿ, ನಾನು ನನ್ನನ್ನು ಕಾಪಾಡಿಕೊಳ್ಳುವೆನು. ಹೀಗೆ ಸ್ವಯಂ ರಕ್ಷಿಸುತ್ತಾ, ಸ್ವಯಂ ಕಾಪಾಡಿಕೊಳ್ಳುತ್ತಾ, ಸ್ವಯಂ ಕಾವಲು ಕಾಯುತ್ತಾ, ನಮ್ಮ ನೈಪುಣ್ಯತೆ, ಕಲೆ ಪ್ರದಶರ್ಿಸೋಣ, ಹಣವನ್ನು ಸಂಪಾದಿಸೋಣ. ಸುರಕ್ಷಿತವಾಗಿ ಕೆಳಗೆ ಇಳಿಯೋಣ. ಇದೇ ಯೋಗ್ಯ ವಿಧಾನವಾಗಿದೆ.
ಬುದ್ಧರ ಪ್ರಕಾರವು ಮೇಲಿನ ಶಿಷ್ಯನ ಅಭಿಪ್ರಾಯದಂತೆ ನನ್ನನ್ನು ನಾನೇ ರಕ್ಷಿಸಿಕೊಳ್ಳುವೆ ಎಂಬುದು ಸೂಕ್ತವಾಗಿದೆ. ನಾವು ಹೀಗೆಯೇ ಸ್ಮೃತಿಯಿಂದ ಇದನ್ನು ಅಭ್ಯಸಿಸಬೇಕಾಗಿದೆ, ಹಾಗೆಯೇ ನಮ್ಮನ್ನು ಕಾಪಾಡಬೇಕಾಗಿದೆ. ಹೀಗೆ ಒಬ್ಬನು ತನ್ನನ್ನು ರಕ್ಷಿಸುತ್ತಾ, ಪರರನ್ನು ಕಾಪಾಡುತ್ತಾನೆ. ಹಾಗೆಯೇ ಪರರನ್ನು ಕಾಪಾಡುತ್ತಾ ತನ್ನನ್ನು ರಕ್ಷಿಸಿಕೊಳ್ಳುತ್ತಾನೆ. ಹೀಗೆ ನಿರಂತರ ಅಭ್ಯಾಸದಿಂದ ಸಾಧಿಸುತ್ತಾನೆ. ಆತನು ಸಹನೆಯನ್ನು, ಅಹಿಂಸೆಯನ್ನು, ಮೈತ್ರಿಯನ್ನು ಮತ್ತು ಅನುಕಂಪವನ್ನು ಅಭ್ಯಸಿಸುತ್ತಾನೆ. ಆದ್ದರಿಂದಾಗಿ ಈ ಸದ್ಗುಣಗಳನ್ನು ಅಭ್ಯಸಿಸುತ್ತ ಒಬ್ಬನು ಸ್ವರಕ್ಷಣೆಯನ್ನು ಪಡೆದು ಪರರನ್ನೂ ಕಾಪಾಡುತ್ತಾನೆ. ಆದರೆ ಇದನ್ನು ಯೋಗ್ಯ ಸ್ಮೃತಿಯಿಂದ ಬೆಳೆಸಬೇಕಾಗುತ್ತದೆ.
ಆದರೆ ತನ್ನ ಹಿತವನ್ನು ಕಾಪಾಡಿಕೊಳ್ಳುವುದನ್ನು ಅಹಂವಾದವೆಂದು ಅಥವಾ ಸ್ವಾರ್ಥವೆಂದು ತಪ್ಪಾಗಿ ಭಾವಿಸಬಾರದು. ತನ್ನ ಹಿತವನ್ನು ಕಾಪಾಡಿಕೊಳ್ಳುವುದು ಎಂದರೆ ಸ್ವಾರ್ಥವಲ್ಲ. ಅದು ಸ್ವ-ಹಿತ ಅಂದರೆ ಅದು ಲೋಭದಿಂದ ಪ್ರೇರೇಪಿತವಾದುದಲ್ಲ. (ಸ್ವ-ಹಿತದಿಂದ ಪರರಿಗೆ ಎಳ್ಳಷ್ಟೂ ಹಾನಿಯಿಲ್ಲ, ಆದರೆ ಸ್ವಾರ್ಥದಿಂದ ಪರರಿಗೆ ಅಪಾರ ನಷ್ಟವಾಗುತ್ತದೆ). ಲೋಭ ಪ್ರೇರಿತ ಕಾರ್ಯದಿಂದ, ಸ್ವಾರ್ಥದಿಂದ ಸ್ವಹಿತವಾಗುವುದಿಲ್ಲ. ಸೇವೆಗೆ ತನ್ನ ಸಮಪರ್ಿಸುವುದು ಎಂದರೆ ಶಿಸ್ತನ್ನು ಪಾಲಿಸುವುದು. ನೈತಿಕ ಮತ್ತು ಮಾನಸಿಕ ಸುಶಿಕ್ಷಣವಾಗಿದೆ. ಈ ಸದ್ಗುಣಗಳನ್ನು ಪಾಲಿಸುವಾಗ ಒಬ್ಬನು ಪರರಿಗೂ ಪರೋಕ್ಷವಾಗಿ ಉನ್ನತವಾದ ಸೇವೆ ಸಲ್ಲಿಸುತ್ತಿರುತ್ತಾನೆ. ಒಬ್ಬನು ನೈತಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲನಾಗಿರುವಾಗ ಹೇಗೆ ತಾನೆ ಪರರಿಗೆ ನೈಜ್ಯ ಸೇವೆ ಮಾಡುವನು?
ಯಾವುದೇ ಪಾಪಮಾಡದೆ, ಕುಶಲ ಕಾರ್ಯಗಳನ್ನು ಮಾಡುತ್ತಾ, ದಾನ ಮಾಡುತ್ತಾ, ಚಿತ್ತವನ್ನು ಪರಿಶುದ್ಧಿಗೊಳಿಸುತ್ತ ನಾವು ನಮಗೂ ಮತ್ತು ಪರರಿಗೂ ಸೇವೆ ಸಲ್ಲಿಸುವೆವು. ಇದೇ ಬುದ್ಧರ ಬೋಧನೆಯ ಸಾರವಾಗಿದೆ. ಯಾವ ಪಾಪವನ್ನು ಮಾಡದೆ ಇರುವುದೆಂದರೆ, ಅಕುಶಲ ಮೂಲಗಳಾದ ಲೋಭ, ದ್ವೇಷ ಮತ್ತು ಮೋಹಗಳಿಂದ ಪ್ರೇರೇಪಿತರಾಗಿ ಕಾಯಾ ವಾಚಾ ಮತ್ತು ಮಾನಸಿಕವಾಗಿ ಯಾವುದೇ ಪಾಪವನ್ನು ಮಾಡಿದಿರುವುದೇ ಆಗಿದೆ. ಇನ್ನೊಂದೆಡೆ ನಾವು ಕರುಣೆ ಮತ್ತು ಪ್ರಜ್ಞಾದ ವಿಕಾಸಕ್ಕಾಗಿ ನಿರಂತರ ಯೋಗ್ಯ ಶ್ರಮಪಡುತ್ತಿರಬೇಕಾಗುತ್ತದೆ. ಇದೇ ಕುಶಲವನ್ನು ಆಚರಿಸುವುದರ ಅರ್ಥವಾಗಿದೆ. ನಮ್ಮ ಮನಸ್ಸಿನಲ್ಲಿರುವ ಅಕುಶಲ ಪಾಪದ ಯೋಚನೆಗಳನ್ನು, ಸ್ಥಿತಿಗಳನ್ನು ಕ್ಷೀಣಿಸಿ ಕೊನೆಗೆ ಪೂರ್ಣ ನಿಮರ್ೂಲ ಮಾಡುವುದೇ ಚಿತ್ತ ಪರಿಶುದ್ಧತೆ ಆಗಿದೆ. ಜೊತೆಗೆ ನಾವು ಮೈತ್ರಿಯ ಮತ್ತು ಕರುಣೆಯ ಉದಾತ್ತ ಮನೋಸ್ಥಿತಿಗಳನ್ನು ಯಾವುದೇ ಪಕ್ಷಪಾತಗಳಿಲ್ಲದೆ ಸರ್ವರಲ್ಲೂ ಪ್ರಸರಿಸಬೇಕಾಗುತ್ತದೆ. ನಾವು ಈ ರೀತಿ ಮೆತ್ತಾವನ್ನು ಸರ್ವಜೀವಿಗಳಲ್ಲಿ ಪ್ರಸರಿಸುತ್ತ ಅವರೆಲ್ಲರ ಸುಖ ಮತ್ತು ಕ್ಷೇಮ ಹೃತ್ಪೂರ್ವಕವಾಗಿ ಆಶಿಸಬೇಕಾಗಿದೆ. ಆ ಎಲ್ಲಾ ಜೀವಿಗಳೂ ಎಲ್ಲಾಬಗೆಯ ಹಿಂಸೆಯಿಂದ, ಅಪಾಯಗಳಿಂದ, ನೋವುಗಳಿಂದ ಮತ್ತು ದುಃಖಗಳೆಲ್ಲದರಿಂದ ಪಾರಾಗಲಿ, ಮುಕ್ತಿ ಹೊಂದಲಿ.

ನೀವು ಸಹಾ ಸುಖಿಯಾಗಿರಿ ಮತ್ತು ಕ್ಷೇಮವಾಗಿರಿ. 
ನಿಮ್ಮ ಮತ್ತು ಎಲ್ಲರ ಸಮಸ್ಯೆಗಳು ಅಂತ್ಯವಾಗಲಿ.

- ಂ - ಂ - ಂ  

drksridhammananda ಮಾನವ ಮತ್ತು ಸಮಾಜ

                                         ಅಧ್ಯಾಯ - 4
                                 ಮಾನವ ಮತ್ತು ಸಮಾಜ

4.1 ಮಾನವನ ಅದ್ವಿತೀಯ ಸ್ಥಾನಮಾನ
ಹಿಂದಿನ ಪುಟವನ್ನು ಕೆಲವರು ಅದು ಮಾನವತೆಯ ಬಗ್ಗೆ ನಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದೆ ಎಂದು ವಾದಿಸಬಹುದು. ಆತನನ್ನು ಕೆಳಸ್ಥಾನಕ್ಕೆ ತಂದಿದೆ ಎಂದು ವಾದಿಸಬಹುದು ಮತ್ತು ಆತನು ತತ್ವಶಾಸ್ತ್ರದಲ್ಲಿ, ಧರ್ಮದಲ್ಲಿ, ಮನಶಾಸ್ತ್ರದಲ್ಲಿ, ವಿಜ್ಞಾನದಲ್ಲಿ, ಕಲೆಯಲ್ಲಿ, ವಾಸ್ತುಶಿಲ್ಪದಲ್ಲಿ, ಸಾಹಿತ್ಯದಲ್ಲಿ ಮತ್ತು ಸಂಸ್ಕೃತಿಯ ಅಭಿವೃದ್ಧಿಯಲ್ಲಿ ಮತ್ತಿತರ ವಿಭಾಗಗಳಲ್ಲಿ ಆತನು ಮಾಡಿರುವ ಸಾಧನೆ ಕಡಿಮೆಯೇನು ಎಂದು ಪ್ರಶ್ನಿಸಬಹುದು. ಅದಕ್ಕೆ ದೂರವೆಂಬಂತೆ ಈ ಬ್ರಹ್ಮಾಂಡ ಪ್ರಕರಣದಲ್ಲಿ ಮಾನವರು ತಮಗೆ ಅದ್ವಿತೀಯ ಸ್ಥಾನವಿದೆ ಎಂದು ಕಲ್ಪಿಸುತ್ತಾರೆ. ಏಕೆಂದರೆ ಅವರಿಗೆ ಅಪೂರ್ವವಾದ ವಿಶೇಷ ಸಾಮಥ್ರ್ಯವಿದೆ. ಅವರು ಬೇರೆ ಜೀವಿಗಳಿಗಿಂತ ಸುಲಭವಾಗಿ ಮುಕ್ತಿ ಪಡೆಯಬಹುದು. ಇದಕ್ಕೆ ಮೂರು ಕಾರಣಗಳಿವೆ.
ಮಾನವ ಜಗತ್ತು ಸುಖ ಮತ್ತು ದುಃಖಗಳ ಸಮತೋಲಿತ ಮಿಶ್ರಿತ ಲೋಕವಾಗಿದೆ. ಯಾವಾಗ ಸುಗತಿಯ ಲೋಕದ ಜೀವಿಗಳಂತೆ ಸುಖವು ತೀಷ್ಣವಾಗಿದ್ದರೆ ಅಥವಾ ದುರ್ಗತಿಯ ಜೀವಿಗಳ ತರಹ ದುಃಖವೇ ಅಪಾರವಾಗಿದ್ದರೆ ಒಬ್ಬನ ಮನಸ್ಸು ಪರಮಾರ್ಥದೆಡೆಗೆ ಬಾಗದು. ಬೌದ್ಧರು ದೇಹದಂಡನೆಯನ್ನು ಮತ್ತು ಅತಿಬೋಗವನ್ನು ಪ್ರಜ್ಞಾವಿಕಾಸಕ್ಕೆ ಸಹಕಾರಿಯಲ್ಲ ಎಂದು ಅವೆರಡನ್ನು ನಿರಾಕರಿಸುತ್ತಾರೆ. ಅತಿಬೋಗ ಮತ್ತು ಅತಿ ದೇಹದಂಡನೆಗೆ ಮೀರಿದ ಮಧ್ಯಮ ಮಾರ್ಗವು ಸಮರ್ಥನೀಯವಾಗಿದೆ ಮತ್ತು ಮಾನವನಿಗೆ ಮಾನವ ಲೋಕವು ಮಧ್ಯಮ ಮಾರ್ಗವನ್ನು ಕ್ರಮಿಸಲು ಅವಕಾಶವನ್ನು ನೀಡಿದೆ. ಎರಡನೆಯ ಕಾರಣವು ಏನೆಂದರೆ ಮಾನವನು ಅಲ್ಪಾಯು ಆಗಿದ್ದಾನೆ ಮತ್ತು ಹೀಗಾಗಿ ಸಾವಿನಕಾಲ ಅನಿಶ್ಚಿತತೆಯಿಂದ ಕೂಡಿದೆ.
ಸಾವನ್ನು ಅತಿ ಸನಿಹದಿಂದ, ಬೇಗನೆ ಬರುವುದನ್ನು ಕಂಡವರು ಧಮ್ಮದಕಡೆ ವಾಲುತ್ತಾರೆ ಮತ್ತು ಮೂರನೆಯ ಕಾರಣವೇನೆಂದರೆ ಬೇರೆ ಲೋಕಗಳಲ್ಲಿರುವ ಜೀವಿಗಳು ಕೇವಲ ತಮ್ಮ ಹಿಂದಿನ ಕರ್ಮಗಳ ಫಲವನ್ನು ಪಡೆದು ಅನುಭವಿಸುವುದರಲ್ಲೇ ಇರುತ್ತಾರೆ. ಆದರೆ ಮಾನವ ಮಾತ್ರ ನೂತನ ಕರ್ಮಗಳನ್ನು ಮಾಡುವ ಅವಕಾಶಗಳನ್ನು ಹೊಂದಿರುವ ಸುಸ್ಥಾನದಲ್ಲಿದ್ದಾನೆ. ಆದ್ದರಿಂದ ಹೀಗೆ ಆತನು ತನ್ನ ಅದೃಷ್ಟಕ್ಕೆ ಸುರೂಪ ರಚಿಸಲು ಸಮರ್ಥನಾಗಿದ್ದಾನೆ.
ಇವೆಲ್ಲವೂ ಮಾನವನಿಗೆ ಮಾನವ ಲೋಕದಲ್ಲಿಯೇ, ತನ್ನ ವಿಮುಕ್ತಿಗೆ ಶ್ರಮಿಸಲು ಹೊಣೆಗಾರಿಕೆ ನೀಡಿದ ಆತನು ತನಗೆ ತಾನೆ ಸೃಷ್ಟಿಕರ್ತ ಮತ್ತು ರಕ್ಷಕನಾಗಿದ್ದಾನೆ. ಬಹಳಷ್ಟು ಜನರು ಧರ್ಮವು ಸ್ವರ್ಗದಿಂದ ಬಂದಿದೆ ಎಂದು ಹೇಳುತ್ತಾರೆ. ಆದರೆ ಬೌದ್ಧರು ಅರಿತಿರುವುದು ಏನೆಂದರೆ ಬುದ್ಧಧಮ್ಮವು ಭೂಮಿಯಿಂದ ಆರಂಭವಾಗಿ ಸ್ವರ್ಗವನ್ನು ತಲುಪಿದೆ.
ಇದರಿಂದ ಗೊತ್ತಾಗುವುದು ಏನೆಂದರೆ ಪ್ರತಿಯೊಬ್ಬ ಮಾನವನಲ್ಲೂ ಬುದ್ಧ ಬೀಜವಿರುತ್ತದೆ. ಅಂದರೆ ಬುದ್ಧರ ಪ್ರಚನ್ನತೆ ಅಥವಾ ಪರಿಪೂರ್ಣತೆಯ ಪ್ರಚನ್ನತೆಯಿರುತ್ತದೆ. ಅದನ್ನು ಆತನು ಯಾವುದೇ ಬಾಹ್ಯ ಸಹಾಯವಿಲ್ಲದೆ ಬೆಳವಣಿಗೆಗೊಳಿಸಬೇಕಾಗುತ್ತದೆ. ಆದರೆ ಬುದ್ಧರಾಗಲು ಮಾನವರಾಗಿಯೇ ಹುಟ್ಟಬೇಕಾಗುತ್ತದೆ. ಏಕೆಂದರೆ ಇಲ್ಲಿ ಮಾತ್ರ ಆತನು ಪೂರ್ಣವಾಗಿ ಅಸ್ತಿತ್ವನ್ನು ಅನುಭವಿಸುತ್ತಾನೆ. ಮಾನವನ ಕುರಿತ ವಿಪರ್ಯಾಸದ ದೃಷ್ಟಿಕೋನದ ಬಗ್ಗೆ ಷೇಕ್ಸ್ಪಿಯರ್ನ ಈ ನಿಲುವನ್ನು ಬೌದ್ಧರು ಖಂಡಿತವಾಗಿ ಒಪ್ಪುತ್ತಾರೆ.
ಮಾನವ ಎಂತಹ ಕಲಾಕೃತಿಯ ಮಾದರಿ, ಆತನ ಬುದ್ಧಿಮತ್ತೆಯು ಅದೆಷ್ಟು ಉದಾತ್ತ, ಆಕಾರದಲ್ಲಿ ಹಾಗು ಚಲನೆಯಲ್ಲಿಯೂ ಆತನ ಅಂಗಾಂಗಗಳು ಅದೆಷ್ಟು ಅನಂತ, ಆತನ ವ್ಯಕ್ತತೆಯು ಹಾಗು ಕ್ರಿಯೆಯು ಶ್ಲಾಘನೀಯವಾದುದು. ಗ್ರಹಣಾಶಕ್ತಿಯಲ್ಲಿ ಆತನು ದೇವತೆಯೇ ಸರಿ. ಜಗತ್ತಿನ ಸುಂದರತೆಯಲ್ಲಿ ಆತನು ದೇವರೇ ಆಗಿದ್ದಾನೆ. ಪ್ರಾಣಿಗಳಲ್ಲಿ ಆದರ್ಶ ಶಿರೋಮಣಿಯಾಗಿರುವನು; ಆದರೂ ನನಗೆ ಏನಿದು ಧೂಳಿನ ಶುದ್ಧಸಾರತತ್ವವೇ?
- ಹಾಮ್ಲೆಟ್
ಬಹಳಷ್ಟು ವಿಷಯಗಳಲ್ಲಿ ಮಾನವನು ಅಜ್ಞಾನಿಯೇ, ಆದರೂ ಜೀವಿಗಳಲ್ಲೆಲ್ಲಾ ಉನ್ನತನಾಗುವ ಪ್ರಚನ್ನತೆಯು (ಸಮ್ಮಾಸಂಬುದ್ಧ) ಆತನಲ್ಲಿದೆ. ಕೆಲವರು ಮಾನವ ಜೀವಿತವನ್ನು ಸ್ವರ್ಗ ಮತ್ತು ನರಕಗಳ ನಡುವಿದೆ ಎನ್ನುತ್ತಾರೆ. ಏಕೆಂದರೆ ಮಾನವನ ಮನಸ್ಸನ್ನು ಸುಲಭವಾಗಿ ಸ್ವರ್ಗದ ಆನಂದ ಅನುಭೂತಿ ತಿಳಿಯುವಂತೆ ವೃದ್ಧಿಗೊಳಿಸಬಹುದು. ಹಾಗೆಯೇ ಹಾದಿ ತಪ್ಪಿದರೆ ನಕರದಂತಹ ದುಃಖವನ್ನು ಸಹಾ ಇಲ್ಲೇ ಆತನು ಕಾಣಬಹುದು. ಮಾನವತೆಗೆ ಸಂಬಂಧಪಟ್ಟಂತೆ ಇದ್ದರೆ ಅ ಮಾನವನು ಮಾನವನೇ, ಇಲ್ಲದೆ ಹೋದರೆ ಮಾನವತೆಯ ದ್ವೇಷಿಯಾಗುತ್ತಾನೆ.
ಅಹಂಕಾರಿಗೆ ಸ್ವರ್ಗವಿಲ್ಲ, ಅಸೂಯೆಪರನಿಗೆ ನೆರೆಹೊರೆಯವರು ಇಲ್ಲ, ಕೋಪಿಷ್ಟನು ತನಗೆ ತಾನೇ ಇಲ್ಲ. ಚೀನಾ ತತ್ವಶಾಸ್ತ್ರ.
ತಾನೇ ಒಂಟಿಯಾಗಿರುವುದು ಅಸಹಾಯತನ, ಆದ್ದರಿಂದ ಸಾಮಾಜಿಕ ಜೀವನವು ಮಾನವನಿಗೆ ಸಹಕಾರದ ಶಕ್ತಿಯನ್ನು ನೀಡಿದೆ, ಸಮಾಜವಿಲ್ಲದೆ ಮಾನವ, ಮಾನವನೆ ಅಲ್ಲ. ಮಾನವ ಪ್ರಕೃತಿಯೊಡನೆ ಒಂದು (ಗ್ರೀಕ್ ತತ್ವಜ್ಞಾನಿ).
ಬುದ್ಧರ ಬೋಧನೆಯಲ್ಲಿ ಕಾಣಿಸುವುದು ಏನೆಂದರೆ ಐದು ಇಂದ್ರೀಯಗಳ ವಿಷಯಗಳು ಪ್ರಭಾವಶಾಲಿಯಾಗಿದ್ದರೆ, ಇಷ್ಟಕರವಾಗಿದ್ದಕ್ಕೆ ಸಂತೈಸುವಂತಿದ್ದರೆ ಆತನು ಸ್ವಗರ್ಿಯ ಸುಖ ಅನುಭವಿಸಿದಂತೆ, ಹಾಗಲ್ಲದೆ ವಿಷಯಗಳು ಕಿರುಕುಳಕಾರಿಯಾಗಿದ್ದರೆ, ತೊಂದರೆಯನ್ನು ಕ್ಷೊಭೆಯನ್ನುಂಟು ಮಾಡುವವಾಗಿದ್ದರೆ ಆ ದುಃಖವು ನರಕದಂತೆಯೇ ಸರಿ.






4.2 ಪರರೊಂದಿಗೆ ಸೌಹಾರ್ದತೆಯಿಂದ ಜೀವಿಸುವಿಕೆ
ಸುಖಯುತ ಜೀವನಕ್ಕಾಗಿ ಪ್ರಧಾನವಾದ ಸೂತ್ರವೇನೆಂದರೆ ಪರರೊಂದಿಗೆ ಸೌಹಾರ್ದತೆಯಿಂದ ಜೀವಿಸುವ ಸಾಮಥ್ರ್ಯವೇ ಆಗಿದೆ. ಇದನ್ನು ಸಾಧಿಸಲು ನಾವು ಅರ್ಥಮಾಡಿಕೊಳ್ಳುವುದೇನೆಂದರೆ ಇದೇ ಗುರಿ ಸಾಧಿಸಲು ಜನರು ಹಲವಾರು ದಾರಿಗಳನ್ನು ಬಳಸುತ್ತಾರೆ. ಆದ್ದರಿಂದ ಬೇರೆ ಜನರಲ್ಲಿ ವಿವಿಧ ಅಭಿಪ್ರಾಯಗಳಿದ್ದರೂ ವಿಭಿನ್ನ ಸಂಪ್ರದಾಯಗಳಿದ್ದರೂ ಸಹ ನಾವು ಅನುಚಿತವಾಗಿ ತಲೆಕೆಡಿಸಿಕೊಳ್ಳಬಾರದು.
ನಾವು ಸದಾ ಪರಿವರ್ತನಾಶೀಲ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಆದ್ದರಿಂದಾಗಿ ನಾವು ಕುರುಡುತನದಿಂದಾಗಿ ಸಂಪ್ರದಾಯಗಳಿಗೆ, ರೂಢಿಗಳಿಗೆ, ವರ್ತನೆಗಳಿಗೆ, ವಿಧಿ ಸಂಸ್ಕಾರ ಇತ್ಯಾದಿಗಳಿಗೆ ನಾವು ಅಂಟಬಾರದು. ಅವೆಲ್ಲ ಆ ಕಾಲದಲ್ಲಿ ನಮ್ಮ ಪೂರ್ವಜರು ಅವರ ಅರಿವಿನ ಸಾಮಥ್ರ್ಯದಂತೆ ಪಾಲಿಸಿಕೊಂಡು ಬಂದಿದ್ದಾರೆ. ಕೆಲವು ರೂಢಿ ಮತ್ತು ಸಂಪ್ರದಾಯಗಳು ಒಳ್ಳೆಯದಾಗಿವೆ. ಅಥವಾ ಅವುಗಳಿಂದ ಯಾವುದೇ ಹಾನಿಯಿಲ್ಲ. ಹಾಗೆಯೇ ಇನ್ನೂ ಕೆಲವು ಕಡಿಮೆ ಉಪಯುಕ್ತವಾಗಿದೆ. ನಾವು ತೆರೆದ ಮನಸ್ಸಿನಿಂದಾಗಿ ಆ ವಿಧಿ ಸಂಸ್ಕಾರಗಳಲ್ಲಿ ಹಿತಸುಖವಿದ್ದರೆ ಮತ್ತು ಆಧುನಿಕ ಜಗತ್ತಿಗೂ ಹೊಂದುವಂತಿದ್ದರೆ, ಯಾರಿಗೂ ಯಾವುದೇ ಹಾನಿಯಿಲ್ಲದಿದ್ದರೆ ಮುಂದುವರೆಸಬಹುದಾಗಿದೆ.
ಕೆಲವು ಹಿರಿಯರಿದ್ದಾರೆ ಅವರು ಆಧುನಿಕ ಭಾವನೆಗಳಿಗಾಗಲಿ ಅಥವಾ ಜೀವನ ಹಾದಿಗಳಿಗಾಗಲಿ ಸಹಿಸಲಾರರು. ಅವರು ಇಷ್ಟಪಡುವುದು ಏನೆಂದರೆ ಅದೇ ಪುರಾತನ ವಿಭಿನ್ನ ಸಂಪ್ರದಾಯಗಳನ್ನು ತಮ್ಮ ಮಕ್ಕಳು ಸಹಾ ಪಾಲಿಸಲೆಂದು ಆಶಿಸುತ್ತಾರೆ. ಅದಕ್ಕೆ ಬದಲಾಗಿ ಅಂತಹ ಕ್ರಿಯೆಗಳಲ್ಲಿ ಯಾವುದೇ ಹಾನಿಗಳಿಲ್ಲದಿದ್ದರೆ ತಮ್ಮ ಯುವ ಜನಾಂಗವನ್ನು ಹಾಗೆ ಮಾಡಲು ಅನುಮತಿಸಬೇಕು. ಹೇಗಾದರೂ ಯಾರು ತಮಗೆ ತಾವೇ ಸಹಾಯ ಮಾಡಿಕೊಳ್ಳಲಾರರೊ, ಅಂತಹವರಿಗೆ ಯಾವರೀತಿಯ ಪ್ರಯತ್ನದಿಂದಲೂ ಉಪಯೋಗವಿಲ್ಲ. ಒಬ್ಬನು ಹತ್ತಲು ತಾನೇ ಇಷ್ಟಪಡದಿದ್ದರೆ, ನೀವು ಮೇಲಕ್ಕೆ ತಳ್ಳಿ ಆತನನ್ನು ಹತ್ತಿಸಲಾರಿರಿ (ಆಂಡ್ರೇ ಕಾನರ್ೆಗೀ).
ಹೃದಯದಲ್ಲಿ ಸತ್ಯತೆಯಿದ್ದರೆ, ಚಾರಿತ್ರ್ಯದಲ್ಲಿ ಸುಂದರತೆ ಇರುತ್ತದೆ. ಚಾರಿತ್ರ್ಯದಲ್ಲಿ ಸುಂದರತೆಯಿದ್ದರೆ, ಮನೆಯಲ್ಲಿ ಸೌಹಾರ್ದತೆಯಿರುತ್ತದೆ. ಮನೆಯಲ್ಲಿ ಸೌಹಾರ್ದತೆಯಿದ್ದರೆ ದೇಶದಲ್ಲಿ ವ್ಯವಸ್ಥತೆ ಇರುತ್ತದೆ. ದೇಶದಲ್ಲಿ ವ್ಯವಸ್ಥತೆ ಇದ್ದಾಗ ಜಗತ್ತಿನಲ್ಲಿ ಶಾಂತಿಯು ಇರುತ್ತದೆ.



4.3 ಭಿನ್ನತೆಯ ಹಕ್ಕಿಗಾಗಿ ಪರರಿಗೆ ಅನುಮತಿಸುವಿಕೆ
ನಾವಿಂದು ಜೀವಿಸುತ್ತಿರುವ ಜಗತ್ತಿನಲ್ಲಿ ಬಲಿಷ್ಟತೆಯೇ ಸತ್ಯಕ್ಕಿಂತ ಬಲಯುತವಾದುದು ಎಂಬುದು ಚಲಾವಣೆಯಲ್ಲಿದೆ. ಇಲ್ಲಿ ಬಲಿಷ್ಠನು ದುರ್ಬಲರಿಂದ ಲಾಭ ಪಡೆದುಕೊಳ್ಳುತ್ತಿದ್ದಾನೆ. ಶ್ರೀಮಂತನು ಬಡವನನ್ನು ಶೋಷಣೆ ಮಾಡುತ್ತಿದ್ದಾನೆ. ಈ ರೀತಿಯಾಗಿ ವತರ್ಿಸುವುದನ್ನು ನಾವು ತಡೆಯಬೇಕಾಗಿದೆ. ಯಾವುದೇ ದೃಷ್ಟಿಕೋನಗಳಿಗೆ ಒಪ್ಪದಿದ್ದರೆ ಕಡೆಪಕ್ಷ ಒಪ್ಪದಿರುವುದಕ್ಕೆ ಒಪ್ಪಬೇಕು. ನಾವು ನಮ್ಮ ದೃಷ್ಟಿಕೋನಗಳನ್ನು ಸಭ್ಯವಾಗಿ ಮತ್ತು ವಿನಮ್ರವಾಗಿ ವ್ಯಕ್ತಪಡಿಸಬೇಕು ಹೊರತು ಪರರ ಮೇಲೆ ಬಲಪ್ರಯೋಗದಿಂದ ನಮ್ಮ ದೃಷ್ಟಿಕೋನವನ್ನು ಹೊರಿಸಬಾರದು.
ಯಾರು ತಮ್ಮ ವಿರೋಧಿಗಳನ್ನು ಭೌತಿಕ ಬಲಪ್ರಯೋಗದಿಂದ ಗೆಲ್ಲುವುದರಿಂದಾಗಿ ಸ್ಪಷ್ಟವಾಗಿ ಸೂಚಿಸುವುದು ಏನೆಂದರೆ ಅವರು ವಿರೋಧಿಗಳು ಸಹ ಉದಾತ್ತ ಮಾನವರೇ ಎಂದು ಮರೆತುಹೋಗಿರುವುದು ಹಾಗು ಮನದಟ್ಟು ಮಾಡುವ ಸಾಮಥ್ರ್ಯ ಅವರಲ್ಲಿ ಇಲ್ಲದಿರುವುದು ಕಾಣಿಸುತ್ತದೆ. ಯಾರು ನಮ್ಮನ್ನು ಒಪ್ಪುವರೋ ಅವರಲ್ಲಿ ಹಿತವನ್ನು ಕಾಣುತ್ತೇವೆ. ಆದರೂ ಎಲ್ಲಿ ವಿಭಿನ್ನ ದೃಷ್ಟಿಕೋನಗಳ ಸನ್ನಿವೇಶಗಳಿರುವವೊ ಅಲ್ಲಿ ವೈಯುಕ್ತಿಕ ಬೆಳವಣಿಗೆ ವೃದ್ಧಿಯಾಗುತ್ತದೆ.
ಕೆಲವೊಮ್ಮೆ ಪರರಲ್ಲಿ ನಮ್ಮ ಅಭಿಪ್ರಾಯಗಳು ಅಥವಾ ಕ್ರಿಯೆಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ನಾವು ಕೇಳಲು ಇಚ್ಛಿಸಲಾರೆವು. ಆದರೂ ನಾವು ಅವುಗಳನ್ನು ಎಚ್ಚರದಿಂದ ಆಲಿಸಿದರೆ, ಅವರ ಅಭಿಪ್ರಾಯದಲ್ಲಿ ಸತ್ಯವಿರುವುದು ಕಂಡುಬರುತ್ತದೆ. ನಮ್ಮ ಜೀವನದ ಹಾದಿಯನ್ನು ಬದಲಿಸಲು ಸಿದ್ಧವಿದ್ದರೆ ಇದರಿಂದಾಗಿ ನಮ್ಮ ಸ್ವ-ಅಭಿವೃದ್ಧಿಗೆ ಅವಕಾಶವು ಸಿಗುತ್ತದೆ.
ಈ ಜಗತ್ತು ವಿವಿಧ ಪುಷ್ಪಗಳ ಉದ್ಯಾನವನದಂತೆ, ಹೇಗೆ ದುಂಬಿಯು ಜೇನನ್ನು ಹೂವಿನಿಂದ ಹೂವಿಗೆ ಹೋಗಿ ಸಂಗ್ರಹಿಸುತ್ತದೆಯೋ ಹಾಗೆಯೇ ನಾವು ಸಹಾ ಯಾವುದು ಒಳಿತೊ ಅದನ್ನು ಸಂಗ್ರಹಿಸಿ, ಯಾವುದು ಅನುಪಯುಕ್ತವೊ ಅದನ್ನು ಹಿಂದೆಯೇ ಬಿಟ್ಟಿಬಿಡಬೇಕು. ನಾವೇನಾದರೂ ಮಾಡಲು ಮುಂದಾದಾಗ ಪ್ರತಿಯೊಬ್ಬರನ್ನೂ ಸಂಸತಪಡಿಸುವುದು ಅಸಾಧ್ಯವಾಗಿದೆ. ಏಕೆಂದರೆ ಯಾವುದೇ ವಿಷಯದಲ್ಲಿಯಾಗಲಿ ವಿಭಿನ್ನ ವ್ಯಕ್ತಿಗಳು ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ. ನೀವೇನಾದರೂ ಮುರ್ಖರೊಂದಿಗೆ ವಾದಿಸಲು ತೊಡಗಿದರೆ ನಿಮ್ಮನ್ನೇ ಮೂರ್ಖರನ್ನಾಗಿಸಿಕೊಳ್ಳುವಿರಿ.
ಜಗತ್ತಿನ ಪ್ರತಿಯೊಬ್ಬ ಮತ್ತು ಎಲ್ಲರನ್ನು ನೀವು ತಿದ್ದಲಾರಿರಿ. ಅಂತಹ ಭರವಸೆಯಿಂದ ಶಾಂತಿಯನ್ನು ನೀವು ಪಡೆಯಲಾರಿರಿ. ಅದೇರೀತಿಯಾಗಿ ಜಗತ್ತಿನ ಎಲ್ಲಾ ಕಲ್ಲು ಮುಳ್ಳುಗಳನ್ನು ತೆಗೆದು ಮೃದುವಾದ ನಡೆಯುವ ಹಾದಿಯನ್ನು ಮಾಡಲಾರಿರಿ.
ಅದೇರೀತಿಯಾಗಿ ನಾವು ಇಂದ್ರೀಯಗಳನ್ನು ರಕ್ಷಿಸಬೇಕು. ಇಂದ್ರೀಯ ದ್ವಾರಗಳಲ್ಲಿ ಜಾಗರೂಕತೆಯಿಂದ ಇರಬೇಕು. ಏಕೆಂದರೆ ಜಗತ್ತಿನಲ್ಲಿ ತೊಂದರೆಯುಂಟುಮಾಡುವ ಕ್ಷೊಭೆಯನ್ನುಂಟು ಮಾಡುವ ವಿಷಯಗಳೆಲ್ಲವನ್ನು ನೀವು ತೆಗೆಯಲಾರಿರಿ. ಆದರೆ ಇಂದ್ರೀಯಗಳಲ್ಲಿ ಜಾಗರೂಕರಾಗಿ ಮನಶ್ಶಾಂತಿಯನ್ನು ಸ್ಥಾಪಿಸಬಹುದಾಗಿದೆ. ಜನರು ತಪ್ಪಾಗಿದ್ದರೆ ಅವರನ್ನು ಸರಿಹಾದಿಗೆ ತರಲು ಹಲವು ಹಾದಿಗಳಿವೆ. ಆದರೆ ಟೀಕಿಸುವುದರಿಂದ, ದೋಷಿಸುವುದರಿಂದಾಗಿ ಮತ್ತು ಸಾರ್ವಜನಿಕವಾಗಿ ಕೂಗುವುದರಿಂದಾಗಿ ನೀವು ಅವರನ್ನು ತಿದ್ದಲಾರಿರಿ. ಆದರೆ ಹಾಗೆ ಮಾಡುವುದರಿಂದ ಅವರನ್ನು ಅವರ ದೃಷ್ಟಿಗಳಲ್ಲಿ ಇನ್ನೂ ಮೊಂಡರನ್ನಾಗಿ ಮಾಡುವಿರಿ.
ಹಾಗಲ್ಲದೆ ನೀವು ಚಾತುರ್ಯದಿಂದ ಅವರ ತಪ್ಪುಗಳನ್ನು ತೋರಿಸಿದಾಗ, ಅವರು ನಿಮ್ಮ ಮಾತುಗಳನ್ನು ಕೇಳಲು ಇನ್ನೂ ಇಷ್ಟಪಡುತ್ತಾರೆ. ಹಾಗು ನಿಮ್ಮ ಅನುಕಂಪ ಮತ್ತು ಮಾರ್ಗದರ್ಶತೆಗೆ ಒಂದಲ್ಲ ಒಂದುದಿನ ಧನ್ಯವಾದವನ್ನು ಅಪರ್ಿಸುವರು.
ದೀರ್ಘವಾದ ವಾದ-ವಿವಾದದ ಅರ್ಥವೇನೆಂದರೆ ಎರಡು ಪಕ್ಷದವರು (ಕಡೆಯವರು) ತಪ್ಪಿನಲ್ಲಿದ್ದಾರೆ ಎಂದೆ (ವಾಲ್ಟೆಯರ್).




4.4 ನಿಮ್ಮ ವ್ಯವಹಾರಗಳ ಕಡೆ ಮಾತ್ರ ಗಮನಹರಿಸಿ
ಪರರಲ್ಲಿ ಅಸೂಯೆ ವ್ಯಕ್ತಪಡಿಸದೆ ಕೇವಲ ನಮ್ಮ ಕಾರ್ಯಗಳತ್ತಲೇ ಗಮನಹರಿಸುವುದು ಆನಂದದಾಯಕ ವಿಷಯವಾಗಿದೆ.
ಒಬ್ಬನು ಪರರ ತಪ್ಪುಗಳ ಬಗ್ಗೆ ದೋಷಿಸದಿರಲಿ, ಅವರು ಮಾಡಿರುವ ಹಾಗು ಮಾಡದಿರುವ ಬಗ್ಗೆ ಗಮನಬೇಡ. ಬದಲಾಗಿ ತನ್ನ ಕುಶಲ ಕಾರ್ಯಗಳ ಬಗ್ಗೆ ಮತ್ತು ಕರ್ತವ್ಯ ಲೋಪದ ಬಗ್ಗೆ ಒಪ್ಪಿಕೊಳ್ಳಲಿ.
ಯಾರು ಸದಾ ಪರರ ತಪ್ಪುಗಳನ್ನು ಗಮನಿಸುತ್ತಾನೋ ಅದರ ಪರಿಣಾಮವಾಗಿ ಆತನು ಕೋಪಗೊಳ್ಳುತ್ತಾನೆ. ಹೀಗಾಗಿ ಆತನ ಕಶ್ಮಲಗಳೇ ಹೆಚ್ಚಾಗುತ್ತವೆ. ಆತನು ತನ್ನ ಕಲ್ಮಶಗಳ ನಾಶದಿಂದ ದೂರವೇ ಉಳಿಯುತ್ತಾನೆ.
ಪರರ ತಪ್ಪುಗಳನ್ನು ಕಾಣುವುದು ಸುಲಭ. ಆದರೆ ತನ್ನ ತಪ್ಪುಗಳನ್ನು ಕಾಣುವುದು ಅತಿಕಷ್ಟಕರ. ಪರರ ತಪ್ಪುಗಳನ್ನು ಕಾಣುವುದು ಹೊಟ್ಟನ್ನು ತೂರುವಂತೆ ಸುಲಭವಾದುದು. ಅಂದರೆ ಕಪಟಿ ಪಕ್ಷಿ ಬೇಟೆಗಾರನು ತನ್ನನ್ನು ಅಡಗಿಸಿಕೊಳ್ಳುವಂತೆ ತನ್ನ ತಪ್ಪನ್ನು ದೋಷಿಯು ಅಡಗಿಸಿಕೊಳ್ಳುತ್ತಾನೆ (ಬುದ್ಧ ಭಗವಾನರು).
ನಿಂದೆ ಮತ್ತು ಟೀಕೆಗಳಿಂದ ಯಾರೊಬ್ಬರು ಸಹಾ ಹೊರತಾಗಿಲ್ಲ. ಇದರ ಬಗ್ಗೆ ಬುದ್ಧ ಭಗವಾನರು ಹೀಗೆ ಹೇಳುತ್ತಾರೆ: ಜನರು ಮೌನಿಯನ್ನು ನಿಂದಿಸುವರು, ಅತಿ ವಾಚಾಳಿಯನ್ನು ನಿಂದಿಸುವರು ಹಾಗೆಯೇ ಮಿತಭಾಷಿಯನ್ನೂ ನಿಂದಿಸುವರು. ಅನಿಂದಿತರು ಈ ಜಗದಲ್ಲಿ ಯಾರೂ ಇಲ್ಲ.
ಹಾಗೆಯೇ ಅವರು ಹೀಗೂ ಹೇಳಿದ್ದಾರೆ: ಪೂರ್ಣ ನಿಂದಿತನು ಅಥವಾ ಪೂರ್ಣ ಪ್ರಶಂಸಿತನು ಈ ಹಿಂದೆಯು ಯಾರು ಇರಲಿಲ್ಲ. ಹಾಗೆಯೇ ಭವಿಷ್ಯದಲ್ಲಿಯೂ ಯಾರೂ ಇರುವುದಿಲ್ಲ. ಈಗಲೂ ಸಹಾ ಅಂತಹವರು ಯಾರೂ ಇಲ್ಲ.
ನಿಮ್ಮನ್ನು ಟೀಕಿಸುವವರೆಲ್ಲಾ ನಿಮ್ಮ ಶತ್ರುಗಳಲ್ಲ. ಅವರ ಟೀಕೆಯಿಂದ ನಿಮಗೆ ಗೋಚರಿಸದ ಎಷ್ಟು ತಪ್ಪುಗಳು ನಿಮಗೆ ಗೋಚರಿಸಿ ಅದನ್ನು ತಿದ್ದಿಕೊಳ್ಳುವ ಅಪೂರ್ವ ಅವಕಾಶವನ್ನು ಅವರು ನಿಮಗೆ ನೀಡಿದ್ದಾರೆ. ನಿಮಗೆ ಟೀಕೆ, ಕುಹಕವಾಗುತ್ತಿದೆ ಎಂದಮಾತ್ರಕ್ಕೆ ನಿಮ್ಮ ಉತ್ತಮ ಕಾರ್ಯಗಳನ್ನು ನಿಲ್ಲಿಸಬೇಡಿ. ನಿಮ್ಮ ದೌರ್ಬಲ್ಯಗಳನ್ನು ನೀವು ಒಪ್ಪಿರುವುದಾದರೆ ನಿಜಕ್ಕೂ ಯಶಸ್ವಿಯಾಗುವಂತಹ ಪ್ರಜ್ಞಾಶಕ್ತಿಯು ನಿಮ್ಮಲ್ಲಿ ಇದೆ ಎಂದೇ ಅರ್ಥ.





4.5 ನಾವೆಲ್ಲರೂ ಮಾನವರೇ
ಎಲ್ಲಾ ಮಾನವರಲ್ಲೂ ದೌರ್ಬಲ್ಯಗಳಿರುತ್ತವೆ ಮತ್ತು ಹೀಗಾಗಿ ಅವರು ತಪ್ಪು ಮಾಡುತ್ತ ಎಡವುತ್ತಾರೆ. ಪ್ರತಿ ಮಾನವನಲ್ಲೂ ಲೋಭ, ಕೋಪ ಮತ್ತು ಅಜ್ಞಾನವು ಇರುತ್ತದೆ. ಈ ದೌರ್ಬಲ್ಯಗಳು ಎಲ್ಲರಲ್ಲೂ ವಿವಿಧ ಮಟ್ಟದಲ್ಲಿ (ಅಂಶದಲ್ಲಿ) ಇರುತ್ತದೆ. ನೀವು ಅರಹಂತರಂತಹ ಪರಿಶುದ್ಧರು ಅಥವಾ ಪರಿಪೂರ್ಣರು ಆಗದಿದ್ದಲ್ಲಿ ನೀವು ಸಹಾ ಇದಕ್ಕೆ ಹೊರತಲ್ಲ. ಮಾನವನ ಮನಸ್ಸಿನ ಸ್ವಭಾವವೇ ಹೀಗೆ ಹೇಳುತ್ತದೆ. ಮಾನವನು ತನ್ನ ಜೀವನದಿಂದ ಸಂತೃಪ್ತಿನಾಗುವುದಿಲ್ಲ ಮತ್ತು ಆತನು ಇಡೀ ವಿಶ್ವವನ್ನು ಗಳಿಸಿದರೂ, ಜೀವನದ ಉದ್ದೇಶವನ್ನು ಎಂದಿಗೂ ಹುಡುಕಲಾರ.
ಈಗ ಅಜ್ಞಾನದಿಂದ ಆವರಿಸಿರುವ ಮಾನವನನ್ನು ಹತ್ತಿರದಿಂದ ನೋಡೋಣ. ಆತನ ಮನಸ್ಸು ಕ್ಷೊಭೆಗಳಿಂದ ಆವರಿಸಿರುತ್ತದೆ. ಗೊಂದಲ ಹಾಗು ಕತ್ತಲೆಯಿಂದ ತುಂಬಿರುತ್ತದೆ. ಈ ಅಜ್ಞಾನದಿಂದಾಗಿ ಆತನು ದೌಭರ್ಾಗ್ಯಗಳನ್ನು ಸೃಷ್ಟಿಸುತ್ತಾನೆ. ಅದನ್ನು ತನ್ನ ಸಹಚರರೊಂದಿಗೂ ಹಂಚಿಕೊಳ್ಳುತ್ತಾನೆ. ನಮಗೆ ಬರುವ ಬಹಳಷ್ಟು ಚಿಂತೆ ಮತ್ತು ದುಃಖಗಳಿಗೆ ಕಾರಣವೇನೆಂದರೆ ಬದಲಾಗುತ್ತಿರುವ ಪ್ರಾಪಂಚಿಕ ಸ್ಥಿತಿಗತಿಗಳು ಹಾಗು ಪ್ರಾಪಂಚಿಕ ಭೋಗಗಳ ಬಗ್ಗೆ ನಮಗಿರುವ ತೀವ್ರ ಲಾಲಸೆಯೇ ಆಗಿದೆ. ಅವನ್ನೆಲ್ಲಾ ನಮ್ಮ ಸ್ವಾರ್ಥಯುತ ಮನಸ್ಸು ಎಂದೆಂದಿಗೂ ಮುಂದುವರೆಸುತ್ತಿರುತ್ತದೆ. ನಿರಾಶೆ ಮತ್ತು ಫಲಿಸದ ಬಯಕೆಗಳು, ಅನಿರೀಕ್ಷಿತ ಬದಲಾವಣೆಯಿಂದ ಉಂಟಾಗಿದ್ದು ಚಿಂತೆಯನ್ನು ಸೃಷ್ಟಿಸುತ್ತದೆ. ಆದ್ದರಿಂದಾಗಿ ನಿಮ್ಮ ಚಿಂತೆಗಾಗಿ ನೀವೇ ಕಾರಣಕರ್ತರಾಗಿರುವಿರಿ. ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರು ತಾವು ಮಾಡಿದ ಕೆಲವು ತಪ್ಪುಗಳಿಗೆ ಮತ್ತು ಪಾಪಗಳಿಗೆ ಅವರೇ ಕಾರಣಕರ್ತರಾಗುತ್ತಾರೆ. ಹೀಗಿರುವಾಗ ಅದರಿಂದಾಗುವ ಫಲಿತಾಂಶಗಳಿಂದ ನೀವು ಹೇಗೆ ಪಾರಾಗುತ್ತೀರಿ. ಚಿಂತೆಯನ್ನು ಉತ್ಪಾದಿಸುವ ತೀವ್ರ ಲಾಲಸೆಗೆ ಮುಖ್ಯ ಕಾರಣವು ಮತ್ತು ಪೋಷಕವು ಅಜ್ಞಾನವೇ ಆಗಿದೆ.
ಯಾವಾಗ ಜ್ಞಾನದಿಂದ ಅಜ್ಞಾನವು ದೂರವಾಗುವುದೋ ಆಗ ಭಯ ಮತ್ತು ಚಿಂತೆಯು ಅದೃಶ್ಯವಾಗುವುದು.
ನೀವು ಈ ರೀತಿಯಾಗಿ ಮಾನವನ ಮನಸ್ಸಿನಲ್ಲಿರುವ ದೌರ್ಬಲ್ಯವನ್ನು ಅರ್ಥ ಮಾಡಿಕೊಂಡರೆ ಆಗ ನೀವು ನಿಮ್ಮ ಸಮಸ್ಯೆಗಳ ಬಗ್ಗೆ ಗೊಣಗುವುದಿಲ್ಲ. ಆಗ ನಿಮ್ಮಲ್ಲಿ ಅವರನ್ನು ಎದುರಿಸುವ ಧೈರ್ಯವಿರುತ್ತದೆ. ಮಾನವನ ಮನಸ್ಸೇ ಆತನ ಸುಖಕ್ಕೋ ಮತ್ತು ದುಃಖಗಳೆರಡಕ್ಕೂ ಕಾರಣಕರ್ತವಾಗಿದೆ.
ಮಾನವನಿಗೆ (ಕೆಟ್ಟದೇನೂ) ಏನೂ ಆಗುವುದಿಲ್ಲ, ಅಂತಹುದಾವುದೂ ಆತನಲ್ಲಿ ಅಂತರ್ಗತವಾಗಿಲ್ಲ (ಜಂಗ್, ಸೈಕೋಲಾಜಿಸ್ಟ್)





4.6 ಪ್ರತಿಯೊಬ್ಬರು ಸಮನಾಗಿಯೇ ಒಳ್ಳೆಯವರಲ್ಲ
ಕೆಲವು ಜನರು ಎಂದಿಗೂ ಕೆಟ್ಟದಕ್ಕೆ ಕಾರಣಕರ್ತರಾಗಿರುವುದಿಲ್ಲ ಅಥವಾ ಯಾವ ತೊಂದರೆಯನ್ನು ಮಾಡಿರುವುದಿಲ್ಲ. ಆದರೂ ಕೆಲ ವಂಚಕರ ಜಾಲಕ್ಕೆ ಸಿಲುಕುವ ಮುಗ್ಧ ಶೋಷಿತರಾಗುತ್ತಾರೆ. ಇಂತಹ ದೂರುಗಳನ್ನು ನಾವು ಸಾಂದಭರ್ಿಕವಾಗಿ ಆಗಾಗ್ಗೆ ಕೇಳುತ್ತಿರುತ್ತವೆ. ಹೀಗಾಗಿ ಅವರು ತಾವು ಜೀವಿಸಿದ ಉತ್ತಮ ಜೀವನಕ್ಕಾಗಿ ಹತಾಶರಾಗಿದ್ದಾರೆ. ತಾವು ಮಾಡಿರದ ತಪ್ಪಿಗೆ ಶಿಕ್ಷೆಯಾಯಿತು ಎಂದು ನೋವುಪಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಶೋಷಿತರು ಜಗತ್ತಿನಲ್ಲಿ ಎಲ್ಲಾ ಬಗೆಯ ಜನರು ಇದ್ದಾರೆ ಎಂದು ಅರಿತುಕೊಳ್ಳುತ್ತಾರೆ. ಅಂದರೆ ಒಳ್ಳೆಯವರು, ಅಷ್ಟು ಒಳ್ಳೆಯವರಲ್ಲದವರು, ಕೆಟ್ಟವರು, ಅಷ್ಟು ಕೆಟ್ಟವರಲ್ಲದವರು, ಅಂತಹ ಎಲ್ಲಾ ಅಸಾಧಾರಣ ವ್ಯಕ್ತಿತ್ವಗಳು ಸೇರಿಯೇ ನಮ್ಮದೆನ್ನುವ ಈ ಜಗತ್ತು ರಚಿತವಾಗುತ್ತದೆ. ಯಾವ ಮುಗ್ಧ ಶೋಷಿತರು ಇದ್ದಾರೋ ಅವರು ತಮ್ಮನ್ನು ಒಳ್ಳೆಯವರು ಎಂದು ತಮಗೆ ತಾವೇ ಸಮಾಧಾನಿಸಿಕೊಳ್ಳುತ್ತಾರೆ. ಹಾಗೆಯೇ ಶಾಂತಿಯನ್ನು ಹಾಳು ಮಾಡುವವರು ಕೆಟ್ಟವರೆಂದು ಪರಿಗಣಿಸಲ್ಪಡುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಅವರು ಸಹಾ ತಮ್ಮ ಪಾಪದ ಫಲವನ್ನು ಸಹನೆಯಿಂದ ಸಹಿಸಬೇಕಾಗುತ್ತದೆ.
ಇದಕ್ಕೆ ಉದಾಹರಣೆ ಎಂಬಂತೆ ಒಬ್ಬ ಒಳ್ಳೆಯವ ಹಾಗು ಜಾಗೃತ ಡ್ರೈವರ್ ಮತ್ತು ಕೆಟ್ಟ ಹಾಗು ಅಲಕ್ಷ ಅಜಾಗರೂಕ ಡ್ರೈವರ್. ಇಲ್ಲಿ ಒಳ್ಳೆಯ ಜಾಗರೂಕ ಡ್ರೈವರ್ ಆಕಸ್ಮಿಕ ಅಪಘಾತಗಳಾಗದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾನೆ. ಆದರೂ ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ, ಕೆಟ್ಟ ಅಜಾಗರೂಕ ಡ್ರೈವರನ ತಪ್ಪಿನಿಂದಾಗಿ ಆಕಸ್ಮಿಕ ಅಪಘಾತಕ್ಕೆ ಗುರಿಯಾಗುತ್ತಾನೆ.
ಹೀಗಾಗಿ ಒಳ್ಳೆಯತನವಿದ್ದರೂ ಸಹಾ ಒಳ್ಳೆಯವನು ದುಃಖಕ್ಕೆ ಗುರಿಯಾಗಬೇಕಾಗುತ್ತದೆ. ಏಕೆಂದರೆ ನಮ್ಮ ಸುತ್ತಲು ಕೆಟ್ಟ ವ್ಯಕ್ತಿಗಳು ಇರುವುದರಿಂದಾಗಿ. ಈ ಜಗತ್ತು ಒಳ್ಳೆಯದು ಅಲ್ಲ, ಹಾಗೆಯೇ ಕೆಟ್ಟದ್ದು ಅಲ್ಲ. ಅದು ಸಂತರನ್ನು ಹಾಗೆಯೇ ಪಾಪಿಗಳನ್ನು ಉತ್ಪಾದಿಸುತ್ತದೆ. ಇಲ್ಲಿ ಮೂರ್ಖರು ಇರುವಂತೆ ಜ್ಞಾನೋದಯ ಪಡೆದವರು ಇದ್ದಾರೆ. ಒಂದೇ ಜೇಡಿ ಮಣ್ಣಿನಲ್ಲಿ ಸುಂದರವಾದ ಹಾಗೇ ಕುರೂಪವಾದ, ಉಪಯುಕ್ತ ಹಾಗು ನಿರುಪಯುಕ್ತ ವಸ್ತುಗಳನ್ನು ನಿಮರ್ಿಸಬಹುದು. ಕುಂಬಾರಿಕೆಯ ಗುಣಮಟ್ಟವು ಅವಲಂಬಿತವಾಗಿರುವುದು ಕುಂಬಾರನಿಗೆ ಹೊರತು ಜೇಡಿಮಣ್ಣಿಗೆ ಮಾತ್ರವೇ ಅಲ್ಲ. ಇಲ್ಲಿ ಕುಂಬಾರನೆಂದರೆ ನೀವೇ ಆಗಿರುವಿರಿ. ನೀವು ಸುಖದ ಅಚ್ಚನ್ನು ಅಥವಾ ದುಃಖದ ಅಚ್ಚನ್ನು ರೂಪಿಸುವಿರೋ ಅದು ನಿಮ್ಮ ಕೈಯಲ್ಲಿದೆ ಹೊರತು, ನಿಮ್ಮ ಸುತ್ತಲಿನ ಸನ್ನಿವೇಶಕ್ಕಿಲ್ಲ.




4.7 ಮಾನವರ ವಗರ್ಿಕರಣ
ಬುದ್ಧ ಭಗವಾನರು ಮಾನವರ ವಗರ್ಿಕರಣವನ್ನು ಹಲವು ರೀತಿ ಮಾಡಿದ್ದಾರೆ. ಅದರಲ್ಲಿ ಇದು ಒಂದು ವಗರ್ಿಕರಣವಾಗಿದೆ. ಇಲ್ಲಿ ಮಾನವರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದಾರೆ.
1. ಇಲ್ಲಿ ಒಬ್ಬ ತನ್ನ ಒಳಿತಿಗಾಗಿ ಮಾತ್ರ ಕಾರ್ಯ ಮಾಡುವನು. ಆದರೆ ಪರರ ಒಳಿತಿಗಾಗಿ ಇಲ್ಲ.
2. ಇಲ್ಲಿ ಒಬ್ಬ ಪರರ ಒಳಿತಿಗಾಗಿ ಮಾತ್ರ ಕಾರ್ಯ ಮಾಡುವನು. ಆದರೆ ತನ್ನ ಒಳಿತನ್ನೇ ಮರೆಯುವನು.
3. ಇಲ್ಲಿ ಒಬ್ಬ ತನ್ನ ಒಳಿತಿಗಾಗಲಿ ಅಥವಾ ಪರರ ಒಳಿತಿಗಾಗಲಿ ಕಾರ್ಯ ಮಾಡುವುದಿಲ್ಲ.
4. ಇಲ್ಲಿ ಒಬ್ಬ ತನ್ನ ಒಳಿತಿಗಾಗಿಯು ಹಾಗು ಪರರ ಒಳಿತಿಗಾಗಿಯು ಕಾರ್ಯಮಾಡುತ್ತಾನೆ.
ಯಾರು ತನ್ನ ಒಳಿತಿಗಾಗಿ ಕಾರ್ಯಮಾಡಿ, ಪರರ ಒಳಿತಿಗಾಗಿ ಕಾರ್ಯ ಮಾಡುವುದಿಲ್ಲವೋ, ಆತನು ತನ್ನಲ್ಲಿ ಉಂಟಾಗುವ ಕೆಟ್ಟ ಯೋಚನೆಗಳನ್ನು ಕೆಟ್ಟ ಮಾತುಗಳನ್ನು ಮತ್ತು ಕೆಟ್ಟ ಕಾರ್ಯಗಳನ್ನು ತೊಡೆದುಹಾಕುತ್ತಾನೆ. ಆದರೆ ಪರರಿಗೆ ಹಾಗೆ ಮಾಡಲು, ಪ್ರೋತ್ಸಾಹಿಸುವುದಿಲ್ಲ. ಅವರಲ್ಲಿನ ಲೋಭ, ದ್ವೇಷ ಮತ್ತು ಮೋಹಗಳನ್ನು ತೊಡೆಯಲು ಪ್ರೋತ್ಸಾಹಿಸುವುದಿಲ್ಲ.
ಯಾರು ಪರರ ಒಳಿತಿಗಾಗಿ ಕಾರ್ಯಮಾಡಿ, ತನ್ನ ಒಳಿತನ್ನೇ ಮರೆಯುವನೋ ಆತನು ಪರರ ಪಾಪಯುತ ಯೋಚನೆಗಳನ್ನು, ಪಾಪಯುತ ಮಾತುಗಳನ್ನು ಮತ್ತು ಪಾಪಕಾರ್ಯಗಳನ್ನು ತೊರೆಯಲು ಪ್ರೋತ್ಸಾಹಿಸುತ್ತಾನೆ. ಆದರೆ ತನ್ನಲ್ಲಿನ ಲೋಭ, ದ್ವೇಷ ಮತ್ತು ಮೋಹಗಳನ್ನು ತೊಡೆದುಹಾಕಲು ಶ್ರಮಿಸುವುದಿಲ್ಲ.
ಯಾರು ತನ್ನ ಮತ್ತು ಪರರ ಒಳಿತಿಗಾಗಿ ಶ್ರಮಿಸುವುದಿಲ್ಲವೋ ಆತನು ತನ್ನಲ್ಲಿನ ಪಾಪಯುತ ಯೋಚನೆಗಳನ್ನು, ಪಾಪಯುತ ಮಾತುಗಳನ್ನು ಹಾಗು ಪಾಪಯುತ ಕಾರ್ಯಗಳನ್ನು ತೊರೆಯುವುದಿಲ್ಲ. ಹಾಗೆಯೇ ಪರರಲ್ಲಿನ ಲೋಭ, ದ್ವೇಷ ಮತ್ತು ಮೋಹಗಳನ್ನು ತೊಡೆದುಹಾಕಲು ಪ್ರೋತ್ಸಾಹಿಸುವುದಿಲ್ಲ.
ಮತ್ತು ಯಾರು ತನ್ನ ಒಳಿತಿಗಾಗಿ ಮತ್ತು ಪರರ ಒಳಿತಿಗಾಗಿ ಶ್ರಮಿಸುತ್ತಿರುವನೋ, ಆತನು ತನ್ನಲ್ಲಿನ ಪಾಪಯುತವಾದ ಯೋಚನೆಗಳನ್ನು ಮಾತುಗಳನ್ನು ಮತ್ತು ಕಾರ್ಯಗಳನ್ನು ತೊಡೆದುಹಾಕಲು ಶ್ರಮಿಸುತ್ತಾನೆ ಹಾಗೆಯೇ ಪರರಲ್ಲಿನ ಲೋಭ, ದ್ವೇಷ ಮತ್ತು ಮೋಹಗಳನ್ನು ತೊರೆಯಲು ಅವರಿಗೆ ಪ್ರೋತ್ಸಾಹಿಸುತ್ತಾನೆ (ಅಂಗುತ್ತರ ನಿಕಾಯ)





4.8 ಶಿಷ್ಟಾಚಾರಗಳು ಮತ್ತು ವಾಡಿಕೆಗಳು
ಉತ್ತಮ ಶಿಷ್ಟಾಚಾರದ ಅಳತೆ ಸಮಾಜಗಳಿಂದ ಸಮಾಜಕ್ಕೆ ವ್ಯತ್ಯಾಸ ಇರುತ್ತದೆ. ಕೆಲವು ದೇಶಗಳಲ್ಲಿ ಅತಿಥಿಗಳು ಊಟವನ್ನು ಮಾಡುವಾಗ ಎಷ್ಟು ಸಾಧ್ಯವೋ ಅಷ್ಟು ಶಬ್ದವನ್ನು ಮಾಡುವುದು ಶಿಷ್ಟಾಚಾರ ಎನ್ನಿಸಿ ಅದನ್ನೇ ನಿರೀಕ್ಷಿಸುತ್ತಾರೆ. ಹಾಗೆಯೇ ಭೋಜನದ ನಂತರ ತೇಗುವುದನ್ನು ಸಹಾ ಅವಿಧೇಯತೆ ಎಂದು ಭಾವಿಸುವುದಿಲ್ಲ. ಬದಲಾಗಿ ಅವರು ಭೋಜನವನ್ನು ನಿಜವಾಗಿ ಆನಂದಿಸಿ ಸೇವಿಸಿದ್ದಾರೆ ಎಂದು ಪರಿಗಣಿತವಾಗುತ್ತದೆ. ಆದರೆ ಅಂತಹ ಭೋಜನ ಶಿಷ್ಟಾಚಾರಗಳನ್ನು ಒರಟುತನ, ಕೆಟ್ಟ ಶಿಷ್ಟಾಚಾರ ಅಥವಾ ಅನಾಗರಿಕತೆ ಎಂದು ಬೇರೆ ದೇಶಗಳಲ್ಲಿ ಭಾವಿಸುತ್ತಾರೆ.
ಒಂದು ದೇಶದಲ್ಲಿ ಬೆರಳನ್ನು ಬಾಯಿಗೆ ಅಥವಾ ಮೂಗಿಗೆ ಹಾಕಿಕೊಳ್ಳುವುದು ಅತ್ಯಂತ ತಪ್ಪು ಕೃತ್ಯವಾಗಿದ್ದರೆ, ಇನ್ನೊಂದು ದೇಶದಲ್ಲಿ ಅದಕ್ಕೆ ಅಪಾರ್ಥವೇ ಇಲ್ಲ. ತಪ್ಪು ಅಲ್ಲ, ಕೆಲವು ಜನರು ಶೂನಿಂದ ಹೊಡೆಯುವುದು ಅಪಮಾನವೆಂದು ಭಾವಿಸಿದರೆ ಕೆಲವೆಡೆ ಮಕ್ಕಳನ್ನು ಹೊಡೆಯಲು ಚಪ್ಪಲಿಯನ್ನೇ ಬಳಸುತ್ತಾರೆ.
ನಾವು ಪ್ರಯಾಣ ಬೆಳೆಸುವಾಗ ಇಂಥಹುದೇ ಅನೇಕ ವಿಶಿಷ್ಟ ಶಿಷ್ಟಾಚಾರಗಳನ್ನು, ವಾಡಿಕೆಗಳನ್ನು ಗಮನಿಸುತ್ತೇವೆ. ನಾವು ಆತುರದಲ್ಲಿ ಯಾವುದು ಸರಿ ಅಥವಾ ಯಾವುದು ತಪ್ಪು ಎಂದು ಪೂವರ್ಾಗ್ರಹ ಪೀಡಿತರಾಗಿ ನಿರ್ಧರಿಸಬಾರದು. ಒಂದುರೀತಿ ಚಿಂತಿಸಿದರೆ ಶಿಷ್ಟಾಚಾರಗಳು ಒಳ್ಳೆಯದು ಅಲ್ಲ. ಹಾಗೆಯೇ ಕೆಟ್ಟದ್ದು ಅಲ್ಲ. ಆದರೆ ಯಾವಾಗ ಅದು ಹಾನಿವುಂಟುಮಾಡುತ್ತದೆ ಅಥವಾ ಪರರಿಗೆ ನೋವುಂಟು ಮಾಡುವುದೋ ಆಗ ನಾವು ಅವುಗಳನ್ನು ಒಳಿತೋ ಅಥವಾ ಕೆಡಕೋ ಎಂದು ನಿರ್ಧರಿಸಬಹುದು.
ನಾವು ಸದಾ ಬದಲಾಗುತ್ತಿರುವ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ. ನಾವು ಅಂಧರಾಗಿ ಯಾವುದೇ ಸಂಪ್ರದಾಯಕ್ಕಾಗಲಿ, ವಿಧಿಗಾಗಲಿ, ಶಿಷ್ಟಾಚಾರಕ್ಕಾಗಲಿ ಮತ್ತು ಸಂಸ್ಕಾರ ಗಳಿಗಾಗಲಿ ಅಂಟಬಾರದು. ಇವನ್ನೆಲ್ಲಾ ನಮ್ಮ ಹಿರಿಯರು ತಮ್ಮ ಸನ್ನಿವೇಶಗಳಿಗೆ ಅನುಸಾರವಾಗಿ ಪಾಲಿಸುತ್ತ ಬಂದರು. ನಮ್ಮ ಪೂರ್ವಜರ ಕೆಲವು ಸಂಪ್ರದಾಯಗಳು ಒಳಿತೇ ಆಗಿವೆ. ಮತ್ತೆ ಕೆಲವು ಅಂತಹ ಉಪಯುಕ್ತವೇನಲ್ಲ. ಆದರೆ ಕೆಲವೊಂದಂತು ಆಧುನಿಕ ಜೀವನಕ್ಕೆ ಅಸಂಬದ್ಧವಾಗಿವೆ. ನಾವು ಚಿಂತನೆ ಮಾಡುತ್ತಾ ಇವು ಹಿತಕಾರಿಯೇ? ಸುಖಕಾರಿಯೇ? ಆಧುನಿಕ ಜಗತ್ತಿಗೆ ಸರಿಹೊಂದುವುದೇ? ಎಂದು ವಿಮಶರ್ಿಸಿ ನಂತರ ನಿರ್ಧರಿಸುವುದು ಉತ್ತಮವಾಗಿದೆ.
ಕಾಲಾಮ ಸುತ್ತದಲ್ಲಿ ಬುದ್ಧ ಭಗವಾನರು ವಾಡಿಕೆಗಳ, ಸಂಪ್ರದಾಯಗಳ, ನಂಬಿಕೆಗಳ, ಆಚರಣೆಗಳ ಬಗ್ಗೆ ಹೀಗೆ ಹೇಳಿದ್ದಾರೆ. ಯಾವಾಗ ನಿಮಗೆ ಕೆಲವು ವಿಷಯಗಳು ಅಕುಶಲವಾದವು, ತಪ್ಪಾದವು ಮತ್ತು ಪಾಪಯುತವಾದವು, ನಿಮಗೂ ಹಾಗು ಪರರಿಗೂ ದುಃಖವನ್ನು, ಕೆಟ್ಟದನ್ನು ಉಂಟುಮಾಡುತ್ತವೆ ಎಂದು ಅರಿತಾಗ ಅವನ್ನೆಲ್ಲಾ ತ್ಯಜಿಸಿರಿ. ಮತ್ತು ಯಾವಾಗ ನಿಮಗೆ ಕೆಲವು ವಿಷಯಗಳು ಕುಶಲವಾದವು, ನಿಮಗೂ ಹಾಗು ಪರರಿಗೂ ಒಳಿತನ್ನುಂಟು ಮಾಡುತ್ತವೆ ಎಂದು ಅರಿತಾಗ ಅವನ್ನೆಲ್ಲಾ ಪಾಲಿಸಿರಿ.
ಇಂದು ಕೆಲವು ಹಿರಿಯರು ಆಧುನಿಕ ಚಿಂತನೆಗಳನ್ನು ಮತ್ತು ಯುವ ಜನಾಂಗದ ಜೀವನ ಶೈಲಿಯನ್ನು ಸಹಿಸುವುದೇ ಇಲ್ಲ. ಅವರು ತಮ್ಮ ಮಕ್ಕಳು ಸಹಾ ಅದೇ ಹಳೆಯ ಸಂಪ್ರದಾಯಗಳನ್ನು ತಮ್ಮ ಅಜ್ಜಂದಿರ ಪುರಾತನ ಸಂಪ್ರದಾಯವನ್ನು ಪಾಲಿಸುವಂತೆ ನಿರೀಕ್ಷಿಸುತ್ತಾರೆ. ಆದರೆ ಅದಕ್ಕೆ ಬದಲಾಗಿ ಅಂತಹ ಚಟುವಟಿಕೆಗಳು ಹಾನಿಕಾರಕವಲ್ಲದಿದ್ದರೆ, ಮಕ್ಕಳನ್ನು ಕಾಲದ ಜೊತೆಗೆ ನಡೆಯಲು ಬಿಡಬೇಕು. ಹಾಗೆಯೇ ವೃದ್ಧರು ತಾವು ಯುವಕರಾಗಿದ್ದಾಗ ತಮ್ಮ ತಂದೆ-ತಾಯಿಗಳು ಕೆಲವು ಜನಪ್ರಿಯ ರೀತಿನೀತಿಗಳನ್ನು ವಿರೋಧಿಸಿದ್ದುದನ್ನು ನೆನೆಯಬೇಕು. ಇಲ್ಲಿ ವ್ಯತ್ಯಾಸವಿರುವುದು ಸಂಪ್ರದಾಯಶೀಲ ಪಾಲಕರ ಮತ್ತು ನವಪೀಳಿಗೆಯ ಯುವಕರ ದೃಷ್ಟಿಕೋನಗಳ ಮಧ್ಯೆ ಆಗಿದೆ. ಆದರೆ ಅದರ ಪರಿಣಾಮ ಕುಟುಂಬಗಳಲ್ಲಿ ಆಗುತ್ತಿದೆ. ಆದರೆ ಇದರ ಅರ್ಥ ಮಕ್ಕಳು ತಪ್ಪು ಮೌಲ್ಯಗಳತ್ತ ಹೋದಾಗ ಅವರನ್ನು ಮಾರ್ಗದರ್ಶನ, ಸಲಹೆ ನೀಡಲು ಹಿಂದು ಮುಂದು ನೋಡಿ ಎಂದಲ್ಲ. ಬದಲಾಗಿ ಅವರನ್ನು ತಿದ್ದುವಾಗ, ಕೆಲವಿಷಯಗಳಿಗೆ ತಡೆಯುವುದು ಶಿಕ್ಷೆಗಿಂತ ಉತ್ತಮ ಎನ್ನುವುದು ಪೋಷಕರು ತಮ್ಮ ಮಕ್ಕಳಿಗೆ ಏತಕ್ಕೆ ಕೆಲವು ಆಚರಣೆಗಳು ತಪ್ಪು ಎಂದು ವಿವರಿಸಬೇಕು. ಏಕೆಂದರೆ ಮಕ್ಕಳಿಗೆ ಆಗ ಮಾತ್ರ ಅವರಿಗೆ ಸರಿಯಾದ ಕಾರಣ, ಉದ್ದೇಶ ಅರ್ಥವಾಗಿ ಅವರು ಹಾದಿ ತಪ್ಪುವುದಿಲ್ಲ ಮತ್ತು ಮಕ್ಕಳಿಗೆ ತಿಳಿ ಹೇಳಲೇಬೇಕು. ಅವರು ತಮಗೆ ತಾವೇ ಕೆಲವು ವಿಷಯಗಳು ತಪ್ಪು ಹಾಗೆಯೇ ಕೆಲವು ಒಳ್ಳೆಯದೆಂದು ತಿಳಿಯಲಾರರು.






4.9 ಸ್ತ್ರೀ ವಿರುದ್ಧ ಪಕ್ಷಪಾತ
ಬುದ್ಧ ಭಗವಾನರು ಹೀಗೆ ಹೇಳುತ್ತಾರೆ ನಾವು ಏನನ್ನಾದರೂ ಅರಿಯುವ ಸಾಮಥ್ರ್ಯ ಬಳಸಿಕೊಳ್ಳಬೇಕಾದರೆ ಅದಕ್ಕಾಗಿ ನಾವು ವಿಷಯಗಳನ್ನು ಅವು ಇರುವಂತೆಯೇ ಅರಿಯುವಂತಹ (ನೋಡುವಂತಹ) ಕೌಶಲ್ಯ ಬೆಳೆಸಿಕೊಳ್ಳಬೇಕು. ಪುರುಷನ ಸಂಬಂಧದಂತೆಯೇ ಸ್ತ್ರೀಯ ವಿಶ್ಲೇಷಣೆಯ ನಂತರ ಭಗವಾನರು ಅಂತಿಮವಾಗಿ ತೀಮರ್ಾನಿಸಿದ್ದು ಏನೆಂದರೆ ಧಮ್ಮ ಆಚರಿಸಲು, ಅರಿಯಲು ಸ್ತ್ರೀಗೂ ಯಾವುದೇ ತಡೆಯಿಲ್ಲ ಎಂದೂ, ಅವರೂ ಸಹ ಅರಹಂತತ್ವದಂತಹ ಉನ್ನತ ಸ್ಥಿತಿಯನ್ನು ಪುರುಷರಂತೆಯೇ ಸಾಧಿಸಬಲ್ಲರು ಎಂದು ಹೇಳಿದ್ದಾರೆ. ಅರಹಂತ ಸ್ಥಿತಿಯು ಚಿತ್ತಪರಿಶುದ್ಧತೆಯ ಅತ್ಯುನ್ನತ ಸ್ಥಿತಿಯಾಗಿದೆ. ಧಮ್ಮವನ್ನು ಆಚರಿಸಲು ಸ್ತ್ರೀಗೆ ಪೂರ್ಣ ಸ್ವತಂತ್ರವನ್ನು ಭಗವಾನರು ನೀಡಿದ್ದರಿಂದಾಗಿ ಭಗವಾನರು ಬಲಯುತವಾದ ವಿರೋಧವನ್ನು ಎದುರಿಸಬೇಕಾಯಿತು.
ಬುದ್ಧ ಭಗವಾನರ ಕಾಲದಲ್ಲಿ, ಅವರು ಸ್ತ್ರೀಯರನ್ನು ವಿಮುಕ್ತಗೊಳಿಸುವ ಮುನ್ನ, ಆಗಿನ ಸಂಪ್ರದಾಯಗಳು ಮತ್ತು ಕಟ್ಟುಪಾಡುಗಳು ಹೇಗಿತ್ತೆಂದರೆ ಪುರುಷರಿಗೆ ಸ್ತ್ರೀಯರು ಚಲಿಸುವ ಭೋಗ ವಸ್ತುವಾಗಿ ಬಳಕೆಯಲ್ಲಿದ್ದರು. ಸನಾತನ ಸ್ಮೃತಿಕಾರರಾದಂತಹ, ಧರ್ಮಶಾಸ್ತ್ರಕಾರರಂತಹ ಮನುವು ಸ್ತ್ರೀಯರು ಪುರುಷರಿಗಿಂತ ಹೀನ ಎಂದು ತೀರ್ಪನ್ನು ನೀಡಿಬಿಟ್ಟಿದ್ದರು. ಅದರಿಂದಾಗಿ ಸಮಾಜದಲ್ಲಿ ಸ್ತ್ರೀಯ ಸ್ಥಾನಮಾನ ಅತಿಹೀನವಾಯಿತು. ಮತ್ತು ಅಡುಗೆಮನೆಗೆ ಮಾತ್ರ ಸೀಮಿತವಾಯಿತು. ಅವರು ಸ್ತ್ರೀಯರನ್ನು ದೇವಸ್ಥಾನಗಳಿಗೂ ಧಾಮರ್ಿಕ ಚಟುವಟಿಕೆಗಳಿಗೂ ಸಹಾ ಯಾವ ರೀತಿಯಲ್ಲಿಯೂ ಭಾಗವಹಿಸಲು ಅವಕಾಶ ನೀಡಲಿಲ್ಲ.
ಜನನ ನಿಯಂತ್ರಣದ ಹೆಸರಿನಲ್ಲಿ, ಹೆಣ್ಣು ಮಕ್ಕಳಿಗೆ ಅವರು ಹುಟ್ಟುವ ಮುನ್ನವೇ ಅವರ ವಿರುದ್ಧ ಪಕ್ಷಪಾತವು ಸಿದ್ಧವಾಗಿರುತ್ತದೆ. ಇಂದು ಸಹಾ ಜಗತ್ತಿನಲ್ಲಿ ಸ್ತ್ರೀ ಭ್ರೂಣ ಹತ್ಯೆಯು ಜಗತ್ತಿನ ಹಲವೆಡೆಗಳಲ್ಲಿ ಆಚರಣೆಯಲ್ಲಿ ಇರುವುದು ನಿಜಕ್ಕೂ ಭಯಾನಕ ಸಂಗತಿಯಾಗಿದೆ. ಸ್ತ್ರೀಯ ವಿಮೋಚನಾ ಚಳವಳಿ ಮತ್ತು ಕುಟುಂಬದ ಮೇಲೆ ಅದರ ಪರಿಣಾಮ ಈ ರೀತಿಯ ತಲೆಬರಹದ ಅಡಿಯಲ್ಲಿ ಅದು ಸಂಪತ್ಭರಿತ ಸಮಾಜಗಳಲ್ಲಿ ಮುಖ್ಯವಾಗಿ ಉನ್ನತ ನಿರ್ವಹಣ ಸ್ಥಾನಗಳಲ್ಲಿ ಶೋಷಣೆಯಿದೆ. ಅವನ್ನೆಲ್ಲಾ ಮುಂದೆ ಗಮನಿಸೋಣ.
ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿಯಾಗದ ದೇಶಗಳಲ್ಲಿ ಸ್ತ್ರೀ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಹಿಂದೆ ಭಾರತದಲ್ಲೂ ಸಂಪ್ರದಾಯಸ್ಥ ಸಮಾಜವು ಪುರುಷ ಪ್ರಧಾನ ಸಮಾಜವಾಗಿತ್ತು. ಅಲ್ಲಿ ಸ್ತ್ರೀಯು ವಿಧವೆಯಾದರೆ ಆಕೆಗೆ ಭಯಾನಕವಾಗಿತ್ತು. ಈಗಲೂ ಈ ದುಃಸ್ಥಿತಿಯಿಂದ ಸ್ತ್ರೀಯರು ಪೂರ್ಣವಾಗಿ ಪಾರಾಗಿಲ್ಲ. ವಿಧವೆಯರು ಅತಿಕಡಿಮೆ ವಯಸ್ಸಿನವರಾಗಿದ್ದರೂ ಸಹಾ ಅವರಿಗೆ ಸಮಾಜ ಮತ್ತು ಕುಟುಂಬದಿಂದ ಬಹಿಷ್ಕಾರ ಹಾಕಲಾಗುತ್ತಿತ್ತು.
ಮೂಢನಂಬಿಕೆಯ ಕುಟುಂಬಗಳಲ್ಲಿ ಸ್ತ್ರೀ ಶೋಷಣೆ ಇನ್ನೂ ಹೆಚ್ಚು. ವಿಧವೆಯು ತನ್ನ ಮಾವನ ಮನೆಯಲ್ಲಿ ನಿಂದನೆಗೆ ಒಳಗಾಗುತ್ತಾಳೆ. ಆಕೆಯ ಕಾಲುಗುಣದಿಂದಲೇ ಈ ಎಲ್ಲಾ ಅನಿಷ್ಟ ಎಂದು ನಿಂದನೆಗೆ ಒಳಗಾಗುತ್ತಾಳೆ. ಪತಿಯ ಸಾವಿಗೂ ಆಕೆಯನ್ನೇ ಹೊಣೆಗಾರಿಕೆ ಮಾಡುತ್ತಾರೆ. ಅಷ್ಟೇ ಅಲ್ಲ, ಆಕೆಗೆ ಬಹಿಷ್ಕಾರವೂ ಹಾಕುತ್ತಾರೆ. ಸ್ತ್ರೀಗೆ ಅತಿಅಲ್ಪ ಆಯ್ಕೆಗಳಿರುತ್ತದೆ. ಸ್ತ್ರೀಯು ವಿಧವೆಯಾದರೆ ಆಕೆಯ ಮರು ಮದುವೆಗೂ ಹುಬ್ಬುಗಂಟಿಕ್ಕುತ್ತಾರೆ. ಆದರೆ ಪುರುಷನಿಗಾದರೆ ಅಂತಹ ಯಾವುದೇ ತಡೆಗಳಿರುವುದಿಲ್ಲ. ಆಧುನಿಕ ಯುಗ ಆರಂಭವಾಗುವವರೆಗೂ ಸ್ತ್ರೀಯು ಸತ್ತ ಪತಿಯ ಶವದೊಡನೆ ಸುಟ್ಟು ಸಾಯಬೇಕಿತ್ತು. ಅದಕ್ಕೆ ಸತಿ ಪದ್ಧತಿ ಎನ್ನುತ್ತಾರೆ. ಆದರೆ ರಾಜರಾಮ್ ಮೋಹನ್ರಾಯ್ ಮತ್ತು ಬ್ರಿಟಿಷರ ಅಧಿಕಾರ ಪ್ರಯೋಗದಿಂದಾಗಿ ಅದನ್ನು ನಿಲ್ಲಿಸಲಾಯಿತು. ಆದರೂ 1996ರಲ್ಲಿ ಅಂತಹ ಪ್ರಕರಣವೊಂದು ಮತ್ತೆ ಪುನರಾವತರ್ಿತವಾಯಿತು. ಭಾರತದಲ್ಲಿ ಸ್ತ್ರೀಯು ವಿಧವೆಯಾದರೆ ಮುಂದೆ ಸಾಗಲು ಕೆಲವು ಸ್ತ್ರೀಯರೇ ಮುಂದೆಬರುತ್ತಾರೆ.
ಇನ್ನು ಸ್ತ್ರೀಯರಿಗೆ ಬಾಲ್ಯ ವಿವಾಹವಾದರೆ ಅವರ ಸ್ಥಿತಿಯು ಇನ್ನೂ ಕರುಣಾಜನಕವಾಗಿತ್ತು. ಏಕೆಂದರೆ ಅವರಲ್ಲಿ ಹಲವರು ಬಾಲ್ಯದಲ್ಲಿಯೇ ವಿಧವೆಯರಾಗುತ್ತಿದ್ದರು. ಬಾಲ್ಯ ವಿವಾಹವು ಗ್ರಾಮೀಣ ಕಡೆಗಳಲ್ಲಿ ಇರುವ ಇನ್ನೊಂದು ಅನಿಷ್ಟ ಪದ್ಧತಿಯಾಗಿದೆ. ಒಬ್ಬಾಕೆ ಹೀಗೆ ಪ್ರಲಾಪಿಸುತ್ತಾಳೆ: ನನಗೆ ಐದನೆಯ ವರ್ಷಕ್ಕೆ ವಿವಾಹ ಮಾಡಲಾಯಿತು. ನನ್ನ ಗಂಡನನ್ನು ನಾನು ಇಂದಿಗೂ ನೋಡಲಿಲ್ಲ. ಆಗ ಆತನಿಗೆ 13 ವರ್ಷವಾಗಿತ್ತು. ಆತನು ವಿವಾಹವಾದ ತಿಂಗಳ ನಂತರ ಸತ್ತುಹೋದನು. ಈಗ ನಾನು ವಿಧವೆಯಾಗಿದ್ದೇನೆ. ವಿಶ್ವ ಬ್ಯಾಂಕ್ನ ಪ್ರಕಾರ ಭಾರತದ 65%ರಷ್ಟು ಸ್ತ್ರೀಯರು 60ನೇ ವಯಸ್ಸಿಗೆ ವಿಧವೆಯಾಗುತ್ತಾರೆ. ಸ್ತ್ರೀಯು 70 ವರ್ಷ ವಯಸ್ಸಿಗೆ ಹೋಗುವಷ್ಟರಲ್ಲಿ 50%ರಷ್ಟು ವಿಧವೆಯಾಗುತ್ತಿದ್ದಾರೆ. ಂಟಟ ಟಿಜಚಿ ಜಜಟಠಛಿಡಿಚಿಣಛಿ ತಿಠಟಜಟಿ ಚಿಠಛಿಚಿಣಠಟಿ ಸುದ್ದಿ ನೀಡಿದ್ದು ಏನೆಂದರೆ ಸ್ತ್ರೀಯ ಗುರುತು ಈಗಲೂ ಸಹಾ ಪುರುಷನ ಅನುಬಂಧದಿಂದಲೇ ನಿರ್ಧರಿಸಲಾಗುತ್ತದೆ. ವಿಧವೆತನವು ಗಂಡನಿಗೆ ಕಳೆದುಕೊಂಡವಳು ಎಂಬುದಕ್ಕಿಂತ ಹೆಚ್ಚಿನ ತೊಡಕುವುಳ್ಳದ್ದಾಗಿದೆ.
ಈ ರೀತಿಯ ಸನ್ನಿವೇಶಗಳು ನೆರೆಹೊರೆಯ ದೇಶಗಳಲ್ಲೂ ಇವೆ. ಅಲ್ಲೂ ಸಹಾ ಸ್ಥಿತಿಯು ಉತ್ತಮವೇನೂ ಆಗಿಲ್ಲ. ದೀರ್ಘಕಾಲದಿಂದಲೂ ಅಲ್ಲಿನ ಕುಟುಂಬಗಳಲ್ಲಿ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗಿಂತ ಕೀಳಾಗಿಯೇ ಕಾಣುತ್ತಿದ್ದಾರೆ. ಹುಡುಗಿಯನ್ನು ನಾವು ಕೇವಲ ಮನೆಗೆಲಸದಲ್ಲಿ ಮಾತ್ರ ಕಾಣುತ್ತಿದ್ದೇವೆ. ಸ್ತ್ರೀಯು ಸಮಾಜದ ನಾನಾ ಪದ್ಧತಿಗಳ ಮೂಲಕ ಜೀವಿಸುತ್ತಿದ್ದಾಳೆ. ಅವು ಆಕೆಯ ವಿರುದ್ಧವೇ ಪಕ್ಷಪಾತವನ್ನು ಉಂಟುಮಾಡಿ ಬಲಪಡಿಸುತ್ತದೆ. ಆಕೆಯು ಆಥರ್ಿಕ ಮತ್ತು ನೈತಿಕ ಹೊಣೆಗಾರಿಕೆ ಅರಿತು ಜೀವಿಸುತ್ತಿದ್ದಾಳೆ. ಆದರೂ ಆರೋಗ್ಯದಲ್ಲಿ, ಪರಿಶ್ರಮದಲ್ಲಿ, ಮಕ್ಕಳ ವಿದ್ಯಾಭ್ಯಾಸ ಮಾಡಿಸುವಲ್ಲಿ ಮತ್ತು ಉತ್ತಮ ತಾಯಿಯಾಗುವಲ್ಲಿ ಆಕೆಗೆ ಅಪಾರ ನಿರೀಕ್ಷೆಯಿದೆ. ಬಹಳಷ್ಟು ಚಿಕ್ಕ ಹುಡುಗರು ತಮ್ಮನ್ನು ತಮ್ಮ ಸೋದರಿಯರಿಗಿಂತ ಚೆನ್ನಾಗಿ ಸಾಕುವುದನ್ನು ಕಂಡು ತಮ್ಮ ಸೋದರಿಯರನ್ನು ತಮಗಿಂತ ಕೆಳಮಟ್ಟದವರು ಎಂದು ಭಾವಿಸುತ್ತಾರೆ. ಇದೇ ನಂಬಿಕೆಗಳು ಹಲವಾರು ಸಾಮಾಜಿಕ ಸದಸ್ಯರಲ್ಲಿ ಮಾತ್ರವಲ್ಲದೆ ಸ್ತ್ರೀಯರಲ್ಲೂ ಮನೆಮಾಡಿವೆ.
ಬಹುಶಃ ಸ್ತ್ರೀಯರು ಹೀಗಾಗಲು ಕಾರಣವೇನೆಂದರೆ ಬೆಂಬಲದ ಕೊರತೆ ಮತ್ತು ಹುಡುಗಿಯರಿಗೆ ಮೊದಲಿನಿಂದಲೂ ಇರುವ ನಿರ್ಬಂಧಗಳೇ ಆಗಿವೆ. ಅವರು ಏನಾದರೂ ಮಾಡಲು ಹೊರಟರೆ ಪ್ರೋತ್ಸಾಹ ದೊರೆಯದೆ ಸಂಪ್ರದಾಯದ ಮನೆಗೆಲಸದ, ಮಕ್ಕಳ, ಅಡುಗೆಯ, ಸ್ವಚ್ಛಗೊಳಿಸುವ ಈ ಕೆಲಸಗಳನ್ನೇ ಮಾಡುತ್ತ ಉತ್ತಮ ಗೃಹಿಣಿಯರಾಗುವ ಶಿಕ್ಷಣವನ್ನೇ ಮನೆಯಲ್ಲಿ ನೀಡಲಾಗುತ್ತಿದೆ. ರಾವಲ್ಪಿಂಡಿಯ 16ರ ಹುಡುಗಿಯು ಹೇಳಿದ್ದು ಹೀಗೆ: ನಮ್ಮ ಸಮಾಜವು ಹುಡುಗಿಯರನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಇಲ್ಲಿ ಹುಡುಗಿಯರಿಗೆ ವಿದ್ಯಾಭ್ಯಾಸ ಮಾಡಿಸುವುದಿಲ್ಲ. ಏಕೆಂದರೆ ಹುಡುಗಿಯರು ಮಾವನ ಮನೆಗೆ ಸೇರುವವಳು, ನಮ್ಮವರಲ್ಲ ಎಂಬ ಭಾವನೆ. ಅವರಿಗೆ ಮಾಡುವ ಖಚರ್ು ವ್ಯರ್ಥ ಎನ್ನುತ್ತಾರೆ. ಹೆಣ್ಣು ಮಕ್ಕಳು ಕಿರಿಯ ವಯಸ್ಸಿನಲ್ಲಿಯೇ ಗಂಡನ ಮನೆಗೆ ಹೋಗಿ ಸೇರುತ್ತಾರೆ. ಅದು ಕೆಲವು ಮಕ್ಕಳು 13ರ ವಯಸ್ಸಿನಲ್ಲೇ ಗಂಡನ ಮನೆ ಸೇರುತ್ತಾರೆ. ಅವರು ಉಳಿದ ಜೀವನವೆಲ್ಲಾ ಮಾವನ ಮನೆಯಲ್ಲೇ ಕಳೆಯುತ್ತಾ ಮಕ್ಕಳನ್ನು ಹೆರುತ್ತಾ, ಬೆಳೆಸುತ್ತಾ ಗಂಡನ ಕುಟುಂಬ ರೇಖೆಯನ್ನು ಬಲಿಷ್ಠಗೊಳಿಸುತ್ತಾಳೆ.
ನಾವು ಈ ಬಗೆಯ ಚಿಂತನೆಯನ್ನು ಅಳಿಸಬೇಕಾಗಿದೆ ಮತ್ತು ಶಿಕ್ಷಣವನ್ನು ಕಡ್ಡಾಯಗೊಳಿಸಬೇಕಾಗಿದೆ ಹಾಗು ಮುಕ್ತಗೊಳಿಸಬೇಕಾಗಿದೆ. ಹೀಗಾಗಿ ಅದು ವಿವಾದವಾಗಬಾರದು. ಒಬ್ಬ ಹುಡುಗಿ ಹೀಗೆ ಹೇಳುತ್ತಾಳೆ ಹುಡುಗಿಯರು ಸಹ ಉದ್ಯೋಗ ಮಾಡಲು ಸಮರ್ಥರು. ಇದನ್ನು ಯಾರೂ ಅಲ್ಲಗಳೆಯಲಾರರು. ಬೇರೆ ಹುಡುಗಿಯರೊಂದಿಗೆ ಉದ್ಯೋಗದಲ್ಲಿದ್ದರೆ ಪೋಷಕರು ವಿರೋಧಪಡಿಸುವುದಿಲ್ಲ. ಕೆಲವೊಮ್ಮೆ ನಾನು ಹುಡುಗಿಯಾಗಿ ಹುಟ್ಟಿದ್ದಕ್ಕೆ ಪಶ್ಚಾತ್ತಾಪಪಟ್ಟಿದ್ದೇನೆ. ಕೆಲವೊಮ್ಮೆ ನನಗೆ ಏನು ಮಾಡಲು ಬಿಡದಿದ್ದಾಗ ನಾನು ರೂಮಿಗೆ ಹೋಗಿ ಅಳುತ್ತ ದೇವರಲ್ಲಿ ನನ್ನನ್ನು ಹುಡುಗನನ್ನಾಗಿಸು ಎಂದು ಪ್ರಾಥರ್ಿಸಿದೆ.
ನಾವು ಇಲ್ಲಿ ಕೇವಲ ಭಾರತದ ಉದಾಹರಣೆಗಳನ್ನು ನೀಡಿದ್ದರೂ ಇದೇಬಗೆಯ ಘಟನೆಗಳನ್ನು ನಾವು ಚೀನಾದಲ್ಲಿ, ಮಧ್ಯ ಪೂರ್ವದಲ್ಲಿ, ಆಫ್ರಿಕಾದಲ್ಲಿ ಹಾಗು ಯೂರೋಪ್, ಅಮೆರಿಕಾದಲ್ಲೂ ಕಂಡಿದ್ದೇವೆ. ಈಗೀಗ ಹೆಣ್ಣು ಮಗುವಿನ ಯೋಜನೆಯು ಹಲವು ದೇಶದಲ್ಲಿ ನಿಧಾನವಾಗಿ ಬದಲಾವಣೆ ಕಾಣುತ್ತಿದೆ. ಹುಡುಗಿಯ ಸಮಸ್ಯೆಗಳ ಜಾಗೃತಿಯನ್ನು ಅವರು ಎದುರಿಸುತ್ತಿರುವ ಪಕ್ಷಪಾತವನ್ನು ವಿವರಿಸುತ್ತಿದ್ದಾರೆ. ಈಗ ಸರ್ವರಿಗೂ ಶಿಕ್ಷಣ ಅಭಿಯಾನ ಆರಂಭವಾಗಿದೆ. ಹೀಗಾಗಿ ಇಂದು ಬಹುತೇಕ ಕಡೆ ಅವರು ವಿದ್ಯಾಭ್ಯಾಸ ಹೊಂದಿದ್ದಾರೆ. ಇದರಲ್ಲಿ ಅನಕ್ಷರಸ್ಥ ತಾಯಿಯ ಪೋಷಣೆಯ ಪಾಲು ಇದೆ. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಅವರ ಬದುಕು ನಾಳೆ ನಮಗಿಂತ ಉತ್ತಮವಾದೀತು ಎಂಬ ನಂಬಿಕೆ ಅವರಲ್ಲಿದೆ.
ಹಲವಾರು ಸಮಾಜಗಳಲ್ಲಿ ಸ್ತ್ರೀಯ ಸ್ಥಾನವು ಮನೆಗೆ ಸೀಮಿತವಾಗಿದೆ. ವಿವಾಹಿತ ಸ್ತ್ರೀಯು ಉತ್ತಮ ಪತ್ನಿಯಾಗಿಯೂ ಮತ್ತು ಉತ್ತಮ ತಾಯಿಯಾಗುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾಳೆ. ಸ್ತ್ರೀಯ ಸ್ವೇಚ್ಛಾಚಾರ ಎಂಬಂತಹ ವಿಷಯವೇನಿಲ್ಲ. ಕೆಲವು ಮುಂದುವರೆದ ಸಮಾಜದಲ್ಲೂ ಸ್ತ್ರೀಯು ಅಪಮಾನಿತಳಾಗುತ್ತಿದ್ದಾಳೆ. ಉದಾಹರಣೆಗೆ ಸಾರ್ವಜನಿಕ ಸ್ಥಳಗಳಲ್ಲೇ ಅವರು ಪುರುಷರೊಂದಿಗೆ ಕೂರುವುದು ಇರಲಿ, ಅವರ ದೃಷ್ಟಿಯಿಂದಲೇ ದೂರವಿರಿಸುತ್ತಾರೆ. ಅಥವಾ ಹಿಂದೆ ಕುಳ್ಳರಿಸುತ್ತಾರೆ. ಯಾವಾಗ ಸ್ತ್ರೀಯರನ್ನು ಹಿಂದಿನ ಹಾಲಿನಲ್ಲಿ ಅಥವಾ ಕೋಣೆಯಲ್ಲಿ ಕುಳ್ಳರಿಸುತ್ತಿದ್ದಾರೋ ಅದು ಅವರು ಹಿಂಬದಿಯಲ್ಲೇ ತಮ್ಮ ಪಾತ್ರ ನಿರ್ವಹಿಸಲಿ ಜೊತೆಯಲ್ಲಲ್ಲ ಎಂದು ಸೂಕ್ಷ್ಮ ಸೂಚನೆಯಾಗಿದೆಯೇ? ಕೆಲವರು ನಂಬುವುದು ಏನೆಂದರೆ ಸ್ತ್ರೀಯರು ಪಾಪಕ್ಕೆ ಬಾಗುವವರು ಆದ್ದರಿಂದ ಅವರು ಮನೆಗೆಲಸದಲ್ಲಿ ಇರಿಸಿದಾಗ ಅವರು ತಮ್ಮ ಸ್ವಾಭಾವಿಕ ಪಾಪ ಭಾವನೆಯನ್ನು ಮರೆಯುತ್ತಾರೆ.




4.10 ಪರರಿಗೆ ದೂಷಿಸಬೇಡಿ
ನೀವು ನಿಮ್ಮ ಮನಸ್ಸನ್ನು ಯೋಗ್ಯವಾಗಿ ರಕ್ಷಿಸಿದರೆ, ಬಾಹ್ಯ ಆಗುಹೋಗುಗಳು ನಿಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಯಾವಾಗ ವಿಷಯಗಳು ನಿಮಗೆ ವ್ಯತಿರಿಕ್ತವಾಗಿ ಕಾರ್ಯ ಮಾಡಿದಾಗ ನೀವು ಸನ್ನಿವೇಶಗಳನ್ನು ದೂರಬೇಡಿ. ನೀವು ದುರಾದೃಷ್ಟವಂತರೆಂದು ಯೋಚಿಸಲೇಬೇಡಿ. ಅಥವಾ ವಿಧಿಯ ಶೋಷಿತ ಎಂದು ಭಾವಿಸಬೇಡಿ. ಅಥವಾ ಯಾರೋ ನೀಡಿದ ಶಾಪದ ಫಲ ಎಂದು ಕೊರಗಬೇಡಿ. ಯಾವ ಕಾರಣಗಳನ್ನು ನೀವು ನೀಡುವಿರೋ ಆದರೆ ನಿಮ್ಮ ಕಾರ್ಯಗಳ ಹೊಣೆಗಾರಿಕೆಯಿಂದ ನೀವು ದೂರ ಸರಿಯದಿರಿ. ಸಿಡುಕುಗೊಳ್ಳದೆ, ಕುಗ್ಗದೆ, ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಕಡುಕಷ್ಟಕರ ಸನ್ನಿವೇಶಗಳಲ್ಲೂ ಉತ್ಸಾಹದಿಂದ ಕಾರ್ಯ ಮಾಡಲು ಪ್ರಯತ್ನಿಸಿರಿ.
ಎಂಥಹ ಬದಲಾವಣೆಯನ್ನೇ ಎದುರಿಸಲು ಧೈರ್ಯತಾಳಿರಿ. ಆ ಬದಲಾವಣೆಯು ಸ್ವಾಭಾವಿಕವೇ ಆಗಲಿ ಅಥವಾ ಅಗತ್ಯವೇ ಆಗಲಿ ಎದುರಿಸಿರಿ. ಯಾವುದನ್ನು ನೀವು ತಡೆಯಲಾರಿರೋ ಅದನ್ನು ಒಪ್ಪುವ ಧೈರ್ಯವಂತರಾಗಿ. ಪ್ರತಿಯೊಬ್ಬರನ್ನೂ ಅಪ್ಪಳಿಸುವ, ಅನಿಶ್ಚಿತ ಲೋಕ ಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವಷ್ಟು ಜ್ಞಾನಿಗಳಾಗಿ. ಆದ್ದರಿಂದಾಗಿ ಹತಾಶೆ ನಿರಾಶೆಗಳನ್ನು ಮತ್ತು ಸಮಸ್ಯೆಗಳನ್ನು ಯಾವುದೇ ರೀತಿಯಲ್ಲಿ ಕುಗ್ಗದೆ ಎದುರಿಸುವಂತಹ ನಿಭರ್ೀತಿಯನ್ನು ವೃದ್ಧಿಸಿ, ಕಷ್ಟಗಳು ನಮ್ಮ ಜೀವನದಲ್ಲಿ ಸಾಮಾನ್ಯವಾಗಿವೆ. ನಾವು ಅವುಗಳನ್ನು ಧೈರ್ಯವಾಗಿ ಎದುರಿಸಬೇಕಾಗಿದೆ. ಯಾವಾಗ ನೀವು ಸಮಸ್ಯೆಗಳನ್ನು ಇನ್ನಷ್ಟು ಸಮಸ್ಯೆ ಸೃಷ್ಟಿಮಾಡದೆ ದಾಟುವುದನ್ನು ತಿಳಿಯುವಿರೋ ಆಗ ನೀವು ನಿಜಕ್ಕೂ ಪ್ರಜ್ಞಾವಂತರೇ ಸರಿ.
ಯಾರು ಪರರಿಗೆ ಸೇವೆ ಮಾಡಲು ಯತ್ನಿಸುವರೋ ಅವರು ಸಹಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರು ಸೇವೆ ಮಾಡದವರಿಗಿಂತ ಹೆಚ್ಚು ನಿಂದೆಗೆ ಗುರಿಯಾಗುತ್ತಾರೆ. ಆದ್ದರಿಂದ ನೀವು ಧೈರ್ಯಗೆಡದಿರಿ. ಬದಲಾಗಿ ನಿಸ್ವಾರ್ಥ ಸೇವೆಯಿಂದಾಗಿ ನಿಶ್ಚಿತವಾಗಿಯು ಸುಖದ ಪರಿಣಾಮ ತಂದೇ ತರುತ್ತದೆ ಎಂದು ಅರ್ಥಮಾಡಿಕೊಳ್ಳಿ. ನೀವು ಪರರಿಗೆ ಸೇವೆ ಸಲ್ಲಿಸುವಾಗ ನಿಮ್ಮಲ್ಲಿ ಜ್ಞಾನ ಮತ್ತು ತಿಳುವಳಿಕೆಗೆ ಇರುವುದು ಅತ್ಯವಶ್ಯಕವಾಗಿದೆ.
ಬ್ರಿಟಿಷ್ನ ತತ್ವಜ್ಞಾನಿಯಾದ ಬಟ್ಯರ್ಾಂಡ್ ರಸೆಲ್ ಹೀಗೆ ಹೇಳುತ್ತಾರೆ: ಜ್ಞಾನವಿಲ್ಲದ ಪ್ರೀತಿ ಮತ್ತು ಪ್ರೀತಿಯಿಲ್ಲದ ಜ್ಞಾನ ಎಂದಿಗೂ ಉತ್ತಮ ಜೀವನವನ್ನು ನೀಡದು.




4.11 ಮಾನವನ ಶ್ರೇಷ್ಠತೆ
ಎಲ್ಲಾ ಜೀವಿಗಳ ನಡುವೆ ಮಾನವನು ಅದ್ವಿತೀಯ ಜೀವಿಯಾಗಿ ನಿಲ್ಲುತ್ತಾನೆ. ಅದೇವೇಳೆಯಲ್ಲಿ ಆತನ ಲಕ್ಷಣಗಳು, ಕ್ರಿಯೆಗಳು ಮತ್ತು ವರ್ತನೆಗಳು ಇವೆಲ್ಲವನ್ನೂ ಪ್ರಾಣಿಗಳ ಲೋಕದಲ್ಲಿರುವಂತೆ ವಗರ್ಿಕರಿಸಲಾಗಿದೆ. ಆದರೂ ಮಾನವನಾಗಿ ಮಿಕ್ಕ ಜೀವಿಗಳಿಗಿಂತ ಬೇರೆಯಾಗಿಯೇ ನಿಲ್ಲುತ್ತಾನೆ. ನಿಜ, ವಿಕಾಸವಾದದ ವಗರ್ಿಕರಣದಲ್ಲಿ ಆತನು ಪ್ರಾಣಿಗಳ ಲೋಕದಲ್ಲಿ ಇರುವಂತೆಯೇ ಎಣಿಸಲಾಗುತ್ತದೆ. ಆಗಾಗ್ಗೆ ಮಾನವನು ಸಹಾ ಪ್ರಾಣಿಯಂತೆ ವತರ್ಿಸುತ್ತಾನೆಂಬುದೂ ಸಹ ನಿಜವೇ ಅಲ್ಲವೇ?
ಹಾಗಿದ್ದರೂ ಮಾನವನು ಪ್ರಾಣಿಗಿಂತ ಶ್ರೇಷ್ಠವೇ ಆಗಿದ್ದಾನೆ. ಆತನು ಮಾನವ ಆಗಿದ್ದಾನೆ, ಅಂದರೆ ದಯೆಯುಳ್ಳವ ಆಗಬಲ್ಲ, ಕೋಮಲವಾಗಬಲ್ಲ, ಪ್ರೀತಿಯಿಂದ ಕೂಡಿರಬಲ್ಲ ಮತ್ತು ಬುದ್ಧಿವಂತನಾಗಿರಬಲ್ಲನು. ಮಾನವನಲ್ಲಿ ಮಾತ್ರ ಸ್ವ-ಅರಿವುಳ್ಳಂತಹ ಮನಸ್ಸು ಉನ್ನತಮಟ್ಟದಲ್ಲಿ ಕಾರ್ಯವಹಿಸುತ್ತದೆ. ಪ್ರಾಣಿಗಳಿಗೆ ಹೋಲಿಸಿದರೆ ಯಾವುದು ಒಳ್ಳೆಯದು ಹಾಗು ಯಾವುದು ಕೆಟ್ಟದ್ದು, ಸರಿ ಮತ್ತು ತಪ್ಪು ಯಾವುದು? ನಿರ್ಣಯಿಸುವ ಸಾಮಥ್ರ್ಯ, ಯೋಗ್ಯ ಮತ್ತು ಒಳ್ಳೆಯತನದ ಆಯ್ಕೆ, ತಪ್ಪನ್ನು ಹಾಗು ಪಾಪವನ್ನು ತಿರಸ್ಕರಿಸುವಿಕೆ. ಇವೆಲ್ಲ ಮಾನವನಲ್ಲಿ ಮಾತ್ರ ಇರುತ್ತದೆ. ಈ ಬಗೆಯ ಒಳಿತನ್ನು ಮತ್ತು ಸರಿಯನ್ನು ಆಯ್ಕೆ ಮಾಡುವಿಕೆ, ಅದರಂತೆ ನಡೆಯುವಿಕೆ ಕೇವಲ ಮಾನವನಲ್ಲಿ ಮಾತ್ರ ಕಾಣಬಹುದು. ಇದನ್ನು ಧಮ್ಮದ ಪ್ರಜ್ಞೆ ಎನ್ನುವೆವು, ಶೀಲದ ಪ್ರಜ್ಞೆ ಎನ್ನುವೆವು. ಅದನ್ನು ಜಗತ್ತಿನ ಎಲ್ಲಾ ಶ್ರೇಷ್ಠ ಧರ್ಮಗಳು ಉನ್ನತವಾಗಿ ಹೇಳಿವೆ.
ಈ ಧಮ್ಮದ ಆಧಾರದ ಮೇಲೆಯೇ ಧರ್ಮವು ಹಾಗೆಯೇ ಶೀಲದ ಜೀವನವು ರಚಿತವಾಗಿದೆ. ಯಾವಾಗ ಅದರ ಮೌಲ್ಯವನ್ನು ಗುರುತಿಸಿ ವೈಯುಕ್ತಿಕವಾಗಿ ಹಾಗು ಸಾಮಾಜಿಕವಾಗಿ ಅನ್ವಯಿಸುತ್ತೇವೆಯೋ ಆಗ ಸಾಮಾಜಿಕ ಜೀವನವೂ ಸಹಾ ಉದಾತ್ತವಾಗುತ್ತದೆ. ಧರ್ಮವೇ ಸಮಾಜವನ್ನು ಜೊತೆಗೆ ಹಿಡಿದಿರುತ್ತದೆ. ಅದರ ಹೊರತಾಗಿ ಯಾವ ಸಮಾಜವೂ ಜೀವಿಸಲಾರದು ಮತ್ತು ಒಂದು ದಿನವೂ ಕಾರ್ಯ ನಿರ್ವಹಿಸದು. ಧರ್ಮ, ಪ್ರಜ್ಞೆ ಇರುವುದರಿಂದಲೇ ಆತನಿಗೆ ಸಾಮಾಜಿಕ ಮತ್ತು ಪರಮಾರ್ಥದ ಎಲ್ಲಾ ಉನ್ನತಿಯು ಆತನಿಗೆ ಸಾಧ್ಯವಾಗಿದೆ. ಈ ವಿಶಿಷ್ಟ ಸದ್ಗುಣವೇ ಆತನನ್ನು ಮಿಕ್ಕೆಲ್ಲಾ ಪ್ರಾಣಿಗಳಿಗಿಂತ ವಿಭಿನ್ನವಾಗಿಸಿದೆ.
ಆಹಾರದ, ನಿದ್ದೆಯ, ಮತ್ತಿತರ ಭೌತಿಕ ಅವಶ್ಯಕತೆಗಳಲ್ಲಿ ಮಾನವ ಪ್ರಾಣಿಗಳ ಸರಿಸಮಾನವಾಗಿದ್ದಾನೆ. ಆದರೆ ಧಮ್ಮ ಪ್ರಜ್ಞೆಗೆ ಹೋಲಿಸಿದಾಗ ಹಾಗೆಯೇ ಉದಾತ್ತ ಜೀವನಕ್ಕೆ ಹೋಲಿಸಿದಾಗ ಆತನು ಪ್ರಾಣಿಗಳಿಗಿಂತ ಶ್ರೇಷ್ಠನೇ ಆಗಿದ್ದಾನೆ. ಆದ್ದರಿಂದಾಗಿ ಧಮ್ಮವೇ ಆತನನ್ನು ಮಾನವನನ್ನಾಗಿಸಿವೆ. ಧಮ್ಮದ ಹೊರತು ಕೇವಲ ಪ್ರಾಣಿ ಅಥವಾ ಪ್ರಾಣಿಗಿಂತ ನೀಚನಾಗಿರುತ್ತಾನೆ.
ಆದ್ದರಿಂದ ಅಂತಹ ವಿಶೇಷ ಸೌಲಭ್ಯಕರ ಮಾನವ ಜನ್ಮವು ಖಂಡಿತವಾಗಿಯೂ ವ್ಯರ್ಥವಾಗಬಾರದು. ಈ ಜೀವನವನ್ನು ಶ್ರೇಷ್ಠತೆಗೂ ಅತ್ಯುತ್ತಮ ಸೇವೆಗೆ ಮೀಸಲಾಗಿಡಬೇಕು. ಅಂತಹದೆಲ್ಲವನ್ನು ಮಾಡಲೇಬೇಕೆನ್ನುವ ತುಡಿತದಿಂದಲೇ ಸಾಧ್ಯವಾಗುವುದು. ಇಂತಹ ಶ್ರೇಷ್ಠ ಹಾಗು ನಿಜ ಉದ್ದೇಶವನ್ನು ಮರೆತು ಮಾನವ ಪ್ರಾಪಂಚಿಕ ಸುಖಗಳತ್ತ ಓಡುವುದು ನಿಜಕ್ಕೂ ವಿಷಾದನೀಯವಾಗಿದೆ. ಒಬ್ಬ ಹಿಂದು ತತ್ವಜ್ಞಾನಿ ಗಮನಾರ್ಹವಾಗಿ ಹೀಗೆ ಟೀಕಿಸಿದ್ದಾನೆ: ಮಾನವನಿಗಿಂತ ದೊಡ್ಡ ಮುರ್ಖನು ಬೇರೆ ಯಾರಿದ್ದಾರೆ, ಆತನು ಮಾನವ ಶರೀರ ಹೊಂದಿದ್ದರೂ ಸಹಾ ಈ ಜನ್ಮದಲ್ಲೇ ನಿಜ ವಿಮುಕ್ತಿಯನ್ನು ಸಾಧಿಸಲು ಅಲಕ್ಷಿಸುತ್ತಿದ್ದಾನೆ? ಮಾನವನು ಪರಿಪೂರ್ಣನಾಗಬೇಕು ಮತ್ತು ಆತನು ಉದಾತ್ತತೆಯನ್ನು ತನ್ನಲ್ಲಿ ಸ್ಥಾಪಿಸಬೇಕು. ಇದೇ ಎಲ್ಲಾ ಧರ್ಮಗಳ ಉದ್ದೇಶವಾಗಿದೆ, ಎಲ್ಲಾ ಪರಮಾರ್ಥ ಸಾಧನೆಯ ಗುರಿಯೂ ಆಗಿದೆ.





4.12 ಮಾನವನ ಸ್ವರೂಪ
ಶಾರೀರಿಕ ಆನಂದಗಳಾಗಲಿ ಮತ್ತು ಭೌತಿಕ ಸುಖಗಳಾಗಲಿ ಅವು ಇರುವಂತಹುದಲ್ಲ, ಓಡಿಹೋಗುವಂತಹುದು. ಅವು ಬರುತ್ತವೆ ಮತ್ತು ಹೋಗುತ್ತವೆ. ಪಯರ್ಾಯವಾಗಿ ಆನಂದ ಮತ್ತು ದುಃಖವನ್ನು ತರುತ್ತವೆ. ಯಾವಾಗ ಆನಂದವು ಬರುವುದೋ, ಮಾನವ ಹಿಗ್ಗುತ್ತಾನೆ ಮತ್ತು ಯಾವಾಗ ದುಃಖವು ಬರುವುದೋ ಆತನು ಕುಗ್ಗುತ್ತಾನೆ. ಜಗತ್ತಿನ ಎಲ್ಲಾ ಭರವಸೆಗಳು ಮತ್ತು ಆನಂದಗಳು ಕ್ಷಣಿಕವಾಗಿವೆ. ಅದ್ಯಾವುದೂ ನಿರಂತರವಾಗಿ ಶಾಂತಿಯನ್ನಾಗಲಿ ಅಥವಾ ಸುಖವನ್ನಾಗಲಿ ಮಾನವನಿಗೆ ನೀಡಲಾರವು. ಅನಿಶ್ಚತತೆಯು ಈ ಜಗತ್ತಿನ ಲಕ್ಷಣವಾಗಿದೆ. ಇಡೀ ಸಂಪೂರ್ಣ ಸೃಷ್ಟಿಯೇ ನಿರಂತರವಾಗಿ ಬದಲಾವಣೆ ಹೊಂದುತ್ತಿದೆ. ಪರಿವರ್ತನೆಯಲ್ಲೇ ಸ್ಥಿರವಾಗಿದೆ, ಪ್ರತಿಯೊಂದು ಜನ್ಮಕ್ಕೆ, ಬೆಳವಣಿಗೆಗೆ, ಕೊಳಯುವಿಕೆಗೆ, ಕರಗುವಿಕೆಗೆ ಮತ್ತು ಮರಣಕ್ಕೆ ಗುರಿಯಾಗಿದೆ. ಈ ನಿಷ್ಠೂರ ಪರಿವರ್ತನೆಗಳಿಂದ ಜಗತ್ತಿನಲ್ಲಿ ಯಾವುದು ಪಾರಾಗಲಾರದು.
ಸತ್ಯವನ್ನು ಅನ್ವೇಷಿಸಲು ಯಾವುದು ಸ್ವ-ಸಾಕ್ಷಾತ್ಕರವೋ ಮತ್ತು ಅಮರವೋ ಅದನ್ನು ಅರಿಯುವುದಕ್ಕಾಗಿ ಮಾನವನು ವಾಸ್ತವವಲ್ಲದ ವಿಷಯಗಳಿಂದ ದೂರ ಹೋಗಬೇಕಾಗುತ್ತದೆ. ಬೆನ್ನನ್ನು ತಿರುಗಿಸಬೇಕಾಗುತ್ತದೆ. ಯಾವಾಗ ಆತನು ಪ್ರಪಂಚದ ಮತ್ತು ಅದರ ವಿಷಯಗಳತ್ತ ಓಡುವುದು ವ್ಯರ್ಥವೆಂದು ತಿಳಿಯುತ್ತಾನೋ ಆಗ ಆತನು ಅವುಗಳಿಂದ ವಿಮುಖನಾಗುತ್ತಾನೆ. ಆಗ ಆತನು ತ್ಯಾಗಕ್ಕೆ ಶರಣಾಗತನಾಗುತ್ತಾನೆ. ತ್ಯಾಗಕ್ಕೆ ಆಶ್ರಯ ಹೊಂದುತ್ತಾನೆ. ಹೀಗೆ ಆತನು ಪ್ರಪಂಚದಿಂದ ವಿಮುಖನಾಗಿ ಆಂತರ್ಯದಲ್ಲಿ ಅನ್ವೇಷಣೆ ಸಾಗಿಸುತ್ತಾನೆ. ಆತನು ಸತ್ಯದ ಸತ್ಯತೆ ಮತ್ತು ಬೆಳಕಿನ ಬೆಳಕಿನೆಡೆಗೆ ತಲುಪಿದಾಗ ಆತನ ಯಾನವು ಅಂತ್ಯವಾಗುತ್ತದೆ.
ಈ ಪ್ರಮುಖ ತಿರುವು ಅಪ್ಪಟ ಪರಮಾರ್ಥ ಪರಿಶ್ರಮದ ಆರಂಭವೆಂದು ಗುರುತು ಹಾಕುತ್ತದೆ. ಇದರ ಹೊರತಾಗಿ ಪ್ರತಿಯೊಂದು ಸಹಾ ಧರ್ಮದ ಹೆಸರಿನಲ್ಲಿ ಮಗುವಿನ ಆಟವಾಗಿದೆ. ಆಟದ ಸಾಮಗ್ರಿಗಳು ಮಗುವಿಗಂತೂ ಬೇಕೇ ಬೇಕು. ಆದರೆ ಅದು ನಿದರ್ಿಷ್ಟ ಅವಧಿಯವರೆಗೆ ಮಾತ್ರ. ನಂತರದ ಹಂತ ತಲುಪಿದ ಬಳಿಕ ಅವೆಲ್ಲ ಬೇಕಾಗಿರುವುದಿಲ್ಲ.
ಧಮ್ಮ ಜೀವನವು ಒಂದು ಅದ್ಭುತ ಸಾಹಸದಂತೆ, ಸಂಶಯ ಇದ್ದ ಸಂದರ್ಭದಲ್ಲಿ ಅದು ಉತ್ಸಾಹಯುತ ಪರಿಶ್ರಮವನ್ನು ಒತ್ತಾಯಿಸುತ್ತದೆ. ಮಾನವನಿಗೆ ಸಂಶಯಪಡಲು ಹಕ್ಕಿದೆ ಮತ್ತು ಸಮಂಜಸವು ಸಹಾ. ದುರ್ಬಲರು ಮತ್ತು ಬಲಹೀನ ಮನಸ್ಕರು ಎಂದಿಗೂ ಧಮ್ಮಪಥದಲ್ಲಿ ಹೆಜ್ಜೆ ಹಾಕಲಾರರು. ದುರ್ಬಲರಿಂದ ಎಂದಿಗೂ ಸ್ವಯಂವನ್ನು ಅರಿಯಲಾಗುವುದಿಲ್ಲ. ಧಮ್ಮವು ಮಾನವನಿಗೆ ಉನ್ನತವಾದ ಸವಾಲನ್ನು ಪ್ರಸ್ತಾಪ ಮಾಡುತ್ತಿದೆ. ಅದು ಆತನಿಗೆ ಅತಿಯಾದ ಅಂಟುವಿಕೆಯನ್ನು ತ್ಯಜಿಸಲು ಸವಾಲು ಹಾಕುತ್ತಿದೆ.
ಬೇರೆ ಯಾವ ವಿಚಾರವು ಮಾನವನನ್ನು ಹಿಂದಕ್ಕೆ ಎಳೆದುಹಿಡಿಯಲಾರದು. ಎಲ್ಲಾ ಧಮ್ಮಗಳು ಮಾನವನಿಗೆ ಧಮ್ಮದ ಹಾದಿಯಲ್ಲಿ ಹೋಗುವಾಗ ಎದುರಿಸಬೇಕಾದ ಅಪಾಯಗಳು ಮತ್ತು ಸೋಗಿನ ಮುಚ್ಚಿದ ಗುಂಡಿಗಳನ್ನು ಎಚ್ಚರಿಸಿವೆ. ಅದರಿಂದಾಗಿ ಆತನು ಗುಂಡಿಗಳಲ್ಲಿ ಬೀಳದಂತೆ ಮತ್ತು ಅಪಾಯಗಳನ್ನು ಸಂಕಷ್ಟಗಳನ್ನು ದಾಟುವ ವಿಧಾನಗಳನ್ನು ನೀಡಿರುತ್ತವೆ. ಧಮ್ಮದ ಸಮರ್ಥತೆವುಳ್ಳ ವಿವಿಧಬಗೆಯ ಆಕಾಂಕ್ಷಿಗಳಿಗೆ ಅವರ ಮನೋಧರ್ಮಕ್ಕೆ ತಕ್ಕಂತೆ ಹಲವು ವಿಧದ ವಿಧಾನಗಳಿವೆ.
ಇಂದು ನೀವು ಕೋಟ್ಯಾಧೀಶರು ಆಗಿರಬಹುದು, ನಾಳೆಗೆ ನೀವು ದಿವಾಳಿ ಆಗಬಹುದು. ಇಂದು ನೀವು ಆರೋಗ್ಯಕರವಾಗಿ ಸುಂದರವಾಗಿರಬಹುದು, ನಾಳೆಗೆ ನಿಮ್ಮ ಸೌಂದರ್ಯ ಮತ್ತು ಯೌವ್ವನ ಅದೃಶ್ಯವಾಗಬಹುದು. ಅದೇರೀತಿ ತದ್ವಿರುದ್ಧವಾಗಿ ನೀವು ಬಡತನವನ್ನು ಅಂತ್ಯಗೊಳಿಸಬಹುದು ಮತ್ತು ಅನಾರೋಗ್ಯವನ್ನು ಸಹಾ ಈಗಿನ ಕರ್ಮದಿಂದ ದೂರೀಕರಿಸಬಹುದು. ಈ ಬುದ್ಧಿವಾದವು ನಿಜವಾದ ಮ್ಯಾಜಿಕ್ನಂತೆ ನಮ್ಮ ಎಲ್ಲಾ ಖಿನ್ನತೆಯ ಮನೋವೃತ್ತಿಗಳೆಲ್ಲವನ್ನು ವಾಸಿಮಾಡುತ್ತದೆ. ಇದು ದುರ್ಬಲರ ಮನಸ್ಸಿಗೆ ಶ್ರೇಷ್ಠವಾದ ಶಕ್ತಿವರ್ಧಕದಂತೆ.
ಶಕ್ತಿಯು ಶಾರೀರಿಕ ಸಾಮಥ್ರ್ಯದಿಂದ ಬರುವುದಿಲ್ಲ. ಅದು ಅದಮ್ಯ ಇಚ್ಛೆಯಿಂದ, ದೃಢತೆಯಿಂದ ಬರುತ್ತದೆ (ಮಹಾತ್ಮಗಾಂಧಿ).
ಮಾನವ ತನ್ನ ಸುಖಗಳನ್ನು ತೃಪ್ತಿಪಡಿಸುವುದಕ್ಕೋಸ್ಕರ ಐಶ್ವರ್ಯವನ್ನು ಗಳಿಸುತ್ತಾನೆ. ಅದನ್ನೇ ಹುಡುಕುತ್ತಾನೆ. ಆಸೆಯು ತೃಪ್ತಿಯನ್ನು ಹುಡುಕುತ್ತದೆ, ಐಶ್ವರ್ಯವು ಈ ತೃಪ್ತಿ ಪಡೆಯುವಂತಾಗಲು ಸಹಾಯ ಮಾಡುತ್ತದೆ. ಆ ಮನುಷ್ಯ ಈ ಸುಖಗಳಿಗಾಗಿ ನೈತಿಕತೆ, ಧಮ್ಮ ಮೌಲ್ಯಗಳು ಮತ್ತು ಶಿಸ್ತನ್ನು ಬಲಿಕೊಟ್ಟರೆ ಆತ ಪಾಪಿಯಾಗುತ್ತಾನೆ. ಜೊತೆಗೆ ಆತನ ಬಯಕೆಗಳು ಅಂತ್ಯವಿಲ್ಲದ ಬಯಕೆಗಳಾಗುತ್ತವೆ. ಪ್ರತಿ ತೃಪ್ತಿಯು 10 ಬಯಕೆಗಳನ್ನು ಸೃಷ್ಟಿಮಾಡುತ್ತದೆ.
ಯಾವುದೇ ವ್ಯಕ್ತಿ ನಿಮ್ಮ ಮಾತುಗಳನ್ನು ದೀರ್ಘಕಾಲ ಕೇಳಬೇಕಾದರೆ ಆತನ ಬಗ್ಗೆಯೇ ಮಾತನಾಡಿ, ಆತನು ಆಸಕ್ತಿಯಿಂದ ಕೇಳುತ್ತಾನೆ.
ಆಸೆಗಳು ತೃಪ್ತಿಯನ್ನು ಹಿಂಬಾಲಿಸುತ್ತವೆ ಮತ್ತು ತೃಪ್ತಿಯು ಆಸೆಗಳನ್ನು ಹಿಂಬಾಲಿಸುತ್ತದೆ. ಅವು ಮಾನವನನ್ನು ಅನೈತಿಕತೆಯೆಡೆಗೆ ಬಾಗುವಂತೆ ಮಾಡುತ್ತವೆ. ಇದರಿಂದಾಗಿ ಪೂರ್ಣ ಮನುಷ್ಯನ ಆದರ್ಶ, ಅಖಂಡತೆ, ಪೂರೈಕೆ ಮತ್ತು ಜ್ಞಾನದಿಂದ ದೂರ ಹಿಮ್ಮೆಟ್ಟುವಂತಾಗುತ್ತದೆ. ಆತನ ಮನಸ್ಸು ಬಯಕೆಗಳಿಗಾಗಿ ಇನ್ನೂ ಹಂಬಲಿಸುವುದನ್ನು ಕಂಡು ಒತ್ತಡಕ್ಕೀಡಾಗುತ್ತಾನೆ. ದೇಹವು ಮುಪ್ಪಿಗೆ ಈಡಾಗುತ್ತದೆ. ಸುಖಕ್ಕೆ ಅನರ್ಹವಾಗುತ್ತದೆ. ಆದರೂ ಹೃದಯ ಮಾತ್ರ ಸುಖಕ್ಕಾಗಿ ಚಿರ ಯೌವ್ವನದಿಂದಲೇ ಕೂಡಿರುತ್ತದೆ. ಈ ಪ್ರಕಾಶಮಯವಾದ ಸತ್ಯ ಆತನಿಗೆ ಚಿಂತನೆ ಮಾಡುವಂತೆ ಮಾಡುತ್ತದೆ. ಆತನು ತನ್ನ ಗತಜೀವಿತವನ್ನು ಅವಲೋಕಿಸಿದಾಗ ತಾನು ತಪ್ಪು ಉದ್ದೇಶಕ್ಕಾಗಿ ಮೂರ್ಖನಾಗಿ ಅಲೆದಾಡಿದೆ, ಕ್ಷಣಿಕ, ನಿಸ್ಸಾರ, ಅನರ್ಥ ವಿಷಯಗಳಿಗೆ ಹಂಬಲಿಸಿದೆ ಎಂದು ಅರಿಯುತ್ತಾನೆ.
ನೀವು ಒಳ್ಳೆಯವರಾಗಲು ಬಯಸಿದರೆ, ತಾನು ಕೆಟ್ಟವನಾಗಲು ಶಕ್ತ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಏಕೆಂದರೆ ಆಗ ಮಾತ್ರ ಜಾಗ್ರತೆಯಿಂದ ಆತನು ಅದಕ್ಕೆ ಬೀಳಲಾರ. ಚಿಂತನೆಗಳಿಗೆ ಸ್ವತಂತ್ರ್ಯವಿದ್ದಾಗಲೇ ಪರಮಾರ್ಥದ ಪ್ರಗತಿ ಸಾಧ್ಯ. ಎಲ್ಲಿ ಮೂಢನಂಬಿಕೆ, ಅಂಧಾನುಕರಣೆ ಆಳುತ್ತಿದೆಯೋ ಅಲ್ಲಿ ಮಾನಸಿಕ ವಿಕಾಸ ಸಾಧ್ಯವಿಲ್ಲ. ಚಿಂತನೆಯ ಸ್ವತಂತ್ರ್ಯದಿಂದಲೇ ಮಾನಸಿಕ ಶಕ್ತಿ ಮತ್ತು ಉನ್ನತಿ ಸಾಧ್ಯವಾಗುತ್ತದೆ. ಸ್ವ-ಮತಾಂಧತೆಯು ಜಡತ್ವಕ್ಕೆ ಕರೆದೊಯ್ಯುತ್ತದೆ. ಮತಾಂಧತೆಯು, ಅಸಹನೆಯ ಜೊತೆಗೆ ಎಲ್ಲೆಡೆ ಹೋಗುವುದು ಎಂದು ಅನುಭವವು ಹೇಳುವುದು, ಒಂದು ಇದ್ದಲ್ಲಿ, ಮತ್ತೊಂದು ದೂರವಿರುವುದಿಲ್ಲ.
ಭೌತಿಕ ಸುಖಗಳಿಗಿಂತ ಮಾನವನಿಗೆ ಪರಮಾರ್ಥ ವಿಕಾಸ ಅತಿ ಪ್ರಧಾನ್ಯಕರ ವಿಷಯವಾಗಿದೆ. ಮಾನವನಿಗೆ ಶಾಂತಿ ಸಮಾಧಾನ ಹಾಗೂ ಸುಖಗಳನ್ನು ಏಕಕಾಲದಲ್ಲಿ ನಾವು ನಿರೀಕ್ಷಿಸಲಾರೆವು ಎಂದು ಇತಿಹಾಸ ಹೇಳುವುದು. ಜನರ ಜೀವನಕ್ಕೆ ಬೇಕಾದ ಪರಮಾರ್ಥದ ಮೌಲ್ಯಗಳು ಮತ್ತು ನೈತಿಕ ತತ್ವಗಳು ಪರಿಣಾತ್ಮಕವಾಗಿ ಧಮ್ಮವು ಮಾತ್ರ ನೀಡಬಲ್ಲದು.
ಮಾನವನು ಎಲ್ಲ ಜೀವಿಗಳಿಗಿಂತ ಪರಮ ಮಹತ್ವಮಯವಾಗಿದ್ದಾನೆ. ಬೌದ್ಧ ಧಮ್ಮದ ಪ್ರಕಾರ ಮಾನವ ದೇವತೆಗಳಿಗಿಂತ ಮಹತ್ವಮಯ, ಏಕೆ ಹೀಗೆ? ಏಕೆಂದರೆ ದೇವತೆಗಳು ತಮ್ಮ ಹಿಂದಿನ ಜನ್ಮಗಳ ಪುಣ್ಯಫಲದಿಂದಾಗಿ ಸುಖದಲ್ಲೇ ಆನಂದಿತವಾಗಿವೆ. ಆದರೆ ಮಾನವ ತನ್ನಲ್ಲಿ ತಾನು ಹೆಚ್ಚುವರಿ ಪ್ರಚನ್ನತೆಗಳಿಂದ ಕೂಡಿದ್ದಾನೆ. ಮಾನವ ತನ್ನ ಅದೃಷ್ಟಕ್ಕೆ ತಾನೇ ಪ್ರಭುವಾಗಿದ್ದಾನೆ. ತನ್ನ ಭವಿಷ್ಯಕ್ಕೆ ತಾನೇ ಹೊಣೆಗಾರನಾಗಿದ್ದಾನೆ. ತನ್ನ ಮನಸ್ಸಿನ ರಣಗಂಗದಲ್ಲಿ ಆತನು ಇಡೀ ವಿಶ್ವವನ್ನು ಗೆಲ್ಲಬಲ್ಲವನಾಗಿದ್ದಾನೆ. ಆದರೆ ಹೀಗಾಗಲು ಆತನು ಕಮ್ಮದ ಸ್ವರೂಪವನ್ನು ಅರಿಯಲೇಬೇಕಾಗಿದೆ. ಏಕೆಂದರೆ ಕರ್ಮ ತತ್ವವೇ ಆತನ ಆಂತರ್ಯ ಮತ್ತು ಬಾಹ್ಯ ಜಗತ್ತನ್ನು ಆಳ್ವಿಕೆ ನಡೆಸುತ್ತದೆ.




4.13 ಪೋಷಕರ ಹೊಣೆಗಾರಿಕೆ
ನಿಮ್ಮ ಮಕ್ಕಳ ಪಾಲನೆ ಮತ್ತು ಕ್ಷೇಮಕ್ಕೆ ನೀವೆ ಹೊಣೆಗಾರರಾಗಿದ್ದೀರಿ. ಮಗುವು ಆರೋಗ್ಯವಾಗಿ, ಬಲಿಷ್ಠವಾಗಿ ಮತ್ತು ಉಪಯುಕ್ತ ನಾಗರಿಕನಾದರೆ ಅದು ನಿಮ್ಮ ಪ್ರಯತ್ನಗಳ ಫಲವಾಗಿದೆ. ಹಾಗೆಯೇ ಮಗುವು ಅಪರಾಧಿಯಾಗಿ ಬೆಳೆದರೂ ಅದಕ್ಕೂ ನೀವೇ ಹೊಣೆಗಾರರಾಗಿದ್ದೀರಿ. ಬೇರೆಯವರನ್ನು ದೂಷಿಸಬೇಡಿ. ಪೋಷಕರಾಗಿ ಮಗುವಿಗೆ ಯೋಗ್ಯ ದಾರಿಯ ಮಾರ್ಗದರ್ಶನ ಮಾಡಬೇಕಾಗಿದ್ದು ನಿಮ್ಮ ಕರ್ತವ್ಯವಾಗಿತ್ತು. ಆದರೂ ಕೆಲವು ತಿದ್ದಲಾಗದ ತಾರುಣ್ಯ ಅಪರಾಧದ ಘಟನೆ ನಡೆದಿವೆ. ಹಾಗಿರುವಾಗಲೂ ಪೋಷಕರಾಗಿ ನೀವೇ ನಿಮ್ಮ ಮಕ್ಕಳ ವರ್ತನೆಗೆ ಹೊಣೆಗಾರರಾಗಿರುವಿರಿ.
ಮಗುವು ತನ್ನ ವಯಸ್ಸಿನಲ್ಲಿ ಅತ್ಯಂತ ಪ್ರಭಾವಕ್ಕೆ ಒಳಗಾಗುವ ಮನಸ್ಸನ್ನು ಹೊಂದಿರುತ್ತದೆ. ಅದಕ್ಕೆ ಅಪಾರ ಪ್ರೀತಿ, ಜಾಗರೂಕತೆ, ವಾತ್ಸಲ್ಯ ಮತ್ತು ಗಮನವನ್ನು ಪೋಷಕರು ನೀಡಲೇಬೇಕಾಗುತ್ತದೆ. ಪೋಷಕರ ಪ್ರೀತಿ, ವಾತ್ಸಲ್ಯ ಮತ್ತು ಮಾರ್ಗದರ್ಶನ ಇಲ್ಲದಿದ್ದರೆ ಮಗುವು ಭಾವನಾತ್ಮಕವಾಗಿ ಅಂಕವೈಕಲ್ಯತೆ ಪಡೆಯುತ್ತದೆ. ಹಾಗು ವಾಸಿಸಲು ಜಗತ್ತು ದಿಗ್ಭ್ರಮೆಕಾರಕ ಸ್ಥಳವೆಂದು ಭಾವಿಸಿಬಿಡುತ್ತದೆ. ಪೋಷಕರ ವಾತ್ಸಲ್ಯ ತೋರುವಿಕೆ ಅಂದರೆ ಮಗುವಿನ ಎಲ್ಲಾ ಬೇಡಿಕೆಗಳನ್ನು ಪರಿಹರಿಸುವುದು ಎಂದು ಅರ್ಥವಲ್ಲ. ಅತಿಯಾದ ಮುದ್ದಿನಿಂದ ಸಹ ಮಗುವು ಹಾಳಾಗುವುದು. ತಾಯಿಯ ವಾತ್ಸಲ್ಯ ಮತ್ತು ಪಾಲನೆಯ ಶಿಸ್ತಿನಿಂದ ದೃಢತೆಯಿಂದ ಕೂಡಿರಬೇಕೆ ಹೊರತು ಒರಟುತನದಿಂದಾಗಲಿ, ಕೋಪ-ದ್ವೇಷದಿಂದ ಅಲ್ಲ. ಮಗುವಿಗೆ ನಿಮ್ಮ ವಾತ್ಸಲ್ಯದ ಅವಶ್ಯಕತೆ ಇದ್ದಂತೆ ಶಿಸ್ತು ಅಷ್ಟೇ ಅವಶ್ಯಕವಾಗಿದೆ. ಅದನ್ನು ಮಗುವು ಅರ್ಥಮಾಡಿಕೊಳ್ಳುವ ಹಾಗೆ ವತರ್ಿಸಿ. ದುರಾದುಷ್ಟಕರ ವಿಷಯವೇನೆಂದರೆ ಇಂದಿನ ಸಮಾಜವು ಮಗುವಿಗೆ ವಾತ್ಸಲ್ಯವನ್ನು ನೀಡುವಲ್ಲಿ ವಿಫಲವಾಗಿದೆ. ಇಂದು ಭೌತಿಕತೆಯ ಉನ್ನತಿಯಲ್ಲಿ, ಲಿಂಗಗಳ ಸಮಾನತೆಯ ಆಕಾಂಕ್ಷೆಯ ಏರುಗತಿಯ ಪ್ರಮಾಣದಿಂದಾಗಿ, ಪತಿಯಂತೆ ದುಡಿಯಬೇಕು ಎಂಬ ಸತಿಯರ ಛಲದಿಂದಾಗಿ ಸ್ಪಧರ್ೆಯಿಂದಾಗಿ ಮಗುವು ಬಡವಾಗಿದೆ.
ಇಂದು ತಾಯಂದಿರು ತಮ್ಮ ಮಗುವಿನ ಲಾಲನೆ, ವಾತ್ಸಲ್ಯಕ್ಕಿಂತ ಹೆಚ್ಚಾಗಿ ತಮ್ಮ ಕುಟುಂಬ, ಗೌರವ, ಘನತೆಗಾಗಿ ಉದ್ಯಮಗಳಲ್ಲಿ, ಕಛೇರಿಗಳಲ್ಲಿ, ಅಂಗಡಿಗಳಲ್ಲಿ ಕೆಲಸ ಮಾಡುತ್ತಾ ವಾತ್ಸಲ್ಯಕ್ಕಿಂತ ಸ್ವಾರ್ಥವೇ ಹೆಚ್ಚು ಒಳಿತು ಎಂಬ ಭಾವನೆಯಲ್ಲಿದ್ದಾರೆ. ಮಕ್ಕಳನ್ನು ಸಂಬಂಧಿಕರ ಬಳಿ ಅಥವಾ ದಾದಿಯರ ಬಳಿ ಬಿಟ್ಟು ಹೋಗುತ್ತಾರೆ. ಒಮ್ಮೆ ಸರ್ವಸ್ವದಂತೆ ಕಾಣುತ್ತಿದ್ದ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೊರಡುವುದರಿಂದಾಗಿ, ಮಗುವಿಗೆ ವಾತ್ಸಲ್ಯ, ಮಾರ್ಗದರ್ಶನ, ಯೋಗ್ಯ ಪ್ರಭಾವಿ ವ್ಯಕ್ತಿತ್ವದಿಂದ ಮಗುವು ವಂಚಿತವಾಗುತ್ತಿದೆ. ತಾಯಿಗೂ ಸಹಾ ಈ ಅಪರಾಧಿ ಪ್ರಜ್ಞೆ ಖಂಡಿತವಾಗಿ ಕಾಡುವುದು, ಪರಿಣಾಮವಾಗಿ ಮಗುವಿನ ಬೇಡಿಕೆಗಳನ್ನೆಲ್ಲ ಈಡೇರಿಸಲು ಸಿದ್ಧಳಾಗುತ್ತಾಳೆ. ಅದರ ಫಲಿತಾಂಶದಿಂದಾಗಿ ಮಗುವು (ಕೆಟ್ಟ ಹಠ, ಸ್ವಾರ್ಥ, ಲೋಭ, ಕೋಪ, ಕರ್ತವ್ಯಹೀನತೆಯ ಗುಣಗಳನ್ನು ಕಲಿತು) ಹಾಳಾಗುತ್ತದೆ.
ಮಗುವಿಗೆ ಅಪಾಯಕಾರಿ ಚಾರಿತ್ರ್ಯವುಂಟು ಮಾಡುವ ಅತ್ಯಾಧುನಿಕ ಆಟಿಕೆಗಳನ್ನು, ಅಂದರೆ ಟ್ಯಾಂಕರ್, ಮಿಷನ್ಗನ್, ಪಿಸ್ತೋಲ್, ಖಡ್ಗಗಳನ್ನು ನೀಡುತ್ತಿದ್ದಾರೆ. ಇದರ ಮನಶಾಸ್ತ್ರೀಯ ಪರಿಣಾಮವು ಒಳ್ಳೆಯದಲ್ಲ. ಮಗುವಿಗೆ ದಯೆ, ಮುದಿತಾ, ಮೈತ್ರಿ, ಸೇವೆ ಸಹಾಯಗಳನ್ನು ಕಲಿಸುವ ಬದಲು ಧ್ವಂಸಕಾರಿ ಪ್ರವೃತ್ತಿಗಳನ್ನು ಕಲಿಸಲಾಗುತ್ತಿದೆ. ಅಂತಹ ಮಗುವು ಹಿಂಸಾ ಪ್ರವೃತ್ತಿಯಿಂದಲೇ ಬೆಳೆಯುತ್ತದೆ. ಅಂತಹ ಆಟಿಕೆಗಳನ್ನು ನೀಡುವುದು ಪ್ರಜ್ಞಾವಂತ ವಾತ್ಸಲ್ಯಮಯಿ ಪೋಷಕರ ಕಾರ್ಯವಲ್ಲ.
ಇಂದು ಪೋಷಕರು ಧ್ವಂದ್ವದಲ್ಲಿದ್ದಾರೆ. ದಿನನಿತ್ಯದ ಕೆಲಸಗಳನ್ನು ಮುಗಿಸಿ ಮನೆಗೆ ಬರುತ್ತಾರೆ, ದಣಿದಿರುತ್ತಾರೆ. ಮನೆಗೆ ಬಂದು ಊಟ, ಟಿ.ವಿ. ಹೀಗೆ ಕಾಲ ಕಳೆದುಬಿಡುತ್ತಾರೆ. ಹೀಗಾಗಿ ಮಗುವಿಗಾಗಿ ಯೋಗ್ಯಕಾಲ ಮೀಸಲಿರಿಸುವದು ತೀರಾ ಅತ್ಯಲ್ಪವಾಗಿಬಿಡುತ್ತದೆ.
ಸ್ತೀ ವಿಮೋಚನೆಯ ಹೆಸರಿನಲ್ಲಿ ಇಂದು ಸ್ತ್ರೀಯರು ಗೃಹದ ಹೊರಗೆ ಪುರುಷರೊಂದಿಗೆ ಸ್ಪಧರ್ಿಸುವುದೇ ಸಮಸ್ಯೆಗೆ ಪರಿಹಾರ ಎಂದು ಭಾವಿಸಿದ್ದಾರೆ. ಅಂತಹ ಸ್ತ್ರೀಯರು ಮಗುವನ್ನು ಹೆರಬೇಕೆ ಅಥವಾ ಬೇಡವೇ ಎಂದು ಸ್ಪಷ್ಟವಾಗಿ ನಿರ್ಣಯಿಸಬೇಕು. ಏಕೆಂದರೆ ಮಗುವನ್ನು ಹೆತ್ತು ನಂತರ ಅದನ್ನು ಸರಿಯಾಗಿ ಲಾಲಿಸದೆ ತ್ಯಜಿಸುವುದು ಬೇಜವಾಬ್ದಾರಿತನವಾಗುತ್ತದೆ. ನೀವು ಸೃಷ್ಟಿಸಿದುದಕ್ಕೆ ನೀವೇ ಹೊಣೆಗಾರರು. ಒಂದು ಮಗುವಿಗೆ ಭೌತಿಕವಾಗಿ ಸಲಹಲ್ಪಡುವುದು ಅತ್ಯಂತ ಅಗತ್ಯವಾಗುತ್ತದೆ. ವಾತ್ಸಲ್ಯಭರಿತ ಮತ್ತು ಜಾಗರೂತನದ ಸಲಹುವಿಕೆಗೆ ಹೋಲಿಸಿದರೆ ಭೌತಿಕ ಹಿತದ ಹಂಚಿಕೆ ಎರಡನೆಯ ಸ್ಥಾನಕ್ಕೆ ಬರುತ್ತದೆ.
ಬಡತನದ ಮನೆಗಳಿದ್ದರೂ, ಅತಿ ಅಲ್ಪ ಆದಾಯವಿದ್ದರೂ ಸಹಾ ಹಲವಾರು ಜನರು ಮಕ್ಕಳಿಗೆ ಅಪಾರ ವಾತ್ಸಲ್ಯ ನೀಡುತ್ತಾರೆ. ಇನ್ನೊಂದೆಡೆ ಹಲವಾರು ಶ್ರೀಮಂತರು ತಮ್ಮ ಮಕ್ಕಳಿಗೆ ಪ್ರತಿ ಭೌತಿಕ ವಸ್ತುಗಳನ್ನು ಅಪಾರವಾಗಿ ನೀಡುತ್ತಾರೆ. ಆದರೆ ವಾತ್ಸಲ್ಯವನ್ನು ಆ ಮಕ್ಕಳು ಅತಿ ಅಲ್ಪವಾಗಿ ಅನುಭವಿಸಿ ಬೆಳೆದ ಮೇಲೆ ಮಾನಸಿಕವಾಗಿ ಮತ್ತು ನೈತಿಕವಾಗಿ ಅಂಗವಿಕಲರಾಗುತ್ತಾರೆ.
ಕುಟುಂಬದ ಪಾಲನೆಯ ಬಗ್ಗೆ ಗಮನಹರಿಸಲು ಹೇಳಿದಾಗ ಕೆಲವು ಸ್ತ್ರೀಯರು ಅದು ಅಪಮಾನದಂತೆ ಮತ್ತು ಸಂಪ್ರದಾಯದಂತೆ, ಹಳೆಯದಂತೆ ಯೋಚಿಸುತ್ತಾರೆ. ಹಿಂದೆ ಸ್ತ್ರೀಯರೊಂದಿಗೆ ಕೆಟ್ಟದಾಗಿ ವತರ್ಿಸುತ್ತಿದ್ದರು. ಆದರೆ ಆಕೆ ಹಾಗೆ ಆಗಲು ಸ್ತ್ರೀಯ ದೌರ್ಬಲ್ಯಕ್ಕಿಂತ, ಪುರುಷನ ಅಜ್ಞಾನವೇ ಕಾರಣವಾಗಿತ್ತು. ಸಂಸ್ಕೃತದಲ್ಲಿ ಗೃಹಿಣಿ ಎನ್ನುತ್ತಾರೆ. ಅಂದರೆ ಗೃಹದ ನಾಯಕಿ ಖಂಡಿತವಾಗಿ ಈ ಪದವು ಸ್ತ್ರೀಯು ಕಡಿಮೆ ಎಂದು ಸೂಚಿಸುವುದಿಲ್ಲ. ಬದಲಾಗಿ ಸ್ತ್ರೀ ಮತ್ತು ಪುರುಷರ ಕರ್ತವ್ಯಗಳನ್ನು ವಿಭಾಗಿಸಿದೆ ಅಷ್ಟೇ.
ಕೆಲವು ದೇಶಗಳಲ್ಲಿ ಗಂಡಂದಿರು ತಮ್ಮ ದುಡಿಮೆಯ ಹಣವನ್ನು ತಮ್ಮ ಪತ್ನಿಯರಿಗೆ ನೀಡುತ್ತಾರೆ. ಅದನ್ನು ಅವರು ಮನೆಗೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಇದರ ಫಲವಾಗಿ ಮಾನವ ತನ್ನ ರಂಗದಲ್ಲಿ ಹೆಚ್ಚು ಕೇಂದ್ರೀಕರಿಸಲು ಸಹಾಯವಾಗುತ್ತದೆ. ಪ್ರತಿ ಸಂಗಾತಿಗೆ ಸ್ಪಷ್ಟವಾಗಿ ತನ್ನ ಬಾಧ್ಯತೆಗಳು ತಿಳಿದಿದ್ದಾಗ ಆಗ ಯಾವುದೇ ತಿಕ್ಕಾಟಗಳು ಉಂಟಾಗುವುದಿಲ್ಲ. ಆಗ ಮನೆಯ ವಾತಾವರಣವು ಸುಖ ಶಾಂತಿಗಳಿಂದ ಕೂಡಿದ್ದು, ಮಕ್ಕಳು ಸಹಾ ಚೆನ್ನಾಗಿ ಬೆಳೆಯುವರು.
ಸಂಗಾತಿಯು ಕ್ಷೇಮವಾಗಿ ಇರುವಳೆ ಮತ್ತು ಆಕೆಯು ಕಾರ್ಯಗಳನ್ನೆಲ್ಲಾ ಸರಿಯಾಗಿ ನಿರ್ವಹಿಸುತ್ತಿರುವಳೇ ಎಂದು ಗಂಡನು ಖಂಡಿತವಾಗಿ ನೋಡಬಹುದು. ಕುಟುಂಬದ ಪ್ರತಿ ನಿರ್ಣಯಕ್ಕೂ ಆಕೆಯ ಸಲಹೆಯನ್ನು ತೆಗೆದುಕೊಳ್ಳಬೇಕು. ಹಾಗೂ ಆಕೆಯ ವ್ಯಕ್ತಿತ್ವ ಅಭಿವೃದ್ಧಿಗಾಗಿ ಆಕೆಗೆ ಸ್ವತಂತ್ರ್ಯ ನೀಡಬೇಕು. ಆಕೆಯ ವ್ಯಕ್ತಿಗತ ಅಭಿರುಚಿಗಳಿಗೆ ಸಮಯ ನೀಡಬೇಕು. ಕುಟುಂಬದ ಕ್ಷೇಮಕ್ಕೆ ಈ ರೀತಿಯಾಗಿ ಪತಿ ಮತ್ತು ಪತಿಯರು ಸಮವಾಗಿ ಹೊಣೆಗಾರರು. ಆದರೆ ಅವರು ಪರಸ್ಪರ ಸ್ಪಧರ್ೆಯಲ್ಲಿ ತೊಡಗಬಾರದು.
ತಾಯಿಯು ತಾನು ಮನೆ ಹೊರಗೆ ಕೆಲಸ ಮಾಡುವವಳಾಗಿ ತನ್ನ ಮಗುವಿನ ಸೇವೆಯನ್ನು ತೊರೆಯಬೇಕೋ ಅಥವಾ ಗೃಹಿಣಿಯಾಗಿ, ತನ್ನೆಲ್ಲ ವಾತ್ಸಲ್ಯವನ್ನು ನೀಡುತ್ತಾ ತನ್ನ ಮಗುವನ್ನು ಸಲಹಬೇಕೋ ಇದು ಆಕೆಯು ಚೆನ್ನಾಗಿ ಯೋಚಿಸಿ ತೆಗೆದುಕೊಳ್ಳಬೇಕಾದ ನಿರ್ಣಯವಾಗಿದೆ. ವಿಚಿತ್ರವೆಂದರೆ ಕೆಲವು ಆಧುನಿಕ ತಾಯಿಯರು ಕೆಲವು ಮಿಲಿಟರಿ ಆಡಳಿತದ ದೇಶಗಳಲ್ಲಿ ಅವರು ಸಹಾ ಗನ್ಗಳನ್ನು ಮತ್ತಿತರ ಆಯುಧಗಳನ್ನು ಹಿಡಿದು ಮಾರಣಾಂತಿಕ ಆಯುಧಗಳ ಶಿಕ್ಷಣ ಪಡೆದಿದ್ದಾರೆ. ಅವರು ಯಾವಾಗ ತಮ್ಮ ಮಗುವನ್ನು ಮುದ್ದಾಡುವರೋ ಹಾಗೂ ಯಾವಾಗ ಉತ್ತಮ ನಾಗರಿಕತೆಯ ಶಿಕ್ಷಣ ನೀಡುವರೋ ತಿಳಿಯದು.
ಮಕ್ಕಳ ಬಗ್ಗೆ ಇಂದಿನ ಉದ್ಯಮಶೀಲ ತಾಯಂದಿರ ಮನೋವೃತ್ತಿಯು ಕ್ಷಯಿಸುತ್ತಾ ಹೋಗಿದೆ. ಯಾವುದನ್ನು ಮಕ್ಕಳು ಧಮರ್ೊಚಿತವಾಗಿ ನಿರೀಕ್ಷಿಸುತ್ತಿದ್ದರೋ ಈಗ ಅವೆಲ್ಲ ಸವೆದುಹೋಗಿವೆ. ತಾಯಿಯ ಹಾಲಿನ ಬದಲು ಬಾಟಲಿ ಹಾಲು ಬಂದಿರುವುದು ಸಹಾ ಚಿಂತಾಜನಕ ವಿಷಯವಾಗಿದೆ. ಈವರೆಗೆ ತಾಯಂದಿರು ಮಗುವನ್ನು ತಮ್ಮ ತೋಳಿನಲ್ಲಿ ಮುದ್ದಾಡುತ್ತ ವಾತ್ಸಲ್ಯ ತೋರುತ್ತಾ ಹಾಲುಣಿಸುತ್ತಿದ್ದರು. ಇದರ ಪರಿಣಾಮವಾಗಿ ತಾಯಿ ಮಗುವಿನ ಬಾಂಧವ್ಯ ಮಹತ್ವದ್ದಾಗಿತ್ತು.
ಎದೆಹಾಲು ಉಣಿಸುವ ತಾಯಿಯು ತನ್ನ ಮಾತೃ ಪ್ರವೃತ್ತಿಯಿಂದಾಗಿ ಆಗಾಗ್ಗೆ ಅದ್ಭುತ ಸಂತೃಪ್ತಿಯನ್ನು ತಾಳುತ್ತಾರೆ. ಏಕೆಂದರೆ ಪ್ರಕೃತಿ ಬಯಸುವಂತಹುದು ಮಗುವಿಗಾಗಿ ತನ್ನ ಅಂಗವನ್ನು ನೀಡಿದಂತಹ ಧನ್ಯತಾಭಾವ ಸಿಗುತ್ತದೆ. ಅಂತಹ ಸಂತೃಪ್ತಭಾವ ಬೇರೆಲ್ಲೂ ಸಿಗದು. ಇದರಿಂದಾಗಿ ತಾಯಿಯ ಪ್ರಭಾವ ಮಗುವಿನ ಮೇಲೆ ಹೇಳಲಾಗದಷ್ಟು ಉಂಟಾಗುತ್ತದೆ. ಅಂತಹ ಸನ್ನಿವೇಶಗಳಲ್ಲಿ ಮಗುವಿನ ಮೇಲೆ ಧಮರ್ೊಚಿತವಾದ ವಾತ್ಸಲ್ಯ, ಕೌಟುಂಬಿಕ ಸ್ನೇಹ ಮತ್ತು ವಿಧೇಯತೆಗಳು ಸಹಾ ಸ್ಥಿರವಾಗಿ ಇರುತ್ತವೆ.
ಈ ಸಂಪ್ರದಾಯಸ್ಥ ಆಚರಣೆಗಳು ಮಕ್ಕಳಿಗಾಗಿ ಒಳ್ಳೆಯದು ಮತ್ತು ಹಿತವನ್ನುಂಟು ಮಾಡುವವೇ ಆಗಿವೆ. ಪೋಷಕರಿಗಾಗಿ ಹೇಳುವುದಾದರೆ ವಿಶೇಷವಾಗಿ ತಾಯಿಗಂತೂ ಮಕ್ಕಳ ಮೇಲೆ ವಾತ್ಸಲ್ಯ, ಆರೈಕೆ, ಅಕ್ಕರೆ ಸಲ್ಲಿಸಬೇಕಾದ ಹಕ್ಕುಗಳೇ ಆಗಿವೆ. ಮಗುವೂ ಉತ್ತಮವಾಗಲು ಅಥವಾ ಮೊಂಡ ಮೂರ್ಖನಾಗಲು ತಾಯಿಯು ಸಹಾ ಹೊಣೆಗಾರ ಳಾಗಿರುತ್ತಾಳೆ. ತಾಯಿಯು ತಾರುಣ್ಯ ಲೋಪಗಳನ್ನು ಹೀಗೆ ಕಡಿಮೆಯೂ ಮಾಡಬಲ್ಲಳು. ಉನ್ನತಮಟ್ಟದ ಯೋಚನೆಗಳ ಪ್ರಕಾರ ವಸ್ತು ವಿಷಯಗಳನ್ನು ಅವು ಇರುವಂತೆಯೇ ಕಾಣಿರಿ, ಹೊರತು ನಿಮ್ಮಂತೆ ಕಾಣಬೇಡಿರಿ. ಆಗ ನಿಮಗೆ ತಿಳಿಯುವುದು ಏನೆಂದರೆ ನೀವೇ ಎಲ್ಲದಕ್ಕೂ ಹೊಣೆಗಾರರು ಎಂದು.
ತಮ್ಮ ತಂದೆ-ತಾಯಿಗಳ ದಯೆಯನ್ನು ಅದೆಷ್ಟು ಯುವಕರು ಗುರುತಿಸಿದ್ದಾರೆ? ತಾವು ತಂದೆ-ತಾಯಿಯಾಗುವವರೆಗೂ ಅಥವಾ ತಮ್ಮ ತಂದೆ-ತಾಯಿಗಳನ್ನು ಕಳೆದುಕೊಳ್ಳುವವರೆಗೂ ಇದು ಅವರಿಗೆ ಗೊತ್ತಾಗುವುದಿಲ್ಲ. ನಾವು ಕರ್ತವ್ಯಪರರಾಗಿ, ಕೃತಜ್ಞರಾಗಿ, ವಿಧೇಯರಾಗಿ, ವಿವೇಚನೆಯುಳ್ಳವರಾಗಿ, ಈ ರೀತಿ ತಮ್ಮ ಕೃತಜ್ಞತೆಯನ್ನು ತೋರಿಸಬೇಕಾಗಿದೆ.




4.14 ಮಾನವ ಮತ್ತು ಅವನ ಮಧು (ಜೇನು)
ಈ ಸಣ್ಣ ಉಪಮೆಯಿಂದಾಗಿ ನಾವು ಜೀವನದ ಸಾರ ಸ್ವರೂಪ ಮತ್ತು ಪ್ರಾಪಂಚಿಕ ಸುಖಗಳನ್ನು ಅಥರ್ೈಸಿಕೊಳ್ಳಬಹುದಾಗಿದೆ. ಒಬ್ಬನು ಬಂಡೆಗಳಿಂದ, ಮುಳ್ಳುಗಳಿಂದ ಆವೃತವಾದ ದಟ್ಟವಾದ ಅರಣ್ಯದಲ್ಲಿ ಹೋಗುತ್ತಿರಬೇಕಾದರೆ ದಾರಿಯನ್ನು ಕಳೆದುಕೊಂಡನು. ಅದೇವೇಳೆ ಬೃಹತ್ತಾದ ಆನೆಯೊಂದು ಆತನನ್ನು ಅಟ್ಟಿಸಿಕೊಂಡು ಬಂದಿತು, ಆತನು ಜೀವ ಉಳಿಸಿಕೊಳ್ಳಲು ಓಡಿದನು. ಆತನು ಓಡುತ್ತಿರಬೇಕಾದರೆ ಹಳೆಯ ಬಾವಿಯನ್ನು ಕಾಣುತ್ತಾನೆ. ಅದು ಆನೆಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಸ್ಥಳವೆಂದು ಭಾವಿಸುತ್ತಾನೆ. ಆದರೆ ದುರಾದೃಷ್ಟಕರವಾದ ಸಂಗತಿ ಏನೆಂದರೆ ಬಾವಿಯ ತಳದಲ್ಲಿ ಭೀಕರ ವಿಷಸರ್ಪವನ್ನು ಕಾಣುತ್ತಾನೆ. ಆದರೆ ಆನೆಯಿಂದ ತಪ್ಪಿಸಿಕೊಳ್ಳಲು ಬೇರೆ ಮಾರ್ಗವೂ ಕಾಣದೆ ಆತನು ಬಾವಿಯಲ್ಲಿ ಧುಮುಕುತ್ತಾನೆ. ಆಗ ಅಲ್ಲಿ ಬಾವಿಯ ಗೋಡೆಯ ಪಕ್ಕದಲ್ಲಿ ಮುಳ್ಳಿನ ಬಳ್ಳಿಯೊಂದನ್ನು ಹಿಡಿಯಲು ಸಫಲನಾಗುತ್ತಾನೆ. ಆ ಬಳ್ಳಿಯನ್ನು ಹಿಡಿದು ನೇತಾಡುವಾಗ ಆತನು 2 ಇಲಿಗಳನ್ನು ಕಾಣುತ್ತಾನೆ. ಒಂದು ಬಿಳಿ ಬಣ್ಣದ್ದು ಮತ್ತು ಒಂದು ಕಪ್ಪು ಬಣ್ಣದ್ದು ಆಗಿದ್ದು, ಅವು ಆತನು ಹಿಡಿದಿರುವ ಬಳ್ಳಿಯನ್ನು ಕತ್ತರಿಸಲು ತೊಡಗುತ್ತವೆ. ಅಲ್ಲೇ ಪಕ್ಕದಲ್ಲೇ ಜೇನುಗೂಡೊಂದು ಕಂಡುಬರುತ್ತದೆ. ಅದರಿಂದ ಜೇನು ತೊಟ್ಟಿಕ್ಕುತ್ತಿರುತ್ತದೆ. ಇಂತಹ ಅಪಾಯಕಾರಿ ದುಃಸ್ಥಿತಿಯಲ್ಲಿ, ಮರಣವನ್ನು ಮೂರು ವಿಭಿನ್ನ ರೀತಿಯಲ್ಲಿ ಎದುರಿಸುತ್ತಿದ್ದರೂ ಆತನು ಲೋಭಕ್ಕೆ ವಶನಾಗಿ ಮಧುವನ್ನು ಆಸ್ವಾದಿಸಲು ತೊಡಗುತ್ತಾನೆ. ಆಗ ಅದೇವೇಳೆಯಲ್ಲಿ ಸತ್ಪುರುಷನೊಬ್ಬನು ಈತನ ದುಃಸ್ಥಿತಿ ಕಂಡು ಕೈಯನ್ನು ನೀಡಿ ಆತನ ಜೀವವನ್ನು ಕಾಪಾಡಲು ಮುಂದಾಗುತ್ತಾನೆ. ಆದರೆ ಈ ಲೋಭಿ ಮತ್ತು ಮೂರ್ಖನು ಆತನ ಮಾತುಗಳನ್ನು ನಿರಾಕರಿಸುತ್ತಾನೆ. ಏಕೆಂದರೆ ಆತನು ಜೇನಿನ ರುಚಿಯ ಆಸ್ವಾದನೆಯಲ್ಲಿ ತೊಡಗಿರುತ್ತಾನೆ. ಆ ಮಧುವಿನ ಸ್ವಾದದಿಂದಾಗಿ ಆತನು ಎದುರಿಸುತ್ತಿರುವ ಅಪಾಯಕರ ಸ್ಥಿತಿಗಳನ್ನೇ ಅಲಕ್ಷಿಸುತ್ತಾನೆ.
ಈ ಉಪಮೆಯು ಅತ್ಯಂತ ಶ್ರೇಷ್ಠವಾದುದ್ದಾಗಿದೆ, ಇಲ್ಲಿ ದಟ್ಟ ಕಾಡು ಎಂದರೆ ಸಂಸಾರವಾಗಿದೆ. ಮುಳ್ಳುಗಳು ಸಂಸಾರದ ಮಾರ್ಗವು ಅನಿಶ್ಚಿತ ಮತ್ತು ತೊಂದರೆದಾಯಕ ವಾಗಿದೆ. ಕಲ್ಲು-ಮುಳ್ಳುಗಳಂತಹ ಕಠಿಣವಾದ ಸಂಸಾರದ ಅರಣ್ಯದಲ್ಲಿ ಸಾಗುವುದು ಸುಲಭವೇನೂ ಅಲ್ಲ. ಇಲ್ಲಿ ಆನೆಯೆಂದರೆ ಮರಣ ಎಂದರ್ಥ. ಮರಣವು ಸದಾ ಹಿಂಬಾಲಿಸುವುದರಿಂದಾಗಿ ನಾವು ಸದಾ ಅಸುಖಿಯಾಗಿರುವೆವು. ಮುಪ್ಪು ಸಹಾ ದುಃಖ ಮತ್ತು ಅಸುರಕ್ಷತೆಯನ್ನು ಸೃಷ್ಟಿಸುತ್ತದೆ. ಬಳ್ಳಿಯು ಈಗಿನ ಜನ್ಮವಾಗಿದೆ, ಹೇಗೆ ಬಳ್ಳಿಯು ಬೆಳೆಯುತ್ತ ಸುತ್ತುತ್ತ ಬೇರೆ ಮರಗಳನ್ನೆಲ್ಲಾ ಸುತ್ತಿಕೊಳ್ಳುವುದೋ ಹಾಗೆಯೇ ಜನ್ಮವು ಸಹಾ ಈ ಲೋಕದಲ್ಲಿ ಸಂಗ್ರಹಿಸುತ್ತ, ಹಿಡಿಯುತ್ತ, ಅಂಟಿಕೊಳ್ಳುತ್ತಾ ಇರುತ್ತದೆ.
ಬಿಳಿ ಮತ್ತು ಕಪ್ಪು ಬಣ್ಣದ ಇಲಿಗಳು ಹಗಲು ಮತ್ತು ರಾತ್ರಿಯನ್ನು ಸೂಚಿಸುತ್ತದೆ. ನಾವು ಹುಟ್ಟಿದ ದಿನದಿಂದಲೇ ನಮ್ಮ ಆಯಸ್ಸು ಕಡಿತಕ್ಕೆ ಒಳಗಾಗಿ ಮೃತ್ಯುವಿನತ್ತ ಸಾಗುತ್ತಿರುತ್ತದೆ. ಜೇನಿನ ಹನಿಗಳು ಪ್ರಾಪಂಚಿಕ ಸುಖಗಳಾಗಿದ್ದು, ಅವು ಮಾನವನನ್ನು ಪ್ರಲೋಭಗೊಳಿಸಿ ಮಾನವನನ್ನು ಈ ಅನಿತ್ಯದ ಮತ್ತು ಅನಿಶ್ಚಿತತೆಯ ಲೋಕದಲ್ಲಿಯೇ ಇರುವಂತೆ ಮಾಡುತ್ತದೆ. ಸಹಾಯ ಮಾಡಲು ಮುಂದಾದ ಸತ್ಪುರುಷರು ಬುದ್ಧ ಭಗವಾನರೇ ಆಗಿದ್ದಾರೆ. ಅವರಿಂದ ಮಾರ್ಗದಶರ್ಿತರಾಗಿ ನಾವು ಸಂಸಾರದಿಂದ ಪಾರಾಗಬಹುದು.
ಯಾವ ಮನುಷ್ಯನು ಈ ಜಗತ್ತೇ ಇರಲು ಚೆನ್ನಾಗಿದೆ ಎಂದು ಭಾವಿಸುತ್ತಾನೋ, ಆತನು ವಿಮುಕ್ತಿಗಾಗಿ ಪ್ರಯತ್ನಿಸದೆ ಪ್ರಾಪಂಚಿಕ ಸುಖ ಭೋಗದಲ್ಲಿ ತಲ್ಲೀನನಾಗುತ್ತಾನೆ. ಹೇಗೆಂದರೆ ಪ್ರಾಣಾಂತಿಕ ಅಪಾಯದಲ್ಲಿದ್ದರೂ ಜೇನಿನ ಸವಿಗಾಗಿ ರಕ್ಷಣೆಗೆ, ಆಶ್ರಯಕ್ಕೆ ಮುಂದಾಗದ ಮೂರ್ಖನಂತೆ. ಪ್ರಕೃತಿಯು ಸಮತೋಲನದಲ್ಲಿದೆ, ಆದರ ಸಮತೋಲನ ಸ್ಥಿತಿಗೆ ಭಂಗ ತರಬಾರದು.
ನಿಸರ್ಗದ ನಿಯಮಗಳು ತಪ್ಪಿಲ್ಲದೇ ಕಾರ್ಯಮಾಡುತ್ತವೆ. ಆ ನಿಯಮಗಳು ಕನಿಕರವಿಲ್ಲದೆ ಹಾಗೂ ಪ್ರಶಂಸೆ, ಪ್ರಾರ್ಥನೆ ಅಥವಾ ಯಾಗ ಯಜ್ಞಗಳಿಗೆ ತೂಗಾಡದೆ ನ್ಯಾಯಯುತವಾಗಿ ಕ್ರಿಯೆ ವಹಿಸುತ್ತವೆ. ಆ ನಿಯಮಗಳು ಯಾವುದೇ ನ್ಯಾಯ ನೀಡುವ ಸೃಷ್ಟಿಕರ್ತ-ನ್ಯಾಯಕರ್ತ-ಶಿಕ್ಷಾಕರ್ತನಿಂದ ಪರಿಪಾಲನೆಯಾಗುತ್ತಿಲ್ಲ. ಅಂತಹ ನಂಬಿಕೆಯೇ ಬಾಲಿಷವಾದುದು. ಅಂತಹ ಮಧ್ಯವತರ್ಿಯ ಸಹಾಯವಿಲ್ಲದೆಯೇ ಶಾರೀರಿಕ ಮತ್ತು ಮಾನಸಿಕ ಕ್ಷೇತ್ರಗಳಲ್ಲಿ ಅವು ಕಾರ್ಯವಹಿಸುತ್ತವೆ. ಅಂತಹ ಒಂದು ನಿಯಮವು ಮಾನವನ ಜೀವಿತದ ಗುಣಮಟ್ಟವನ್ನು ವಧರ್ಿಸುತ್ತದೆ. ಅದೇ ಕಮ್ಮನಿಯಮವಾಗಿದೆ. ಈ ನಿಯಮವು ನೈತಿಕ ವಲಯದಲ್ಲಿ ಕಾರ್ಯವಹಿಸುತ್ತದೆ. ಅದೆಂದರೆ ಯೋಚನೆಗಳಿಂದ, ಮಾತುಗಳಿಂದ ಮತ್ತು ಕ್ರಿಯೆಗಳಿಂದ ಕುಶಲ ಮತ್ತು ಅಕುಶಲ (ಪುಣ್ಯ ಮತ್ತು ಪಾಪ ಕರ್ಮ) ಕಮ್ಮಗಳು ಮಾಡಿದಾಗ ಆ ಕರ್ಮಾನುಸಾರವಾಗಿ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳು (ಕಮ್ಮವಿಪಾಕ) ದೊರೆಯುತ್ತವೆ.
ಮಾನವನೋರ್ವನು ಕ್ರೂರಿಯಾಗಿದ್ದರೆ, ನೀಚ ಕೃತ್ಯಗಳಲ್ಲಿ ತೊಡಗಿದರೆ, ನಿಸರ್ಗದ ನಿಯಮಗಳಂತೆ (ಕಮ್ಮ ನಿಯಮ) ನಡೆಯದಿದ್ದರೆ ಆತನು ತನ್ನ ಅಕುಶಲ (ಪಾಪ) ಕೃತ್ಯಗಳಿಂದ ಇಡೀ ಪರಿಸರವನ್ನೇ ಕಲುಶಿತಗೊಳಿಸುತ್ತಿದ್ದಾನೆ. ಅದರ ಪರಿಣಾಮವಾಗಿ, ಅಹಿತಕರ ಫಲಿತಾಂಶವು ಲಭಿಸಿ ಸುಖವಾಗಿ ಜೀವಿಸಲು ಅತಿಕಷ್ಟವಾಗುತ್ತದೆ. ಅಷ್ಟೇ ಅಲ್ಲ, ಸಂತೃಪ್ತವಾಗಿ, ಶಾಂತಯುತವಾಗಿ ಜೀವಿಸಲು ಸಾಧ್ಯವಾಗುವುದಿಲ್ಲ. ಆತನು ತನ್ನ ಕಶ್ಮಲಯುತ ಚಿತ್ತದಿಂದಾಗಿ ತನಗೆ ಮತ್ತು ಪರರಿಗೆ ದುಃಖವನ್ನು ಸೃಷ್ಟಿಸುತ್ತಾನೆ. ಮತ್ತೊಂದೆಡೆ ಆತನು ಬ್ರಹ್ಮಾಂಡದ ನಿಸರ್ಗದ ನಿಯಮಗಳಂತೆ ನಡೆದಾಗ, ಯೋಗ್ಯವಾಗಿ ಮತ್ತು ನಿಂದಾತೀತವಾಗಿ ಜೀವನ ನಡೆಸಿದಾಗ, ಆತನು ವಾತಾವರಣವನ್ನು ಶುದ್ಧಿಗೊಳಿಸುತ್ತಾನೆ. ಅಷ್ಟೇ ಅಲ್ಲದೆ, ತನ್ನ ಸದ್ಗುಣಗಳಿಂದಾಗಿ ಹೇರಳ ಪುಣ್ಯ ಸಂಗ್ರಹಗೊಳಿಸುತ್ತಾನೆ. ಹೀಗೆ ಆತನು ತನ್ನಲ್ಲಿ ಮಾತ್ರವಲ್ಲದೆ ತನ್ನ ಸುತ್ತಲಿನ ಸರ್ವರಲ್ಲಿಯೂ ಸಕಾರಾತ್ಮಕ ಮಾನಸಿಕ ಅಲೆಗಳನ್ನು, ಪ್ರಭಾವವನ್ನು ಬೀರುತ್ತಾನೆ. ಯಾರು ನಿಸರ್ಗದ ನಿಯಮಗಳಿಗೆ ವಿರುದ್ಧವಾಗಿ ಜೀವಿಸುತ್ತಾರೋ, ಅವರು ಅದರ ಪರಿಣಾಮವನ್ನು ಭೌತಿಕವಾಗಲಿ ಅಥವಾ ಮಾನಸಿಕವಾಗಲಿ ತಪ್ಪದೆ ಎದುರಿಸುತ್ತಾರೆ.

                                                                           - 0 - 0 - 0  

ಪರಧರ್ಮಗಳ ಬಗ್ಗೆ ಬೌದ್ಧರ ಸೌಹಾರ್ದ ಮನೋಭಾವ

 ಪರಧರ್ಮಗಳ ಬಗ್ಗೆ  ಬೌದ್ಧರ ಸೌಹಾರ್ದ ಮನೋಭಾವ ಈ ಲೇಖನದ ಉದ್ದೇಶವೇನೆಂದರೆ ಧರ್ಮದ ಉತ್ತಮ ತಿಳುವಳಿಕೆಗೆ, ಧಾಮರ್ಿಕ ಸಹಿಷ್ಣುತೆಗೆ ಮತ್ತು ಬೌದ್ಧರ ದೃಷ್ಟಿಕೋನದಿಂದ ವಿಶಾ...