Friday, March 15, 2019

drksridhammananda ತಾನು ಮತ್ತು ಕುಟುಂಬ





                                                                   ಅಧ್ಯಾಯ-3

                                     ತಾನು ಮತ್ತು ಕುಟುಂಬ



3.1 ನಾವು ನಮ್ಮ ಕುಟುಂಬದ ಸದಸ್ಯರೊಂದಿಗೆ ಏಕೆ ಸ್ನೇಹದಿಂದಿಲ್ಲ?
ನಮ್ಮ ಕುಟುಂಬದ ಸದಸ್ಯರ ಬಗ್ಗೆ ಯೋಚಿಸೋಣ, ಅವರಲ್ಲಿ ಎಷ್ಟು ಜನರು ಸಹಬಾಳ್ವೆಯಿಂದ, ಐಕ್ಯಮತ್ಯದಿಂದ, ಪ್ರೀತಿಯಿಂದ ಮತ್ತು ಪರಸ್ಪರ ಅರಿವಿನಿಂದ ಜೀವಿಸುತ್ತಿರುವರು? ನಾವು ಹೇಗೆ ಅವರೊಂದಿಗೆ ಬಾಂಧವ್ಯದಿಂದಿದ್ದೇವೆ? ಮತ್ತು ಅವರನ್ನು ತಡೆಯಲು ಎಷ್ಟು ಪ್ರಯತ್ನಿಸಿದ್ದೇವೆ? ನಾವು ಇಡೀ ಜಗತ್ತನ್ನು ನಮ್ಮ ಟಿ.ವಿ.ಯ ಮೂಲಕ ಆಹ್ವಾನಿಸುತ್ತೇವೆ, ಆದರೆ ನಮ್ಮ ಮುಂದಿನ ಬಾಗಿಲಿನ ನೆರೆಹೊರೆಯವರನ್ನು ನಮ್ಮ ಮನೆಯೊಳಗೆ ಆಹ್ವಾನಿಸುವುದಿಲ್ಲ ಹಾಗೂ ಅವರೊಂದಿಗೆ ಪ್ರೀತಿಯಿಂದಲೂ ಮಾತನಾಡಿಸುವುದಿಲ್ಲ. ನಮ್ಮ ಕುಟುಂಬದ ಸದಸ್ಯರನ್ನು ನೋಡಲು ಸಹಾ ನಮ್ಮಲ್ಲಿ ಸಮಯವಿಲ್ಲ.
ಟಿ.ವಿ.ಯ ಪರದೆಯ ಮೇಲೆ ಅಜ್ಞಾತ ವ್ಯಕ್ತಿಗಳನ್ನು ನೋಡಲು ನಾವು ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡುವೆವು. ಆದರೆ ಒಂದೇ ಮನೆಯಲ್ಲಿರುವ ಕುಟುಂಬದವರನ್ನೇ ಮುಗುಳ್ನಗೆಯಿಂದ ನೋಡಲು ನಮಗೆ ಸಮಯವೇ ಇಲ್ಲ. ಅಂತಹ ಕುಟುಂಬಗಳಲ್ಲಿ ಹೇಗೆತಾನೆ ಐಕ್ಯಮತ್ಯ ಮತ್ತು ಸುಖವು ಇರಬಲ್ಲದು? ಇದೇ ನಮ್ಮ ಜೀವನದ ಇಂದಿನ ಸ್ವರೂಪವಾಗಿದೆ.
ಕೆಲವೊಮ್ಮೆ ನಾವು ಪ್ರೇಮಿಸುವುದರಿಂದಾಗಿಯೇ ದೊಡ್ಡ ದುಃಖಕ್ಕೆ ಕಾರಣವಾಗುತ್ತದೆ, ಕೆಲವರು ತಮ್ಮ ವಿವಾಹದ ನಂತರ ಕುಟುಂಬದ ಸದಸ್ಯರನ್ನೇ ಅಲಕ್ಷಿಸಿಬಿಡುತ್ತಾರೆ. ಇದು ಮಾನವರ ವರ್ತನೆಯ ವಿಧಾನವಲ್ಲ, ಇದು ಮೃಗೀಯ ಸ್ವಭಾವದ ವ್ಯಕ್ತತೆಯಾಗಿದೆ. ನಾವು ಪರಸ್ಪರ ಸಹಾಯ ಮಾಡುತ್ತ ಮತ್ತು ನೈತಿಕ ಸಹಾಯ ನೀಡುತ್ತ ಸಾಮಾಜಿಕ ಜೀವನವನ್ನು ನಿರ್ವಹಿಸಬೇಕಾಗಿದೆ. ಕೆಲವು ವೇಳೆ ಪ್ರಾಣಿಗಳೇ ಮಾನವರಿಗಿಂತ ಸಭ್ಯವಾಗಿ ವರ್ತನೆ ಮಾಡುತ್ತವೆ ಎಂದು ಹಲವು ರೀತಿಯಲ್ಲಿ ಹೇಳಬಹುದಾಗಿದೆ.
ಕುಟುಂಬದೊಂದಿಗೆ ಮಾನವರಂತೆ ಪ್ರಾಣಿಗಳು ಸಹಾಯ ಮಾಡದಿದ್ದರೂ ಪ್ರಾಣಿಗಳು ಪರಸ್ಪರ ಜೊತೆಯಲ್ಲಿ ಅನ್ಯೋನ್ಯವಾಗಿರುತ್ತವೆ. ಕೆಲವೊಮ್ಮೆ ಅವು ತಮ್ಮ ಗುಂಪನ್ನು ಅಥವಾ ಮರಿಗಳನ್ನು ಶತ್ರುಗಳಿಂದ ಕಾಪಾಡುತ್ತವೆ. ತಮ್ಮ ರೀತಿಯ ಪ್ರಾಣಿಗಳನ್ನು ಅವು ನಾಶಮಾಡುವುದಿಲ್ಲ. ಆದರೆ ಮಾನವರು ಹಾಗೆ ಮಾಡುತ್ತಾರೆ.
ಪ್ರಾಣಿಗಳು ತಮ್ಮ ಲೈಂಗಿಕ ಕ್ರಿಯೆಯ ನಂತರ ಹೆಣ್ಣು ಪ್ರಾಣಿಗಳನ್ನು ಕೊಲ್ಲುವುದಿಲ್ಲ, ಆದರೆ ಮಾನವರು ಅತ್ಯಂತ ಕ್ರೂರವಾಗಿ ಹಾಗೆ ಮಾಡುತ್ತಾರೆ. ನಾಯಿಗಳು ಸಹಾ ಹೆಣ್ಣು ನಾಯಿಮರಿಗಳಿಗೆ ತೊಂದರೆ ನೀಡುವುದಿಲ್ಲ. ಆದರೆ ಕೆಲವು ಮಾನವರಂತು ಕೆಲ ತಿಂಗಳ ಹೆಣ್ಣು ಶಿಶುವಿಗೂ ಉಪದ್ರವ ನೀಡುತ್ತಾರೆ. ಇದರಿಂದ ಗೊತ್ತಾಗುವುದು ಏನೆಂದರೆ ನಾವು ನಿಜ ಮಾನವರೊಂದಿಗೆ ಜೀವಿಸುತ್ತಿಲ್ಲ. ನಾವು ಸ್ವಾಭಾವಿಕ ಜೀವನದ ಹಾದಿಯಿಂದ ತುಂಬಾ ದೂರ ಹೋಗಿಬಿಟ್ಟಿದ್ದೇವೆ. ಆದ್ದರಿಂದಲೇ ನಾವು ಹಲವಾರು ಸಮಸ್ಯೆಗಳಿಂದ ಪೀಡಿತರಾಗಿದ್ದೇವೆ, ಒಂಟಿತನವನ್ನು ಮತ್ತು ಅಸುರಕ್ಷತೆಯ ಭಾವವನ್ನು ಅನುಭವಿಸುತ್ತಿದ್ದೇವೆ.


3.2 ಕುಟುಂಬದ ಹಂತದಲ್ಲಿ ಸಮಸ್ಯೆಗಳು
ಪ್ರಚಂಡಗತಿಯ ಸಾಮಾಜಿಕ-ಸಾಂಸ್ಕೃತಿಕ ಬದಲಾವಣೆಯುಳ್ಳ ಈ ಯುಗದಲ್ಲಿ ಕುಟುಂಬದಷ್ಟು ಬೇರ್ಯಾವ ಮೂಲತತ್ವದ ಸಂಸ್ಥೆಯೂ ಬದಲಾಗಿಲ್ಲ. ವ್ಯವಸಾಯಿಕ ಸಮಾಜಗಳಲ್ಲಿ ಕುಟುಂಬವರು ನಗರಕ್ಕಿಂತ ವಿಸ್ತಾರವಾಗಿರುತ್ತದೆ. ಏಕೆಂದರೆ ಮಕ್ಕಳು ವ್ಯವಸಾಯ ಭೂಮಿಯಲ್ಲಿ ಕೆಲಸ ಮಾಡಲು ಸುಲಭವಾಗಿ ಅಗ್ಗವಾಗಿ ಸಿಗುತ್ತಾರೆ. ಮತ್ತು ತಂದೆಯು ಕುಟುಂಬ ಪೋಷಣೆಗಾಗಿ ದುಡಿಯುವವನಾಗಿರುತ್ತಾನೆ ಹಾಗು ಅವಿವಾದಿತನಾಗಿ ಮನೆಗೆ ಒಡೆಯನಾಗಿರುತ್ತಾನೆ. ಅಲ್ಲಿ ವಿಚ್ಛೇದನವು ತೀರ ಅಪರೂಪ. ಅಲ್ಲಿ ಕುಟುಂಬಕ್ಕೆ ಪ್ರಾಧಾನ್ಯತೆಯುಳ್ಳ ಆಥರ್ಿಕ, ಧಾಮರ್ಿಕ ಮತ್ತು ವಿದ್ಯಾಭ್ಯಾಸ ಎಲ್ಲವೂ ಸಿಗುತ್ತದೆ.
ಈ ಸಮಾಜಗಳಲ್ಲಿ ಜೀವನವು ನಿಧಾನಗತಿಯಲ್ಲಿ ಸಾಗುತ್ತಿರುತ್ತದೆ ಮತ್ತು ಜನರು ಚಲಿಸಲು ಹೆಚ್ಚಿನ ಜಾಗ ಬೇಕಾಗುತ್ತದೆ. ಆದ್ದರಿಂದ ಘರ್ಷಣೆಗೆ ಕಡಿಮೆ ಅವಕಾಶವಿರುತ್ತದೆ. ಅಡ್ಡಾಡಲು ಅತಿ ಅವಕಾಶ ಸಿಗುತ್ತದೆ. ಅವರು ನಿಸರ್ಗದೊಂದಿಗೆ ಸಂಭಾಷಿಸುತ್ತಾರೆ. ತಮ್ಮ ಕೋಪ ಮತ್ತು ಹತಾಶೆಯನ್ನು ಹಗುರಮಾಡಿಕೊಂಡು ಮನೆಗೆ ಹಿಂತಿರುಗುತ್ತಾರೆ. ಹೀಗಾಗಿ ಅವರ ಸಂಸಾರಗಳು ಮಾಪರ್ಾಟಿಸದಂತೆ ಮುರಿಯುವ ಸಾದ್ಯತೆಗಳು ಕಡಿಮೆಯಾಗುತ್ತದೆ.
ಹೇಗೆ ಸಮಾಜಗಳು ಆಧುನಿಕತೆ ತಾಳುತ್ತಿರುವುದೋ ಹಾಗೆಯೇ ಕುಟುಂಬದ ಕ್ರಿಯೆಗಳು ಬೇರೆ ಸಂಸ್ಥೆಗಳಿಗೆ ವಗರ್ಾವಣೆಯಾಗುತ್ತವೆ. ಸ್ಕೂಲ್ಗಳು ವಿದ್ಯಾಭ್ಯಾಸದ ಕ್ರಿಯಾ ಸಂಸ್ಥೆಯಾಗುತ್ತಿವೆ. ಆಗ ಕುಟುಂಬವು ಆಥರ್ಿಕತೆಯ ಘಟಿಕವಾಗಿ ಉಳಿಯುವುದಿಲ್ಲ. ಹೀಗಾಗಿ ಕೌಟುಂಬಿಕ ಯಶಸ್ಸನ್ನು ಸಹಾ ಭಾವನಾತ್ಮಕ ಸಂತೃಪ್ತಿಯಲ್ಲಿ ಕಳೆಯುವರೇ ಹೊರತು ಆಥರ್ಿಕತೆ ಅಳತೆಗೋಲಲ್ಲಿ ಅಳೆಯುವುದಿಲ್ಲ. ಜನರು ಸಹಾ ಈಗೀಗ ವಿವಾಹವಾಗುತ್ತಿರುವುದು ಪ್ರೇಮಕ್ಕಾಗಿ, ಒಡನಾಟಕ್ಕಾಗಿ ಮತ್ತು ಸುಖಕ್ಕಾಗಿ ಎನ್ನುವಂತಾಗಿದೆ ಹೊರತು ಸಂತೃಪ್ತಿಯ ಉತ್ತಮ ಜೀವನಕ್ಕಲ್ಲ. (ವ್ಯಕ್ತಿಯು ಪ್ರೇಮಕ್ಕಾಗಿ ವಿವಾಹವಾದರೆ, ಪ್ರೇಮ ಕ್ಷೀಣವಾದಾಗ ಅಥವಾ ಮರೆಯಾದಾಗ ಏನಾಗಬಹುದು ಯೋಚಿಸಿ). ಟಿ.ವಿ. ಮತ್ತು ಹಾಲಿವುಡ್ ಸಿನಿಮಾಗಳಿಂದ ಪ್ರಚೋದಿತರಾದ ಯುವಕರು ಯೋಚಿಸುವುದೇನೆಂದರೆ ಉತ್ತಮ ವಿವಾಹಕ್ಕೆ ಪ್ರೇಮ ಒಂದು ಇದ್ದರೆ ಸಾಕು ಆದರೆ ಭೌತಿಕ ಪ್ರೀತಿಗಿಂತ ಮಿಗಿಲಾದ ಬಲಿಷ್ಠ ತಳಹದಿಯು ವಿವಾಹಕ್ಕೆ ಬೇಕೇ ಬೇಕು ಎನ್ನುವ ಅರಿವಾಗುವಷ್ಟರಲ್ಲಿ ವಿಚ್ಛೇದನವಾಗಿರುತ್ತದೆ. ಖಂಡಿತವಾಗಿ ಪ್ರೇಮ ಬೇಕು, ಆದರೆ ಅದಕ್ಕಿಂತ ಹೆಚ್ಚಾಗಿ ತ್ಯಾಗಕ್ಕೆ ಸಿದ್ಧರಾಗುವುದು, ಪರಸ್ಪರ ಅರಿವು ಮತ್ತು ಅಪಾರ ಸಹನೆಯ ಅಗತ್ಯವು ಅಷ್ಟೇ ಇದೆ.


3.3 ವಿಚ್ಛೇದನ
ಹಿಂದೆ ಮದುವೆಗಳು ಅಂತ್ಯವಾಗುತ್ತಿದ್ದುದು ಸಂಗಾತಿಯ ಮರಣದಲ್ಲೇ ಹೊರತು ವಿಚ್ಛೇದನದಲ್ಲಲ್ಲ. ವಿಚ್ಛೇದನವು ಸಮಾಜದ ಕಣ್ಣುಗಳಲ್ಲೂ ತಪ್ಪಾಗಿ ಕಾಣುವುದು. ಜೊತೆಗೆ ಬಹಳಷ್ಟು ಜನರಿಗೆ ತೊಂದರೆದಾಯಕವೂ ಸಹಾ ಆಗಿದೆ. ಇಂದು ವೈದ್ಯಕೀಯ ಮುನ್ನಡೆ ಮತ್ತು ಜೀವನದ ಶ್ರೇಣಿಯ ಉತ್ತುಂಗತೆಯಿಂದ ಜನರು ಹೆಚ್ಚುಕಾಲ ಜೀವಿಸಿದರೂ, ಒಂಟಿತನದಿಂದ ವೈವಾಹಿಕ ಜೀವನಕ್ಕೆ ನುಸುಳುತ್ತಿದ್ದಾರೆ.
ಔದ್ಯೋಗಿಕ ಸಮಾಜಗಳಲ್ಲಿ ಅರ್ಧದಷ್ಟು ವಿಚ್ಛೇದನಗಳು ಮದುವೆಯಾದ 8ನೇ ವರ್ಷಕ್ಕೆ ಆಗುತ್ತವೆ. ಕಾಲುಭಾಗದಷ್ಟು ವಿಚ್ಛೇದನಗಳು ಮದುವೆಯಾದ 15ನೇ ವರ್ಷಕ್ಕೆ ಆಗುತ್ತವೆ. ಹಲವಾರು ವಿಚ್ಛೇದನಿಗಳು ಪುನಃ ಮದುವೆಯಾಗುತ್ತಾರೆ. ತಮ್ಮ ಪ್ರೌಢ ಜೀವನದಲ್ಲಿ ಒಮ್ಮೆಯಲ್ಲ ಹಲವಾರುಬಾರಿ ವಿವಾಹವಾಗುತ್ತಾರೆ.
ಅಂಕಿ-ಅಂಶಗಳ ಪ್ರಕಾರ ಪ್ರದರ್ಶನದ ಉದ್ಯಮದಲ್ಲಿರುವವರು ಹೆಚ್ಚುಬಾರಿ ವಿಚ್ಛೇದಿತರು ಹಾಗು ಪುನಃ ಪುನಃ ವಿವಾಹವಾಗಿದ್ದಾರೆ. ಒಬ್ಬ ಖ್ಯಾತ ನಾಟಕ ನಟಿಯು ಎಣಿಸಲಾರದಷ್ಟು ಬಾರಿ ವಿವಾಹವಾಗಿದ್ದಾಳೆ. ಆಕೆ ಜಗತ್ತಿಗೆ ಹೇಳಿದ್ದು ಏನೆಂದರೆ ವಿವಾಹವು ಹಳತಾದ ವಿಷಯವಾಗಿದೆ ಮತ್ತು ಯಾವುದೇ ಪ್ರಜ್ಞೆಯುಳ್ಳ ಮನುಷ್ಯ ಅದರ ಹೊರತಾಗಿಯೂ ಪ್ರೀತಿಸಬಲ್ಲ ಮತ್ತು ಜೀವಿಸಬಲ್ಲ. ಇನ್ನೊಬ್ಬ ಖ್ಯಾತ ನಟಿಯೊಬ್ಬಳು ಒಮ್ಮೆ ಹೆಮ್ಮೆಯಿಂದ ಟಿ.ವಿ.ಗಳಲ್ಲಿ ಉತ್ಸಾಹದಿಂದ ತಾನು 15 ಪತಿಯರನ್ನು ಹೊಂದಿದ್ದೆ ಎಂದು ಹೇಳಿದ್ದಳು.
ನಿಜಕ್ಕೂ ಮಾನವನ ಮಾನವತೆಯು ಅತ್ಯಂತ ಕ್ಷೀಣಿಸಿದೆ. ಏಕೆಂದರೆ ಯಾವ ಸ್ತ್ರೀಯು ತನ್ನ ವೈವಾಹಿಕ ಜೀವನವನ್ನು ನಿರ್ವಹಿಸಲಾಗದೆ ಒಂದರ ನಂತರ ಇನ್ನೋರ್ವರನ್ನು 15 ಜನರನ್ನು ವಿವಾಹವಾದವಳನ್ನು ಜನರು ಪ್ರಶಂಸಿಸತೊಡಗಿದ್ದಾರೆ. ಅದೇ ವೇಳೆಯಲ್ಲಿ ಜನರು ತಮ್ಮ ಕುಟುಂಬವು ಜೀವನದಲ್ಲಿ ದೀರ್ಘವಾಗಿರಬೇಕೆಂದು ಬಯಸುತ್ತಾರೆ. ಹಲವಾರು ಜನರು ತಮ್ಮ ವೈವಾಹಿಕ ಜೀವನವು ಅಲ್ಪ ಅವಧಿಯದೆಂದು ತಿಳಿದು ವೈವಾಹಿಕ ಕೇಂದ್ರಗಳಲ್ಲಿ ಭೇಟಿ ನೀಡುತ್ತಾರೆ. ಕೆಲವರಂತೂ ತಮ್ಮ ಕಾರು (ವಾಹನಗಳನ್ನು)ಗಳನ್ನು ಬದಲಿಸುವಂತೆ ಸಂಗಾತಿಗಳನ್ನು ಬದಲಾಯಿಸುತ್ತಾರೆ. ಹೀಗಾಗಿ ಅವರು ಸಾಮಾಜಿಕ ತಜ್ಞರು ಬಳಸುವ ಪದವಾದ ಸರಣಿ ವಿವಾಹ ಅಥವಾ ಸರಣಿ ಪತಿ(ಸತಿ)ತ್ವಕ್ಕೆ ಪ್ರವೇಶಿಸುತ್ತಾರೆ.
ಹೀಗಾಗಿ ವಿಚ್ಛೇದನದ ಸಂಖ್ಯೆಯು ಹೆಚ್ಚಿದಂತೆ ಸಮಾಜದಲ್ಲಿ ಇತರ ಸಮಸ್ಯೆಗಳು ಉಂಟಾಗುತ್ತದೆ. ವಿಚ್ಛೇದನದಿಂದಾಗಿ ಮಕ್ಕಳು ತೀರ ದುಃಖಕ್ಕೆ ಗುರಿಯಾಗುತ್ತಾರೆ. ಅವರು ಆಗಾಗ್ಗೆ ಭಾವುಕವಾಗಿ ಹಾಗು ಮಾನಸಿಕವಾಗಿಯೂ ಕುಗ್ಗಿಹೋಗುತ್ತಾರೆ. ಪೋಷಕರಿಂದ ಬೇರ್ಪಟ್ಟ ಗಾಬರಿಯಿಂದಾಗಿ ಗಾಯದ ಅನುಭೂತಿ ಪಡೆಯುತ್ತಾರೆ. ತಮ್ಮ ಬಾಲ್ಯದ ಅನುಭವ, ಸುಖರಹಿತ ಕೌಟುಂಬಿಕ ಜೀವನದ ಪರಿಣಾಮವಾಗಿ ತಾರುಣ್ಯದಲ್ಲಿ ಅಪರಾಧಗಳನ್ನು ಮಾಡಲಾರಂಭಿಸುತ್ತಾರೆ. ಹೀಗಾಗಿ ಜನರು ತಮ್ಮ ತೃಪ್ತಿಯ ಕೊರತೆ ನೀಗಿಸಲು ತಮಗೆ ಮಾತ್ರವಲ್ಲ, ಪರರಿಗೂ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ.


3.4 ಗರ್ಭಪಾತ
ಮಾನವರಿಗೆ ತಮ್ಮ ವೈಯುಕ್ತಿಕ ಬಯಕೆಗಳನ್ನು ತೃಪ್ತಿಪಡಿಸಲು ಅವರಿಗೆ ಮಿತಿಯೇ ಕಾಣುತ್ತಿಲ್ಲ. ಗರ್ಭಪಾತದ ಸಂಖ್ಯೆಯು ಎಚ್ಚರಿಕೆ ನೀಡುವ ಪ್ರಮಾಣಕ್ಕೆ ತಲುಪಿದೆ, ಗರ್ಭಪಾತವು ಕೊಲೆಯೇ ಆಗಿದೆ. ಇದನ್ನು ಬೇರೆರೀತಿ ಹೇಳಲಾರರು. ಒಂದು ಪತ್ರಿಕೆಯಲ್ಲಿ ಈ ಪ್ರಕ್ರಿಯೆಯನ್ನು ಗ್ರಾಫಿಕ್ಸ್ನ ಪದಗಳ ಸಹಿತ ಈ ಸರಳ ಸತ್ಯವನ್ನು ವಿವರಿಸಿದ್ದರು. ಯಾವಾಗ ಗರ್ಭಪಾತದ ಸಾಧನವು ಮೊದಲು ಗರ್ಭದ ಗೋಡೆಗೆ ಸ್ಪಶರ್ಿಸುವುದೋ, ತಕ್ಷಣವೇ ಬ್ರೂಣವು ಹೆದರಿ ಹಿಂದಕ್ಕೆ ಹಾರುವುದು ಮತ್ತು ಹೃದಯದ ಬಡಿತವು ಹೆಚ್ಚಾಗುವುದು. ಇನ್ನೂ ಹುಟ್ಟಿಲ್ಲದ ಆ ಜೀವಿಯು ಸಾಧನದ ವಿರುದ್ಧ ಪಾರಾಗಲು, ಉಳಿಯುವ ಪ್ರಯತ್ನವನ್ನು ಹೀಗೆ (ಪ್ರತಿಕ್ರಿಯಿಸಿ) ಮಾಡುತ್ತದೆ.
ಗರ್ಭಪಾತ ಮಾಡುವವರು ಆ ಮುಗ್ಧ ಶಿಶುವಿನ ಕೈ ಅಥವಾ ಕಾಲನ್ನು ಹಿಡಿದೆಳೆದು ಅದನ್ನು ಶಿಶುವಿನಿಂದ ಕತ್ತರಿಸಿ ಹಾಕುತ್ತಾರೆ. ಆ ಶಿಶುವಿನಿಂದ ರಕ್ತ ಸೋರಲಾರಂಭಿಸುತ್ತದೆ. ನಂತರ ಗರ್ಭಪಾತ ಮಾಡುವವರು ಇನ್ನೊಂದು ಕೈ ಅಥವಾ ಕಾಲನ್ನು ಹುಡುಕಿ ಅದನ್ನು ಸೀಳಿ ಅಥವಾ ಹರಿದು ಹಾಕುವರು. ಇದೇರೀತಿ ಅವರು ಪ್ರತಿಯೊಂದು ಬೇರ್ಪಡೆಯಾಗುವವರೆಗೂ ಮುಂದುವರೆಸುತ್ತಾರೆ. ಕೊನೆಗೆ ಹಿಸುಕಿಬಿಡುತ್ತಾರೆ, ನಂತರ ಆ ಭಾಗಗಳನ್ನು ಹೊರಬರುವಂತೆ ಮಾಡುತ್ತಾರೆ. ಇದೆಲ್ಲವೂ 15 ನಿಮಿಷಗಳಲ್ಲೇ ನಡೆದುಹೋಗುತ್ತದೆ. ನಿಜಕ್ಕೂ ಇದು ಪೈಶಾಚಿಕ ಕೃತ್ಯವಾಗಿದೆ.
ಈ ಪ್ರಕ್ರಿಯೆಯ ಭೀಕರತೆ ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಇದೇನು ಯಾವುದೇ ಹೊರ ಪದಾರ್ಥವನ್ನು ಶರೀರದಿಂದ ಹೊರ ತೆಗೆಯುವಂತಹದಲ್ಲ. ಇದು ಪೂರ್ವ ಶಿಶುವಿನ ಸರಳ ಹಾಗು ಸ್ಪಷ್ಟ ಕೊಲೆಯೇ ಆಗಿದೆ.
ಬುದ್ಧ ಧಮ್ಮವು ಜನನ ನಿಯಂತ್ರಣಕ್ಕೆ ವಿರೋಧಿಯೇನೂ ಅಲ್ಲ. ಆದರೆ ಆ ವಿಧಾನವು ಗರ್ಭಧಾರಣೆಗೆ ತಡೆ ಒಡ್ಡುವಂತಿರಬೇಕು ಮತ್ತು ಜೀವನವು ಆರಂಭವಾಗಿರಬಾರದು. ಆದರೆ ಒಮ್ಮೆ ಭ್ರೂಣ ಅಥವಾ ಪಿಂಡ ರಚನೆಯಾದ ಮೇಲೆ, ಅದು ಚಿಕ್ಕ ಹಂತದಲ್ಲಿದ್ದರೂ ಸರಿಯೆ, ಅದರಲ್ಲಿ ಜೀವವಿರುತ್ತದೆ, ಮನಸ್ಸಿರುತ್ತದೆ, ಜೀವನ ಪ್ರಾರಂಭವಾಗಿರುತ್ತದೆ. ಆಗ ಅದನ್ನು ತೆಗೆಯುವ ಪ್ರಯತ್ನವು ಖಂಡಿತವಾಗಿ ಕೊಲೆಯೇ ಆಗಿದೆ. ಗರ್ಭಪಾತಕ್ಕೆ ಕಾರಣಗಳು ಅಪ್ರಧಾನ, ಕೊಲೆಯು ಕೊಲೆಯೇ ಆಗಿದೆ. ಯಾವ ಪ್ರೇರಣೆಯೇ ಆಗಿರಲಿ ಅದು ಹತ್ಯೆಯೇ ಅಗಿರುತ್ತದೆ.
ಸ್ತ್ರೀ-ಪುರುಷರ ಸಂಗಮವು ಜನ್ಮ ನೀಡುವಂತಹ ಕ್ರಿಯೆಯಾಗಿದೆ. ಅದು ಪರಸ್ಪರರ ಆಸೆಗಳ ತೃಪ್ತಿಗಿಂತ ಹೆಚ್ಚಿನ ಅರ್ಥವುಳ್ಳದ್ದಾಗಿದೆ. ಅದನ್ನು ಹೊಣೆಗಾರಿಕೆಯಿಂದ ನಿರ್ವಹಿಸಬೇಕಾಗಿದೆ, ಲೈಂಗಿಕ ಕ್ರಿಯೆಯನ್ನು ಬೌದ್ಧ ಧಮ್ಮವು ನಿಂದಿಸುತ್ತಿಲ್ಲ, ಅದು ಮಾನವನ ಸಹಜ ಕ್ರಿಯೆಯೆಂದು ಒಪ್ಪುತ್ತದೆ. ಆದರೆ ನ್ಯಾಯಯುತ ಸ್ವ-ನಿಯಂತ್ರಣವಿಲ್ಲದೆ ಕೇವಲ ಭಾವವೇಶಗಳ ತೃಪ್ತಿಗೆ ಪ್ರೋತ್ಸಾಹಿಸುವುದಿಲ್ಲ. ಯಾರು ಹೊಣೆಗಾರಿಕೆ ಹೊರಲು ಸಿದ್ಧನಾಗಿಲ್ಲವೋ ಆತನು ತಂದೆ ಎನಿಸಿಕೊಳ್ಳಲು ಹಕ್ಕು ಪಡೆದಿರುವುದಿಲ್ಲ ಮತ್ತು ಮಗುವಿನ ಬಗ್ಗೆ ಆಸಕ್ತಿ ಹೊಂದದ ಸ್ತ್ರೀಯು ಸಹಾ ಗರ್ಭಧರಿಸಬಾರದು.
ಇಂದು ಜನರು ತಮ್ಮ ಹೊಣೆಗಾರಿಕೆಯನ್ನು ತಡೆಯುವುದಕ್ಕೋಸ್ಕರವಾಗಿ ಹುಟ್ಟಿಲ್ಲದ ಶಿಶುಗಳನ್ನು ಕೊಲ್ಲುತ್ತಿದ್ದಾರೆ. ಭೌತಿಕ ಸಾಮಾಗ್ರಿಗೋಸ್ಕರ ಮತ್ತು ಸುಖದ ಅನುಕೂಲತೆಗೋಸ್ಕರ ಮಕ್ಕಳನ್ನು ವಿನಿಮಯ ಮಾಡುತ್ತಿರುವರು. ಇಂದು ಗರ್ಭಪಾತವು ಒಂದು ಸಾಮಾಜಿಕ ಪದ್ಧತಿಯಾಗಿಬಿಟ್ಟಿದೆ. ಕೊನೇಪಕ್ಷ ನಾವಾದರೂ ಅದಕ್ಕೆ ಇಳಿಯದಿರೋಣ.


3.5 ಮಕ್ಕಳ ಶೋಷಣೆ
ಹಿಂದಿನ ಲೇಖಕರು ಮಾತೃತ್ವದ ಸಾಧುತ್ವದ ಬಗ್ಗೆ ಉನ್ನತವಾಗಿ ಶ್ಲಾಘಿಸಿದ್ದಾರೆ. ತಾಯಿಯಾಗುವುದು ಭಾಗ್ಯವೆಂದು ತಾಯಂದಿರು ಭಾವಿಸುತ್ತಿದ್ದರೇ ಹೊರತು ಭಾರವೆಂದು ಭಾವಿಸುತ್ತಿರಲಿಲ್ಲ ಮತ್ತು ಪ್ರಪಂಚದ ಸಾಹಿತ್ಯವೆಲ್ಲಾ ಮಕ್ಕಳಿಗಾಗಿ ತಾಯಿಯ ಮಹಾತ್ಯಾಗವನ್ನು ವಿವರಿಸುವ ಕತೆಗಳಿಂದಲೇ ತುಂಬಿವೆ.
ಆದರೆ ಇಂದಿನ ಭೌತಿಕ ಜಗತ್ತು ಎಲ್ಲವನ್ನು ಬದಲಾಯಿಸಿಬಿಟ್ಟಿದೆ. ಅಂದರೆ ಮಕ್ಕಳ ದುರುಪಯೋಗ ಅಥವಾ ಮಕ್ಕಳ ತ್ಯಜಿಸಿದ ತಾಯಂದಿರ ಸುದ್ದಿಯು ಇಲ್ಲದ ದಿನಪತ್ರಿಕೆಗಳು ಇಂದು ಇಲ್ಲವಾಗಿದೆ. ಮಕ್ಕಳು ಸ್ವತಃ ತಮ್ಮ ಪೋಷಕರ ಹೊಡೆತಗಳಿಂದ ಅಂಗವಿಕಲತೆಗೆ ಮತ್ತು ಕ್ರೂರತೆಗಳಿಗೆ ಬಲಿಯಾಗುತ್ತಿದ್ದಾರೆ. ಅಂಬೆಗಾಲಿಡುವ ಮಕ್ಕಳು ಸಹಾ ಇದರಿಂದಾಗಿ ಉಳಿದಿಲ್ಲ. ಕೆಲವೊಂದು ಮಕ್ಕಳು ತಮ್ಮ ತಾಯ್ತಂದೆಯರ ಕೋಪ, ಆಕ್ರೋಶಕ್ಕೆ ಬಲಿಯಾಗಿ ಸಾಯುವವರೆಗೆ ಹೊಡೆತ ತಿಂದಿದ್ದಾರೆ.
ಕೆಲವೊಮ್ಮೆ ತಾಯಿಯು ಸಹಾ ಹತಾಶೆಯಿಂದ ಮಗುವನ್ನು ಪ್ಲಾಟ್ನ ಕಿಟಕಿಯಿಂದ ಎಸೆದು ಅಥವಾ ಕೀಟನಾಶಕ ವಿಷವನ್ನು ಉಣಿಸಿ ನಂತರ ತಾನು ಸಹಾ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾಳೆ. ಇದು ಖಂಡಿತವಾಗಿ ತಪ್ಪು ಕೃತ್ಯವಾಗಿದೆ. ಯಾರಿಗೇ ಆಗಲಿ, ತಮ್ಮನ್ನು ಹತ್ಯೆ ಮಾಡಿಕೊಳ್ಳಲು ಹಕ್ಕಿಲ್ಲ. ಹೀಗಿರುವಾಗ ಪರರನ್ನು ಅದು ತಮ್ಮ ಮಗುವೇ ಆಗಿರಲಿ, ಕೊಲ್ಲಲು ಯಾವುದೇ ರೀತಿಯ ಹಕ್ಕಿಲ್ಲ. ಅದು ಪ್ರೀತಿಯ ಉದ್ದೇಶದಿಂದವಾದರೂ ಸರಿ, ಕೊಲ್ಲಲು ಹಕ್ಕಿಲ್ಲ. ತಾವು ಬಹಳಸಾರಿ ರಸ್ತೆಯ ಬದಿ ಅಥವಾ ಕಸದ ರಾಶಿಯಲ್ಲಿ ಮಕ್ಕಳನ್ನು ಹಾಕಿ, ತ್ಯಜಿಸಿರುವುದನ್ನು ಕೇಳಿದ್ದೇವೆ.
ಕೇವಲ ಮಾನವರು ಮಾತ್ರ ತಮ್ಮ ಸ್ವಾರ್ಥದ ಕಾರ್ಯಗಳಿಂದಾಗಿ ತಮ್ಮ ಅಸಹಾಯಕ ಶಿಶುಗಳನ್ನು ತ್ಯಜಿಸುತ್ತಾರೆ. ಇಂತಹದನ್ನು ಪ್ರಾಣಿಗಳು ಸಹಾ ತಮ್ಮ ಮರಿಗಳೊಂದಿಗೆ ಮಾಡುವುದಿಲ್ಲ. ಆದ್ದರಿಂದಾಗಿ ನಾವು ನಮ್ಮ ಸೌಂದರ್ಯಕ್ಕೆ, ಬುದ್ಧಿಮತ್ತೆಗೆ, ಶಾರೀರಿಕ ಕೌಶಲ್ಯಗಳಿಗೆ ಮತ್ತು ತಾಂತ್ರಿಕ ಸಾಧನೆಗಳಿಗೆ ಹೆಮ್ಮೆಪಡುವ ನಾವು ಅದೇವೇಳೆಯಲ್ಲಿ ಪ್ರಾಣಿಗಳಿಗಿಂತಲೂ ಕೀಳು ಎಂದು ತಲೆತಗ್ಗಿಸಬೇಕಾಗಿದೆ.


3.6 ಸಾಮಾಜಿಕ ಹಂತದಲ್ಲಿ ಸಮಸ್ಯೆಗಳು
ಔದ್ಯೋಗಿಕ ಕ್ರಾಂತಿಯ ಉನ್ನತಿಯಿಂದಾಗಿ ಸಮಾಜದಲ್ಲಿ ಸಾಮೂಹಿಕ ಬಳಕೆಯಾಗುತ್ತಿತ್ತು. ಜಾಗತಿಕ ಮಟ್ಟದಲ್ಲಿ ಬಯಕೆಗಳ ಅತೃಪ್ತಿಯನ್ನು ಇನ್ನೂ ಹೆಚ್ಚು ಪ್ರಚೋದಿಸುತ್ತಿವೆ. ಇಂದು ಉನ್ನತ ಉತ್ಪಾದನಾ ತಂತ್ರಗಳಿಂದಾಗಿ ಒಮ್ಮೆ ಕೇವಲ ಶ್ರೀಮಂತರಿಗಾಗಿ ಮೀಸಲಾಗಿದ್ದ ವಸ್ತುಗಳನ್ನೆಲ್ಲಾ ಇಂದು ಪ್ರತಿಯೊಬ್ಬರು ಅನುಭವಿಸ ಬಹುದಾಗಿದೆ. ಇಂದು ವಾಷರ್ಿಕ ಕೋಟ್ಯಾಂತರ ಡಾಲರ್ಗಳನ್ನು ಕೇವಲ ಸಂಶೋಧನೆಗಳಿಗಾಗಿ ಖಚರ್ು ಮಾಡುತ್ತಿದ್ದಾರೆ. ಗ್ರಾಹಕ ಕೊಳ್ಳಲು ಅನುಕೂಲವಾಗುವಂತೆ, ಅವರಿಗೆ ಪ್ರೇರಣೆ ನೀಡಲು ಜಾಹಿರಾತು ಸಂಸ್ಥೆಗಳು ಸಹಾ ಹುಟ್ಟಿಕೊಂಡಿವೆ. ಮತ್ತು ನಾನಾ ವಿಧಾನಗಳು ಸಿದ್ಧವಾಗಿವೆ. ಅಷ್ಟೇ ಅಲ್ಲ, ಅವುಗಳನ್ನು ಮಾರಾಟ ಮಾಡಲು ಮಾಕರ್ೆಟಿಂಗ್ ವ್ಯೂಹಗಳು ಸಿದ್ಧವಾಗಿವೆ.
ಅವರು ಸಂಕೇತ ಮತ್ತು ಆಕಾರಗಳನ್ನು ಉತ್ತೇಜನಕ್ಕಾಗಿ ಬಳಸಿ ಸುಪ್ತ ಮನಸ್ಸಿನಲ್ಲಿ ಅದರ ಹೊರತು ನಷ್ಟವೆಂದು ಭಾವಿಸುವಂತೆ ಮಾಡುತ್ತಾರೆ. ಗ್ರಾಹಕರು ಹೇಳುವುದೇನೆಂದರೆ ಅದನ್ನು ಹೊಂದುವುದರಿಂದಲೇ ಸುಖ ಅಥವಾ ಅದನ್ನು ಪೋಷಿಸುವುದರಿಂದಲೇ ಸುಖ. ಇದನ್ನೇ ನಾವು ಟಿ.ವಿ.ಗಳಲ್ಲಿ ಪತ್ರಿಕೆಗಳಲ್ಲಿ ಮತ್ತು ಸಿನಿಮಾ ತೆರೆಗಳಲ್ಲಿ ಕಾಣುವೆವು. ಅಲ್ಲಿ ಸುಂದರ ರೂಪದಶರ್ಿಗಳನ್ನು ಉತ್ಪನ್ನಗಳ ಮಾರಾಟಕ್ಕೆ ಬಳಸುವರು. ಸೌಂದರ್ಯವರ್ಧಕ ವಸ್ತುಗಳು ಮತ್ತು ಹಾಲಿನಪುಡಿಯಿಂದ ಮನೆಯ ಪೈಂಟ್ ಹಾಗೂ ಟೈರ್ಗಳವರೆಗೂ ಅವರನ್ನು ಬಳಸುತ್ತಾರೆ.
ಮಾನವನ ಸುಂದರ ಮತ್ತು ಯೌವ್ವನ ಶರೀರವನ್ನು ವೈಭವೀಕರಿಸಲಾಗುತ್ತದೆ. ಕೆಲವು ಜಾಹಿರಾತುಗಳು ಹೇಗಿರುತ್ತದೆ ಎಂದರೆ ಮೂಲ ಉದ್ದೇಶವೇ ಜಾರಿರುತ್ತದೆ. ಉದಾಹರಣೆಗೆ ಒಂದು ಬಗೆಯ ಟೂತ್ಪೇಸ್ಟ್ ಬಳಸಿದರೆ ನಿಮ್ಮ ಆಕರ್ಷಣೆಯ ಮಟ್ಟವನ್ನು ಹೆಚ್ಚಿಸುತ್ತದೆ ಎನ್ನುವುದು. ಆದರೆ ಅದು ಹಲ್ಲುಗಳ ಸದೃಢತೆಯಾಗಲಿ, ಸ್ವಚ್ಛಗೊಳಿಸುವುದರ ಬಗ್ಗೆಯಾಗಲಿ ಏನೂ ಹೇಳುವುದಿಲ್ಲ. ಅಥವಾ ಒಂದುಬಗೆಯ ಪಾನಿಯ ಸೇವಿಸತೊಡಗಿದರೆ ನೀವು ಯುವತಿಯರಿಂದ ಆಕರ್ಷಣೆಗೊಳಗಾಗುವಿರಿ ಎಂದು ಅಥವಾ ಈ ಏರ್ಲೈನ್ನಲ್ಲಿ ಪ್ರಯಾಣಿಸಿದರೆ ನಿಮಗೆ ಪ್ರೇಮಿಸುವ ಅವಕಾಶ ಸಿಗಬಹುದು ಎಂದು ಹೇಳುವರೇ ವಿನಃ ಆ ಪ್ಲೈನ್ನಲ್ಲಿ ಪ್ರಯಾಣಿಸುವವರಿಗೆ ಸುರಕ್ಷತೆ ಎಷ್ಟರಮಟ್ಟಿಗೆ ಎನ್ನುವ ಸತ್ಯತೆಗಳನ್ನು ತಿಳಿಸಲಾರರು.
ಈ ರೀತಿಯ ವಿಧಾನಗಳು ಆಧುನಿಕ ಸಮಾಜದಲ್ಲಿ ತೀವ್ರ ಬಯಕೆಗಳನ್ನು ಹೆಚ್ಚಿಸುತ್ತದೆ. ನಿಮಗೆ ಬಾಧಿಸುವಂತಹ ಪ್ರಬಲ ಸಂದೇಶವೆಂದರೆ: ನಿಮ್ಮಲ್ಲಿ ಎಷ್ಟಿದೆಯೋ ಎನ್ನುವುದಲ್ಲ ಮುಖ್ಯ, ನಿಮ್ಮಲ್ಲಿ ಇನ್ನೂ ಸಾಕಷ್ಟಿಲ್ಲ, ನೀವು ತೃಪ್ತರಾಗಲಾರಿರಿ. ಇಂತಹ ವಿಧಾನಗಳು ದುರ್ವರ್ತನೆಯ ಭಾವಾವೇಶವನ್ನು ಸೃಷ್ಟಿಸುವುದು. ಬಡತನವೇ ರೋಗವೆನ್ನುವರ್ಥದಲ್ಲಿ ಅವನತಿ, ನಷ್ಟದಲ್ಲಿರುವೆವೊ ಎಂಬ ಭಾವ ಉಂಟುಮಾಡುತ್ತದೆ.
ಅವರು ಹೇಳುವ ಧಾಟಿ ಹೀಗಿರುತ್ತದೆ: ಈ ಬಗೆಯ ನಮೂನೆಯ ಗಡಿಯಾರ ಅಥವಾ ಸ್ಪೋರ್ಟ್ ಕಾರ್ ಹೊಂದಿಲ್ಲದಿದ್ದರೆ ನೀವು ಸುಖಿಯಾಗಿರಲಾರಿರಿ. ಇವು ನಿಮಗೆ ಘನೆತೆ, ಪ್ರೇಮ ಎಲ್ಲವೂ ತಂದುಕೊಡುವುದು. ಪೂರ್ಣ ಜಾಗೃತಿಯಿಲ್ಲದ ಸಾಧಾರಣ ಮನುಷ್ಯನು ಈ ಬಗೆಯ ಜಾಹಿರಾತುಗಳಿಂದ ಮೋಸ ಹೋಗುವನು. ಆತನು ಎಷ್ಟೇ ಸಂಪಾದಿಸಲಿ. ತಿಂಗಳಿಗೆ 600 ಡಾಲರ್, 6000 ಡಾಲರ್ ಅಥವಾ 60,000 ಡಾಲರ್ ಆದರೂ ಸಹಾ ಆತನ ಹೊಂದುವಿಕೆಯ ಅಂಶದಿಂದಾಗಿ ಬಡವನೆಂದೇ ಕಾಣಿಸಲ್ಪಡುತ್ತಾನೆ. ಇಂದು ಶ್ರೀಮಂತ ದೇಶದಲ್ಲಿ ನಡೆಯುವ ಹಲವಾರು ಅಪರಾಧಗಳಿಗೆ ಈ ಅಂಶವು ಕಾರಣಕರ್ತವಾಗಿಲ್ಲವೇ?


3.7 ಸಾಮೂಹಿಕ ಪ್ರಚೋದನೆ
ಇದರ ಜೊತೆಗೆ ಸಾಮೂಹಿಕ ಮಾದ್ಯಮವು ವಾಚಕನಿಗೆ ಮತ್ತು ಆಲಿಸುವವನಿಗೆ ಪ್ರಸಾರಣೆ ಮತ್ತು ಸಂದೇಶಗಳಿಂದಾಗಿ ಇನ್ನೊಂದು ಜನಾಂಗದವರ ವಿರುದ್ಧ ದ್ವೇಷ ಮತ್ತು ಭಯವು ಉಂಟಾಗುವ ರೀತಿ ಪ್ರಚೋದನೆಯ ಸುರಿಮಳೆ ಮಾಡುವುದು. ಇದು ಬರೀ ಜನಾಂಗಕ್ಕೆ ಸೀಮಿತವಲ್ಲ. ಸಂಸ್ಕೃತಿ, ಧರ್ಮ ಅಥವಾ ಸಕರ್ಾರದ ವಿರುದ್ಧವು ಹೀಗೆ ಆಗುವುದು. ಇವೆಲ್ಲ ಅಸೂಯೆ, ದ್ವೇಷ ಮತ್ತು ಸಮಾಜದ ಅಜ್ಞಾನವನ್ನು ಪ್ರತಿಬಿಂಬಿಸುವುದು ಅಲ್ಲವೆ? ಅಥವಾ ನೇರವಾಗಿ ಹೇಳುವುದಾದರೆ ಪ್ರತ್ಯೇಕ ವ್ಯಕ್ತಿಯ ಅಜ್ಞಾನ ದ್ವೇಷವನ್ನು ತೋರಿಸುವುದು ಅಲ್ಲವೇ? ಸಂಗೀತ, ನೃತ್ಯ ಮತ್ತು ಮನರಂಜನೆಗಳು ಮಾನವನ ಭಾವಾವೇಶಗಳನ್ನು ತೃಪ್ತಿಗೊಳಿಸಲಾಗಿಯೇ ಇದೆ ಹಾಗು ವಿಶ್ರಾಂತಿ ತರುವುದೆಂದರೆ ಇಂದು ಡ್ರಗ್ಸ್ಗಳು ಉನ್ಮಾದತೆಯನ್ನು ಸೃಷ್ಟಿಸಿ, ಮಾನಸಿಕ ಅವಿಶ್ರಾಂತಿಯನ್ನು ಉಂಟುಮಾಡಿ ಮಾನವನಲ್ಲಿರುವ ಮೃಗೀಯತೆಯನ್ನು ಎಬ್ಬಿಸುತ್ತಿದೆ.
ಇಂದಿನ ಆಧುನಿಕ ಸಮಾಜದಲ್ಲಿ ಸಾಮೂಹಿಕ ಪ್ರಚೋದನೆಯ ತೀವ್ರ ಬಯಕೆಯು ಹೆಚ್ಚಾಗಿ ಭಾವಾವೇಶದ ಜ್ವರವು ಮಿತಿಮೀರಿ ಇಡೀ ಸಾಮಾಜಿಕ ಚೌಕಟ್ಟನ್ನು ಹರಿದು, ಅಸ್ತವ್ಯಸ್ತವನ್ನುಂಟುಮಾಡುವ ಭೀಕರತೆ ಹೊಂದಿದೆ. ಬುದ್ಧ ಭಗವಾನರು ಸ್ವಾರ್ಥದ ಭಯಾನಕತೆಯನ್ನು ತಮ್ಮ ಸುತ್ತವೊಂದರಲ್ಲಿ ಹೀಗೆ ಹೇಳಿದ್ದಾರೆ:
ನಿಜಕ್ಕೂ ಈ ಸ್ವಾರ್ಥದ ಬಯಕೆಗಳಿಂದಲೇ, ಸ್ವಾರ್ಥದ ದಾಹದ ಸ್ಥಿತಿಯಿಂದಲೇ, ಸ್ವಾರ್ಥದ ತೀವ್ರ ಬಯಕೆಯ ಪ್ರಚೋದನೆಯಿಂದಲೇ ಸ್ವಾರ್ಥದ ಪ್ರೇರಣ ಬಲದಿಂದಲೇ ರಾಜರು ರಾಜರೊಂದಿಗೆ, ರಾಜಕುಮಾರರು ರಾಜಕುಮಾರರೊಂದಿಗೆ, ಬ್ರಾಹ್ಮಣರು ಬ್ರಾಹ್ಮಣರೊಂದಿಗೆ, ನಾಗರಿಕರು ನಾಗರಿಕರೊಂದಿಗೆ, ತಾಯಿಯು ಮಗನೊಂದಿಗೆ, ಮಗ ತಾಯಿಯೊಂದಿಗೆ, ತಂದೆ ಮಗನೊಡನೆ, ಮಗ ತಂದೆಯೊಡನೆ, ಸೋದರ ಸೋದರಿಯೊಂದಿಗೆ, ಸೋದರಿ ಸೋದರನೊಂದಿಗೆ, ಮಿತ್ರನು ಮಿತ್ರನೊಡನೆ ಜಗಳವಾಡುವರು, ಕಲಹವಾಡುವರು, ಯುದ್ಧ ಮಾಡುವರು. ಒಬ್ಬರ ಮೇಲೆ ಒಬ್ಬರು ಬಿದ್ದು ಮುಷ್ಟಿಗಳಿಂದ, ದಂಡಗಳಿಂದ ಅಥವಾ ಶಸ್ತ್ರಗಳಿಂದ ಕಾದಾಡುವರು. ಇದರಿಂದಾಗಿ ಮಾರಣಾಂತಿಕ ನೋವು ಅಥವಾ ಮರಣವಪ್ಪುವರು.
ಮಾನಸಿಕ ಅವಿಶ್ರಾಂತಿಯ ತೀಕ್ಷ್ಣತೆ, ಲೋಭದ ಸುಳಿಗೆ ಸಿಲುಕಿ ಮತ್ತು ಸಾಮಾಜಿಕ ಮಟ್ಟದ ದ್ವೇಷವು ಇದು ನಾನಾ ಪ್ರಕಾರಗಳಲ್ಲಿ ವ್ಯಕ್ತವಾಗಿದೆ. ಇಂದು ಜಗತ್ತು ಇವುಗಳಿಂದಾಗಿ ವಾಸ್ತವಿಕ ಟೈಂಬಾಂಬ್ನಲ್ಲಿರುವಂತಾಗಿದೆ. ಇಂದು ಜಾಗತಿಕ ನ್ಯೂಕ್ಲಿಯರ್ ನಾಶವು ನೈಜ್ಯ ಸಂಭವನೀಯವಾದುದು, ಹಾಗೇನಾದರೂ ಆದರೆ ಸೂರ್ಯನ ಅಡಿಯಲ್ಲಿ ಯಾವ ಮಾನವನಿಗೂ ತಪ್ಪಿಸಿಕೊಳ್ಳಲು ಆಶ್ರಯ ಸ್ಥಾನವಿರುವುದಿಲ್ಲ. ಎಂಥಹ ಅವ್ಯವಸ್ಥೆಯಲ್ಲಿಂದು ಮಾನವ ಜನಾಂಗವು ತಾನಾಗಿಯೇ ಸಿಲುಕಿದೆ !
ವೈಜ್ಞಾನಿಕ ಮುನ್ನಡೆಯಿಂದಾಗಿ ಅಣುವಿನಲ್ಲಿಯೇ ಮೆಲ್ಲನೆ ಬಡಿದು ಬೃಹತ್ ಪ್ರಚಂಡ ಶಕ್ತಿಯನ್ನು ಜಾಗೃತಗೊಳಿಸುವ ತಂತ್ರವು ಮಾನವ ಜನಾಂಗಕ್ಕೆ ಅಪಾಯವನ್ನು ತಂದಿಟ್ಟಿದ್ದಾರೆ. ಎಲ್ಲಿಯವರೆಗೆ ಮಾನವನು ಅಜ್ಞಾನದಿಂದ, ಸ್ವಾರ್ಥದಿಂದ, ಅನ್ಯಾಯದಿಂದ ಮತ್ತಿತರ ನಾಶಕಾರಿ ಪಾಪದ ಬಲಗಳಿಂದ ಗುಲಾಮನಾಗಿರುವನೋ, ಅಲ್ಲಿಯವರೆಗೂ ಯಾರೂ ಆತನಿಂದ ಸುರಕ್ಷಿತವಾಗಿರಲಾರರು.
ಜಾಗತಿಕ ಇತಿಹಾಸಲ್ಲಿ ಮೊದಲ ಅಣುಬಾಂಬ್ನ್ನು ಹಿರೋಷಿಮಾದಲ್ಲಿ ಹಾಕಿದ್ದರಿಂದಾಗಿ ಅಪಾರ ದುಃಖ, ಭಯ, ದ್ವೇಷ ಮತ್ತು ಕೋಟ್ಯಾಂತರ ಜನರ ಜೀವನ ಅನಿಶ್ಚಿತವಾಯಿತು. ಆದ್ದರಿಂದ ಆ ಘಟನೆಯನ್ನು ಕುರುಡು ಮಾಡಿದಂತಹ ಮಿಂಚು ಎಂದು ದಾಖಲು ಮಾಡಲಾಗಿದೆ. ಇದಕ್ಕೆ ಭಿನ್ನವಾಗಿ 2500 ವರ್ಷಗಳ ಹಿಂದೆ ಬೋಧಿ ವೃಕ್ಷದ ಅಡಿಯಲ್ಲಿ ಒಂದು ಭವ್ಯವಾದ, ದಿವ್ಯವಾದ ಬೃಹತ್ ಹೊಂಬೆಳಕು ಪ್ರಕಾಶವಾಯಿತು ಮತ್ತು ಪ್ರಜ್ವಲಿಸಿತು. ಅದು ಬುದ್ಧ ಭಗವಾನರ ಬೋಧಿಯ ಜ್ಞಾನ ಪ್ರಕಾಶವಾಗಿತ್ತು. ಅದು ಮಾನವನ ಭವಿಷ್ಯಕ್ಕಾಗಿ ಪರಮ ಮಹತ್ವದ್ದಾಗಿತ್ತು. ಮಾನವತೆಗೆ ಅದು ಲೋಭ, ದ್ವೇಷ ಮತ್ತು ಮೋಹದ ಘನ ಕತ್ತಲಿನಿಂದ ಮೈತ್ರಿ, ಕರುಣೆ ಮತ್ತು ಸುಖದ ಹೊಂಬೆಳಕಿನತ್ತ ದಾಟಿಸುವ ಹಾದಿಯನ್ನು ಕಾಂತಿಯುತಗೊಳಿಸಿತು.


3.8 ಸಹನೆ ಮತ್ತು ತಾಳ್ಮೆ
ಯಾರು ಕಷ್ಟಕಾಲದಲ್ಲಿಯೂ ಉತ್ಸಾಹದಿಂದ, ಪ್ರಸನ್ನತೆಯಿಂದ ಹಾಗೂ ಶಾಂತತೆಯಿಂದ ಇರುವರೋ ಅವರು ಸದಾ ಮೆಚ್ಚುಗೆ ಪಡೆಯುತ್ತಾರೆ ಮತ್ತು ಪರರಿಗೆ ಸ್ಫೂತರ್ಿದಾಯಕವಾಗುತ್ತಾರೆ, ಆದರ್ಶಪ್ರಾಯರಾಗುತ್ತಾರೆ. ಅವರು ವಿಷಯಗಳ ಬೆಳಕಿನ ಭಾಗವನ್ನು ಕಂಡು ಕಲಹಗಳನ್ನು ತಡೆಯುತ್ತಾರೆ. ಬುದ್ಧಿವಂತ ಮನುಷ್ಯ ಹಾಸ್ಯಗಳನ್ನು ಆಡುತ್ತಲೇ ಜಗಳಗಳನ್ನು ತಡೆಯುತ್ತಾನೆ. ಟೀಕೆ ಪ್ರಹಾರಗಳ ಮೇಲು ಒಂದು ಹಾಸ್ಯ ಹಾರಿಸುತ್ತಾನೆ. ಯಾವಾಗ ಜನರು ನಮಗೆ ಅಪಮಾನ ಮಾಡುವರೋ ಅದನ್ನು ಆಗ ನಾವು ಸಭ್ಯತೆಯಿಂದ ಎದುರಿಸಲು ಕಲಿಯಬೇಕು, ಅಪಹಾಸ್ಯವನ್ನು ತಣ್ಣಗೆ ಮಾಡಿ ಹಾಸ್ಯಪ್ರಜ್ಞೆಯನ್ನು ವತರ್ಿಸಬಹುದು. ನೀವು ಆಟದಲ್ಲಿ ಸೋತಾಗ ನೀವೇನು ಮಾಡುವಿರಿ? ನೀವು ಖಂಡಿತ ಆಗ ಕೋಪವನ್ನು ತೋರಿಸಬಾರದು. ಹಾಗೇನಾದರು ನೀವು ಮಾಡಿದರೆ ಆಟದ ಆನಂದ ಹಾಳು ಮಾಡುವುದಷ್ಟೇ ಅಲ್ಲದೆ ಸ್ನೇಹಿತರು ನಿಮಗೆ ತೋರಿಸುವ ಗೌರವವನ್ನು ಹಾಳು ಮಾಡಿಕೊಳ್ಳುವಿರಿ.
ಪ್ರತಿಯೊಬ್ಬ ವ್ಯಕ್ತಿಯು ಸಹಾ ಸಹನೆಯ, ಮೈತ್ರಿಯ ಮತ್ತು ಪ್ರಾಮಾಣಿಕತೆಯ ಸಹೃದಯಗಳ ಬೀಜಗಳನ್ನು ಬಿತ್ತಿ ಈ ಜಗತ್ತನ್ನು ಉತ್ತಮವಾಗಿಸುವಲ್ಲಿ ಪಾತ್ರವಹಿಸುತ್ತಿದ್ದಾನೆ. ಅಂತಹ ಹೊಸ ಯುಗವು ಆತನ ತಲೆಮಾರಿಗೆ ಮತ್ತು ಮುಂದಿನ ತಲೆಮಾರಿಗೆ ಲಾಭವನ್ನು ಉಂಟುಮಾಡುವುದು. ಯಾರು ಸಂಕಷ್ಟಗಳನ್ನು ಸಹಾನುಭೂತಿಯಿಂದ ಮತ್ತು ಅರಿವಿನಿಂದ ಎದುರಿಸಲು ಬಲ್ಲನೋ ಆತನು ಸುಸಂಸ್ಕೃತನೇ ಸರಿ, ದಿನನಿತ್ಯದ ಕೆರಳುವಿಕೆಯ ಸನ್ನಿವೇಶಗಳನ್ನು ಸಮಚಿತ್ತತೆಯಿಂದ ಎದುರಿಸುವುದರಲ್ಲಿ ಸಭ್ಯ ಮಾನವನ ಲಕ್ಷಣವು ಅಡಗಿರುತ್ತದೆ. ಸಹನೆಯ ಅನುಭವ ಕಹಿ ಆದರೆ ಅದರ ಫಲಿತಾಂಶ ಮಧುಮಯವಾಗಿದೆ.
ಸಹನೆಯ ಬದಲು ಸೋಮಾರಿತನವನ್ನೇ ಬಹಳಷ್ಟು ಬಾರಿ ತಪ್ಪಾಗಿ ಭಾವಿಸುತ್ತಾರೆ (ಫ್ರೆಂಚ್ ದೇಶದ ಉಕ್ತಿ).
ಪ್ರತಿಯೊಂದರಲ್ಲಿಯೂ ಸಹನೆಯಿಂದಿರಿ, ಕೋಪದಿಂದ ಒಬ್ಬನು ಕುರುಡು ಹಾದಿಯಲ್ಲಿ ಇರುತ್ತಾನೆ. ಅದು ಕೆರಳಿಸುವಂತೆ ಪರರನ್ನು ಪೀಡಿಸುತ್ತದೆ. ಅದು ತನ್ನನ್ನು ಹಾನಿಗೊಳಿಸುತ್ತದೆ. ಕೋಪವು ಶರೀರವನ್ನು ದುರ್ಬಲಗೊಳಿಸುತ್ತದೆ ಹಾಗು ಮನಸ್ಸನ್ನು ಕ್ಷೊಭೆಗೊಳಿಸುತ್ತದೆ. ಕಟುನುಡಿಯು ಬಿಲ್ಲಿನಿಂದ ಹೊರಟ ಬಾಣದಂತೆಯೇ ಸಾವಿರ ಕ್ಷಮೆಯನ್ನು ಯಾಚಿಸಿದರೂ ಅದು ಹಿಂತಿರುಗದು ಅಥವಾ ಸರಿಪಡಿಸಲಾಗದು. ಕೆಲವು ಜೀವಿಗಳು ಹಗಲಿನಲ್ಲಿ ನೋಡಲಾರವು. ಹಾಗೆಯೇ ಕೆಲವು ಜೀವಿಗಳು ರಾತ್ರಿಯಲ್ಲಿ ನೋಡಲಾರವು. ಆದರೆ ಯಾವ ಮಾನವನು ದ್ವೇಷದ ಆಳಕ್ಕೆ ಸಿಲುಕಿರುವನೋ ಅಂತಹವನು ಹಗಲಿನಲ್ಲಿ ಆಗಲಿ ಅಥವಾ ರಾತ್ರಿಯಲ್ಲಿಯಾಗಲಿ ಏನನ್ನೂ ನೋಡಲಾರನು.
ನೀವು ಕೋಪಗೊಂಡಿರುವಾಗ, ಯಾರ ಮೇಲೆ, ಯಾವುದರ ಮೇಲೆ ಹೋರಾಡುವಿರಿ? ನೀವು ನಿಮ್ಮೊಂದಿಗೆ ಹೋರಾಡಿ. ಏಕೆಂದರೆ ನಿಮ್ಮ ಪರಮಶತ್ರು ನೀವೇ ಆಗಿರುವಿರಿ. ನಿಮ್ಮ ಮನಸ್ಸು ನಿಮ್ಮ ಪರಮ ಮಿತ್ರನಾಗಿದೆ. ಆದರೆ ಅದು ಸುಲಭವಾಗಿ ಪರಮಶತ್ರುವು ಆಗಬಹುದು.
ಕೆಲವು ಬಗೆಯ ಹೃದಯ ರೋಗಗಳು, ಸಂಧಿವಾತದ ಹಲವು ವ್ಯಾಧಿಗಳು ಮತ್ತು ಚರ್ಮರೋಗಗಳು ಇವೆಲ್ಲ ದೀರ್ಘ ಕಾಲದ ದ್ವೇಷ, ಹಿಂಸೆ ಮತ್ತು ಅಸೂಯೆಗಳ ಪರಿಣಾಮಗಳಾಗಿದೆ. ಅಂತಹ ನಾಶಕಾರಿ ಭಾವವೇಶಗಳು ಹೃದಯಕ್ಕೆ ವಿಷಕಾರಿಯಾಗಿವೆ. ಅವು ಸುಪ್ತ ರೋಗಗಳನ್ನು ಪೋಷಿಸಿ ಬೆಳೆಸುತ್ತವೆ. ಹೀಗಾಗಿ ದೇಹದ ರಕ್ಷಣಾ ವ್ಯವಸ್ಥೆಯು ಕ್ಷೀಣಿಸಿ, ಸೂಕ್ಷ್ಮಜೀವಿಗಳೊಂದಿಗೆ ಹೋರಾಡುವಲ್ಲಿ ವಿಫಲವಾಗುತ್ತದೆ.


3.9 ಪ್ರಜ್ಞೆಯಿಂದ ಒಳ್ಳೆಯವರಾಗಲು ಪ್ರಯತ್ನಿಸಿ
ಬುದ್ಧಿಮತ್ತೆಯೊಂದೇ ನಮ್ಮ ಹಲವಾರು ಸಮಸ್ಯೆಗಳನ್ನು ಪರಿಹರಿಸಲಾರದು. ಕೆಲವೊಮ್ಮೆ ಬುದ್ಧಿವಂತನೇ ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸಬಲ್ಲನು. ಏಕೆಂದರೆ ಮಾನವ ಸಹಜ ಅಹಂಕಾರದ ಪ್ರವೃತ್ತಿಯಿಂದಾಗಿ, ಹಾಗೇ ಮಾಡಬಲ್ಲನು. ಕರುಣೆ, ಸಹಾನುಭೂತಿ, ಸಹನೆ, ತಾಳ್ಮೆ, ಪ್ರಮಾಣಿಕತೆ ಮತ್ತು ದಾನದಂತಹ ಗುಣಗಳು ಸಹಾ ಕೆಲವು ಸಮಸ್ಯೆಗಳನ್ನು ತಡೆಯಲಾರವು. ಏಕೆಂದರೆ ಮೋಸ ಮತ್ತು ವಿವೇಚನರಹಿತ ಜನರು ಅಂತಹ ಸದ್ಗುಣಗಳಿಂದಾಗಿ ಲಾಭ ಪಡೆಯಬಹುದು. ಆದುದರಿಂದಾಗಿ ನಾವು ಅಂತಹ ಸದ್ಗುಣಗಳನ್ನು ಪ್ರಜ್ಞೆಯಿಂದ ನಿರ್ವಹಿಸಬೇಕಾಗಿದೆ.
ಈ ಜಗತ್ತಿನಲ್ಲಿ ಬಹಳಷ್ಟು ಭಾಗ ಒಳ್ಳೆಯ ಜನರೇ ದುಃಖಕ್ಕೆ ಸಿಲುಕುತ್ತಾರೆ. ಉದಾಹರಣೆಗೆ ಹಲವು ಕ್ಷೇಮಾಭಿವೃದ್ಧಿ ಸಂಸ್ಥೆಗಳ ಮೊತ್ತವನ್ನು ಗಮನಿಸಿದಾಗ ಸಮಾಜ ಸುಧಾರಕರು ಮಾನವರ ಸಮಸ್ಯೆಗಳನ್ನು ಕ್ಷೀಣಿಸಲು ಪ್ರಯತ್ನಿಸುತ್ತಾರೆ. ಆದರೆ ಅವರ ಕಾಣಿಕೆಯಿಂದಾಗಿ ಕೆಲವೇ ಸಮಸ್ಯೆಗಳು ಬಗೆಹರಿದಿವೆ.
ಮಾನವರ ಸಮಸ್ಯೆಗಳನ್ನು ಪರಿಹರಿಸಲು ಒಂದು ಉತ್ತಮ ವಿಧಾನವಿದೆ. ಅದೆಂದರೆ ತಮ್ಮ ಆಸ್ತಿ ಮತ್ತು ಭೂಮಿಯನ್ನು ದೇಶದ ಎಲ್ಲರಲ್ಲಿಯೂ ಸಮಾನವಾಗಿ ಹಂಚಿಕೊಳ್ಳುವುದು. ಆದರೆ ಈ ವಿಧಾನವು ಪ್ರಾಯೋಗಿಕವಾಗಿ ಪರಿಣಾಮಕಾರಿಯಾಗಿಲ್ಲ. ಏಕೆಂದರೆ ಸ್ವಾರ್ಥ, ಮೋಸ ಮತ್ತು ಇನ್ನಿತರ ಲೋಪಗಳು ಸನ್ನಿವೇಶಗಳನ್ನು ಕೆಡಿಸುವುವು.
ಮೂರ್ಖರು ತನ್ನ ಸ್ನೇಹಿತರಲ್ಲಿ ಪಡೆವ ಲಾಭಕ್ಕಿಂತ ಹೆಚ್ಚಾಗಿ ಜ್ಞಾನಿಯು ತನ್ನ ಶತ್ರುಗಳಿಂದ ಪ್ರಯೋಜನ ಪಡೆಯುತ್ತಾನೆ. (ಬಾಲ್ಟಸರ್ ಗ್ರಾಸಿಯನ್)


3.10 ಪಳಗದ ಬುದ್ಧಿಮತ್ತೆಯ ಅಪಾಯ
ಇಂದ್ರೀಯಗಳ ಭೋಗಗಳಿಗೆ ವಶವಾಗಿ ನಾವಿಂದು ನಮ್ಮ ಆರೋಗ್ಯವನ್ನೇ ಯಾವರೀತಿ ಅಲಕ್ಷಿಸಿದ್ದೇವೆ ಎಂದರೆ ನಾವು ಸಂತೃಪ್ತಿಗೆ ದಾಸರಾಗಿದ್ದೇವೆ. ಈ ರೀತಿಯಾಗಿ ನಮ್ಮ ಅಶಿಕ್ಷಿತ ಬುದ್ಧಿಮತ್ತೆಯೇ ನಮ್ಮ ಸಮಸ್ಯೆಗಳಿಗೆ ಕಾರಣವಾಗಿದೆ. ನಾವೆಲ್ಲಾ ಒಂದಲ್ಲ ಒಂದುದಿನ ಸಾಯಲೇಬೇಕೆಂದು ಈ ಭೂಮಿಯಲ್ಲಿ ತಮ್ಮ ಚಿಂತನಾಶಕ್ತಿಯನ್ನು ಅಭಿವೃದ್ಧಿಗೊಳಿಸಬಲ್ಲ ಏಕೈಕ ಜೀವಿಯೆಂದರೆ ಅದು ಮಾನವನೇ ಆಗಿದ್ದಾನೆ. ಆದ್ದರಿಂದಲೇ ಅನಗತ್ಯವಾಗಿ ಅದರ ಬಗ್ಗೆ ಚಿಂತಿತನಾಗಿದ್ದಾನೆ. ಆದರೆ ಮರಣದ ಬಗ್ಗೆ ಚಿಂತಿತನಾದ ಮಾತ್ರಕ್ಕೆ ಮರಣವು ದೂರಾಗುವುದೇ? ಹಾಗಿದ್ದ ಮಾತ್ರಕ್ಕೆ ಅದನ್ನು ಶಾಂತವಾಗಿ ನಾವು ಏತಕ್ಕೆ ಸ್ವೀಕರಿಸುವುದಿಲ್ಲ?
ಷೇಕ್ಸ್ಪಿಯರ್ನಿಂದ ರೂಪಿತವಾದ ಜುಲಿಯಸ್ ಸೀಜರ್ಸ್ ಹೀಗೆ ಹೇಳುತ್ತಾನೆ ನಾನು ಎಂತೆಂಥದೋ ಅದ್ಭುತಗಳನ್ನು ಕೇಳಿದ್ದೇನೆ ಮತ್ತು ನೋಡಿದ್ದೇನೆ. ಆದರೂ ನಾ ಕಂಡ ಅತಿದೊಡ್ಡ ವಿಚಿತ್ರವೇನೆಂದರೆ ಮಾನವನು ಅಗತ್ಯ ಅಂತ್ಯವಾದ ಮರಣವನ್ನು ಕಂಡು ಅದು ಎಂದು ಬರುವುದೋ ಎಂದು ಹೆದರುತ್ತಾನೆ. ಅದೇರೀತಿ ಕೆಲವರು ಮತ್ತೊಂದು ಅತಿರೇಕಕ್ಕೆ ಹೋಗುವರು ಹಾಗು ಜೀವನದ ಅಂತ್ಯದ ಬಗ್ಗೆ ತಲೆಕೆಡಿಸಿ ಕೊಳ್ಳದವರು ಅಥವಾ ಸಾವಿನ ನಂತರ ಏನು ಎಂಬುದರ ಬಗ್ಗೆಯು ಅವರು ಚಿಂತಿತರಾಗುವುದಿಲ್ಲ. ಹಾಗಿದ್ದರೂ ಬಹುಪಾಲು ಜನರು ಇರುವ ಸಮಸ್ಯೆಗಳ ಬಗ್ಗೆ ಚಿಂತಿತರಾಗುತ್ತಾರೆ ಮತ್ತು ಮುಂದಿನ ಜನ್ಮದ ಬಗ್ಗೆಯು ಆತಂಕಪಡುತ್ತಾರೆ.
ಬೇರೆ ಎಲ್ಲಾ ಜೀವಿಗಳು ಈ ಸಮಸ್ಯೆಯಿಂದ ಮುಕ್ತವಾಗಿದ್ದಾರೆ. ಭವಿಷ್ಯದಲ್ಲಿ ನಮಗೇನು ಆಗುವುದು ಎಂದು ಭವಿಷ್ಯ ನುಡಿಯದಿದ್ದರೂ ಅನಗತ್ಯವಾಗಿ ಅದರ ಬಗ್ಗೆ ಚಿಂತಿತರಾಗಬಾರದು. ಯಾವಾಗಲೇ ಆಗಲಿ ಕೆಲವು ಕಷ್ಟಗಳು ಮತ್ತು ಸಮಸ್ಯೆಗಳು ಉಂಟಾದಾಗ ನಮ್ಮ ಮಾನಸಿಕ ಆತಂಕವನ್ನು ಮತ್ತು ಅಸುಖವನ್ನು ಕಡಿಮೆ ಮಾಡಲು ಹಾಗು ನಮ್ಮ ಮನಸ್ಸನ್ನು ದೃಢಮಾಡಲು ಹಲವಾರು ವಿಧಾನಗಳಿವೆ.
ಮೊಟ್ಟಮೊದಲಿಗೆ ನಾವು ಜೀವಿಸುವ ಜಗತ್ತಿನ ಸ್ವರೂಪವನ್ನು ಅರಿಯಲು ಯತ್ನಿಸಬೇಕು. ನಾವು ಎಂದಿಗೂ ಈ ಲೋಕದಲ್ಲಿ ಪ್ರತಿಯೊಂದು ಪರಿಪೂರ್ಣವಾಗಿರಬೇಕು ಮತ್ತು ಮೃದುವಾಗಿಯೇ ಚಲಿಸಬೇಕೆಂದು ನಿರೀಕ್ಷಿಸಬಾರದು. ಏಕೆಂದರೆ ಈ ಲೋಕವು ನಮ್ಮ ಇಷ್ಟದಂತೆಯೇ ನಡೆಯುವುದಿಲ್ಲ.
ನಮ್ಮ ಸುಖ ಮತ್ತು ಕ್ಷೇಮಕ್ಕಾಗಿ ನಾವಲ್ಲದೆ ಬೇರ್ಯಾರು ಕಾರ್ಯ ಮಾಡುತ್ತಿಲ್ಲ. ಇದನ್ನು ಸ್ಪಷ್ಟವಾಗಿ ಅರಿತು ನಮ್ಮ ಜೀವನವನ್ನು ನಿಯಂತ್ರಣಕ್ಕೆ ತರಬೇಕು. ಜನರು ಸದಾ ಪ್ರಪಂಚವನ್ನು ನಿಂದಿಸುತ್ತಾರೆ. ಆದರೆ ಜಗತ್ತಿಗೆ ಏನೂ ಆಗಿಲ್ಲ, ಬದಲಾಗಿ ನಮ್ಮಲ್ಲೇ ಏನೋ ತಪ್ಪಾಗಿರುತ್ತದೆ.


3.11 ಭಯ ಮತ್ತು ಚಿಂತೆ
ಭಯ ಮತ್ತು ಚಿಂತೆಗಳು ಮನಸ್ಸಿನ ಕಲ್ಪನೆಯಿಂದ ಹುಟ್ಟಿರುವಂತಹವು. ಅವುಗಳಿಗೆ ಪ್ರಾಪಂಚಿಕ ಸ್ಥಿತಿಗತಿಗಳ ಪ್ರಭಾವವಿರುತ್ತದೆ. ಅವು ತೀವ್ರ ಬಯಕೆ ಮತ್ತು ಅಂಟುವಿಕೆಯಿಂದ ಬೇರೂರಿತ್ತವೆ. ವಾಸ್ತವವಾಗಿ ಜೀವನವು ಚಲನಚಿತ್ರದಂತೆ. ಅದರಲ್ಲಿ ಪ್ರತಿಯೊಂದು ನಿರಂತರವಾಗಿ ಚಲಿಸುತ್ತಿರುತ್ತದೆ ಮತ್ತು ಬದಲಾಗುತ್ತಿರುತ್ತದೆ.  ಜಗತ್ತಿನಲ್ಲಿ ಯಾವುದೂ ನಿತ್ಯವಲ್ಲ ಅಥವಾ ಸ್ಥಿರವಲ್ಲ. ಯಾರೆಲ್ಲ ಯುವಕರಾಗಿದ್ದಾರೋ ಮತ್ತು ಬಲಿಷ್ಠರಾಗಿದ್ದಾರೋ ಅವರು ಯೌವ್ವನದಲ್ಲೇ ಮೃತರಾದರೆ ಗತಿಯೇನು ಎಂದು ಭಯಪಡುತ್ತಾರೆ. ಯಾರು ವೃದ್ಧರಾಗಿದ್ದಾರೋ ಮತ್ತು ನೋವು ಅನುಭವಿಸುತ್ತಿದ್ದಾರೋ ಅವರು ದೀರ್ಘವಾಗಿ ಬದುಕಲು ಆತಂಕಪಡುತ್ತಾರೆ. ಇವೆರಡರ ಮಧ್ಯೆ ಸಿಲುಕಿರುವವರು ಸುಖಕ್ಕೆ ಹಾತೊರೆಯುತ್ತಾರೆ.
ಸುಖದ ಆನಂದಮಯ ನಿರೀಕ್ಷೆಗಳೆಲ್ಲ ಅತಿ ಕ್ಷಿಪ್ರವಾಗಿ ಹಾದು ಹೋಗಿಬಿಡುತ್ತವೆ. ಆದರೆ ಅಪ್ರಿಯವಾದ ಭಯಪೂರಿತ ನಿರೀಕ್ಷೆಗಳು ಚಿಂತೆಯನ್ನು ಸೃಷ್ಟಿಸುವುದಷ್ಟೇ ಅಲ್ಲದೆ, ಅವು ದೂರ ಹೋಗುವುದಿಲ್ಲ, ಬೇಗ ಮರೆಯಾಗುವುದೂ ಇಲ್ಲ. ಅಂತಹ ಅನುಭವಗಳು ಸ್ವಾಭಾವಿಕ, ಕಾಲ್ಪನಿಕ (ಆತ್ಮಗಳ) ಜೊತೆಗೂಡಿ ಜೀವನದ ನಾಟಕದ ಅಂತಹ ಏರಿಳಿತಗಳನ್ನು ಉಂಟುಮಾಡುತ್ತವೆ, ತಂತಿಯ ಮೆಲಿನ ಸೂತ್ರದ ಗೊಂಬೆಯಂತೆ.
ಆದರೆ ಮನಸ್ಸು ತನಗೆತಾನೆ ಪರಮಶ್ರೇಷ್ಠವಾಗಿರುತ್ತದೆ. ಮನಸ್ಸಿನ ಸುಶಿಕ್ಷಣವನ್ನು ಮಾನಸಿಕ ಕೃಷಿ ಎಂತಲೂ ಕರೆಯುತ್ತಾರೆ. ಅದೇ ಮನಸ್ಸಿನ ಅವಿಶ್ರಾಂತತೆಯನ್ನು ಪಳಗಿಸುವ ಪ್ರಥಮ ಹೆಜ್ಜೆಯಾಗಿದೆ.
ಬುದ್ಧರು ವಿವರಿಸುವುದು ಏನೆಂದರೆ :
ತೀವ್ರ ಲಾಲಸೆಯಿಂದಲೇ ದುಃಖವು ಪುಟಿಯುವುದು, ತೀವ್ರ ಲಾಲಸೆಯಿಂದಲೇ ಭಯವು ಪುಟಿಯುವುದು. ಯಾರು ಪೂರ್ಣವಾಗಿ ತೀವ್ರ ಲಾಲಸೆಯಿಂದ ಮುಕ್ತರೋ, ಅವರಿಗೆ ದುಃಖವಿಲ್ಲ, ಭಯವೂ ಇಲ್ಲ.
ಪ್ರತಿಯೊಂದು ಅಂಟುವಿಕೆಯು ದುಃಖದಲ್ಲಿ ಅಂತ್ಯವಾಗುತ್ತದೆ. ಆಶ್ರುವಾಗಲಿ, ಅಥವಾ  ದೀರ್ಘ ವಿದಾಯಗಳಾಗಲೀ, ಜೀವನದ ಕ್ಷಣಿಕತೆಗಳನ್ನು ಅಂತ್ಯ ಮಾಡುವುದಿಲ್ಲ. ಪ್ರತಿಯೊಂದು ಸಂಯುಕ್ತ ವಿಷಯಗಳು ಅನಿತ್ಯವಾಗಿದೆ. ಯುವಕರಾಗಲಿ ಅಥವಾ ವೃದ್ಧರಾಗಲಿ ಈ ಅಸ್ತಿತ್ವದಲ್ಲಿ ದುಃಖಿಸುತ್ತಾರೆ. ಇದಕ್ಕೆ ಯಾರೂ ಹೊರತಲ್ಲ. ಬಹಳಷ್ಟು ಯುವಕರು ಅಪಾರ ನೋವುಗಳನ್ನು ಹೊಂದಿರುತ್ತಾರೆ. ಯುವಕ-ಯುವತಿಯರು ಸ್ಥಿರವಾದ ಪ್ರೇಮ ಬಾಂಧವ್ಯವನ್ನು ರೂಪಿಸಲು ಅನುಭವಿಗಳಾಗಿರುವುದಿಲ್ಲ. ಅವರು ಕೇವಲ ತಮ್ಮ ಸೌಂದರ್ಯವನ್ನು ತೋರಿಸುತ್ತ ಪರಸ್ಪರ ಆಕರ್ಷಣೆ ಮಾಡುವುದರಲ್ಲೇ ಇರುತ್ತಾರೆ. ತಮ್ಮನ್ನು ಲೈಂಗಿಕ ವಸ್ತುಗಳಾಗಿ ನೋಡುತ್ತ ಅವರು ನಿಷ್ಪ್ರಯೋಜಕರಾಗಿದ್ದಾರೆ. ಅವರು ವಾಸ್ತವವಾಗಿ ಇರುವಂತೆ ಅವರು ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಪ್ರೌಢರಂತೆ ವತರ್ಿಸುತ್ತಾರೆ. ಅವರು ಸಹಜವಾಗಿ ವತರ್ಿಸಿದರೆ ನಗೆಗೆ ಗುರಿಯಾಗಬಹುದೆಂದು ಭೀತಿಪಡುತ್ತಾರೆ. ಈ ಬಗೆಯ ವರ್ತನೆಯು ಶೋಷಣೆಯ ಪ್ರಚಿನ್ನತೆಯಾಗಿದೆ. ಹಾಗೆಯೇ ಅವರಿಗೆ ತಿರಸ್ಕಾರವಾಗುವ ಭಯವಿರುತ್ತದೆ ಮತ್ತು ಅಹಂವಿಗೆ ಎಲ್ಲಿ ಪೆಟ್ಟಾಗುವುದೋ ಎಂಬ ಆತಂಕವೂ ಇರುತ್ತದೆ. ಪ್ರತಿಯಾಗಿ ಪ್ರೇಮ ನೀಡದ ಆ ಬಾಂಧವ್ಯವನ್ನು ಆಗಾಗ್ಗೆ ಮುರಿದು ಯುವಕರ ಹೃದಯವು ಭಗ್ನವಾಗುವುದು. ತಾವು ಮೂರ್ಖರಂತೆ ಆಗಿದ್ದೇವೆ ಎಂದು ಅವರಿಗೆ ಅನಿಸುವುದು. ಕೆಲವರಂತೂ ಆತ್ಮಹತ್ಯೆಗೂ ಬಲಿಯಾಗುತ್ತಾರೆ. ಆದರೆ ಅವರು ಜೀವನವನ್ನು ಅದು ಇರುವಂತೆಯೇ ಕಂಡಿದ್ದರೆ ಅಂತಹ ಉದ್ವೇಗಗಳನ್ನೆಲ್ಲಾ ತಡೆಯಬಹುದಿತ್ತು. ಯುವಕರಿಗೆ ಬೌದ್ಧರ ಜೀವನ ದೃಷ್ಟಿಕೋನವನ್ನು ಕಲಿಸಲೇಬೇಕು. ಅದರಿಂದಾಗಿ ಅವರಿಗೆ ಸರಿಯಾದ ಪಕ್ವ ಹಾದಿಯು ವೃದ್ಧಿಸಿಕೊಳ್ಳಬಹುದು.
ಯಾವೆಲ್ಲಾ ಭಯಗಳೇ ಆಗಿರಲಿ, ಅವೆಲ್ಲಾ ಮೂರ್ಖರಲ್ಲೇ ಉದಯಿಸುವುದೇ ಹೊರತು ಜ್ಞಾನಿಗಳಲಲ್ಲ ಎಂದು ಬುದ್ಧರು ಹೇಳುತ್ತಾರೆ. ಭಯವೆಂದರೆ ಅದು ಮನಸ್ಸಿನ ಭೀತಿಯ ಸ್ಥಿತಿಯೇ ಹೊರತು ಬೇರಲ್ಲ. ಒಬ್ಬನು ಮನಸ್ಸಿನ ಸ್ಥಿತಿಯನ್ನು ನಿಯಂತ್ರಿಸಬೇಕು, ಯೋಗ್ಯ ಮಾರ್ಗದಶರ್ಿತ್ವದಲ್ಲಿ ನಡೆಸಬೇಕಾಗಿದೆ. ನಕಾರಾತ್ಮಕ ಯೋಚನೆಯ ಬಳಕೆಯು ಭಯವನ್ನುಂಟು ಮಾಡಿದರೆ, ಸಕಾರಾತ್ಮಕ ಯೋಚನೆಯ ಬಳಕೆಯು ನಂಬಿಕೆಯನ್ನು ಮತ್ತು ಆದರ್ಶವನ್ನು ನೀಡುತ್ತದೆ. ಆದರೆ ಆಯ್ಕೆಯ ಸ್ವಾತಂತ್ರ್ಯ ನಮ್ಮದೇ ಆಗಿರುತ್ತದೆ.
ಪ್ರತಿಯೊಬ್ಬ ಮಾನವನಿಗೂ ತನ್ನ ಮನಸ್ಸನ್ನು ನಿಯಂತ್ರಿಸುವ ಸಾಮಥ್ರ್ಯವಿರುತ್ತದೆ. ಪ್ರಕೃತಿಯು ಮಾನವನಿಗೆ ಒಂದು ವಿಷಯವನ್ನು ಪೂರ್ಣವಾಗಿ ನಿಯಂತ್ರಿಸುವ ಬಳುವಳಿ ನೀಡಿದೆ. ಅದೇ ಆತನ ಯೋಚನೆ ಅಥವಾ ಮನಸ್ಸೇ ಆಗಿದೆ. ಮಾನವ ನಿಮರ್ಿಸುವ ಪ್ರತಿಯೊಂದನ್ನು ಆತನು ಯೋಚನೆಯ ರೂಪದಿಂದಲೇ ಆರಂಭಿಸುತ್ತಾನೆ. ಹೀಗಾಗಿ ಇದು ಭೀತಿಯನ್ನು ಗೆಲ್ಲುವ ತತ್ವದ ಅರಿಯುವಿಕೆಗೆ ಕೀಲಿ ಕೈಯಾಗಿದೆ. ಒಬ್ಬ ಖ್ಯಾತ ಬ್ರಿಟೀಷ್ ಶರೀರ ರಚನಾಶಾಸ್ತ್ರಜ್ಞನಿಗೆ ಭೀತಿ ಗೆಲ್ಲುವ ವಿಧಾನ ಕೇಳಿದಾಗ ಆತನು ಉತ್ತರಿಸಿದ್ದು ಹೀಗೆ: ಪರರ ಹಿತಕ್ಕಾಗಿ ಏನನ್ನಾದರೂ ಮಾಡಲು ಪ್ರಯತ್ನಿಸು.
ಆ ವಿದ್ಯಾಥರ್ಿಯು ಈ ಉತ್ತರ ಕೇಳಿ ಆಶ್ಚರ್ಯಗೊಂಡನು. ಆಗ ಆತನು ಇದರ ವಿವರಣೆಗೆ ಕೋರಿಕೊಂಡಾಗ ಆ ಮೇಧಾವಿಯು ಹೀಗೆ ಉತ್ತರಿಸುತ್ತಾನೆ. ಒಂದೇ ಕಾಲದಲ್ಲಿ ಒಂದೇ ಮನಸ್ಸಿನಲ್ಲಿ ಎರಡುರೀತಿಯ ವಿರುದ್ಧವಾದ ಯೋಚನೆಗಳನ್ನು ನೀನು ಹೊಂದಿರುವುದಿಲ್ಲ. ಹೀಗಾಗಿ ಒಂದು ಬಗೆಯ ಯೋಚನೆಗಳು ಸದಾ ಇನ್ನೊಂದನ್ನು ಹೊರಹಾಕಿರುತ್ತವೆ. ಉದಾಹರಣೆಗೆ ನೀವು ಪರರ ಹಿತವನ್ನುಂಟುಮಾಡುವ ನಿಸ್ವಾರ್ಥ ಯೋಚನೆಗಳೊಂದಿಗೆ ಇದ್ದಾಗ ಅದೇವೇಳೆ ನೀವು ಭೀತಿಯ ಯೋಚನೆಗಳಿಂದ ಕೂಡಿರುವುದಿಲ್ಲ.
ಚಿಂತೆಗಳು ವಯಸ್ಸಿಗೆ ಮುಂಚೆಯೇ ರಕ್ತವನ್ನು ಒಣಗಿಸಿಬಿಡುತ್ತವೆ.
ನಾನು ಎಂದಿಗೂ ಸಮಸ್ಯೆಗಳನ್ನು ರಾತ್ರಿಯಲ್ಲಿ, ನನ್ನ ಹಾಸಿಗೆಯವರೆಗೆ ಕೊಂಡೊಯ್ಯುವುದಿಲ್ಲ (ಹ್ಯಾರಿ ಎಸ್. ಟ್ರುಮನ್)
ಭಯ ಮತ್ತು ಚಿಂತೆಗಳು ಹೆಚ್ಚು ಮಿತವಾಗಿದ್ದರೆ ಸ್ವ-ಸಂರಕ್ಷಣೆಗೆ ಸ್ವಾಭಾವಿಕ ಪ್ರವೃತ್ತಿಗಳಾಗಿರುತ್ತವೆ. ಆದರೆ ನಿರಂತರ ಕಾಡುವ ಭಯ ಮತ್ತು ದೀರ್ಘಕಾಲದ ಚಿಂತೆಗಳು ಮಾನವನ ಶರೀರಕ್ಕೆ ಹಾನಿಕಾರಕ ಶತ್ರುಗಳಾಗಿವೆ. ಅವು ಸಾಮಾನ್ಯ ಶಾರೀರಿಕ ಕ್ರಿಯೆಗಳನ್ನು ಅಸ್ತವ್ಯಸ್ತಗೊಳಿಸುತ್ತವೆ. ತನ್ನ ಮೂರ್ಖತ್ವವನ್ನು ಒಪ್ಪಿಕೊಳ್ಳದವನೇ ನಿಜ ಮೂರ್ಖನಾಗಿದ್ದಾನೆ ಮತ್ತು ಯಾವ ಮೂರ್ಖನು ತನ್ನಲ್ಲಿ ಇಷ್ಟೇ ಮೂರ್ಖತ್ವವಿದೆ ಎಂದು ತಿಳಿದಿರುವನೋ ಆತನು ಅಷ್ಟರಮಟ್ಟಿಗೆ ಜ್ಞಾನಿಯಾಗಿದ್ದಾನೆ. (ಬುದ್ಧ ಭಗವಾನರು)



3.12 ನಿಮ್ಮ ಮನಸ್ಸನ್ನು ನಿಯಂತ್ರಿಸಿ
ಮಾನವನ ಮನಸ್ಸು ಆತನ ಶರೀರದ ಮೇಲೆ ಅತಿಯಾದ ಪ್ರಭಾವ ಬೀರುತ್ತದೆ. ಮನಸ್ಸೇ ಪರಮ ಔಷಧಿಯು ಹಾಗೆಯೇ ಮಹಾ ವಿಷಕಾರಿಯೂ ಆಗಿದೆ. ಯಾವಾಗ ಮನಸ್ಸು ಪ್ರದುಷ್ಟವಾಗುವುದೋ ಅದರ ಪರಿಣಾಮದಿಂದಾಗಿ ಒಬ್ಬನ ಕೊಲೆಯು ಆಗಬಹುದು. ಬದಲಾಗಿ ಮನಸ್ಸು ಸ್ಥಿರವಾಗಿ ಹಾಗು ಜಾಗರೂಕವಾಗಿದ್ದರೆ ಅದರಿಂದ ಪರರಿಗೆ ಲಾಭವಾಗುವುದು. ಭಾವೋದ್ರೇಕ (ಕೋಪಗೊಳ್ಳುವುದು) ಗಳೊಂದಿಗೆ ಹಾರಾಡುವುದು. ಯಾರು ಬೇಕಾದರೂ ಅದನ್ನು ಮಾಡಬಹುದು. ಆದರೆ ಯೋಗ್ಯ ವ್ಯಕ್ತಿಯೊಂದಿಗೆ, ಯೋಗ್ಯ ಪ್ರಮಾಣದಲ್ಲಿ, ಯೋಗ್ಯ ಕಾಲದಲ್ಲಿ, ಯೋಗ್ಯ ವಿಷಯದೊಂದಿಗೆ ಮತ್ತು ಯೋಗ್ಯವಾದ ವಿಧಾನದಲ್ಲಿಯೇ ಕೊಪಗೊಳ್ಳುವುದು ಅಷ್ಟು ಸುಲಭವಾದ ಕಾರ್ಯವಲ್ಲ ಮತ್ತು ಈ ಬಗೆಯಲ್ಲಿ ಪ್ರತಿಯೊಬ್ಬರು ಕೋಪ ಮಾಡಲಾರರು (ಅರಿಸ್ಟಾಟಲ್).
ಯಾವಾಗ ಮನಸ್ಸು ಯೋಗ್ಯವಾದ ಯೋಚನೆಗಳಿಂದ ಏಕಾಗ್ರವಾಗುವುದೋ, ಯೋಗ್ಯವಾದ ಕ್ರಮದಿಂದ ಪೋಷಿತವಾಗುವುದೋ ಮತ್ತು ಯೋಗ್ಯ ತಿಳುವಳಿಕೆಯಿಂದ ಕೂಡಿರುವುದೋ ಆಗ ಅದರ ಪರಿಣಾಮವು ಮಹತ್ವದ್ದಾಗಿರುತ್ತದೆ. ಯಾವ ಮನಸ್ಸು ಪರಿಶುದ್ಧವಾದ ಮತ್ತು ಕುಶಲ ಯೋಚನೆಗಳಿಂದ ಕೂಡಿರುತ್ತದೋ ಆಗ ಅದು ಆರೋಗ್ಯಭರಿತ ವಿಶ್ರಾಂತ ಜೀವನಕ್ಕೆ ಕೊಂಡೊಯ್ಯುತ್ತದೆ.
ಯಾರು ಪರರನ್ನು ಗೆಲ್ಲುವನೋ ಆತನು ಬಲಿಷ್ಟ; ಆದರೆ ಯಾರು ತನ್ನನ್ನೇ ಜಯಸಿರುವನೋ ಆತನು ಮಹಾ ಪರಾಕ್ರಮಿಯಾಗಿದ್ದಾನೆ. (ಲಾವೊತ್ಸೆ)
ಬುದ್ಧ ಭಗವಾನರು ಹೀಗೆ ಹೇಳುತ್ತಾರೆ: ತನ್ನ ತೀವ್ರ ಲಾಲಸೆಯ, ದ್ವೇಷದ, ಅಸೂಯೆಯ ಯೋಚನೆಗಳು ಮಾಡುವ ಹಾನಿಯನ್ನು ಬೇರ್ಯಾವ ಶತ್ರುವು ಮಾಡಲಾರನು.
ಯಾರು ತನ್ನ ಮನಸ್ಸನ್ನು ತನ್ನ ಸನ್ನಿವೇಶಗಳಿಗೆ ತಕ್ಕಂತೆ ಹೊಂದಿಸಿಕೊಳ್ಳುವುದನ್ನು ತಿಳಿದಿಲ್ಲವೋ ಆತನು ನಿಜಕ್ಕೂ ಮಾನವನೇ ಅಲ್ಲ. ನಿಮ್ಮ ಮನಸ್ಸನ್ನು ಅಂತಮರ್ೂಖಗೊಳಿಸಿ ಮತ್ತು ನಿಮ್ಮಲ್ಲೇ ಶಾಂತಿಯನ್ನು ಅನ್ವೇಷಿಸಿ. ಯಾವಾಗ ಒಬ್ಬನ ಮನಸ್ಸು ಯೋಗ್ಯ ಮಾರ್ಗದಶರ್ಿತವಾಗಿರುವುದೋ ಮತ್ತು ನಿಯಂತ್ರಿತವಾಗಿರುವುದೋ ಆಗ ಮಾತ್ರ ವ್ಯಕ್ತಿಗೂ ಮತ್ತು ಸಮಾಜಕ್ಕೂ ಉಪಯುಕ್ತವಾಗುತ್ತದೆ. ಅನಿಯಂತ್ರಿತ ಮನಸ್ಸೇ ತನ್ನ ಮತ್ತು ಪರರ ದುಃಖಕ್ಕೆ ಹೊಣೆಗಾರಿಕೆಯಾಗಿರುತ್ತದೆ. ಜಗತ್ತಿನ ಎಲ್ಲಾ ಭಯಾನಕ ಚಟುವಟಿಕೆಗಳೆಲ್ಲ ಮನಸ್ಸಿನ ನಿಯಂತ್ರಣ ಅರಿಯದವರ ಸೃಷ್ಟಿಯೇ ಆಗಿದೆ.
ಮೃಗೀಯತೆಗೆ ಯಾವ ಧರ್ಮವಾಗಲಿ ಅಥವಾ ಸತ್ಯವಾಗಲಿ ಇಲ್ಲ
(ಇಟಾಲಿಯನ್ ಉಕ್ತಿ).
ಶಾಂತತೆಯು ದೌರ್ಬಲ್ಯವಲ್ಲ, ಸದಾ ಕಾಲವು ಶಾಂತತೆಯಿಂದ ಇರುವುದು ಮಾನವನ ಸುಸಂಸ್ಕೃತೆಯನ್ನು ಸೂಚಿಸುತ್ತದೆ. ಸನ್ನಿವೇಶಗಳು ಪ್ರಿಯವಾಗಿರುವಾಗ ಶಾಂತವಾಗಿರುವುದು ಕಷ್ಟಕರವಲ್ಲ, ಆದರೆ ಯಾವಾಗ ಸನ್ನಿವೇಶಗಳು ಅಪ್ರಿಯವಾಗಿ, ತಪ್ಪಾಗಿ ಸಂಭವಿಸುವುದೋ, ಆಗ ಶಾಂತವಾಗಿರುವುದು ನಿಜಕ್ಕೂ ಕಡುಕಷ್ಟಕರವಾಗಿದೆ.
ಇಂತಹ ಕಡುಕಷ್ಟಕರವಾಗಿರುವ, ಆದರೆ ಪರಮ ಮೌಲ್ಯವಾಗಿರುವ ಸದ್ಗುಣವನ್ನು ಪ್ರಾಪ್ತಿಮಾಡುವುದು ಶ್ಲಾಘನೀಯವಾಗಿದೆ. ಅರ್ಹವುಳ್ಳದ್ದಾಗಿದೆ, ಇಂತಹ ಶಾಂತತೆಯನ್ನು ಮತ್ತು ನಿಯಂತ್ರಣವನ್ನು ಅಭ್ಯಸಿಸುತ್ತಾ ಮಾನವನು ತನ್ನ ಚಾರಿತ್ರ್ಯದ ಶಕ್ತಿಯನ್ನು ಬಲಿಷ್ಠಗೊಳಿಸುತ್ತಾನೆ. ಕೋಪಿಯು ತನ್ನನ್ನು ಅವಲೋಕಿಸಿದಾಗ ಪುನಃ ತನ್ನ ಮೇಲೆಯೇ ಕೋಪಿಸಿಕೊಳ್ಳುತ್ತಾನೆ (ಪಬ್ಲಿಲಿಯಸ್ ಸೈರಸ್).
ಕೋಪಕ್ಕೆ ಪರಮ ಪರಿಹಾರವೆಂದರೆ ನಿಧಾನಿಸುವುದು. (ಸೆನೆಕ).



3.13 ಪ್ರಕೃತಿಯನ್ನು ಹಿಂಬಾಲಿಸುವುದು
ಆಧುನಿಕ ಮಾನವ ಪ್ರಕೃತಿಯನ್ನು ಹಿಂಬಾಲಿಸುತ್ತಿಲ್ಲ. ಏಕೆಂದರೆ ಆತನು ಭೌತಿಕತೆಯ ಲಾಭ ಮತ್ತು ಸುಖದಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡಿದ್ದಾನೆ. ಹೀಗಾಗಿ ಆತನು ಶೀಲದ ಅಭಿವೃದ್ಧಿಯನ್ನೇ ಅಲಕ್ಷಿಸಿದ್ದಾನೆ.
ಸಮಕಾಲಿನ ಮಾನವನ ಈ ಅಸ್ವಾಭಾವಿಕ ವರ್ತನೆಯಿಂದಾಗಿ ಮಾನವ ಜೀವನದ ಬಗ್ಗೆ ಮತ್ತು ಅಂತಿಮ ಉದ್ದೇಶದಲ್ಲಿ ಮಿಥ್ಯಾದೃಷ್ಟಿ ರೂಪಿತವಾಗುತ್ತದೆ. ಇದೇ ಮುಂದೆ ಎಲ್ಲಾ ಹತಾಶೆಗೆ, ನಿರಾಶೆಗೆ, ಭಯಕ್ಕೆ ಮತ್ತು ನಮ್ಮ ಇಂದಿನ ಅಸುರಕ್ಷತೆಗೆ ಕಾರಣವಾಗಿದೆ.
ಮಾನವನು ಹೀಗೆಯೇ ಕ್ರೂರಿಯು, ಕಪಟಿ ಮತ್ತು ದುಷ್ಟನೂ ಆಗಿ ಪ್ರಕೃತಿಯ ಮತ್ತು ವಿಶ್ವದ ನಿಯಮಗಳಿಗೆ ವಿರುದ್ಧವಾಗಿ ಜೀವಿಸಿದರೆ, ತನ್ನ ವರ್ತನೆಗಳಿಂದ, ಮಾತುಗಳಿಂದ ಮತ್ತು ಯೋಚನೆಗಳಿಂದಾಗಿ ಇಡೀ ಪರಿಸರವನ್ನೇ ಕಲುಷಿತಗೊಳಿಸುತ್ತಾನೆ. ಪ್ರಕೃತಿಯು ಹಾಳಾದರೆ ಮಾನವನಿಗೆ ಅಗತ್ಯವಾದುದನ್ನು ಅದು ನೀಡಲಾರದು. ಹೀಗಾಗಿ ಕಲಹಗಳು, ಘರ್ಷಣೆಗಳು, ಸಾಂಕ್ರಾಮಿಕ ರೋಗಗಳು ಮತ್ತು ಪ್ರಾಕೃತಿಕ ದುರಂತಗಳು ಆತನಿಗಾಗಿ ಕಾದಿರುತ್ತವೆ.
ಮಾನವನು ಪ್ರಾಕೃತಿಕ ನಿಯಮಗಳ ಅನುಸಾರವಾಗಿ ಜೀವಿಸಿದರೆ, ಸನ್ಮಾರ್ಗದಲ್ಲಿ ಜೀವಿಸಿದರೆ, ತನ್ನ ಕಾರ್ಯಗಳಿಂದ ಸದ್ಗುಣಗಳಿಂದ ಪರಿಸರವನ್ನು ಶುದ್ಧಿಗೊಳಿಸಿದರೆ, ಎಲ್ಲಾ ಜೀವಿಗಳ ಬಗ್ಗೆ ದಯೆಯಿಂದ ವತರ್ಿಸಿದರೆ ಆಗ ಆತನು ನಿಜಸುಖವನ್ನು ತರಬಲ್ಲ. ಯಾರು ನಿಜಕ್ಕೂ ಶಾಂತಿಯನ್ನು ಬಯಸುವನೋ ಆತನು ಇನ್ನೊಬ್ಬನ ಸ್ವಾತಂತ್ರವನ್ನು ಹಾಳುಮಾಡಲಾರ. ಪರರಿಗೆ ತೊಂದರೆ ನೀಡುವುದು ಮತ್ತು ಮೋಸ ಮಾಡುವುದು ತಪ್ಪು.
ನೀವು ಅತ್ಯಂತ ಚಟುವಟಿಕೆಯ ವ್ಯಕ್ತಿಯಾಗಿರಬಹುದು. ಆದರೆ ಪ್ರತಿದಿನ ಕೊನೇಪಕ್ಷ  ಕೆಲವು ನಿಮಿಷಗಳ ಕಾಲ ಧ್ಯಾನವನ್ನಾಗಲಿ ಅಥವಾ ಅಮೂಲ್ಯವಾದ ಪುಸ್ತಕಗಳನ್ನು ಓದಿರಿ. ಈ ಬಗೆಯ ಅಭ್ಯಾಸದಿಂದಾಗಿ ನಿಮ್ಮ ಮನಸ್ಸು ಚಿಂತೆಗಳಿಂದ ಶಮನಹೊಂದುತ್ತದೆ ಮತ್ತು ನಿಮ್ಮ ಮನಸ್ಸಿನ ವಿಕಾಸವಾಗುವುದು. ಧರ್ಮವು ನಿಮ್ಮ ಲಾಭಕ್ಕಾಗಿಯೇ ಇದೆ. ಆದ್ದರಿಂದಾಗಿ ನಿಮ್ಮ ಕರ್ತವ್ಯ ಏನೆಂದರೆ ನೀವು ಧಮ್ಮದ ಬಗ್ಗೆ ಯೋಚಿಸುವುದು. ಧಾಮರ್ಿಕ ವಾತಾವರಣ ನಿಮರ್ಿಸಲು ಕೆಲವುಕಾಲ ಮೀಸಲಿಡಿ, ಧಮ್ಮದಲ್ಲಿ ವೃದ್ಧಿಹೊಂದಿದ ವ್ಯಕ್ತಿಗಳ ಜೊತೆ ಕೆಲಕಾಲ ಕಳೆದರೆ ಅದು ಉತ್ತಮ ಫಲವನ್ನು ನೀಡುವುದು.
ಫೈಥಾಗೊರಸ್ ಹೀಗೆ ಹೇಳುತ್ತಾನೆ: ಈ ಜಗತ್ತು ಬದಲಾವಣೆಗಳ ಸರಣಿಯಾಗಿದೆ. ಕೆಲವೊಮ್ಮೆ ನಿಮ್ಮ ಇಷ್ಟದಂತೆ ಆಗಬಹುದು ಮತ್ತು ಕೆಲವೊಮ್ಮೆ ನಿಮ್ಮ ವಿರುದ್ಧದಂತೆ ಆಗಬಹುದು. ನೀವು ಬದಲಾವಣೆಯಲ್ಲಿದ್ದಾಗ ಒಳಿತನ್ನು ಮಾಡಿ, ನೀವು ಅಪ್ರಿಯ ಸನ್ನಿವೇಶದಲ್ಲಿದ್ದಾಗ ಸಹಿಸಿಕೊಳ್ಳಿ. ಒಬ್ಬರು ಅಸಾಮಾನ್ಯ ವಿಧಾನವನ್ನು ಅನ್ವಯಗೊಳಿಸಿ, ಯಾರು ಸಹಾ ಪರಿಶುದ್ಧವಾಗಿ ಆರೋಗ್ಯಕರವಾಗಿ ಧಮ್ಮ ಮಾರ್ಗದಲ್ಲಿ ಉನ್ನತಿ ಹೊಂದಲಾರರು.




3.14 ಸುಖ ಮತ್ತು ಭೌತಿಕವಾದ
ಬುದ್ಧ ಭಗವಾನರು ಬೋಧಿಸಿರುವುದು ಏನೆಂದರೆ ನಮ್ಮ ಎಲ್ಲಾ ಅಸುಖ ಅಥವಾ ದುಃಖವು ಸ್ವಾರ್ಥದ ಬಯಕೆಯ ಪರಿಣಾಮದಿಂದಾಗಿದೆ. ಸ್ವಾರ್ಥದ ಬಯಕೆಯೆಂದರೆ ಬಹು ಸುಖಕ್ಕಾಗಿ ಹಣ, ಹಣದಿಂದ ಹೆಚ್ಚಿನ ಸುಖವನ್ನು ಕೊಳ್ಳುವ ಬಯಕೆ, ಪರಜನರ ಮೇಲಿನ ಅಧಿಕಾರದ ಬಯಕೆ, ಸದಾ ಎಂದೆಂದಿಗೂ ಜೀವಿಸುವ ಬಯಕೆ, ಸಾವಿನ ನಂತರವೂ ಜೀವಿಸುವ ಬಯಕೆ! ಈ ಎಲ್ಲಾ ವಿಷಯಗಳ ಬಯಕೆಗಳು ಜನರನ್ನು ಸ್ವಾಥರ್ಿಗಳನ್ನಾಗಿ ಮಾಡುತ್ತವೆ. ಅವರು ಕೇವಲ ತಮ್ಮ ಬಗ್ಗೆಯೇ ಚಿಂತಿಸುತ್ತಾರೆ. ತಮಗಾಗಿಯೇ ವಿಷಯಗಳನ್ನು ಬಯಸುತ್ತಾರೆ ಮತ್ತು ಪರರಿಗೆ ಏನೇ ಆಗಲಿ ಅವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾವಾಗ ಅವರ ಬಯಕೆಗಳು ಪೂರೈಸುವುದಿಲ್ಲವೋ ಆಗ ಅವರು ಅವಿಶ್ರಾಂತರಾಗುತ್ತಾರೆ ಮತ್ತು ಅಸಂತೃಪ್ತರಾಗುತ್ತಾರೆ. ಈ ಅವಿಶ್ರಾಂತಿ, ಚದುರುವಿಕೆ, ಕ್ಷೊಭೆ ತಡೆಯಬೇಕಾದರೆ ಇದನ್ನು ಉಂಟುಮಾಡುತ್ತಿರುವ ಕಾರಣವನ್ನು ತೆಗೆದುಹಾಕಬೇಕಾಗಿದೆ. ಇದು ನಿಜಕ್ಕೂ ಅತಿ ಕಷ್ಟಕರ ವಿಷಯವಾಗಿದೆ. ಆದರೆ ನಾವು ಸಾಧಿಸಿದಾಗ ನಾವೇ ಅಭಿನಂದಿಸುವೆವು.
ಬಹಳಷ್ಟು ಜನರು ನಂಬುವುದು ಏನೆಂದರೆ ಹಣವಿದ್ದ ಮಾತ್ರಕ್ಕೆ ಅವರು ತಮ್ಮ ಸಮಸ್ಯೆಗಳನ್ನು ಪರಿಹರಿಸಬಲ್ಲರು ಎಂದು. ಆದರೆ ಅವರು ಹಣವೇ ಸಮಸ್ಯೆಗಳಿಗೆ ಸಹಾಯಕ ಎಂದು ಅರಿಯುವಲ್ಲಿ ವಿಫಲರಾಗಿದ್ದಾರೆ. ಹಣವೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾರದು. ಬಹಳಷ್ಟು ಜನರು ಸರಿಯಾಗಿ ಯೋಚಿಸಲಾರರು. ಬೇಟೆ ನಾಯಿಯು ಮೊಲದ ಬಲೆಯ ಹಿಂದೆ ಓಡುತ್ತಲೇ ಇರುವಂತೆ ಅವರ ಜೀವನವಿರುತ್ತದೆ.
ಯಾವಾಗ ಎಲ್ಲಾ ಬೆನ್ನಟ್ಟುವಿಕೆ ಮುಗಿಯುವುದೋ ಆಗ ಎಲ್ಲಾ ಉದ್ರೇಕಗಳು ಮರೆಯಾಗುವುವು. ಇದೇ ಭೌತಿಕವಾದದ ಅದ್ಭುತ ಲೋಕದ ಇಂದ್ರೀಯ ಸುಖಗಳ ನೈಜ್ಯ ಸ್ವರೂಪವಾಗಿದೆ. ಇಷ್ಟಪಟ್ಟ ವಿಷಯವು ಪ್ರಾಪ್ತಿಯಾದೊಡನೆಯೇ ಸುಖವು ಅಳಿದು ಹೊಸ ಆಸೆಗಳು, ಇಷ್ಟಗಳು ಉದಯಿಸುತ್ತವೆ. ಇಷ್ಟಪಟ್ಟು ಪ್ರಾಪ್ತಿಯಾದ ವಿಷಯವು ಸಹ ಬೆನ್ನಟ್ಟುವ ತರಹವೇ ತೃಪ್ತಿದಾಯಕವಾಗಿರುವುದಿಲ್ಲ.
ತಾವೇನಾದರೂ ಕಳೆದುಕೊಂಡರೆ ಈ ಮುಂದಿನ ಬುದ್ಧಿವಾದವನ್ನು ನೆನಪಿಸಿಕೊಳ್ಳಿರಿ:
ಅದು ನಿನ್ನದು ಮತ್ತು ಇದು ನನ್ನದು ಎನ್ನದಿರು, ಬದಲಾಗಿ ಹೀಗೆ ಹೇಳು, ಇದು ನಿನಗೆ ಬಂದಿದೆ ಮತ್ತು ಅದು ನನಗೆ. ಹೀಗಾಗಿ ನಾವು ಮಂಕಾಗುವ ಪ್ರಕಾಶ ಕಂಡು ಕೊರಗಲಾರೆವು. ಏಕೆಂದರೆ ಎಲ್ಲಾ ದಿವ್ಯ ವಿಷಯಗಳೂ ಸಹಾ ಅಳಿಯುವುವು.
ತೀವ್ರ ಲಾಲಸೆಗೋಸ್ಕರ ಐಶ್ವರ್ಯವನ್ನು ಸಂಗ್ರಹಿಸುವುದು ಸರಿಯಲ್ಲ. ಐಶ್ವರ್ಯವಿರುವುದು ನಿಮ್ಮ ಕ್ಷೇಮಕಷ್ಟೇ ಅಲ್ಲ, ಪರರ ಕ್ಷೇಮಕ್ಕೂ ಹೌದು. ನಿಮ್ಮ ಸುತ್ತಮುತ್ತಲಿನ ಜಗತ್ತನ್ನು ಜೀವಿಸಲು ಉತ್ತಮವಾಗಿರುವಂತೆ ಪ್ರಯತ್ನಿಸಿ. ನಿಮ್ಮ ಐಶ್ವರ್ಯವನ್ನು ಜ್ಞಾನೋಚಿತವಾಗಿ ಬಳಸಿ. ಬಡವರ, ರೋಗಿಗಳ ಮತ್ತು ವೃದ್ಧರ ಕಲ್ಯಾಣಕ್ಕಾಗಿ ವಿನಿಯೋಗಿಸಿ. ಜನರ ಬಗೆಗಿನ ನಿಮ್ಮ ಕರ್ತವ್ಯವನ್ನು ಪೂರೈಸಿ, ನಿಮ್ಮ ದೇಶ ಮತ್ತು ಧರ್ಮದ ಬಗೆಗಿನ ಕರ್ತವ್ಯವನ್ನು ಪಾಲಿಸಿ.
ಈ ಜಗತ್ತಿನಿಂದ ತೆರಳುವ ಕಾಲ ಬಂದಿತೆಂದು ಕಲ್ಪಿಸಿ. ಆಗ ನಿಮಗೆ ಆನಂದ ಮತ್ತು ಶಾಂತಿ ನೀಡುವುದು ನಿಮ್ಮ ಹಿಂದಿನ ಸುಕಾರ್ಯ ಮತ್ತು ನಿಸ್ವಾರ್ಥ ಸೇವೆಗಳ ನೆನಪೇ ಅಲ್ಲವೇ? ಜೂಜಿನಿಂದ ಐಶ್ವರ್ಯ ಹುಡುಕುವುದು ಹೇಗಿದೆ ಎಂದರೆ ಸೂರ್ಯನಿಂದ ರಕ್ಷಣೆ ಪಡೆಯಲು ಮೋಡದಿಂದ ನೆರಳಿನ ಆಶ್ರಯ ಪಡೆದಂತೆ ಇರುತ್ತದೆ. ಇದರ ಬದಲು ಉನ್ನತಿಗಾಗಿ ಪರಿಶ್ರಮವನ್ನು ಬೆಳೆಸುವುದು. ಸೂರ್ಯ ಮತ್ತು ಮಳೆಯಿಂದ ಪಾರಾಗಲು ಸುಭದ್ರವಾದ ಕಟ್ಟಡ ಕಟ್ಟಿದಂತೆ ಸುರಕ್ಷಿತವಾಗಿ ಇರುತ್ತದೆ.
ನೀವು ಮೃತರಾದಾಗ ನಿಮ್ಮ ಆಸ್ತಿಯನ್ನು ಇಲ್ಲೇ ಬಿಡಬೇಕಾಗುತ್ತದೆ ಮತ್ತು ನಿಮ್ಮ ಬಂಧು-ಮಿತ್ರರು ನಿಮ್ಮ ಸಮಾಧಿಯವರೆಗೆ ಮಾತ್ರ ಬರುವರು. ನಿಮ್ಮ ಪುಣ್ಯ ಮತ್ತು ಪಾಪಕರ್ಮಗಳು ಮಾತ್ರ ಸಮಾಧಿಯ ಆಚೆಗೂ ನಿಮ್ಮನ್ನು ಹಿಂಬಾಲಿಸುತ್ತವೆ.
ಶ್ರೀಮಂತಿಕೆ ಕನಸುಗಳನ್ನು ಪೂರೈಸುವುದು, ಕೇಳುವುದಕ್ಕೆ ಅದ್ಭುತವಾಗಿಯೇ ಇರುತ್ತದೆ. ಆದರೆ ಭಯ ಮತ್ತು ಚಿಂತೆಗಳು ಸದಾ ಆ ಅದ್ಭುತದ ಅಡಿಯಲ್ಲಿ ನೆಲೆಸಿರುತ್ತವೆ. ಶ್ರೀಮಂತಿಕೆಯ ಜೀವನ ಶೈಲಿಯು ಮಾನಸಿಕ ಕ್ಷೊಭೆಯನ್ನು ಸಹಾ ಪಾಲು ಎಂಬಂತೆ ಜೊತೆಗೆ ತರುವುದು. ಕುಮಾರ್ಗದಿಂದ ಗಳಿಸಿದ ಅಪಾರ ಐಶ್ವರ್ಯವಿದ್ದರೂ ಜೀವನದ ಸರಳ ವಿಷಯಗಳಾದ ಮಿತ್ರತ್ವ, ನಂಬಿಕೆ ಮತ್ತು ಶ್ರದ್ಧೆಯನ್ನು ಕೆಲವೊಮ್ಮೆ ಗಳಿಸುವುದು ಅಸಾಧ್ಯವಾಗುತ್ತದೆ. ಯಾವಾಗ ಜೀವನ ಶೈಲಿಯು ಅಭದ್ರತೆಯನ್ನು ಸೃಷ್ಟಿಸಲು ಪ್ರಾರಂಭಿಸುವುದೋ ಆಗ ಪುನಃ ಸರಿಹಾದಿಗೆ ತಂದುಕೊಳ್ಳಲು ಪ್ರಜ್ಞೆಯು ಅತ್ಯಾವಶ್ಯಕವಾಗಿದೆ.
ಶ್ರೀಮಂತಿಕೆಗೆ ತನ್ನದೇ ಆದ ಲೋಪದೋಷಗಳಿವೆ. ಯಾವ ಶ್ರೀಮಂತಿಕೆಯಿಂದ ಸುಖವು ಉಂಟಾಯಿತೋ, ಅದನ್ನು ಎಲ್ಲಿ ಕಳೆದುಕೊಳ್ಳುವೆವೋ ಎಂಬಂತಹ ಭೀತಿ ಮತ್ತು ಚಿಂತೆಯಿಂದಲೇ ಆ ಸುಖವನ್ನು ಕಳೆದುಕೊಳ್ಳುವೆವು. ವೈಯುಕ್ತಿಕ ಸುಖಕ್ಕಾಗಿ ಸಂಪತ್ತನ್ನು ನ್ಯಾಯಯುತವಾಗಿ, ಯೋಗ್ಯವಾಗಿ ಸಂಪಾದಿಸಬೇಕಾಗಿದೆ. ಪರರಿಗೆ ಹಾನಿ ಉಂಟುಮಾಡದೆ, ಸಂಪಾದಿಸುವವರೇ ಧನ್ಯರು ಎಂದು ಬುದ್ಧ ಭಗವಾನರು ಹೇಳಿದ್ದಾರೆ.
ಶ್ರೀಮಂತಿಕೆಯು ಶೋಕ ಮತ್ತು ದುಃಖವನ್ನು ಉಳಿಸುವುದಾದರೆ ಅಂತಹ ಸುಖವು ದೀರ್ಘಕಾಲೀನವಾಗಲಿ ಅಥವಾ ಅರ್ಥಪೂರ್ಣವಾಗಲಿ ಇರಲಾರದು. ಐಶ್ವರ್ಯದಿಂದಾಗಿ ಪರರಲ್ಲಿ ತುಚ್ಛಭಾವನೆ ಮತ್ತು ಅಸೂಯೆಯು ಉಂಟಾಗುತ್ತದೆ. ಆದರೆ ಐಶ್ವರ್ಯವನ್ನು ಸಮರ್ಪಕವಾಗಿ ಬಳಸಿದರೆ ಗೌರವವು ಗಳಿಕೆಯಾಗುತ್ತದೆ.
ಐಶ್ವರ್ಯದಿಂದಾಗಿ ನಿಮ್ಮ ಮನೆಯನ್ನು ಸುಧಾರಿಸಬಹುದು, ನಿಮ್ಮನ್ನಲ್ಲ. ಕೇವಲ ನಿಮ್ಮ ಸದ್ಗುಣವೊಂದೇ ನಿಮ್ಮನ್ನು ಸುಧಾರಿಸುವುದು. ನಿಮ್ಮ ವಸ್ತ್ರಗಳು ನಿಮ್ಮ ಶರೀರವನ್ನು ಅಲಂಕರಿಸುವುದೇ ವಿನಃ ನಿಮ್ಮನ್ನಲ್ಲ. ಕೇವಲ ಚಾರಿತ್ರ್ಯವೊಂದೇ ಇವನ್ನು ನೀಡುವುದು.
ಅಂತಿಮವಾಗಿ ಹೇಳುವುದಾದರೆ ಸುಖ ಎನ್ನುವುದು ಸುಗಂಧ ದ್ರವ್ಯದಂತೆ ಅದನ್ನು ನಿಮ್ಮ ಮೇಲೆ ಕೆಲವು ಬಿಂದುಗಳನ್ನು ಹಾಕಿಕೊಂಡ ವಿನಃ ಪರರ ಮೇಲೆ ಸಿಂಪಡಿಸಲಾರಿರಿ. ನೀವು ಬಯಸಿದಂತೆ ಜಗತ್ತು ಇರಲಾರದು. ಆದರೆ ಆಂತರ್ಯದಲ್ಲೇ ಸುಖವನ್ನು ಅನ್ವೇಷಿಸುವಂತೆ ನಿಮ್ಮ ಹೃದಯಕ್ಕೆ ನೀವು ರಾಗ-ಸಂಯೋಜನೆ ಮಾಡಬಲ್ಲಿರಿ. ನೀವು ಪರರಿಗೆ ಒಳ್ಳೆಯದನ್ನು ಮಾಡುವಾಗ ಸ್ವಲ್ಪ ತೊಂದರೆ ಎನಿಸಿದರೂ ಪರರಲ್ಲಿ ಅರಿವಿನ ಮಟ್ಟ ಏರಿಸಬಲ್ಲಿರಿ ಮತ್ತು ವೈಯಕ್ತಿಕ ಸುಖವನ್ನು ಹೆಚ್ಚಿಸಿಕೊಳ್ಳುವಿರಿ.
ನೀವು ಸುಖವನ್ನೇ ಅನ್ವೇಷಿಸಲು ಇಚ್ಛಿಸಿದರೆ ಮೊದಲು ಕೃತಜ್ಞತೆ ಮತ್ತು ಕೃತಘ್ನತೆಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ. ದಾನದ ಆಂತರಿಕ ಆನಂದದ ಬಗ್ಗೆ ಯೋಚಿಸಿ. ಕೃತಘ್ನತೆಯು ಸ್ವಾಭಾವಿಕ, ಅದು ಕಳೆಯಂತೆ. ಆದರೆ ಕೃತಜ್ಞತೆಯು ಗುಲಾಬಿಯಂತೆ, ಅದನ್ನು ಪೋಷಿಸಬೇಕಾಗುತ್ತದೆ, ನೀರೆರೆಯಬೇಕಾಗುತ್ತದೆ, ಬೆಳೆಸಬೇಕಾಗುತ್ತದೆ ಮತ್ತು ಪ್ರೀತಿಸಿ ರಕ್ಷಿಸಬೇಕಾಗುತ್ತದೆ (ಡೇಲ್ ಕಾನರ್ೆಸಿ).
ಜ್ಞಾನಿಗಳು ಲಾಭ-ನಷ್ಟದಂತಹ ಭಾವವೇಶದಲ್ಲಿ ಜೀವಿಸುವುದಿಲ್ಲ. ಈ ರೀತಿಯಾಗಿ ಅವರು ಮನಶ್ಶಾಂತಿಯಲ್ಲಿ ಇದ್ದು ಆನಂದಿಸುತ್ತಾರೆ. ಮಾನವನು ತನ್ನ ಯೌವ್ವನ, ಐಶ್ವರ್ಯ ಮತ್ತು ಜ್ಞಾನವನ್ನು ಯೋಗ್ಯ ಕಾಲದಲ್ಲಿ ಮತ್ತು ಯೋಗ್ಯ ಸ್ಥಳದಲ್ಲಿ ತನಗೆ ಮತ್ತು ಪರರಿಗೆ ಲಾಭದಾಯಕವಾಗುವ ರೀತಿ ಆಗುವ ದಾರಿಯನ್ನು ತಿಳಿದಿರಬೇಕು. ಹಾಗಲ್ಲದೆ ಆತನು ದುರ್ಬಳಕೆ ಮಾಡಿದರೆ ಅದು ಆತನ ಅವನತಿಗೆ ಕಾರಣವಾಗುತ್ತದೆ.
ಮಾನವನು ದುರ್ಬಲನಾಗಿರುವಾಗ ದೃತಿಗೆಡದೆ ಮಾನಸಿಕವಾಗಿ ಸಬಲನಾಗಬೇಕು. ಭಯವನ್ನು ಎದುರಿಸುವಾಗ ಧೈರ್ಯಶಾಲಿಯಾಗಬೇಕು. ಪ್ರಾಮಾಣಿಕವಾಗಿ ಸೋಲುವಾಗ ಹೆಮ್ಮೆಯಿಂದ ಇದ್ದು ಬಾಗಬಾರದು. ವಿಜಯಿಯಾದಾಗ ಸಭ್ಯನಾಗಿರಬೇಕು.
ಆಧುನಿಕ ಯುಗದಲ್ಲಿ ಜೀವನವು ಪ್ರತ್ಯೇಕವಾಗಿ ಕಷ್ಟಕರವಾಗಿ ತೊಂದರೆದಾಯಕವಾಗಿದೆ. ಆದರೂ ಜೀವನ ನಿದರ್ಿಷ್ಟಮಾನವು ಸಾಮಾನ್ಯವಾಗಿ ಸುಧಾರಿಸಿದೆ. ಇಂದಿಗೂ ಮಾನವನು ವರ್ತಮಾನ ದಿನದ ಜೀವನದ ಭಾರದಿಂದಾಗಿ ಅಪಾರವಾಗಿ ದುಃಖಿಸುತ್ತಿದ್ದಾನೆ. ಹಿಂದೆಂದೂ ಈ ಮಟ್ಟವನ್ನು ಮುಟ್ಟದ ಮಾರಣಾಂತಿಕ ರೋಗಗಳಾದ ಕ್ಯಾನ್ಸರ್, ಹೃದಯಸ್ಥಗಿತ, ಮಧುಮೇಹ ಮುಂತಾದವುಗಳು ಹೀಗೆ ಮಾನವನ ಭೌತಿಕ ಶರೀರವನ್ನು ಕರುಣಾಜನಕ ಸ್ಥಿತಿಗೆ ಇಳಿಸಿರಲಿಲ್ಲ, ಆದರೆ ಇಂದು ಇಳಿಸಿವೆ.
ಮಾನಸಿಕವಾಗಿ ಆತನು ಎಷ್ಟು ಒತ್ತಡಕ್ಕೆ ಒಳಗಾಗಿದ್ದಾನೆ ಎಂದರೆ ಆತನು ವಿಶ್ರಾಂತಿಯ ಕಲೆಯನ್ನು ಮರೆತುಬಿಟ್ಟಿದ್ದಾನೆ ಮತ್ತು ಆತನು ನಿದ್ದೆಗೆ ಜಾರಿಸುವ ಔಷಧಿಯ ಸಹಾಯವಿಲ್ಲದೆ ಸುಖನಿದ್ರೆಯನ್ನು ಸಹಾ ಮಾಡುತ್ತಿಲ್ಲ. ಅಂತರ್ ವ್ಯಕ್ತಿಗತ ಸಂಬಂಧಗಳು ಎಷ್ಟು ಪೆಡುಸಾಗಿ, ಸೂಕ್ಷ್ಮವಾಗಿಬಿಟ್ಟಿದೆ ಎಂದರೆ ವಿಚ್ಛೇದನಗಳ ಹೆಚ್ಚುವಿಕೆ ಎಚ್ಚರಿಕೆಯನ್ನು ನೀಡುವಷ್ಟು ಹೆಚ್ಚಿದೆ. ಹೀಗಾಗಿ ಸಾಮಾಜಿಕ ಸಮಸ್ಯೆಗಳ ಸರಣಿಯೇ ಸಡಿಲವಾಗಿ ಮಕ್ಕಳ ನಿರ್ಲಕ್ಷ, ತಾರುಣ್ಯ ಅಪರಾಧಗಳು, ಆತ್ಮಹತ್ಯೆ ಇತ್ಯಾದಿಗಳು ಹೆಚ್ಚಿವೆ. ಹೀಗಾಗಿ ಜೀವನವು ಸಮಸ್ಯಾತ್ಮಕ ಹೊರೆಯಾಗಿ ಪರಿಣಮಿಸಿದೆ ಮತ್ತು ಜೀವನವನ್ನು ಹೆಚ್ಚು ತಾಳ್ಮೆಯುತವಾಗಿ ಮತ್ತು ಆನಂದಮಯವನ್ನಾಗಿಸುವುದೇ ಅತ್ಯಗತ್ಯ ಪರಿಹಾರವಾಗಿದೆ.
ನಾವು ಜೀವಿಸುವೆವು ಮತ್ತು ಕಾರ್ಯ ಮಾಡುವೆವು ಮತ್ತು ಕನಸು ಕಾಣುವೆವು. ಪ್ರತಿಯೊಬ್ಬರಲ್ಲೂ ಪುಟ್ಟ ಯೋಜನೆಗಳಿವೆ. ಕೆಲವೊಮ್ಮೆ ನಗುವೆವು ಕೆಲವೊಮ್ಮೆ ಅಳುವೆವು ಮತ್ತು ಹೀಗೆಯೇ ದಿನಗಳು ಕಳೆಯುವುವು.
ಹಲವು ಜನರಿಗೆ ಆಸ್ತಿಯು ಲಭಿಸುವ ಅವಕಾಶದಿಂದಾಗಿ ತಕ್ಷಣ ಐಶ್ವರ್ಯವಂತರಾಗುವ ಧನ್ಯತೆಯು ಸಿಗುತ್ತದೆ. ಆದರೆ ಹಲವರಲ್ಲಿ ಅದನ್ನು ರಕ್ಷಿಸುವ ಬುದ್ಧಿವಂತಿಕೆಯು ಇರುವುದಿಲ್ಲ. ಹಾಗೆಯೇ ಒಳಿತನ್ನು ಮಾಡುವ ಅಥವಾ ಯೋಗ್ಯವಾಗಿ ಬಳಸುವ ಕಲೆಯು ಇರುವುದಿಲ್ಲ. ಹೀಗಾಗಿ ಕಷ್ಟಪಟ್ಟು ಗಳಿಸಿದ ಐಶ್ವರ್ಯವು ದುರ್ಬಳಕೆಯಲ್ಲಿ ವ್ಯರ್ಥವಾಗುತ್ತದೆ. ಬಡವನೊಬ್ಬನು ಸುಖಿಯಾಗಿರಬಲ್ಲ, ಆದರೆ ಸುಖಿ ಮಾನವ ಎಂದಿಗೂ ಬಡವನಲ್ಲ.
ಈ ಭೌತಿಕ ಸುಖದ ಕಾಲದಲ್ಲಿ ಮಾನವನು ಪುನರ್ಜನ್ಮದ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಬೌದ್ಧರ ಪ್ರಮಾಣಿಕ ಸೂತ್ರವೇನೆಂದರೆ ಮಾನವ ತಾನು ಬಿತ್ತಿದ್ದವನ್ನು ಪಡೆದೇ ತೀರುತ್ತಾನೆ. ಒಬ್ಬನು ಶೀಲವಂತನಾಗಿ ಜೀವಿಸಿ, ಸಂತೃಪ್ತಿಯ ಪೂರೈಕೆಯ ಭಾವದೊಂದಿಗೆ ಮಧ್ಯ ವಯಸ್ಸು ತಲುಪಿದರೆ ಆತನಿಗೆ ಪಶ್ಚಾತ್ತಾಪವಿರುವುದಿಲ್ಲ. ಸಮಚಿತ್ತತೆಯಿರುತ್ತದೆ. ಬೌದ್ಧರ ಪ್ರಕಾರ ಚೆನ್ನಾಗಿ ಜೀವಿಸಿದ ದೋಷರಹಿತ ಜೀವನವು ಸಾವಿನ ನಂತರವೂ ಸುಖ ನೀಡುತ್ತದೆ. ಅಂತಹ ಮಾನವ ನಿಜಕ್ಕೂ ಬೆಳಕಿನಿಂದ ಪರಮ ಬೆಳಕಿನತ್ತ ಉನ್ನತವಾಗಿ ಪ್ರಯಾಣಿಸುತ್ತಿದ್ದಾನೆ. (ಜೋತಿ ಜೋತಿ ಪರಯಣೊ ಅ--86)




3.15 ನಮ್ಮನ್ನೇ ಸರಿಪಡಿಸಿಕೊಳ್ಳುವುದು
ಬುದ್ಧ ಭಗವಾನರು ನಮಗೆ ಶಾಂತಿಯುತ ಮರಣಕ್ಕಾಗಿ ಸಿದ್ಧತೆ ಹೇಗೆ ಎಂಬುದನ್ನು ವಿವರಿಸಿದ್ದಾರೆ. ಒಬ್ಬನು ಹೇಗೆ ತನ್ನ ಜೀವನವನ್ನು ವ್ಯವಸ್ಥಿತವಾಗಿ ರೂಪಿಸಬೇಕು ಮತ್ತು ಆ ಉದ್ದೇಶಕ್ಕಾಗಿ ಯೋಗ್ಯವಾದ ದೃಷ್ಟಿಕೋನ ಹೇಗೆ ಬೆಳೆಸಬೇಕು ಎಂದು ಹೀಗೆ ವಿವರಿಸಲಾಗಿದೆ.
1. ಒಬ್ಬನು ನಾನಾ ಚಟುವಟಿಕೆಗಳಲ್ಲಿ ನಿರತನಾಗುವಂತಹ ಅವಿಶ್ರಾಂತ ಕಾರ್ಯನಿರತ ಜೀವನದಲ್ಲಿ ಆನಂದಿಸದೆ ಇರುವುದು.
2. ವ್ಯರ್ಥ ಹರಟೆಯಲ್ಲಿ ಆನಂದ ತಾಳದೆ ಇರುವುದು.
3. ಅತಿ ನಿದ್ದೆಯಲ್ಲಿ ಆನಂದಿಸದೆ ಇರುವುದು.
4. ಬಹಳಷ್ಟು ಸ್ನೇಹಿತರು-ಸಂಗಾತಿಗಳಲ್ಲಿ ಆನಂದಿಸದೆ ಇರುವುದು.
5. ಬಹಳಷ್ಟು ಸಾಮಾಜಿಕ ವ್ಯವಹಾರಗಳಲ್ಲಿ ಬೆರೆಯದಿರುವುದು.
6. ಹಗಲುಗನಸುಗಳಲ್ಲಿ ತೊಡಗದಿರುವುದು.
ರೂಢಿ ಮತ್ತು ಸಂಪ್ರದಾಯಗಳು ಮಾನವನಿಗೆ ಕಲಿಯಲು ಮತ್ತು ಹಂಚಿಕೊಳ್ಳಲು ಇರುವ ಪ್ರಮುಖ ಬಂಧನವಾಗಿದೆ. ಆದರೆ ಇಂದು ನಾವು ಎದುರಿಸುತ್ತಿರುವ ದ್ವಂದ್ವ ಏನೆಂದರೆ ಹಿಂದಿನದನ್ನು ಇಟ್ಟುಕೊಂಡು ಜೀವಿಸಬೇಕೆ ಅಥವಾ ಮುರಿಯಬೇಕೆ ಎಂಬುದೇ ಅಗಿದೆ. ಹಳೆಯ ಮತ್ತು ಇಂದಿನವರ ಮಧ್ಯದಲ್ಲಿ ಸದಾ ತಲೆಮಾರಿನ ಅಂತರವಿದೆ. ಏಕೆಂದರೆ ವೈವಿಧ್ಯ ಗ್ರಹಿಕೆಗಳು, ಬದಲಾಗುತ್ತಿರುವ ಸನ್ನಿವೇಶಗಳು, ಬದಲಾಗುತ್ತಿರುವ ಮೌಲ್ಯಗಳು, ಹಳಬರಿಗೆ ತಮ್ಮ ಹಿಂದಿನ ಸಂಸ್ಕೃತಿಯ ನಾಶವಾಗುತ್ತಿರುವ ಭಯವಿದೆ. ಆದರೆ ಈಗಿನ ಯುವಪೀಳಿಗೆಗೆ ಹಿಂದಿನ ಸಂಸ್ಕೃತಿಯೇ ಆಧುನಿಕ ಜೀವನಕ್ಕೆ ತಡೆಯಾಗಿದೆ. ಆದ್ದರಿಂದಾಗಿ ಬದಲಾವಣೆಯನ್ನು ಜಾಗರೂಕತೆಯಿಂದ ಪರಿಗಣಿಸಬೇಕಾಗಿದೆ.
ಜನಪ್ರಿಯ ಸಂಸ್ಕೃತಿಯು ಕ್ಷಣಿಕ ಪ್ರತಿಮೆಗಳನ್ನು ಸೃಷ್ಟಿಸುತ್ತಿವೆ ಮತ್ತು ಜನಪದ ವೀರರ ಜೀವನ ಶೈಲಿಯನ್ನು ಬಣ್ಣಿಸುತ್ತಿದೆ. ಆದರೆ ಸಾಮೂಹಿಕ ಮಾಧ್ಯಮವು ತಾವು ನಿಂತಿರುವ ಪ್ರತಿಯೊಂದನ್ನು ಯುವಜನರಿಗೆ ಒಪ್ಪಿಸುವಂತೆ, ಬೆಂಬಲಿಸುವಂತೆ ಸಹಾಯ ಮಾಡುತ್ತಾರೆ. ಅವುಗಳಲ್ಲಿ ರಾಜಕೀಯ ಅಥವಾ ಸಾಮಾಜಿಕ ಸಂದೇಶಗಳಾಗಿರಬಹುದು ಅಥವಾ ಹಿಪ್ಪಿ ಅಥವಾ ಯುಪ್ಪಿ ಚಳವಳಿಯು ಆಗಿರಬಹುದು. ಆದರೆ ಯುವ ಜನರಿಗೆ ಅತ್ಯಗತ್ಯವಾಗಿ ಬೇಕಾಗಿರುವುದು ಏನೆಂದರೆ ಕೆಟ್ಟದ್ದನ್ನು ಒಳ್ಳೆಯದರಿಂದ ಬೇರ್ಪಡಿಸುವ ಪ್ರಜ್ಞಾಶೀಲತೆಯೇ ಆಗಿದೆ. ಒಳ್ಳೆಯ ಉತ್ತಮ ಮೌಲ್ಯಗಳು ಹಳೆಯದಾಗಿದ್ದರೂ ಬದಲಾಗುವುದಿಲ್ಲ ಎಂದು ಕಾಲವು ಪರೀಕ್ಷಿಸಿದೆ ಮತ್ತು ಪ್ರಮಾಣವು ಆಗಿದೆ. ಮೌಲ್ಯಗಳಾದ ಮಿತವ್ಯಯ, ಪ್ರಮಾಣಿಕತೆ, ದಾನ, ಕರುಣೆ ಮತ್ತು ಉದಾತ್ತ ಜೀವನಕ್ಕೆ ಪರಿಶ್ರಮ, ಇವೆಲ್ಲಾ ಯಾವುದೇ ಕಾಲಕ್ಕೂ, ಯಾವುದೇ ಸಮುದಾಯಕ್ಕೂ ಸದಾ ಚಿರನವೀನವಾಗಿಯೇ, ಉಲ್ಲಾಸವಾಗಿಯೇ ಇರುತ್ತವೆ.
ಇನ್ನು ಏಷಿಯಾ ಖಂಡದಲ್ಲಂತೂ ವಿವಾಹ ಮತ್ತು ತಿಥಿ ಸಂಪ್ರದಾಯಗಳು ಅತಿ ಪ್ರಾಮುಖ್ಯತೆ ಪಡೆದಿವೆ. ಆದರೆ ಈಗಿರುವ ಉತ್ತಮ ಪ್ರಶ್ನೆ ಏನೆಂದರೆ ಅದಕ್ಕಾಗಿ ನಾವು ಅಪಾರ ಹಣವನ್ನು ಮತ್ತು ಕಾಲವನ್ನು ಈಗಿನ ಆಧುನಿಕ ಜಗತ್ತಿನಲ್ಲಿಯೂ ಬಳಸಬೇಕಾಗಿದೆಯೇ? ಇವು ನಿಜಕ್ಕೂ ಅಗತ್ಯವೇ? ಇದಕ್ಕೆ ಸಂಬಂಧಪಟ್ಟಂತೆ ಬುದ್ಧ ಭಗವಾನರು ಕಾಲಾಮ ಸುತ್ತದಲ್ಲಿ ಹೀಗೆ ನೀಡಿದ್ದಾರೆ.
ಯಾವಾಗ ನಿಮಗೆ ನೀವೆ ಈ ಭಾವನೆಗಳೆಲ್ಲಾ ಅನರ್ಥವಾದುದು, ನಿಷೇಧಿಸಲು ಅರ್ಹವೂ, ಜ್ಞಾನಿಗಳಿಂದ ನಿಂದನೀಯವು, ಹೀಗೆಯೇ ಮುಂದುವರೆಸಿದರೆ ಅದರಿಂದಾಗಿ ಹಾನಿ ಮತ್ತು ದುಃಖವುಂಟಾಗುವುದೋ ಆಗ ನೀವು ಅವನ್ನೆಲ್ಲಾ ಖಂಡಿತ ತ್ಯಜಿಸಿ, ಹಾಗೆಯೇ ಯಾವಾಗ ನಿಮಗೆ ನೀವೇ ಈ ವಿಷಯಗಳು ಹಿತಕರವು ನಿಂದಾತೀತವೂ, ಜ್ಞಾನಿಗಳಿಂದ ಪ್ರಶಂಸಿತವೂ, ಅದರಂತೆ ನಡೆದಾಗ ಸುಖವು ಮತ್ತು ಹಿತವು ಸಿಗುತ್ತದೆ ಎಂದರಿತಾಗ ನೀವು ಅವನ್ನೆಲ್ಲಾ ಖಂಡಿತ ಪಾಲಿಸಿ ಮತ್ತು ಅವುಗಳೊಂದಿಗೆಯೇ ಜೀವಿಸಿ.
ಪ್ರತಿಯೊಬ್ಬ ಮಾನವನು ಬ್ರಹ್ಮಾಂಡದ ಜೀವಿಯಾಗಿದ್ದಾನೆ. ಎಲ್ಲಿಯವರೆಗೆ ಮಾನವನು ಮಾನವತೆಯ ಸಮಾಜದ ಬಗ್ಗೆ ಕಳಕಳಿ ತೋರುವನೋ ಮತ್ತು ಹಿತಕ್ಕಾಗಿಯೇ ಜಗತ್ತಿನ ಪುನಃ ಕ್ರಮವಾಗುವುದೋ ಆಗ ಕಾಲವೇ ಹಿರಿಯ ಮತ್ತು ತರುಣರ ಮಧ್ಯೆ ಸೇತುವೆಯು ಸದಾ ನಿಮರ್ಾಣವಾಗುವುದು. ಅಂತಹ ಬದಲಾವಣೆಯಿಂದಾಗಿ ಭಯದ ಮತ್ತು ಚಿಂತೆಯ ಹಿಡಿತವು ತಪ್ಪುವುದು.
ಹಿರಿಯರು ತಾವು ಯುವಕರಾಗಿದ್ದಾಗ ಹೇಗೆ ತಮ್ಮ ಪೋಷಕರು ಆಧುನಿಕತೆಗೆ ವಿರೋಧಿಸಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ವಿವಾದತ್ಮಕತೆಯಲ್ಲಿರುವ ವ್ಯತ್ಯಾಸದಲ್ಲಿ ಸಹನೆಯಿಂದಿರುವುದೇ ಸದ್ಗುಣವಾಗಿದೆ. ತೆರೆದ ದೃಷ್ಟಿಕೋನವುಳ್ಳವನೇ ಸುಖಿ. ನಿಮ್ಮ ತಪ್ಪುಗಳನ್ನು ಹೇಳುವ (ತೋರಿಸುವ) ಶತ್ರುಗಳನ್ನು ಪ್ರೀತಿಸಿ (ಬೆಂಜಮಿನ್ ಫ್ರಾಂಕ್ಲಿನ್).
ಒಂದು ಹಳ್ಳಿಯಲ್ಲಿ ಒಬ್ಬ ಮುಖ್ಯಸ್ಥನಿದ್ದನು. ಆತನಿಗೆ ಮುಂಗೋಪಿ ತಂದೆಯೂ ಸಹಾ ಇದ್ದನು. ಆ ತಂದೆಯು ಕೋಪಗೊಂಡು ತನ್ನ ನಿಯಂತ್ರಣ ಕಳೆದುಕೊಂಡಾಗ, ಮನೆಯಿಂದ ಹೊರಟು ಮಗನಿಗೆ ಬಯ್ಯಲು ಆರಂಭಿಸುತ್ತಿದ್ದನು. ಆತನ ಕೋಪವು ಊರಿನವರಿಗೆ ಚಿರಪರಿಚಿತವೇ ಆಗಿದ್ದರೂ, ಪರರ ಮನಸ್ಸಿಗೆ ಪೇಚಾಟ ಮತ್ತು ತೊಂದರೆ ತರುತ್ತಿತ್ತು.
ಒಂದುದಿನ ಮುಖ್ಯಸ್ಥನು ಕಬ್ಬಿಣದ ಝಣತ್ಕಾರವನ್ನು ನೇತು ಹಾಕಿದನು. ಹಾಗು ತನ್ನ ತಂದೆ ಪ್ರತಿಸಾರಿ ಬಯ್ಯುವಾಗ ಅದನ್ನು ಬಾರಿಸುವಂತೆ ಕೆಲವು ಹುಡುಗರಿಗೆ ಆಜ್ಞಾಪಿಸಿದನು. ಹೀಗೆಯೇ ಆಯಿತು, ಆ ಭಾರಿ ಗಂಟಾನಾದವು ಅಪಾರ ಗಮನವನ್ನು ತಂದಿತು ಮತ್ತು ತಕ್ಷಣ ಆ ಹಿರಿಯನಿಗೆ ತಾನು ಮಾಡುತ್ತಿರುವುದು ಮುರ್ಖತನ ಎಂದು ಅರಿವಾಗಿ ಹಾಗೆ ಮಾಡುವುದನ್ನು ಬಿಟ್ಟನು.



3.16 ಕೆಡುಕಿನ ಬದಲು ಒಳಿತನ್ನು ಹಿಂತಿರುಗಿಸುವಿಕೆ
ನೀವು ನಿಮ್ಮ ಶತ್ರುಗಳಿಂದ ಪಾರಾಗಬೇಕೆಂದು ಬಯಸಿದರೆ ಅದಕ್ಕಿಂತ ಮೊದಲು ನಿಮ್ಮಲ್ಲಿರುವ ಮಹಾಶತ್ರುವನ್ನು ಸಂಹರಿಸಿ. ಅದೇ ನಿಮ್ಮಲ್ಲಿರುವ ಕೋಪ. ನೀವು ನಿಮ್ಮ ಶತ್ರುಗಳಿಂದ ವ್ಯಗ್ರರಾಗಿ, ವಿಚಲಿತರಾಗಿ ಕ್ಷೊಭೆಗೆ ಒಳಗಾದರೆ, ನೀವು ನಿಮಗೆ ಅರಿವಿಲ್ಲದಂತೆಯೇ ಶತ್ರುಗಳಿಗೆ ವಶರಾಗಿ ಅವರ ಇಚ್ಛೆಯನ್ನು ಪೂರೈಸುತ್ತಿದ್ದೀರಿ. ನಿಮಗೆ ಹೊಗಳುವವರಿಂದ, ನಿಮಗೆ ಸಹಾಯ ಮಾಡುವವರಿಂದ ಮತ್ತು ನಿಮಗೆ ಅತಿ ಹತ್ತಿರದವರಿಂದ ಮಾತ್ರ ನೀವು ಕಲಿಯಬಲ್ಲಿರಿ ಎಂದು ಯೋಚಿಸಬೇಡಿ.
ನೀವು ಬಹಳಷ್ಟು ವಿಷಯಗಳನ್ನು ನಿಮ್ಮ ಶತ್ರುಗಳಿಂದಲೂ ಕಲಿಯಬಲ್ಲಿರಿ. ನಿಮ್ಮ ಶತ್ರುಗಳೆಂದ ಮಾತ್ರಕ್ಕೆ ಅವರು ಪೂರ್ಣವಾಗಿ ತಪ್ಪಿಸ್ಥರು ಅಲ್ಲ. ಅವರಲ್ಲಿಯೂ ಸಹಾ ಹಲವು ಉತ್ತಮಗುಣಗಳಿರುತ್ತವೆ. ಶತ್ರುವಿಗೆ ಸಾಲ ನೀಡಿರಿ, ಆಗ ನೀವು ಆತನನ್ನು ಗಳಿಸುವಿರಿ, ಮಿತ್ರನಿಗೆ ಸಾಲ ನೀಡದಿದ್ದರೆ ಆತನನ್ನು ಕಳೆದುಕೊಳ್ಳುವಿರಿ.
ನಿಮ್ಮ ಶತ್ರುವಿಗೆ ಕೆಡುಕಿನ ಬದಲು ಕೆಡಕು ಮಾಡಿ ನೀವು ಶತ್ರುಗಳಿಂದ ಪಾರಾಗಲಾರಿರಿ. ಇದರಿಂದಾಗಿ ನೀವು ಇನ್ನಷ್ಟು ಶತ್ರುಗಳನ್ನು ಆಹ್ವಾನಿಸಿದಂತಾಗುತ್ತದೆ. ನಿಮ್ಮ ಶತ್ರುಗಳೊಂದಿಗೆ ನೀವು ವ್ಯವಹರಿಸಬೇಕಾದ ಅತ್ಯುತ್ತಮ ವಿಧಾನವೆಂದರೆ ಮೈತ್ರಿಯನ್ನು ಅವರೊಂದಿಗೆ ಪ್ರಸರಿಸುವುದು. ನೀವು ಇದು ಅಸಾಧ್ಯವೆಂದು ಯೋಚಿಸಬಹುದು ಅಥವಾ ನಿಮಗೆ ಇದು ಮೂರ್ಖತನದಂತೆ ಕಾಣಿಸಬಹುದು. ಆದರೆ ಇದು ಪ್ರತಿ ಸುಸಂಸ್ಕೃತ ಮಾನವನ ಪ್ರಮಾಣಿತ ಹಾದಿಯಾಗಿದೆ.
ಯಾರಾದರೂ ನಿಮ್ಮ ಮೇಲೆ ಕೋಪಗೊಂಡಾಗ ಮೊದಲು ಅದಕ್ಕೆ ಪ್ರಧಾನ ಕಾರಣವನ್ನು ಹುಡುಕಿ. ಅದು ನಿಮ್ಮ ತಪ್ಪಿನಿಂದ ಆಗಿದ್ದರೆ ಅದನ್ನು ಒಪ್ಪಿಕೊಳ್ಳಿ ಹಾಗು ಕ್ಷಮೆ ಯಾಚಿಸಲು ಹಿಂಜರಿಯಬೇಡಿ. ಇದು ನಿಮ್ಮಿಬ್ಬರ ಮಧ್ಯೆಯ ತಪ್ಪು ತಿಳುವಳಿಕೆಯಿಂದಲೂ ಆಗಿರಬಹುದು. ಆತನೊಂದಿಗೆ ಹೃದಯದಿಂದ ಹೃದಯಕ್ಕೆ ತಲುಪುವ ಹಾಗೆ ಜ್ಞಾನೋದಯಗೊಳಿಸಿ. ಅಥವಾ ಆತನ ಅಸೂಯೆಯಿಂದಾಗಿದ್ದರೆ ನಿಮ್ಮ ಮೈತ್ರಿಯನ್ನು ಪ್ರಸರಿಸಿ. ನಿಮ್ಮ ಮಾನಸಿಕ ಅಲೆಗಳಿಂದಾಗಿ ಆತನ ಮೇಲೆ ಪ್ರಭಾವ ಬೀರಿ.
ಇದು ಹೇಗೆ ಕಾರ್ಯ ಮಾಡುವುದು ಎಂದು ನಿಮಗೆ ಅರ್ಥವಾಗುವುದಿಲ್ಲ. ಆದರೆ ಇದನ್ನು ಅನುಭವಿಸಿರುವ ಹಲವಾರು ಜನರು ಹೇಳುವುದು ಏನೆಂದರೆ ಇದು ಅತ್ಯಂತ ಶಕ್ತಿಶಾಲಿ, ಪ್ರಜ್ಞಾವಂತ ಮತ್ತು ಮಿತ್ರರನ್ನು ಗೆಲ್ಲುವ ಸರಳ ವಿಧಾನವಾಗಿದೆ. ಇದನ್ನು ಬೌದ್ಧ ಧಮ್ಮದಲ್ಲಿ ಉನ್ನತವಾಗಿ ಶ್ಲéಾಘಿಸಿ ಸಲಹೆ ನೀಡಿದ್ದಾರೆ. ಖಂಡಿತವಾಗಿ ಇದರಿಂದಾಗಿ ನಿಮ್ಮಲ್ಲಿ ಶ್ರದ್ಧೆಯು ಹೆಚ್ಚಿ ಹಾಗೆಯೇ ತಾಳ್ಮೆಯು ಬಲಿಷ್ಠವಾಗುತ್ತದೆ. ಈ ರೀತಿ ಮಾಡುವುದರಿಂದಾಗಿ ನಿಮ್ಮ ಶತ್ರುವಿಗೆ ಆತನೇ ತಪ್ಪಾಗಿರುವುದಾಗಿ ತಿಳಿವಳಿಕೆ ಮಾಡುತ್ತೀರಿ. ಅಷ್ಟೇ ಅಲ್ಲದೆ ಮನಸ್ಸಿನಲ್ಲಿ ಶತ್ರುತ್ವ ಇಲ್ಲದಿರುವುದರಿಂದಾಗಿ ನೀವು ಹಲವಾರು ವಿಧದಲ್ಲಿ ಲಾಭ ಪಡೆಯುತ್ತೀರಿ.
ನೀವೇ ಇಷ್ಟಪಡದದ್ದನ್ನು, ಪರರಿಗೂ ನೀಡದಿರಿ.



3.17 ಪಕ್ಷಪಾತರಹಿತರಾಗಿ
ನೀವು ಕೆಟ್ಟ ಮನೋಸ್ಥಿತಿಯಲ್ಲಿರುವಾಗ ಅಥವಾ ಪ್ರಚೋದನೆಗೆ ವಶವಾಗಿರುವಾಗ ನೀವು ಯಾವುದೇ ಆತುರದ ನಿಧರ್ಾರ ತೆಗೆದುಕೊಳ್ಳಬಾರದು. ಅಂತಹ ಸ್ಥಿತಿಯಲ್ಲಿ ಕೈಗೊಳ್ಳುವ ತೀಮರ್ಾನ ಅಥವಾ ತೀಪರ್ು ಮುಂದೆ ಪಶ್ಚಾತ್ತಾಪಕ್ಕೆ ಕೊಂಡೊಯ್ಯುತ್ತದೆ. ಮೊದಲು ನಿಮ್ಮ ಮನಸ್ಸನ್ನು ಶಾಂತಗೊಳಿಸಿ ಮತ್ತು ಚಿಂತಿಸಿ. ಆಗ ಮಾತ್ರ ನಿಮ್ಮ ನಿರ್ಣಯವು ಪಕ್ಷಪಾತರಹಿತವಾಗಿರುತ್ತದೆ. ತಾಳ್ಮೆಯನ್ನು ವೃದ್ಧಿಸಿ, ಏಕೆಂದರೆ ನೀವು ತಾಳ್ಮೆಯಲ್ಲಿರುವಾಗ ಮಾತ್ರ ಪರರ ತೊಂದರೆಗಳ ಬಗ್ಗೆ ಸಹಾನುಭೂತಿ ತೋರಿಸಬ್ಲಲಿರಿ. ಅನಗತ್ಯ ಟೀಕೆಗಳನ್ನು ತಡೆಯಿರಿ. ಅಥರ್ೈಸಿಕೊಳ್ಳಲು ಪ್ರಯತ್ನಿಸಿ, ಅಪ್ಪಟ ಮಾನವನು ಸಹಾ ತಪ್ಪು ಮಾಡದವನೇನೂ ಆಗಿರುವುದಿಲ್ಲ. ನಿಮ್ಮ ನೆರೆಹೊರೆಯವರಲ್ಲಿ ಕಾಣುವ ದೌರ್ಬಲ್ಯವು ನಿಮ್ಮಲ್ಲೂ ಕಾಣಬಹುದು. ಗಾಜಿನ ಮನೆಯಲ್ಲಿ ವಾಸವಾಗಿರುವವರು ಪರರ ಮನೆಗಳ ಮೇಲೆ ಕಲ್ಲೆಸೆಯಬಾರದು ಎಂಬ ಹೇಳಿಕೆಯೇ ಇದೆ. ವಿನಮ್ರತೆಯು ಜ್ಞಾನಿಯ ಅಳತೆಗೋಲಾಗಿದೆ. ಅದರಿಂದಾಗಿ ನಾವು ಏನಿದೆ ಮತ್ತು ಇನ್ನೂ ಏನಿರಬೇಕು ಎಂಬುದರ ವ್ಯತ್ಯಾಸವನ್ನು ಅರಿಯಬಹುದು.
ಬುದ್ಧ ಭಗವಾನರು ತಾವೇ ಸ್ವ-ವಿನಮ್ರ ಚರ್ಯೆಗಾಗಿ ತಮ್ಮ ಹಿಂದಿನ ರಾಜಕುಮಾರರಾಗಿದ್ದ ಎಲ್ಲಾ ಅಹಂವನ್ನು ಪರಿತ್ಯಜಿಸಿದರು. ಹಾಗು ಹೀಗೆ ಪೂರ್ಣ ವಿನಯದಿಂದ ಅವರು ಆಡಳಿತವನ್ನು ಆರಂಭಿಸಿದರು. ಅವರ ಜೀವನದಲ್ಲಿ ಸಮ್ಯಕ್ ಸಂಬೋಧಿಯನ್ನು ಪ್ರಾಪ್ತಿಮಾಡಿದರು. ಆದರೂ ತಮ್ಮ ಸಹಜವಾದ ವಿನಮ್ರತೆಯನ್ನು ಎಂದೂ ಕಳೆದುಕೊಳ್ಳಲಿಲ್ಲ. ಅದೇ ಅವರ ಸಹಜತೆ ಆಗಿತ್ತು. ಎಂದಿಗೂ ಸಹಾ ತಾನೇ ಶ್ರೇಷ್ಠ ಎಂಬ ಯೋಚನೆಯ ಅಹಂ ಒಮ್ಮೆಯು ಅವರಲ್ಲಿ ಸುಳಿಯಲಿಲ್ಲ. ಅವರ ಉಪಮೆಗಳೆಲ್ಲ ಶ್ರೇಷ್ಠತನದ ಪ್ರದರ್ಶನವಾಗಿರಲಿಲ್ಲ. ಅವರು ಸರ್ವಕಾಲಿಕ ಶ್ರೇಷ್ಠ ವಿನಮ್ರರಾಗಿದ್ದರು. ಎಂದಿಗೂ ತಮ್ಮ ತಿಳಿಹಾಸ್ಯ ಪ್ರಜ್ಞೆಯನ್ನು ಕಳೆದುಕೊಂಡಿರಲಿಲ್ಲ.
ಮಾನವನ ಅಸ್ತಿತ್ವ ವ್ಯರ್ಥವಾಗುವುದು ಹೇಗೆಂದರೆ ಭವಿಷ್ಯದ ಬಗ್ಗೆ ಚಿಂತೆ ತಾಳುವುದರಿಂದ, ಹಿಂದಿನ ಬಗ್ಗೆ ಪಶ್ಚಾತ್ತಾಪ, ಶೋಕದಿಂದ ಅಥವಾ ಸೋಮಾರಿತನದಿಂದ ಅಥವಾ ಅಲಕ್ಷದಿಂದಾಗಿಯೇ ಆಗುವುದು. ಹೀಗಿರುವುದರಿಂದಾಗಿ ಭೂಮಿಯ ಜೀವಿಗಳಿಗೆಲ್ಲ ಶ್ರೇಷ್ಠನೆಂಬ ಸ್ಥಾನಕ್ಕೆ ಆತನು ಅನರ್ಹನಾಗುತ್ತಾನೆ. ಹೀಗೆ ಆತನು ಕೆಟ್ಟ ಮನೋಭಾವಗಳನ್ನು ಸೃಷ್ಟಿಸುತ್ತ ಈ ಭೂಮಿಯಲ್ಲಿ ಇರಲಿಕ್ಕೆ ಅನರ್ಹನಾಗಿದ್ದಾನೆ. ಇದನ್ನು ಮನದಲ್ಲಿಟ್ಟುಕೊಂಡು ಜೀವನವಿಡೀ ಒಳ್ಳೆಯದನ್ನೇ ಮಾಡಬೇಕಾಗಿದೆ. ನಿಮ್ಮ ಕಾಲವನ್ನು ವ್ಯರ್ಥಮಾಡುತ್ತ ನೀವು ಕೇವಲ ನಿಮ್ಮನ್ನು ಮಾತ್ರವಲ್ಲ, ಪರರಿಗೂ ನೋವುಂಟು ಮಾಡುತ್ತಿರುವಿರಿ. ಸಮಯವು ನಿಮಗೆ ಎಷ್ಟು ಮಹತ್ವದ್ದೋ ಹಾಗೆಯೇ ಪರರಿಗೂ ಸಹಾ ಮಹತ್ವದ್ದಾಗಿದೆ.
ಎಲ್ಲಿಯವರೆಗೆ ಒಂದು ಜೀವಿಗೆ ನೀವು ನಿಮ್ಮ ನುಡಿಗಳಿಂದ ಸಂತ್ವಾನಗೊಳಿಸುವಿರೊ, ಜೀವ ನೀಡುವಿರೊ, ನಿಮ್ಮ ಇರುವಿಕೆಯಿಂದ ಉತ್ಸಾಹ, ಉಲ್ಲಾಸ ತುಂಬುವಿರೋ, ನಿಮ್ಮ ಪ್ರಾಪಂಚಿಕ ಸ್ವತ್ತುಗಳಿಂದ ಸಹಾಯ ಮಾಡುವಿರೋ, ಅದು ಚಿಕ್ಕ ದಾನವೇ ಆಗಿರಲಿ, ಆಗ ನೀವು ಈ ಮಾನವ ಜನಾಂಗಕ್ಕೆ ಅತ್ಯಮೂಲ್ಯ ಐಶ್ವರ್ಯವಾಗುವಿರಿ.
ನೀವು ಎಂದಿಗೂ ನಿರಾಶರಾಗದಿರಿ ಅಥವಾ ಕುಗ್ಗಿಹೋಗದಿರಿ. ಕೆಲವು ಸಮಯ ನೀವು ಪ್ರೀತಿಸುವಂತಹವರು ನಿಮ್ಮಲ್ಲಿ ಆಸಕ್ತಿ ತೊರೆದಿರಬಹುದು. ಆಗ ನೀವು ಬಾರ ಹೃದಯಿಯಾಗಬಹುದು. ಆದರೆ ಅದೇ ನಿಮ್ಮ ಕುಗ್ಗುವಿಕೆಗೆ ಕಾರಣವಾಗಬಾರದು. ನೀವು ನಿಮ್ಮ ಸಹ ಮಾನವನ ಬಗ್ಗೆ ಪೂರ್ಣವಾಗಿ ಕರುಣಾಭರಿತರಾಗಿರುವಿರಾ? ನಿಮ್ಮ ಸುಖಕ್ಕಾಗಿ ನೀವು ಎಂದಿಗೂ ಪರರಲ್ಲಿ ಅವಲಂಬಿತರಾಗಬಾರದು. ಇದು ನೀವು ಚಿಂತಿಸಲೇಬೇಕಾದ ವಿಷಯವಾಗಿದೆ.



3.18 ವೈವಾಹಿಕ ಜೀವನ
ನಿಜವಾದ ವಿವಾಹದಲ್ಲಿ ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯು ಕೇವಲ ತಮ್ಮ ಸಂಗಾತಿ ಬಗ್ಗೆಯೇ ಹೆಚ್ಚಿನದಾಗಿ ಯೋಚಿಸುವರೇ ವಿನಃ ತಮ್ಮ ಬಗ್ಗೆ ಅಲ್ಲ. ಸುರಕ್ಷತೆಯ ಭಾವವು ಮತ್ತು ಸಂತೃಪ್ತಿಯೂ ಪರಸ್ಪರ ಶ್ರಮದಿಂದಲೇ ಆಗುವುದು. ಅಸಹನೆ ಮತ್ತು ತಪ್ಪು ತಿಳುವಳಿಕೆಯೇ ಹಲವಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ.
ಒಬ್ಬ ಸ್ತ್ರೀಗೆ ಪುರಾತನ ವಸ್ತುಶಾಸ್ತ್ರಜ್ಞನೇ ಅತ್ಯುತ್ತಮ ಪತಿಯಾಗಿರುತ್ತಾನೆ. ಏಕೆಂದರೆ ಆಕೆ ವೃದ್ಧಳಾದಷ್ಟು (ಹಳೆಯದಾದಷ್ಟು) ಆತನು ಆಕೆಯ ಬಗ್ಗೆ ಹೆಚ್ಚಿನ ಆಸಕ್ತಿ ತಾಳುತ್ತಾನೆ. (ಅಗಾಧ ಕ್ರಿಷ್ಟೀ).
ಪತ್ನಿಯು ಪತಿಯ ದಾಸಿಯಲ್ಲ (ಸೇವಕಿಯಲ್ಲ), ಆಕೆಯ ಸಮಾನವಾದ ಗೌರವಕ್ಕೆ ಅರ್ಹಳಾಗಿದ್ದಾಳೆ. ಪತಿಯು ಕುಟುಂಬದ ಪೋಷಣೆಗೆ ದುಡಿಯುವವನಾದರೋ, ಮನೆ ಕೆಲಸದಲ್ಲಿ ಸ್ವಲ್ಪ ಸಹಾಯ ಮಾಡಿದರೆ ಆತನ ಪುರುಷತ್ವಕ್ಕೆ ಗೌರವವೇನು ಕಡಿಮೆಯಾಗುವುದಿಲ್ಲ. ಅದೇವೇಳೆಯಲ್ಲಿ ಮೂದಲಿಕೆ ಮತ್ತು ಸಿಡುಕಿನ ಪತ್ನಿಯು ಸಹಾ ಕುಟುಂಬದ ನ್ಯೂನತೆಗಳನ್ನು ಸರಿಪಡಿಸಲಾರಳು. ಹಾಗೆಯೇ ಪತಿಯ ಬಗ್ಗೆ ಸಂಶಯವು ಆಕೆಯ ವಿವಾಹದ ಜೀವನದ ಸುಖಕ್ಕೆ ಸಹಾಯ ಮಾಡಲಾರದು.
ನಿಮ್ಮ ಪತ್ನಿಯು ನಿಮ್ಮ ಮಾತುಗಳನ್ನು ಕೇಳಬೇಕಾದರೆ ಇನ್ನೊಬ್ಬ ಸ್ತ್ರೀಯೊಡನೆ ಮಾತನಾಡಿ ಆಕೆಯ ಪತಿಯಲ್ಲಿ ಲೋಪಗಳಿದ್ದರೆ ಕೇವಲ ಸಹನೆ ಮತ್ತು ದಯೆಯುತ ಪ್ರಿಯ ನುಡಿಗಳಿಂದ ಆತನಲ್ಲಿ ಬೆಳಕನ್ನು ತರಿಸಬಹುದು. ಯೋಗ್ಯ ತಿಳುವಳಿಕೆ ಮತ್ತು ಶೀಲ ಇವೇ ಪ್ರಜ್ಞಾದ ಪ್ರಯೋಗಾತ್ಮಕ ಭಾಗವಾಗಿದೆ.
ಸ್ತ್ರೀಯರು ಕಿವಿಗಳ ಮೂಲಕ ಪ್ರೇಮಕ್ಕೆ ಬೀಳುತ್ತಾರೆ ಮತ್ತು ಪುರುಷರು ಕಣ್ಣುಗಳ ಮೂಲಕ ಪ್ರೇಮಕ್ಕೆ ಜಾರುತ್ತಾರೆ (ವೂಡ್ರೊ ವ್ಯಾಟ್)
ವಿವಾಹವು ಶುಭವಾದುದೇ ಆದರೆ ಬಹಳಷ್ಟು ಜನರು ತಮ್ಮ ವೈವಾಹಿಕ ಜೀವನವನ್ನು ಶಾಪವನ್ನಾಗಿ ಮಾಡಿಕೊಂಡಿದ್ದಾರೆ. ಬಡತನವೇ ದುಃಖ ವೈವಾಹಿಕ ಜೀವನಕ್ಕೆ ಮುಖ್ಯ ಕಾರಣವಲ್ಲ. ಪತಿ ಮತ್ತು ಪತ್ನಿ ಇಬ್ಬರೂ ಸಹಾ ದಿನನಿತ್ಯದ ಪ್ರತಿ ಸುಖ-ದುಃಖಗಳನ್ನು ಹಂಚಿಕೊಂಡು ಬದುಕುವುದನ್ನು ಕಲಿಯಬೇಕು.
ಸ್ತ್ರೀಯರು ತಮ್ಮ ದೌರ್ಬಲ್ಯಗಳತ್ತ ಕೈಚಾಚುವವರೆಗೂ ಅವರು ಎಂದಿಗೂ ಬಲಿಷ್ಠರಾಗುವುದಿಲ್ಲ (ಮೇಡಮ್ ಡು ಡೆಫ್ಫನ್ಡ್).
ಪರಸ್ಪರ ತಿಳುವಳಿಕೆಯೇ ಸುಖ ಸಂಸಾರದ ರಹಸ್ಯವಾಗಿದೆ. ವ್ಯಕ್ತಿಯ ಆಂತರ್ಯದ ಲಕ್ಷಣವನ್ನು ಕೇವಲ ದೋಷಾರೋಪಣೆ ಅಥವಾ ನಿಂದನೆಯಿಂದ ಬದಲಾಗಿಸುವುದಿಲ್ಲ.
ಬಡ ವ್ಯಕ್ತಿಯು ಶ್ರೀಮಂತ ಸ್ತ್ರೀಯೊಡನೆ ವಿವಾಹವಾದರೆ ದೊರೆಗಾತರ್ಿಯನ್ನು ಪಡೆಯುತ್ತಾನೆ ಹೊರತು ಪತ್ನಿಯನ್ನಲ್ಲ. ಯಾವ ಪತಿ ಮತ್ತು ಪತ್ನಿ ವಿಭಿನ್ನ ಲಕ್ಷಣಗಳಿಂದ ಕೂಡಿರುವವರೋ ಅವರು ಪರಸ್ಪರ ತಿಳುವಳಿಕೆಯಿಂದ ಮತ್ತು ಪ್ರಜ್ಞಾಯುತವಾಗಿ ವತರ್ಿಸುವುದರಿಂದ ಚೆನ್ನಾಗಿ ಜೊತೆಯಲ್ಲಿಯೇ ಜೀವಿಸಬಹುದು.
ವಿವಾಹವು ಸ್ವರ್ಗದಲ್ಲಿಯಾಗಲಿ ಅಥವಾ ನರಕದಲ್ಲಿಯಾಗಲಿ ಇಲ್ಲ, ಅದು ಕೇವಲ ಪಾವನ (ಪ್ರಾಯಶ್ಚಿತ್ವದ) ಸ್ಥಳವಾಗಿದೆ (ಅಬ್ರಾಹಂ ಲಿಂಕನ್).



3.19 ಕಾಲವೇ ನಮ್ಮ ಶೋಕ/ಗಾಯಗಳನ್ನು ಗುಣಪಡಿಸುತ್ತದೆ
ತೊಂದರೆಗಳು ಮುಂದೆ ಸಾಗಿಬಿಡುತ್ತವೆ. ಯಾವುದೆಲ್ಲವೂ ನಮಗೆ ಕಣ್ಣೀರಿನ ಧಾರೆ ಹರಿಯುವಂತೆ ಮಾಡಿತೋ ಅವೆಲ್ಲ ಮರೆತುಬಿಡುತ್ತೇವೆ. ನೀವು ಅತ್ತಿದ್ದು ನೆನಪಿರುತ್ತದೆ, ಆದರೆ ಏಕೆ ಎನ್ನುವ ಕಾರಣಗಳೇ ನೆನಪಿರುವುದಿಲ್ಲ. ನಾವು ಬೆಳೆದಂತೆ ಮತ್ತು ಜೀವನದೊಳಕ್ಕೆ ಪ್ರವೇಶಿಸಿದಂತೆಲ್ಲ ನಾವು ಆಶ್ಚರ್ಯಪಡುತ್ತೇವೆ. ಕಳೆದ ದಿನದ ಘಟನೆಯಿಂದಾಗಿ ಇಡೀ ರಾತ್ರಿಯೆಲ್ಲಾ ನಿದ್ರೆ ಹೋಗಿರುವುದಿಲ್ಲ. ಅಥವಾ ಯಾರೊಬ್ಬರ ಬಗ್ಗೆ ಕೋಪಕ್ಕೆ ಆರೈಕೆ ಮಾಡುತ್ತೇವೆ. ಅಂತಹುದೇ ಯೋಚನೆಗಳೇ ಮನದಲ್ಲಿ ಓಡುತ್ತಿರುತ್ತದೆ ಹೇಗೆ ನಾವು ಮುಂಚಿನಂತಾಗುವುದು?
ಕೆಲವೊಮ್ಮೆ ನಾವು ಯಾವುದರ ಬಗ್ಗೆಯೋ ಕೋಪದಿಂದ ನಿಯಂತ್ರಣ ಕಳೆದುಕೊಂಡಿರುತ್ತೇವೆ. ನಂತರ ಇಂಥದ್ದರ ಬಗ್ಗೆ ನಾನು ಕೋಪಗೊಂಡೆನೆ ಎಂದು ಚಕಿತರಾಗುತ್ತೇವೆ. ಇದರಿಂದಾಗಿ ನಮ್ಮ ಎಷ್ಟೋ ಕಾಲ ಮತ್ತು ಶಕ್ತಿಯು ಹಾಳಾಯಿತು ಎಂದು ಆಶ್ಚರ್ಯಪಡುತ್ತೇವೆ. ನಾವು ಇಚ್ಛಾಪೂರ್ವಕವಾಗಿ ದುಃಸ್ಥಿತಿಯುಂಟುಮಾಡಿಕೊಳ್ಳುತ್ತೇವೆ. ನಂತರ ನಾವು ಅದನ್ನು ನಿಲ್ಲಿಸಿ, ಮತ್ತೇನನ್ನೋ ಕುಶಲ ಯೋಚಿಸಲು ಆರಂಭಿಸುತ್ತೇವೆ. ಎಂತಹುದೇ ಸಮಸ್ಯೆಗಳಿರಲಿ ಮತ್ತು ಅವು ನಮಗೆ ಎಷ್ಟೇ ದುಃಖಿತರನ್ನಾಗಿ ಮಾಡಲಿ. ಆದರೆ ಕಾಲವು ಆ ಎಲ್ಲಾ ಶೋಕ-ಗಾಯಗಳನ್ನೆಲ್ಲಾ ಗುಣಪಡಿಸುತ್ತದೆ. ಆದರೆ ನಾವು ಮತ್ತೆ ಈ ನೋವು-ನರಳುವಿಕೆಗಳನ್ನು ತಡೆಯಲು ಖಂಡಿತ ಬಹಳಷ್ಟು ಪ್ರಯತ್ನಿಸಬಹುದು ನಾವು ಏಕೆ ಸಮಸ್ಯೆಗಳನ್ನು ನಮ್ಮ ಶಕ್ತಿ ಖಾಲಿ ಮಾಡಲು ಮತ್ತು ದುಃಖಿತರನ್ನಾಗಿ ಮಾಡಲು ಅವಕಾಶ ನೀಡಬೇಕು? ಹೀಗಾಗಿ ನಮಗೆ ನಾವೇ ದುಃಖಿತರನ್ನಾಗಿ ಮಾಡಿಕೊಳ್ಳುತ್ತಿದ್ದೇವೆ ಹೊರತು, ಪರರಲ್ಲ.
ನೀವು ಕೆಲಸ ಮಾಡುವಲ್ಲಿ ಕೆಲವು ಸಮಸ್ಯೆಗಳನ್ನು ನೀವು ಎದುರಿಸುತ್ತಿರಬಹುದು. ಆದರೆ ಆ ಕೆಟ್ಟ ಹವಾಮಾನವನ್ನು, ಜಾಡ್ಯವನ್ನು, ನಿಮ್ಮ ಮನೆಗೆ ಹರಡದಿರಿ. ಈ ಸಮಸ್ಯೆಗಳಿಗೆಲ್ಲ ಅಂತ್ಯವಿದೆ ಎಂದು ಸ್ಪಷ್ಟವಾಗಿ ಅಥರ್ೈಸಿಕೊಳ್ಳಿರಿ. ಇದಕ್ಕಿರುವ ಪರಿಹಾರವೆಂದರೆ ಎಲ್ಲಾರೀತಿಯ ಅಹಂ ಮತ್ತು ಅಜ್ಞಾನವನ್ನು ಅಳಿಸಿ, ಸ್ವಾರ್ಥದ ಆಸೆಗಳಿಂದ ಮುಕ್ತಿ ಹೊಂದುವುದೇ ಆಗಿದೆ.
ಯಾವಾಗಲೇ ಆಗಲಿ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ವಿಫಲರಾದರೆ, ಆಗ ನಾವು ನಮ್ಮ ಹತಾಶೆಗೆ ಬಲಿಪಶುವಾಗಲು ಸಿದ್ಧರಾಗಿಬಿಡುತ್ತೇವೆ. ನಾವು ನಮ್ಮ ಲೋಪ ನ್ಯೂನತೆಗಳನ್ನು ಒಪ್ಪಲು ಇನ್ನೂ ಸಿದ್ಧರಾಗಿಲ್ಲ. ಪರರ ಮೇಲೆ ನಿಂದೆ ಹಾಕುವುದು ಸುಲಭ. ವಾಸ್ತವವಾಗಿ ಹಾಗೆ ಮಾಡುವುದರಿಂದ ನಾವು ಸ್ವಲ್ಪ ಆನಂದಿಸುತ್ತೇವೆ. ಇದು ಅನುಸರಿಸಲು ಅಯೋಗ್ಯವಾದ ಪೂರ್ಣ ಮಿಥ್ಯಾದೃಷ್ಟಿಯಾಗಿದೆ. ಪರರ ಮೇಲೆ ಕೋಪ ತೋರಿಸಬಾರದು. ನಮ್ಮ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಪ್ರಯತ್ನವನ್ನು ಕಟ್ಟಕಡೆಯವರೆಗೂ ನೋವುಗಳನ್ನು ಸಹಿಸುತ್ತಾ, ಶಾಂತವಾಗಿ ದೃಢತೆಯಿಂದ ಕಾರ್ಯವಹಿಸಬೇಕು. ನಾವು ಎದುರಿಸಲಿರುವ ಎಂತಹ ಸಂಕಷ್ಟಗಳನ್ನು ಎದುರಿಸಲು ನಾವು ಸಿದ್ಧತೆ ಮಾಡಲೇಬೇಕಾಗಿದೆ.
ಸುಖ-ಉನ್ನತಮಯ ಜೀವನದ ರಹಸ್ಯವೇನೆಂದರೆ ಅಗತ್ಯವಿರುವುದೆಲ್ಲಾ ಈಗಲೆ ಮಾಡಬೇಕು. ಭೂತಕಾಲದ ಬಗ್ಗೆ ಅಥವಾ ಭವಿಷ್ಯದ ಬಗ್ಗೆ ಚಿಂತಿಸಬಾರದು. ಏಕೆಂದರೆ ಭೂತಕಾಲಕ್ಕೆ ಹೋಗಿ ನಾವು ಪುನಃ ಅವನ್ನೆಲ್ಲಾ ಪುನರ್ರಚಿಸಲಾರೆವು. ಹಾಗೆಯೇ ಭವಿಷ್ಯದಲ್ಲಿ ಬರುವುದೆಲ್ಲಾ ನಿರ್ಲಕ್ಷಿಸಲಾಗುವುದಿಲ್ಲ. ಆದರೆ ಈಗಿರುವ ಈ ಕ್ಷಣ ಮಾತ್ರ ನಮ್ಮ ಇಚ್ಛಿತ, ನಿಯಂತ್ರಣದಲ್ಲಿದೆ. ಅದೇ ವರ್ತಮಾನವಾಗಿದೆ.
ಬಹಳಷ್ಟು ಜನರು ಕೇವಲ ಭವಿಷ್ಯದ ಬಗ್ಗೆ ಚಿಂತಿತರಾಗುತ್ತಾರೆ. ಆದರೆ ಅವರು ಸನ್ನಿವೇಶಗಳೊಂದಿಗೆ ಹೊಂದಿಕೊಳ್ಳುವುದನ್ನು ಕಲಿಯಬೇಕಾಗಿದೆ. ಯಾವುದೆಲ್ಲಾ ಕೋಟೆಗಳನ್ನು ಅವರು ಗಾಳಿಯಲ್ಲಿ ಕಟ್ಟಬಹುದು, ಯಾವುದೇ ಸ್ವಪ್ನಗಳನ್ನು ಅವರು ಹೊಂದಿರಬಹುದು. ಆದರೆ ಅವರು ಸಹಾ ನೆನಪಿಡಬೇಕಾದ ಸಂಗತಿ ಏನೆಂದರೆ ಅವರು ಜೀವಿಸುತ್ತಿರುವ ಈ ಜಗತ್ತು ನಿರಂತರ ಬದಲಾವಣೆಯಾಗುತ್ತಲೇ ಇರುತ್ತದೆ ಮತ್ತು ಸಂಘರ್ಷಮಯದಿಂದಲೇ ಇರುತ್ತದೆ ಎಂದು.
ನಾವು ಅವಲಂಬಿಸಬೇಕಾದ ಯಾವ ನಕ್ಷತ್ರಗಳೂ ಇಲ್ಲ. ಯಾವ ಮಾರ್ಗದಶರ್ಿ ಬೆಳಕೂ ಇಲ್ಲ. ಆದರೆ ನಾವು ತಿಳಿದಿರಬೇಕಾದ್ದು ಏನೆಂದರೆ ಒಳ್ಳೆಯವರಾಗುವುದು, ನ್ಯಾಯಪರರಾಗಿರುವುದು ಮತ್ತು ಯೋಗ್ಯರಾಗುವುದು.


3.20 ಆರೋಗ್ಯಕರ ವಾತಾವರಣ
ವ್ಯಕ್ತಿಯೊಬ್ಬ ತಪ್ಪಾಗಿರುವಾಗ ಆತನನ್ನು ಸರಿಪಡಿಸಲು ಹಲವಾರು ವಿಧಾನಗಳಿರುತ್ತವೆ. ಕೆಲವರು ಟೀಕೆ ಅಥವಾ ಸಾರ್ವಜನಿಕವಾಗಿ ನಿಂದಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದಾಗಿ ಅವರನ್ನು ಅಪಮಾನಗೊಳಿಸುವಿರೇ ಹೊರತು ಅವರನ್ನು ತಿದ್ದಲಾರಿರಿ. ಟೀಕೆಗಳು ಹೆಚ್ಚಿನ ಶತ್ರುಗಳನ್ನು ಸೃಷ್ಟಿಸುತ್ತದೆ. ಆದರೆ ಅದಕ್ಕೆ ಬದಲಾಗಿ ವ್ಯಕ್ತಿಯ ಭವಿಷ್ಯದ ಹಿತವನ್ನು, ಒಳಿತನ್ನು ಉಂಟುಮಾಡುವ ದಯಾನುಡಿಗಳನ್ನು ವ್ಯಕ್ತಪಡಿಸಿದಾಗ, ಆತನು ಎಂದಾದರೂ ನಿಮಗೆ ಕೃತಜ್ಞತೆ ಸಲ್ಲಿಸುತ್ತಾನೆ.
ವಿಷಯಗಳ ಬಗ್ಗೆ ನಿಮ್ಮ ದೃಷ್ಟಿಕೋನಗಳನ್ನು ನುಡಿಯುವಾಗ ಎಂದಿಗೂ ಕಟು ಅಥವಾ ಅಪ್ರಿಯ ಪದಗಳನ್ನು ನುಡಿಯದಿರಿ. ವ್ಯವಹಾರ ಚಾತುರ್ಯತೆ, ಸಭ್ಯತೆ ಮತ್ತು ವಿನಮ್ರತೆಯು ಎಂದಿಗೂ ಯಾರನ್ನೂ ನೋವುಂಟು ಮಾಡಲಾರದು. ವಾಸ್ತವವಾಗಿ ಅದೆಷ್ಟೋ ಸನ್ನಿವೇಶಗಳನ್ನು ಪರಿಹರಿಸುವುದಕ್ಕಾಗಿ ಇವು ಹಲವು ದ್ವಾರಗಳನ್ನು ತೆರೆಸುತ್ತವೆ.
ನಿಮ್ಮಲ್ಲಿ ಇರುವ ತಪ್ಪುಗಳನ್ನು ತೋರಿಸುವಾಗ, ನೀವು ರಕ್ಷಣಾತ್ಮಕವಾಗಿ ಸಮಥರ್ಿಸದಿರಿ. ಏಕೆಂದರೆ ನಿಮ್ಮನ್ನು ತಿದ್ದುಕೊಂಡು ಪೂರ್ಣತೆಯೆಡೆಗೆ, ಸಾಗಲು ಇವು ಲಾಂಛನಗಂಬ ಗಳಾಗಿವೆ. ಕೋಪವು ನ್ಯೂನತೆಗಳಿಗೆ ಕಪಟರೂಪಧಾರಿಯಾಗಿದೆ. ಯಾವಾಗ ಒಬ್ಬನು ತನ್ನ ನಿಯಂತ್ರಣ ಕಳೆದುಕೊಳ್ಳುತ್ತಾನೋ, ಆಗ ಹೇಳಬಾರದ ಬಹಳ ವಿಷಯಗಳನ್ನು, ವಿಚಾರಹೀನ ಮಾತುಗಳನ್ನು ಹೇಳಿಬಿಡುತ್ತಾನೆ. ಎಂದಿಗೂ ನಿಮಗೆ ಹಿಂದೆ ಮಿತ್ರನಾಗಿದ್ದವನ ವೈಯಕ್ತಿಕ ರಹಸ್ಯಗಳನ್ನು ಈಗ ನೀವು ಆತನ ಬಗ್ಗೆ ಎಷ್ಟೇ ಕೋಪಗೊಂಡಿದ್ದರೂ ನುಡಿಯಬೇಡಿ. ಈ ರೀತಿ ಮಾಡುವಾಗ ನಿಮ್ಮನ್ನು ನೀವೇ ಕೆಳದಜರ್ೆಗೆ ಇಳಿಸುವಿರಿ. ಹಾಗು ಪರರೂ ಸಹಾ ನಿಮ್ಮನ್ನು ನಿಷ್ಠಮಿತ್ರನೆಂದು ಸ್ವೀಕರಿಸುವುದಿಲ್ಲ. ಬದಲಾಗಿ ನೀವೂ ಸಹ ನಿಮ್ಮ ಹಿಂದಿನ ಮಿತ್ರನಿಗೆ ಹಾನಿಗೊಳಿಸಿರಬಹುದೆಂದು ಭಾವಿಸುತ್ತಾರೆ, ಯಾರು ನಿಮ್ಮನ್ನು ನಂಬುವುದಿಲ್ಲ.
ಸಿಹಿಯು ವ್ಯಾಧಿಯನ್ನು ಸೃಷ್ಟಿಸಿದರೆ, ಕಹಿಯು ಕಾಯಿಲೆಯನ್ನು ಗುಣಪಡಿಸುವುದು. ಹೊಗಳಿಕೆಯು ಸಿಹಿಯಂತೆ ಅತಿಯಾದರೆ ತೊಂದರೆಯನ್ನುಂಟು ಮಾಡುವುದು ಮತ್ತು ಟೀಕೆಯು ಕಹಿ ಮಾತ್ರೆಯಂತೆ ರೋಗ ಗುಣಪಡಿಸುವಂತೆ ಬಳಸಿಕೊಂಡರೆ ಒಳಿತೇ ಆಗುವುದು. ನಿಮ್ಮಲ್ಲಿ ಟೀಕೆಯನ್ನು ಸಹಿಸುವ ತಾಳ್ಮೆ ಬೇಕು ಮತ್ತು ಅದಕ್ಕಾಗಿ ಹೆದರದಿರಿ.
ಯಾವ ಕುರೂಪವನ್ನು ನಾವು ಪರರಲ್ಲಿ ಕಾಣುವೆವೋ ಅದು ನಮ್ಮ ಸ್ವರೂಪದ ಪ್ರತಿಬಿಂಬವೇ ಆಗಿದೆ.
ಒಬ್ಬನ ಜೀವನ, ಸನ್ನಿವೇಶ ಮತ್ತು ಜಗತ್ತು ಆತನ ಯೋಚನೆ ಮತ್ತು ನಂಬಿಕೆಗಳಿಗೆ ಪ್ರತಿಬಿಂಬವಾಗಿದೆ. ಎಲ್ಲಾ ಜನರು ತಮಗೆ ತಾವೇ ದರ್ಪಣ ಆಗಿದ್ದಾರೆ. ಹುಣ್ಣುಗಳಿಗೆ, ಕೆಟ್ಟದ್ದಕ್ಕೆ ಮತ್ತು ಎಲ್ಲಕ್ಕೂ. ಭೌತಿಕ ಕುರೂಪತೆಯು ಮನೋಹರ ವ್ಯಕ್ತಿತ್ವಕ್ಕೆ ಪ್ರತಿಬಿಂಬ ತಾರದು. ಕುರೂಪ ವ್ಯಕ್ತಿಯು ಮೈತ್ರಿಯಂತಹ ಸದ್ಗುಣವನ್ನು ವೃದ್ಧಿಗೊಳಿಸಿದರೆ, ಆ ಪ್ರೀತಿಯು ಹಲವಾರು ಜಯದ ಹಾದಿಗಳನ್ನು ತೋರಿಸುತ್ತದೆ. ಹೇಳುವುದಾದರೆ ನಿಷ್ಠೆ, ಶಾಂತಿ, ದಯೆ ಮತ್ತು ಸಭ್ಯತೆಯಂತಹ ಆಕರ್ಷಣಿಯ ಗುಣವು ಎಂತಹುದೇ ನ್ಯೂನತೆಯನ್ನು ಸರಿತೂಗಿಸುತ್ತದೆ. ಹಾಗೆಯೇ ಇದನ್ನು ಸಹಾ ಯೋಚಿಸಿರಿ. ಒಬ್ಬ ಸುಂದರ ವ್ಯಕ್ತಿ ಅಹಂಕಾರಿಯಾಗಿದ್ದರೆ, ಕ್ರೂರಿಯಾಗಿದ್ದರೆ, ಅಂತಹವನ ದರ್ಶನವು ಸ್ವಲ್ಪವೂ ಆಕರ್ಷಣೀಯವಾಗಿರುವುದಿಲ್ಲ. ಬದಲಾಗಿ ವಿಕಷರ್ಿಸುತ್ತದೆ. ಆದ್ದರಿಂದಾಗಿ ಆಂತರ್ಯದ ಆಕರ್ಷಣೀಯ ಮನೋಹರತೆಯೇ ನಿಜವಾದ ಸೌಂದರ್ಯವಾಗಿದೆ. ಅದು ವಿಶೇಷ ಗುಣವು ಮತ್ತು ಆಕರ್ಷಣಿಯವು ಆಗಿರುತ್ತದೆ.



3.21 ಜ್ಞಾನ ಮತ್ತು ಪ್ರಜ್ಞಾ
ಪ್ರಜ್ಞಾವೇ ಜ್ಞಾನವಲ್ಲ, ನಾವು ಜ್ಞಾನವನ್ನು ಕೇಳಿದ ನಂತರ, ಓದಿದ ನಂತರ ಮತ್ತು ಜಗತ್ತಿನಲ್ಲಿರುವ ಬಹಳಷ್ಟು ಸಂಗತಿಗಳನ್ನು ಗಮನಿಸಿದ ನಂತರ ಪಡೆಯುತ್ತೇವೆ. ಆದರೆ ಅವು ನಿಜ ಅರ್ಥದಲ್ಲಿ ಪ್ರಜ್ಞಾವಲ್ಲ. ಮನಸ್ಸಿನಲ್ಲಿ ಮಾನಸಿಕ ತಡೆಗಳು, ಕ್ಷೊಭೆಗಳು ಮತ್ತು ಇತರ ಕಲ್ಮಶಗಳು ಇಲ್ಲದಿದ್ದ ಹಾಗೆ ನಿಂತುಹೋದ ನಂತರವೇ ಪ್ರಜ್ಞಾವು ಉದಯಿಸುವುದು.
ಈ ಜಗತ್ತಿನಲ್ಲಿ ಬಹಳಷ್ಟು ವಿದ್ವಾಂಸರಿದ್ದಾರೆ, ಅವರಲ್ಲಿ ಅದ್ಭುತ ಜ್ಞಾನವಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ದುರದೃಷ್ಟವಶಾತ್ ಅವರಲ್ಲಿ ಯೋಗ್ಯ ಪ್ರಜ್ಞಾದ ಕೊರತೆಯಿದೆ. ಬಹಳಷ್ಟು ಜನರು ಬುದ್ಧಿವಂತರಾಗಿದ್ದಾರೆ. ಆದರೆ ಅವರ ವರ್ತನೆಯಂತೂ ಸಮಂಜಸವಾಗಿಲ್ಲ, ಕೆಲವರು ಕೋಪಿಷ್ಟರು, ಅಹಂಕಾರಿಗಳು, ಭಾವೋದ್ರೇಕವುಳ್ಳವರು, ಅಸೂಯೆಪರರು, ಲೋಭಿಗಳು ಮತ್ತು ವಿಚಿತ್ರ ಸ್ವಭಾವಿಗಳಾಗಿರುತ್ತಾರೆ. ಬುದ್ಧಿವಂತರು ಹೆಚ್ಚು ಮೋಸಗಾರರಾಗಿರುತ್ತಾರೆ. ಆದರೆ ಪ್ರಜ್ಞಾವಂತರು ಹಾಗಿರುವುದಿಲ್ಲ.
ಇನ್ನೊಂದೆಡೆ ಕೆಲವರು ಅಪಾರ ದಯಾವಂತರಾಗಿರುತ್ತಾರೆ. ಅವರಲ್ಲಿ ತಾಳ್ಮೆ, ಸಹನೆ ಮತ್ತಿತರ ಸದ್ಗುಣಗಳಿರುತ್ತದೆ. ಅವರಲ್ಲಿ ಬುದ್ಧಿಯು ಅತಿ ಕಡಿಮೆಯಿದ್ದು ಅವರನ್ನು ಸುಲಭವಾಗಿ ಪರರು ವಂಚಿಸಿಬಿಡುತ್ತಾರೆ. ನಾವು ಯೋಗ್ಯ ತಿಳುವಳಿಕೆಯಿಲ್ಲದೆ ದಾನಗುಣವನ್ನು ಬಳಸಿದರೆ, ಕೆಲವರು ಅದರ ದುಲರ್ಾಭ ಪಡೆಯುವ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಆದ್ದರಿಂದ ಪ್ರಜ್ಞಾ ಮತ್ತು ಕುಶಲ ಸದ್ಗುಣಗಳು ಜೊತೆ ಜೊತೆಯಾಗಿ ಬೆಳೆಯಬೇಕು.
ಕಲಿತಿರುವ ಮೂರ್ಖನು ಅಜ್ಞಾನಿ ಮೂರ್ಖನಿಗಿಂತ ಹೆಚ್ಚಿನ ಮೂರ್ಖ ನಾಗಿರುತ್ತಾನೆ (ಮೊಲೀರ್).





3.22 ಆಧುನಿಕ ವಿದ್ಯಾಭ್ಯಾಸ
ಆಧುನಿಕ ವೈಜ್ಞಾನಿಕ ವಿದ್ಯಾಭ್ಯಾಸವು ಜ್ಞಾನ, ಶಾಂತಿ, ಸುಖ ಮತ್ತು ಸುಭದ್ರತೆಗಿಂತ ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಸಕರ್ಾರವು ದೇಶದ ಕಾನೂನನ್ನು ಪಾಲಿಸದವರನ್ನು ಶಿಕ್ಷಿಸಿ, ಶಾಂತಿಯನ್ನು ಕಾಪಾಡಲು ಪ್ರಯತ್ನಿಸುತ್ತಿದೆ. ಆದರೆ ಇಡೀ ಜಗತ್ತಿನಲ್ಲೆಲ್ಲಾ ಕೆಟ್ಟ ಮತ್ತು ಅನೈತಿಕ ಚಟುವಟಿಕೆಗಳು ಕ್ಷಿಪ್ರವಾಗಿ ಹಬ್ಬುತ್ತಿದೆ. ಏಕೆಂದರೆ ನಾವು ಭಯವನ್ನು ಸೃಷ್ಟಿಸಿ ಕೆಟ್ಟ ಕಾರ್ಯಗಳನ್ನು ಪೂರ್ಣವಾಗಿ ತೆಗೆಯಲಾರೆವು.
ಸಕರ್ಾರವೇನಾದರೂ ಕಾನೂನನ್ನು ಮತ್ತು ಶಿಕ್ಷೆಯನ್ನು ಹಿಂತೆಗೆದುಕೊಂಡಿದೆ ಎಂದು ಪೋಷಿಸಿಬಿಟ್ಟರೆ 24 ಗಂಟೆಯೊಳಗೆ ಜನರು ಇಡೀ ದೇಶವನ್ನು ನಾಶಮಾಡಿಬಿಡುವರು. ಪಾಪಿಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಲು, ಅಗತ್ಯವಾದುದನ್ನು ಪಡೆಯಲು ಹಿಂಸೆ ಮತ್ತು ರಕ್ತಪಾತದಿಂದ ಕಾರ್ಯಗೈಯ್ಯುವರು. ಈ ಸಮಸ್ಯೆಗೆ ಧಾಮರ್ಿಕ ನಾಯಕರು ಸಹಾ ನಿಂದೆಗೆ ಹೊರತಾಗುವುದಿಲ್ಲ. ಏಕೆಂದರೆ ತಮ್ಮ ಸ್ವಾರ್ಥಕ್ಕಾಗಿ ಅವರು ಕೆಲವು ಹಾದಿ ಬಳಸಿ ತಮ್ಮನ್ನು ನಂಬಿದವರನ್ನು ಮೂರ್ಖನನ್ನಾಗಿಸುತ್ತಾರೆ.
ಅವರು ಜನರು ದುಃಖಗಳನ್ನು ಒಪ್ಪುವಂತೆ ಮಾಡಿ ಸ್ವರ್ಗದ ಪರಿಕಲ್ಪನೆ ಸೃಷ್ಟಿಸಿ ಪ್ರಲೋಭವನ್ನುಂಟು ಮಾಡುತ್ತಾರೆ. ಹಾಗೆಯೇ ನರಕಾಗ್ನಿಯ ಭಯವನ್ನು ಸೃಷ್ಟಿಸಿ ಪುಣ್ಯವನ್ನೇ ಮಾಡುವಂತೆ ಹಾಗು ಪಾಪವನ್ನು ಮಾಡದಂತೆ ಬೋಧಿಸುತ್ತಾರೆ. ಈ ಸಮಸ್ಯೆಗಳನ್ನು ತಡೆಯಲು ಜನರು ಯಾವುದೆಲ್ಲ ವಿಧಾನಗಳನ್ನು ಹೊಂದಿಸಿದರೂ ಅವರು ಹೊಸ ಹೊಸ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ರೀತಿಯೆಲ್ಲಾ ಮಾಡಿದರೂ ಸಮಸ್ಯೆಗಳು ಏಕೆ ಪರಿಹಾರವಾಗುತ್ತಿಲ್ಲ ಎಂಬುದಕ್ಕೆ ಉತ್ತರವೇನೆಂದರೆ ಅವರು ತಮ್ಮ ನ್ಯೂನ್ಯತೆಗಳಿಗೆ ಮೂಲ ಕಾರಣವನ್ನೇ ಅರಿತಿಲ್ಲ. ಕಾರಣವೇನೆಂದರೆ ತಮ್ಮ ತಮ್ಮ ಮನಸ್ಸನ್ನು ಸುಶಿಕ್ಷಣಗೊಳಿಸಿಲ್ಲ. ಅದಿನ್ನೂ ಅಸಂಸ್ಕೃತವಾಗಿಯೇ ಇದೆ.
ನಾವು ಅಲ್ಪ ಅಭಿವೃದ್ಧಿ ಹೊಂದಿದ ಜನರನ್ನು ಅಭ್ಯಸಿಸಿದಾಗ ನಮಗೆ ಅರ್ಥವಾಗಿದ್ದು ಏನೆಂದರೆ ಅವರು ಸಾಪೇಕ್ಷವಾಗಿ ಕೆಲವು ಸಮಸ್ಯೆಗಳನ್ನು ಕಡೆಪಕ್ಷ ಮನಶಾಸ್ತ್ರಿಯ ಮಟ್ಟದಲ್ಲಿಯಾದರೂ ಎದುರಿಸಬೇಕಾಗಿದೆ. ಅವರ ಸಮಸ್ಯೆಗಳು ಕೇವಲ ಉಳಿವಿಗಾಗಿ ಅಗತ್ಯತೆಗಳು ಮತ್ತು ಭೌತಿಕ ಸಮಸ್ಯೆಗಳಾದ ಹಸಿವು ಮತ್ತು ರೋಗ. ಆದರೆ ಯಾವುದು ನಾಗರಿಕ ಸಮಾಜವೆಂದು ಕರೆಯಲ್ಪಡುವ ಆ ಸ್ಥಳಗಳಲ್ಲಿ ಉಳಿವಿಗಾಗಿ ಅಲ್ಲಿ ಸಮಸ್ಯೆಗಳಿಲ್ಲ. ಅಲ್ಲಿ ಅವರಿಗೆ ಸಾಕಷ್ಟು ಆಹಾರ ಹಾಗು ವಸತಿಯೂ ಇದೆ, ಆದರೂ ಸಹಾ ದುಃಖಿಗಳಾಗಿದ್ದಾರೆ. ಈ ಹಿಂದಿನ ವರ್ಗಕ್ಕಿಂತಲೂ ಹೆಚ್ಚಿನ ದುಃಖವು ಇವರಿಗಿದೆ.
ಅವರ ಸಮಸ್ಯೆಗಳು ಎಲ್ಲಿ ಒಳಗೊಂಡಿದೆ ಎಂದರೆ ಅವರು ಅತಿಯಾದ ಸುಖಭೋಗಗಳನ್ನು ಬಯಸುತ್ತಾರೆ ಮತ್ತು ಅವರಿಗೆ ಸಂತೃಪ್ತಿಯ ಅರ್ಥವೇ ತಿಳಿದಿಲ್ಲ. ಅವರು ನಂಬಿರುವುದು ಏನೆಂದರೆ ಕೇವಲ ಪಂಚೇಂದ್ರಿಯಗಳನ್ನು ಸುಖಪಡಿಸಿ ಈ ರೀತಿಯ ಭೋಗವೇ ಜೀವನದ ಉದ್ದೇಶವೆಂದು ನಂಬುತ್ತಾರೆ. ಆಧುನಿಕ ವೃತ್ತಿಪರ ಶಿಕ್ಷಣ ವ್ಯವಸ್ಥೆಯು ಜೀವನದಲ್ಲಿ ಯಶಸ್ವಿಯಾಗಲು ಕೇವಲ ವಾಸ್ತವಾಂಶಗಳ ಜ್ಞಾನವನ್ನು ನೀಡಿ ವಿದ್ಯಾಥರ್ಿಗಳನ್ನು ಉತ್ಪಾದಿಸುತ್ತಿದೆ.
ಈ ಬಗೆಯ ಶಿಕ್ಷಣವು ಸ್ವಾರ್ಥವನ್ನೇ ಬೆಳೆಸುತ್ತಿದೆ. ಹೇಗೆಂದರೆ ಅವರು ಬೋಧಿಸುವ ಪ್ರಕಾರ ಭೌತಿಕ ಯಶಸ್ಸಿನ ಅರ್ಥವೆಂದರೆ ಪರರಿಗಿಂತ ಮುನ್ನಡೆಯಲ್ಲಿರುವುದು. ಹೀಗಾಗಿ ಈ ತತ್ವಕ್ಕೆ ಅನುಗುಣವಾಗಿ ನೈತಿಕ ಅಭಿವೃದ್ಧಿಯಿಲ್ಲದ ಬುದ್ಧಿವಂತರು ಉತ್ಪಾದಿಸಲ್ಪಡುತ್ತಾರೆ. ಅಂತಹ ವ್ಯಕ್ತಿಗಳು ಎಲ್ಲಿಯವರೆಗೆ ಅವರಿಗೆ ಲಾಭ ಮತ್ತು ಕೀತರ್ಿಗಳು ಭೌತಿಕ ಮಟ್ಟದಲ್ಲಿ ದೊರೆಯುವುದಿಲ್ಲವೋ ಅಲ್ಲಿಯವರೆಗೆ ಅವರು ಪರರ ಕುರಿತು ಲಕ್ಷಿಸುವುದೇ ಇಲ್ಲ. ಪರರಿಗೆ ಏನೇ ಆಗಲಿ, ಅವರಿಗೆ ಸಂಬಂಧವಿಲ್ಲದಂತೆ ಇರುತ್ತಾರೆ. ಅವರು ತಮ್ಮ ಸ್ವಾರ್ಥದ ಉದ್ದೇಶ ಪ್ರಾಪ್ತಿಮಾಡಲು, ಮೋಸದಿಂದ ಅಥವಾ ಕ್ರೌರ್ಯದಿಂದ ಆಧುನಿಕ ತಂತ್ರಗಳಿಂದ ಬಳಸಿಕೊಂಡು ಹೀಗೆ ಗುರಿ ಸಾದಿಸುತ್ತಾರೆ.
ಹೂವಾಗಿ ಅರಳುವ ಸಮಯ ಜೀವನದಲ್ಲಿ ಬರುವುದು ಯಾವಾಗೆಂದರೆ ಮಗುವು ಪ್ರೌಢವಾಗುವ ಬದಲಾವಣೆಯ ಸಮಯ. ಅಂತಹ ರಚನಾತ್ಮಕ ವಯಸ್ಸಿನಲ್ಲಿ ಯುವಕರು ಪುರುಷತ್ವದ ಗುಣಗಳೆಲ್ಲ ವೃದ್ಧಿಸುವ ಕಾಲವದು. ಈ ಸಮಯದಲ್ಲಿ ಯುವಕರು ತಮ್ಮ ವಿಕಾಸದ ಹಲವು ವಲಯಗಳ ಅನುಭವವನ್ನು ಶಾರೀರಿಕವಾಗಿಯು ಮತ್ತು ಮಾನಸಿಕವಾಗಿಯೂ ಪಡೆಯುತ್ತಾರೆ. ಈ ಅವಧಿಯ ಕಾಲವು ಅತಿ ಅಲ್ಪದ್ದಾದರೂ ಅಪಾರ ಫಲಿತಾಂಶ ನೀಡುವಂತಹ ಮಹತ್ವದ ಕಾಲವಾಗಿದೆ. ಆ ಸಮಯದಲ್ಲಿ ಮನೆ, ರಾಜ್ಯ, ಧರ್ಮ ಎಲ್ಲವೂ ಬೆರೆತು ಪರಿಣಾಮಕಾರಿ ಫಲಿತಾಂಶ ನೀಡುತ್ತವೆ.





3.23 ನಮ್ಮ ಸಮಸ್ಯೆಗಳನ್ನು ಎದುರಿಸುವುದು ಹೇಗೆ ?
ಯಾರು ತಮ್ಮ ಸಮಸ್ಯೆಗಳೊಂದಿಗೆ ಹೋರಾಡುವುದಿಲ್ಲವೋ ಅವರು ಹೆಚ್ಚಿನ ಚಿಂತೆಗಳನ್ನು ಸೃಷ್ಟಿಸುತ್ತಾರೆ. ಯಾವಾಗ ಅವರ ಕೌಟುಂಬಿಕ ಜೀವನದಲ್ಲಿ ತಪ್ಪು ತಿಳುವಳಿಕೆ ಉಂಟಾಗುವುದೋ ಆಗ ಅವರ ಜೀವನವು ಇನ್ನೂ ಹೆಚ್ಚಿನ ದುಃಖಕ್ಕೆ ಸಿಲುಕುತ್ತದೆ. ಕೆಲವೊಮ್ಮೆ ಹಿಂಸೆ, ರಕ್ತಪಾತ ಮತ್ತು ಆತ್ಮಹತ್ಯೆಗಳು ಆಗುತ್ತವೆ. ಹೀಗಾಗಿ ಪ್ರಾಪಂಚಿಕ ಜೀವನದಲ್ಲಿ ಸಂತೃಪ್ತಿ ಎಲ್ಲಿದೆ?
ಇಂದು ಜನರಿಗೆ ಹೆಚ್ಚಿನ ಆದಾಯ ಬೇಕಾಗಿದೆ. ಅದು ದಿನನಿತ್ಯದ ಚಟುವಟಿಕೆಗಳಾದ ಆಹಾರ, ವಸ್ತ್ರ, ಔಷಧಿ, ವಸತಿ ಮತ್ತು ತಮ್ಮ ಋಣ ಪೂರೈಕೆಗೆ ಮಾತ್ರವಲ್ಲ. ಅವರು ತಮ್ಮ ಜೀವನವನ್ನು ಹೆಚ್ಚಿನ ಇಂದ್ರೀಯ ಸುಖಗಳಿಗೆ ಅನುಕೂಲವಾಗುವಂತೆ ವ್ಯವಸ್ಥಿತವನ್ನಾಗಿಸಿದ್ದಾರೆ. ಇದು ಒಂದು ವಿಧವಾದ ಸ್ಪಧರ್ೆಯಂತೆ ಬದಲಾವಣೆಯಾಗಿದೆ.
ಜನರು ತಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆಗೆ ಬದಲು ಇಂದ್ರೀಯ ಸುಖಗಳ ಬಗ್ಗೆಯೇ ಹೆಚ್ಚಿನ ಏಕಾಗ್ರತೆ ವಹಿಸುತ್ತಿದ್ದಾರೆ. ಕೆಲವು ಜನರು ವರ್ತಮಾನದಲ್ಲಿ ಸಾಕಷ್ಟಿದ್ದರೂ ಭವಿಷ್ಯದ ಬಗ್ಗೆ ಚಿಂತಿಸುತ್ತಾ ಅಸಂತೃಪ್ತಿಯನ್ನೇ ಬೆಳೆಸುತ್ತಿದ್ದಾರೆ. ಅವರು ತಮ್ಮ ರೋಗ, ವೃದ್ಧಾಪ್ಯ ಮತ್ತು ಮರಣ ಬಗ್ಗೆ ಚಿಂತಿಸುತ್ತಾ ಹಾಗೆಯೇ ಮುಂದಿನ ಜನ್ಮದ ಸ್ವರ್ಗ ಅಥವಾ ನರಕದ ಬಗ್ಗೆಯು ಆತಂಕಪಡುತ್ತಿದ್ದಾರೆ. ಅವರು ತಮ್ಮ ಜೀವನದಲ್ಲಿ ಪ್ರತಿದಿನ ಅತೃಪ್ತಿಯನ್ನೇ ಅನುಭವಿಸುತ್ತಿದ್ದಾರೆ. ಅವರು ಪರಿಹಾರವನ್ನು ಹುಡುಕುತ್ತ ಜೀವನವಿಡೀ ಇಲ್ಲಿಂದಲ್ಲಿಗೆ ಓಡುತ್ತಿದ್ದಾರೆ. ಶಾಂತಿ ಮತ್ತು ಸುಖಕ್ಕಾಗಿ ಸಾಯವವರೆಗೂ ಅನ್ವೇಷಣೆ ಮಾಡಿಯೂ ಅವರು ಎಂದಿಗೂ ನಿಜ ಪರಿಹಾರವನ್ನು ಪಡೆಯದವರಾಗಿದ್ದಾರೆ. ಅವರು ವೃದ್ಧರಾಗುತ್ತಿದ್ದಾರೆ ಎಂದು ಭಾವಿಸಿದಾಗ ಅವರು ಚಿಂತಿತರಾಗುತ್ತಾರೆ, ಅವರು ಪ್ರೀತಿಸುವ ವಸ್ತುಗಳು ಅಥವಾ ವ್ಯಕ್ತಿಯನ್ನು ಕಳೆದುಕೊಂಡಾಗ ಅವರು ಖಿನ್ನತೆ ತಾಳುತ್ತಾರೆ. ಈ ರೀತಿಯಾಗಿ ಹತಾಶೆ ಮತ್ತು ಮಾನಸಿಕ ತೀವ್ರ ಒತ್ತಡಕ್ಕೆ ಗುರಿಯಾಗುತ್ತಾರೆ. ಇನ್ನು ಪರಿಸ್ಥಿತಿ ಹದಗೆಟ್ಟರೆ ಮಾನಸಿಕ ವಿಕಲತೆಗೂ ಗುರಿಯಾಗುತ್ತಾರೆ. ನಮಗೆ ನಮ್ಮ ಅಸ್ತಿತ್ವದ ನಿಜಸ್ವರೂಪ ತಿಳಿದಿಲ್ಲ. ಆದರೂ ಜೀವನದಲ್ಲಿ ಯಾವುದೇ ತೊಂದರೆಗಳು ಮತ್ತು ಬದಲಾವಣೆಗಳಾದಂತೆ ನಿರ್ವಹಿಸಲು ಪ್ರಯತ್ನಿಸಬೇಕು.
ಜೀವನವು ಬದಲಾಗುತ್ತಲೇ ಇದೆ. ಅದು ಧಾತುಗಳ ಮತ್ತು ಶಕ್ತಿಗಳ ಕಂತೆಯಾಗಿದೆ. ಅವು ಸದಾ ಬದಲಾಗುತ್ತಲೇ ಇವೆ. ಇದರ ಪರಿಣಾಮವಾಗಿ ಯಾವುದೇ ಸನ್ನಿವೇಶವು ನಮ್ಮ ನಿರೀಕ್ಷೆಯಂತೆ ಸದಾ ನಡೆಯಲಾರದು. ಆಗ ನಾವು ಜೀವನವು ನಮ್ಮ ಇಷ್ಟದಂತಿಲ್ಲ ಎಂದು ಭಾವಿಸುವೆವು. ಯಾವಾಗ ಧಾತುಗಳು ಮತ್ತು ಶಕ್ತಿಗಳು ಅಸಮತೋಲನ ವಾಗುವವೋ ಆಗ ನಾವು ಅಹಿತವನ್ನು, ರೋಗವನ್ನು, ನೋವನ್ನು ಮತ್ತು ಇತರ ಸಮಸ್ಯೆಗಳನ್ನು ಅನುಭವಿಸುವೆವು. ಯಾವಾಗ ಮಾನಸಿಕ ಶಕ್ತಿಯು ಕ್ಷೊಭೆಗೆ ಒಳಗಾಗುವುದೋ. ಆಗ ನಾವು ಮಾನಸಿಕ ಸಮಸ್ಯೆಗಳನ್ನು ಅನುಭವಿಸುವೆವು. ಈ ಮಾನಸಿಕ ಸಮಸ್ಯೆಗಳನ್ನು ಗಮನಿಸದೆ ಹಾಗೆಯೇ ಬಿಟ್ಟಾಗ ಶಾರೀರಿಕ ಸಮಸ್ಯೆಗಳಾಗಿ ವ್ಯಕ್ತವಾಗುತ್ತವೆ. ಹೀಗಾಗಿ ನಮ್ಮ ಅಂಗಗಳು ಮತ್ತು ಗ್ರಂಥಿಗಳು ಸಹಾ ಬದಲಾವಣೆಯಾಗಿ ಸಾಮಾನ್ಯ ಕ್ರಿಯೆಗೆ ತಡೆಯಾಗಿ, ರಕ್ತಪರಿಚಲನೆ, ಹೃದಯಬಡಿತ ಮತ್ತು ಮೆದುಳಿನ ಜೀವಕೋಶಗಳಿಗೆ ಕೆಟ್ಟ ಪರಿಣಾಮ ಬೀರುತ್ತವೆ.
ಇಂದು ಬಹಳಷ್ಟು ಜನರು ಅಪಾಯವನ್ನು ಅರಿಯದೆ ಕೃತಕ ಜೀವನವನ್ನು ನಡೆಸುತ್ತಿದ್ದಾರೆ. ಬಹಳಷ್ಟು ಅವರ ಸಮಸ್ಯೆಗಳು ತಮ್ಮ ಅಜ್ಞಾನ ಹಾಗು ಸುಖದ ಅತಿಯಾದ ಹುಚ್ಚು ಆಸೆಯಿಂದಾಗಿದೆ. ಬಹಳಷ್ಟು ನಮ್ಮ ಸಮಸ್ಯೆಗಳು ಮತ್ತು ಹೊರೆಗಳು ಮಧ್ಯವಯಸ್ಸಿನ ನಂತರ ಬರುವುದು. ನಮ್ಮ ಸಮಸ್ಯೆಗಳು ವಯಸ್ಸಿನೊಂದಿಗೆ ಹೇಗೆ ಹೆಚ್ಚಾಗುತ್ತವೆ ಎಂದು ತಿಳಿಯಬೇಕಾದರೆ ಈ ಕೆಳಕಂಡ ದೃಷ್ಟಾಂತ ಕಲ್ಪಿಸಿಕೊಳ್ಳಿ. 100 ಅಡಿ ಆಳದ ಒಂದು ಹಳ್ಳವೊಂದಿರುತ್ತದೆ. ನಾವು ಜನರಿಗೆ ಏಣಿಯನ್ನು ಇಟ್ಟು ಒಬ್ಬೊಬ್ಬರಾಗಿ ಇಳಿಯಿರಿ ಎಂದು ಸೂಚನೆ ಕೊಡುತ್ತೇವೆ, ಆ ಹಳ್ಳದ ತಳದಲ್ಲಿ ಉರಿಯುವ ಕೆಂಡದ ರಾಶಿಯಿರುತ್ತದೆ. ಜನರು 40 ರಿಂದ 50 ಅಡಿ ಇಳಿಯುವವರೆಗೂ ಅವರಿಗೆ ತಾಪದ ಅನುಭವ ಗೊತ್ತಾಗುವುದಿಲ್ಲ. ನಂತರ ಅವರಿಗೆ ತಾಪದ ಅನುಭವ ಗೊತ್ತಾಗುವುದು. ನಂತರ 70 ರಿಂದ 80 ಅಡಿ ಆಳದಲ್ಲಿ ಹೋಗುವಾಗ ಅವರಿಗೆ ದೇಹವೇ ಸುಡುವಂತಹ ವೇದನೆಯಾಗುತ್ತದೆ. ನಂತರ ಅವರು ಬೇರೆಯವರಿಗೆ ಇನ್ನು ಕೆಳಗೆ ಇಳಿಯದಂತೆ ಎಚ್ಚರಿಕೆ ನೀಡುತ್ತಾರೆ. ಆದರೂ ಮೇಲೆ ಇರುವ ಯಾರೂ ಲೆಕ್ಕಿಸುವುದಿಲ್ಲ. ಇದೇರೀತಿಯಾಗಿ ಯುವಕರು ಸಹಾ ದುಃಖವನ್ನು ಲೆಕ್ಕಿಸುವುದಿಲ್ಲ, ಅವರಿಗೆ ಅಂತಹ ನೋವುಗಳು ಸಿಕ್ಕಿರುವುದಿಲ್ಲ. ಆದರೆ ವೃದ್ಧರಾಗುತ್ತಿದ್ದಂತೆ ವೃದ್ಧಾಪ್ಯ ರೋಗ ಮತ್ತು ಮರಣದ ಸುಡುವ ಅನುಭವ ಪಡೆಯುತ್ತಾರೆ.
ಬುದ್ಧರು ಜೀವನವು ದುಃಖ ಎನ್ನುತ್ತಾರೆ. ಯುವಜನರಿಗೆ ಅಸ್ತಿತ್ವದ ಸ್ವರೂಪವನ್ನು ಅರಿಯಲು ಇದು ಉತ್ತಮವಾದ ಉದಾಹರಣೆಯಾಗಿದೆ, ವೃದ್ಧರಿಗೆ ಈ ಪ್ರಜ್ಞೆಯು ಸ್ವಲ್ಪ ಇರುತ್ತದೆ. ಯುವಜನರು ಹಿರಿಯರ ನುಡಿಗಳನ್ನು ಆಲಿಸಿದರೆ ಅವರು ಬಹಳಷ್ಟು ತಪ್ಪುಗಳನ್ನು ತಡೆಯಬಹುದು. ನಾವೇಕೆ ಹಿರಿಯರ ನುಡಿಗಳನ್ನು ಆಲಿಸಬೇಕು ಎಂಬುದಕ್ಕೆ ಮತ್ತೊಂದು ಉದಾಹರಣೆಯು ಇಲ್ಲಿದೆ. ಮೀನುಗಳ ಗುಂಪೊಂದು ನೀರಿನೊಳಗೆ ಚಿಕ್ಕ ಅಸಮಾನ್ಯ ಕಲುಕುವಿಕೆ ಕಂಡವು. ಅದು ನಿಜಕ್ಕೂ ಮೀನುಗಾರನ ಬಲೆಯ ಹಂಚಿಕೆಯಾಗಿತ್ತು. ಕೆಲವು ಚಿಕ್ಕ ಮೀನುಗಳು ಅದರೊಳಗೆ ಹೋಗಲು ಇಷ್ಟಪಟ್ಟವು ಮತ್ತು ಸಂಚಾರ ಮಾಡಲು ಬಯಸಿದವು. ಆದರೆ ಹಿರಿಯ ಮೀನು ಅವರಿಗೆ ಹಾಗೆ ಮಾಡದಂತೆ ಬುದ್ಧಿವಾದ ನುಡಿಯಿತು. ಅದು ಭಯಾನಕ ಬಲೆಯೆಂದು ಬುದ್ಧಿವಾದ ನುಡಿಯಿತು. ಆದರೆ ಆ ಯುವ ಮೀನುಗಳು ಹೀಗೆ ಅಡ್ಡಪ್ರಶ್ನೆಯನ್ನು ಹಾಕಿದವು. ಅದು ಭಯಾನಕವೂ ಅಥವಾ ಅಲ್ಲವೋ ಎಂದು ನಮಗೆ ತಿಳಿಯುವುದು ಹೇಗೆ? ನಾವು ಅಲ್ಲಿಗೆ ಹೋಗಿ ಅನ್ವೇಷಣೆ ಮಾಡಿದರಲ್ಲವೇ ತಿಳಿಯುವುದು ಎಂದು ವಿತಂಡವಾದ ಮಾಡಿ, ಬಲೆಯೊಳಗೆ ಹೋಗಿ ಸಿಕ್ಕಿಕೊಂಡು ನಂತರ ಪಶ್ಚಾತ್ತಾಪಪಟ್ಟವು.
ಈ ಸರಳ ಉದಾಹರಣೆಯಿಂದ ನಮಗೆ ತಿಳಿಯುವುದು ಏನೆಂದರೆ ಕೆಲವೊಂದು ಸರಿಯೋ ಅಥವಾ ತಪ್ಪೊ; ಒಳ್ಳೆಯದು ಅಥವಾ ಕೆಟ್ಟದೊ ಎಂಬುದನ್ನು ಅರಿಯಲು ವೈಯಕ್ತಿಕ ಅನುಭವಗಳು ಬೇಕಾಗುವುದಿಲ್ಲ. ಆದ್ದರಿಂದಾಗಿ ಬುದ್ಧರಂತಹ ಜ್ಞಾನಿಗಳ ಬುದ್ಧಿವಾದವನ್ನು ಸ್ವೀಕರಿಸಲು ಸಿದ್ಧರಾಗಬೇಕಾಗಿದೆ. ಏಕೆಂದರೆ ಅವರ ಜ್ಞಾನವು ನಮಗೆ ನಿಲುಕದಷ್ಟು ಅನಂತವಾಗಿದೆ. ಆದ್ದರಿಂದಾಗಿ ನಾವು ಎಲ್ಲವನ್ನು ಅರಿತಿದ್ದೇವೆ ಎಂದು ಭಾವಿಸಬಾರದು ಮತ್ತು ಜೀವನದ ಬಗ್ಗೆ ನಮಗೆ ಯಾರೂ ತಿಳಿಸಬೇಕಾಗಿಲ್ಲ ಹಾಗು ಸಮಸ್ಯೆಗಳನ್ನು ತಡೆಯುವುದು ಹೇಗೆ ಎಂದು ಯಾರೂ ಹೇಳಬೇಕಿಲ್ಲ ಎಂದು ಭಾವಿಸಬಾರದು. ಯಾವಾಗ ನಮ್ಮ ಹಿರಿಯರು ಮತ್ತು ಪೋಷಕರು ಕೆಲವೊಂದು ವಿಷಯಗಳನ್ನು ಹೀಗೆ ಮಾಡಬೇಡಿ ಎಂದಾಗ ನಾವು ಅವನ್ನು ಆಲಿಸಬೇಕು. ಏಕೆಂದರೆ ಪ್ರಾಪಂಚಿಕ ಜೀವನದ ಬಗ್ಗೆ ಅವರ ಅನುಭವವು ನಮ್ಮ ಸೈದ್ಧಾಂತಿಕ ಜ್ಞಾನಕ್ಕಿಂತಲೂ ಉನ್ನತವಾಗಿದೆ. ಆದ್ದರಿಂದಲೇ ಪೋಷಕರು ತಮ್ಮ ಮಕ್ಕಳಿಗೆ ಹೀಗೆ ಮಾಡಿ ಮತ್ತು ಹೀಗೆ ಮಾಡದಿರಿ ಎಂದು ಬುದ್ಧಿವಾದ ನುಡಿಯುತ್ತಾರೆ.
ಚಿಕ್ಕ ತಪ್ಪಿನೊಂದಿಗೆ ಎಚ್ಚರವಾಗಿರಿ; ಸಣ್ಣ ತೂತು, ಬೃಹತ್ ಹಡಗನ್ನು ಮುಳುಗಿಸಬಲ್ಲದು (ಬೆಂಜಮಿನ್ ಫ್ರಾಂಕ್ಲಿನ್).
ಯಾವಾಗ ಯುವಕರು ಹಿರಿಯರ ಬುದ್ಧಿವಾದವನ್ನು ಅಲಕ್ಷಿಸುವರೋ ಆಗ ತಮ್ಮದೇ ರೀತಿ ಯೋಚಿಸಿ ನಾನಾ ಕಾರ್ಯಗಳನ್ನು ಮಾಡುವರು.
ಒಮ್ಮೆ ಬುದ್ಧ ಭಗವಾನರು ಮತ್ತು ಅವರ ಶಿಷ್ಯರು ಹಳ್ಳಿಗೆ ಹೋದರು. ಆ ಹಳ್ಳಿಯ ಕೆಲವರು ಬುದ್ಧರ ಮೇಲೆ ಕೋಪಗೊಂಡರು. ಯಾವಾಗ ಹೀಗೆ ಹಳ್ಳಿಯ ಕೆಲವರು ಬಯ್ಯತೊಡಗಿದಾಗ ಅವರ ಶಿಷ್ಯರು ಈ ಕಟುವಾಕ್ಯಗಳಿಂದ ಪಾರಾಗಲು ಬೇರೊಂದು ಹಳ್ಳಿಗೆ ಹೋಗಲು ಸಲಹೆ ನೀಡುತ್ತಾರೆ. ಆಗ ಭಗವಾನರು ಅವರಿಗೆ ಹೀಗೆ ಹೇಳಿದರು. ಆ ಹೊಸ ಸ್ಥಳದಲ್ಲಿಯು ಯಾವುದೇ ತೊಂದರೆಗಳು ಆಗುವುದಿಲ್ಲ ಎಂದು ಖಚಿತತೆ ಇದೆಯೆ? ಎಂದು ಹೇಳಿ ಪುನಃ ಹೀಗೆ ಮುಂದುವರೆಸಿದರು ತೊಂದರೆಗಳಿಂದ ಪಾರಾಗಲು, ಅಲ್ಲಿಂದ ಓಡಿಹೋಗುವುದೇ ಪರಿಹಾರವಲ್ಲ. ನಮ್ಮಲ್ಲಿ ಅಪರಾಧಿ ಪ್ರಜ್ಞೆಯಿಲ್ಲದಿದ್ದರೆ, ಯಾವ ದೋಷಣೆಯು, ಕಟುವಾಕ್ಯವು ನಮ್ಮನ್ನು ಎಂದಿಗೂ ತಲುಪದು. ಆದ್ದರಿಂದ ನಾವು ಸಹನೆಯಿಂದಿರಬೇಕು ಮತ್ತು ಅವರಿಗೆ ದಣಿವಾಗುವವರೆಗೆ ತೃಪ್ತಿಯಾಗುವವರೆಗೆ ದೋಷಿಸಲು ಬಿಡಿ ಎಂದರು. ಆಗ ಭಿಕ್ಷುಗಳು ಸಹಾ ತಟಸ್ಥರಾದರು. ಹೀಗೆ ಬುದ್ಧರಿಂದ ಮತ್ತು ಭಿಕ್ಷುಗಳಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದುದರಿಂದಾಗಿ, ಕೆಲವು ದಿನಗಳ ನಂತರ ಆ ಜನರೇ ದೂಷಿಸುವುದನ್ನು ನಿಲ್ಲಿಸಿದರು.
ಈ ದೃಷ್ಟಾಂತವನ್ನು ಗಮನಿಸಿ, ನಡೆದ ಕೆಲವೊಂದನ್ನು ಗಮನಿಸಿ ಅಥವಾ ಕೇಳಿ ಕೆಲವರು ಅದನ್ನು ಸಮಸ್ಯೆಯೆಂದು ಪರಿಗಣಿಸಿ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವರು ಅದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಅಲಕ್ಷಿಸುತ್ತಾರೆ. ಇನ್ನೂ ಕೆಲವರು ಅಸಮಂಜಸ ಭಯ ಮತ್ತು ಚಿಂತೆಯನ್ನು ಅದಕ್ಕಾಗಿ ಸೃಷ್ಟಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಅದನ್ನು ಮನಸ್ಸಿಗೆ ತೆಗೆದುಕೊಂಡು, ಚಿಂತನೆಮಾಡಿ ಉತ್ತಮ ನೀತಿಪಾಠವೆಂದು ಪರಿಗಣಿಸುತ್ತಾರೆ. ಇನ್ನೂ ಕೆಲವರಿದ್ದಾರೆ ಅವರು ಇದನ್ನು ಹಾಸ್ಯ ತುಣುಕು ಎಂದು ಭಾವಿಸಿ ತಳ್ಳಿಹಾಕುತ್ತಾರೆ. ಇನ್ನು ಕೆಲವರು ಇದ್ದಾರೆ ಅವರು ಇದನ್ನು ಟೀಕಾ ವಿಷಯವನ್ನಾಗಿಸಿ ದೂಷಣೆ ಮಾಡಲು ಆರಂಭಸುತ್ತಾರೆ.
ಹೀಗೆ ಜನರು ತಮ್ಮ ಮನೋವೃತ್ತಿಗೆ ತಕ್ಕಂತೆ ಒಂದೇ ಸಂದರ್ಭವನ್ನು ವಿಭಿನ್ನವಾಗಿ ಕಾಣುತ್ತಾರೆ ಮತ್ತು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ನಿಜಕ್ಕೂ ಸಮಸ್ಯೆಗಳು ಸೃಷ್ಟಿಯಾಗುವುದೇ ಮನಸ್ಸಿನಲ್ಲಿ ಆಗಿದೆ. ನಾವು ನಮ್ಮ ಮನಸ್ಸಿನಲ್ಲಿ ಸಹನೆಗೆ, ತಾಳ್ಮೆಗೆ ಮತ್ತು ಅರಿವಿಗೆ ಸ್ಥಳವಿತ್ತು ವೃದ್ದಿಸಿದರೆ ಆಗ ನಾವು ಯಾವುದೇ ಸನ್ನಿವೇಶವನ್ನು ಗಂಭೀರವಾಗಿ ತೆಗೆದುಕೊಳ್ಳಲಾರೆವು ಹಾಗು ಇನ್ನೂ ಹೆಚ್ಚಿನ ಸಮಸ್ಯೆಯನ್ನು ಸೃಷ್ಟಿಸಲಾರೆವು. ನಮ್ಮ ಸಮಸ್ಯೆಗಳು ನಮ್ಮ ಸೃಷ್ಟಿಯೇ ಆಗಿವೆ, ಇದು ಬೇರೊಬ್ಬರ ಕಾರ್ಯವಲ್ಲ.

                                                                - 0 - 0 - 0  

No comments:

Post a Comment

ಪರಧರ್ಮಗಳ ಬಗ್ಗೆ ಬೌದ್ಧರ ಸೌಹಾರ್ದ ಮನೋಭಾವ

 ಪರಧರ್ಮಗಳ ಬಗ್ಗೆ  ಬೌದ್ಧರ ಸೌಹಾರ್ದ ಮನೋಭಾವ ಈ ಲೇಖನದ ಉದ್ದೇಶವೇನೆಂದರೆ ಧರ್ಮದ ಉತ್ತಮ ತಿಳುವಳಿಕೆಗೆ, ಧಾಮರ್ಿಕ ಸಹಿಷ್ಣುತೆಗೆ ಮತ್ತು ಬೌದ್ಧರ ದೃಷ್ಟಿಕೋನದಿಂದ ವಿಶಾ...